ಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯ ಕರ್ನಾಟಕದಲ್ಲಿ ಕನ್ನಡ ವಲ್ಲದೆ ಇತರ 165 ಭಾಷೆಗಳು ಪ್ರಚಲಿತವಾಗಿವೆ. ಆದರೆ ಇವುಗಳಲ್ಲಿ ಹೆಚ್ಚಿನವು (ಉದಾ:ಆರ್ಮೇನಿಯನ್,ಇಂಡೊನೇಷ್ಯನ್) ಉದ್ಯೋಗ ಇತ್ಯಾದಿಗಳಿಗಾಗಿ ಬೇರೆ ದೇಶಗಳಿಂದ ಬಂದು ನೆಲಸಿದ ಕೆಲವೇ ವ್ಯಕ್ತಿ ಅಥವಾ ಕುಟುಂಬಗಳಿಗಷ್ಟೇ ಸೀಮಿತವಾಗಿವೆ. ಹೆಚ್ಚಿನ ಜನರ ಮಾತೃಭಾಷೆಯಾಗುಳ್ಳ ಕನ್ನಡೇತರ ಭಾಷೆಗಳಿವು:ತುಳು,ತಮಿಳು, ಕೊಂಕಣಿ, ಮಲಯಾಳಂ, ತಿಗಳಾರಿ, ಅರವು, ಲಂಬಾಣಿ, ಹಿಂದೀ, ಉರ್ದು, ಕೊಡವ, ಬಂಜಾರಿ, ಗುಜಕ್ಷತ್ರಿಯ, ಇಂಗ್ಲಿಷ್, ಮಾರ್ವಾರಿ, ಎರವ, ತಿಬೆಟನ್, ಸಿಂಧಿ, ಬಂಗಾಲಿ, ಪಂಜಾಬಿ, ಅರಬ್ಬೀ, ಹಿಂದುಸ್ಥಾನೀ, ರಾಜಸ್ತಾನೀ, ಕುರುಂಬ, ಕೊರಚ, ವಡರಿ, ಕೊರವ, ಕೊಂಗರ್, ವ್ರಜಭಾಷಾ, ನೇಪಾಲಿ.

ಬಹು ಹಿಂದಿನ ಕಾಲದಿಂದ ಸಂಸ್ಕೃತ, ಪ್ರಾಕೃತ ಮುಂತಾದ ಭಾಷೆಗಳು ಕರ್ನಾಟಕದಲ್ಲಿ ಪ್ರಚಲಿತಗೊಂಡಿದ್ದುವಾಗಿ ಆಯಾ ಭಾಷೆಗಳ ಪ್ರಭಾವ ಕನ್ನಡದ ಮೇಲಾಗಿರುವುದಲ್ಲದೆ ಹಲವು ಸಂದರ್ಭಗಳಲ್ಲಿ ಕನ್ನಡದ ಪ್ರಭಾವ ಸಹ ಅವುಗಳ ಮೇಲಾಗಿದೆ. ಅಲ್ಲದೆ ಆ ಕನ್ನಡೇತರ ಭಾಷೆಗಳಲ್ಲಿ ಸಾಹಿತ್ಯಸೃಷ್ಟಿಯೂ ಸ್ವಲ್ಪಮಟ್ಟಿಗೆ ಕರ್ನಾಟಕದಲ್ಲಿ ಜರುಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಸ್ಥೂಲ ಸಮೀಕ್ಷೆಯನ್ನು ಇಲ್ಲಿ ಕೊಡಲಾಗಿದೆ. *

ಪ್ರಾಕೃತ[ಬದಲಾಯಿಸಿ]

ಕರ್ನಾಟಕಕ್ಕೆ ಮೌರ್ಯ ಚಕ್ರವರ್ತಿ ಚಂದ್ರಗುಪ್ತನೊಡನೆ ಭದ್ರಬಾಹು ಶ್ರುತಕೇವಲಿ ಉತ್ತರಾಪಥದಿಂದ ಬಂದ ಕಾರಣ ಜೈನ ಧರ್ಮವೂ ಪ್ರಾಕೃತಭಾಷೆಯೂ ಇಲ್ಲಿ ಹರಡುವಂತಾಗಿರಬೇಕು. ಮೌರ್ಯ, ಸಾತವಾಹನರ ಕಾಲದಲ್ಲಿ ಕನ್ನಡನಾಡಿನಲ್ಲಿ ಪ್ರಾಕೃತಭಾಷೆ ಕೆಲಮಟ್ಟಿಗೆ ವ್ಯವಹಾರದಲ್ಲಿದ್ದ ಭಾಷೆಯಾಗಿದ್ದು ಅದಕ್ಕೆ ತಕ್ಕ ಮನ್ನಣೆಯೂ ಇದ್ದಿರಬಹುದು. ಕರ್ನಾಟಕಬ್ರಹ್ಮಗಿರಿ, ಮಸ್ಕಿ, ಕೊಪ್ಪಳ - ಈ ಸ್ಥಳಗಳಲ್ಲಿ ಅಶೋಕನ (ಪ್ರ.ಶ.ಪು.272-32) ಶಾಸನಗಳು ದೊರಕಿವೆ. ಇವೇ ಕರ್ನಾಟಕದಲ್ಲಿ ದೊರಕುವ ಅತ್ಯಂತ ಪ್ರಾಚೀನ ಪ್ರಾಕೃತ ದಾಖಲೆಗಳು. ಆ ಕಾಲದಲ್ಲಿ ಈ ಶಾಸನಗಳನ್ನು ಓದಿ ಅರ್ಥೈಸುವ ಜನ ಕನ್ನಡ ನಾಡಿನಲ್ಲಿ ಕೆಲವರಾದರೂ ಇದ್ದಿರಬಹುದೆಂದು ತಿಳಿಯುವುದು ಸಂಭವನೀಯವೇ ಆಗಿದೆ. ಪ್ರ.ಶ.ಪು.2 - ಪ್ರ.ಶ.3ನೆಯ ಶತಮಾನ ದವರೆಗೂ ಆಳಿದ ಸಾತವಾಹನ ಅರಸರ ಕಾಲದಲ್ಲಿ ಅವರ ರಾಜ್ಯದಲ್ಲಿ ಪ್ರಾಕೃತಭಾಷೆ ವಿಶೇಷವಾಗಿ ಪ್ರಚಲಿತವಾಗಿತ್ತು. ಕರ್ನಾಟಕದ ಸನ್ನತಿ, ವಡಗಾಂವ್-ಮಾಧವಪುರ, ಮಳವಳ್ಳಿ, ಬನವಾಸಿ - ಈ ಸ್ಥಳಗಳಲ್ಲಿ ಆ ಕಾಲದ ಪ್ರಾಕೃತ ಶಾಸನಗಳಿವೆ. ಮುಂದೆ ಕರ್ನಾಟಕದಲ್ಲಿ ರಾಜ್ಯವಾಳಿದ ಕದಂಬವಂಶದ ಆದ್ಯಮಯೂರಶರ್ಮನ ಒಂದು ಶಾಸನ ಸಹ ಚಂದ್ರವಳ್ಳಿಯಲ್ಲಿ ದೊರಕಿದೆ. ಬಹುಶಃ ಪ್ರಾಕೃತ ಆ ಕಾಲದಲ್ಲಿ ಆಡಳಿತಭಾಷೆಯಾಗಿಯೂ ಶಿಷ್ಟಭಾಷೆಯಾಗಿಯೂ ಇಲ್ಲಿ ಪ್ರಚಲಿತ ವಾಗಿದ್ದಿರಬಹುದು.

ಕನ್ನಡನಾಡಿನಲ್ಲಿ ಜೈನಧರ್ಮ ಉನ್ನತಸ್ಥಿತಿಯಲ್ಲಿದ್ದಾಗ ಪ್ರಾಕೃತ ಸಾಹಿತ್ಯಕ್ಕೆ ಒಳ್ಳೆಯ ಪೋಷಣೆ ದೊರೆಯಿತು. ಅಖಿಲಭಾರತ ಪ್ರಾಮುಖ್ಯದ ಪ್ರಾಕೃತಗ್ರಂಥಗಳ ರಚನೆ ನಡೆಯಿತು. ಪ್ರಾಕೃತ ಪಕ್ಷಪಾತಿಗಳಾಗಿದ್ದ ಸಾತವಾಹನರ ಕಾಲದಲ್ಲಿಯೇ ಗುಣಾಢ್ಯ (1ನೆಯ ಶತಮಾನ) ಬೃಹತ್ಕಥೆಯನ್ನು ಪೈಶಾಚೀಪ್ರಾಕೃತದಲ್ಲಿಯೂ ಹಾಲ (1ನೆಯ ಶತಮಾನ) ಗಾಥಾಸಪ್ತಶತಿಯನ್ನು ಮಹಾರಾಷ್ಟ್ರೀ ಪ್ರಾಕೃತದಲ್ಲಿಯೂ ರಚಿಸಿದರೆಂದು ತಿಳಿಯುವುದು. ಪ್ರಾಭೃತತ್ರಯಾದಿ ಗ್ರಂಥಗಳನ್ನು ರಚಿಸಿದ ಕುಂದಕುಂದಾ ಚಾರ್ಯ, ಭಗವತಿ ಆರಾಧನದ ಶಿವಕೋಟ್ಯಾಚಾರ್ಯ (ಶಿವಾರ್ಯ), ಮೂಲಾಚಾರವೆಂಬ ಶೌರಸೇನೀ ಪ್ರಾಕೃತ ಗ್ರಂಥದ ಕರ್ತೃ ವಟ್ಟಕೇರ, ಕರಕುಂಡಚರಿ ಎಂಬ ಅಪಭ್ರಂಶ ಗ್ರಂಥದ ಕರ್ತೃ ಕನಕಾಮರಮುನಿ - ಈ ಮೊದಲಾದವರು ಪ್ರಾಚೀನ ಕರ್ನಾಟಕದಲ್ಲಿದ್ದು ಕೃತಿರಚನೆ ಮಾಡಿದ ಪ್ರಾಕೃತ ಕವಿಗಳೆಂಬುದಾಗಿ ಕೆಲವರು ಅಬಿsಪ್ರಾಯಪಟ್ಟಿದ್ದಾರೆ. ಕುಂದಕುಂದಾಚಾರ್ಯ, ವಟ್ಟಕೇರ, ಶಿವಾರ್ಯ ಮೊದಲಾದ ಕೆಲವರು ಪ್ರತ್ಯಕ್ಷವಾಗಿ ಕನ್ನಡನಾಡಿಗೆ ಸೇರಿದ್ದವರೆಂಬುದು ವಿವಾದಾಸ್ಪದವಾಗಿದ್ದರೂ ಅವರ ಕೃತಿಗಳು ಕನ್ನಡನಾಡಿನ ಜೈನಸಮುದಾಯಕ್ಕೆ ಪುಜ್ಯವೂ ಪ್ರಿಯವೂ ಆಗಿದ್ದವೆಂಬುದರಲ್ಲಿ ಸಂದೇಹವಿಲ್ಲ.

ಸರ್ವನಂದಿಯ ಲೋಕ ವಿಭಾಗ ಮತ್ತು ಯತಿವೃಷಭನ ತಿಲೋಯಪಣ್ಣತ್ತಿ ಬಲುಮಟ್ಟಿಗೆ ಕನ್ನಡನಾಡಿನಲ್ಲಿಯೇ ರಚಿತವಾದವು. ಕುಂದುಕುಂದ, ಸಮಂತಭದ್ರ ಮತ್ತು ಬಪ್ಪದೇವರ ಸಂಸ್ಕೃತ ಪ್ರಾಕೃತ ವ್ಯಾಖ್ಯಾನ ಗ್ರಂಥಗಳೂ ಇಲ್ಲಿಯೇ ರಚನೆಗೊಂಡವು. ಕುಂದಕುಂದಾಚಾರ್ಯರ ಪ್ರಸಿದ್ಧ ಪ್ರಾಕೃತ ಗ್ರಂಥಗಳಿಗೆ ಸಂಸ್ಕೃತದಲ್ಲಿ ವ್ಯಾಖ್ಯೆಗಳನ್ನು ರಚಿಸಿರುವ ಬಾಲಚಂದ್ರ ಮತ್ತು ಪದ್ಮಪ್ರಭರು ಕರ್ನಾಟಕದವರು. ಯಾಪನೀಯಸಂಘಕ್ಕೆ ಸೇರಿದ್ದಂತೆ ತಿಳಿಯುವ ಅಪಭ್ರಂಶ ಕವಿ ಸ್ವಯಂಭುವಿಗೆ ಕರ್ನಾಟಕದೊಡನೆ ಸಂಬಂಧವಿತ್ತೆಂದು ತೋರುವುದು. ಆತನ ಬಂಧುಗಳ ಹೆಸರು ಇದನ್ನು ಎತ್ತಿ ತೋರಿಸುವಂತಿದೆ. ಸಿರಿಭೂವಲಯದ ಕರ್ತೃ ಕುಮುದೇಂದು (9ನೆಯ ಶತಮಾನ) ಕನ್ನಡನಾಡಿನ ಯಲವಳ್ಳಿಯೆಂಬ ಗ್ರಾಮದವನೆಂದು ಹೇಳಲಾಗಿದೆ. ಪ್ರಾಕೃತ ವೈಯಾಕರಣನಾದ ತ್ರಿವಿಕ್ರಮ (ಸು.1236) ಕೂಡ ಕನ್ನಡ ನಾಡಿನವನು. ಈತನ ವ್ಯಾಕರಣವಾದರೋ ದಾಕ್ಷಿಣಾತ್ಯ ಸಂಪ್ರದಾಯದ ಪ್ರಾಕೃತ ವ್ಯಾಕರಣಗಳಲ್ಲಿ ಆದ್ಯಕೃತಿ, ವರರುಚಿಯ ಪ್ರಾಕೃತ ಪ್ರಕಾಶದೊಡನೆ ಇಡೀ ದಕ್ಷಿಣದಲ್ಲಿ ಪ್ರಮಾಣಭೂತವಾದ ವ್ಯಾಕರಣವಾಗಿದೆ. ಅಪಭ್ರಂಶ ಭಾಷಾಕವಿ ಪುಷ್ಪದಂತ (ಸು.10ನೆಯ ಶತಮಾನ) ಮಾನ್ಯಖೇಟದಲ್ಲಿ ನಿಂತು ತನ್ನ ಮಹಾಪುರಾಣವನ್ನು ಬರೆದ. ಇದರಲ್ಲಿ ಹಲವು ಕನ್ನಡ ಶಬ್ದಗಳು ಬಳಕೆಯಾಗಿವೆಯೆಂದು ತಿಳಿಯುತ್ತದೆ.

ದಿಗಂಬರ ಜೈನಸಂಪ್ರದಾಯದ ಆಚಾರ್ಯರಾಗಿ ಪ್ರಸಿದ್ಧರಾಗಿರುವ ರಾಷ್ಟ್ರಕೂಟ ಚಕ್ರವರ್ತಿಗಳ ಆಳಿಕೆಯ ಕಾಲದಲ್ಲಿದ್ದ ವೀರಸೇನ, ಜಿನಸೇನ ಮತ್ತು ಗುಣಭದ್ರರೆಂಬ ಆಚಾರ್ಯರು ಸಂಸ್ಕೃತ ಪ್ರಾಕೃತ ಭಾಷೆಗಳಲ್ಲಿ ಕವಿಗಳೂ ವಿದ್ವಾಂಸರೂ ಆಗಿದ್ದವರು. ಸೇನಗಣದ ವೀರಸೇನ, ಜಿನಸೇನಾಚಾರ್ಯರು (9ನೆಯ ಶತಮಾನ) ದಿಗಂಬರರ ಮಹತ್ತ್ವಪುರ್ಣ ಗ್ರಂಥವಾದ ಷಟ್ಖಂಡಾಗಮಕ್ಕೆ ಧವಲಾ (1816), ಜಯಧವಲಾ (837) ಮತ್ತು ಮಹಾಧವಲಾ ಎಂಬ ಪ್ರಖ್ಯಾತವಾದ ಟೀಕೆಗಳನ್ನು ಬರೆದಿದ್ದಾರೆ. ಇದರ ಸ್ವಲ್ಪಭಾಗ ಸಂಸ್ಕೃತದಲ್ಲಿಯೂ ಸ್ವಲ್ಪಭಾಗ ಪ್ರಾಕೃತದಲ್ಲಿಯೂ ರಚಿತವಾಗಿದೆ. ಈ ಟೀಕೆಗಳ ಅಭ್ಯಾಸದ ಮೂಲಕ ಕರ್ನಾಟಕ ದೇಶದ ಜೈನಯತಿಗಳಲ್ಲಿ ಪ್ರಾಕೃತ ಭಾಷೆ ರೂಢಿಯಲ್ಲಿತ್ತೆನ್ನಬಹುದು. ಎಷ್ಟೋ ಹಿಂದಿನಿಂದ ಜೈನಸೂತ್ರ ಗ್ರಂಥಗಳ ರಕ್ಷಣೆ ಮತ್ತು ಸಿದ್ಧಾಂತಗ್ರಂಥಗಳಿಗೆ ವ್ಯಾಖ್ಯಾನ ರಚನೆ ಕನ್ನಡನಾಡಿನಲ್ಲಿ ನಡೆದುಕೊಂಡು ಬಂದಿತ್ತೆನ್ನುವುದಕ್ಕೆ ಈ ಮಹಾಗ್ರಂಥಗಳೇ ಸಾಕ್ಷಿ. 12ನೆಯ ಶತಕದಷ್ಟು ಹಿಂದಿನದಾಗಿ ಹಳಗನ್ನಡ ಲಿಪಿಯಲ್ಲಿ ತಾಳೆಯೋಲೆಯ ಮೇಲೆ ಮಸಿಯಿಂದ ಬರೆಯಲ್ಪಟ್ಟಿರುವ ಈ ವ್ಯಾಖ್ಯಾನ ಗ್ರಂಥಗಳ ಹಸ್ತಪ್ರತಿಗಳು ಅನ್ಯತ್ರ ಅನುಪಲಬ್ಧವಾಗಿದ್ದಾಗ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಸಿದ್ಧಾಂತಬಸದಿಯಲ್ಲಿ ಮಾತ್ರವೇ ಸುರಕ್ಷಿತವಾಗಿ ನಿಕ್ಷಿಪ್ತವಾಗಿದ್ದುವು. ದಕ್ಷಿಣದಲ್ಲಿಯ ಜೈನಗ್ರಂಥಕಾರರು ಪ್ರಾಕೃತ ಭಾಷೆಯನ್ನು ಮುಖ್ಯವಾಗಿ ಧಾರ್ಮಿಕ ಗ್ರಂಥಗಳಲ್ಲಿಯೇ ಬಳಸಿದ್ದಾರೆ. ಭಾರತೀಯ ಜೈನ ಸಾಹಿತ್ಯಕ್ಕೆ ಈ ಕಾಲದಲ್ಲಿ ನಡೆದ ಕರ್ನಾಟಕದ ಸೇವೆ ಅಮೂಲ್ಯವಾದುದೆಂದು ಹೇಳಬಹುದಾಗಿದೆ.

ಒಂದನೆಯ ಚಾವುಂಡರಾಯನ ಗುರು ದೇಶಿಯಗಣದ ನೇಮಿಚಂದ್ರಯತಿ (10ನೆಯ ಶತಮಾನ) ಗೊಮ್ಮಟಸಾರ, ತ್ರಿಲೋಕಸಾರ ಮುಂತಾದ ಕೆಲವು ಪ್ರಾಕೃತ ಗ್ರಂಥಗಳನ್ನು ರಚಿಸಿ ಪ್ರಖ್ಯಾತನಾಗಿದ್ದಾನೆ. ಪ್ರಾಕೃತ ಸಾಹಿತ್ಯದಲ್ಲಿ ಈತನ ಗ್ರಂಥಗಳಿಗೆ ಮಹತ್ತ್ವದ ಸ್ಥಾನವಿದೆ. ಗೊಮ್ಮಟಸಾರದಲ್ಲಿಯ ಕರ್ಮಕಾಂಡದ ಕೆಲವು ಗಾದೆಗಳು ಚಾವುಂಡರಾಯನ ಚರಿತ್ರೆಯ ವಿಚಾರವಾಗಿ ಕೆಲವು ಉಪಯುಕ್ತ ಸಂಗತಿಗಳನ್ನು ತಿಳಿಸುತ್ತವೆ. ಚಾವುಂಡರಾಯನ ಪ್ರತಿಬೋಧನಾರ್ಥವಾಗಿ ರಚಿತವಾದಂತೆ ತಿಳಿಯುವ ಗೊಮ್ಮಟಸಾರಕ್ಕೆ ಚಾವುಂಡರಾಯ ಮತ್ತು ಕೇಶವವರ್ಣಿಗಳು ಕನ್ನಡದಲ್ಲಿ ಟೀಕೆಗಳನ್ನು ಬರೆದಿದ್ದಾರೆ. ಉಪಲಬ್ಧ ಟೀಕೆಗಳಲ್ಲಿ ಕೇಶವವರ್ಣಿಯದೇ ಪ್ರಾಚೀನವಾದುದು. ಈ ಕನ್ನಡ ಟೀಕೆಯನ್ನು ಸಾಳುವ ಮಲ್ಲಿರಾಯನ (16ನೆಯ ಶತಮಾನ) ಸಮಕಾಲೀನನಾದ ನೇಮಿಚಂದ್ರನೆಂಬೊಬ್ಬ ಕವಿ ಸಂಸ್ಕೃತಕ್ಕೆ ಪರಿವರ್ತಿಸಿದ್ದಾನೆ. ಚಾವುಂಡರಾಯನ ಗುರು ನೇಮಿಚಂದ್ರಯತಿಗೂ ದೇವಸೇನನೆಂಬೊಬ್ಬ ಪ್ರಾಕೃತ ಕವಿಗೂ ಮಾತೃಭಾಷೆ ಕನ್ನಡವಾಗಿದ್ದಿತೆಂಬುದು ವಿದ್ವಾಂಸರ ಅಬಿsಪ್ರಾಯವಾಗಿದೆ.

ಕನ್ನಡನಾಡಿನವರಾಗಿ ಕನ್ನಡದಲ್ಲಿ ಕೃತಿರಚನೆ ಮಾಡಿದವರಾಗಿ ತಿಳಿದುಬಂದಿರುವ ತುಂಬಲೂರಾಚಾರ್ಯ ಮತ್ತು ಶ್ಯಾಮಕುಂದಾಚಾರ್ಯ (ಸು.650) ಇವರು ಪ್ರಾಕೃತದಲ್ಲಿ ಸಿದ್ಧಾಂತ ಗ್ರಂಥಗಳನ್ನು ಬರೆದಿದ್ದರೆಂದು ಕೂಡ ತಿಳಿಯುತ್ತದೆ. ಉಭಯಭಾಷಾಕವಿ ಅಸಗನನ್ನು (ಸು.853) ಧವಲನೆಂಬ ಅಪಭ್ರಂಶ ಕವಿಯೊಬ್ಬ ತನ್ನ ಹರಿವಂಶಪುರಾಣದಲ್ಲಿ ಸ್ತುತಿಸಿರುವುದರಿಂದ ಅಸಗ ಪ್ರಾಕೃತಕವಿಗಳಿಂದಲೂ ಗಣ್ಯನಾಗಿದ್ದನೆಂಬ ವಿಷಯ ವಿಶದವಾಗುತ್ತದೆ. ಆತನ ಕೆಲವು ಕೃತಿಗಳು ಪ್ರಾಕೃತಕವಿಗಳಿಗೆ ಆಕರಗಳಾಗಿಯೋ ಮಾದರಿ ಗಳಾಗಿಯೋ ಇದ್ದಿರಬಹುದು. ಅಂತೂ 10ನೆಯ ಶತಮಾನದವರೆಗಾದರೂ ಕನ್ನಡನಾಡು ಪ್ರಾಕೃತ ಸಾಹಿತ್ಯಕ್ಕೆ ಮಹತ್ತ್ವಪುರ್ಣವಾದ ಕಾಣಿಕೆಯನ್ನು ಸಲ್ಲಿಸಿದೆಯೆಂಬುದು ಮೇಲಿನ ಕೆಲವಂಶಗಳಿಂದ ಸ್ಪಷ್ಟವಾಗುತ್ತದೆ.

ಇಂಥ ಹಿನ್ನೆಲೆಯಲ್ಲಿ ಕನ್ನಡನಾಡಿನಲ್ಲಿ ಪ್ರಾಕೃತಭಾಷೆ ಸಾಹಿತ್ಯಗಳಿಗೆ ದೊರೆತ ಸ್ಥಾನಮಾನಗಳಿಂದ ಕನ್ನಡಿಗರಾದ ಪ್ರಾಕೃತ ಕವಿಗಳ ಪರಿಶ್ರಮದಿಂದ ಪ್ರಾಕೃತ ಭಾಷೆಯ ಮರ್ಯಾದೆಗನುಸಾರವಾಗಿ ಕನ್ನಡ ಶಬ್ದಗಳು ಪ್ರಾಕೃತ ಭಾಷಾ ಸಾಹಿತ್ಯಗಳೊಳಗೆ ಕೆಲಮಟ್ಟಿಗೆ ಸೇರುವಂತಾಯಿತು. ಕೋಶಕಾರರು ಅವನ್ನು ದೇಶೀ ಶಬ್ದಗಳೆಂದು ನಿರ್ದೇಶಿಸಿದ್ದಾರೆ. ಹಾಲನ ಗಾಥಾಸಪ್ತಶತಿಯಲ್ಲಿ ಕಂಡುಬರುವ ಆತ್ತಾ, ತುಪ್ಪ, ಪೊಟ್ಟ, ಫಲಹಿ, ತೀರಇ ಎಂಬ ಪ್ರಾಕೃತ ಶಬ್ದಗಳು, ಅತ್ತೆ, ತುಪ್ಪ, ಪೊಟ್ಟೆ, ಪ¿್ತೆ, ತೀರ ಎಂಬ ಕನ್ನಡ ಶಬ್ದಗಳ ಪ್ರತಿರೂಪಗಳೆಂದು ವಿದ್ವಾಂಸರು ಕಂಡುಹಿಡಿದಿದ್ದಾರೆ. ಹೇಮಚಂದ್ರನ ದೇಶೀನಾಮಮಾಲೆ ಮುಂತಾದ ಕೋಶಗಳಲ್ಲಿ ಕಂಡುಬರುವ ಕೆಲವು ಕನ್ನಡ ಶಬ್ದಗಳನ್ನೂ ಹೀಗೆಯೇ ಗುರುತಿಸಲಾಗಿದೆ. ಒಂದು ಪಟ್ಟಿಯ ಪ್ರಕಾರ ಪ್ರಾಕೃತ ದೇಶೀಕೋಶಗಳಲ್ಲಿಯ ಅಕ್ಕಾ, ಉಡೂ, ಉಮ್ಮಲ್ಲೋ, ಉಲ್ಲೀ, ಊಲೋ, ಎತ್ತೊಪ್ಪಂ-ಇಲ್ತೊಪ್ಪಂ, ಒಕ್ಕಿಅ, ಒಪ್ಪಾ, ಕಲೀಂ, ಕುಂಡಿಓ-ಕೊಂಡಿಓ, ಕುರುಡ, ಕೋಲೋ-ಕುಲ್ಲ, ಖಡ್ಡಂ, ಚಿಕ್ಕ, ಣೀಸರೋ ತುಪ್ಪೋ, ಪಾಮೋ, ಪಾಲೊ, ಪುಲ್ಲೀ, ಪೊಚ್ಚಂ, ಮರುಲೋ, ಸೂಲಾ - ಈ ಶಬ್ದಗಳು ಕ್ರಮವಾಗಿ ಪ್ರಾಯಃ ಅಕ್ಕ, ಉಡು, ಉಮ್ಮಳ, ಒಲೆ, ಉರುಳ್, ಎಂತಪ್ಪ ಇಂತಪ್ಪ, ಒಕ್ಕು, ಒಪ್ಪ, ಕಲಿ, ಗಾವುಂಡ - ಗೌಡ, ಕುರುಡ, ಕೊರಲ್, ಗಡ್ಡ, ಚಿಕ್ಕ, ನೇಸರ್, ತುಪ್ಪ, ಪಾವು, ಪಾವ್, ಪುಲಿ, ಪೊಚ್ಚ, ಮರುಳ್, ಸೂಳೆ -ಈ ಕನ್ನಡ ಶಬ್ದಗಳ ಪ್ರಾಕೃತ ರೂಪಗಳೆಂದು ತಿಳಿಯುತ್ತದೆ. ಇನ್ನೊಂದು ಪಟ್ಟಿಯ ಪ್ರಕಾರ (ಹೇಮಚಂದ್ರನ ದೇಶೀನಾಮಮಾಲೆ) ಕಂಡುಬರುವ ಆಲಂಬಂ (ನಾಯಿಕೊಡೆ), ಇಗ್ಗೋ, ಉಂಡಲಂ, (ಗಂಭೀರಮ್, ಉಬ್ಬುಕ್ಕುಂ, ಸಂಕಟಮ್), ಕಾಹಲ್ಲೀ, ಕುಣಾ (ವೃತ್ತಿ ವಿವರಮ್ ಗುಳಿ), ತುಂಬಿಲ್ಲೀ ಈ ಶಬ್ದಗಳು ಕ್ರಮವಾಗಿ ಪ್ರಾಯಃ ಅಣಂಬೆ, ಎಗ್ಗ, ಹೊಂಡ, ಉಬ್ಬಸ, ಕಾವಲಿ, ಕುಣಿ ಕು¿Â, ತುಂಬಿಯ ಇಲ್ ಈ ಕನ್ನಡ ಶಬ್ದಗಳ ಪ್ರಾಕೃತ ರೂಪಗಳೆಂದು ಭಾವಿಸಲಾಗಿದೆ. ಹೀಗೆಯೇ ಓಲಗ, ಕಾವರ, ಪೋಟ (ಪೊಟ್ಟೆ) ಶಬ್ದಗಳು ಪ್ರಾಕೃತ ದೇಶೀಕೋಶಗಳಲ್ಲಿ ಸೇರಿಕೊಂಡಿರುವ ಶಬ್ದಗಳು ಕೆಲಮೊಮ್ಮೆ ನೇರವಾಗಿ ಕನ್ನಡದಿಂದ ಹೋಗಿದ್ದಿರಬಹುದು. ಇಲ್ಲವೆ ಯಾವ ದ್ರಾವಿಡ ಭಾಷಾಮೂಲದಿಂದಾದರೂ ಹೋಗಿರ ಬಹುದು. ಎಷ್ಟೋ ಶಬ್ದಗಳು ಬೇರೆ ಬೇರೆ ದ್ರಾವಿಡ ಭಾಷಾ ಮೂಲಗಳಿಂದ ಪ್ರಾಕೃತಕ್ಕೆ ಹೋಗಿರಬಹುದಾದರೂ ಕನ್ನಡದಿಂದಲೇ ನೇರವಾಗಿ ಹೋಗಿರುವ ಸಾಧ್ಯತೆಯಂತೂ ಇದ್ದೇ ಇದೆ. (ಟಿ.ವಿ.ವಿ.)

ಕನ್ನಡದ ಬಗ್ಗೆ ಹೇಳುವುದಾದರೆ ದಕ್ಷಿಣಕ್ಕೆ ಬಂದ ಪ್ರಾಕೃತ ಮಾತನಾಡುವವರಾಗಿದ್ದ ಜೈನಮುನಿಗಳ ಸಂಪರ್ಕ ಕನ್ನಡಿಗರೊಡನೆ ಆದ ಕೂಡಲೇ ಭಾಷಿಕ ಕೊಡುಕೊಳ್ಳುವ ವ್ಯವಹಾರ ನಡೆದಿರಬೇಕು. ಹೊಸ ನಾಡಿಗೆ ಬಂದ ಜೈನಯತಿಗಳಿಗೆ ತಮ್ಮ ಧರ್ಮವನ್ನು ಕರ್ನಾಟಕದ ಜನತೆಗೆ ಬೋಧಿಸುವ ಪ್ರಸಂಗ ಬಂದಾಗ ಅವರು ಕನ್ನಡವನ್ನು ಕಲಿತು, ಅದರಲ್ಲಿ ಪ್ರಾಕೃತ ಶಬ್ದಗಳನ್ನು ಬೆರೆಸಿ ಮಾತನಾಡಲೂ ಆರಂಬಿsಸಿರಬೇಕು. ಕಾಲಾಂತರದಲ್ಲಿ ಇವರಲ್ಲಿ ಕೆಲವರು ಕನ್ನಡಭಾಷೆಯ ಮೇಲೆ ಪ್ರಭುತ್ವವನ್ನು ಪಡೆದು, ಕನ್ನಡದಲ್ಲಿ ಧಾರ್ಮಿಕ ಗ್ರಂಥಗಳನ್ನು ಬರೆಯುವ ಪ್ರಯತ್ನ ಮಾಡಿರಬಹುದು. ಕನ್ನಡದ ಆರಂಭದ ಕಾವ್ಯಗಳು ಈ ಮಾತಿಗೆ ನಿದರ್ಶನ. ಕನ್ನಡ ಭಾಷೆಯಲ್ಲಿ ಪ್ರಚಲಿತವಾದ ಮತ್ತು ಹೊಸದೆಂದೆನಿಸುವ ಆಂಡಯ್ಯನ ಭಾಷಾ ಪ್ರವೃತ್ತಿಯ ಮೂಲಕ ಪ್ರಾಕೃತ ಭಾಷೆಗಳ ಒಲವಿನಿಂದಾದುದೆನ್ನಬಹುದು. ಕನ್ನಡ ವ್ಯಾಕರಣಕಾರರ ಮೇಲೆ ಪ್ರಾಕೃತ ವ್ಯಾಕರಣಗಳ ಪ್ರಭಾವ ಆಗಿತ್ತೆಂಬುದು ಕೇಶಿರಾಜ, ಭಟ್ಟಾಕಳಂಕರ ಕೃತಿಗಳಿಂದ ಸ್ಪಷ್ಟವಾಗುತ್ತದೆ. ಪ್ರಾಕೃತ ವ್ಯಾಕರಣವನ್ನು ಓದಿದವರಿಗೆ, ಕನ್ನಡ ವ್ಯಾಕರಣಗಳ ತದ್ಭವ ಪ್ರಕರಣಗಳನ್ನೂ ಕೃತ್ಪ್ರತ್ಯಯ ಮತ್ತು ತದ್ಧಿತಪ್ರತ್ಯಯಗಳನ್ನು ಓದುವಾಗ ಪ್ರಾಕೃತ ಭಾಷೆ ಕನ್ನಡಕ್ಕೆ ಎಷ್ಟು ಕಾಣಿಕೆಯಿತ್ತಿದೆಯೆಂಬ ಸಂಗತಿ ತಿಳಿಯುತ್ತದೆ. ವಡ್ಡಾರಾಧನೆ ಮತ್ತು ಕನ್ನಡದ ಇತರ ಹಲವಾರು ಜೈನಗ್ರಂಥಗಳಿಗೆ ಪ್ರಾಕೃತ ಕೃತಿಗಳು ಆಕರವಾಗಿರಬಹುದು. ಪ್ರಾಕೃತ ಛಂದಸ್ಸಿನ ಕೆಲವು ಪ್ರಕಾರಗಳ ಉಪಯೋಗ ಕನ್ನಡದಲ್ಲಿ ತೋರುತ್ತದೆ. ಕನ್ನಡದ ಮಾತ್ರಾವೃತ್ತಗಳು ಸಂಸ್ಕೃತ ಪ್ರಾಕೃತದಿಂದ ಹುಟ್ಟಿದವುಗಳು. ಸಂಸ್ಕೃತದ ಆರ್ಯಾಗೀತೆ, ಪ್ರಾಕೃತದಲ್ಲಿ ಸ್ಕಂದವಾಗಿ ಕನ್ನಡದಲ್ಲಿ ಕಂದವಾಯಿತು. ಪ್ರಾಕೃತದ ರಘಟಾ ಕನ್ನಡದ ರಗಳೆಯಾಯಿತು.

ಹಿಂದೆ ಪ್ರಾಕೃತ ಆಡಳಿತ ಭಾಷೆಯಾಗಿ ಪ್ರಚಲಿತವಾಗಿದ್ದ ಕಾಲದಿಂದಲೂ ಪ್ರಾಕೃತ ಶಬ್ದಗಳು ಕನ್ನಡಕ್ಕೆ ಸೇರ್ಪಡೆಯಾಗಿರಬೇಕು. ಕನ್ನಡದ ಪ್ರಾಚೀನ ಕಾವ್ಯಗಳನ್ನು ರಚಿಸಿದ ಪ್ರಾಕೃತ ಬಲ್ಲವರಾಗಿದ್ದ ಜೈನಕವಿಗಳ ಪರಿಶ್ರಮದಿಂದ ಹಾಗೂ ಆ ಕಾಲದಲ್ಲಿದ್ದ ಜೈನರ ಪ್ರಭಾವದಿಂದ ಪ್ರಾಕೃತ ಶಬ್ದಗಳ ಬಳಕೆ ಕನ್ನಡದಲ್ಲಿ ವಿಶೇಷವಾಗಿ ನಡೆದಿರಬೇಕು. ಹಲವು ಶಬ್ದಗಳು ಪ್ರಾಕೃತದಲ್ಲಿದ್ದಂತೆಯೇ ಕನ್ನಡಕ್ಕೆ ಬಂದಿವೆ. ಈ ಶಬ್ದಗಳು ಪ್ರಾಕೃತದಿಂದ ನೇರವಾಗಿ ಕನ್ನಡಕ್ಕೆ ಸೇರಿದುವೆಂಬ ಮಾತು ಸ್ಪಷ್ಟವಾಗುತ್ತದೆ. ಉದಾ: ಅಜ್ಜ, ಅಯ್ಯ, ಸಮಣ, ಸರಿಸ, ಇಂಗಾಲ, ಕಸಾಯ, ನೇಹ, ರನ್ನ, ಜನ್ನ ಇತ್ಯಾದಿ. ಕನ್ನಡದಲ್ಲಿರುವ ತದ್ಭವ ಪದಗಳು ಸಂಸ್ಕೃತದಿಂದ ಬಂದವೆಂಬ ಕಲ್ಪನೆ ಇದೆಯಾದರೂ ಅವುಗಳಲ್ಲಿ ಸಾಕಷ್ಟು ಮಟ್ಟಿನ ಪದಗಳು ಪ್ರಾಕೃತ ಮೂಲದಿಂದಲೇ ರೂಪಾಂತರ ಹೊಂದಿ ಬಂದಿರಬಹುದೆಂದು ಅನೇಕ ವಿದ್ವಾಂಸರ ಊಹೆ. ಇದಲ್ಲದೆ ಆರಂಭ, ಪರಿಸಹ, ಪರಿಗ್ರಹ, ನಿಕ್ಖಮಣ, ಬಿsಕು್ಖ, ಆಚಾರ್ಯ, ಚಕ್ರವರ್ತಿ, ತೀರ್ಥಂಕರ, ತಿತ್ಥ ಇತ್ಯಾದಿ ಅನೇಕ ಜೈನ ಪಾರಿಭಾಷಿಕ ಶಬ್ದಗಳನ್ನೂ ಕನ್ನಡದ ಜೈನಕವಿಗಳು ತಮ್ಮ ಕಾವ್ಯಗಳಲ್ಲಿ ಬಳಸಿದ್ದಾರೆ.

ಪ್ರಾಕೃತ ವ್ಯಾಕರಣದೊಳಗಿನ ಧ್ವನಿಪರಿವರ್ತನೆಗೆ ಸಂಬಂಧಿಸಿದ ಕೆಲವು ನಿಯಮಗಳು ಕನ್ನಡ ವ್ಯಾಕರಣಗಳಲ್ಲಿ ಅಚ್ಚಳಿಯದೆ ಬಂದಿವೆ. ಈ ನಿಯಮಗಳು ಸ್ವರ, ವ್ಯಂಜನ, ಸಂಯುಕ್ತವ್ಯಂಜನ ಮುಂತಾದುವುಗಳಿಗೆ ಅನ್ವಯಿಸುತ್ತವೆ. ಸಂಸ್ಕೃತದ ಋ ಸ್ವರ ಪ್ರಾಕೃತದಲ್ಲಿ ಅ,ಇ,ಉಮತ್ತುರಿ ರೇಫಕ್ಕೆ ಬದಲಾಗುವಂತೆ ಕನ್ನಡದಲ್ಲಿಯೂ ಬದಲಾಗುವುದು. ಉದಾ: ತೃಣ > ತಿಣ, ಋಣ > ರಿಣ, ವೃಷಭ > ಬಸವ ಇತ್ಯಾದಿ. ಶಬ್ದದ ಆದಿ ಮತ್ತು ಅಂತ್ಯದ ಅ ಕಾರ ಅನುಕ್ರಮವಾಗಿ ಇ ಮತ್ತು ಎ ಅಥವಾ ಉ ಕಾರವಾಗುತ್ತದೆ. ಉದಾ: ಜೀರಕ > ಜೀರಿಗೆ, ಅಂಗಾರ > ಇಂಗಳ, ದಂಡ > ದಂಡು, ಐ ಮತ್ತು ಔ ಸಂಧ್ಯಕ್ಷರಗಳು ಎ ಮತ್ತು ಒ ಆಗುತ್ತವೆ. ಒಮ್ಮೊಮ್ಮೆ ಅ ಇ ಮತ್ತು ಅ ಉ ಆಗುವುದುಂಟು. ಉದಾ: ಸೈಂಧವ > ಸೆಂಧವ, ವೈದ್ಯ > ಬೆಜ್ಜ, ಕೌಂಗು > ಕವುಂಗು ಅಥವಾ ಕೊಂಗು, ಶ ಮತ್ತು ಷ ಗಳು ಸ ಕಾರವಾಗುತ್ತವೆ. ಶಶಿ > ಸಸಿ, ಶಂಕರ > ಸಂಕರ, ವಿಷಯ > ವಿಸಯ. ಆದಿ ಯಕಾರ ಜ ಕಾರವಾಗುತ್ತದೆ. ಉದಾ: ಯಮ > ಜಮ, ಯಜ್ಞ > ಜನ್ನ, ಯತ್ನ > ಜತನ ಇತ್ಯಾದಿ ಅನೇಕ ಉದಾಹರಣೆಗಳನ್ನು ಕೊಡಬಹುದು. ಸಮರೂಪಕರಣದ ಮುಖಾಂತರ ವಿಜಾತಿ ವ್ಯಂಜನಗಳಿಂದ ಉಂಟಾದ ಸಂಯುಕ್ತವ್ಯಂಜನಗಳು ಸಜಾತಿಯ ಸಂಯುಕ್ತ ವ್ಯಂಜನಗಳಾಗುವುದನ್ನು ಕನ್ನಡದಲ್ಲಿಯೂ ಕಾಣಬಹುದು. ಉದಾ: ಕಳ್ತೆ > ಕತ್ತೆ, ತರ್ಪು > ತಪ್ಪು, ರತ್ನ > ರನ್ನ ಇತ್ಯಾದಿ. ಕನ್ನಡದಲ್ಲಿ ಕಂಡುಬರುವ ಅನೇಕ ಪ್ರತ್ಯಯಗಳಲ್ಲಿ ಬಹಳಷ್ಟು ಪ್ರಾಕೃತದ ಪ್ರತ್ಯಯಗಳಾಗಿವೆ. ಉದಾ: - ತ, - ಗ, - ಇತ, - ಇಗ, - ತ್ತಾರ, - ತಾರ ಇತ್ಯಾದಿ. ಇವಲ್ಲದೆ ವಿಭಕ್ತಿಪ್ರತ್ಯಯಗಳಲ್ಲಿ - ಉ, - ಕ್ಕೆ, - ಗೆ, - ಎ ಇವು ಪ್ರಾಕೃತದಿಂದ ಕನ್ನಡಕ್ಕೆ ಬಂದಂತೆ ತೋರುತ್ತದೆ. (ಪಿ.ಬಿ.ಬಿ.)

ಸಂಸ್ಕೃತ[ಬದಲಾಯಿಸಿ]

ಭಾರತದ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತ ಕರ್ನಾಟಕದಲ್ಲಿ ಬಹು ಹಿಂದಿನಿಂದಲೂ ಪ್ರಚಾರದಲ್ಲಿದ್ದು ದೀರ್ಘವಾದ ಇತಿಹಾಸವನ್ನು ಹೊಂದಿದೆ. ಪ್ರತಿಷ್ಠಾನ ನಗರದಲ್ಲಿದ್ದ ಶಾತವಾಹನ ದೊರೆಗೆ ಸಂಬಂಧಿಸಿದ ‘ಮೋದಕಂ ತಾಡಯ’ದ ಕಥೆ ಬಹುಶಃ ದಕ್ಷಿಣ ಭಾರತದಲ್ಲಿ ಸಂಸ್ಕೃತದ ಹರಡುವಿಕೆಯ ಪ್ರಾರಂಭವನ್ನು ಸೂಚಿಸುತ್ತದೆ. ಕರ್ನಾಟಕದ ಪ್ರಾಚೀನತಮ ಸಂಸ್ಕೃತ ಶಾಸನವೆಂದರೆ ಕುಬ್ಜ (ನೋಡಿ) ಬರೆದ ತಾಳಗುಂದ ಶಾಸನ (ಸು.450). ಇದರಲ್ಲಿರುವ ರಚನಾ ಪಾಂಡಿತ್ಯ ಆ ಕಾಲಕ್ಕಾಗಲೇ ಸಂಸ್ಕೃತ ಈ ನಾಡಿನಲ್ಲಿ ಚೆನ್ನಾಗಿ ಬೇರೂರಿರಬೇಕೆಂಬುದನ್ನು ತಿಳಿಸುವುದಲ್ಲದೆ, ಅದೇ ಕಾಲದ ಹಲ್ಮಿಡಿ ಶಾಸನದಿಂದ ಸಂಸ್ಕೃತ ಭಾಷೆ ಕನ್ನಡ ರಚನೆಗಳ ಮೇಲೂ ಪ್ರಭಾವ ಬೀರುವ ಸ್ಥಿತಿಯಲ್ಲಿದ್ದಿತೆಂಬುದನ್ನು ತೋರಿಸುತ್ತದೆ. ಇಲ್ಲಿಂದ ಮುಂದೆ ಸಂಸ್ಕೃತ ಶಿಷ್ಟಭಾಷೆಯಾಗಿ ಬೆಳೆದು ಉನ್ನತ ಸ್ಥಾನವನ್ನು ಗಳಿಸಿ ತತ್ಕಾಲದ ಉನ್ನತ ವರ್ಗಗಳಿಂದ ಪ್ರೋತ್ಸಾಹ ಗಳಿಸಿತು. ನೂರಾರು ಸಂಸ್ಕೃತ ಶಾಸನಗಳು ಕನ್ನಡದಲ್ಲಿ ರಚಿತವಾದವು. ಅನೇಕ ಕವಿಗಳು, ಶಾಸ್ತ್ರಕಾರರು ಈ ನಾಡಿನಲ್ಲಿ ಆಗಿಹೋದರು. ನೂರಾರು ಸಂಸ್ಕೃತ ಗ್ರಂಥಗಳ ರಚನೆಯಾಯಿತು. ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ ಗಣ್ಯವಾದುದು. ಹಾಗೆಯೇ ಸಂಸ್ಕೃತದ ಶ್ರುತಿ ಸ್ಮೃತಿ ಪುರಾಣ ಇತಿಹಾಸಗಳು ಕರ್ನಾಟಕದಲ್ಲಿ ಹರಡಿ ಅವು ಹಾಗೂ ಇತರ ಸಂಸ್ಕೃತ ಕೃತಿಗಳು ಕನ್ನಡ ದೇಶದ ಸಂಸ್ಕೃತಿ ಹಾಗೂ ನುಡಿಯ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತ ಬಂದಿವೆ.

ಕರ್ನಾಟಕದ ಭಾಗಗಳನ್ನು ಆಳುತ್ತಿದ್ದ ಸಾತವಾಹನರ ಆಸ್ಥಾನಭಾಷೆ ಪ್ರಾಕೃತವಾಗಿದ್ದರೂ ಅವರು ಸಂಸ್ಕೃತ ಭಾಷೆಯನ್ನು ಕೂಡ ಪ್ರೋತ್ಸಾಹಿಸುತ್ತಿದ್ದಿರಬಹುದು. ಇವರ ಕಾಲದಲ್ಲೇ ರಾಮಾಯಣ ಮಹಾಭಾರತಗಳಷ್ಟು ಕವಿಜನಪ್ರಿಯವಾದ ಬೃಹತ್ಕಥೆ ಪೈಶಾಚೀ ಪ್ರಾಕೃತದಲ್ಲಿ ಗುಣಾಢ್ಯನೆಂಬಾತನಿಂದ ರಚಿತವಾದಂತೆ, ಮಹಾರಾಷ್ಟ್ರೀ ಪ್ರಾಕೃತದಲ್ಲಿ ಏಳುನೂರು ಮುಕ್ತಕಗಳ ಸಂಗ್ರಹವಾದ ಸತ್ತಸ ರಾಜನಾದ ಹಾಲನಿಂದಲೇ ಸಂಗ್ರಹಿತವಾದಂತೆ, ಅವನ ಆಸ್ಥಾನಪಂಡಿತನಾದ ಸರ್ವವರ್ಮನಿಂದ ಕಾತಂತ್ರವೆಂಬ ನೂತನ ಸಂಸ್ಕೃತ ವ್ಯಾಕರಣವೂ ನಿರ್ಮಿತವಾಯಿತು. ಮುಂದೆ ಬೃಹತ್ಕಥೆ ಸಂಸ್ಕೃತಕ್ಕೂ ಮೂರುನಾಲ್ಕು ರೂಪಾಂತರಗಳನ್ನು ಉತ್ತರದ ಕವಿಗಳಿಂದ ಪಡೆದುದನ್ನು ನೋಡುತ್ತೇವೆ. ಆದರೆ ಮೂಲ ಬೃಹತ್ಕಥೆ ದಕ್ಷಿಣದ್ದೇ; ಇದರ ಒಂದು ಅಂಶದ ರೂಪಾಂತರವೇ ಸುಪ್ರಸಿದ್ಧವಾದ ಪಂಚತಂತ್ರ ಕೂಡ. ಈ ಪಂಚತಂತ್ರದ ಒಂದು ಆವೃತ್ತಿಯ ಪ್ರವರ್ತಕ ಕೂಡ ಕರ್ನಾಟಕದ ವಸುಭಾಗಭಟ್ಟ (ಈ ಕೃತಿ ಬೃಹತ್ತರ ಭಾರತದ ಲೇಯಾಸ್ ಹಾಗೂ ಜಾವ ದ್ವೀಪದ ಭಾಷೆಗಳಲ್ಲಿಯೂ ಭಾಷಾಂತರಗೊಂಡಿದೆ).

ಭಾಸನ (ಸು.2ನೆಯ ಶತಮಾನ) ದ್ವಿತೀಯಾಕ್ಷರ ಪ್ರಾಸಗಳನ್ನು ಅನುಲಕ್ಷಿಸಿ ಆತ ಕನ್ನಡಿಗನಿದ್ದಿರಬೇಕೆಂದು ಯು.ವೆಂಕಟಕೃಷ್ಣರಾವ್ ಊಹಿಸಿದ್ದಾರೆ (ಈ ಊಹೆಗೆ ಹೆಚ್ಚಿನ ಸಮರ್ಥನೆ ಬೇಕಾಗಿದೆ).

ಪೂಜ್ಯಪಾದ (ಅಥವಾ ದೇವನಂದಿ 5 ಅಥವಾ 6ನೆಯ ಶತಮಾನ) ಪಾಣಿನಿಯ ಸೂತ್ರಗಳಿಗೆ ಶಬ್ದಾವತಾರವೆಂಬ ವ್ಯಾಖ್ಯಾನ ರಚಿಸಿದ್ದನೆಂದು ಶಾಸನಗಳಲ್ಲಿ ಹೇಳಲಾಗಿದೆ. ಈತ ಜೈನೇಂದ್ರ ವ್ಯಾಕರಣವೆಂಬ ಹೊಸ ವ್ಯಾಕರಣ ಪಂಥವನ್ನು ನಿರ್ಮಾಣ ಮಾಡಿದ. ಇದರಲ್ಲಿ ಪ್ರಾಯೋಗಿಕ ದೃಷ್ಟಿಯಿಂದ ಪಾಣಿನಿಯ ಸೂತ್ರಗಳನ್ನು ಸಂಗ್ರಹಿಸಲಾಗಿದೆ.

ಗಂಗರಾಜನಾದ ದುರ್ವಿನೀತ (6ನೆಯ ಶತಮಾನ) ಬೃಹತ್ಕಥೆಯ ಸಂಸ್ಕೃತ ರೂಪಾಂತರಕಾರರಲ್ಲಿ ಒಬ್ಬನೆಂದು ಕೆಲವು ಶಾಸನಗಳು ಹೇಳುತ್ತವೆ. ದುರ್ವಿನೀತನ ಸಮಕಾಲೀನನೂ ಸಂಸ್ಕೃತದ ಪ್ರಸಿದ್ಧ ಮಹಾಕಾವ್ಯವಾದ ಕಿರಾತಾರ್ಜುನೀಯದ ಕರ್ತೃವೂ ಆದ ಭಾರವಿ ದುರ್ವಿನೀತನ ಆಸ್ಥಾನದಲ್ಲಿಯೂ ಕೆಲಕಾಲ ಇದ್ದನೆಂಬ ಐತಿಹ್ಯವನ್ನು ಈಚೆಗೆ ದೊರೆತ ದಂಡಿಯ ಅವಂತಿಸುಂದರೀ ಕಥಾ ಎಂಬ ಗದ್ಯಕೃತಿ ಒಳಗೊಂಡಿದೆ. ದಂಡಿ ಸಹ ಕೆಲವು ಕಾಲ ದುರ್ವಿನೀತನ ಆಸ್ಥಾನದಲ್ಲಿ ಇದ್ದಿರಬೇಕು. ನಾಟಕಕಾರರಲ್ಲಿ ಪ್ರಸಿದ್ಧನಾದ ಮೃಚ್ಫಕಟಿಕಕಾರ ಶೂದ್ರಕನು ಗಂಗರಾಜ ಶಿವಮಾರನಿರಬೇಕೆಂದು ಸಾಲೆತೊರೆ ಎಂಬ ವಿದ್ವಾಂಸರ ಊಹೆ.

ಭಾರವಿ ಮತ್ತು ಕಾಳಿದಾಸ ಮಹಾಕವಿಗಳ ಸ್ಪಷ್ಟ ಶಿಲಾಶಾಸನೋಲ್ಲೇಖ ದೊರೆಯುವುದು ಬಾದಾಮಿ ಚಾಳುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕಾಲದ ಐಹೊಳೆಯ ಶಾಸನದಲ್ಲಿ (634). ಆ ಶಾಸನದ ಕರ್ತೃ ರವಿಕೀರ್ತಿ ತನ್ನನ್ನು ಆ ಇಬ್ಬರು ಮಹಾಕವಿಗಳಿಗೆ ಸಮನೆಂದು ಹೊಗಳಿಕೊಂಡಿದ್ದಾನೆ. ಈ ಪ್ರಶಸ್ತಿ ಶಾಸನ ಇಮ್ಮಡಿ ಪುಲಕೇಶಿಯ ಪರಾಕ್ರಮಾದಿಗಳನ್ನು ಕಾವ್ಯಮಯ ಶೈಲಿಯಲ್ಲಿ ವರ್ಣಿಸುತ್ತದೆ. ಇದರ ಭಾಷೆ ಸರಾಗವಾಗಿ ಹರಿಯುತ್ತದೆ. ನಾನಾ ಬಗೆಯ ವೃತ್ತಗಳಲ್ಲಿ ರಚಿತವಾದ ಇದರಲ್ಲಿ ಕಾವ್ಯದ ಹಲವು ಲಕ್ಷಣಗಳು ಕಾಣಬರುತ್ತವೆ. ಇದಕ್ಕೂ ಮುಂಚಿನ ಮಂಗಲೀಶನ ಶಾಸನದಲ್ಲಿ (ಸು.600) ಒಂದನೆಯ ಕೀರ್ತಿವರ್ಮನ ದಿಗ್ವಿಜಯವನ್ನು ವರ್ಣಿಸುವಲ್ಲಿ ಕಾಳಿದಾಸನ ರಘುವಂಶದ ರಘು ದಿಗ್ವಿಜಯವನ್ನೇ ಮಾದರಿಯಾಗಿಟ್ಟುಕೊಳ್ಳಲಾಗಿದೆ. ಇಮ್ಮಡಿ ಪುಲಕೇಶಿಯ ಸೊಸೆ, ಚಂದ್ರಾದಿತ್ಯನ ರಾಣಿ ವಿಜಯಾ ಅಥವಾ ಬಿಜ್ಜಾ ಅಥವಾ ಬಿಜ್ಜಿಕಾ (ವಿಜ್ಜಿಕೆ) ಪ್ರೌಢ ಪಾಂಡಿತ್ಯ ಪಡೆದಿದ್ದಳೆಂದು ತಿಳಿದುಬರುತ್ತದೆ. ಕೌಮುದೀ ಮಹೋತ್ಸವವೆಂಬ ನಾಟಕ ಬರೆದವಳು ಇವಳೇ ಎಂದು ವಿದ್ವಾಂಸರ ಅಭಿಪ್ರಾಯ.

ಬಾದಾಮಿಯ ಚಾಳುಕ್ಯರ ಕಾಲದಲ್ಲಿಯೇ ಶಂಕರಾಚಾರ್ಯರ ವೇದಾಂತ ಭಾಷ್ಯಗಳೂ ಹುಟ್ಟಿಕೊಂಡಿರಬಹುದು. ಸಮಂತಭದ್ರನ ತತ್ತ್ವಾರ್ಥ ಸೂತ್ರ ಮಹಾಭಾಷ್ಯ, ಆಪ್ತಮೀಮಾಂಸಾ ಮುಂತಾದ ಉದ್ದಾಮ ಧರ್ಮ ಗ್ರಂಥಗಳೂ ಈ ಕಾಲದಲ್ಲಿ ಬಂದವು. ತತ್ತ್ವಾರ್ಥಾಸೂತ್ರಕ್ಕೆ ಸರ್ವಾರ್ಥಸಿದ್ಧಿ ವ್ಯಾಖ್ಯೆಯನ್ನು ಪುಜ್ಯಪಾದ ರಚಿಸಿದ. ಮತ್ತೊಬ್ಬ ಜೈನ ಪಂಡಿತ ಅಕಲಂಕ ತತ್ತ್ವಾರ್ಥ ರಾಜವಾರ್ತಿಕ, ಅಷ್ಟಶತೀ, ನ್ಯಾಯವಿನಿಶ್ಚಯ ಮುಂತಾದುವನ್ನು ರಚಿಸಿದ್ದಾನೆ.

ರಾಷ್ಟ್ರಕೂಟರ ಕಾಲದಲ್ಲಿ ಸಂಸ್ಕೃತಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಒಂದನೆಯ ಅಮೋಘ ವರ್ಷ (814-78) ಸ್ವಯಂ ಗ್ರಂಥಕಾರನಾಗಿದ್ದುದಲ್ಲದೆ (ಪ್ರಶ್ನೋತ್ತರ-ರತ್ನಮಾಲಿಕಾ ಇವನ ಕೃತಿಯೆನ್ನುತ್ತಾರೆ) ಜಿನಸೇನಾಚಾರ್ಯರು ಮಹಾಪುರಾಣ, ಪಾಶಾರ್ವ್‌ಭ್ಯುದಯಗಳೆಂಬ ಉದ್ಗ್ರಂಥಗಳನ್ನು ಬರೆಯಲು ನೆರವಾದ. ಶಾಕಟಾಯನ ವ್ಯಾಕರಣವೆಂಬ ನವೀನ ಪ್ರಸ್ಥಾನವೂ ಈಗಲೇ ಉದಿಸಿತು. ಅದರ ವೃತ್ತಿಗೆ ಅಮೋಘ ವೃತ್ತಿಯೆಂದೇ ಹೆಸರಿದೆ. ಮಹಾವೀರನೆಂಬ ಪಂಡಿತ ಜ್ಯೋತಿಶಾಸ್ತ್ರದ ಗಣಿತಸಾರ ಸಂಗ್ರಹವನ್ನು ಬರೆದಿದ್ದಾನೆ.

ಮುಮ್ಮಡಿ ಇಂದ್ರನ (914-29) ಆಸ್ಥಾನ ಕವಿಯಾಗಿದ್ದ ತ್ರಿವಿಕ್ರಮಭಟ್ಟ ನಳಚಂಪು ಮತ್ತು ಮದಾಲಸಾಚಂಪು ಎಂಬ ಎರಡು ಕೃತಿಗಳನ್ನು ರಚಿಸಿದ. ಇವೆರಡು ಸಂಸ್ಕೃತ ಸಾಹಿತ್ಯದ ಚಂಪು ಪ್ರಕಾರದ ಉಪಲಬ್ಧ ಪ್ರಾಚೀನತಮ ಕೃತಿಗಳು. ಇವನ ಚಂಪುಶೈಲಿಯಲ್ಲಿ ಬಾಣನ ಗದ್ಯವೈಭವ ಹಾಗೂ ನಾಟಕಕಾರರ ಪದ್ಯ ಪ್ರಾಗಲ್ಭ್ಯಗಳೆರಡೂ ರಸಮಯವಾಗಿ ಜೊತೆಗೂಡಿವೆ. ಇವನಿಗೆ ಮೊದಲೇ ದಂಡಿ ಚಂಪು ಪ್ರಭೇದವನ್ನು ಹೇಳಿ, ಅದರ ಸ್ವರೂಪವನ್ನು ತಿಳಿಸಿದ್ದನಾದರೂ ತ್ರಿವಿಕ್ರಮನಿಗೆ ಮೊದಲು ಯಾವ ಚಂಪು ಕೃತಿಯೂ ದೊರೆತಿಲ್ಲ. ಮುಮ್ಮಡಿ ಕೃಷ್ಣನೂ (939-67) ಸ್ವತಃ ವಿದ್ವಾಂಸನಾಗಿದ್ದು ಪಿಂಗಲನ ಛಂದಸ್ಸೂತ್ರದ ಮೇಲೆ ವ್ಯಾಖ್ಯಾನ ಬರೆದ. ಇವನ ಆಶ್ರಯದಲ್ಲಿ ಹಲಾಯುಧ ಒಂದು ಕೋಶವನ್ನೂ ಕವಿಗಳಿಗೆ ಉಪಯುಕ್ತವಾದ ಕೃತಿಗಳನ್ನೂ ರಚಿಸಿದ.

ಅದ್ವೈತವೇದಾಂತ ದೃಷ್ಟಿಯಿಂದ ರಾಷ್ಟ್ರಕೂಟರ ಕಾಲವನ್ನು ಸುವರ್ಣಯುಗವೆಂದು ಕರೆಯಬಹುದು. ಶಂಕರಾಚಾರ್ಯರ ಶಿಷ್ಯರಾದ ಪದ್ಮಪಾದ ಮತ್ತು ಸುರೇಶ್ವರರು ವೇದಾಂತ ಪ್ರಚಾರದಲ್ಲಿ ನಿರತರಾಗಿದ್ದರು. ಸುರೇಶ್ವರರ ಶಿಷ್ಯ ಸರ್ವಜ್ಞಾತ್ಮನ್ ‘ಸಂಕ್ಷೇಪ ಶಾರೀರಕ’ ವನ್ನು ರಚಿಸಿದ. ಇದೇ ಯುಗದಲ್ಲಿ ಯಾಜ್ಞವಲ್ಕ್ಯಸ್ಮೃತಿಗೆ ವಿಶ್ವರೂಪ ಬರೆದ ‘ಬಾಲಕ್ರೀಡಾ ವ್ಯಾಖ್ಯೆ’ ಬಹಳ ಪ್ರಸಿದ್ಧವಾಯಿತು.

ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಜೈನರೂ ಅಮೋಘ ಕಾಣಿಕೆಯನ್ನಿತ್ತಿದ್ದಾರೆ. ವೀರಸೇನ ಮತ್ತು ಜಿನಸೇನರು 1,00,000 ಶ್ಲೋಕಗಳ ವಿಸ್ತಾರವಾದ ಧವಲಾ, ಜಯಧವಲಾ ಮತ್ತು ಮಹಾಧವಲಾ ಎಂಬ ಷಟ್ ಖಂಡಾಗಮ ವ್ಯಾಖ್ಯಾನವನ್ನು ಪುರೈಸಿದರು. ಜಿನಸೇನರು ಆದಿಪುರಾಣ ಮತ್ತು ಪಾಶರ್ವ್‌ನಾಥಪುರಾಣಗಳನ್ನೂ ಬರೆದು ಪ್ರಸಿದ್ಧರಾದರು. ಅಸಗನಿಗೆ ಸಂಸ್ಕೃತ ಕನ್ನಡಗಳೆರಡರಲ್ಲಿಯೂ ಸಮಾನವಾದ ಕವಿತಾ ಸಾಮಥರ್ಯ್‌ವಿತ್ತು. ಸಂಸ್ಕೃತದಲ್ಲಿ ಈತ ವರ್ಧಮಾನಪುರಾಣವನ್ನು ರಚಿಸಿದ್ದಾನೆ. ವಿದ್ಯಾನಂದ ಎಂಬುವನು ಸಮಂತಭದ್ರನ ಆಪ್ತಮೀಮಾಂಸಾ, ಆಪ್ತಪರೀಕ್ಷಾ ಇತ್ಯಾದಿ ಗ್ರಂಥಗಳಿಗೆ ಅಷ್ಟಸಾಹಸ್ರೀ ಎಂಬ ಅದ್ಭುತವಾದ ವ್ಯಾಖ್ಯಾನ ರಚಿಸಿದ್ದಾನೆ.

ವೇಮುಲವಾಡದ ಚಾಳುಕ್ಯರ ಆಶ್ರಯದಲ್ಲಿದ್ದ ಸೋಮದೇವಸೂರಿ (ಸು.959) ಯಶಸ್ತಿಲಕಚಂಪು ಎಂಬ ಕೃತಿಯನ್ನೂ ನೀತಿವಾಕ್ಯಾಮೃತವೆಂಬ ಗ್ರಂಥವನ್ನೂ ರಚಿಸಿದ. ಯಶಸ್ತಿಲಕಚಂಪುವಿನಲ್ಲಿ ಕವಿ ನಾನಾಶಾಸ್ತ್ರದಲ್ಲಿ, ತನಗಿದ್ದ ಪಾಂಡಿತ್ಯ ಹಾಗೂ ಜಾಣ್ಮೆಯನ್ನು ಪ್ರದರ್ಶಿಸಿಕೊಂಡಿದ್ದಾನೆ. ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ಈ ಕೃತಿ ಅಮೂಲ್ಯವಾದು ದಾಗಿದೆ. ನೀತಿವಾಕ್ಯಾಮೃತ ರಾಜನೀತಿಶಾಸ್ತ್ರದ ಕೈಪಿಡಿಯಂತಿದೆ. ಇದರಲ್ಲಿ ರಾಜಕೀಯ ವ್ಯವಹಾರಗಳ ಸೂಕ್ಷ್ಮ ನಿರೂಪಣೆಯ ಜತೆಗೆ ಜನಸಾಮಾನ್ಯರಿಗೂ ಸಂಬಂಧಿಸಿದ ನೀತಿಗಳನ್ನು ಎಲ್ಲರಿಗೂ ಅರ್ಥವಾಗುವ ಕ್ರಮದಲ್ಲಿ ನಿರೂಪಿಸಿದ್ದಾನೆ. ಸೋಮದೇವಸೂರಿ ಕವಿಯಷ್ಟೇ ಅಲ್ಲ ತತ್ತ್ವಶಾಸ್ತ್ರದಲ್ಲಿಯೂ ನಿಷ್ಣಾತನಾಗಿದ್ದ ‘ಷಣ್ಣವತಿ ಪ್ರಕರಣ’ ಇವನ ಕೊಡುಗೆ. ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಬಂದರೆ ಎರಡನೆಯ ಜಯಸಿಂಹನ ಆಳಿಕೆಯಲ್ಲಿ (1015-44) ವಾದಿರಾಜನ ಯಶೋಧರಚರಿತ ಮತ್ತು ಪಾಶರ್ವ್‌ನಾಥ ಚರಿತ ಎಂಬ ಸುಂದರ ಕಾವ್ಯಗಳು ಮೂಡಿಬಂದವು. ವಾದಿರಾಜನ ಪಾಂಡಿತ್ಯವನ್ನು ಅನೇಕ ಶಾಸನಗಳು ಕೊಂಡಾಡಿವೆ. ಅಕಲಂಕನ ಮಹಾಗ್ರಂಥವನ್ನು ಕುರಿತ ಸಮಗ್ರ ವ್ಯಾಖ್ಯಾನ ‘ನ್ಯಾಯ ವಿನಿಶ್ಚಯ ಟೀಕೆ’ ವಾದಿರಾಜನ ಮೇರು ಕೃತಿ. ಇವನು ಉತ್ತಮ ಬರೆಹಗಾರನಾಗಿದ್ದ, ಜೊತೆಗೆ ಸಮರ್ಥ ವಾಗ್ಮಿಯಾಗಿದ್ದನೆಂದು ತಿಳಿದುಬರುತ್ತದೆ. ಲಕುಲೀಶ ಪಂಡಿತ ಅಥವಾ ವಾದಿರುದ್ರಗುಣ ಮಹಾವಿದ್ವಾಂಸನೆಂದೂ ಜೈನ ವಾದಿರಾಜನನ್ನು ವಾದದಲ್ಲಿ ಸೋಲಿಸಿದನೆಂದೂ 1036ರ ಶಾಸನವೊಂದು ತಿಳಿಸುತ್ತದೆ. ವಾದಿರಾಜನ ಸಹಪಾಠಿ ಮತ್ತು ಮತಿಸಾಗರನ ಶಿಷ್ಯನಾದ ದಯಪಾಲ ಎಂಬುವನು ಶಾಕಟಾಯನ ವ್ಯಾಕರಣದ ಉಪಯುಕ್ತವಾದ ಪುನರ್ವಿಮರ್ಶಿತ ಕೈಪಿಡಿಯನ್ನು ಸಿದ್ಧಗೊಳಿಸಿದ. ರೂಪಸಿದ್ಧಿಯೆಂದು ಕರೆಯಲಾದ ಇದನ್ನು ಹಲವು ಶಾಸನಗಳಲ್ಲಿ ಹೊಗಳಲಾಗಿದೆ.

ಇದೇ ಕಾಲದಲ್ಲಿ ಕಾವ್ಯಾವಲೋಕನದ ಕರ್ತೃ ನಾಗವರ್ಮ ಸಂಸ್ಕೃತ ಕೋಶವೊಂದನ್ನು ರಚಿಸಿದ್ದನೆಂದು ತಿಳಿದುಬರುತ್ತದೆ. ಆದರೆ ಇದು ಉಪಲಬ್ಧವಿಲ್ಲ. ಈ ಕಾಲದಲ್ಲಿ ವಾದೀಭಸಿಂಹನ ಗದ್ಯಚಿಂತಾಮಣಿ, ಕ್ಷತ್ರಚೂಡಾಮಣಿ ಎಂಬ ಗದ್ಯಕಾವ್ಯಗಳು ಬಾಣನ ಮಾದರಿಯಲ್ಲಿ ನಿರ್ಮಿತವಾದವು. ಜಯಕೀರ್ತಿಯ ಛಂದೋನುಶಾಸನವೂ ಇದೇ ಕಾಲದ್ದು. ಚಾಳುಕ್ಯ ಆರನೆಯ ವಿಕ್ರಮಾದಿತ್ಯ (1076-1127), ಕರ್ಣ, ಭೋಜಾದಿಗಳ ಆಸ್ಥಾನಗಳನ್ನೆಲ್ಲ ಸುತ್ತಿ ಬಂದಿದ್ದ ಕಾಶ್ಮೀರದ ಬಿಲ್ಹಣ ಮಹಾಕವಿಗೆ ತನ್ನ ಆಸ್ಥಾನದಲ್ಲಿ ವಿದ್ಯಾಪತಿಯೆಂಬ ಪದವಿಯನ್ನಿತ್ತು ಅವನಿಂದ ವಿಕ್ರಮಾಂಕ ದೇವಚರಿತವೆಂಬ ಮನೋಹರ ಐತಿಹಾಸಿಕ ಕಾವ್ಯವನ್ನು ಬರೆಯಿಸಿದ. ಇದೇ ವಿಕ್ರಮಾದಿತ್ಯನ ಕಾಲದಲ್ಲಿ ವಿಜ್ಞಾನೇಶ್ವರ ಎಂಬ ಪಂಡಿತ ಧರ್ಮಶಾಸ್ತ್ರ ಸಾಹಿತ್ಯದಲ್ಲಿಯೇ ತುಂಬಾ ಮನ್ನಣೆಗಳಿಸಿರುವ ಮಿತಾಕ್ಷರಾ ವ್ಯಾಖ್ಯೆಯನ್ನು ಯಾಜ್ಞವಲ್ಕ್ಯಸ್ಮೃತಿಗೆ ಬರೆದ. ಚಾಳುಕ್ಯ ಅರಸ ಮೂರನೆಯ ಸೋಮೇಶ್ವರ ಭೂಲೋಕಮಲ್ಲ (1127-39) ಅಭಿಲಾಷಿತಾರ್ಥಚಿಂತಾಮಣಿ ಅಥವಾ ಮಾನಸೋಲ್ಲಾಸ ಎಂಬ ವಿಶ್ವಕೋಶವನ್ನು ರಚಿಸಿದ. ಇದರಲ್ಲಿ ಸಂಸ್ಕೃತ ಕಾವ್ಯ, ಶಾಸ್ತ್ರ, ಕಲೆ, ವಿಜ್ಞಾನ, ಧರ್ಮ ಮುಂತಾದ ಸಕಲ ವಿದ್ಯಾಪ್ರಕಾರಗಳೂ ಸಂಕ್ಷಿಪ್ತವಾಗಿ ಹಾಗೂ ಸಪ್ರಮಾಣವಾಗಿ ಅಂತರ್ಗತವಾಗಿವೆ. ವನಸ್ಪತಿಗಳು, ಪ್ರಾಣಿಗಳು, ಪುಷ್ಪರಚನೆ, ಶಕುನಗಳು, ಕಾಮಶಾಸ್ತ್ರ, ಚಿತ್ರ, ಸಂಗೀತ, ರಾಜನೀತಿ, ಭೂಗೋಳ, ಪಾಕಶಾಸ್ತ್ರ ಮುಂತಾದ ಲೌಕಿಕ ವಿದ್ಯೆಗಳಿಗೂ ಇಲ್ಲಿ ಸಮಾವೇಶ ದೊರೆತಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಇಡೀ ಸಂಸ್ಕೃತ ಸಾಹಿತ್ಯದಲ್ಲೇ ಇಂಥ ಗ್ರಂಥ ಮತ್ತೊಂದಿಲ್ಲ. ಈ ದೊರೆಯ ಆಶ್ರಯದಲ್ಲೇ ಇದ್ದ ಪಾಶರ್ವ್‌ದೇವ ಸಂಗೀತ ಸಮಯಸಾರವನ್ನು ರಚಿಸಿದ್ದಾನೆ. ಇಮ್ಮಡಿ ಜಗದೇಕಮಲ್ಲ (1139-49) ಸಂಗೀತಕ್ಕೆ ಸಂಬಂಧಿಸಿದಂತೆ ಸಂಗೀತ ಚೂಡಾಮಣಿ ಎಂಬ ಗ್ರಂಥವನ್ನು ಬರೆದಿದ್ದಾನೆ.

ಹೊಯ್ಸಳರ ರಾಜ್ಯದಲ್ಲಿಯ ಎರಡನೆಯ ವೀರಬಲ್ಲಾಳನ ಆಸ್ಥಾನಕವಿ ವಿದ್ಯಾಚಕ್ರವರ್ತಿಯ ರುಕ್ಮೀಣೀಕಲ್ಯಾಣನಾಟಕ ಹಾಗೂ ಅಲಂಕಾರಸರ್ವಸ್ವ ಸಂಜೀವಿನೀ ಮತ್ತು ಕಾವ್ಯಪ್ರಕಾಶ ಸಂಪ್ರದಾಯಪ್ರಕಾಶಿನೀ ಎಂಬ ಅಲಂಕಾರ ಶಾಸ್ತ್ರಗ್ರಂಥಗಳು ಮಹತ್ತ್ವದ್ದಾಗಿದೆ. ಇವನ ಮಗನಾದ ಸಕಲವಿದ್ಯಾಚಕ್ರವರ್ತಿ ಗದ್ಯಕರ್ಣಾಮೃತ ಎಂಬ ಗ್ರಂಥವನ್ನು ಬರೆದಿದ್ದಾನೆ.

ಕರ್ನಾಟಕದಲ್ಲಿಯೇ ಹುಟ್ಟಿಬೆಳೆದ ಮಧ್ವಾಚಾರ್ಯರು ವೇದಾಂತ ಪಂಥವೊಂದನ್ನು ಸ್ಥಾಪಿಸಿ ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರಗಳಿಗೆ ಭಾಷ್ಯಗಳನ್ನೂ ರಾಮಾಯಣ, ಮಹಾಭಾರತ, ಭಾಗವತಗಳ ತಾತ್ಪರ್ಯ ನಿರ್ಣಯ ಮೊದಲಾದ 37 ಗ್ರಂಥಗಳನ್ನೂ ರಚಿಸಿದರು. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಸಂಸ್ಕೃತ ವಾಙ್ಮಯ ಉನ್ನತಿಗೆ ಹೆಚ್ಚಿನ ಪ್ರಚೋದನೆ ನೀಡಿತು. ಸಾಮ್ರಾಜ್ಯ ಸ್ಥಾಪಕರಾದ ಮಾಧವ ವಿದ್ಯಾರಣ್ಯರು ಅವರ ಗುರುಗಳಾದ ಭಾರತೀತೀರ್ಥರು ಹಾಗೂ ಅವರ ತಮ್ಮಂದಿರಾದ ಸಾಯಣ ಮತ್ತು ಭೋಗನಾಥ ಇವರಿಂದ ಸಂಸ್ಕೃತ ವಾಙ್ಮಯದ ಎಲ್ಲ ಪ್ರಕಾರಗಳು ಸಮೃದ್ಧವಾದುವು. ತೈತ್ತೀರೀಯ ಸಂಹಿತೆ ಮುಂತಾದ ನಾಲ್ಕು ವೇದ ಸಂಹಿತೆಗಳು, ಅವುಗಳ ಬ್ರಾಹ್ಮಣಗಳು ಹೀಗೆ 18 ವೇದಗ್ರಂಥಗಳಿಗೆ ಮಾಧವಾಚಾರ್ಯ (ವಿದ್ಯಾರಣ್ಯರ) ನೇತೃತ್ವದಲ್ಲಿ ಅನೇಕರ ನೆರವಿನಿಂದ ಸಾಯಣಾಚಾರ್ಯರು ಭಾಷ್ಯ ರಚಿಸಿದರು. ಇವುಗಳಲ್ಲಿ ಒಂದೊಂದು ಸಂಹಿತೆಯ ಪ್ರಾರಂಭದಲ್ಲಿಯೂ ಪೀಠಿಕೆಯಲ್ಲಿ ವೇದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪುರ್ವಮೀಮಾಂಸಾ ಸೂತ್ರಗಳ ಆಧಾರದ ಮೇಲೆ ವಿಸ್ತಾರವಾಗಿ ಚರ್ಚಿಸಲಾಗಿದೆ. ಸಾಯಣರ ಯಜ್ಞತಂತ್ರ ಸುಧಾನಿಧಿ ಮತ್ತು ಪ್ರಯೋಗ ರತ್ನಮಾಲಾ ಗ್ರಂಥಗಳು ಶ್ರೌತಯಜ್ಞಗಳ ಪ್ರಯೋಗವನ್ನು ಸ್ಪಷ್ಟಪಡಿಸುತ್ತವೆ.

ಸ್ಮೃತಿ ಕ್ಷೇತ್ರದಲ್ಲಿ ಪರಾಶರ ಸ್ಮೃತಿಗೆ ಮಾಧವೀಯ ವ್ಯಾಖ್ಯೆ ಮತ್ತು ವ್ಯವಹಾರದ ವಿಷಯದಲ್ಲಿ ಪರಾಶರಮಾಧವೀಯ ಗ್ರಂಥಗಳು ಹೊರಬಂದವು. ಪ್ರಾಯಶ್ಚಿತ್ತ ಸುಧಾನಿಧಿಯೂ ಇದೇ ವಿಭಾಗಕ್ಕೆ ಸೇರಿದ ಕೃತಿ. ದೇವಣ್ಣಭಟ್ಟ (ಸು.1145) ನಾನಾ ಸ್ಮೃತಿಗಳ ಆಧಾರದ ಮೇಲೆ ಸ್ಮೃತಿಚಂದ್ರಿಕೆಯನ್ನು ಮತ್ತು ನರಹರಿ ಎಂಬುವನು ಸ್ಮೃತಿಕೌಸ್ತುಭವನ್ನೂ ರಚಿಸಿದರು. ವ್ಯಾಕರಣದಲ್ಲಿ ಮಾಧವೀಯವಾದ ಧಾತುವೃತ್ತಿಯನ್ನು ಗಮನಿಸಬಹುದು.

ದರ್ಶನ ಪ್ರಪಂಚದಲ್ಲಿ ಮಾಧವ ವಿದ್ಯಾರಣ್ಯರ ಜೈಮಿನೀಯ ನ್ಯಾಯಮಾಲಾವಿಸ್ತರ ಮತ್ತು ವೈಯಾಸಿಕ ನ್ಯಾಯಮಾಲಾವಿಸ್ತರ ಮತ್ತು ಸಾಯಣಾಚಾರ್ಯರ ಸರ್ವದರ್ಶನಸಂಗ್ರಹ ಇವು ಮುಖ್ಯವಾದವು. ಪದ್ಮಪುರಾಣದ ಸೂತಸಂಹಿತೆಯ ವ್ಯಾಖ್ಯೆ ತಾತ್ಪರ್ಯ ದೀಪಿಕೆಯೂ ಇವರದು. ಅಲಂಕಾರಶಾಸ್ತ್ರಕ್ಕೆ ಸೇರಿದ ಅಲಂಕಾರಸುಧಾನಿಧಿಯೂ ಸಾಯಣರ ಹೆಸರಿನಲ್ಲಿದೆ. ಸಾಯಣರು ಸುಭಾಷಿತಸುಧಾನಿಧಿ ಎಂಬ ಸುಭಾಷಿತ ಸಂಗ್ರಹವನ್ನೂ ಸಿದ್ಧಪಡಿಸಿದರು. ಭೋಗನಾಥ ಉತ್ತಮ ಕವಿಯೆಂದೂ ಹಲವು ಕೃತಿಗಳನ್ನು ರಚಿಸಿದನೆಂದೂ ಉಲ್ಲೇಖವಿದೆ. ಆದರೆ ಆತನ ಕೃತಿಗಳು ಯಾವುವೂ ದೊರೆತಿಲ್ಲ.

ತನ್ನ ಪತಿ ಕಂಪಣ ಅಥವಾ ಕಂಪರಾಯ ಮಧುರೆಯನ್ನು ವಶಪಡಿಸಿಕೊಂಡುದನ್ನು ಕಣ್ಣಾರೆ ಕಂಡ ಗಂಗಾದೇವಿ, ಆ ವಿಜಯ ಯಾತ್ರೆಯನ್ನು ಮಧುರಾವಿಜಯ ಅಥವಾ ವೀರಕಂಪಣ ರಾಯಚರಿತವೆಂಬ ಹೆಸರಿನಲ್ಲಿ ಕಾವ್ಯವೊಂದನ್ನು ರಚಿಸಿದ್ದಾಳೆ (ಸು.1360). ವಿಜಯನಗರದ ವಿರೂಪಾಕ್ಷ ನರಕಾಸುರ ವಿಜಯವನ್ನು ರಚಿಸಿದ. ಈ ಕಾಲದಲ್ಲೇ ಮುಂದೆಯೂ ಸಾಲುವಾಭ್ಯುದಯ ಮುಂತಾದ ಅನೇಕ ಕಾವ್ಯಗಳು ರಚಿತವಾದವು. ವಿಜಯನಗರದ ಅನಂತರ ರಾಜಕೀಯ ಕೇಂದ್ರ ಹಂಚಿಹೋದಂತೆ ವಿದ್ಯಾಕೇಂದ್ರಗಳೂ ಹಂಚಿಹೋದವು. ಆದರೆ ಸಂಸ್ಕೃತಕ್ಕಿದ್ದ ಪ್ರೋತ್ಸಾಹ ಕುಂಠಿತವಾದರೂ ಅಳಿಸಿಹೋಗಲಿಲ್ಲ. ಕೆಳದಿಯ ದೊರೆ ಬಸವ ಭೂಪಾಲ ಸ್ವತಃ ಕವಿಯಾಗಿದ್ದ. ಸೋಮದೇವನ ಅಭಿಲಷಿತಾರ್ಥ ಚಿಂತಾಮಣಿಯ ಮಾದರಿಯನ್ನು ಅನುಸರಿಸಿ ಶಿವತತ್ತ್ವ ರತ್ನಾಕರ ಎಂಬ ಗ್ರಂಥವನ್ನು ಈತ ಸಿದ್ಧಪಡಿಸಿದ. ಇದು 108 ಅಧ್ಯಾಯಗಳುಳ್ಳ ಬೃಹದ್ಗ್ರಂಥ. ಇವನದೇ ಇನ್ನೊಂದು ಉದ್ಗ್ರಂಥ ಸುಭಾಷಿತ ಸುರದ್ರುಮ ಎಂಬ ಸೂಕ್ತಿಕೋಶ. ಶ್ರೀರಂಗಪಟ್ಟಣದ ದಳವಾಯಿ ನಂಜರಾಜ ನಂಜರಾಜಯಶೋಭೂಷಣ ಎಂಬ ಅಲಂಕಾರ ಗ್ರಂಥವನ್ನು ಬರೆದ. ಅಲ್ಲಿಯೇ ಪ್ರಧಾನಿಯಾಗಿದ್ದ ವೆಂಕಟಪ್ಪಯ್ಯ ಭೂಪತಿ ಅಥವಾ ವೆಂಕಾಮಾತ್ಯ ಹಲವಾರು ಗ್ರಂಥಗಳನ್ನು ರಚಿಸಿದ. ಇವನ ಅಲಂಕಾರಮಣಿದರ್ಪಣದಲ್ಲಿ ಅದುವರೆಗೆ ಅಲಂಕಾರ ಶಾಸ್ತ್ರದಲ್ಲಿ ನಡೆದ ಚರ್ಚೆಗಳನ್ನು ಸುಲಲಿತವಾಗಿ ಸಂಗ್ರಹಿಸಲಾಗಿದೆ. ಇವನ ಕುಶಲವ ವಿಜಯಚಂಪು ಭಟ್ಟಿಕಾವ್ಯದ ಮಾದರಿಯಲ್ಲಿ ವ್ಯಾಕರಣ ನಿಯಮಗಳಿಗೆ ಉದಾಹರಣೆ ಯಾಗಿರುವಂತೆ ರಚಿಸಲಾದ ಶಾಸ್ತ್ರಕಾವ್ಯ. ಈತ ಇವಲ್ಲದೆ ಹತ್ತು ಬಗೆಯ ರೂಪಕಗಳಿಗೂ ಒಂದೊಂದು ಉದಾಹರಣೆಯಾಗುವಂತೆ ಹತ್ತು ರೂಪಕಗಳನ್ನು ಬರೆದಿದ್ದಾನೆ.

19ನೆಯ ಶತಮಾನದಲ್ಲಿ ಹುಟ್ಟಿದ ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ತ್ವನಿಧಿ ಒಂದು ಸಚಿತ್ರ ಗ್ರಂಥ. ಇದರಲ್ಲಿ ಸಂವತ್ಸರಾಭಿಮಾನಿ ದೇವತೆಗಳು ರಾಗಾಭಿಮಾನಿ ದೇವತೆಗಳೇ ಮೊದಲಾಗಿ ನಾನಾ ದೇವತೆಗಳ, ಶಿವವಿಷ್ಣುವಿನ ನಾನಾ ರೂಪಗಳ ಸಂಸ್ಕೃತದ ಧ್ಯಾನ ಶ್ಲೋಕಗಳೊಡನೆ ಅದಕ್ಕೆ ಅನುಗುಣವಾದ ವರ್ಣರಂಜಿತ ಚಿತ್ರಗಳನ್ನು ಕೊಡಲಾಗಿದೆ. ಸಂಖ್ಯಾರತ್ನಮಾಲಾ ಒಂದು ಬಗೆಯ ಕೋಶ. ಪ್ರಪಂಚದಲ್ಲಿ ಕೆಲವೊಂದು ಪದಾರ್ಥಗಳು ಒಂಟಿಯಾಗಿರಬಹುದು, ಜೊತೆಜೊತೆಯಾಗಿರಬಹುದು. ಇಲ್ಲವೇ ಮೂರು ಅಥವಾ ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿನ ಗುಂಪುಗಳಲ್ಲಿರಬಹುದು. ಅಂಥ ಒಂಟಿ ಪದಾರ್ಥಗಳನ್ನೂ ಎರಡು ಅಥವಾ ಹೆಚ್ಚಿನ ಸಂಖ್ಯೆಯ ಗುಂಪುಗಳಲ್ಲಿ ಸೇರಿದ ವಸ್ತುಗಳ ಹೆಸರುಗಳನ್ನೂ ಆಯಾ ಸಂಖ್ಯೆಯ ಕ್ರಮದಲ್ಲಿ ಕೊಡಲಾಗಿದೆ. ಹೀಗೆ 127 ಕೊನೆಯ ಸಂಖ್ಯೆ ‘ಗ್ರಹಣದರ್ಪಣ’ 1841-1902ರ ವರೆಗಿನ ಅವಧಿಯಲ್ಲಿನ ಗ್ರಹಣದ ಬಗ್ಗೆ ಮಾಹಿತಿ ನೀಡುವ ಗ್ರಂಥ.

19ನೆಯ ಶತಮಾನದಲ್ಲಿ ನಡೆದ ಸಾಹಿತ್ಯ ಚಟುವಟಿಕೆಯಲ್ಲಿ ಇನ್ನೂ ಕೆಲವು ಹೆಸರುಗಳನ್ನು ಸೂಚಿಸಬಹುದು. ಯಾದವ ರಾಘವ ಪಾಂಡವೀಯ (1817) ಎಂಬ ತ್ರಿಸಂಧಾನ ಕಾವ್ಯವನ್ನು ಮೈಸೂರು ಅನಂತಾಚಾರ್ಯ ರಚಿಸಿದ್ದಾರೆ. ಭಾಗವತ, ರಾಮಾಯಣ ಹಾಗೂ ಮಹಾಭಾರತ ಕಥೆಗಳನ್ನು ಒಂದೇ ಬಾರಿಗೆ ಹೇಳುವ ಸಾಹಸ ಈ ಕಾವ್ಯದಲ್ಲಿ ನಡೆದಿದೆ. ಏಕಾಂಬರಶಾಸ್ತ್ರಿ ಎಂಬವರು ವೀರಭದ್ರವಿಜಯಚಂಪು ಎಂಬ ಕಾವ್ಯದಲ್ಲಿ ಬೆಂಗಳೂರು ಕೆಂಪೇಗೌಡನ ವಂಶದ ಚರಿತ್ರೆ ಹೇಳಲು ಅವಕಾಶ ಮಾಡಿಕೊಂಡಿದ್ದಾರೆ. ಮಲ್ಲಾರಿ ಆರಾಧ್ಯರು ಶಿವಲಿಂಗ, ಸೂರ್ಯೋದಯ ಎಂಬ ನಾಟಕವನ್ನು ಪ್ರಬೋಧ ಚಂದ್ರೋದಯದ ಮಾದರಿಯಲ್ಲಿ ರಚಿಸಿದ್ದರೆ, ಲಿಂಗಭಟ್ಟರು ಅಮರಕೋಶಕ್ಕೆ ಸಂಸ್ಕೃತ ಹಾಗೂ ಕನ್ನಡ ವಿವೃತ್ತಿಯನ್ನು ಬರೆದಿದ್ದಾರೆ. ಗುಡಿಬಂಡೆ ಸಮೀಪದ ಮಂಡಿಕಲ್ಲು ರಾಮಶಾಸ್ತ್ರೀ ‘ಮೇಘ ಪ್ರತಿಸಂದೇಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಸತ್ಯಪ್ರಿಯತೀರ್ಥರು ವ್ಯಾಕರಣ ಮಹಾಭಾಷ್ಯಕ್ಕೆ ವ್ಯಾಖ್ಯಾನ ರಚಿಸಿದ್ದಾರೆ. ಇದರ ಭಾಗಗಳು ಮಾತ್ರ ದೊರೆತಿವೆ.

ಮೇಲುಕೋಟೆಯ ಜಗ್ಗೂಆಳ್ವಾರರು ನಿರ್ಮಿಸಿದ ಪ್ರತಿಜ್ಞಾಕೌಟಿಲ್ಯಂ, ಪ್ರಸನ್ನರಾಘವಂ, ಮಹೀಹರಣಂ ಮುಂತಾದ ಅನೇಕ ಕಾವ್ಯಗಳು ಗಮನಾರ್ಹವಾಗಿವೆ. ಸಂಸ್ಕೃತ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್, ಕನ್ನಡ, ಹಿಂದೀಗಳಿಗೆ ಅನುವಾದಿಸಿ ಸಂಸ್ಕೃತ ಸಾಹಿತ್ಯವನ್ನು ಅನ್ಯರಿಗೆ ಪರಿಚಯ ಮಾಡಿಕೊಡುವಲ್ಲಿ ವಿದ್ವಾಂಸರಾದ ಕೆ. ಕೃಷ್ಣಮೂರ್ತಿ, ಎನ್. ರಂಗನಾಥಶರ್ಮ ತುಂಬಾ ಶ್ರಮಿಸಿದ್ದಾರೆ. ಇವರಂತೆಯೇ ಅನೇಕ ಆಧುನಿಕ ವಿದ್ವಾಂಸರು ತಮ್ಮದೇ ಆದ ಕೊಡುಗೆಯನ್ನು ಮೂಲ ಸಾಹಿತ್ಯಕ್ಕಾಗಲೀ ಅಥವಾ ಅನುವಾದ ಸಾಹಿತ್ಯಕ್ಕಾಗಲೀ ಅರ್ಪಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಅನೇಕ ಕೃತಿಗಳು ಮಹತ್ಕೃತಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸಂಸ್ಕೃತ ಶಾಖೆ ಸಂಸ್ಕೃತದ ಬೆಳೆವಣಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಶ್ರಮಿಸುತ್ತಿದೆ.

ವಿಜಯನಗರ ಕಾಲದಾರಭ್ಯ ಆಧುನಿಕ ಕಾಲದ ತನಕ ಸಂಸ್ಕೃತದಲ್ಲಿ ಸೃಜನಾತ್ಮಕ ಕಾರ್ಯ ಎಷ್ಟೊಂದು ಅಗಾಧವಾಗಿ ಸಾಗಿದೆಯೆಂದರೆ ದೊರೆಯುವ ಸಂಸ್ಕೃತ ಹಸ್ತಪ್ರತಿಗಳ ಸಂಖ್ಯೆ ಹತ್ತುಸಾವಿರಕ್ಕೂ ಹೆಚ್ಚಾಗುತ್ತದೆ. ಈ ಗ್ರಂಥಗಳೆಲ್ಲ ಹೆಚ್ಚಾಗಿ ಪುರ್ವ ಮಹಾಕವಿಗಳ, ಸ್ತೋತ್ರಕಾರರ ಮಾದರಿಯಲ್ಲಿ ಬರೆದ ನೂತನ ರಚನೆಗಳು, ಇಲ್ಲವೆ ನಾನಾ ಶಾಸ್ತ್ರಗ್ರಂಥಗಳಿಗೆ ಟೀಕೆಟಿಪ್ಪಣಿಗಳು, ಇಲ್ಲವೆ ಧರ್ಮಶ್ರದ್ಧೆಯಿಂದ ಬರೆದ ಆಚಾರ್ಯ ಪುರುಷರ ದಿಗ್ವಿಜಯಗಳು, ಬಾಲೋಪಯೋಗಿ ಕಥಾನಕಗಳು ಮತ್ತು ಧರ್ಮಾಚರಣೆಗೆ ಉಪಯುಕ್ತವಾದ ಕೈಪಿಡಿಗಳು, ಮಂತ್ರ-ತಂತ್ರ ಪರಿಷ್ಕಾರಗಳು.

20ನೆಯ ಶತಮಾನದಲ್ಲಿಯೂ ಹಲವು ಕೃತಿಗಳು ಸಂಸ್ಕೃತದಲ್ಲಿ ರಚನೆಗೊಂಡವು. ಸುಂದರವಲ್ಲಿಯ (1900) ರಾಮಾಯಣ ಚಂಪು ಒಂದು ಗಮನಾರ್ಹ ಕೃತಿ. ಚಾಮರಾಜನಗರದ ಶ್ರೀಕಂಠಶಾಸ್ತ್ರೀ ಅವರು ಧಾತುರೂಪ ಪ್ರಕಾಶಿಕೆ ಎಂಬ ಗ್ರಂಥವನ್ನು ಬರೆದರಲ್ಲದೆ, ಯವನಯಾಮಿನೀವಿನೋದ ಕಥಾ ಎಂಬ ಹೆಸರಿನಲ್ಲಿ ಅರೇಬಿಯನ್ ನೈಟ್ಸ್‌ ಕಥೆಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದ್ದಾರೆ. ಶ್ರೀ ಕೃಷ್ಣಬ್ರಹ್ಮತಂತ್ರ ಪರಕಾಲ ಸ್ವಾಮಿಗಳು ಅಲಂಕಾರಮಣಿಹಾರ ಎಂಬ ಗ್ರಂಥವನ್ನು ರಚಿಸಿದ್ದಾರೆ. ಇದು ಅಲಂಕಾರಗಳನ್ನು ವಿವರಿಸುವ ಗ್ರಂಥ. ಇದರ ಉದಾಹರಣೆಗಳೆಲ್ಲವೂ ಶ್ರೀನಿವಾಸ ದೇವರನ್ನು ಕುರಿತವು. ವೇದಾಂತಾಚಾರ್ಯರು ರಚಿಸಿದ ಕೃತಿ ರಸಾಸ್ವಾದನೆ. ಇದು ಹಂಸಸಂದೇಶದ ವ್ಯಾಖ್ಯೆ.

ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರು ಭಗವದ್ಗೀತಾ ಪ್ರಬಂಧ ಮೀಮಾಂಸಾ (1902), ಮೀಮಾಂಸಾ ಭಾಷಾಭೂಷಣ (1928) ಮುಂತಾದ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೀಮಾಂಸಾ ಭಾಷಾಭೂಷಣ ಕುಮಾರಿಲಭಟ್ಟನ ತತ್ತ್ವಗಳನ್ನು ಪ್ರತಿಪಾದಿಸುವ ಗ್ರಂಥ. ದರ್ಶನೋದಯ (1933) ನಾನಾದರ್ಶನ ಪದ್ಧತಿಗಳ ವಿಷಯದೃಷ್ಟಿ ಮತ್ತು ವಿಮರ್ಶೆಯಿಂದ ಕೂಡಿದ ಲಲಿತ ಹಾಗೂ ಸ್ಪಷ್ಟ ನಿರೂಪಣೆಗಳನ್ನೊಳಗೊಂಡಿದೆ. ಮೇಲುಕೋಟೆಯ ಜಗ್ಗು ವೆಂಕಟಾಚಾರ್ಯರ ಹೆಸರಿನಲ್ಲಿ ಹತ್ತಾರು ಕೃತಿಗಳಿವೆ. ಕಾರ್ಕಳದ ಪಂಡಿತೆ ರಮಾಬಾಯಿ ಅವರು ಸುಲಲಿತ ಸಂಸ್ಕೃತದಲ್ಲಿ ಗ್ರಂಥರಚಿಸಿ ಖ್ಯಾತಿಪಡೆದಿದ್ದಾರೆ.

ಮುತ್ತಯ್ಯ ಭಾಗವತರ್ ಹುಟ್ಟುಕನ್ನಡಿಗರಲ್ಲದಿದ್ದರೂ ಅವರ ಸಂಗೀತ ಕೃತಿಗಳ ರಚನೆ ಬಹುತೇಕವಾಗಿ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ನಡೆಯಿತು. ಇಲ್ಲೇ ಮೈಸೂರಿನ ಪ್ರಸಿದ್ಧ ವಾಗ್ಗೇಯಕಾರರಾದ ವಾಸುದೇವಾಚಾರ್ಯರ ಹೆಸರನ್ನು ಹೇಳಬಹುದು. ಇವರಿಬ್ಬರ ಕೃತಿಗಳೂ ಜನಪ್ರಿಯತೆಯನ್ನೂ ಗಳಿಸಿವೆ.

ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಆಳ್ವಿಕೆಯಲ್ಲೂ ಸಂಸ್ಕೃತಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಇವರೇ ಸ್ವತಃ ಹಲವು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಇವರು ನಿಯೋಜಿಸಿದ ಪುರಾಣ, ವೇದ, ವೇದಾಂತ ಗ್ರಂಥಗಳನ್ನು ಮೂಲ ಮತ್ತು ಕನ್ನಡ ಅನುವಾದದೊಡನೆ ಪ್ರಕಟಿಸುವ ಮಹಾಯೋಜನೆಯಂತೆ 12 ಮಹಾ ಪುರಾಣಗಳು, 12 ಉಪಪುರಾಣಗಳು, 6 ಆಧ್ಯಾತ್ಮಿಕ ಗ್ರಂಥಗಳು (ಆನಂದ ಅಧ್ಯಾತ್ಮ ರಾಮಾಯಣಗಳು, ಯೋಗವಾಸಿಷ್ಠ, ಪ್ರಸ್ಥಾನತ್ರಯ ಭಾಷ್ಯಗಳು), ಒಂದೆರಡು ತಂತ್ರ ಗ್ರಂಥಗಳ ಋಕ್ಸಂಹಿತೆ, ಐತರೇಯ ಬ್ರಾಹ್ಮಣ ಮತ್ತು ಆರಣ್ಯಕ ಮತ್ತು ನಿರುಕ್ತ-ಈ ಗ್ರಂಥಗಳು ಸುಮಾರು 350 ಸಂಪುಟಗಳಲ್ಲಿ ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲೆಯಲ್ಲಿ ಪ್ರಕಾಶಿತವಾಗಿವೆ. ಪುರಾಣಗಳ, ವೇದಾಂತ ಗ್ರಂಥಗಳ ಮೂಲ ಮತ್ತು ಅನುವಾದ ಪ್ರಕಟವಾಗಿದ್ದರೆ, ಸಂಹಿತೆ, ಬ್ರಾಹ್ಮಣ ಗ್ರಂಥಗಳು ಸಾಯಣ ಭಾಷ್ಯ ವಿಸ್ತಾರವಾದ ಕನ್ನಡ ವಿವರಣೆಯೊಂದಿಗೆ ಹೊರಬಂದಿವೆ. ನಿರುಕ್ತಕ್ಕೂ ವಿಸ್ತಾರವಾದ ವಿವರಣೆಯಿದೆ. ವೇದಗ್ರಂಥಗಳಿಗೆ ಇಂಗ್ಲಿಷ್ ಅನುವಾದವನ್ನು ಕೊಡಲಾಗಿದೆ. ಈ ಮಾಲೆಯ ಮೂಲಕ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿ ಪ್ರಚಾರಕ್ಕೆ, ಸಂಸ್ಕೃತ ಭಾಷಾಧ್ಯಯನಕ್ಕೆ ಒಡೆಯರ್ ಅವರು ಇತ್ತ ನೆರವು ಅಪಾರವಾದುದು. ಇತ್ತೀಚೆಗೆ ಜಯಚಾಮರಾಜೇಂದ್ರರ ಕೃತಿಗಳಾದ ಶ್ರೀತತ್ತ್ವನಿಧಿ ಮೊದಲಾದ 9 ಕೃತಿಗಳು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಿಂದ ಕನ್ನಡ ಇಂಗ್ಲಿಷ್ ಅನುವಾದಗಳೊಂದಿಗೆ ಪ್ರಕಟವಾಗಿವೆ.

ವಿದ್ಯಾಭ್ಯಾಸ ಹಾಗೂ ಸಂಸ್ಕೃತ ಪ್ರಚಾರ ಕ್ಷೇತ್ರದಲ್ಲಿಯೂ ಸಾಕಷ್ಟು ಕಾರ್ಯ ಕಳೆದ ಶತಮಾನದ ಕೊನೆಯಿಂದ ನಡೆದು ಬಂದಿದೆ. ಎಚ್. ಸುಬ್ಬರಾವ್ ರಚಿಸಿದ, ‘ವಿದ್ಯಾಭ್ಯಾಸ ಪದ್ಧತಿ’ ಹರ್ಬರ್ಟ್ ಸ್ಪೆನ್ಸರನ ಗ್ರಂಥದ ಅನುವಾದ. ಪೆರಿಸ್ವಾಮಿ ತಿರುಮಲಾಚಾರ್ ಸದ್ವಿದ್ಯಾ ಆಂಗ್ಲೋ-ಸಂಸ್ಕೃತ ಪಾಠಶಾಲೆಯ ಸ್ಥಾಪಕರಲ್ಲೊಬ್ಬರಾಗಿದ್ದು, ಬಾಲಬೋಧಗಳನ್ನು ಸಿದ್ಧಪಡಿಸಿದರು.

ಹಿಂದಿನಿಂದಲೂ ಉಡುಪಿ, ಶೃಂಗೇರಿ, ಕೂಡ್ಲಿ, ಸಂಕೇಶ್ವರಗಳಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲೂ ಸಂಸ್ಕೃತ ಪಾಠಶಾಲೆಗಳಿದ್ದವು. ಪರ್ದಲ, ಕಾರ್ಕಳಗಳಲ್ಲಿ ಮಹಾ ಪಾಠಶಾಲೆಗಳಿದ್ದವು (ಓರಿಯಂಟಲ್ ಕಾಲೇಜು). ಈಚೆಗೆ ಆಧುನಿಕ ವಿದ್ಯಾಭ್ಯಾಸದ ಏರ್ಪಾಡುಗಳಾದಂತೆ ಸಂಸ್ಕೃತ ವಿದ್ಯಾಭ್ಯಾಸ ಪ್ರಗತಿ ಸಾಧಿಸಿದೆ. ಶೃಂಗೇರಿ, ಉಡುಪಿ, ಕಾರ್ಕಳಗಳಲ್ಲಿದ್ದ ಪಾಠಶಾಲೆಗಳು ಸುವ್ಯವಸ್ಥಿತವಾಗಿವೆ. ಮೈಸೂರು, ಬೆಂಗಳೂರುಗಳಲ್ಲಿ ಪ್ರೌಢ ವಿದ್ಯಾಭ್ಯಾಸಕ್ಕೆ ಉನ್ನತ ಮಟ್ಟದ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಲಾಗಿದೆ. ಶಾಲೆ, ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಸಂಸ್ಕೃತ ಶಿಕ್ಷಣಕ್ಕೆ ಅವಕಾಶವಿದೆ.

ಸಂಸ್ಕೃತದಲ್ಲಿ ಪತ್ರಿಕೆ, ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಬೆಳಗಾಂವಿಯಿಂದ ಪ್ರಕಟವಾಗುತ್ತಿದ್ದ ಸಂಸ್ಕೃತ ಚಂದ್ರಿಕಾ ಮತ್ತು ಮಧುರವಾಣೀ ನಿಯತಕಾಲಿಕೆಗಳು ಬಹಳ ಪ್ರಭಾವವನ್ನು ಬೀರಿವೆ. ಇದರ ಏಳ್ಗೆಗಾಗಿ ಪಂಡರೀನಾಥ ಗಲಗಲಿಯವರು ಬಹಳ ಶ್ರಮವಹಿಸಿ ದುಡಿದಿದ್ದಾರೆ. ಅಮರ ಭಾರತೀ ನಿಯತಕಾಲಿಕೆ ವಾರಾಣಸಿಯಲ್ಲಿ ಪ್ರಕಾಶಿತವಾದರೂ ಅದರ ಸಂಪಾದಕರಾದ ನರಸಿಂಹಾಚಾರ್ ಕರ್ನಾಟಕದವರು. ಏಕಮಾತ್ರ ದೈನಿಕವಾದ ಸುಧರ್ಮಾ ಮೈಸೂರಿನಲ್ಲಿ ಕೆ.ಎಸ್.ವರದರಾಜ ಅಯ್ಯಂಗಾರ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿತ್ತು. ಸಂಸ್ಕೃತ-ಕನ್ನಡ ಭಾಷೆಗಳೆರಡೂ ಸು.2000 ವರ್ಷಗಳಿಂದ ಜೊತೆಯಲ್ಲಿಯೇ ಬೆಳೆಯುತ್ತ ಬಂದಿವೆ; ಪರಸ್ಪರ ಪ್ರಭಾವಿತವಾಗಿವೆ. ಕನ್ನಡ ಭಾಷೆಯ ಪ್ರಭಾವವೂ ಸಂಸ್ಕೃತದ ಮೇಲೆ ಆಗಿದೆ ಎಂಬುದಕ್ಕೆ ಸಂಸ್ಕೃತ ಕನ್ನಡದಿಂದ ಎರವಲು ಪಡೆದಿರಬಹುದಾದ ಒಂದೆರಡು ಪದಗಳನ್ನು ಇಲ್ಲಿ ಉದಾಹರಣೆಗಾಗಿ ಹೇಳಬಹುದು. ಆರ್ಬಟ-ಆರ್ಭಟ, ಗುದ್ದಲಿ-ಕುದ್ದಾಲ, ಗೊಟರು-ಕೋಟಕ. ಹೆಂಟೆ-ಹೆಂಡೆ, ಪಿಂಡು-ಪಿಂಡ ಇತ್ಯಾದಿ. ಸಂಸ್ಕೃತ ಪದಗಳು ಕನ್ನಡದಲ್ಲಿ ಧಾರಾಳವಾಗಿ ಬಳಕೆಯಾಗುತ್ತಾ ಬಂದಿವೆ. ಇಂದಿನ ಪಾರಿಭಾಷಿಕ ಪದಗಳನ್ನು ರೂಪಿಸುವುದರಲ್ಲಿಯೂ ಸಂಸ್ಕೃತದ ಉಪಯೋಗ ಬಹಳಷ್ಟಿದೆ. ಆದರೆ ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವುದು ಹೆಚ್ಚು. ಸಂಸ್ಕೃತದಲ್ಲಿದ್ದ ವಿಜ್ಞಾನ, ಕಲೆ ಮತ್ತು ತತ್ತ್ವಶಾಸ್ತ್ರ ಮೊದಲಾದ ವಾಙ್ಮಯ ವಿಭಾಗಗಳ ಬಗೆಗಿನ ಗ್ರಂಥಗಳೆಲ್ಲವನ್ನೂ ಕ್ರಮೇಣ ಕನ್ನಡದಲ್ಲಿಯೂ ಬರೆಯಲಾಯಿತು. ಮೊದಮೊದಲಿಗೆ ವಿಷಯ ನಿರೂಪಣೆಯಲ್ಲಿ ಸಂಸ್ಕೃತ ಗ್ರಂಥಗಳ ಜಾಡನ್ನೇ ಕನ್ನಡ ಅನುಸರಿಸಿಕೊಂಡು ಬಂತು.

ಉರ್ದು[ಬದಲಾಯಿಸಿ]

ಪಾರಸಿ ಭಾಷೆಯನ್ನು ಆಡುವವರ ಪ್ರಭುತ್ವ ಮತ್ತು ಸಂಪರ್ಕ ಉಂಟಾಯಿತು. ಸೈನಿಕರು, ವರ್ತಕರು ಪಾರಿಸಿ ಹಾಗೂ ಅರಬ್ಬೀ ಭಾಷೆಗಳನ್ನು ಸ್ಥಳೀಯ ಪ್ರಭಾವದಿಂದ ರೂಪಿಸಿದರು. ಅದು ದಖನೀ ಭಾಷೆಯ ಹುಟ್ಟಿಗೆ ಕಾರಣವಾಯಿತು. ಕನ್ನಡ ಮತ್ತು ಮರಾಠಿ ಪದಗಳೂ ಇದರಲ್ಲಿ ನುಸುಳಿದವು. ಈ ಸಂವಹನದಿಂದ ರೇಖ್ತಾ ಎಂಬ ಭಾಷೆ ಹುಟ್ಟಿತು. ಇದೇ ಮುಂದೆ ದಖ್ಖನೀ ಆಯ್ತು. ಈ ಭಾಷೆ ದಕ್ಷಿಣದಲ್ಲಿ ಪ್ರಸಿದ್ಧಿ ಪಡೆದುದರಿಂದ ಅದನ್ನು ದಖನೀಭಾಷೆಯೆಂದು ಕರೆದರು. ಇದು ಉರ್ದುಭಾಷೆಗೆ ಬೇರು.

ಉರ್ದು ಭಾಷೆಯ ವಿಶಿಷ್ಟತೆ ಎಂದರೆ ಅದು ಯಾವುದೇ ಮತ, ಜಾತಿ, ಪಂಥ ಪಂಗಡಗಳಿಗೆ ಸೇರಿದುದಲ್ಲ. ಈ ಭಾಷೆಯಲ್ಲಿ ಅರಬ್ಬೀ ಗಾಂಭೀರ್ಯ, ಪಾರಸಿ ಮಾಧುರ್ಯ, ಸಂಸ್ಕೃತದ ಹಿರಿತನ ಸಮ್ಮಿಲಿತವಾಗಿದೆ. ಈ ಭಾಷೆಯ ಲಿಪಿಯನ್ನು ಬಲದಿಂದ ಎಡಕ್ಕೆ ಬರೆಯುವುದು ರೂಢಿ.

ಕರ್ನಾಟಕದಲ್ಲಿ 14ನೆಯ ಶತಮಾನದಿಂದ ಇಲ್ಲಿಯವರೆಗೂ ಉರ್ದು ಸಾಹಿತ್ಯ ವ್ಯವಸಾಯ ನಡೆಯುತ್ತ ಬಂದಿದೆ. ಬಹಮನೀಸುಲ್ತಾನರು, ಮೊಗಲರು, ಹೈದರ್ಅಲಿ ಮತ್ತು ಟಿಪ್ಪುಸುಲ್ತಾನ್, ಮೈಸೂರು ಒಡೆಯರು, ಅನಂತರ ಆಧುನಿಕ ಲೇಖಕರು, ಅನುವಾದಕರು ಉರ್ದು ಸಾಹಿತ್ಯವನ್ನು ಬೆಳೆಸಿ ಪುಷ್ಟಿಗೊಳಿಸಿದ್ದಾರೆ.

14ನೆಯ ಶತಮಾನದಲ್ಲಿ ಗುಲ್ಬರ್ಗಾದ ಖ್ವಾಜಾಬಂದೇನವಾಜ್ ಅವರು ಅರಬ್ಬಿ, ಪಾರಸಿ ಹಾಗೂ ಸಂಸ್ಕೃತ ಭಾಷೆಯಲ್ಲಿ ದೊಡ್ಡ ವಿದ್ವಾಂಸರಾಗಿದ್ದರು. ಇವರು ಅರಬ್ಬಿ, ಪಾರಸಿಭಾಷೆ ತಿಳಿಯದ ಸಾಮಾನ್ಯ ಜನರಿಗೆ ಅವರಾಡುವ ಸರಳ ದಖನೀಭಾಷೆಯಲ್ಲಿ ಮಿರಾಜುಲ್ ಅಷಕೀನ್, ಹಿದಾಯತ್ ನಾಮಾ, ಷಿಕಾರನಾಮಾ ರಿಸಾಲಾ ಸೇಬಾರಾ ಮೊದಲಾದ ಗ್ರಂಥಗಳನ್ನು ರಚಿಸಿದರು. ಇವರೇ ದಖನೀ ಉರ್ದುವಿನ ಮೊದಲನೆಯ ಗದ್ಯ ಮತ್ತು ಪದ್ಯ ಲೇಖಕರು. ಇವರ ಕೃತಿಗಳೆಲ್ಲ ಸೂಪಿsಪಂಥಕ್ಕೆ ಸಂಬಂಧಪಟ್ಟಿವೆ. ಇವರ ಮಗ ಸಯ್ಯದ್ ಮೊಹಮದ್ ಅಕ್ಬರ್ ಹುಸೇನಿ ಧರ್ಮಬೋಧನೆಗಾಗಿ ಸೂಪಿs ನೀತಿ ತತ್ತ್ವಗಳಿಗಾಗಿ ದಖ್ಖನೀ ಉರ್ದುವನ್ನೇ ಬಳಸಿದ. ಬಂದೇನವಾಜರ ಶಿಷ್ಯ ಹಫ್ತ್‌ಅಸ್ಲೂಕ್ ತನ್ನ ಗುರುವಿನ ಉಕ್ತಿಗಳನ್ನು ಟೀಕಾಸಹಿತ ಸಂಗ್ರಹಿಸಿದ. ಇದು ಬಂದೇನವಾಜರ ಮೊಮ್ಮಗ ಅಬ್ದುಲ್ಲಾಹುಸೇನಿಯ ಅರಬ್ಬಿ ಗ್ರಂಥ ನಿಷಾತಉಲ್ಲಇಷ್ಕ್‌ ಎಂಬ ಕೃತಿಯ ಭಾಷಾಂತರ (ನೋಡಿ: ಬಂದೇನವಾಜ್ಖ್ವಾಜಾ).

ಬಿಜಾಪುರದ ಷಾಮಿರಾನ್ಜಿಷಮಷುಲ್ಉಷ್ಷಾಕ್ ಹಾಗೂ ಅವನ ಪುತ್ರ ಬುರಹಾನುದ್ದೀನ್ ಖಾನಂ ಅನೇಕ ಗ್ರಂಥಗಳನ್ನು ರಚಿಸಿದರು. ಅವುಗಳಲ್ಲಿ ಜಲತರಂಗ, ಗುಲ್ದಾಸ್ ಮುಖ್ಯವಾದವು. ಮೀರಾನ್ಜೀಯ ಮಗಜೆ ಮರಗೂಬ್, ಚಹಾರ್ ಷಹಾದತ್ ಕೃತಿಗಳು ಪ್ರಸಿದ್ಧವಾಗಿವೆ. ಈ ಗ್ರಂಥಗಳನ್ನು ಇತ್ತೀಚೆಗೆ ಮೊಹಮದ್ ಹಾಷಿಮ್ ಅಲಿಯವರು ಸಂಪಾದಿಸಿ ಕೊಟ್ಟಿದ್ದಾರೆ. ಮೀರಾನ್ಜೀಯ ಮಗ ಬುರಹಾನುದ್ದೀನ್ ಖಾನಂ ರಚಿಸಿದ ‘ಕಲಮತ್ ಉಲ್ಲ ಹಿಕಾಯತ್’ ಉರ್ದು ಸಾಹಿತ್ಯದ ಮೊಟ್ಟ ಮೊದಲನೆಯ ಅಧಿಕೃತ ಗದ್ಯಗ್ರಂಥ. ಇವನು ಇರಷಾದ್ ನಾಮಾ, ಸುಖ ಸಹೇಲಾ ಎಂಬ ಮಸ್ನವಿಗಳನ್ನು ಬರೆದಿದ್ದಾನೆ.

ಬಹಮನೀ ಸುಲ್ತಾನರಲ್ಲಿ ಕೆಲವರು ಸ್ವತಃ ಕವಿಗಳಲ್ಲದೆ ಕವಿಪೋಷಕರೂ ಆಗಿದ್ದರು. ಆದಿಲ್ಶಾಹೀ ಮನೆತನದ ಆರನೆಯ ಸುಲ್ತಾನ ಎರಡನೆಯ ಇಬ್ರಾಹಿಂ ಆದಿಲ್ಷಾ (1580-1627) ಉರ್ದು ಸಾಹಿತ್ಯದ ಮಹಾನ್ ಪೋಷಕನಾಗಿದ್ದ. ಇವನಿಗೆ ಸಾಹಿತ್ಯದಲ್ಲಿ ತುಂಬಾ ಆಸಕ್ತಿಯಿತ್ತು. ಕಾವ್ಯ ಮತ್ತು ಸಂಗೀತವೆಂದರೆ ಇವನಿಗೆ ಪಂಚಪ್ರಾಣ. ಇವನು ದೊಡ್ಡ ಕವಿ ಹಾಗೂ ಸಂಗೀತ ವಿದ್ವಾಂಸ. ಈತ ನೌರಸ್ನಾಮಾ (ಕಿತಾಬೆ ನವರಸ್) ಎಂಬ ಉರ್ದುಗ್ರಂಥವನ್ನು ಸಂಗೀತದ ಬಗ್ಗೆ ರಚಿಸಿ ಲೋಕಪ್ರಖ್ಯಾತನಾದ (ನೋಡಿ: ಇಬ್ರಾಹೀಂ ಆದಿಲ್ ಷಾ II). ಇವನ ಕಾಲದಲ್ಲಿ ರುಸ್ತುಮ್ ಎಂಬ ಕವಿ ದ್ವಿಪದಿ ಕಾವ್ಯವನ್ನು ಬರೆದ. ಮೊಹಮದ್ ನುಸರತ್ ಎಂಬಾತ ಆದಿಲ್ಷಾನ ಆಸ್ಥಾನಕವಿ. ಇವನ ಕಾವ್ಯನಾಮ ‘ನುಸರತಿ’. ಇವನು ಮೂರು ದ್ವಿಪದಿ ಕಾವ್ಯಗಳನ್ನು ರಚಿಸಿದ. ಇವನ ಗುಲ್ಷನೆ ಇಷ್ಕ್‌ ಎಂಬ ಗ್ರಂಥದಲ್ಲಿ 8000 ಬೈತ್ಗಳಿವೆ. ಕನವರ ಮನೋಹರ್ ಮತ್ತು ಮಧುಮಾಲತಿಯ ಪ್ರಣಯ ಪ್ರಸಂಗವನ್ನು ಹೃದಯಂಗಮವಾಗಿ ವಿವರಿಸಿದ ಕಥೆಯಿದು. ನುಸರತಿಯ ಕಸೀದಾ ಅಂದರೆ ಜೀವಂತ ವ್ಯಕ್ತಿಗಳ ವರ್ಣನೆಗಳು ನಿರರ್ಗಳವಾಗಿ ಓದಿಸಿಕೊಂಡು ಹೋಗುವಂಥ ಗ್ರಂಥ. ಇವನು ರಚಿಸಿದ ಎರಡು ಪ್ರೇಮಕಥಾ ಸಂಕಲನಗಳಿವೆ. ಮಿರಾಜ್ನಾಮಾ ಇವನ ಮತ್ತೊಂದು ಪ್ರಸಿದ್ಧ ಕಾವ್ಯ. ಅಲಿನಾಮಾ ಇವನ ಇನ್ನೊಂದು ಕೃತಿ. ಆಗಿನ ಕಾಲದ ಸುಲ್ತಾನರ ಯುದ್ಧದ ವಿವರಣೆಯನ್ನು ತಿಳಿಸುವ ಚಾರಿತ್ರಿಕ ಗ್ರಂಥವಿದು. ಇದರಲ್ಲಿ 7000 ಮಸ್ನವಿ ಪದ್ಯಗಳಿವೆ. ಸುಲ್ತಾನರ ಕಾಲದಲ್ಲಿ ಮರಸಿಮಾ ಎಂಬ ಶೋಕಗೀತೆಗಳನ್ನು ಬರೆಯುವುದಕ್ಕೆ ಪ್ರಾರಂಭವಾಯಿತು. ನಿಜಾಮಿ, ಮುಷ್ತಾಕ್, ಲುತ್ಪಿs, ಅಜುರಿ, ವಜಹಿ, ಗವಾಸಿ, ಕುತುಬಿ, ಇಬ್ನೆನಿಷಾತಿ ಮೊದಲಾದ ಕವಿಗಳೂ ಉರ್ದು ಸಾಹಿತ್ಯ ಸೇವೆಯನ್ನು ಮಾಡಿದರು.

ಸುಲ್ತಾನರ ಆಸ್ಥಾನದಲ್ಲಿದ್ದ ಮುನ್ಷಿಗಳು ಪಾರಸಿ, ಉರ್ದು, ಕನ್ನಡ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಪತ್ರ ವ್ಯವಹಾರ ಆಯಾ ಭಾಷೆಯಲ್ಲಿ ನಡೆಯುತ್ತಿತ್ತು. ರಾಜರಿಗೂ ಸುಲ್ತಾನರಿಗೂ ಮೆಚ್ಚುಗೆಯಾದ ಭಾಷೆಯನ್ನು ಅಧಿಕಾರಿಗಳು, ಸಾಮಾನ್ಯ ಜನರು ಕಲಿಯುತ್ತ ಬಂದರು.ಹೀಗೆ ಉರ್ದು ಭಾಷೆ ಜನ ಸಾಮಾನ್ಯರ ಭಾಷೆಯಾಯಿತು.

ಔರಂಗಜೇಬನ ಆಶ್ರಯದಲ್ಲಿದ್ದ ಬಿಜಾಪುರದ ಜಸವಂತರಾಯ ಮುನ್ಷಿ ಎಂಬ ಅಧಿಕಾರಿ ಪಾರಸಿ ಮತ್ತು ಉರ್ದುವಿನಲ್ಲಿ ಶ್ರೇಷ್ಠಕವಿ. ಇವನಂತೆ ಅನೇಕ ಹಿಂದು ಜನರು ಉರ್ದು ಪಾರಸಿ ಭಾಷೆಗಳಲ್ಲಿ ಅಮೋಘ ಸೇವೆ ಸಲ್ಲಿಸಿದರು. ಈ ಕಾಲದಲ್ಲಿ ದಖ್ಖನೀ ಸಾಹಿತ್ಯಕ್ಕಿಂತ ಉರ್ದು ಸಾಹಿತ್ಯಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆಯಿತು. ಅದು ದಕ್ಷಿಣಕ್ಕಿಂತ ಉತ್ತರದಲ್ಲಿ ಹೆಚ್ಚು ಉನ್ನತಿ ಪಡೆಯಿತು. ರಾಯಚೂರಿನ ನೂರ್ದರ್ಯಾ ವಂಶಕ್ಕೆ ಸಂಬಂಧಪಟ್ಟ ಮೊಹಮದ್ ಖಾದರಿ ಎಂಬಾತ ಅನೇಕ ಧಾರ್ಮಿಕ ಗ್ರಂಥಗಳನ್ನು ಉರ್ದುವಿನಲ್ಲಿ ರಚಿಸಿದ. 18ನೆಯ ಶತಮಾನದ ಆದಿಯಲ್ಲಿ ಉರ್ದು ಗದ್ಯ ಉತ್ತರ ಭಾರತದಲ್ಲಿ ಪ್ರಾರಂಭವಾಯಿತು. 1803ರಲ್ಲಿ ಷರೀಫ್ ಎಂಬಾತ ಪ್ರಥಮ ಬಾರಿಗೆ ಕುರಾನನ್ನು ಉರ್ದುವಿಗೆ ಅನುವಾದಿಸಿದ. ಇದರ ಭಾಷೆ ಸರಳ, ಸುಲಭ. ಹೈದರಾಬಾದ್, ಔರಂಗಾಬಾದ್, ಗುಲ್ಬರ್ಗಾ ಮೊದಲಾದ ಎಡೆಗಳಲ್ಲಿ ಉರ್ದು ಸಾಹಿತ್ಯಕ ಚಟುವಟಿಕೆಗಳು ತೀವ್ರಗೊಂಡವು. ಹೈದರಾಬಾದಿನ ನಿಜಾಮರ ಕಾಲದಲ್ಲೂ ಉರ್ದುಭಾಷೆಗೆ ರಾಜಾಶ್ರಯ ದೊರೆತು ಉರ್ದು ಸಾಹಿತ್ಯ ಉಚ್ಛ್ರಾಯ ಸ್ಥಿತಿಗೇರಿತು.

18ನೆಯ ಶತಮಾನದ ಉತ್ತರಾರ್ಧದಲ್ಲಿ ಹೈದರ್ಅಲಿ ಮತ್ತು ಟಿಪ್ಪುಸುಲ್ತಾನರು ಉರ್ದು ಸಾಹಿತ್ಯ ಹಾಗೂ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನಿತ್ತರು. ಹೈದರ್ಅಲಿ ವಿದ್ಯಾವಂತನಾಗಿರದಿದ್ದರೂ ಇವನ ಮಗ ಟಿಪ್ಪುಸುಲ್ತಾನ್ ಸ್ವತಃ ವಿದ್ವಾಂಸನಾಗಿದ್ದ. ಇವನ ಆಶ್ರಯದಲ್ಲಿ ಅನೇಕ ಪಾರಸಿ ಹಾಗೂ ಉರ್ದು ಕವಿಗಳಿದ್ದರು. ಹೈದರ್ಅಲಿಯ ಕಾಲದಲ್ಲಿದ್ದ ಲೇಖಕ ಷಾಮೊಹಮದ್ಸದರುದ್ದೀನ್ ಎಂಬಾತ ನೆಲಮಂಗಲದವನು. ಮನ್ಲಗನ್, ಮಿರಾತುಜಕರ್, ಮಸ್ಬಹುಲ್ನೂರ್ ಇವನ ಕೃತಿಗಳು. ಮನ್ಲಗನ್ ಮಸ್ನಿವಿ ಛಂದಸ್ಸಿನಲ್ಲಿದೆ. ಲಾಲಾ ಮೆಹ್ತಾಬ್ರಾಯ್ ಮೈಸೂರು ನಿವಾಸಿ. ಇವನ ಕೃತಿ ಮೆಹ್ತಾಬೆಸುಖುನ್. ಇದರಲ್ಲಿ ಪ್ರೇಮ ಗೀತೆಗಳಿವೆ. ಇದು ಗಜಲ್. ನಜಮ್, ರುಬಾಯತ್, ಖಿತಾತ್ ಮೊದಲಾದವು ಪದ್ಯ ಸಂಕಲನಗಳು. ಖಾದಿಮ್ ಫಕೀರ್, ಷಹಬಾಜ್, ಷೀರಾನಿ, ಷಾಕಿರ್, ಕಮಲ್ ಮೊದಲಾದ ಇತರ ಪ್ರಸಿದ್ಧ ಕವಿಗಳೂ ಈ ಕಾಲದಲ್ಲಿದ್ದರು.

ಟಿಪ್ಪುವಿನ ಮುನ್ಷಿಯಾಗಿದ್ದ ಮೀರ್ ಜೈನುಲ್ ಆಬದೀನ್ ಷೋಸ್ತ್ರೀಯು ಫತಹುಲ್ ಮುಜಾಹಿದೀನ್, ಖುತ್ಬಾತೆ ಜುಮಾ, ಮೋಬಿದುಲ್ ಉಜಾಹಿದೀನ್ ಎಂಬ ಕೃತಿಗಳನ್ನು ಬರೆದಿದ್ದಾನೆ. ಫತಹುಲ್ ಮುಜಾಹಿದೀನ್ ಎಂಬ ಗ್ರಂಥ ಗದ್ಯದಲ್ಲಿದೆ. ಇದರಲ್ಲಿ ಟಿಪ್ಪುವಿನ ರಾಜ್ಯ ವ್ಯವಸ್ಥೆಯನ್ನು ಹೇಳಲಾಗಿದೆ. ಹೈದರ್ ನಾಮಾ, ಬಹದ್ದೂರ್ ನಾಮಾ, ಫತೆ ನಾಮಾ ಎಂಬ ಗ್ರಂಥಗಳು ಇದೇ ಕಾಲದಲ್ಲಿ ರಚನೆಗೊಂಡ ಐತಿಹಾಸಿಕ ಕೃತಿಗಳು. ಹುಸೇನ್ ಅಲಿ ಕಿರ್ಮಾನಿ ಈ ಕಾಲದ ಶ್ರೇಷ್ಠ ಚರಿತ್ರೆಕಾರ. ನಿಷಾನೆ ಹೈದರಿ ಎಂಬ ಪಾರಸಿ ಕೃತಿ ಉರ್ದುವಿಗೆ ತರ್ಜುಮೆಯಾಗಿದೆ. ಇದು ಐತಿಹಾಸಿಕ ವಿಷಯಗಳಿಂದ ಕೂಡಿದ ಗ್ರಂಥ. ತರಬ್ ಎಂಬಾತ ಬರೆದ ಫತೇನಾಮಾ ಎಂಬ ಕೃತಿಯಲ್ಲಿ ಮರಾಠರಿಗೂ ಟಿಪ್ಪುವಿಗೂ ನಡೆದ ಯುದ್ಧದ ಸಾಹಸ ಕಾರ್ಯಗಳನ್ನು ವರ್ಣಿಸಲಾಗಿದೆ. ಹಸನ್ ಅಲಿ ಇಜ್ಜತ್ನ ಮಫರುಲ್ಲ ಕಲೂಬ್, ಗಂಜಾಮಿನ ಷೇರ್ಮಿಯ್ಯಾ ಫಜಲ್ನ ಚಹಾರ್ ಕುರ್ಸಿ ತರೀಕತ್, ಅಬ್ದುಲ್ ಹಕ್ನ ಚೋಟಿ ಚಹಾರ್ ಕುರ್ಸಿ ಎಂಬ ಕೃತಿಗಳು ಪ್ರಸಿದ್ಧವಿದೆ. ಷಹರ್ ಬಾನು ಷಾಕಿರಾ ‘ಬಂiÀiÁಜ್ ಷಾಕಿರಾ’ ರಚಿಸಿದ ಮೈಸೂರಿನ ಮೊದಲ ಮಹಿಳೆ.

ಹೈದರ್ ಅಲಿ ಮತ್ತು ಟಿಪ್ಪುವಿನ ಕಾಲದಲ್ಲಿ ಕನ್ನಡ, ಮರಾಠಿ ಪಾರಸಿ ಭಾಷೆಗಳಲ್ಲಿ ಲೆಕ್ಕಪತ್ರಗಳನ್ನು ಇಡುತ್ತಿದ್ದರು. ಕನ್ನಡ ಗ್ರಂಥಗಳಲ್ಲಿ ನಿತ್ಯವ್ಯವಹಾರದ ಭಾಷೆಯಲ್ಲಿ ಅನೇಕ ಉರ್ದು ಪಾರಸಿ ಪದಗಳು ತಲೆದೋರಿದವು. ಈ ಭಾಷೆ ಚಂದ್ರಸಾಗರವರ್ಣಿ (ಸು.1810) ಎಂಬ ಜೈನಕವಿಗೆ ಮುಲ್ಲಾಶಾಸ್ತ್ರವನ್ನು ಬರೆಯಲು ಪ್ರೇರಣೆಯನ್ನಿತ್ತಿತು. ಮುಲ್ಲಾಶಾಸ್ತ್ರ ಭಾಮಿನಿ ಷಟ್ಪದಿಯಲ್ಲಿದೆ.

ಮೈಸೂರು ಒಡೆಯರ ಕಾಲದಲ್ಲಿ ಉರ್ದು ಸಾಹಿತ್ಯಕ್ಕೆ ಪ್ರೋತ್ಸಾಹ ದೊರಕಿತು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ಸನ್ನದುಗಳಲ್ಲಿ ಪಾರಸಿ ಮತ್ತು ಉರ್ದು ಶಬ್ದಗಳು ಹೇರಳವಾಗಿವೆ. ಬೆಂಗಳೂರು, ಮೈಸೂರು, ಕೋಲಾರ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಅನೇಕ ಉರ್ದು ಕವಿಗಳು, ಕವಯಿತ್ರಿಯರು ಆಗಿ ಹೋಗಿದ್ದಾರೆ. ಕೋಲಾರದ ಅಸಿಮ್ (ಸು.1831) ಪ್ರಸಿದ್ಧ ಕವಿಯಾಗಿದ್ದ. ಷಾ ಅಬ್ದುಲ್ ಹೈ (ಸು.1884) ಪ್ರವಾದಿ ಪೈಗಂಬರರನ್ನು ಕುರಿತು ಪಿsನಾನಸ್ಸಿಯರ್ ಎಂಬ ಗ್ರಂಥ ಬರೆದಿದ್ದಾನೆ. ಇದಲ್ಲದೆ ಇವನು ನೂರಾರು ಪದ್ಯಗದ್ಯ ಕೃತಿಗಳನ್ನು ರಚಿಸಿದ್ದಾನೆ. ಹೈದರ್, ಟಿಪ್ಪುವಿನ ಬಗ್ಗೆ ಮಹಮೂದ್ಖಾನ್ ಹನ್ನೆರಡು ಐತಿಹಾಸಿಕ ಕೃತಿಗಳನ್ನು ಬರೆದಿದ್ದಾನೆ.

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಾಜಾe್ಞೆಗಳನ್ನು ಉರ್ದು ಹಾಗೂ ಕನ್ನಡದಲ್ಲಿ ಹೊರಡಿಸುತ್ತಿದ್ದರು. ಕೃಷ್ಣರಾಜ ಒಡೆಯರು ಕೆಲಮೊಮ್ಮೆ ಉರ್ದುವಿನಲ್ಲೂ ಭಾಷಣ ಮಾಡುತ್ತಿದ್ದರಂತೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉರ್ದು ಹಾಗೂ ಪರ್ಶಿಯನ್ ವಿಭಾಗಗಳನ್ನು ತೆರೆದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕರ್ನಾಟಕದ ಹಳೆಯ ಮೈಸೂರು ವಿಭಾಗದಲ್ಲಿ ಉರ್ದು ಸಾಹಿತ್ಯ ಸೇವೆಗೈದ ಮೊಹಮದ್ ಸಯೀದ ಮೆಹಕಲಿ, ಮೊಹಮದ್ ಮಖದೂಮ್ ಬಿಜಾಪುರಿ, ಸಯ್ಯದ್ ಮೊಹಮದ್ ಮಾರೂಫ್, ಅಹಮದ್ ಖಾನ್ ಷೀರಾನಿ, ಮೊಹಮದ್ ಇಸಹಾಕ್ ಬಿಜಾಪುರಿ, ಮೀರ್ ಹುಸೇನ್ ಅಲಿ ಕಿರಮಾನಿ, ಕಾಜಿ ಗುಲಾಮ ಅಹಮದ್, ಖೈರುಲ್ಲಾಷಾ ಕಾದರಿ, ಹುಸೇನ್ ಬಿನ್ ಖಾದಿರ್, ಸೈಯದ್ ಆರಿಫ್ ಷಾ ಕಾದರಿ, ಅಬ್ದಲ್ ಹೈವಾಜ್, ಮೊಹಮದ್ ಕಾಸಿಮ್ ಷಾಗೋಗಮ್, ಮೊಹಮದ್ ಹುಸೇನ್ ಅಲಿ ಸುಲ್ತಾನ ಬೆಂಕಿನವಾಬ್, ನಸೀಮ್,ಮುನ್ಷಿ ಕಲಂದರ ಹುಸೇನ್, ಮೊಹಮದ್ ಅಬ್ದುಲ್ ರಹಮಾನ್ ದಿಲ್, ಮೊಹಮದ್ ಬಾಕರ್ ಡೆಲ್ವಿ, ಆಯಿಷಾ ಬೇಗಂ, ರಕಿಯಾ ಬೇಗಂ ಮೊದಲಾದ ಸಾಹಿತಿಗಳನ್ನು ಇಲ್ಲಿ ಸ್ಮರಿಸಬಹುದು. 1956ರಲ್ಲಿ ಮೈಸೂರು ರಾಜ್ಯದ ಪುನರ್ ವ್ಯವಸ್ಥೆಯಾದಾಗ ಹಳೆಯ ಹೈದರಾಬಾದ್ ಸಂಸ್ಥಾನದಿಂದ ಕರ್ನಾಟಕಕ್ಕೆ ಬಂದು ಸೇರಿದ ರಾಯಚೂರು, ಗುಲ್ಬರ್ಗಾ, ಬೀದರ್ ಜಿಲ್ಲೆಗಳ ಸರ್ಕಾರಿ ಕbsೇರಿಗಳಲ್ಲಿ ಆರಂಭದಲ್ಲಿ ಎಲ್ಲ ಕೆಲಸ ಕಾರ್ಯಗಳೂ ಆಡಳಿತವÆ ಉರ್ದುವಿನಲ್ಲೇ ನಡೆಯುತ್ತಿತ್ತು. ಉರ್ದು ಭಾಷೆಯೇ ಶಿಕ್ಷಣ ಮಾಧ್ಯಮವಾಗಿತ್ತು. ಸಿದ್ದಯ್ಯ ಪುರಾಣಿಕ, ಸೇತುಮಾಧವರಾವ್ ಪಗಡಿ, ಜಗನ್ನಾಥರಾವ್ ಚಂಡ್ರಕಿ ಮೊದಲಾದವರು ಉರ್ದುವನ್ನು ಪ್ರಧಾನವಾಗಿ ಕಲಿತಿದ್ದರು. ರಾಯಚೂರಿನ ನ್ಯಾಯಾಧೀಶರಾಗಿದ್ದ ರಾಘವೇಂದ್ರ ರಾವ್ (1894-1974) ಅವರು ಮಾಡಿದ ಉರ್ದು ಸೇವೆಗಾಗಿ ಅವರಿಗೆ ಖಯಾಮ ಐ ಆಂಧ್ರಾ ಎಂಬ ಬಿರುದು ಬಂದಿತ್ತು.

ಕರ್ನಾಟಕದಲ್ಲಿ ಈಗ ಉರ್ದು ಭಾಷೆಯ ಬೆಳೆವಣಿಗೆ ಹಾಗೂ ಅಬಿsವೃದ್ಧಿ ಸಾಕಷ್ಟಾಗಿದ್ದು ಸಾಹಿತ್ಯ, ವೃತ್ತಪತ್ರಿಕೆ, ಭಾಷಾಂತರ, ಕರ್ನಾಟಕ ಉರ್ದು ಅಕಾಡೆಮಿಯ ಸ್ಥಾಪನೆ, ನಿಘಂಟುಗಳ ಸಂಪಾದನೆ ಮುಂತಾದ ಕಾರ್ಯಗಳ ಮೂಲಕ ಕನ್ನಡದೊಡನೆ ಉರ್ದು ಹಿತಮಿತವಾಗಿ ಬೆರೆಯುತ್ತ ನಡೆದಿದೆ. ಇಬ್ರಾಹಿಂ ಜಲೀಸ್ ಅವರ ಭೂಕಾ ಬಂಗಾಲ, ಜರದ್ ಚೆಹರಾ ಎಂಬ ಉರ್ದು ಗ್ರಂಥಗಳು, ಚಿಂಚೋಳಿಯ ಮುಜ್ತಾಬಾ ಹುಸೇನರ ಕಿಸ್ಸಾ ಮುಖ್ತಸಿರ್, ಆಖಿರ್ಕಾರ್ (1997), ಮೇರಾ ಕಾಲಂ (1999) ಎಂಬ ಹಾಸ್ಯ ಪ್ರಬಂಧಗಳು, ಅಬ್ದುಲ್ ಕಾದಿರ್ ಅದೀಬ್ರ ನಕ್ಕಾರ ಖಾನೆ ಮೆ ತೋತೆ ಎಂಬ ವಿಡಂಬನಾತ್ಮಕ ಸಂಕಲನ, ಹುಬ್ಬಳ್ಳಿಯ ಅನಿಲ್ ಠಕ್ಕರ್ ಅವರ ಮೋಸಮಿ ಪರಿಂದೆ (1998) ಕಥಾಸಂಕಲನ, ಓಸ್ ಕಿ ಝಿಲ್ (2002) ಎಂಬ ಕಾದಂಬರಿ ಕರ್ನಾಟಕದಲ್ಲಿ ಉರ್ದು ಸಾಹಿತ್ಯಕ್ಕೆ ಮೆರುಗನ್ನು ನೀಡಿವೆ.

ಸುಲೇಮಾನ್ ಖತೀಬ್, ಮಹಮೂದ್ ಅಯಾಜ್, ಹಮೀದ್ ಅಲ್ಮಾಸ್, ಮುದ್ದಣ್ಣ ಮಂಜರ್, ಷಾ ಅಬ್ಲ್ ಹುಸೇನ್ ಅದೀಬ್, ನಸೀಮ ಮೈಸೂರಿ, ನಪಿsೕಸ್ ಬೆಂಗಳೂರಿ, ಹಜರತ್ ಫೋತ್, ಹುಸನಾ ಸರ್ವರ್, ಜಮೀರ ಆಕಿಲ್ಷಾಹಿ, ಷಾಹಿದ್ ಮೈಸೂರಿ, ಜೋಹರ್ ಮೈಸೂರಿ, ಗೋಹರ್ ತರಿಕೇರವಿ, ರಾಹಿಲ್, ರಫಲಾಕ್ ಅಫಸರ್, ಸಲೀಮ ತಮನ್ನಾಯಿ ಮೊದಲಾದ ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳಿಂದ ಉರ್ದು ಬೆಳೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಉರ್ದು ಭಾಷೆಯ ವಿದ್ವತ್ತಿನ ಕ್ಷೇತ್ರದಲ್ಲಿ ವಹಾಬ್ ಅಂದಲೀಬ್, ಖಾಲಿದ್ ಸಯೀದ್, ತಯ್ಯಬ್ ಅನ್ಸಾರಿ, ಮಹಮದ್ ಹಾಷಿಮ್ ಅಲಿ, ಮಸೂದ ಸಿರಾಜ್, ಹೈದರ್ಅಲಿ ಕರಮಡಿ, ಇಕ್ಬಾಲ್ ಹಾಷಿಮಿ, ಖಲೀಲ್ ಮಾಮೂನ್, ಅಬ್ದುಲ್ ಅಹಮದ್ ಮೊದಲಾದವರು ಗಮನಾರ್ಹ ಕೆಲಸಮಾಡಿದ್ದಾರೆ. ಉರ್ದು ಗದ್ಯ ಸಾಹಿತ್ಯಕ್ಕೆ ಕರ್ನಾಟಕದ ಮಹಿಳೆಯರಲ್ಲಿ ಹಬೀಬುನ್ನಿಸಾ, ಅಮೀನಾಖಾನ್, ಫಹಮೀದಾ ಬೇಗಂ, ಜಮೀಲಾ ಬೇಗಂ, ಜಹಾನ್ ಅರಾಬೇಗಂ, ನೀಲೋಫರ ಸಮೀನಾ, ಸುಹಾನಾ ಷಬ್ನಮ್, ಮಹಮೂದಾ ಖಾನಂ, ಮಾಹೆಜಬೀನ್, ವಹೀದಾ ಖಾತೂನ್, ಮುಮತಾಜ್ ಜರೀನಾ ಮೊದಲಾದವರು ವಿಶೇಷ ಸೇವೆ ಸಲ್ಲಿಸಿದ್ದಾರೆ.

ವೃತ್ತಪತ್ರಿಕಾ ಕ್ಷೇತ್ರದಲ್ಲಿಯೂ ಉರ್ದು ಮುಂಚೂಣಿಯಲ್ಲಿದೆ. ಕರ್ನಾಟಕದ ಮಹಬೂಬ್ಹುಸೇನ್ ಜಿಗರ್, ಅಬುಲ್ ಹಕ್ ತಹರೀನ್, ಹಾಮಿದ್ ಅಕಮಲ್, ಉಸ್ಮಾನ್ ಸಹರಾಯಿ, ಹಕೀಮ ಲೇಕ, ಅಹಮದ್ ನೇಮಾನಿ, ಮಹಮೂದ್ ಅಯಾಜ್ಜಿಯಾಮೀರ್, ಮಕ್ದೂಮ್ ಅಲಿ ಖಾನ್, ಷಪಿs ಅಹಮದ್ ಷರೀಫ್, ಇಸ್ಮಾಯಿಲ್ ತಾಬುಷ್, ಅಬ್ದುಲ್ಹಾದಿ, ರಫ ಅತ್ ಮೊದಲಾದವರು ಪತ್ರಿಕಾ ಸಂಪಾದಕರುಗಳಾಗಿ ವೃತ್ತಪತ್ರಿಕಾ ವ್ಯವಸಾಯದಲ್ಲಿ ಅಗ್ರಗಣ್ಯರಾಗಿದ್ದಾರೆ.

ಕಾಸಿಮುಲ್ ಅಖ್ತಾರ್, ಮಹಾಪಿsಜ್, ಷಮಾಯ ಸುಖುನ್, ಷಾಹ್ರಾಹೆ ತರಕ್ಕಿ, ಮೈಸೂರ್ ಅಖ್ಬಾರ್, ಸಾಲಾರ್ (1964-2004), ಪಾಸ್ಬಾನ್, ಸಿಯಾಸತ್, ನಷೇಮನ್, ತರಜುಮಾನ್ ಜುನೂಬ್, ರಹನುಮಾಯೆ ಕರ್ನಾಟಕ ಮೊದಲಾದ ಪತ್ರಿಕೆಗಳು ಹೊರಬಂದವು. ಸಾಲಾರ್ ಪತ್ರಿಕೆ ಈಗಲೂ ಭಾರತಾದ್ಯಂತ ಪ್ರಸಾರದಲ್ಲಿದೆ.

ಉತ್ತಮ ಕೃತಿಗಳನ್ನು ಉರ್ದುವಿನಿಂದ ಕನ್ನಡಕ್ಕೆ, ಕನ್ನಡದಿಂದ ಉರ್ದುವಿಗೆ ಅನುವಾದಿಸುವ ಕಾರ್ಯ ಬಹಳ ಹಿಂದಿನಿಂದ ಸಾಗಿಬಂದಿದೆ. ರಾಜೇಂದ್ರಸಿಂಗ್ ಅವರ ಏಕ್ ಚಾದರ್ ಮೈಲೀಸಿ ಎಂಬ ಕಾದಂಬರಿಯನ್ನು ಲಿಂಗಸೂರ ವಿಠಲರಾಯರು ಅನುವಾದಿಸಿದ್ದಾರೆ. ರಪಿsಯಾ ಮಂಜೂರುಲ್ ಅಮೀನರ ಆಲಮ್ ಪನಾಹ್ ಎಂಬ ಕಾದಂಬರಿಯನ್ನು (1987) ಶ್ಯಾಮಲಾ ಮಾಧವರು ಕನ್ನಡಕ್ಕೆ ಅನುವಾದಿಸಿದ್ದಾರೆ (1994). ಈ ಕೃತಿ ಫರಮಾನ್ ಎಂಬ ಹೆಸರಿನಲ್ಲಿ ಧಾರಾವಾಹಿಯಾಗಿ ದೂರದರ್ಶನದಲ್ಲೂ ಪ್ರಸಾರವಾಗಿದೆ (1992). ಇದಲ್ಲದೆ ರಜಾವುಜಬ್ಬಾರ್, ಪಿsಕರ ತೌನ್ಸವಿ, ಕೇವಲ್ ಧೀರ್, ಮಸರೂರ್ ಜಹಾನ್, ಅತೀಯಾ ಪರವೀನ್, ನಯೀಮಾಜಾಫರಿ, ಬಾನು ಸರತಾಜ್, ಷಾಕಿರ್ ಕರೀಮಿ, ಎಂ.ಎಚ್. ಖಾನ್, ಬಲವಂತ್ ಸಿಂಗ್, ಜಫರ್ ಅಹಮದ್ ನಿಜಾಮಿ, ಅಜೀಜ್ ಕೈಸಿ, ಇಫತ್ತ ಮೋಹಾನಿ, ಬಷೇಷರ ಪ್ರದೀಪ್, ಜಗದೀಶ್ ಬಿಮಲ್, ಮುಜ್ತಬಾ ಹುಸೇನ್, ಮೀಮ್ಕಾಫ್ ಮೆಹ್ತಾಬ್, ರಪಿsೕಯಾ ಮಂಜೂರುಲ್ಲ ಅಮೀನ್, ಅನ್ವರ್ ಇನಾಯತ್ಉಲ್ಲಾ, ಅನ್ವರ್ನುಜಹತ್, ಅನಿಲ್ ಠಕ್ಕರ್ ಮೊದಲಾದವರ ಉರ್ದುಕಥೆಗಳನ್ನು ಮಾಧವರಾವ್ ಮುಧೋಳ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ (1962-2004). ಸಂಯುಕ್ತ ಕರ್ನಾಟಕ, ಪ್ರಜಾಮತ, ಪ್ರಪಂಚ, ಕಸ್ತೂರಿ, ಕರ್ಮವೀರ, ಸುಧಾ, ಮಯೂರ, ಸಂಕೇತ, ಪುಸ್ತಕ ಪ್ರಪಂಚ, ತರಂಗ ಮೊದಲಾದ ವಿವಿಧ ಪತ್ರಿಕೆಗಳಲ್ಲಿ ಈ ಕಥೆಗಳು ಪ್ರಕಟವಾಗಿವೆ. ಮೌಲಾನಾ ಮೊಹಮ್ಮದ್ ಸಿರಾಜುಲ್ ಹಸನ್ರ ಮಾರ್ಗದರ್ಶನದಲ್ಲಿ ಕರ್ನಾಟಕ ಇಸ್ಲಾಮಿ ಸಾಹಿತ್ಯ ಪ್ರಕಾಶನ ಅನೇಕ ಉರ್ದು ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದೆ.

ಕನ್ನಡದಿಂದ ಉರ್ದು ಭಾಷೆಗೂ ಹಲವು ಪುಸ್ತಕಗಳು ಭಾಷಾಂತರಗೊಂಡಿವೆ. ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಸಯ್ಯದ್ ಷಹಾಬುದ್ದೀನ್ ರೋಷನ್ (1992), ಯು.ಆರ್. ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿಯನ್ನು ಷಪಿs ಅಹಮ್ಮದ್ ಷರೀಫ್ (1993), ಸರ್ವಜ್ಞನ ನೂರು ವಚನಗಳನ್ನು ಅಕಮಲ್ ಅಲ್ದೂರಿ (2000), ಶಿವರಾಮ ಕಾರಂತರ ಚೋಮನದುಡಿ ಕಾದಂಬರಿಯನ್ನು ಮಾಹಿರ್ ಮನ್ಸೂರ್ (2003) ಉರ್ದುವಿಗೆ ಅನುವಾದಿಸಿದ್ದಾರೆ.

ಕರ್ನಾಟಕದಲ್ಲಿ ಉರ್ದು ಸೇವೆ ಮತ್ತು ಕನ್ನಡ ಉರ್ದು ಮೈತ್ರಿ ಬೆಳೆಸಲು ಉರ್ದು ಅಕಾಡೆಮಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿ (1977) ಉರ್ದು ಸಾಹಿತ್ಯವನ್ನು ಬೆಳೆಸುವುದರಲ್ಲಿ ನೆರವಾಗಿದೆ. ಅನೇಕ ಕವಿಗಳಿಗೆ, ಗದ್ಯ ಲೇಖಕರಿಗೆ, ಭಾಷಾಂತರಕಾರರಿಗೆ ಪ್ರೋತ್ಸಾಹವಿತ್ತಿದೆ. ಉರ್ದು ಅಕಾಡೆಮಿಯ ವತಿಯಿಂದ ನಡೆದಿರುವ ಉರ್ದು ಕನ್ನಡ ಹಾಗೂ ಕನ್ನಡ ಉರ್ದು ನಿಘಂಟು ಒಂದು ಮಹತ್ತ್ವದ ಕೆಲಸವಾಗಿದೆ. ಉರ್ದು ಕನ್ನಡ ನಿಘಂಟು 1986ರಲ್ಲಿ ಪ್ರಕಟವಾಯಿತು. 1994ರಲ್ಲಿ ಪರಿಷ್ಕಾರ ಹಾಗೂ ಪುನರ್ ಮುದ್ರಣಗೊಂಡಿದೆ. ಈ ನಿಘಂಟಿನ ರಚನೆಯಲ್ಲಿ ಮೌಲಾನಾ ಅಬ್ದುಲ್ ಗಫಾರ್ (ಸಂಪಾದಕ), ಇಬ್ರಾಹಿಂ ಸಯೀದ್, ಎಂ.ಸಾದುಲ್ಲಾ ಅವರು ದುಡಿದಿದ್ದಾರೆ.

ಕನ್ನಡ - ಉರ್ದು ನಿಘಂಟಿನ ಪ್ರಕಟಣೆಯ (1994) ಕೆಲಸ ಅತ್ಯಂತ ಮಹತ್ತ್ವದ್ದು. ಇದು ಭಾರತದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಸಿದ್ಧವಾದಂಥದ್ದು. ಇದರ ರಚನೆಯಲ್ಲಿ ನಜಿಮುಸ್ಸಾಕಿಬಂ ಷಹನಾ (ಸಂಪಾದಕ), ಮಾಧವರಾವ್ ಮುಧೋಳ್ (ಸಹಸಂಪಾದಕ), ವೆಂಕಟರಾವ್ ಗಂಗಾವತಿ (ಸಹಾಯಕ ಸಂಪಾದಕ) ದುಡಿದ್ದಾರೆ. ಈ ನಿಘಂಟು 1997ರಲ್ಲಿ ಪುನರ್ ಮುದ್ರಣಗೊಂಡಿದೆ (ನೋಡಿ: ಅಕಾಡೆಮಿಗಳು). (ಎಂ.ಎಂಯು.)

ತಮಿಳು[ಬದಲಾಯಿಸಿ]

ಕನ್ನಡದ ಸೋದರ ಭಾಷೆಯಾದ ತಮಿಳು ಕನ್ನಡಕ್ಕಿಂತ ಪ್ರಾಚೀನ ಇತಿಹಾಸವನ್ನು ಹೊಂದಿದೆ. ಸಾಹಿತ್ಯಕವಾಗಿ ತೆಲುಗಿನೊಂದಿಗೆ ಹೆಚ್ಚು ಬಾಂಧವ್ಯವನ್ನು ಹೊಂದಿರುವ ಕನ್ನಡ ಭಾಷಾವಿಷಯದಲ್ಲಿ ತಮಿಳಿಗೆ ಸಮೀಪವಾಗಿದೆ. ಆದರೆ ಕನ್ನಡ ಸಾಹಿತ್ಯ ಚರಿತ್ರೆಯನ್ನು ತಮಿಳು ಸಾಹಿತ್ಯದೊಂದಿಗೆ ತೌಲನಿಕವಾಗಿ ಪರಿಶೀಲಿಸಿದಾಗ ಈ ಎರಡು ಸೋದರ ಭಾಷೆಗಳಿಗಿರುವ ಸಂಬಂಧ ಬಾಂಧವ್ಯಗಳು ಸಾಹಿತ್ಯಕವಾಗಿಯೂ ಬೆಳೆದುಬಂದಿವೆ ಎಂಬ ವಿಷಯ ವ್ಯಕ್ತವಾಗುತ್ತದೆ.

ಹತ್ತನೆಯ ಶತಮಾನಕ್ಕೆ ಮುಂಚೆ ಕನ್ನಡ ಮತ್ತು ತಮಿಳು ಭಾಷಾ ಸಾಹಿತ್ಯಗಳ ನಡುವೆ ಇದ್ದ ಸಂಬಂಧವನ್ನು ನಿರೂಪಿಸುವ ಮಾಹಿತಿಗಳು ಹೆಚ್ಚಾಗಿ ದೊರಕುವುದಿಲ್ಲ. ಪುರ್ವದ ಹಳಗನ್ನಡದ ಶಾಸನಗಳ ಭಾಷೆ ತಮಿಳು ಶಾಸನಗಳ ಭಾಷೆಯನ್ನು ಹೋಲುತ್ತದೆ ಎಂದು ಹೇಳಬಹುದು. ಹಲ್ಮಿಡಿ ಶಾಸನದ ಕಾಲಕ್ಕೇ ತಮಿಳಿನಲ್ಲಿ ಸಮೃದ್ಧವಾದ ಸಾಹಿತ್ಯವಿತ್ತು. 4-5ನೆಯ ಶತಮಾನಗಳಲ್ಲಿ ಪ್ರಾಚೀನ ತಮಿಳು ಗೀತೆಗಳನ್ನು ಸಂಗ್ರಹಿಸಿ ಕ್ರಮಬದ್ಧವಾದ ಸಂಕಲನಗಳಾಗಿ ವಿಂಗಡಿಸುವ ಕಾರ್ಯ ನಡೆಯಿತು. ಸುಮಾರು ಇದೇ ಕಾಲದಲ್ಲಿ ತೊಲ್ಕಾಪ್ಪಿಯರ್ ರಚಿಸಿದ ತೊಲ್ಕಾಪ್ಪಿಯಮ್ ಎಂಬ ಲಕ್ಷಣ ಗ್ರಂಥ ಬೆಳಕು ಕಂಡಿತು. ಈ ಕಾಲದಲ್ಲಿ ಕನ್ನಡ ಸಾಹಿತ್ಯದ ಸ್ಥಿತಿಗತಿಗಳು ಹೇಗಿದ್ದವು ಎಂಬುದನ್ನು ತಿಳಿಯಲು ಸರಿಯಾದ ಆಧಾರಗಳಿಲ್ಲ.

ಪ್ರಾಚೀನ ತಮಿಳು ಗ್ರಂಥಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ತಿರುಕ್ಕುರಳ್. ಇದನ್ನು ಬರೆದವನು ತಿರುವಳ್ಳುವರ್. ಇವನ ಕಾಲ ಸು.200. ತಿರುಕ್ಕುರಳ್ನಲ್ಲಿ ವೆಣ್ಬಾ ಛಂದಸ್ಸಿಗೆ ಸೇರಿದ 1330 ಗೀತೆಗಳಿವೆ. ಈ ಕಾವ್ಯ ಕನ್ನಡವೂ ಸೇರಿದಂತೆ ಪ್ರಪಂಚದ ಅನೇಕ ಭಾಷೆಗಳಿಗೆ ಭಾಷಾಂತರವಾಗಿದೆ. ಆರ್.ನರಸಿಂಹಾಚಾರ್ಯ, ಬಿ.ಎಂ.ಶ್ರೀ., ಎಲ್.ಗುಂಡಪ್ಪ ಮೊದಲಾದವರು ತಿರುಕ್ಕುರಳ್ಅನ್ನು ಕನ್ನಡಕ್ಕೆ ಅನುವಾದ ಮಾಡಿದವರಲ್ಲಿ ಕೆಲವರು.

ಸು.2ನೆಯ ಶತಮಾನದಲ್ಲಿ ರಚಿತವಾದ ಶಿಲಪ್ಪದಿಕಾರಂ ತಮಿಳಿನ ಪಂಚಮಹಾಕಾವ್ಯ ಗಳಲ್ಲಿ ಒಂದು. ಇದರಲ್ಲಿ ನೀಲಗಿರಿಯ ಕನ್ನಡತಿಯರ ಕುಣಿತದ ಹಾಡಿನ ಪ್ರಸ್ತಾಪ ಬರುತ್ತದೆ. ಇದೇ ಕಾಲದ ಪೆರಿಂದೇವನಾರ್ ವೆಣ್ಬಾ ಛಂದಸ್ಸಿನಲ್ಲಿ ಭಾರತವನ್ನು ಬರೆದಿದ್ದಾನೆ. ಪಂಪ ಈ ತಮಿಳು ಭಾರತವನ್ನು ನೋಡಿರಬಹುದು.

7ನೆಯ ಶತಮಾನದಿಂದ ಸು. 2 ಶತಮಾನಗಳ ಕಾಲ ತಮಿಳಿನಲ್ಲಿ ಭಕ್ತಿ ಪಂಥದ ಸಾಹಿತ್ಯ ಬೆಳೆಯಿತು. ನಾಯನ್ಮಾರರು ಶೈವಪಂಥಕ್ಕೂ ಆಳ್ವಾರರು ವೈಷ್ಣವ ಪಂಥಕ್ಕೂ ಸೇರಿದವರು. ತೇವಾರಮ್ ಎಂಬ ಹೆಸರಿನ ಶೈವಗೀತೆಗಳೂ ದಿವ್ಯಪ್ರಬಂಧಗಳೆಂದು ಹೆಸರು ಪಡೆದ ವೈಷ್ಣವ ಗೀತೆಗಳೂ ದಕ್ಷಿಣ ದೇಶದ ಅನೇಕ ಭಕ್ತಿಕಾವ್ಯಗಳ ಮೇಲೆ ಪ್ರಭಾವ ಬೀರಿವೆ. ನಂಬಿ ಆಂಡಾರ್ ನಂಬಿ ಎಂಬುವನು ಶೈವ ಗೀತೆಗಳನ್ನೂ ನಾದಮುನಿ ಎಂಬುವನÀÄ ವೈಷ್ಣವ ಗೀತೆಗಳನ್ನೂ ಸಂಗ್ರಹಿಸಿ ಸಂಕಲನ ಮಾಡಿದ್ದಾನೆ.

ತಮಿಳಿನಲ್ಲಿ ಬೌದ್ಧ ಜೈನ ಸಾಹಿತ್ಯಗಳು, ಆಮೇಲೆ ಶೈವ ವೈಷ್ಣವ ಸಾಹಿತ್ಯಗಳು ಬೆಳೆಯುತ್ತಿದ್ದ ಕಾಲದಲ್ಲಿ ಕನ್ನಡ ಸಾಹಿತ್ಯದ ಸ್ಥಿತಿಯನ್ನು ಸರಿಯಾಗಿ ನಿರ್ಧರಿಸುವ ಆಧಾರಗಳು ಕಡಿಮೆ. ಆದರೆ ಆ ಕಾಲದ ಶಾಸನಗಳ ಅಧ್ಯಯನದಿಂದ ತಮಿಳಿಗೂ ಇತರ ದ್ರಾವಿಡ ಭಾಷೆಗಳಿಗೂ ಸಮಾನವಾದ ಛಂದಸ್ಸುಗಳು ಕನ್ನಡದಲ್ಲಿ ಪ್ರಚಲಿತ ವಾಗಿದ್ದುವೆಂದು ಹೇಳಬಹುದು. ತಮಿಳಿನ ಕು¾ಳ್, ವೆಣ್ಬಾ ಛಂದಸ್ಸುಗಳು ಕನ್ನಡದ ಏಳೆ, ತ್ರಿಪದಿ ಮುಂತಾದ ದೇಸೀ ಛಂದಸ್ಸುಗಳನ್ನು ಹೋಲುತ್ತವೆ.

10ನೆಯ ಶತಮಾನಕ್ಕೆ ಮುಂಚೆ ಗುಣಗಾಂಕಿಯಂ ಎಂಬ ಕನ್ನಡ ಲಕ್ಷಣ ಗ್ರಂಥ ತಮಿಳಿನ ಯಾಪ್ಪರುಂಗಲಮ್ ಎಂಬ ಛಂದೋಗ್ರಂಥದ ಆಧಾರ ಗ್ರಂಥಗಳಲ್ಲಿ ಒಂದಾಗಿತ್ತು ಎಂಬುದು ಗಮನಾರ್ಹ ಸಂಗತಿ. ಕನ್ನಡದ ಶಿವಶರಣರ ಮೇಲೆ ನಾಯನ್ಮಾರರ ಪ್ರಭಾವವಿತ್ತು ಎಂಬುದರಲ್ಲಿ ಸಂದೇಹವಿಲ್ಲ. 11ನೆಯ ಶತಮಾನದ ಕೊನೆಯ ವೇಳೆಗೆ ತಮಿಳುನಾಡಿನ ಶೈವಧರ್ಮ ಕನ್ನಡನಾಡಿಗೆ ಹರಡತೊಡಗಿತು. ಕನ್ನಡ ನಾಡಿನಲ್ಲಿ ಅದುವರೆಗೂ ಇದ್ದ ಜೈನಧರ್ಮಕ್ಕೆ ಶೈವರಾದ ಚೋಳರಿಂದ ರಾಜಕೀಯ ಆಘಾತಗಳೊಂದಿಗೆ ಧಾರ್ಮಿಕವಾದ ಒತ್ತಡಗಳೂ ಹೆಚ್ಚಿದುವು. ಚೋಳರ ನಾಡಿನಿಂದ ರಾಮಾನುಜಮತದ ಭಕ್ತಿರೀತಿ ಕರ್ನಾಟಕದಲ್ಲೂ ಹರಡಿತು.

12-14ನೆಯ ಶತಮಾನದವರೆಗಿನ ಕಾಲದಲ್ಲಿ ಕನ್ನಡದ ಮೇಲೆ ತಮಿಳಿನ ಪ್ರಭಾವವನ್ನು ಕಾಣಬಹುದು. ಬಸವೇಶ್ವರರ ಧಾರ್ಮಿಕ ಕ್ರಾಂತಿಗೆ ತಮಿಳುನಾಡಿನ ಶೈವ ಕೊಡುಗೆಯೂ ತಕ್ಕಮಟ್ಟಿಗೆ ಇದೆ ಎಂದು ಹೇಳಬಹುದು. ಬಸವಣ್ಣನವರು ಬಾಳಿದ ಯುಗದಲ್ಲಿ ಸಾಹಿತ್ಯ ‘ಮಾರ್ಗ’ದಿಂದ ‘ದೇಸಿ’ಗೆ ಬದಲಾಗುತ್ತಿದ್ದ ಸಂಕ್ರಮಣ ಕಾಲವಾಗಿತ್ತು. ವಚನ ಸಾಹಿತ್ಯ ತಮಿಳು ಶೈವ ಸಂಪ್ರದಾಯದ ತೇವಾರಮ್ ಎಂಬ ಭಕ್ತಿಗೀತೆಗಳ ಪ್ರಭಾವದಿಂದ ಹುಟ್ಟಿತೆಂಬ ಅಬಿsಪ್ರಾಯವÆ ಇದೆ. ತಮಿಳುನಾಡಿನ ಶೈವಸಿದ್ಧಾಂತಗಳನ್ನೂ ಶಿವಶರಣರ ಚರಿತ್ರೆಗಳನ್ನೂ ತಕ್ಕಮಟ್ಟಿಗೆ ಉಪಯೋಗಿಸಿಕೊಂಡವರಲ್ಲಿ ಹರಿಹರನನ್ನು ಪ್ರಮುಖವಾಗಿ ಗುರುತಿಸಬೇಕು. ಅರವತ್ತುಮೂವರು ಪುರಾತನರು ಎಂದು ಹೆಸರು ಪಡೆದಿರುವ ತಮಿಳನಾಡಿನ ಶಿವಶರಣರನ್ನು ಬಸವಣ್ಣನವರು ಸ್ಮರಿಸಿದ್ದಾರೆ. ಶೇಕ್ಕಿಳಾರ್ ರಚಿತ ‘ಪೆರಿಯಪುರಾಣಂ’ ಅರವತ್ತುಮೂವರ ಚರಿತ್ರವನ್ನು ಕೀರ್ತಿಸುವ ಗ್ರಂಥ. ಈ ಗ್ರಂಥವನ್ನು ಹರಿಹರ ನೋಡಿ ತನ್ನ ಕೆಲವು ರಗಳೆಗಳಿಗೆ ಕಥಾಭಾಗವನ್ನು ಆರಿಸಿಕೊಂಡಿರಬೇಕು. ಹರಿಹರನ ರಗಳೆಗಳಲ್ಲಿ ಕಂಡುಬರುವ ಕೆಲವು ತಮಿಳು ಪದಗಳನ್ನು ನೋಡಿದರೆ ಅವನಿಗೆ ತಮಿಳು ಭಾಷೆಯ ಪರಿಚಯವಿತ್ತೆಂದು ತೋರುತ್ತದೆ. ಹೀಗೆಯೇ ಆಂಡಯ್ಯ ಕಬ್ಬಿಗರಕಾವವನ್ನು ಬರೆಯಲು ಶೆಂದಮಿ¿ï ಕಾವ್ಯಗಳು ಪ್ರೇರಕವಾಗಿದ್ದುವೇನೋ ಎಂಬುದೊಂದು ಊಹೆ.

ರಾಮಾನುಜಾಚಾರ್ಯರ ಸ್ತೋತ್ರಗಳ ಪ್ರಭಾವ ದಾಸರ ಪದಗಳ ಮೇಲೆ ಇದ್ದಿತೆಂದು ಹೇಳಬಹುದು. ದಾಸರ ಪದಗಳ ರಚನೆಯ ಕಾಲಕ್ಕೆ ಸ್ವಲ್ಪ ಮುಂಚೆ ಹೊರಬಂದ ಸಾಹಿತ್ಯದಲ್ಲಿ ತಮಿಳು ಭಾಷಾಸಾಹಿತ್ಯಗಳ ಸಂಪರ್ಕ ಕಂಡುಬರುತ್ತದೆ. ಚಾಮರಸನ ಪ್ರಭುಲಿಂಗಲೀಲೆ (ಸು.1430) ತಮಿಳಿಗೆ ಅನುವಾದವಾಗಿದೆ. ಶಿವಪ್ರಕಾಶಸ್ವಾಮಿ (17ನೆಯ ಶತಮಾನ) ಎಂಬುವನು ಈ ಕೃತಿಯ ಅನುವಾದಕ. ನಿಜಗುಣಶಿವಯೋಗಿ ತನ್ನ ಅರವತ್ತುಮೂವರ ತ್ರಿಪದಿಯಲ್ಲಿ ಶಿವಭಕ್ತರಾದ ತಮಿಳುನಾಡಿನ ಅರವತ್ತುಮೂವರನ್ನು ಸ್ತುತಿಸಿದ್ದಾನೆ. ತ್ರಿಷಷ್ಟಿ ಪುರಾತನರ ಚರಿತ್ರೆ ಎಂಬ ಹೆಸರಿನಲ್ಲಿ ಇಂಥದನ್ನೇ ಸುರಂಗಕವಿಯೂ ಬರೆದಿದ್ದಾನೆ. ಗುಬ್ಬಿಯ ಮಲ್ಲಣಾರ್ಯನ ಭಾವಚಿಂತಾರತ್ನಕ್ಕೆ ತಮಿಳು ಗ್ರಂಥವೇ ಆಧಾರವೆಂದು ತಿಳಿದುಬಂದಿದೆ.

ಚಿಕ್ಕದೇವರಾಯನ ಕಾಲದ ಅನೇಕ ಕವಿಗಳು ತಮಿಳು ಬಲ್ಲವರಾಗಿದ್ದರು. ಗೀತಗೋಪಾಲ ಮುಂತಾದ ಗ್ರಂಥಗಳ ಅಚ್ಚಕನ್ನಡ ಹೊಸಕಳೆಗೆ ಶೆಂದಮಿ¿ï ಪ್ರಭಾವ ಸ್ವಲ್ಪಮಟ್ಟಿಗೆ ಕಾರಣವಾಗಿರಬಹುದು. ಶ್ರೀವೈಷ್ಣವರಾದ ಸಿಂಗರಾರ್ಯ, ತಿರುಮಲಾರ್ಯ ಮೊದಲಾದವರಿಗೆ ತಮಿಳಿನ ಪರಿಚಯ ಇದ್ದಿರಬೇಕು. ಚಿಕುಪಾಧ್ಯಾಯನ ಗ್ರಂಥಗಳಲ್ಲಿ ಬಹುಪಾಲು ವೈಷ್ಣವ ಗ್ರಂಥಗಳಾಗಿವೆ.

ಹೊಸಗನ್ನಡ ಯುಗದ ಮೊದಲನೆಯ ಹಂತದಲ್ಲಿ ತಮಿಳು ಗ್ರಂಥಗಳಿಂದ ಅನುವಾದವಾದ ಅನೇಕ ಗ್ರಂಥಗಳು ಕನ್ನಡದಲ್ಲಿ ಪ್ರಕಟವಾಗಿವೆ. ಕ್ರೈಸ್ತ ಮಿಷನರಿಗಳು ಧಾರ್ಮಿಕ ಗ್ರಂಥಗಳನ್ನೂ ತಮಿಳಿನಿಂದ ಭಾಷಾಂತರ ಮಾಡಿರುತ್ತಾರೆ. ಜಾನ್ ರೀಡ್, ಕೆ.ವಿ.ಜೋಸಿಯಾ, ಇ.ಎಲ್.ಚಾರ್ಬಾ ಮೊದಲಾದವರು ತಮಿಳಿನಲ್ಲಿದ್ದ ಧಾರ್ಮಿಕ ಗ್ರಂಥಗಳನ್ನು ಕ್ರೈಸ್ತಧರ್ಮದ ಪ್ರಚಾರಕ್ಕಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕ್ರೈಸ್ತಮಿಷನರಿಗಳೇ ಅಲ್ಲದೆ ದೇಶೀಯ ಪಂಡಿತರೂ ತಮಿಳಿನಿಂದ ಕೆಲವು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಆರ್.ನರಸಿಂಹಾಚಾರ್ಯರು ಕರ್ನಾಟಕಕ್ಕೆ ಸಂಬಂಧಿಸಿದ ತಮಿಳು ಶಾಸನಗಳನ್ನೂ ಅವ್ವೈಯಾರ್ನಿಂದ ಹಿಡಿದು ತಿರುವಳ್ಳುವರ್ವರೆಗಿನ ನೀತಿಪದ್ಯಗಳನ್ನು ಅನುವಾದ ಮಾಡಿ ಕನ್ನಡಿಗರಿಗೆ ನೀಡಿದ್ದಾರೆ. ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಮತ್ತೆ ತಮಿಳಿನ ಪ್ರಭಾವ ಕನ್ನಡದ ಮೇಲೆ ಕಾಣಿಸಿಕೊಂಡಿದೆ. ಬಿ.ಎಂ.ಶ್ರೀ. ಅವರ ಸಿರಿಗನ್ನಡಂ ಗೆಲ್ಗೆ ಎಂಬ ಘೂೕಷಣೆಗೆ ಸ್ಫೂರ್ತಿ ಶೆಂದಮಿ¿ï ಎನ್ನುವ ಅಬಿsಪ್ರಾಯವಿದೆ. ಭಾಷಿಕವಾಗಿ ಕಾಲ್ಡ್‌ವೆಲ್ ತಮಿಳು ಕನ್ನಡದ ತೌಲನಿಕ ವಿವೇಚನೆ ಮಾಡಿದ್ದಾನೆ. (ಆರ್.ವಿ.ಎಸ್.ಎಸ್.)

ಇವರಲ್ಲದೆ ಟಿ.ಬರೊ, ಬಿ.ಎಚ್.ಕೃಷ್ಣಮೂರ್ತಿ, ಎಂ.ಬಿ.ಎಮಿನೊ ಮೊದಲಾದ ಭಾಷಾತಜ್ಞರು ತಮಿಳು-ಕನ್ನಡ ಮತ್ತು ಇತರ ಭಾಷೆಗಳ ಬಾಂಧವ್ಯ ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಇತರ ಭಾಷೆಯ ಸಾಹಿತ್ಯ ಕ್ಷೇತ್ರಗಳಲ್ಲಿ ಆದಂತೆ ತಮಿಳಿನಲ್ಲಿ ಕೂಡ ಆಧುನಿಕ ಸಾಹಿತ್ಯದ ರಚನೆಗೆ ಪಾಶ್ಚಾತ್ಯ ಭಾಷೆ ಮತ್ತು ಸಾಹಿತ್ಯಗಳ ಪ್ರಭಾವವೇ ಪ್ರಧಾನವಾಗಿ ಕಂಡುಬರುತ್ತವೆ. 1950ರ ಅನಂತರದ ಕಾಲದಲ್ಲಿ ರಚಿತವಾದ ಸಾಹಿತ್ಯ ಪ್ರಕಾರಗಳಲ್ಲಿ ಸಣ್ಣಕಥೆ, ಕಾದಂಬರಿ, ನಾಟಕ, ಕಾವ್ಯ ಹಾಗೂ ದಲಿತ ಸಾಹಿತ್ಯ, ಸ್ತ್ರೀವಾದಿ ಸಾಹಿತ್ಯ ಮುಖ್ಯವಾದವು.

ಕರ್ನಾಟಕದಲ್ಲಿ ದಲಿತ ಸಾಹಿತ್ಯದ ಉಗಮಕ್ಕೆ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‌ ಚಳವಳಿ, ಅಂಬೇಡ್ಕರ್ವಾದ, ಲೋಹಿಯಾವಾದ, ಆಪಿs್ರಕನ್ ಕಪ್ಪು ಸಾಹಿತ್ಯ ಮುಂತಾದವು ಕಾರಣವಾದರೆ ತಮಿಳುನಾಡಿನ ದಲಿತ ಸಾಹಿತ್ಯಕ್ಕೆ ಪೆರಿಯಾರ್ ಮತ್ತು ಅಂಬೇಡ್ಕರ್ ಮೊದಲಾದವರ ಚಿಂತನೆಗಳು ಪ್ರೇರಣೆ ನೀಡಿದವು.

ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿಯುವ ಸಾಹಿತ್ಯ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ರಚಿತವಾಗಿರುವುದು ಪಾಶ್ಚಾತ್ಯ ಸಾಹಿತ್ಯ ಪ್ರಭಾವದಿಂದಲೇ ಎಂಬ ಸಂಗತಿ ಗಮನಾರ್ಹವಾಗಿದೆ. ವಿಶ್ವಸಂಸ್ಥೆಯು 1975ನೆಯ ವರ್ಷವನ್ನು ಅಂತಾರಾಷ್ಟ್ರೀಯ ಮಹಿಳಾ ವರ್ಷವೆಂದು ಘೂೕಷಿಸಿತು. ಅನಂತರ ರೂಪುಗೊಂಡ ಈ ಸಾಹಿತ್ಯಕ್ಕೆ ಪರಂಪರೆಯ ಕೆಲವು ಪ್ರೇರಣೆಗಳಿದ್ದರೂ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಘೂೕಷಣೆ ಮತ್ತು 1985ರಲ್ಲಿ ನಡೆದ ಮಹಿಳಾ ದಶಮಾನೋತ್ಸವದ ಆಚರಣೆ ಮುಖ್ಯ ಕಾರಣವಾದವು. ತಮಿಳುನಾಡಿನಲ್ಲಿ ಸ್ತ್ರೀವಾದ ಸಾಹಿತ್ಯ ಅಂಕುರಿಸಲು ಸುಬ್ರಹ್ಮಣ್ಯ ಭಾರತಿ ಮತ್ತು ಪೆರಿಯಾರ್ರವರ ಸ್ತ್ರೀಪರ ಹೋರಾಟಗಳು ಪ್ರೇರಣೆ ನೀಡಿದವು.

ಆಧುನಿಕ ಸಾಹಿತ್ಯದಲ್ಲಿ ಸಣ್ಣಕಥೆ, ಕಾದಂಬರಿ, ನಾಟಕ, ಕಾವ್ಯ ಮುಂತಾದ ಪ್ರಕಾರಗಳಲ್ಲಿ ತಮಿಳು ಮತ್ತು ಕನ್ನಡ ಭಾಷೆಗಳ ನಡುವೆ ನಿಕಟವಾದ ಸಂಬಂಧವನ್ನು ಕಲ್ಪಿಸಿಕೊಟ್ಟ ಕ್ಷೇತ್ರವೆಂದರೆ ಅನುವಾದ ಕ್ಷೇತ್ರ. ಅನುವಾದಗಳ ಮೂಲಕ ಈ ಎರಡೂ ಭಾಷೆಗಳಲ್ಲಿ ಸಾಹಿತ್ಯಕ ಕೊಳುಕೊಡುಗೆಗಳು ನಡೆದವು. ಜಯಕಾಂತನ್ ಅವರ ಸಣ್ಣಕತೆಗಳನ್ನು ನ್ಯಾಷನಲ್ ಬುಕ್ ಟ್ರಸ್ಟ್‌ ಸಂಸ್ಥೆ ಕನ್ನಡಕ್ಕೆ ಅನುವಾದ ಮಾಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ತಮಿಳಿನ ಅನೇಕ ಸಣ್ಣಕಥೆಗಳನ್ನು ಅನುವಾದ ಮಾಡಿಸಿ ತಮಿಳು ಕಥಾಸಂಕಲನ ಎಂಬ ಹೆಸರಿನಲ್ಲಿ ಹೊರತಂದಿದೆ. ಅಖಿಳನ್ ಅವರು ಸಂಕಲಿಸಿದ ತಮಿಳು ಸಣ್ಣಕಥೆಗಳ ಸಂಕಲನವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ತಮಿಳು ಕಥಾ ಸೌರಭ ಎಂಬ ಶೀರ್ಷಿಕೆಯಲ್ಲಿ ಅನುವಾದ ಮಾಡಿಸಿ ಪ್ರಕಟಿಸಿದೆ. ರಾಷ್ಟ್ರಕವಿ ಕುವೆಂಪು ಅವರ ಸಣ್ಣಕಥೆಗಳನ್ನು ಕುವೆಂಪುವಿನ್ ಸಿರುಗಥೈಗಳ್ ಎಂಬ ಹೆಸರಿನಲ್ಲಿ ನಟರಾಜನ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದ್ದಾರೆ. ಮಾಸ್ತಿಯವರ ಸಣ್ಣಕಥೆಗಳನ್ನು ಶೇಷನಾರಾಯಣ ಅವರೂ ಪಿ.ಲಂಕೇಶ್ ಅವರ ಸಣ್ಣ ಕಥೆಗಳನ್ನು ಪಾವಣ್ಣನ್ ಅವರೂ ಕ್ರಮವಾಗಿ ಮಾಸ್ತಿ ಸಿರುಗಥೈಗಳ್, ಕಲ್ಕರೈಯುಂ ನೇರಂ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಯಶವಂತ ಚಿತ್ತಾಲರ ಕಥೆಯಾದಳು ಹುಡುಗಿ ಎಂಬ ‘ಸಣ್ಣಕಥಾ ಸಂಕಲನ’ವನ್ನು ಸಿದ್ಧಲಿಂಗಯ್ಯನವರು ಒರು ಪೆಣ್ ಗತೈಯಾಗಿರಾಳ್ ಎಂದು ಅನುವಾದಿಸಿದ್ದಾರೆ.

ವೇದನಾಯಗಂ ಪಿಳ್ಳೈ ಎಂಬುವರು ರಚಿಸಿದ (1879) ಪ್ರತಾಪ ಮೊದಲಿಯಾರ್ ಚರಿತಿರಂ ಎಂಬ ತಮಿಳಿನ ಮೊಟ್ಟಮೊದಲ ಕಾದಂಬರಿಯನ್ನು ಮತ್ತೂರು ಕೃಷ್ಣಮೂರ್ತಿ ಯವರು ಅನುವಾದಿಸಿದ್ದಾರೆ. ರಾಜಮಯ್ಯರ್ ರಚಿಸಿದ (1896) ಕಮಲಾಂಬಾಳ್ ಚರಿತಿರಂ ಎಂಬ ಕಾದಂಬರಿಯನ್ನು ಸಂಪತ್ ಗಿರಿರಾಜು ಅವರು, ಕಲ್ಕಿಯವರ ಅಲೈಯೋಸೈ, ಅಖಿಳನ್ ಅವರ ಪಾವೈ ವಿಳಕ್ಕು ಎಂಬ ಕಾದಂಬರಿಗಳನ್ನು ಮತ್ತೂರು ಕೃಷ್ಣಮೂರ್ತಿಯವರು ಕನ್ನಡಕ್ಕೆ ತಂದಿದ್ದಾರೆ. ಅಖಿಳನ್ ಅವರ ಚಿತ್ತಿರಪ್ಪಾವೈ ಎಂಬ ಮತ್ತೊಂದು ಕಾದಂಬರಿಯನ್ನು ಚಿತ್ರಕನೈ ಎಂಬ ಹೆಸರಿನಲ್ಲಿ ಅನುವಾದ ಮಾಡಿಸಿ ನ್ಯಾಷನಲ್ ಬುಕ್ ಟ್ರಸ್ಟ್‌ ಪ್ರಕಟಿಸಿದೆ. ವರದರಾಜನ್ ಅವರ ಅಗಳ್ವಿಳಕ್ಕು ಎಂಬ ಕಾದಂಬರಿಯನ್ನು ಶೇಷನಾರಾಯಣ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಮಾಸ್ತಿಯವರ ಚಿಕ್ಕವೀರರಾಜೇಂದ್ರ ಎಂಬ ಕಾದಂಬರಿಯನ್ನು ಹೇಮಾ ಆನಂದತೀರ್ಥನ್ ಅವರು ತಮಿಳಿಗೆ ಅನುವಾದಿಸಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್‌ ಈ ಕೃತಿಯನ್ನು ಪ್ರಕಟಿಸಿದೆ. ಪುರ್ಣಚಂದ್ರ ತೇಜಸ್ವಿಯವರ ಚಿದಂಬರ ರಹಸ್ಯ ಎಂಬ ಕಾದಂಬರಿಯನ್ನು ಚಿದಂಬರ ರಹಸಿಯಂ ಎಂದೂ ಚದುರಂಗರ ವೈಶಾಖ ಎಂಬ ಕಾದಂಬರಿಯನ್ನು ಮೌನ ಓಲಂ ಎಂದೂ ಎಂ.ಕೆ.ಇಂದಿರಾ ಅವರ ಗೆಜ್ಜೆಪುಜೆ ಎಂಬ ಕಾದಂಬರಿಯನ್ನು ಸಲಂಗೈ ಚಡಂಗು ಎಂದೂ ಶಿವರಾಮ ಕಾರಂತರ ಜೋಮನದುಡಿ ಎಂಬ ಕಾದಂಬರಿಯನ್ನು ಮಣ್ಣೂಮನುಷ್ಯರೂ ಎಂದೂ ಕೆ.ವಿ. ಅಯ್ಯರ್ ಅವರ ಶಾಂತಲೆ ಎಂಬ ಕಾದಂಬರಿಯನ್ನು ಶಾಂತಲೈ ಎಂದೂ ತಮಿಳಿಗೆ ಅನುವಾದಿಸಲಾಗಿದೆ.

ಕೋಮಲಸ್ವಾಮಿನಾಥನ್ ಅವರ ತಣ್ಣೀರ್ ತಣ್ಣೀರ್ ಎಂಬ ಪ್ರಸಿದ್ಧ ನಾಟಕವನ್ನು ಸುಬ್ರಹ್ಮಣ್ಯಂ ಎನ್ನುವವರು ಕನ್ನಡಕ್ಕೆ ತಂದಿದ್ದಾರೆ. ಚಂದ್ರಶೇಖರ ಕಂಬಾರ ಅವರ ಸಿರಿ ಸಂಪಿಗೆ ಎಂಬ ನಾಟಕವನ್ನು ಸದಾಶಿವಂ ಎನ್ನುವವರು ತಿರುಸಂಪಿಗೈ ಎಂದು ತಮಿಳಿಗೆ ಅನುವಾದಿಸಿದ್ದಾರೆ.

ಸುಬ್ರಹ್ಮಣ್ಯ ಭಾರತಿ ಮತ್ತು ಭಾರತಿದಾಸನ್ ಅವರ ಆಯ್ದ ಕವನಗಳನ್ನು ಪಶುಮಲೈ ಅರಸು ಕನ್ನಡಕ್ಕೆ ತಂದಿದ್ದಾರೆ. ಇದಲ್ಲದೆ ಶ್ರೀಲಂಕಾದ ತಮಿಳು ಕವನಗಳು ಎಂಬ ಕವನ ಸಂಕಲನವನ್ನು ಕಾರ್ಲೋಸ್ ಎನ್ನುವವರು ಕನ್ನಡದಲ್ಲಿ ಸಂಪಾದಿಸಿದ್ದಾರೆ. ಸ.ಸ.ಮಾಳವಾಡ ಅವರು ಸಂಕಲಿಸಿದ ಬಸವಣ್ಣನವರ ವಚನಗಳನ್ನು ವಸವಣ್ಣರ್ ವಾಕ್ಕಮುದು ಎಂಬ ಹೆಸರಿನಲ್ಲಿ ಸಿದ್ಧಲಿಂಗಯ್ಯನವರು ಅನುವಾದಿಸಿದ್ದಾರೆ. ಇರೈಯಡಿಯಾನ್ ಎನ್ನುವವರು ಸರ್ವಜ್ಞನ ವಚನಗಳನ್ನು ವಿಶ್ವ ತಮಿಳು ಅಧ್ಯಯನ ಸಂಸ್ಥೆಯ ಪರವಾಗಿ ಅನುವಾದಿಸಿ ಪ್ರಕಟಿಸಿದ್ದಾರೆ. ತಮಿಳಿನ ನನ್ನೂಲ್ ಎಂಬ ವ್ಯಾಕರಣ ಗ್ರಂಥವನ್ನು ಬಿ.ನಂ. ಚಂದ್ರಯ್ಯನವರು ಕನ್ನಡಕ್ಕೆ ತಂದಿದ್ದಾರೆ. ಕನ್ನಡದ ಕವಿರಾಜಮಾರ್ಗವನ್ನು ವೆಂಕಟಾಚಲಂ ಎಂಬುವರು ತಮಿಳು ವಿಶ್ವವಿದ್ಯಾನಿಲಯದ ಪರವಾಗಿ ಅನುವಾದಿಸಿದ್ದಾರೆ. ಅರವಿಂದ ಮಾಲಗತ್ತಿಯವರ ಗೌರ್ನಮೆಂಟ್ ಬ್ರಾಹ್ಮಣ ಎಂಬ ಆತ್ಮಕಥೆಯನ್ನು ಪಾವಣ್ಣನ್ರವರು ತಮಿಳಿಗೆ ಅನುವಾದಿಸಿದ್ದಾರೆ. ಹಾಗೆಯೇ ಊ.ವೇ.ಸ್ವಾಮಿನಾಥ ಅಯ್ಯರ್ ಅವರ ಎನ್ಚರಿತ್ತಿರಂ ಎಂಬ ಆತ್ಮ ಚರಿತ್ರೆಯನ್ನು ಕನ್ನಡಕ್ಕೆ ತರಲಾಗಿದೆ.

ಹೀಗೆ ತಮಿಳು ಮತ್ತು ಕನ್ನಡ ಭಾಷೆಗಳ ಬಾಂಧವ್ಯ ಒಂದಲ್ಲಾ ಒಂದು ರೀತಿಯಲ್ಲಿ ನಿರಂತರವಾಗಿ ಮುಂದುವರಿದಿದೆ. (ಎಂ.ಟಿ.)

ತೆಲುಗು[ಬದಲಾಯಿಸಿ]

ಕನ್ನಡ ಮತ್ತು ತೆಲುಗು ಭಾಷೆಗಳ ಬಾಂಧವ್ಯ ಬಹಳ ಹಿಂದಿನಿಂದಲೂ ಅಂದರೆ ಸಾತವಾಹನರು, ಚಾಳುಕ್ಯರು, ಚೋಳರು, ಕಾಕತೀಯರು, ವಿಜಯನಗರದ ಅರಸರು, ಕೊನೆಗೆ ಮೊನ್ನೆಮೊನ್ನೆಯ ಬ್ರಿಟಿಷರ ಕಾಲದಿಂದ ಈಗಿನವರೆಗೂ ನಡೆದುಕೊಂಡು ಬಂದಿದೆ. ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಭಾಷಿಕವಾಗಿ ನಾನಾಮುಖಗಳಿಂದ ಬೆಳೆದು ಬರುತ್ತಿರುವ ಈ ಬಾಂಧವ್ಯದ ಗುರುತುಗಳನ್ನು ಈ ಎರಡು ಭಾಷೆಗಳ ಸಾಹಿತ್ಯಕ ಕೃತಿಗಳಲ್ಲಿಯೂ ನಾವು ಕಾಣಬಹುದು. ತೆಲುಗರು ಆಂಧ್ರಪ್ರದೇಶದ ಗಡಿಪ್ರದೇಶಗಳಲ್ಲಿ ಮಾತ್ರವಲ್ಲದೆ ಕರ್ನಾಟಕದ ಎಲ್ಲ ಕಡೆಗಳಲ್ಲಿಯೂ ಕಂಡುಬರುತ್ತಾರೆ. ಮುಖ್ಯವಾಗಿ ಕೋಲಾರ ಮತ್ತು ಬಳ್ಳಾರಿ ಜಿಲ್ಲೆ, ಬೆಂಗಳೂರು ನಗರ ಮುಂತಾದ ಪ್ರದೇಶಗಳಲ್ಲಿ ಇವರು ಬಹುಸಂಖ್ಯೆಯಲ್ಲಿ ನೆಲೆಸಿದ್ದಾರೆ.

ಕರ್ನಾಟಕದಲ್ಲಿ ತೆಲುಗು ಭಾಷೆ ಮಾತ್ರವಲ್ಲದೆ ತೆಲುಗು ಸಾಹಿತ್ಯವೂ ಆಶ್ರಯ ಪಡೆಯಿತು. ಕನ್ನಡದ ಆದಿಮಹಾಕವಿಯಾದ ಪಂಪ ತೆಲುಗಿನಲ್ಲಿ ಜಿನೇಂದ್ರ ಪುರಾಣವನ್ನು ಬರೆದಿದ್ದಾನೆ ಎಂಬ ಒಂದು ಅಬಿsಪ್ರಾಯವಿದೆ. ಪೊನ್ನನೂ ತೆಲುಗಿನಲ್ಲಿ ಆದಿಪುರಾಣವನ್ನು ಬರೆದಿದ್ದಾನೆಂದು ಕೆಲವರ ಅಬಿsಪ್ರಾಯ. ಆದರೆ ಈ ಅಬಿsಪ್ರಾಯಗಳು ಸತ್ಯವಾದುವೆಂದು ಅಂಗೀಕರಿಸಲು ದೃಢ ಆಧಾರಗಳು ದೊರೆತಿಲ್ಲ.

ತೆಲುಗಿನ ಕವಿಯಾದ ಪಾಲ್ಕುರಿಕೆ ಸೋಮನಾಥನ ಜನ್ಮಸ್ಥಳದ ಬಗೆಗೆ ಬಿsನ್ನಾಬಿsಪ್ರಾಯ ಗಳಿದ್ದರೂ ಕೆಲವರ ಪ್ರಕಾರ ಈತ ಕನ್ನಡ ದೇಶದವನು. ಈತ ಅತ್ಯಂತ ವಿಶಿಷ್ಟವಾದ ತೆಲುಗುಕಾವ್ಯಗಳನ್ನು ಕರ್ನಾಟಕದಲ್ಲಿ ಸೃಷ್ಟಿಸಿದ್ದಾನೆ ಎಂದು ಹೇಳಬಹುದು. ಪ್ರೌಢದೇವರಾಯನ ಆಸ್ಥಾನದಲ್ಲಿ ಗೌಡ ಡಿಂಡಿಮಭಟ್ಟನನ್ನು ತನ್ನ ಪಾಂಡಿತ್ಯದಿಂದ ಸೋಲಿಸಿ ಶ್ರೀನಾಥನೆಂಬ ತೆಲುಗು ಕವಿ ಕನಕಾಬಿsಷೇಕ ಸನ್ಮಾನವನ್ನು ಪಡೆದನೆಂದು ತಿಳಿಯುತ್ತದೆ. ಈತ ಕನ್ನಡ ದೇಶದಲ್ಲೂ ಸಂಚಾರ ಮಾಡಿ ಸನ್ಮಾನಗಳನ್ನು ಪಡೆದನೆಂದು ತಿಳಿಯುತ್ತದೆ. ಕನ್ನಡ ಮತ್ತು ತೆಲುಗು ಭಾಷೆಗಳ ಬಾಂಧವ್ಯ ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ಉನ್ನತಮಟ್ಟಕ್ಕೆ ಏರಿತು. ಕೃಷ್ಣದೇವರಾಯನ ಆಸ್ಥಾನದಲ್ಲಿ ಅಷ್ಟದಿಗ್ಗಜಗಳೆಂಬ ಕವಿಗಳಿದ್ದರು. ಅವರಲ್ಲಿ ಬಹುಪಾಲು ತೆಲುಗು ಕವಿಗಳೇ ಆಗಿದ್ದರು. ಆ ಕಾಲದ ತೆಲುಗು ಕವಿಗಳಿಗೆ ಕನ್ನಡದ ಪರಿಚಯವೂ ಇತ್ತು. ಅವರಲ್ಲಿ ಒಬ್ಬನಾದ ನಂದಿತಿಮ್ಮನ ಎಂಬುವನು ಪಾರಿಜಾತಾಪಹರಣಮು ಎಂಬ ಕಾವ್ಯವನ್ನು ತೆಲುಗಿನಲ್ಲಿ ಬರೆದು ಕೃಷ್ಣದೇವರಾಯನಿಗೆ ಅರ್ಪಿಸಿದ. ಕೃಷ್ಣದೇವರಾಯನ ಆಶ್ರಯದಲ್ಲಿದ್ದ ತಿಮ್ಮಣ್ಣ ತನ್ನ ಭಾರತವನ್ನು ಬರೆಯುವಾಗ ತೆಲುಗಿನ ಮಹಾಕವಿ ತಿಕ್ಕನನನ್ನು (13ನೆಯ ಶತಮಾನ) ಅನುಸರಿಸಿದ್ದಾನೆ. ಕೃಷ್ಣದೇವರಾಯ ಕನ್ನಡ ರಾಜ್ಯ ರಮಾರಮಣನಾದರೂ ಸಾಹಿತ್ಯದ ಮಟ್ಟಿಗೆ ‘ಆಂಧ್ರಭೋಜ’ ಎನಿಸಿಕೊಂಡಿದ್ದಾನೆ. ಅಮುಕ್ತಮಾಲ್ಯದ ಎಂಬ ಹೆಸರಿನ ಉದ್ಗ್ರಂಥವೊಂದನ್ನು ಬರೆದು ಕೃಷ್ಣದೇವರಾಯ ತೆಲುಗು ಕವಿಗಳಿಗೆ ಸ್ಫೂರ್ತಿ ನೀಡಿದ್ದಾನೆ.

ತೆಲುಗು ಸಾಹಿತ್ಯ ಚರಿತ್ರೆಯಲ್ಲಿ ‘ಮೈಸೂರು ತೆಲುಗು’ ಸಾಹಿತ್ಯ ಒಂದು ಪ್ರಧಾನ ಘಟ್ಟ. ಈ ಕಾಲಾವಧಿಯಲ್ಲಿ (1700-50) ಕನ್ನಡ ದೇಶದಲ್ಲಿ ತೆಲುಗು ಕವಿಗಳೇ ಅಲ್ಲದೆ, ಕನ್ನಡಿಗರೂ ತೆಲುಗು ಕಾವ್ಯಗಳನ್ನು ರಚಿಸಿದ್ದಾರೆ. ಚಿಕ್ಕದೇವರಾಯನ ಕಾಲದಿಂದ ಮೈಸೂರು ತೆಲುಗು ಸಾಹಿತ್ಯ ಪ್ರಾರಂಭವಾದರೂ ಅದಕ್ಕಿಂತ ಮುಂಚೆಯೇ ಹೆಸರಿಸಬೇಕಾದ ಕೆಲವು ಕಾವ್ಯಗಳಿವೆ. ಬೆಂಗಳೂರು ನಿರ್ಮಾಪಕ ಹಿರಿಯ ಕೆಂಪೇಗೌಡ (1513-69) ತೆಲುಗಿನವನೆಂದು ಕೆಲವರ ಅಬಿsಪ್ರಾಯ. ಅವನ ಹೆಸರಿನಲ್ಲಿ ಗಂಗಾಗೌರೀ ವಿಲಾಸಮು ಎಂಬ ಒಂದು ತೆಲುಗು ಯಕ್ಷಗಾನವಿದೆ. ಇದನ್ನು ಕೆಲವರು ಕೆಂಪೇಗೌಡನ ಮೊಮ್ಮಗ ಬರೆದನೆಂದು ಅಬಿsಪ್ರಾಯಪಡುತ್ತಾರೆ. ಚನ್ನಪಟ್ಟಣದ ನಿರ್ಮಾಪಕನಾದ ಇಮ್ಮಡಿ ಜಗದೇವರಾಯ ತೆಲುಗಿನಲ್ಲಿ ಅಧ್ಯಾತ್ಮ ರಾಮಾಯಣವನ್ನು ಬರೆದಿದ್ದಾನೆಂದು ಅವನ ಆಸ್ಥಾನಕವಿಯಾಗಿದ್ದ ಪೊನ್ನತೋಟ ಔಬಲಕವಿ ತನ್ನ ವಾಮನಪುರಾಣದಲ್ಲಿ ಹೇಳಿದ್ದಾನೆ. ಸುಗುಟೂರಿನ ಮುಮ್ಮಡಿ ತಮ್ಮಭೂಪಾಲ (17ನೆಯ ಶತಮಾನ) ಸಂಸ್ಕೃತ ಕರ್ನಾಟ ಆಂಧ್ರ ಭಾಷೆಗಳಲ್ಲಿ ಪಂಡಿತನೆಂದೂ ತೆಲುಗಿನಲ್ಲಿ ಅವನು ರಾಜೇಂದ್ರಚೋಳ ಚರಿತ್ರ, ಕುಮಾರಾರ್ಜುನೀಯಮು, ಸೌಂದರೇಶ ಚರಿತ್ರ ಎಂಬ ಮೂರು ಗ್ರಂಥಗಳನ್ನು ಬರೆದಿರುವನೆಂದೂ ತಿಳಿಯುತ್ತದೆ.

ಚಿಕ್ಕದೇವರಾಯನ ಕಾಲದಿಂದ ಕರ್ನಾಟಕದಲ್ಲಿ ತೆಲುಗು ಭಾಷಾ ಸಾಹಿತ್ಯಗಳಿಗೆ ಸಾಕಷ್ಟು ಪ್ರಾಧಾನ್ಯತೆ ದೊರೆಯಿತು. ಚಿಕ್ಕದೇವರಾಯನ ಅಂಕಿತದಲ್ಲಿರುವ ಕೆಲವು ಪದಗಳ ಕರ್ತೃಗಳು ಯಾರೋ ತಿಳಿಯದು. ಚಿಕ್ಕದೇವರಾಯನ ಪುತ್ರ ಕಂಠೀರವ ನರಸರಾಜನ (1704-13) ಹೆಸರಿನಲ್ಲಿ ಅನೇಕ ತೆಲುಗು ಗ್ರಂಥಗಳಿವೆ. ಈ ಅರಸ ಸಂಸ್ಕೃತ, ಪ್ರಾಕೃತ, ಕರ್ನಾಟಕ, ಆಂಧ್ರ, ದ್ರಾವಿಡ ಭಾಷೆಗಳಲ್ಲಿ ಕವಿ, ಪಂಡಿತನೆಂದು ಹೇಳಲಾಗಿದೆ. ಇವನು ತೆಲುಗಿನಲ್ಲಿ ಆಂಧ್ರ ಕೊ¾ವಂಜಿ, ಪಂಚಾಯುಧ ಕಟ್ಲೆ, ಲಕ್ಷ್ಮೀವಿಲಾಸಮು, ಕಲವಾಣೀ ವಿಲಾಸಮು, ನಾಟ್ಯವಿದ್ಯಾವಿಲಾಸಮು, ವಸಂತೋತ್ಸವ ವಿಲಾಸಮು, ವಿಭಕ್ತಿ ಕಾಂತಾ ವಿಲಾಸಮು, ಅಷ್ಟದಿಕ್ಪಾಲಕ ವಿಲಾಸಮು, ಪಾವಕಿ ನಾಟಕಮು, ವೈವಸ್ವತ ನಾಟಕಮು, ನೈರುತಿ ನಾಟಕಮು, ವಾರುಣಿ ನಾಟಕಮು, ವಾಯವಿ ನಾಟಕಮು, ಕೌಬೇರಿ ನಾಟಕಮು ಎಂಬ ಗ್ರಂಥಗಳನ್ನು ರಚಿಸಿದ್ದಾನೆ.

ಕರ್ನಾಟಕದಲ್ಲಿ ಚಿಕ್ಕದೇವರಾಯನ ಕಾಲದಲ್ಲಿ ಹೆಸರಿಸಬೇಕಾದ ಇನ್ನೊಬ್ಬ ತೆಲುಗು ಕವಿ ಕಳಲೆ ವೀರರಾಜ. ಇವನು ಸೇನಾಪತಿಯಾಗಿದ್ದುದು ಮಾತ್ರವಲ್ಲದೆ ಬಹುಭಾಷಾ ಕೋವಿದನೂ ಸಾಹಿತ್ಯಜ್ಞನೂ ಆಗಿದ್ದ. ಈತ ಮಹಾಭಾರತವನ್ನು ತೆಲುಗು ವಚನರೂಪದಲ್ಲಿ ಬರೆದಿದ್ದಾನೆ. ಆದಿ, ಸಭಾ, ಭೀಷ್ಮಪರ್ವಗಳು ಮಾತ್ರ ಈಗ ಲಭ್ಯವಾಗಿವೆ. ಇವನ ಮಗ ನಂಜರಾಜನೂ (ಸು.1739-73) ತೆಲುಗಿನಲ್ಲಿ ಪಂಡಿತನಾಗಿದ್ದ. ಇವನು ತೆಲುಗಿನಲ್ಲಿ ಕಾಶೀಮಹಿಮಾರ್ಥ ದರ್ಪಣ, ಬ್ರಹ್ಮೋತ್ತರ ಖಂಡ, ಶಿವಭಕ್ತಿವಿಲಾಸ, ಗರಳಪುರಿ ಮಾಹಾತ್ಮ್ಯ, ಹಾಲಾಸ್ಯಮಾಹಾತ್ಮ್ಯ ಎಂಬ ಐದು ಕೃತಿಗಳನ್ನು ರಚಿಸಿದ್ದಾನೆ. ಇವೆಲ್ಲ ವಚನ ಗ್ರಂಥಗಳಾಗಿವೆ. ಇವನು ಪದ್ಯ ರಚನೆಯನ್ನು ಮಾಡಬಲ್ಲನೆಂಬುದಕ್ಕೆ ಪೀಠಿಕಾ ಪದ್ಯಗಳು, ಗ್ರಂಥಾಂತ್ಯ ಪದ್ಯಗಳು ಸಾಕ್ಷಿಯಾಗಿವೆ. ನಂಜರಾಜ ಕನ್ನಡದಲ್ಲೂ ಹಲವು ಗ್ರಂಥಗಳನ್ನು ಬರೆದಿದ್ದಾನೆ. ಮೂಕರಸು ಎಂದು ಖ್ಯಾತನಾಗಿದ್ದ ಕಂಠೀರವ ನರಸರಾಜ ಸ್ವತಃ ಕೆಲವು ತೆಲುಗು ಯಕ್ಷಗಾನಗಳನ್ನು ರಚಿಸಿದ್ದಾನೆ. ಮುಮ್ಮಡಿ ಕೃಷ್ಣರಾಜ ಒಡೆಯರ ಆಶ್ರಯದಲ್ಲಿದ್ದ ಕೋಲಾರ ಜಿಲ್ಲೆಯ ಕುಂದಲಕುರ್ತಿ ಚಂದ್ರಕವಿ ಎಂಬ ತೆಲುಗು ಕವಿ ನನ್ನಯ್ಯನ ‘ಆಂಧ್ರಶಬ್ದಚಿಂತಾಮಣಿ’ ಯನ್ನು ಕೃಷ್ಣಭೂಪಾಲೀಯಮು ಎಂಬ ಹೆಸರಿನಲ್ಲಿ ಕಾವ್ಯರೂಪದಲ್ಲಿ ರಚಿಸಿದಂತೆ ತಿಳಿಯುತ್ತದೆ.

ಕರ್ನಾಟಕದಲ್ಲಿ ತೆಲುಗು ಭಾಷಾ ಸಾಹಿತ್ಯಗಳಿಗೆ ಪ್ರೋತ್ಸಾಹ ದೊರೆಯುತ್ತಿರುವುದರ ಜೊತೆಗೆ ಸುಮಾರು ಸಾವಿರ ವರ್ಷಗಳಿಂದ ಬೆಳೆದು ಬರುತ್ತಿರುವ ಸಾಹಿತ್ಯ ಬಾಂಧವ್ಯವೂ ಗಮನಾರ್ಹವಾಗಿದೆ. ಪಂಪ, ಪೊನ್ನ ಮೊದಲಾದವರು ತೆಲುಗಿನೊಡನೆ ಅಷ್ಟೋ ಇಷ್ಟೋ ಸಂಬಂಧವಿದ್ದವರೆಂಬುದರಲ್ಲಿ ಸಂದೇಹವಿಲ್ಲ. ಪಂಪನ ತಮ್ಮನಾದ ಜಿನವಲ್ಲಭನ ಶಾಸನದಲ್ಲಿ ಕನ್ನಡ ಪದ್ಯಗಳ ಜೊತೆಯಲ್ಲಿ ತೆಲುಗು ಪದ್ಯಗಳೂ ಇರುವುದನ್ನು ಗಮನಿಸಬೇಕು. ಅವು ತೆಲುಗಿನಲ್ಲಿ ಲಭ್ಯವಾದ ಮೊದಲ ಕಂದಪದ್ಯಗಳೆಂಬುದೂ ಗಮನಾರ್ಹ ಸಂಗತಿಯಾಗಿದೆ. ಆಧುನಿಕ ಕಾಲದಲ್ಲಿ ಕರ್ನಾಟಕದ ಅನೇಕರು ತೆಲುಗು ಸಾಹಿತ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಉಲಚನಾಡು ವೆಂಕಟರಮಣಕವಿ 1850 ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲಿ ವಾಸಿಷ್ಠ ರಾಮಾಯಣಮು, ಅಧ್ಯಾತ್ಮ ರಾಮಾಯಣಮು ಎಂಬ ಎರಡು ಕಾವ್ಯಗಳನ್ನು ಬರೆದಿದ್ದಾನೆ. ನ್ಯಾಪತಿ ಲಕ್ಷ್ಮೀನರಸಿಂಹಕವಿಗಳು ತೆಲುಗು ಪದ್ಯಗಳನ್ನು ಬರೆಯುವ ಸಾಮಥರ್ಯ್‌ವುಳ್ಳವರಾಗಿದ್ದರು. ಸಾಧುಪಲ್ಲಿ ಚಂದ್ರಶೇಖರಶಾಸ್ತ್ರಿ (1890) ಅಮರುಕ ಕಾವ್ಯವನ್ನು ತೆಲುಗಿಗೆ ಅನುವಾದ ಮಾಡಿದ್ದಾರೆ.

ಇತ್ತೀಚಿನ ಕಾಲದಲ್ಲಿ ಆಲೂರು ರಾಮಕವಿ, ಜೋಳದರಾಶಿ ದೊಡ್ಡನಗೌಡ ಮೊದಲಾದವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲೂ ಕೃತಿಗಳನ್ನು ಬರೆದು ಕರ್ನಾಟಕದ ತೆಲುಗು ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಬೆಂಗಳೂರು, ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳು ತೆಲುಗು ಭಾಷಾಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತೆಲುಗಿನ ವೇಮನ ಕವಿಯ ಹೆಸರಿನಲ್ಲಿ ಪೀಠವೊಂದು ಸ್ಥಾಪನೆಯಾಗಿದೆ.

ತೆಲುಗಿನ ಆದಿಕವಿ ಎಂದು ಹೆಸರು ಪಡೆದಿರುವ ನನ್ನಯ (11ನೆಯ ಶತಮಾನ) ತನ್ನ ಆಂಧ್ರ ಮಹಾಭಾರತದಲ್ಲಿ ಪಂಪನನ್ನು ಅನುಸರಿಸಿದ್ದಾನೆಂಬುದು ಅನೇಕ ವಿದ್ವಾಂಸರ ಮಾತು. ನನ್ನಯನ ಸಹಾಧ್ಯಾಯಿ ನಾರಾಯಣಭಟ್ಟ ಕನ್ನಡದಲ್ಲಿಯೂ ಪಂಡಿತನಾಗಿದ್ದ. ತೆಲುಗಿನ ಶೈವಕವಿಗಳು ಕನ್ನಡದಿಂದ ಬಹಳಷ್ಟು ನೆರವು ಪಡೆದಿದ್ದಾರೆ. ಬಸವಣ್ಣ ಅವರಿಗೆ ಸ್ಫೂರ್ತಿಯ ನೆಲೆಯಾಗಿದ್ದ. ಪಾಲ್ಕುರಿಕೆ ಸೋಮನಾಥ ತೆಲುಗಿನ ಮಹಾಕವಿ ಯಾಗಿದ್ದು ಕನ್ನಡದಲ್ಲಿಯೂ ಗ್ರಂಥ ರಚನೆ ಮಾಡಿದ್ದಾನೆ. ತೆಲುಗು ಕವಿ ಮಲ್ಲಿಕಾರ್ಜುನ ಪಂಡಿತಾರಾಧ್ಯನ ಶಿವತತ್ತ್ವಸಾರಮು ಕನ್ನಡಕ್ಕೂ ಭಾಷಾಂತರವಾಗಿದೆ. ತೆಲುಗಿನ ಮತ್ತೊಬ್ಬ ಶೈವಕವಿಯಾಗಿದ್ದ ನನ್ನೆಚೋಡದೇವ ಕನ್ನಡದ ಅನೇಕ ಕಾವ್ಯ ಸಂಪ್ರದಾಯಗಳನ್ನು ಅನುಸರಿಸಿದ್ದಾನೆ. ಪಾಲ್ಕುರಿಕೆ ಸೋಮನಾಥನ ಬಸವಪುರಾಣ ಭೀಮಕವಿಯಿಂದ ಕನ್ನಡಕ್ಕೆ ರೂಪಾಂತರವಾಗಿದೆ. ಪಾಲ್ಕುರಿಕೆ ಸೋಮನಾಥನದೇ ಆದ ಪಂಡಿತಾರಾಧ್ಯ ಚರಿತ್ರೆಯನ್ನು ನೀಲಕಂಠಾಚಾರ್ಯ ಕನ್ನಡಿಸಿದ್ದಾನೆ. ಕನ್ನಡದಲ್ಲಿ ವೀರಶೈವ ತತ್ತ್ವವನ್ನು ವಿವರಿಸುವ ಕೆರೆಯ ಪದ್ಮರಸನ ದೀP್ಷÁಬೋಧೆಯನ್ನು ಪಿಡುಪರ್ತಿ ಬಸವನ ಎಂಬ ತೆಲುಗು ಕವಿ ಆಂದ್ರೀಕರಿಸಿದ್ದಾನೆ. ಚಾಮರಸನ ಪ್ರಭುಲಿಂಗಲೀಲೆ ಪಿಡುಪರ್ತಿ ಸೋಮನಾಥ ಕವಿಯಿಂದ ತೆಲುಗಿಗೆ ಭಾಷಾಂತರವಾಗಿದೆ. ಸರ್ವಜ್ಞ ಮತ್ತು ವೇಮನರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿದೆ. ಸರ್ವಜ್ಞ ವೇಮನ ಸಂವಾದ ಎಂಬ ಪುಸ್ತಕವೊಂದು ಪ್ರಕಟವಾಗಿದೆ. ಅದರಲ್ಲಿ ಸಮಾನ ಭಾವವಿರುವ ನೂರಾರು ಪದ್ಯಗಳಿವೆ. ಈ ಇಬ್ಬರು ಸಂತಕವಿಗಳು ಒಂದೇ ಕಾಲದವರೆಂದಾಗಲಿ, ಒಬ್ಬರನ್ನೊಬ್ಬರು ಅನುಸರಿಸಿದರೆಂದಾಗಲೀ ಹೇಳಲು ಆಧಾರಗಳಿಲ್ಲದಿದ್ದರೂ ಇಬ್ಬರೂ ಪ್ರಾಯಶಃ ಸಮಾನದೃಷ್ಟಿಯಿಂದ ತಮ್ಮ ಪದ್ಯಗಳಲ್ಲಿ ಕೆಲವನ್ನಾದರೂ ಬರೆದಿದ್ದಾರೆಂಬುದು ಖಚಿತ.

ಈ ಎರಡು ಭಾಷೆಗಳ ಲಿಪಿಯಲ್ಲಿ ಅತ್ಯಂತ ನಿಕಟವಾದ ಸಂಬಂಧವಿದೆ. ಇವುಗಳಿಗೆ ಏಕಲಿಪಿಯನ್ನು ರೂಪಿಸುವ ಪ್ರಯತ್ನಗಳೂ ನಡೆದಿವೆ. ಕನ್ನಡ ತೆಲುಗುಗಳೆರಡೂ ಸಂಸ್ಕೃತ ಭಾಷಾಸಂಪ್ರದಾಯಗಳನ್ನು ಬಹುಮಟ್ಟಿಗೆ ಸ್ವೀಕರಿಸಿರುವುದರಿಂದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಅನೇಕ ಸಾಮ್ಯಗಳು ಕಂಡುಬರುತ್ತವೆ. ಪದನಿರ್ಮಾಣ, ವಾಕ್ಯನಿರ್ಮಾಣದಿಂದ ಹಿಡಿದು ಕಾವ್ಯರಚನಾ ಸಂಪ್ರದಾಯಗಳವರೆಗೂ ಈ ಎರಡು ಭಾಷೆಗಳ ನಡುವೆ ಬಾಂಧವ್ಯ ಕಂಡುಬರುತ್ತದೆ. ಕೇತನ ಎಂಬ ತೆಲುಗು ವ್ಯಾಕರಣಕಾರ ಆಂಧ್ರ ಭಾಷಾಭೂಷಣವನ್ನು ಬರೆಯುವಾಗ ನಾಗವರ್ಮನ ಕರ್ಣಾಟಕ ಭಾಷಾಭೂಷಣ ಅವನಿಗೆ ನೆರವು ನೀಡಿತು. ಛಂದಸ್ಸಿನಲ್ಲಿ ಈ ಎರಡು ಭಾಷೆಗಳಿಗೂ ಇರುವ ಹೋಲಿಕೆ ಬಹಳ ಹತ್ತಿರವಾದುದು. ಸಂಸ್ಕೃತ ವೃತ್ತಗಳನ್ನು ಕನ್ನಡದವರು ತೆಗೆದುಕೊಂಡಿರುವಂತೆಯೇ ತೆಲುಗರೂ ತೆಗೆದುಕೊಂಡಿದ್ದಾರೆ. ಅಂಶಗಣಗಳಲ್ಲಿ ಕನ್ನಡ ತೆಲುಗುಗಳಿಗೆ ಹತ್ತಿರದ ಸಂಬಂಧವಿದೆ. ಅನೇಕ ಛಂದೋಗ್ರಂಥಗಳು ಪರಸ್ಪರ ಪ್ರಭಾವಕ್ಕೆ ಒಳಗಾಗಿವೆ. ಕನ್ನಡದಲ್ಲಿ ಅತ್ಯಂತ ಪ್ರಚುರವಾಗಿದ್ದ ಚಂಪುಕಾವ್ಯ ತೆಲುಗಿನಲ್ಲಿಯೂ ಇನ್ನೂ ಹೆಚ್ಚಾಗಿ ಬಳಕೆಯಲ್ಲಿದೆ. ಹೀಗೆ ಈ ಒಂದೇ ಕುಟುಂಬದ ಎರಡು ಭಾಷೆಗಳೂ ತೌಲನಿಕ ಅಧ್ಯಯನಕ್ಕೆ ವಿಷಯವನ್ನು ವಿಸ್ತಾರವಾಗಿ ಒದಗಿಸುವಂಥವಾಗಿವೆ.

20ನೆಯ ಶತಮಾನದ ಪ್ರಾರಂಭಕಾಲದಿಂದಲೇ ಕನ್ನಡದ ಹಲವು ಕೃತಿಗಳು ತೆಲುಗಿಗೆ ಮತ್ತು ತೆಲುಗಿನ ಕೃತಿಗಳು ಕನ್ನಡಕ್ಕೆ ಭಾಷಾಂತರಗೊಂಡಿವೆ. ಕನ್ನಡದ ಮಾಸ್ತಿ, ಡಿವಿಜಿ, ದೇವುಡು, ಶಿವರಾಮ ಕಾರಂತ, ತ್ರಿವೇಣಿ, ಯು.ಆರ್. ಅನಂತಮೂರ್ತಿ, ಆಲನಹಳ್ಳಿ ಕೃಷ್ಣ, ಪುರ್ಣಚಂದ್ರ ತೇಜಸ್ವಿ ಮೊದಲಾದವರ ಕೃತಿಗಳು ತೆಲುಗಿಗೆ ಭಾಷಾಂತರಗೊಂಡು ಪ್ರಕಟವಾಗಿವೆ. ತೆಲುಗಿನ ಕಂದುಕೂರಿ ವೀರೇಶಲಿಂಗಂ, ಗುರಜಾಡ ಅಪ್ಪಾರಾವ್, ವಿಶ್ವನಾಥ ಸತ್ಯನಾರಾಯಣ, ಚಲಂ, ಶ್ರೀ.ಶ್ರೀ., ಸಿ. ನಾರಾಯಣರೆಡ್ಡಿ, ದಿಗಂಬರ ಕವಿಗಳು, ಯಂಡಮೂರಿ ವೀರೇಂದ್ರನಾಥ್ ಮೊದಲಾದವರ ರಚನೆಗಳು ಕನ್ನಡಕ್ಕೆ ಭಾಷಾಂತರಗೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನÀಡ ಸಾಹಿತ್ಯ ಪರಿಷತ್ತು, ಕನ್ನಡ ವಿಶ್ವವಿದ್ಯಾಲಯ, ಎಂ.ಶೇಷಾಚಲಂ ಅಂಡ್ ಕಂಪನಿ ಮುಂತಾದ ಸಂಸ್ಥೆಗಳು ಇಂಥ ಕೃತಿಗಳ ಪ್ರಕಟಣೆಯನ್ನು ಕೈಗೊಂಡು ಎರಡು ಭಾಷೆಗಳ ನಡುವಿನ ಸಾಹಿತ್ಯ ಬಾಂಧವ್ಯವನ್ನು ಬೆಳೆಸಲು ನೆರವಾಗಿವೆ. (ಆರ್.ವಿ.ಎಸ್.ಎಸ್.)

ಹಿಂದೀ[ಬದಲಾಯಿಸಿ]

ಆಧುನಿಕ ಯುಗದಲ್ಲಿ ಹಿಂದೀ ಭಾಷೆಯನ್ನು ಅಖಿಲ ಭಾರತ ಮಟ್ಟದಲ್ಲಿ ನೆಲೆಗೊಳಿಸಲು ಹಾಗೂ ಹಿಂದೀಯನ್ನು ಇಡೀ ರಾಷ್ಟ್ರದ ವಾಣಿಯಾಗಿ ಪ್ರಚುರಪಡಿಸಲು ಮಹಾತ್ಮ ಗಾಂಧೀಜಿಯವರು ಹಿಂದೀಯನ್ನು ಒಂದು ಆಂದೋಲನದಂತೆ ತಮ್ಮ ಕೈಗೆತ್ತಿಕೊಂಡರು. ಗಾಂಧೀಜಿ ತಮ್ಮ ಸಮಗ್ರ ಭಾರತ ಯಾತ್ರೆಯ ಸಂದರ್ಭದಲ್ಲಿ ಭಾರತದಂಥ ಬಹುಭಾಷೀಯ ಹಾಗೂ ಬಹು ಸಂಸ್ಕೃತಿಗಳ ದೇಶದಲ್ಲಿ ಭಾವೈಕ್ಯತೆ ಮತ್ತು ವಿಬಿsನ್ನ ಭಾಷೀಯರ ನಡುವೆ ಸಂವಾದಗಳನ್ನು ಏರ್ಪಡಿಸಲು ಸಾಧ್ಯವಾಗುವುದು ಹಿಂದೀಯಿಂದ ಮಾತ್ರವೆಂದು ಭಾವಿಸಿದ್ದರು. ಹೀಗಾಗಿ ದೇಶದ ಪ್ರಾಂತೀಯ ಭಾಷೆಗಳ ವಿಕಾಸಕ್ಕೆ ಪುರ್ಣ ಒತ್ತು ಕೊಟ್ಟು, ಇಂಗ್ಲಿಷ್ನ ಸ್ಥಾನದಲ್ಲಿ ಹಿಂದೀಯನ್ನು, ವ್ಯಾಪಕವಾಗಿ ಉಪಯೋಗಿಸಲು ಕಳಕಳಿ ಹಾಗೂ ಒತ್ತಾಸೆಯಿಂದ ಜನರಲ್ಲಿ ನಿವೇದಿಸಿಕೊಂಡರು.

ಗಾಂಧೀಜಿ ತಮ್ಮ ರಚನಾತ್ಮಕ ಕಾರ್ಯಗಳಲ್ಲಿ ಹಿಂದೀ ಪ್ರಚಾರ ಕಾರ್ಯವನ್ನೂ ಒಂದೆಂದು ಸ್ವೀಕರಿಸಿ ಇದರ ವ್ಯಾಪಕ ಪ್ರಯೋಗಕ್ಕೆ ನಾಂದಿ ಹಾಡಿದರು. ಇಂದೂರಿನಲ್ಲಿ 1918ರಲ್ಲಿ ನಡೆದ ಹಿಂದೀ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ, ಅವರ ಉದ್ಭೋದಕ ವಿಚಾರಗಳನ್ನೊಳಗೊಂಡ ಭಾಷಣ ದೇಶದ ಏಕತೆಗೆ ಹಿಂದೀಯನ್ನು ಒಂದು ಪ್ರಬಲ ಶಕ್ತಿಯನ್ನಾಗಿ ಪ್ರತಿಪಾದಿಸುವಲ್ಲಿ ಯಶಸ್ವಿಯಾಯಿತು. ಅವರ ಪ್ರೇರಣೆ ಮತ್ತು ಪ್ರಭಾವದಿಂದಾಗಿ 1918 ಮಾರ್ಚ್ 30ರಂದು ಹಿಂದೀ ಸಾಹಿತ್ಯ ಸಮ್ಮೇಳನ ದಕ್ಷಿಣದ ಹಿಂದೀಯೇತರ ಪ್ರದೇಶಗಳಲ್ಲಿ ಹಿಂದೀ ಪ್ರಚಾರಕ್ಕಾಗಿ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾವನ್ನು ಸ್ಥಾಪಿಸಬೇಕೆಂಬ ನಿರ್ಣಯವನು‹ ಅಂಗೀಕರಿಸಿತು. ಅದೇ ವರ್ಷ ಮದರಾಸಿನಲ್ಲಿ ಸ್ಥಾಪಿತವಾದ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ ದಕ್ಷಿಣದ ಎಲ್ಲ ಭಾಷಾ ಪ್ರದೇಶಗಳ ಮಾತೃ ಸಂಸ್ಥೆಯಾಗಿ ಕಾರ್ಯರ್ನಿಹಿಸುತ್ತ ಬಂದಿದೆ.

ಹಿಂದೀಯನ್ನು ಕುರಿತ ಗಾಂಧೀಜಿಯವರ ವಿಚಾರಗಳು ಕರ್ನಾಟಕದ ಅಂದಿನ ಯುವಕರನ್ನು ಎಷ್ಟರ ಮಟ್ಟಿಗೆ ಆಕರ್ಷಿಸಿದವೆಂದರೆ ಕರ್ನಾಟಕದ ಉದ್ದಗಲಕ್ಕೂ ಹಿಂದಿ ಪ್ರಚಾರಕರು ಹಿಂದೀಯನ್ನು ಭಾವೈಕ್ಯತೆಯನ್ನು ಸಾಧಿಸುವ ಅನನ್ಯ ಶಕ್ತಿಯೆಂದು ಪರಿಭಾವಿಸಿ ಸಮರ್ಪಣ ಭಾವನೆಯಿಂದ ಹಿಂದೀ ಕಲಿತರು. ಕಲಿತ ಹಿಂದೀಯನ್ನು ಸಹಸ್ರಾರು ಮಂದಿಗೆ ಕಲಿಸಿದರು. ಮದರಾಸಿನ ಸಭಾದ ವಿವಿಧ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದರ ಮೂಲಕ ಅಧಿಕೃತ ಪ್ರಮಾಣ ಪತ್ರಗಳನ್ನು ಪಡೆಯುವಂತೆ ಪ್ರೋತ್ಸಾಹಿಸಿದರು. ಮದರಾಸು ಸಭಾವನ್ನು ಕಟ್ಟಿ ಬೆಳೆಸಲು ಉತ್ತರದಿಂದ ಬಂದ ಭಾಷಾಪ್ರಚಾರಕರಲ್ಲಿ ಗಾಂಧೀಜಿಯವರ ಪುತ್ರ ದೇವದಾಸ್ ಗಾಂಧೀ, ಸ್ವಾಮಿ ಸತ್ಯದೇವ ಪರಿವ್ರಾಜಕ, ಪ್ರತಾಪ್ ನಾರಾಯಣ್, ವಾಜಪೇಯಿ, ಹೃಷಿಕೇಶ್ ಶರ್ಮರಂಥವರು ಉಲ್ಲೇಖನೀಯರಾಗಿದ್ದಾರೆ. ಹಿಂದೀ ಪ್ರಚಾರಕ್ಕೆ ಇವರೆಲ್ಲ ಹಾಕಿದ ಭದ್ರ ಬುನಾದಿಯ ಮೇಲೆ ದಕ್ಷಿಣದ ರಾಜ್ಯಗಳಲ್ಲಿ ಹಿಂದೀ ವಿಕಾಸಗೊಂಡಿದೆ.

ಕರ್ನಾಟಕದಲ್ಲಿ ಹಿಂದೀ ಪ್ರಚಾರಾಂದೋಲನದ ಮೂಲಕೇಂದ್ರ ಮದರಾಸಿನ ಸಭಾವೇ ಆಗಿದೆ. 1925ರಲ್ಲಿ ಶಿವರಾಮಶಾಸ್ತ್ರಿ, ಟಿ.ಕೃಷ್ಣಸ್ವಾಮಿ, ಜಮುನಾ ಪ್ರಸಾದ್, ಸಿದ್ಧನಾಥಪಂತ್, ಸಿದ್ಧಗೋಪಾಲ್ ಮೊದಲಾದವರು ಕರ್ನಾಟಕದ ನಾನಾ ಭಾಗಗಳಲ್ಲಿ ಹಿಂದೀ ಪ್ರಚಾರ ಕಾರ್ಯವನ್ನು ಆರಂಬಿsಸಿದರು. ಮುಂದೆ 1927ರಲ್ಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಿದ್ದಾಗ ಬೆಂಗಳೂರಿನಲ್ಲಿ ಹಿಂದೀ ಪ್ರಚಾರಕರ ಸಮಾವೇಶ ನಡೆದು ಇದರ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿದ್ದರು. ಸಮಾವೇಶವನು‹ ಪಂಡಿತ ಮದನ ಮೋಹನ ಮಾಳವೀಯರು ಉದ್ಘಾಟಿಸಿದರು. ಈ ಅಧಿವೇಶನದಲ್ಲಿ ಗಾಂಧೀಜಿಯವರ ಭಾಷಾ ವಿಷಯಕ ವಿಚಾರಗಳು ಪ್ರಚಾರಕರ ಉತ್ಸಾಹವನ್ನು ಇಮ್ಮಡಿಗೊಳಿಸಿದವು. ಈ ಹಿಂದೆಯೇ ಉಲ್ಲೇಖಿಸಿದ ವ್ಯಕ್ತಿಗಳ ಜೊತೆಗೆ ವೆಂಕಟಾಚಲಶರ್ಮಾ, ಟಿ.ಕೆ.ಸುಬ್ಬರಾವ್, ಎಂ.ವಿ.ಜಂಬುನಾಥನ್, ವೆಂಕಟಾಚಲಯ್ಯ, ರಾಘವಾಚಾರ್ಯ, ಡಿ.ಕೆ.ಭಾರದ್ವಾಜ್, ಎ.ಟಿ.ಶ್ರೀನಿವಾಸ ರಾಘವಾಚಾರ್ಯ ಮೊದಲಾದವರು ಕರ್ನಾಟಕದಲ್ಲಿ ಮೊದಲ ಪೀಳಿಗೆಯ ಹಿಂದೀ ಕಾರ್ಯಕರ್ತರಾಗಿ ದುಡಿದರು. ಈ ಸಂದರ್ಭದಲ್ಲಿ ಉಲ್ಲೇಖಿಸಲೇಬೇಕಾದ ಅಂಶವೆಂದರೆ ಹಿಂದೀ ಪ್ರಚಾರಕರಷ್ಟೇ ಅಲ್ಲ, ಸಾರ್ವಜನಿಕ ಬದುಕಿನ ಗಣ್ಯ ವ್ಯಕ್ತಿಗಳಾದ ಎನ್.ಎಸ್.ಹರ್ಡೀಕರ್, ಗಂಗಾಧರ್ರಾವ್ ದೇಶಪಾಂಡೆ, ತಾತಯ್ಯ ಎಂದೇ ಪ್ರಸಿದ್ಧರಾದ ಮೈಸೂರಿನ ವೆಂಕಟಕೃಷ್ಣಯ್ಯ, ಬೆಂಗಳೂರಿನ ಕೆ.ಪಿ.ಪುಟ್ಟಣ್ಣಚೆಟ್ಟಿ, ಸಿ.ಬಿ.ರಾಮರಾವ್, ಸಂಪದ್ಗಿರಿರಾವ್ ಮೊದಲಾದವರು ರಾಷ್ಟ್ರೀಯ ಬದುಕಿನಲ್ಲಿ ಹಿಂದಿನ ಮಹತ್ತ್ವವನ್ನು ಮನಗಂಡು ಹಿಂದೀಯ ಪ್ರಚಾರ ಕಾರ್ಯಕ್ಕೆ ಬೆಂಗಾವಲಾಗಿ ನಿಂತರು. ಈ ಪರಂಪರೆಯಲ್ಲಿ ಇಂದಿಗೂ ಅನೇಕ ಮಹನೀಯರು ಹಿಂದೀ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಹಿಂದೀ ಪ್ರಚಾರ ಕಾರ್ಯದಲ್ಲಿ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ತೊಡಗಿಕೊಂಡಲ್ಲಿ ಹಿಂದೀ ಪ್ರಚಾರಕ್ಕೆ ತೀವ್ರತೆ ಮತ್ತು ಗತಿಶೀಲತೆ ಬರುವುದೆಂದು ಗಾಂಧೀಜಿ ಹೇಳಿದ್ದರು. ಗಾಂಧೀಜಿಯವರ ಆಶಯದಂತೆ ಕರ್ನಾಟಕದ ಮಹಿಳೆಯರು ಹಿಂದೀ ಪ್ರಚಾರದ ಮೂಲಕ ಸಮಾಜದಲ್ಲಿ ರಾಷ್ಟ್ರೀಯ ಜಾಗೃತಿಯನ್ನು ಹುರಿದುಂಬಿಸುವಲ್ಲಿ ನೆರವಾದರು. ಕರ್ನಾಟಕದಲ್ಲಿ ಹಿಂದೀ ಪ್ರಚಾರಾಂದೋಲನದ ಆರಂಭದ ವರ್ಷಗಳಲ್ಲಿ ಕೆಲಸ ಮಾಡಿದ ಸುಶೀಲಾ ಬಾಯಿ, ರುಕ್ಮಿಣಿದೇವಿ, ಕಾಮಾಕ್ಷಿದೇವಿ, ಉಮಾಬಾಯಿ ಕುಂದಾಪುರಕರ್, ಇಂದಿರಾ ಕೃಷ್ಣಮೂರ್ತಿ ಮೊದಲಾದವರ ಸೇವೆ ಉಲ್ಲೇಖನೀಯವಾದುದು.

ಈ ಅವಧಿಯಲ್ಲಿಯೇ ಕರ್ನಾಟಕದ ಯುವಕರು ಹಿಂದೀ ಸಾಹಿತ್ಯದಲ್ಲಿ ಉಚ್ಚ ಶಿಕ್ಷಣ ಪಡೆಯಲು ಉತ್ತರ ಭಾರತದ ವಿಶ್ವವಿದ್ಯಾಲಯಗಳಿಗೆ ಹೋದದ್ದು ಮಹತ್ತ್ವದ ಸಂಗತಿಯಾಗಿದೆ. ನಾ.ನಾಗಪ್ಪ, ಹಿರಣ್ಮಯ, ಮೇ.ರಾಜೇಶ್ವರಯ್ಯ - ಇವರು ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ಹಿಂದಿ ಎಂ.ಎ. ಪದವಿ ಪಡೆದರು. ನಾ.ನಾಗಪ್ಪನವರು ಆಗ ದಕ್ಷಿಣ ಭಾರತದಲ್ಲಿ ಹಿಂದಿ ಎಂ.ಎ. ಮಾಡಿದ ಮೊದಲ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಹಿರಣ್ಮಯ ಅವರು ಹಜಾರಿ ಪ್ರಸಾದ ದ್ವಿವೇದಿಯವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದ ಕರ್ನಾಟಕದ ಮೊದಲ ವಿದ್ಯಾರ್ಥಿ ಎಂಬ ಗೌರವಕ್ಕೆ ಪಾತ್ರರಾದರು.

ಹಿಂದೀ ಸಾಹಿತ್ಯದತ್ತ ಜನರ ಚಿತ್ತವನ್ನು ಸೆಳೆಯಲು ಅಂದಿನ ಹಿರಿಯರು ಸೃಜನಾತ್ಮಕ ಹಾಗೂ ರಚನಾತ್ಮಕವಾದ ಎಷ್ಟೋ ಪ್ರಯೋಗಗಳನ್ನು ನಡೆಸಿದರು. ಬಹುಭಾಷಾವಿದರೂ ಪ್ರಸಿದ್ಧ ವೈದ್ಯರೂ ಆಗಿದ್ದ ಪಂಡಿತ ತಾರಾನಾಥರು ಹಿಂದೀ ಪ್ರೇಮಿಗಳೂ ಲೇಖಕರೂ ಆಗಿದ್ದರು. ಇವರು ಸ್ವಾತಂತ್ರ್ಯ ಪುರ್ವದ ದಿನಗಳಲ್ಲಿ ಕನ್ನಡ ಲಿಪಿಯಲ್ಲಿ ಬರೆದ ದೀನಬಂಧು ಕಬೀರ್ ಎಂಬ ಹಿಂದೀ ನಾಟಕವನ್ನು ಬೆಂಗಳೂರಿನಲ್ಲಿ ಗಾಂಧೀಜಿಯವರ ಸಮ್ಮುಖದಲ್ಲಿ ಅಬಿsನಯಿಸಿದಾಗ ಅವರು ತುಂಬಾ ಪ್ರಭಾವಿತರಾದರು. ಅಂತೆಯೇ ಪಂಡಿತ ತಾರಾನಾಥರ ಈ ಪ್ರಯತ್ನವನ್ನು ಶ್ಲಾಘಿಸಿದರು. ಈ ನಿಟ್ಟಿನಲ್ಲಿ ಹಿಂದೀಯ ಪ್ರಸಿದ್ಧ ನಾಟಕಗಳಾದ ಮೇವಾಡ್ ಪತನ್, ವೀರ್ ಅಬಿsಮನ್ಯು ಮುಂತಾದ ಹಿಂದೀ ನಾಟಕಗಳನ್ನು ಮೈಸೂರು, ಬೆಂಗಳೂರು, ಮದರಾಸು ಮುಂತಾದ ಸ್ಥಳಗಳಲ್ಲಿ ಅಬಿsನಯಿಸುವಲ್ಲಿ ಆಕಾಶವಾಣಿಯ ನಟೇಶ್ ಮೊದಲಿಯಾರ್, ಚಲನಚಿತ್ರ ಸಾಹಿತಿ ಚಿ.ಸದಾಶಿವಯ್ಯ ಹಾಗೂ ಸಿ.ಕೆ.ನಾಗರಾಜರಾವ್ ಮೊದಲಾದವರು ಅನನ್ಯ ಸಹಕಾರ ನೀಡಿದರು. ಜೊತೆಗೆ ಹಿಂದೀ ಕಲಿಯುವವರ ಅನುಕೂಲಕ್ಕಾಗಿ ಅನಿವಾರ್ಯವಾಗಿ ಬೇಕಾದ ಪುಸ್ತಕಗಳ ರಚನೆಯಾದದ್ದು ಮಹತ್ತ್ವದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಪಂಡಿತ ಸಿದ್ಧನಾಥ ಪಂತರ ಹಿಂದೀ - ಕನ್ನಡ ಸ್ವಯಂಬೋಧಿನಿ, ಜಂಬುನಾಥನ್ರ ಹಿಂದೀ ವ್ಯಾಕರಣ, ಹಿಂದೀ - ಕನ್ನಡ ಶಬ್ದಕೋಶ ಮುಂತಾದ ಇತರೆ ಉಪಯೋಗಿ ಕೃತಿಗಳು, ಡಿ.ಕೆ.ಭಾರದ್ವಾಜರ ಹಿಂದೀ ಪ್ರಚಾರಕ್ಕೆ ಪುರಕವಾದ ಗ್ರಂಥಗಳನ್ನು ಇಲ್ಲಿ ನೆನೆಯಬಹುದು.

1935-47ರ ಮಧ್ಯೆ ಕರ್ನಾಟಕದಲ್ಲಿ ಹಿಂದೀ ಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಬೆಂಗಳೂರ್ ಹಿಂದೀ ಪ್ರಚಾರಕ್ ಗಿಲ್ಡ್‌, ಹಿಂದೀ ಪ್ರಚಾರ್ ಸಮ್ಮೇಲನ ಸ್ಥಾಯಿ ಸಮಿತಿ ಹಾಗೂ ಹಿಂದೀ ಸಾಹಿತ್ಯ ಪರಿಷತ್ಗಳು ಕ್ರಿಯಾಶೀಲವಾಗಿದ್ದುವು. ಜೊತೆಗೆ ಕರ್ನಾಟಕದಲ್ಲಿನ ಹಿಂದೀ ಪ್ರೇಮಿಗಳು ಈ ರಾಜ್ಯದಲ್ಲಿ ಹಿಂದೀ ಪ್ರಚಾರವನ್ನು ಸಂಘಟನಾತ್ಮಕವಾಗಿ ಮಾಡಲು ಒಂದು ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದರು. 1936ರಲ್ಲಿ ಕರ್ನಾಟಕ ಪ್ರಾಂತೀಯ ಹಿಂದೀ ಪ್ರಚಾರ ಸಭಾ ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಆರಂಬಿsಸಿದರು. ಮೊದಲ ಹಂತದಲ್ಲಿ ಕೆ.ಪಿ.ಪುಟ್ಟಣಚೆಟ್ಟಿಯವರು ಗೌರವಾಧ್ಯಕ್ಷರಾಗಿ, ಸಿ.ಬಿ.ರಾಮರಾವ್ ಅವರು ಅಧ್ಯಕ್ಷರಾಗಿ, ಕೆ.ಸಂಪದ್ಗಿರಿರಾವ್, ನಾರಾಯಣ್ನಾಯಕ್ ಮತ್ತು ಸಿದ್ಧನಾಥ ಪಂತ್ರು ಕೋಶಾಧ್ಯಕ್ಷರೂ ಸಂಚಾಲಕರೂ ಆಗಿ ಆಯ್ಕೆಯಾದರು. 1937ರಲ್ಲಿ ಈ ಸಭಾವನ್ನು ಧಾರವಾಡಕ್ಕೆ ವರ್ಗಾಯಿಸಲಾಯಿತು. ಸು. 70 ವರ್ಷಗಳಿಂದ ಈ ಪ್ರಾಂತೀಯ ಸಭಾ ಹಿಂದೀ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಮಧ್ಯೆ ಇದು ಕರ್ನಾಟಕದ ಸ್ವತಂತ್ರ ಸಂಸ್ಥೆಯೋ ಅಥವಾ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭೆಯ ಅಂಗಸಂಸ್ಥೆಯೋ ಎಂಬ ವಿವಾದ ತಲೆಎತ್ತಿ ಈಗ ಇದು ಮದರಾಸು ಸಭಾದ ಅಂಗಸಂಸ್ಥೆಯೆಂದೇ ತೀರ್ಮಾನವಾಗಿದೆ.

ಕರ್ನಾಟಕದ ಪ್ರಾಂತೀಯ ಹಿಂದೀ ಪ್ರಚಾರ ಸಭಾದ (1936) ಸ್ಥಾಪನೆಯೊಂದಿಗೆ ಕರ್ನಾಟಕದಲ್ಲಿ ಹಿಂದೀ ಪ್ರಚಾರ-ಪ್ರಸಾರಕ್ಕೆ ಹೊಸ ಆಯಾಮಗಳು ತೆರೆದುಕೊಂಡವು. ಅಂದಿನ ಅನುಭವಿ ಪ್ರಚಾರಕ ಕಾರ್ಯಕರ್ತರು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸಿದರು. ಇವೆಂದರೆ ಮೈಸೂರು ರಿಯಾಸತ್ ಹಿಂದೀ ಪ್ರಚಾರ್ ಸಮಿತಿ (1938), ಮೈಸೂರು ಹಿಂದಿ ಪ್ರಚಾರ್ ಪರಿಷದ್ (1942), ಕರ್ನಾಟಕ ಮಹಿಳಾ ಹಿಂದೀ ಸೇವಾ ಸಮಿತಿ (1943). ಗುಲ್ಬರ್ಗಾದಲ್ಲಿ ಸಹ ಹಿಂದೀ ಪ್ರಚಾರ ಸಮಿತಿ ಆರಂಭವಾಗಿದೆ. ಹೀಗೆ ಈ ಐದು ಸಂಸ್ಥೆಗಳು ಇಡೀ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ನಿರಂತರವಾಗಿ ಹಿಂದೀ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ.

ಕರ್ನಾಟಕದಲ್ಲಿ ಹಿಂದೀಯನ್ನು ಶಾಲಾ ಮಟ್ಟದಲ್ಲಿ ಕಲಿಸಲು ಅವಕಾಶ ಕಲ್ಪಿಸಿಕೊಡುವುದರ ಮೂಲಕ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆ ಹಿಂದೀ ಭಾಷೆ ಮತ್ತು ಸಾಹಿತ್ಯ ಪ್ರಸಾರ ಕಾರ್ಯದಲ್ಲಿ ಅತ್ಯಮೂಲ್ಯ ಕೊಡುಗೆಯನ್ನಿತ್ತಿದೆ. 1930ರಲ್ಲಿ ಹಿಂದೀ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಪ್ರವೇಶಿಸಿತು. ಆ ದಿನಗಳಲ್ಲಿ ಶಾಲಾ ಹಂತದಲ್ಲಿ ಸ್ವಂತ ಅಭ್ಯಾಸ ಮಾಡಿ ಪರೀಕ್ಷೆಗಳನ್ನು ಬರೆಯುವ ಅವಕಾಶವಿತ್ತು. ಆದರೆ ಆರಂಭದ ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ದ್ವಿತೀಯ ಭಾಷೆಯ ರೂಪದಲ್ಲಿ ಹಿಂದೀಯನ್ನು ಅಭ್ಯಾಸ ಮಾಡಲು ಅನುಕೂಲ ಕಲ್ಪಿಸಲಾಯಿತು. ಈ ಅನುಕೂಲ ಬಹಳ ದಿನಗಳ ಕಾಲ ಇರಲಿಲ್ಲ. ಹಿಂದೀಯಿಂದ ಮಾತೃಭಾಷೆಯ ಅಧ್ಯಯನಕ್ಕೆ ಧಕ್ಕೆಯಾಗಬಹುದೆಂಬ ಆತಂಕದಿಂದ ಹಿಂದೀಯನ್ನು ಐಚ್ಫಿಕ ವಿಷಯದ ಪಟ್ಟಿಗೆ ಸೇರಿಸಲಾಯಿತು. 1935ರಲ್ಲಿ ಮಾಧ್ಯಮಿಕ ಶಾಲಾ ಹಂತದಲ್ಲಿ ಹಿಂದೀಕಲಿಸುವಿಕೆಗೆ ವ್ಯವಸ್ಥೆ ಮಾಡಲಾಯಿತು. ಕಾಲ ಬದಲಾದಂತೆ ಹಿಂದೀಯ ಬಗೆಗಿನ ಸರ್ಕಾರದ ದೃಷ್ಟಿಯೂ ಬದಲಾಗುತ್ತ ಬಂದು 1946ರಲ್ಲಿ ಹಿಂದೀಯನ್ನು ಪ್ರೌಢಶಾಲಾ ಹಂತದಲ್ಲಿ ಅನಿವಾರ್ಯ ವಿಷಯವನ್ನಾಗಿ ಮಾಡಿದರಾದರೂ ಪರೀಕ್ಷೆಯ ವಿಷಯವನ್ನಾಗಿ ಮಾಡಲಿಲ್ಲ. 1955ರಲ್ಲಿ ಹಿಂದಿ ವಿದ್ವಾನ್ ಕೋರ್ಸ್ನ್ನು ಸರ್ಕಾರ ಮೈಸೂರಿನಲ್ಲಿ ಆರಂಬಿsಸಿತು. ಈ ಕೋರ್ಸ್ ನಾಲ್ಕು ವರ್ಷಗಳ ಅವಧಿಯದಾಗಿದ್ದು ಹಿಂದೀಯಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಉತ್ತಮ ಪಠ್ಯಕ್ರಮವನ್ನು ಹೊಂದಿತ್ತು. ಈಚಿನ ವಿಷಯಗಳಲ್ಲಿ ಈ ಕೋರ್ಸನ್ನು ಸರ್ಕಾರ ಸ್ಥಗಿತಗೊಳಿಸಿತು. ಇದೇ ರೀತಿಯಾಗಿ ಹಿಂದೀ ಶಿಕ್ಷಕರ ಟ್ರೈನಿಂಗ್ ಕಾಲೇಜನ್ನು ಸಹ ಸರ್ಕಾರ ಮೊದಲ ಹಂತದಲ್ಲಿ ಮೈಸೂರಿನಲ್ಲಿ ಸ್ಥಾಪಿಸಿ, ಅನಂತರದ ವರ್ಷಗಳಲ್ಲಿ ಗುಲ್ಬರ್ಗಾ ಮತ್ತು ಬಾಗಲಕೋಟೆಗಳಲ್ಲೂ ಈ ಬಗೆಯ ಕಾಲೇಜುಗಳನ್ನು ಸ್ಥಾಪಿಸಿ ಸಾವಿರಾರು ಹಿಂದೀ ಶಿಕ್ಷಕರಿಗೆ ತರಬೇತನ್ನು ನೀಡಿತು. ಈಗ ಈ ಮೂರೂ ಕಾಲೇಜುಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ಕರ್ನಾಟಕದಲ್ಲಿ ಈಚಿನ ವರ್ಷಗಳಲ್ಲಿ ಸಮಿತಿ ಸಭಾಗಳು ಸರ್ಕಾರದ ಅನುಮತಿ ಮಾನ್ಯತೆ ಪಡೆದು ತರಬೇತಿ ಕಾಲೇಜುಗಳನ್ನು ನಡೆಸುತ್ತಿವೆ.

ಕರ್ನಾಟಕ ಸರ್ಕಾರ 1959ರಲ್ಲಿ ಹಿಂದೀ ಪ್ರಚಾರ-ಪ್ರಸಾರದಲ್ಲಿ ತೀವ್ರತೆಯನ್ನು ತರಲು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಹಿಂದೀ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಿತು. ಈ ವಿಭಾಗ ಕರ್ನಾಟಕದಲ್ಲಿ ಹಿಂದೀ ಶಿಕ್ಷಣದ ಸರ್ವತೋಮುಖ ಪ್ರಗತಿಗೆ ಆರಂಭದ ವರ್ಷಗಳಲ್ಲಿ ನೀಡಿರುವ ಯೋಜನೆಗಳು ಮಹತ್ತ್ವದ್ದಾಗಿವೆ. ಕರ್ನಾಟಕದ ಹಿಂದೀ ಲೇಖಕರನ್ನು ಹಾಗೂ ಅನುವಾದಕರನ್ನು ಪ್ರೋತ್ಸಾಹಿಸಲು ರೂಪಿಸಿದ್ದ ಬಹುಮಾನ ಯೋಜನೆ ಈಚಿನ ವರ್ಷಗಳಲ್ಲಿ ಸ್ಥಗಿತಗೊಂಡಿದೆ.

ಕರ್ನಾಟಕದಲ್ಲಿ ಹಿಂದೀ ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಮತ್ತು ಅಧ್ಯಾಪನಕ್ಕೆ ಹೊಸ ಆಯಾಮ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೀ ಪ್ರವೇಶದ ಐತಿಹಾಸಿಕ ಘಟನೆಯಿಂದ ಆರಂಭವಾಗುತ್ತದೆ. ಸಿ.ವೈ. ಚಿಂತಾಮಣಿಯವರು 1937ರಲ್ಲಿ ಹಿಂದೀಗೆ ವಿಶ್ವವಿದ್ಯಾನಿಲಯದಲ್ಲಿ ಸ್ಥಾನ ಸಿಗಬೇಕೆಂದು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ 1938ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೀಯ ಪ್ರವೇಶ ದೊರೆಯಿತು. ವಿಶ್ವವಿದ್ಯಾನಿಲಯದಲ್ಲಿ ಮೊದಲ ಹಿಂದೀ ಅಧ್ಯಾಪಕರಾಗಿ ಸೇವೆ ಆರಂಬಿsಸಿದ ನಾ.ನಾಗಪ್ಪನವರು ಹಿಂದೀ ಶಿಕ್ಷಣವನ್ನು ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಂತದಲ್ಲಿ ಪ್ರಾರಂಬಿsಸಲು ಕಾರಣಪುರುಷರಾದರು. 1959ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೀ ಎಂ.ಎ. ತರಗತಿಗಳು ಆರಂಭವಾದವು. ಮುಂದೆ 1981ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಮೂಲಕ ಹಿಂದೀ ಎಂ.ಎ. ತರಗತಿಗಳನ್ನು ಆರಂಬಿsಸಿತು. ಮೇ. ರಾಜೇಶ್ವರಯ್ಯನವರ ನೇತೃತ್ವದಲ್ಲಿ ಆರಂಭಗೊಂಡ ಹಿಂದೀ ಎಂ.ಎ., ಕೋರ್ಸ್ ಇಡೀ ದೇಶದಲ್ಲೇ ಜನಪ್ರಿಯವಾಯಿತು. ಹಿಂದೀ ಭಾಷೀಯ ರಾಜ್ಯಗಳ ವಿದ್ಯಾರ್ಥಿಗಳೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೀ ಕಲಿಯಲು ಬಂದದ್ದು ಒಂದು ದಾಖಲೆಯೆಂದೇ ಹೇಳಬೇಕು. ಕರ್ನಾಟಕದಲ್ಲಿ ಇತರ ವಿಶ್ವವಿದ್ಯಾಲಯಗಳು ಸ್ಥಾಪಿತಗೊಂಡಾಗ ಅಲ್ಲೂ ಹಿಂದೀ ವಿಭಾಗಗಳು ಆರಂಭವಾದುವು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1971ರಲ್ಲಿ ಗುಲ್ಬರ್ಗಾದ ಹಿಂದೀ ಸ್ನಾತಕೋತ್ತರ ಕೇಂದ್ರ (1976) (ಮುಂದೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಈ ಕೇಂದ್ರ ಸ್ವತಂತ್ರ ವಿಭಾಗವಾಗಿ ಕಾರ್ಯ ನಿರ್ವಹಿಸಲಾರಂಬಿsಸಿತು), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 1972ರಲ್ಲಿ, ಈಚೆಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಹಿಂದೀ ಸ್ನಾತಕೋತ್ತರ ವಿಭಾಗಗಳು ಪ್ರಾರಂಭಗೊಂಡು ಕಾರ್ಯನಿರತವಾಗಿವೆ. ಇಲ್ಲೆಲ್ಲ ಹಿಂದೀಯಲ್ಲಿ ಸ್ನಾತಕೋತ್ತರ ಶಿಕ್ಷಣ ಹಾಗೂ ಸಂಶೋಧನೆಗಳು ಯಶಸ್ವಿಯಾಗಿ ಸಾಗಿವೆ. ಈ ಮಧ್ಯೆ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ ಧಾರವಾಡದಲ್ಲಿ ಸ್ನಾತಕೋತ್ತರ ಹಿಂದೀ ಶಿಕ್ಷಣವನ್ನು ಆರಂಬಿsಸಿದ್ದು ಇಲ್ಲೂ ಹಿಂದೀಯಲ್ಲಿ ಸಂಶೋಧನೆ ನಡೆಯುತ್ತಿದೆ. ಹೀಗೆ ಕರ್ನಾಟಕದಲ್ಲಿನ ಸಂಶೋಧನೆಗಳು ವಿಶ್ವವಿದ್ಯಾಲಯಗಳಲ್ಲಿ ಹಿಂದೀಗೆ ಸಾಕಷ್ಟು ಪ್ರಮಾಣದಲ್ಲಿ ಉತ್ತೇಜನ ನೀಡಿವೆ. ವಿಶ್ವವಿದ್ಯಾಲಯಗಳ ಹಂತದಲ್ಲಿ ಹಿಂದೀಯನ್ನು ಪ್ರತಿಷ್ಠಾಪಿಸುವುದರಲ್ಲಿ ನಾಗಪ್ಪ, ಮೇ. ರಾಜೇಶ್ವರಯ್ಯ, ರಾಧಾಕೃಷ್ಣ ಮೊದಲಿಯಾರ್, ಹಿರಣ್ಮಯ, ಶಂಕರರಾವ್ ಕೊಪ್ಪೀಕೇರಿ, ಸರಗೂ ಕೃಷ್ಣಮೂರ್ತಿ ಮೊದಲಾದವರ ಕೊಡುಗೆ ಮಹತ್ತ್ವದ್ದಾಗಿದೆ.

ಕರ್ನಾಟಕ ಹಿಂದೀಯೇತರ ಭಾಷಿಕ ರಾಜ್ಯವಾದರೂ ಇಲ್ಲಿ ಹಿಂದೀ ಭಾಷೆಯಲ್ಲಿ ಮೌಲಿಕ ಸಾಹಿತ್ಯವನ್ನು ಸೃಜಿಸಿರುವ ಒಂದು ಪರಂಪರೆಯನ್ನೇ ಕಾಣಬಹುದು. ದಖನೀ ಭಾಷೆ ಗುಲಬರ್ಗ, ಬೀದರ್ ಹಾಗೂ ಬಿಜಾಪುರಗಳಲ್ಲಿ ಮುಸ್ಲಿಂ ದೊರೆಗಳ ಕಾಲದಲ್ಲಿ ಬಳಕೆಯಲ್ಲಿದ್ದು ವಿಪುಲವಾಗಿ ಸಾಹಿತ್ಯ ಸೃಷ್ಟಿಯಾಯಿತು.

ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಹಿಂದೀಯಲ್ಲಿ ಸೃಜನಾತ್ಮಕ ಬರೆವಣಿಗೆ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಹಿಂದೀಯನ್ನು ಕಲಿತ ಕನ್ನಡಿಗರು ಆ ಭಾಷೆಯಲ್ಲಿ ಅಬಿsವ್ಯಕ್ತಿ ಮಾಡುವಷ್ಟು ಪ್ರೌಢಿಮೆಯನ್ನು ಸಾಧಿಸಿದ್ದು ಹೆಮ್ಮೆಯ ವಿಷಯವೇ ಸರಿ. ಕರ್ನಾಟಕದ ಹಿಂದೀ ಕವಿಗಳಲ್ಲಿ ಮುಖ್ಯರಾದವರೆಂದರೆ ಸರಗೂ ಕೃಷ್ಣಮೂರ್ತಿ, ಅಪ್ಪಾಸಾಹೇಬ್ (ಶೈಲ್), ಸಿದ್ಧಲಿಂಗಪಟ್ಟಣಶೆಟ್ಟಿ (ಸಾಗರ್), ಕೆ.ಹನುಮಂತರಾವ್ (ರವಿ), ವಜ್ರಮಟ್ಟಿ (ಮೇಘಮಿತ್ರ್‌), ಟಿ.ಜಿ.ಪ್ರಭಾಶಂಕರ್ (ಪ್ರೇಮಿ). ಕರ್ನಾಟಕದ ಹಿಂದಿ ಕಾದಂಬರಿಕಾರರಲ್ಲಿ ಮ.ಸು.ಕೃಷ್ಣಮೂರ್ತಿ ಅವರ ಕೊಡುಗೆ ದೊಡ್ಡದು. ಇವರು ಹಿಂದಿಯಲ್ಲಿ ನಾಲ್ಕು ಕಾದಂಬರಿಗಳನ್ನು (ಅಪರಾಜಿತ್, ರಾಗ್ ಕಾನಡಾ, ಪರಶುರಾಮ್, ಕೀ ಬಹನೇಂ ಹಾಗೂ ಜ್ಯೋತಿಕಳಶ್) ಪ್ರಕಟಿಸಿ ಮನ್ನಣೆಗಳಿಸಿದ್ದಾರೆ. ಚಂದ್ರಕಾಂತ ಕುಸನೂರ್, ಅಪ್ಪಾ ಸಾಹೇಬ್, ಮ.ಸು.ಕೃಷ್ಣಮೂರ್ತಿ, ಕೇಶವ ಮಳಗಾಂವಕರ್ ಹಿಂದಿ ಕಥಾಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಹಿಂದಿ ನಾಟಕ ಕ್ಷೇತ್ರದಲ್ಲಿ ಜಿ.ಜೆ.ಹರಿಜಿತ್ ವಿಶೇಷ ಉಲ್ಲೇಖಕ್ಕೆ ಅರ್ಹರಾಗಿದ್ದಾರೆ. ಅನೇಕ ಏಕಾಂಕಗಳನ್ನೂ ನಾಟಕಗಳನ್ನೂ ಪ್ರಕಟಿಸಿ ಹಿಂದೀ ಭಾಷೀಯರ ಮೆಚ್ಚುಗೆ ಹಾಗೂ ಪ್ರಶಂಸೆಯನ್ನು ಪಡೆದಿರುವ ಇವರ ಹುಮಾಯೂನ್, ಸಂಭವಾಮಿ ಯುಗೇ ಯುಗೆ, ಉತ್ತರ ಮೃಚ್ಫಕಟಿಕ, ಯೂನಿವರ್ಸಿಟಿ ನಾಟಕಗಳು ಉಲ್ಲೇಖಯೋಗ್ಯ ವಾಗಿವೆ. ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಇತರರೆಂದರೆ ಪಂಡಿತ ತಾರಾನಾಥ್, ಎಂ.ವಿ.ಜಂಬುನಾಥನ್, ಆರ್.ಸಿ.ಭೂಸನೂರ್ಮಠ, ಚಂದ್ರಕಾಂತ ಕುಸನೂರ್, ಎನ್.ಎಸ್.ದಕ್ಷಿಣಾಮೂರ್ತಿ ಮುಖ್ಯರಾಗಿದ್ದಾರೆ. ಲಲಿತ ಪ್ರಬಂಧದ ಕ್ಷೇತ್ರದಲ್ಲಿ ಸರೋಜಿನಿ ಮಹಿಷಿಯವರು ಪ್ರಕಟಿಸಿರುವ ಅತಿಥಿ ಸತ್ಕಾರ್ ಹಾಗೂ ಯೇ ಹಮಾರೇ ಸಂಗ್ರಹಗಳು, ನಾ.ನಾಗಪ್ಪನವರ ಬುವಾಜಿ ಸಂಗ್ರಹದ ಬರೆಹಗಳು ಗಮನ ಸೆಳೆಯುತ್ತವೆ.

ವ್ಯಾಕರಣ-ಶಬ್ದಕೋಶರಚನಾ ಕ್ಷೇತ್ರದಲ್ಲಿ ಕರ್ನಾಟಕದ ವಿದ್ವಾಂಸರು ಮಾಡಿರುವ ಕೆಲಸ ಬೆರಗುಗೊಳಿಸುವಂಥಾದ್ದಾಗಿದೆ. ಎಂ.ವಿ.ಜಂಬುನಾಥನ್ರ ಹಿಂದೀ-ಕನ್ನಡ ಕೋಶ, ಉರ್ದು-ಹಿಂದೀ ಕೋಶ, ಹಿಂದೀ ಮುಹಾವರಾ ಕೋಶ್, ಸರಳ ಹಿಂದೀ ವ್ಯಾಕರಣ, ಗುರುನಾಥ್ ಜೋಶಿಯವರ ಕನ್ನಡ-ಹಿಂದೀ ಕೋಶ, ಮೈಸಾಳೆಯವರ ಕನ್ನಡ-ಹಿಂದೀ ಕೋಶ, ದಕ್ಷಿಣಾಮೂರ್ತಿಯವರ ಕನ್ನಡ-ಹಿಂದೀ ಕೋಶ, ನಾಗಪ್ಪನವರ ಅಬಿsನವ್ ಹಿಂದೀ ವ್ಯಾಕರಣ ಇತ್ಯಾದಿ ಗ್ರಂಥಗಳು ಉಲ್ಲೇಖಾರ್ಹವಾಗಿವೆ.

ಕರ್ನಾಟಕದಲ್ಲಿ ಹಿಂದೀ ಪತ್ರಿಕೆಗಳು ಹಿಂದೀ ಪ್ರಚಾರ ಸಭಾ ಸಮಿತಿಗಳ ಮೂಲಕ ಪ್ರಕಟವಾಗುತ್ತಿದ್ದು ಇವು ಆಯಾಯ ಸಂಸ್ಥೆಗಳ ಚಟುವಟಿಕೆಗಳನ್ನೂ ಪರೀಕ್ಷೋಪಯೋಗಿ ಲೇಖನಗಳನ್ನೂ ಪ್ರಕಟಿಸುವ ವೇದಿಕೆಗಳಾಗಿದ್ದರೂ ಕರ್ನಾಟಕದ ಹಿಂದೀ ಲೇಖಕರನ್ನು ಪ್ರೋತ್ಸಾಹಿಸುತ್ತಲೂ ಬಂದಿವೆ. ಭಾರತ್ವಾಣಿ, ಹಿಂದೀ ಪ್ರಚಾರ ಪತ್ರಿಕಾ, ಹಿಂದೀ ಪ್ರಚಾರ ವಾಣಿ, ಭಾಷಾ ಪೀಯೂಷ್-ಇವು ಕರ್ನಾಟಕದ ಪ್ರಮುಖ ಹಿಂದೀ ಪತ್ರಿಕೆಗಳಾಗಿವೆ. ಮೈಸೂರು ವಿಶ್ವವಿದ್ಯಾನಿಲಯದ ಹಿಂದೀ ವಿಭಾಗದಿಂದ ಪ್ರಕಟವಾಗಿರುವ ಮಾನಸಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಹಿಂದೀ ವಿಭಾಗದಿಂದ ಪ್ರಕಟವಾಗಿರುವ ‘ಕುಂತಲ್ ಭಾರತಿ’ಯ ಕೆಲವು ಸಂಚಿಕೆಗಳು ವಿದ್ವತ್ಪೂರ್ಣವಾಗಿವೆ. ಈಚಿನ ವರ್ಷಗಳಲ್ಲಿ ಇವುಗಳ ಪ್ರಕಟಣೆ ನಿಂತಿದೆ. ವಿಮರ್ಶೆ ಮತ್ತು ಸಂಶೋಧನ ಕ್ಷೇತ್ರಗಳಲ್ಲಿಯೂ ಕರ್ನಾಟಕ ಹಿಂದೀ ಲೇಖಕರ ಕೊಡುಗೆ ಗಣನೀಯವಾಗಿದೆ. ಕರ್ನಾಟಕದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿರುವ ಹಿಂದೀ ಅಧ್ಯಯನ ವಿಭಾಗಗಳು ಅನೇಕ ಸಂಶೋಧನ ಕಾರ್ಯವನ್ನು ನಡೆಸುತ್ತಿವೆ.

ಕರ್ನಾಟಕದಲ್ಲಿ ಕನ್ನಡ ಮತ್ತು ಹಿಂದೀ ಭಾಷೆಗಳ ಮಧ್ಯೆ ಆಗಿರುವ ಅನುವಾದಕಾರ್ಯ ಸಮೃದ್ಧವಾಗಿದೆ. ಅದರಲ್ಲೂ ಹಿಂದೀಯಿಂದ ಕನ್ನಡಕ್ಕೆ ನೂರಾರು ಕೃತಿಗಳು ಅನುವಾದವಾಗಿದ್ದು ಕನ್ನಡವನ್ನು ಇವು ಪುಷ್ಟಿಗೊಳಿಸಿವೆ. ಪ್ರಾಚೀನ ಹಿಂದೀ ಸಾಹಿತ್ಯದ ಪ್ರಮುಖ ಕೃತಿಗಳ ಅನುವಾದಗಳಿಂದ ಈಚಿನವರೆಗೆ ಬಹುತೇಕ ಎಲ್ಲ ಪ್ರಮುಖರ ಕೃತಿಗಳು ಕನ್ನಡದಲ್ಲಿ ಬಂದಿವೆ. ಹಿಂದೀಯಿಂದ ಕನ್ನಡಕ್ಕೆ ಅನುವಾದಿಸಿದವರ ಹಾಗೂ ಅನುವಾದಿಸುತ್ತಿರುವವರ ಸಂಖ್ಯೆ ಅಪಾರವಾದುದು. ಪ್ರಾತಿನಿಧಿಕವಾಗಿ ಹೇಳುವುದಾದರೆ ಡಿ.ಕೆ.ಭಾರದ್ವಾಜ, ಗುರುನಾಥ ಜೋಶಿ, ಎಂ.ಎಸ್.ಕೃಷ್ಣ ಮೂರ್ತಿ, ಪ್ರತಾಪ್ ಸುಧಾಕರ್, ಪ್ರಧಾನ್ ಗುರುದತ್ತ, ಸಿದ್ಧಲಿಂಗ ಪಟ್ಟಣಶೆಟ್ಟಿ, ಎಚ್.ಎಸ್.ಪಾರ್ವತಿ, ಎಚ್.ವಿ.ರಾಮಚಂದ್ರರಾವ್, ಎಂ.ವಿ.ನಾರಾಯಣರಾವ್, ತಿಪ್ಪೇಸ್ವಾಮಿ, ಕುಮುದಪ್ರಿಯ, ಬಿ.ನಂ.ಚಂದ್ರಯ್ಯ, ಎಸ್.ಎಂ.ರಾಮಚಂದ್ರ ಸ್ವಾಮಿ, ಪಿ.ವಿ.ನಂಜರಾಜ ಅರಸು, ತೇಜಸ್ವಿ ಕಟ್ಟೀಮನಿ, ಭಾಸ್ಕರ್ ಮಯ್ಯ, ಡಿ.ಎನ್.ಶ್ರೀನಾಥ್, ಕಾಶೀನಾಥ್ ಅಂಬಲಗೆ, ಪಂಚಾಕ್ಷರಿ ಹಿರೇಮಠ್, ಶಶಿಕಲಾ ಸುಬ್ಬಣ್ಣ ಗಮನಾರ್ಹ ಕನ್ನಡ ಅನುವಾದಗಳನ್ನು ಮಾಡಿದ್ದಾರೆ.

ಕನ್ನಡದಿಂದ ಹಿಂದೀಗೆ ಅನುವಾದಿಸುತ್ತಿರುವವರ ಹಾಗೂ ಅನುವಾದಿಸಿರುವವರ ಪಟ್ಟಿಯೂ ದೊಡ್ಡದೇ. ಆದರೆ ಕನ್ನಡದಿಂದ ಹಿಂದೀಗೆ ಅನುವಾದಗೊಂಡಿರುವ ಕೃತಿಗಳ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಕನ್ನಡದಿಂದ ಹಿಂದೀಗೆ ಅನುವಾದಿಸಿ ಕನ್ನಡ ಸಾಹಿತ್ಯ - ಸಂಸ್ಕೃತಿಯ ನಿಜವಾದ ರಾಯಭಾರಿಯಾಗಿದ್ದ ಪ್ರಮುಖ ಅನುವಾದಕರೆಂದರೆ ಬಿ.ಆರ್.ನಾರಾಯಣ್, ಇವರು ಕನ್ನಡದ ನಲ್ವತ್ತಕ್ಕೂ ಹೆಚ್ಚು ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಕನ್ನಡದಿಂದ ಹಿಂದೀಗೆ ಅನುವಾದ ಮಾಡಿರುವ ಇತರೆ ಕೆಲವು ಪ್ರಮುಖ ಅನುವಾದಕರೆಂದರೆ ಬಾಲಚಂದ್ರ ಜಯಶೆಟ್ಟಿ, ವಾಸು, ಬಿ.ಪುತ್ರನ್, ಬಾಬುರಾವ್ ಕುಮಠೇಕರ್, ಚಂದ್ರಕಾಂತ ಕುಸನೂರ, ಎಸ್.ಎಂ.ರಾಮಚಂದ್ರಸ್ವಾಮಿ, ಬಿ.ವಿ.ಕಾರಂತ, ಎಸ್.ರಾಮಚಂದ್ರ, ತಿಪ್ಪೇಸ್ವಾಮಿ, ಹಿರಣ್ಣಯ್ಯ, ರಸಿಕಪುತ್ತಿಗೆ, ಎಂ.ರಾಜೇಶ್ವರಯ್ಯ, ಆರಂ.ಸಿ.ಭೂಸನೂರಮಠ, ನಂದಿನಿ ಗುಂಡೂರಾವ್, ಬಿ.ವೈ.ಲಲಿತಾಂಬ, ಪ್ರಧಾನ ಗುರುದತ್ತ, ಎಂ.ಎಸ್.ಕೃಷ್ಣಮೂರ್ತಿ, ಸರೋಜಿನಿ ಮಹಿಷಿ, ಡಿ.ಎನ್.ಶ್ರೀನಾಥ್, ಟಿ.ಆರ್.ಭಟ್, ಜಿ.ಎಂ.ಉಮಾಪತಿ ಶಾಸ್ತ್ರಿ ಮೊದಲಾದವರು. ಪ್ರಧಾನ ಗುರುದತ್ತ ಅವರು ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ಹಿಂದೀಗೆ ಅನುವಾದಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್‌ ಮುಂತಾದ ಸಂಸ್ಥೆಗಳು ಈಚಿನ ವರ್ಷಗಳಲ್ಲಿ ಅನುವಾದಗಳನ್ನು ಪ್ರಕಟಿಸುವುದರಲ್ಲಿ ಅಪಾರ ಆಸಕ್ತಿಯನ್ನು ತೋರುತ್ತಿವೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉತ್ತರ ಪ್ರದೇಶ ಸರ್ಕಾರ ಸ್ಥಾಪಿಸಿರುವ ದತ್ತಿ ನಿಧಿಯಿಂದ ಹಿಂದೀ ಮತ್ತು ಕನ್ನಡ ಅನುವಾದಗಳನ್ನು ಪ್ರಕಟಿಸುತ್ತಿರುವುದು ವಿಶೇಷವಾಗಿ ನಮೂದಿಸಬೇಕಾಗಿರುವ ಅಂಶವಾಗಿದೆ. (ಟಿ.)

ಮರಾಠಿ[ಬದಲಾಯಿಸಿ]

ಭೌಗೋಳಿಕವಾಗಿ ನೆರೆಯ ರಾಜ್ಯಗಳಾಗಿರುವ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಸಾಮರಸ್ಯ ಶತಮಾನಗಳಿಂದ ಕ್ರಮವಾಗಿ ನಡೆದುಕೊಂಡು ಬಂದಿದೆ. ಮಹಾರಾಷ್ಟ್ರದ ಬಹುಭಾಗ ಕವಿರಾಜಮಾರ್ಗದ ಕಾಲಕ್ಕೆ ಕರ್ನಾಟಕದಲ್ಲಿ ಐಕ್ಯವಾಗಿತ್ತೆಂದು ತಿಳಿಯುತ್ತದೆ. ಮಹಾರಾಷ್ಟ್ರದಲ್ಲಿ ಇಂದಿಗೂ ಇರುವ ಕೆಲವು ಊರುಗಳ ಹೆಸರುಗಳು ಕನ್ನಡ ಹೆಸರಿನ ರೂಪಾಂತರವಾಗಿವೆ ಎಂದು ಕೆಲವು ವಿದ್ವಾಂಸರು ಅಬಿsಪ್ರಾಯಪಟ್ಟಿದ್ದಾರೆ. ಉದಾಹರಣೆಗೆ: ಖಾಂಡಿವ್ಲಿ (<ಖಂಡವಳ್ಳಿ), ಬೋರಿವ್ಲಿ (<ಬೋರಿಹಳ್ಳಿ), ಲೋಣಾವ್ಳಾ (<ಲೋಳವಳ್ಳಿ), ಮಲವ್ಳಿ (<ಮಳವಳ್ಳಿ), ಮಲಪಹಳ್ಳಿ, ಪುನಾ (<ಪುಣಕ), ಪಲಟನ್ (<ಪಳೆಯಠಾಣ), ಮೀರಜ್ (<ಮಿರಿಂಜೆ), ಕುರಂದವಾಡ್ (<ಕುಡಲದಾಮವಾಡ) ಇತ್ಯಾದಿ. ಸಿದ್ಧರಾಮನ ಸೊನ್ನಲಪುರ, ಬಿಜ್ಜಳನ ಮಂಗಳವೇಡ, ಅಕ್ಕಲಕೋಟೆ ಮುಂತಾದ ಊರುಗಳೂ ಮಹಾರಾಷ್ಟ್ರದಲ್ಲಿಯೇ ಉಳಿದಿವೆ. ಕನ್ನಡ ಎನ್ನುವ ಹೆಸರಿನ ಒಂದು ತಾಲ್ಲೂಕು ಇಂದಿಗೂ ಔರಂಗಾಬಾದ್ ಜಿಲ್ಲೆಯಲ್ಲಿ ಗೋದಾವರಿಯ ಆಚೆಗಿದೆ.

ವಿಜಯನಗರದ ಪತನಾನಂತರ ಮಹಮ್ಮದೀಯರ ದಕ್ಷಿಣ ಭಾರತ ದಾಳಿಯ ಜೊತೆ ಜೊತೆಯಲ್ಲಿಯೇ ಮಹಾರಾಷ್ಟ್ರೀಯರು ಇನ್ನೂ ದಕ್ಷಿಣವನ್ನು ಆಕ್ರಮಿಸತೊಡಗಿದರು. ಬೆಂಗಳೂರು ಜಹಗೀರಿಯಾಗಿ ದೊರೆತಮೇಲಂತೂ ಶಿವಾಜಿಯ ತಂದೆ ಶಹಾಜಿ ಕೋಲಾರ ಮತ್ತು ದೊಡ್ಡಬಳ್ಳಾಪುರಗಳಲ್ಲಿ ನಿಂತು ಪ್ರಾಬಲ್ಯ ಹೊಂದಿ ಮರಾಠಿ ಭಾಷೆ, ಕಂದಾಯ ಪದ್ಧತಿ ಮತ್ತು ಲೆಕ್ಕಪತ್ರಗಳ ರೀತಿಯನ್ನು ಕರ್ನಾಟಕದಲ್ಲಿ ಅಳವಡಿಸಿದನೆಂದು ತಿಳಿಯುತ್ತದೆ. (ನೋಡಿ: ಮರಾಠರ ಆಳಿಕೆ). ಸು. 1640ರಲ್ಲಿ ಶಿವಾಜಿ ಬೆಂಗಳೂರಿನಲ್ಲಿಯೇ ನೆಲಸಿದ್ದ. ಇಂದಿಗೂ ಶಹಾಜಿಯ ಸಮಾಧಿ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿದೆ ಎನ್ನಲಾಗಿದೆ. ಮುಗಲ್ ಚಕ್ರವರ್ತಿ ಔರಂಗಜೇಬನ ಬೆದರಿಕೆಯನ್ನು ಅಲಕ್ಷಿಸಿ ಶಿವಾಜಿಯ ಮಗ ರಾಜಾರಾಮನಿಗೆ ಕೆಳದಿಯ ಚೆನ್ನಮ್ಮ ರಕ್ಷಣೆಯನ್ನು ಒದಗಿಸಿದಳು. ಪೇಶ್ವೆಗಳ ಆಡಳಿತ ಬಂದಮೇಲೆಯೂ ಕರ್ನಾಟಕದ ಮೇಲೆ ಮರಾಠಿಯ ಪ್ರಭಾವ ಗಾಢವಾಗಿಯೇ ಇದ್ದಿತು. ಬ್ರಿಟಿಷರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ ಮೇಲೆ ಸ್ವಉಪಯೋಗಕ್ಕಾಗಿ ಕರ್ನಾಟಕದ ಹಲವು ಭಾಗಗಳನ್ನು ಮುಂಬಯಿ ಪ್ರಾಂತಕ್ಕೆ ಸೇರಿಸಿದರು.

ಕರ್ನಾಟಕದಲ್ಲಿ ಮರಾಠಿ ಜನರೂ ಮಹಾರಾಷ್ಟ್ರದಲ್ಲಿ ಕನ್ನಡಿಗರೂ ರಾಜನೀತಿಕ ಸಾಮಾಜಿಕ ಸಾಂಸ್ಕೃತಿಕ ಹೀಗೆ ಒಂದಲ್ಲ ಒಂದು ಕಾರಣಕ್ಕಾಗಿ ನೆಲಸಿದ್ದಾರೆ. ಸಿಂಪಿಗ ವೃತ್ತಿಯನ್ನು ಜೀವನವನ್ನಾಗಿ ಮಾಡಿಕೊಂಡ ಮರಾಠಿ ಮನೆಮಾತಿನ ಜನ ಕರ್ನಾಟಕದ ಹಳ್ಳಿಗಳಲ್ಲಿ ನೆಲಸಿದ್ದಾರೆ. ವ್ಯಾವಹಾರಿಕವಾಗಿ ಅವರು ಕನ್ನಡವನ್ನು ಹೊರಗೆ ಬಳಸುತ್ತಾರೆ. ಇಲ್ಲಿಯ ಮಾಧ್ವಪಂಥದ ಅನೇಕ ದೇಶಸ್ಥಮಾಧ್ವರು ಮರಾಠಿ ಮಾತೃಭಾಷೆಯವರು. ಮಹಾರಾಷ್ಟ್ರದಲ್ಲಿರುವ ಕನ್ನಡಿಗರಲ್ಲಿ ಬಹುಪಾಲು ಜನ ಜೈನರು ಮತ್ತು ವೀರಶೈವರು. ಮಹಾರಾಷ್ಟ್ರದಲ್ಲಿನ ಕನ್ನಡ ಶಾಸನಗಳನ್ನು ಕೊಲ್ಲಾಪುರ ಜಿಲ್ಲೆಯ ಶಾಸನಗಳು ಮತ್ತು ನಾಂದೇಡ್ ಜಿಲ್ಲೆಯ ಶಾಸನಗಳು ಎನ್ನುವ ಸಂಪುಟಗಳಲ್ಲಿ ಸಂಗ್ರಹಿಸಿ ಪ್ರಕಟಿಸಲಾಗಿದೆ. ಮಹಾರಾಷ್ಟ್ರದಲ್ಲಿ ಕನ್ನಡ ಸಾಹಿತ್ಯದ ಹಸ್ತಪ್ರತಿಗಳೂ ಕರ್ನಾಟಕದಲ್ಲಿ ಮರಾಠಿ ಸಾಹಿತ್ಯದ ಹಸ್ತಪ್ರತಿಗಳೂ ದೊರೆತಿವೆ. ಅವುಗಳಲ್ಲಿ ಒಂದು ಹಾತಕಣಗಿಲೆ (ಕೊಲ್ಲಾಪುರ ಜಿಲ್ಲೆ) ತಾಲ್ಲೂಕಿನ ಅಲತಗಿಯ ಪಾಶರ್ವ್‌ನಾಥ ತೀರ್ಥಂಕರ ಮಂದಿರದಲ್ಲಿ ಬರೆಯಲಾದ ಕನ್ನಡ ಪಂಪರಾಮಾಯಣದ ಹಸ್ತಪ್ರತಿ. ಸಮಡೊಳ್ಳಿ, (ಸಾತಾರಾ ಜಿಲ್ಲೆ)ಯಲ್ಲಿ ಉಪಾಧ್ಯಾಯರ ಜಿನ್ನಪ್ಪನ ಮಗ ಆದಪ್ಪನು ಬರೆದ ಪಂಚತಂತ್ರದ ಹಸ್ತಪ್ರತಿ ದೊರೆತಿದೆ. ಕನ್ನಡಿಗರಾದ ಮಹಿಪತಿದಾಸರ ಸಾಹಿತ್ಯಕ್ಕೆ ಮೂಲ ಆಕರವಾಗಿರುವ ಹಸ್ತಪ್ರತಿ ಮರಾಠಿ ಲಿಪಿಯಲ್ಲಿ ಲಿಖಿತವಾಗಿದೆ. ಕರ್ನಾಟಕದ ಗಡಿಪ್ರಾಂತಗಳಲ್ಲಿ ಮರಾಠಿ ಸು. 10ನೆಯ ಶತಕದಿಂದ ಆಡುಮಾತಾಗಿ ರೂಢಿಯಲ್ಲಿರುವಂತೆ ತೋರುವುದಾಗಿಯೂ ದೇವಗಿರಿಯ ಯಾದವರ ಆಳಿಕೆಯ ಕಾಲದಲ್ಲಿ ಮರಾಠಿ ಭಾಷೆ, ಸಾಹಿತ್ಯಗಳು ಏರ್ಪಟ್ಟಂತೆ ತೋರುವುದಾಗಿಯೂ ಅಬಿsಪ್ರಾಯಪಡಲಾಗಿದೆ. ಇಂದಿಗೂ ಕೊಲ್ಲಾಪುರದ ಜನ ಆಡುವ ಮಾತುಗಳಲ್ಲಿ ಹೆಂಟ್ಯಾ, ಕೊಯಿಂಡ್ಯಾ, ಅಳಸುಂದಾ, ಕಾಕವಿ ಮುಂತಾದವು ಹೆಂಡ, ಕೊಂಡೆ, ಅಲಸಂದಿ, ಕಾಕಂಬಿ ಮೊದಲಾದ ಕನ್ನಡ ಪದಗಳ ಪ್ರತಿರೂಪಗಳಾಗಿವೆ. ಜೆಜೂರಿ ಖಂಡೋಬನ ಪುಜಾವೇಳೆಯಲ್ಲಿ ಹೇಳುವ ಉಧೋ ಶಬ್ದವೂ ಏಲ್ಕೋಟ್ ಮಲ್ಲಾರ್ (ಏಳುಕೋಟೆ ಮಲ್ಲಾರಿ) ಎಂಬ ಮಾತೂ ಕನ್ನಡದವು. ಜೆಜೂರಿಯಲ್ಲಿಯ ಹೆಗಡೆ ಅಥವಾ ಹೇಗಪಾ ಕನ್ನಡ ಹೆಗ್ಗಡೆಯೇ ಅಗಿದೆ. ಅಕ್ಕ, ಅತ್ಯಾ ಇತ್ಯಾದಿ ಸಂಬಂಧಸೂಚಕ ಶಬ್ದಗಳು, ಕನ್ನಡದ ಅಕ್ಕ, ಅತ್ತೆ ಎಂಬವೇ ಆಗಿವೆ. ಮುದಲ್-ಮುದಲ, ಮುದ್ದಲ; ಬಂಬಲ್ ಬಂಬಾಳು, ಬಂಭಾಳ; ಹಡಪ-ಹಡಪಾ, ಹಡಪು ಇತ್ಯಾದಿ ಪದಗಳೂ ಕನ್ನಡದವೇ ಎಂದು ವಿದ್ವಾಂಸರು ಅಬಿsಪ್ರಾಯಪಟ್ಟಿದ್ದಾರೆ.

ಮರಾಠಿಯಲ್ಲಿ ಕನ್ನಡ ಶಬ್ದಗಳು ಬೆರೆತಿರುವಂತೆಯೇ ಕನ್ನಡದಲ್ಲಿಯೂ ಮರಾಠಿ ಶಬ್ದಗಳು ಬೆರೆತಿವೆ. ಶಬ್ದಮಣಿದರ್ಪಣದಲ್ಲಿ ಕೇಶಿರಾಜ ಕನ್ನಡದಲ್ಲಿ ಸಹಜವಾಗಿ ಮಹಾಪ್ರಾಣಾಕ್ಷರಗಳಿವೆಯೆಂದು ಹೇಳಿ ಕೊಟ್ಟಿರುವ ಮಹಾಪ್ರಾಣ ಘಟಿತವಾದ ಕೆಲವು ಶಬ್ದಗಳು ಮರಾಠಿಗೆ ತದ್ಭವಗೊಂಡು ಕನ್ನಡವನ್ನು ಹೊಕ್ಕಿರುವ ಸಂಸ್ಕೃತ ಶಬ್ದಗಳೇ ಆಗಿವೆ. ಗಡಿನಾಡಿನ ಕನ್ನಡಿಗರು ಮರಾಠಿ ಶಬ್ದಗಳನ್ನು ಬಳಸಿದರೂ ಅವುಗಳಿಗೆ ಕನ್ನಡ ಪ್ರತ್ಯಯಗಳನ್ನು ಸೇರಿಸುತ್ತಾರೆ. ಉದಾಹರಣೆಗೆ: ನಾ ವಾಚುಸತ್ಯಾನ-ನಾನು ಓದುತ್ತೇನೆ; ಅವಳ ಲಾಜಾಸ್ಥಾಳ -ಅವಳು ನಾಚುತ್ತಾಳೆ; ಬೈಲನ ಸಿಂಗ ಮೊಡಸ್ತ -ಎತ್ತಿನ ಕೋಡು ಮುರಿಯಿತು; ಬೈಲಗಾಡಿ ಮ್ಯಾಲಿ ಖುಂಡಿಸಿದ್ರು -ಎತ್ತಿನ ಗಾಡಿಯ ಮೇಲೆ ಕೂಡಿಸಿದರು; ಧಾಬೆ (ಕೊಟ್ಟಿಗೆ)ದಾಗ ದನಾ ಕಟ್ಟು; ವೈನಿ (ಅಣ್ಣನ ಹೆಂಡತಿ) ಬಂದಳು; ನಮ್ಮ ಅಬಚಿ (ಅವ್ವನ ಅಕ್ಕ ಅಥವಾ ತಂಗಿ) ಬಯಿಂದಾಳ - ನಮ್ಮ ಅವ್ವನ ಅಕ್ಕ ಬಂದಿದ್ದಾಳೆ ಇತ್ಯಾದಿ ಅನೇಕ ಉದಾಹರಣೆಗಳಲ್ಲಿ ಮರಾಠಿ ಶಬ್ದಗಳು ಕನ್ನಡ ವಾಕ್ಯಗಳೊಳಗೆ ಸೇರಿಕೊಂಡಿವೆ.

ಮರಾಠಿ ಸಾಹಿತ್ಯದ ಮತ್ತು ಮಹಾರಾಷ್ಟ್ರದ ಉಲ್ಲೇಖ ಪಂಪಪುರ್ವ ಮತ್ತು ಪಂಪನ ಕಾಲದಲ್ಲಿ ದೊರೆಯುತ್ತದೆ. ಸೈಗೊಟ್ಟ ಶಿವಮಾರನ ಗಜಾಷ್ಟಕ ಓವನಿಗೆಯೂ ಒನಕೆವಾಡೂ ಆಗಿದ್ದಿತೆಂದು ತಿಳಿದುಬರುತ್ತದೆ. ಓವನಿಗೆ ಎಂಬ ಶಬ್ದಕ್ಕೂ ಮರಾಠಿಯ ಓವಿ ಶಬ್ದಕ್ಕೂ ಸಂಬಂಧವಿರಬಹುದೆಂದು ಭಾವಿಸಲಾಗಿದೆ. ಸೋಮೇಶ್ವರನ ಅಬಿsಲಷಿತಾರ್ಥ ಚಿಂತಾಮಣಿಯಲ್ಲಿ ಮರಾಠಿ ಜನಪದ ಗೀತೆಗಳ ತುಣುಕುಗಳು ಅಲ್ಲಲ್ಲಿ ಉದಾಹರಣೆಗಳಾಗಿ ಬಂದಿವೆ ಎಂದು ಅಬಿsಪ್ರಾಯಪಡಲಾಗಿದೆ. ಪಂಪನ ಆದಿಪುರಾಣದಲ್ಲಿ ಮಹಾನಾಟಕ ರೆಂಬುದಾಗಿ ಮಹಾರಾಷ್ಟ್ರದ ಸೈನಿಕರ ವಿವರಣೆ ದೊರೆಯುತ್ತದೆ. ಹೊಯ್ಸಳ 2ನೆಯ ವೀರನರಸಿಂಹನ ಕಾಲದ ದಾವಣಗೆರೆ 25ನೆಯ ಶಾಸನದಲ್ಲಿ (1223-24) ಆ ಕಾಲಕ್ಕೆ ಸು. 32-33 ವರ್ಷಗಳ ಹಿಂದೆ ಆಗಿಹೋದ ಸೊರಟೂರಿನ ಕಾಳಗದಲ್ಲಿ ಹೊಯ್ಸಳರ ಸೇನೆ ಸೇವುಣರ ದಂಡನ್ನು ಸೋಲಿಸಿತು ಎನ್ನುವಾಗ ಮರಾಠಿ ಪ್ರತ್ಯಯಗಳನ್ನುಳ್ಳ ಕನ್ನಡ ವೃತ್ತವೊಂದಿದೆ ಎಂದು ವಿದ್ವಾಂಸರು ಗುರುತಿಸಿದ್ದಾರೆ.

ಮಹಾರಾಷ್ಟ್ರದಲ್ಲಿ 13ನೆಯ ಶತಮಾನದಲ್ಲಿ ಪ್ರಬಲಿಸಿದ ಮಹಾನುಭಾವ ಪಂಥಕ್ಕೂ ಕರ್ನಾಟಕದ ವೀರಶೈವ ಧರ್ಮಕ್ಕೂ ಅನೇಕ ಸಾಮ್ಯಗಳಿವೆ. ಎರಡರಲ್ಲಿಯೂ ವರ್ಣಬೇಧವಿಲ್ಲ. ಸ್ತ್ರೀಯರಿಗೆ ಮಹತ್ತ್ವವಿದೆ. ಮಹಾನುಭಾವ ಪಂಥದಲ್ಲಿ ಎಷ್ಟೋ ಜನ ಸ್ತ್ರೀಯರು ಸಂನ್ಯಾಸಿನಿಯ ರಾಗಿದ್ದಾರೆ. ವೀರಶೈವ ಧರ್ಮದಲ್ಲಿಯೂ ಎಷ್ಟೋ ಜನ ಸ್ತ್ರೀಯರು ವಿರಕ್ತೆಯರಾಗಿದ್ದಾರೆ. ಎರಡು ಧರ್ಮದವರೂ ತಾವಾಡುವ ಮಾತಿನಲ್ಲಿ ಧರ್ಮಗ್ರಂಥಗಳನ್ನು ಬರೆದಿದ್ದಾರೆ. ವೀರಶೈವರು ವೇದಕ್ಕೆ ಪ್ರಾಧಾನ್ಯವನ್ನು ಕೊಡುವುದಿಲ್ಲ; ಮಹಾನುಭಾವ ಪಂಥದವರು ವೇದಗಳನ್ನೂ ಉಪನಿಷತ್ತುಗಳನ್ನೂ ಒಪ್ಪುತ್ತಾರೆ. ವೀರಶೈವರು ಶಿವನೊಬ್ಬನನ್ನೇ ಪುಜಿಸುವರು. ಮಹಾನುಭಾವಪಂಥದವರು ಕೃಷ್ಣನೊಬ್ಬನನ್ನೇ ಪುಜಿಸುವರು. ವೀರಶೈವರು ರುದ್ರಾಕ್ಷಿಮಾಲೆ, ವಿಭೂತಿಗಳನ್ನು ಧರಿಸಿದರೆ ಮಹಾನುಭಾವ ಪಂಥದವರು ತುಳಸೀಮಾಲೆ ಚಂದನಗಳನ್ನು ಧರಿಸುತ್ತಾರೆ. ಮಹಾನುಭಾವ ಪಂಥದ ಮೂಲಪುರುಷ ಚಕ್ರಧರನ ಜೀವನಕ್ಕೂ ಬಸವಣ್ಣನವರ ಜೀವನಕ್ಕೂ ಹಲವು ಹೋಲಿಕೆಗಳಿವೆ. ಬಸವಣ್ಣನ ಉಪದೇಶವನ್ನು ವಚನ ಎನ್ನುವಂತೆಯೇ ಚಕ್ರಧರನ ಉಪದೇಶವನ್ನೂ ವಚನ ಎನ್ನುತ್ತಾರೆ. ಬಸವಣ್ಣ ವಿಷಯಪುಷ್ಟಿಗೆ ದೃಷ್ಟಾಂತ ಉಪಮೆಗಳನ್ನು ಕೊಟ್ಟರೆ, ಚಕ್ರಧರ ಬರಿಯ ಸೂತ್ರಗಳನ್ನು ಹೇಳುತ್ತಾನೆ. ಬಸವಣ್ಣನ ವಚನಗಳಿಗೆ ಹೇಗೋ ಹಾಗೆಯೇ ಚಕ್ರಧರನ ಉಪದೇಶಗಳಿಗೂ ದೃಷ್ಟಾಂತಗಳ ಮೂಲಕವಾದ ಸೂತ್ರಾರ್ಥ ವಿವರಣೆಯಿದೆ.

ಚಕ್ರಧರನ ಶಿಷ್ಯ ಭಾಸ್ಕರಭಟ್ಟ ಬೋರಿಕರನ ಶಿಶುಪಾಲವಧ ಮತ್ತು ಉದ್ಭವಗೀತೆಯಲ್ಲಿ ಗುಡಿ, ಗುಂಡಿ, ಹಡಪ, ಗುಡಾರ, ತೋಮ, ಹೇವ, ಅರಲ, ಅಡಣ ಮುಂತಾದ ಶಬ್ದಗಳೂ ಆ ಶಬ್ದಗಳ ರೂಪಾಂತರಗಳೂ ಇವೆ. ಮಹದಾಂಬಾ ಎನ್ನುವ ಚಕ್ರಧರನ ಶಿಷ್ಯೆ ಶ್ರೀಕೃಷ್ಣ ವಿವಾಹ ವಸ್ತುವನ್ನುಳ್ಳ ಢವಳೆ ಎಂಬ ಹೆಸರಿನ ಹಾಡುಗಳನ್ನು ರಚಿಸಿದ್ದಾಳೆ. ಕನ್ನಡದಲ್ಲಿ ವಿವಾಹ ಮುಂತಾದ ಶುಭ ಶೋಭನಗಳಲ್ಲಿ ಹಾಡುವ ಧವಳ ಎಂಬ ಹಾಡುಗಳು ಕೆಲವಿರುವುದನ್ನು ಇಲ್ಲಿ ನೆನೆಯಬಹುದು. ಇವುಗಳಿಗೆ ಇಲ್ಲಿ ಪ್ರಾಚೀನತೆಯೂ ಇರುವಂತೆ ತೋರುವುದರಿಂದ ಈ ಪದ್ಯಪ್ರಕಾರಸಾಮ್ಯ ಪರಿಶೀಲನಾರ್ಹ.

ಮಹಾರಾಷ್ಟ್ರದಲ್ಲಿ ಮಹಾನುಭಾವ ಪಂಥ ಪ್ರಬಲವಾಗಿದ್ದ ಕಾಲದಲ್ಲಿಯೇ ನಾಥ ಸಂಪ್ರದಾಯವೂ ಪ್ರಬಲವಾಗಿದ್ದಿತು. ಮತ್ಸ್ಯೇಂದ್ರ ಸ್ತ್ರೀರಾಜ್ಯದಲ್ಲಿ ನೆಲೆಸಿದ್ದುದಕ್ಕೆ ಸಮಾನವಾಗಿದೆ ಅಲ್ಲಮಪ್ರಭು ಮತ್ತು ಮಾಯಾದೇವಿಯರ ಪ್ರಸಂಗ. ಮತ್ಸ್ಯೇಂದ್ರನಿಗೆ ಮಾಯಾಮತ್ಸ್ಯೇಂದ್ರ ಎನ್ನುವ ಬಿರುದಿರುವಂತೆಯೇ ಅಲ್ಲಮಪ್ರಭುವಿಗೆ ಮಾಯಾಕೋಲಾಹಲ ಎನ್ನುವ ಬಿರುದಿದೆ. ಪ್ರಭುಲಿಂಗಲೀಲೆಯಲ್ಲಿ ಬರುವ ಗೋರಕ್ಷ ಅಲ್ಲಮರ ಸಂವಾದ ಈ ದೃಷ್ಟಿಯಿಂದ ಗಮನಾರ್ಹವಾದುದು. ಶೂನ್ಯಸಂಪಾದನೆಯಲ್ಲಿ ದೊರೆಯುವ ಗೋರಕ್ಷ ಅಂಕಿತದ ವಚನಗಳು ಅವನಿಗೆ ಕನ್ನಡ ಬರುತ್ತಿದ್ದಿರಬಹುದೆಂದು ಸೂಚಿಸುತ್ತದೆ. ಅಲ್ಲದೆ ಮರಾಠಿಯಲ್ಲಿ ಗೋರಕ್ಷನದೆನ್ನಲಾದ ಈ ಮಾತುಗಳು ದೊರೆಯುತ್ತವೆ - ನ್ಯಾ ಹಾಳುನಿ ಸಂಸಾರದಿಲೆ ಪಾಣಿ ನಿಜಲಿಂಗವ ನಿಟ್ಟಿಸಿ ಸಂಸಾರಕ್ಕೆ ನೀರುಕೊಟ್ಟೆ. ಹೀಗೆ ನಾಥ ಸಂಪ್ರದಾಯಕ್ಕೂ ವೀರಶೈವ ಧರ್ಮದ ಪ್ರಮುಖ ವ್ಯಕ್ತಿ ಅಲ್ಲಮಪ್ರಭುವಿಗೂ ಸಂಬಂಧವಿರುವುದನ್ನು ಗಮನಿಸಬಹುದು. ಇದೇ ಕಾಲದ ಚೆನ್ನಬಸವಣ್ಣನ ಕರಣಹಸುಗೆಯನ್ನು 17ನೆಯ ಶತಮಾನದ ಶಾಂತಲಿಂಗಶಿವಯೋಗಿ ಮರಾಠಿಗೆ ಅನುವಾದ ಮಾಡಿದ್ದಾನೆ. ಶಂಕರಾಚಾರ್ಯರ ಅದ್ವೈತ ವೇದಾಂತವನ್ನು ವಿವೇಕ ಸಿಂಧು ಮುಂತಾದ ತನ್ನ ಕೃತಿಗಳಲ್ಲಿ ತಾನು ನೃಸಿಂಹ ಬಲ್ಲಾಳನ ಮಗ ಜಯಂತಪಾಳನ ಅನುಮತಿಯಂತೆ ರಚಿಸಿದುದಾಗಿ ಹೇಳಿಕೊಂಡಿದ್ದಾನೆ. ಆದರೆ ಈ ನೃಸಿಂಹ ಬಲ್ಲಾಳ ಮತ್ತು ಹೊಯ್ಸಳ ನರಸಿಂಹ ಬಲ್ಲಾಳ ಬೇರೆ ಬೇರೆಯವರೆಂದು ಕೆಲವರ ಅಬಿsಪ್ರಾಯ.

ಮುಕುಂದರಾಜನ ವಿವೇಕಸಿಂಧುವನ್ನು ಮಹಲಿಂಗರಂಗ (17ನೆಯ ಶತಮಾನ) ಅನುಭವಾಮೃತ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾನೆ. ಕನ್ನಡ ಕವಿ ನಾಥಪಂಥದವನೆಂದೂ ಆತನ ಕನ್ನಡ ಪ್ರೇಮಕ್ಕೆ ಮುಕುಂದರಾಜನೇ ಪ್ರೇರಣೆಯೆಂದೂ ವಿದ್ವಾಂಸರ ಅಬಿsಪ್ರಾಯ. ಮುಕುಂದರಾಜನ ಕಾವ್ಯದ ಕೆಲವು ಪದ್ಯಗಳ bsÁಯಾನುವಾದವನ್ನು ಅನುಭವಾಮೃತದಲ್ಲಿ ಕಾಣಬಹುದು. ಮರಾಠಿಯ ಶ್ರೇಷವಿಕೃತಿ ಜ್ಞಾನೇಶ್ವರಿಯನ್ನೂ ಅಮೃತಾನುಭವ, ಸ್ವಾತ್ಮಾನುಭವ ಎಂಬ ಕೃತಿಗಳನ್ನೂ ಅನೇಕ ಪದಗಳನ್ನೂ ಅಭಂಗಗಳನ್ನೂ ಬರೆದ ಜ್ಞಾನದೇವ ದೇವಗಿರಿಯ ರಾಮರಾಜದೇವನ ಸಮಕಾಲೀನ. ಈಗಿನ ಜ್ಞಾನೇಶ್ವರಿಯಲ್ಲಿ ಅಕ್ಕಸಾಲಿ, ಅಡತರ, ಅಂಟಿ (ಅಂಟು), ಆಗಲೇ (ಅಗಲು), ಅಡವಾರಾ (ಅಡ್ಡಬರು), ಆರ್ಡಿ (ಆರಡಿ), ಕೇಳವಣಿ, ತೂಕ, ಪಡಗಾ (ಪಡಗ), ಉಗಾಳು (ಉಗುಳು), ಉಳಿಗ (ಊಳಿಗ), ಆರೋಗಿಣಿ (ಆರೋಗಣೆ), ಪೌಳೆ (ಪೌಳಿ), ಭಾಂಗಾರ, ಮದವಿ, ಮಾತು (ಶಬ್ದ), ಮಿರವಣೆ (ಮೆರವಣಿಗೆ), ಸೂಡ, ಹರಳು - ಹೀಗೆ ನೂರಾರು ಕನ್ನಡ ಶಬ್ದಗಳು ದೊರೆಯುತ್ತವೆ ಎಂಬುದು ಕುತೂಹಲಕರವಾಗಿದೆ. ಜ್ಞಾನದೇವನಿಗೆ ಕನ್ನಡದ ಪರಿಚಯವಿದ್ದು ಕನ್ನಡದಲ್ಲಿಯೂ ಒಂದೆರಡು ಅಭಂಗಗಳನ್ನು ರಚಿಸಿದ್ದಾನೆ.

ಅವನ ಅಭಂಗಗಳಲ್ಲಿ ಒಂದು ಈ ರೀತಿ ಇದೆ: ಆ ಆ ನೀ ಕೇಳೆ ಚಿಕನ ಮಾತು ಕೋಳುಲೆ ಘನಿಗೆ ಮರುಳಾದೆನೆ ಚಲುವಾನೆ ಚಲುವಾನೆ ಫಂಡರಿರಾಯ ಚಲುವಾನೆ ಯಲ್ಲೆ ದೊರೆಕನ್ನೇ ಯಲ್ಲೆ ಬಾರನ್ನೆ (ಧ್ರುಪದ) ಪುಂಡಲೀಕನೆ ಭಕ್ತಿಗೆ ಬಂದಾ ರಖುಮಾದೇವೀ ವರ ವಿಟ್ಠಲುನೇ (ಜ್ಞಾನದೇವ ಆಭಂಗ ಹೊಸ ಪ್ರತಿ, ನಂ.345)

ಇದೇ ಅಭಂಗವನ್ನು ಬೇರೊಂದು ಪಾಠಕ್ಕೆ ಅನುಗುಣವಾಗಿ ನಾ.ಶ್ರೀ.ರಾಜಪುರೋಹಿತರು ಹೀಗೆ ಕೊಟ್ಟಿದ್ದಾರೆ: ಅಕ್ಕಾ ನೀ ಕೇಳೇ ಚಿಕ್ಕನ ಮಾತು ಕಾರಲೇದಾಸೀಗೆ ಮರುಳಾದನೇ | ಚೆಲುವಾನೆ ಚೆಲುವಾನೆ ಪಂಢರಿರಾಯಾ ಚೆಲುವಾನೆ ಎಲ್ಲಿ ದೊರಕುವನೇ || ಪುಂಡಲೀಕನ ಭಕ್ತಿಗೆ ಬಂದಾ ರುಖಮಾದೇವೀ | ವರವಿಟ್ಠಲನೇ ||

ಹೀಗೆ ಮರಾಠಿಯಲ್ಲಿ ಕನ್ನಡ ಪದಗಳೂ ಪದ್ಯಗಳೂ ಜ್ಞಾನೇಶ್ವರಿಯ ಕಾಲಕ್ಕಾಗಲೇ ಸೇರಿದ್ದುವು. ಅದಕ್ಕೆ ಕಾರಣ ಬಹುಶಃ ಸ್ವತಂತ್ರವಾಗಿ ಈಚೆಗೆ ಬೆಳೆಯುತ್ತಿದ್ದ ಮರಾಠಿ ಭಾಷೆ ಆ ಹೊತ್ತಿಗಾಗಲೇ ಪ್ರಬುದ್ಧವಾಗಿದ್ದ ಕನ್ನಡದಿಂದ ಶಬ್ದಗಳನ್ನು ಸ್ವೀಕರಿಸಿದುದು.

ಮಹಾನುಭಾವ ಪಂಥ ಮತ್ತು ನಾಥಸಂಪ್ರದಾಯಗಳಂತೆಯೇ ವಿಟ್ಠಲ ಭಕ್ತಿಯೂ ಮಹಾರಾಷ್ಟ್ರದ ಕೊಡುಗೆ. ಜ್ಞಾನದೇವನು ಕಾನಡಾ ಹೋ ವಿಟ್ಠಲೂ ಕರ್ನಾಟಕಕ್ಕೂ ಎಂದು ಪಂಢರಪುರದ ವಿಟ್ಠಲನನ್ನು ಕರೆಯುತ್ತಾನೆ. ಕೆಲವರು ವಿಠೋಬಾ ಶಬ್ದದ ನಿಷ್ಪತ್ತಿಯನ್ನು ಕನ್ನಡದಿಂದ ಮಾಡುತ್ತಾರೆ. ಪಂಢರಪುರದ ವಿಟ್ಠಲಭಕ್ತಿ ಮತ್ತು ಸಂಪ್ರದಾಯ 13ನೆಯ ಶತಮಾನಕ್ಕಾಗಲೀ ಕರ್ನಾಟಕದಲ್ಲಿ ನೆಲಸಿದ್ದಿತು. ಇದಕ್ಕೆ ನಿದರ್ಶನ ಚೌಂಡರಸ ತನ್ನ ಅಬಿsನವದಶಕುಮಾರಚರಿತೆಯಲ್ಲಿ ವಿಟ್ಠಲಸ್ತುತಿ ಮಾಡಿರುವುದು. ಸಂಸ್ಕೃತ ಮೂಲದಲ್ಲಿಲ್ಲದ ಈ ಭಾಗವನ್ನು ಆತ ಸ್ವತಃ ಸೇರಿಸಿದ್ದಾನೆ. ಅಬಿsನವದಶಕುಮಾರಚರಿತೆಯ ವಿಟ್ಠಲಾಷ್ಟಕ ಕನ್ನಡದಲ್ಲಿ ದೊರೆಯುವ ವಿಟ್ಠಲಭಕ್ತಿಯ ಮೊದಲ ಸಾಹಿತ್ಯಕೃತಿ. ವಿಟ್ಠಲನ ಪರಮಭಕ್ತ ಸಂತ ತುಕಾರಾಮನಾದರೋ ಬಸವಣ್ಣನವರನ್ನು ತನ್ನ ಗುರುವೆಂದು ಭಾವಿಸಿದ್ದವ. ತುಕಾರಾಮನ ಗೀತೆಗಳಲ್ಲಿಯ ಬಸವಂತ ಶಬ್ದ ಬಸವಣ್ಣನವರನ್ನು ಕುರಿತದ್ದೆಂಬುದಾಗಿ ಗ್ರಹಿಸಲಾಗಿದೆ. ತ್ರಿಭಂಗೀ ದೇಹುಡೇ ಉಭೇ ವೃಂದಾವನೀ ವೇಣೂ ಚಕ್ರಪಾಣಿ ವಾಜವಿತ ಎನ್ನುವ ನಾಮದೇವನ ಅಭಂಗ ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ ಎನ್ನುವ ವ್ಯಾಸರಾಯರ ಪದವನ್ನು ನೆನಪಿಗೆ ತರುತ್ತದೆ.

ಭಾಗವತ ಸಂಪ್ರದಾಯಕ್ಕೆ ಸೇರಿದ ಕುಮಾರವ್ಯಾಸನ ಭಾರತದಲ್ಲಿ ಪೈಕ, ಪಾರುಖಾಣೆ ಮುಂತಾದ ಮರಾಠಿ ಶಬ್ದಗಳು ದೊರೆಯುತ್ತವೆ. ವೀರಪಣ, ಜಾಣಪಣ, ಶೌರ್ಯಪಣ, ಸಾಮಥರ್ಯ್‌ಪಣ, ವಿಸ್ತಾರಪಣ ಮುಂತಾದ ಮರಾಠಿಯ ಭಾವನಾಮ ಸೂಚಕ ಪ್ರತ್ಯಯಾಂತ ಪದಗಳೂ ಬಳಕೆಯಾಗಿವೆ. ಪರಭಾಷೆಯ ಪ್ರತ್ಯಯವೊಂದನ್ನು ಕನ್ನಡಕ್ಕೆ ಸೇರಿಸುವ ಪ್ರಯೋಗವೊಂದನ್ನು ಕುಮಾರವ್ಯಾಸ ಮಾಡಿದ್ದಾನೆ. ಇದು ಆತನ ಸ್ವಸ್ಥಳಕ್ಕೆ ನೆರೆಯಲ್ಲಿದ್ದ ಮರಾಠಿ ಭಾಷೆಯ ಗಾಢವಾದ ಪ್ರಭಾವವನ್ನು ತೋರಿಸುತ್ತದೆ. ಕನ್ನಡದ ಅತ್ಯಂತ ಸಮರ್ಥ ಕವಿಯಾದ ಈತನ ಭಾರತವನ್ನು ಮರಾಠಿಯಲ್ಲಿ ಇಬ್ಬರು ಅನುಸರಿಸಿದ್ದಾರೆ. ಇದರಲ್ಲಿ ಮುಕ್ತೇಶ್ವರನ ಕೃತಿ ಮುಖ್ಯವಾದುದು. ಕುಮಾರವ್ಯಾಸ ಭಾರತದ ‘ಅರಸುಗಳಿಗಿದು ವೀರ’ (ಆದಿಪರ್ವ 1-19) ಪದ್ಯವನ್ನು ಹೋಲುವ ಅನೇಕ ಪದ್ಯಗಳು ಮುಕ್ತೇಶ್ವರನಲ್ಲಿವೆ. ಇನ್ನೊಬ್ಬ ಭಾರತ ಕರ್ತೃವಾದ ಚಂದ್ರಾತ್ಮಜನೆಂಬ ಮರಾಠಿ ಕವಿ ಕೂಡ ಕುಮಾರವ್ಯಾಸನನ್ನು ಅನುಸರಿಸಿರುವುದು ಮಾತ್ರವಲ್ಲದೆ ಮಜಸಂಸ್ಕೃತಿ ನಾಹೀ ಅಭ್ಯಾಸ, ಕರ್ನಾಟಕ ಕವಿ ಕುಮಾರವ್ಯಾಸ ತ್ಯಾಚೇನೀ ಆಧಾರೇ ಗ್ರಂಥ ವಿಲಾಸ ಪಾರಂಬಿsಲಾಯಾ ಹೇತು ಎಂದು ಸ್ಪಷ್ಟವಾಗಿ ತನ್ನ ಗ್ರಂಥಋಣವನ್ನು ಹೇಳಿದ್ದಾನೆ. ಹೀಗೆ ಷಟ್ಪದಿ ಕಾವ್ಯಗಳ ಮರಾಠಿ ಅನುವಾದ ಕಾರ್ಯ ಮುಂದುವರಿದು ಚಾಮರಸನ ಪ್ರಭುಲಿಂಗಲೀಲೆಯನ್ನು ಬ್ರಹ್ಮದಾಸನೆಂಬ 18ನೆಯ ಶತಮಾನದ ಕವಿ ವಿಶ್ವಂಭರಲೀಲ ಎನ್ನುವ ಹೆಸರಿನಿಂದ ಪರಿವರ್ತಿಸಿದ್ದಾನೆ. 1581ರಲ್ಲಿ ಚಿತ್ರಭಾರತವನ್ನು ಕನ್ನಡದಲ್ಲಿ ರಚಿಸಿದ ಗೋಪ ಕವಿ ಕೃತಿಯ ಅರ್ಧಭಾಗದಲ್ಲಿ ಭಾರತ ಕಥಾಂಶವನ್ನೂ ಉಳಿದರ್ಧದಲ್ಲಿ ವತ್ಸಲಾ ಹರಣದ ಪ್ರಸಂಗವನ್ನೂ ನಿರೂಪಿಸಿದ್ದು, ಮರಾಠಿಯಲ್ಲಿ ಪ್ರಚಲಿತವಾಗಿದ್ದ ಕಥೆಯನ್ನು ಕನ್ನಡದಲ್ಲಿ ಬರೆದುದಾಗಿ ಹೇಳಿಕೊಂಡಿದ್ದಾನೆ. ಜಗನ್ನಾಥದಾಸರ ಹರಿಕಥಾಮೃತಸಾರ (ಸು. 1755) ಮತ್ತು ಲಕ್ಷ್ಮೀಶನ ಜೈಮಿನಿಭಾರತ (ಸು.1550) ಶೇಷಗಿರಿರಾಯ (1868) ಮತ್ತು ಯಶವಂತ ಭಾಸ್ಕರ ಜಠಾರ (19ನೆಯ ಶತಮಾನ) ಇವರಿಂದ ಮರಾಠಿಗೆ ಅನುವಾದಿತವಾಗಿವೆ.

ಕನ್ನಡದ ಅನುಭಾವ ಕವಿಗಳಲ್ಲಿ ಒಬ್ಬನಾದ ನಿಜಗುಣ ಶಿವಯೋಗಿ ಮತ್ತು ಕಾಡಸಿದ್ದೇಶ್ವರರ ಪ್ರಭಾವ ಮಹಾರಾಷ್ಟ್ರದಲ್ಲಿ ದಟ್ಟವಾಗಿ ಹರಡಿದೆ. ನಿಜಗುಣ ಶಿವಯೋಗಿ ಮತ್ತು ಶ್ರೇಷ್ಠ ಮರಾಠೀ ಸಂತ ರಾಮದಾಸರನ್ನು ಚಿತ್ರಮಾಲಿಕೆಯೊಂದರಲ್ಲಿ ಒಟ್ಟಿಗೆ ಚಿತ್ರಿಸಲಾಗಿದೆ. ನಿಜುಗುಣಶಿವಯೋಗಿಯ ವಿವೇಕ ಚಿಂತಾಮಣಿಯನ್ನು ಸಾತಾರಾ ಜಿಲ್ಲೆಯ ಸಿಂಗಣಾಪುರದ ಶಾಂತಲಿಂಗ ಶಿವಯೋಗಿ ಅನುವಾದಿಸಿದ್ದಾನೆ (ಸು.1604).

ನಾಮದೇವನಾದ ಮೇಲೆ ಏಕನಾಥನವರೆಗೆ ಮರಾಠಿ ಸಾಹಿತ್ಯದಲ್ಲಿ ಶ್ರೇಷ್ಠ ಕವಿಗಳು ಬರಲಿಲ್ಲ. ಆದರೂ ಈ ಕಾಲದಲ್ಲಿ ದತ್ತ ಸಂಪ್ರದಾಯದ ನೃಸಿಂಹಸರಸ್ವತಿಯ ಶಿಷ್ಯನಾದ ಕಡಗಂಚಿಯ ಸರಸ್ವತಿ ಗಂಗಾಧರ ಬರೆದ ಮರಾಠಿ ಗುರುಚರಿತ್ರೆಯ ಕೊನೆಗೆ ಕನ್ನಡದ ಆರತಿ ಪದ್ಯವಿದೆ. ಗುರುಚರಿತ್ರೆ ದತ್ತಾತ್ರೇಯನ ಭಕ್ತರಿಗೆ ಪುಜ್ಯ ಗ್ರಂಥವಾಗಿ ಮಹಾನುಭಾವ ಮತ್ತು ವಾರ್ಕರಿ ಪಂಥಗಳ ಅನುಯಾಯಿಗಳಿಂದ ಸಮಾನವಾಗಿ ಗೌರವಿಸಲ್ಪಟ್ಟಿದೆ. ಈ ಕೃತಿಯ ಹಲವಾರು ಕನ್ನಡ ಅನುವಾದಗಳು ಹೊರಬಂದಿವೆ. ಮಹಾರಾಷ್ಟ್ರದ ಪ್ರಸಿದ್ಧ ಸಂತರಲ್ಲೊಬ್ಬನಾದ ಏಕನಾಥನ ಮೇಲೆ ಪುರಂದರದಾಸರ ಪ್ರಭಾವ ಆಗಿರುವಂತೆ ತೋರುತ್ತದೆ. ಉದಾಹರಣೆಗೆ ‘ಹ್ಯಾಗೆ ಇರಬೇಕು ಸಂಸಾರದಲ್ಲಿ ಹ್ಯಾಗೆ ಬರೆದಿದೆ ಪ್ರಾಚೀನದಲ್ಲಿ’ ಎನ್ನುವ ಮಾತಿಗೆ ಸದೃಶವಾದ್ದು ‘ಐಸೇ ಆಸಾವೀ ಸಂಸಾರೀ ಜೋವರಿ ಪ್ರಾಚೀ ವಾಚೀ ದೊರಿ’ ಎನ್ನುವ ಮಾತು ಮೇಲಿನ ಊಹೆಗೆ ಅವಕಾಶ ಕಲ್ಪಿಸುತ್ತದೆ. ಏಕನಾಥ ಮರಾಠಿಯಲ್ಲಿ ಮೈರಾವಣ ಕಾಳಗವನ್ನು ಬರೆದ ಕಾಲಕ್ಕೇ ಕುಮಾರ ವಾಲ್ಮೀಕಿಯೂ ಮೈರಾವಣನ ಕಾಳಗವನ್ನು ಬರೆದಿದ್ದಾನೆ. ಏಕನಾಥನ ಮತ್ತು ಅವನ ಸೋದರಿಯ ಮಗ ಹಾಗೂ ಶಿಷ್ಯನಾದ ಮುಕ್ತೇಶ್ವರ (ರಾಮಾಯಣ ಭಾರತಗಳ ಕರ್ತೃ) ಈ ಇಬ್ಬರ ಜೋಡಿ ಕನ್ನಡದ ಹರಿಹರ - ರಾಘವಾಂಕರ ಜೋಡಿಯನ್ನು ನೆನಪಿಗೆ ತರುತ್ತದೆ.

1615ರಲ್ಲಿ ಬಿಜಾಪುರದಲ್ಲಿ ಹುಟ್ಟಿದ ವಾಮನಪಂಡಿತ ಎಂಬುವನು ರಾಮದಾಸನ ಪ್ರೇರಣೆಯ ಪ್ರಕಾರ ಸಮಶ್ಲೋಕಿ ಗೀತಾ ಎನ್ನುವ ಭಗವದ್ಗೀತೆಯ ನೇರ ಅನುವಾದದ ಜೊತೆಗೆ ಯಥಾರ್ಥದೀಪಿಕೆ ಎನ್ನುವ ಗೀತಾವ್ಯಾಖ್ಯಾನವನ್ನು ರಚಿಸಿದ್ದಾನೆ.

ಮಹಾರಾಷ್ಟ್ರದ ಅತ್ಯಂತ ಉನ್ನತಿಯ ಕಾಲದಲ್ಲಿದ್ದ ಪ್ರಸಿದ್ಧ ಕವಿ ಮೋರೋಪಂತ ಕೊಲ್ಲಾಪುರದ ಸಮೀಪದಲ್ಲಿರುವ ಪಣ್ಹಾಳದಲ್ಲಿ 1729ರಂದು ಜನಿಸಿದವನು. ಈತ ಭಾರತವನ್ನು ಬರೆದಿದ್ದಾನೆ. ಇವನ ಕಾವ್ಯಶೈಲಿ ಕುಮಾರವ್ಯಾಸನ ಕಾವ್ಯಶೈಲಿಯನ್ನು ನೆನಪಿಗೆ ತರುತ್ತದೆ. ಸುಮಾರು ಇದೇ ಅವಧಿಯಲ್ಲಿ ಕರ್ನಾಟಕದ ಮೂಡಲಿಗಿ, ಗುರ್ಲಹೊಸೂರು ಮತ್ತು ಬಿಜಾಪುರಗಳಲ್ಲಿ ಮರಾಠಿ ಸಾಹಿತ್ಯ ಬೆಳೆದಿದೆ. ಗೋಕಾಕ ತಾಲ್ಲೂಕಿನ ಮೂಡಲಿಗಿಯಲ್ಲಿ 16ನೆಯ ಶತಮಾನದಲ್ಲಿ ರಂಗಬೋಧಸ್ವಾಮಿಯೂ 17ನೆಯ ಶತಮಾನದಲ್ಲಿ ಅಧ್ಯಾಯ ಬೋಧಸ್ವಾಮಿಯೂ ನೆಲಸಿದ್ದರು. ಮುಕುಂದರಾಜನ ಸಂಪ್ರದಾಯಕ್ಕೆ ಸೇರಿದ ಇವರು ಮರಾಠಿಯಲ್ಲಿ ಗ್ರಂಥರಚನೆ ಮಾಡಿರುವುದಲ್ಲದೆ ಕನ್ನಡದಲ್ಲಿಯೂ ಹಾಡುಗಳನ್ನು ಬರೆದಿದ್ದಾರೆ. ಗುರ್ಲಹೊಸೂರಿನಲ್ಲಿ 18ನೆಯ ಶತಮಾನದಲ್ಲಿ ಚಿದಂಬರ ದೀಕ್ಷಿತರೆಂಬುವರು ನೆಲಸಿದ್ದರು. ಅವರನ್ನು ಸಮಕಾಲೀನ ಮರಾಠಾ ಸರದಾರರು ಗೌರವಿಸುತ್ತಿದ್ದರು. ಬಿಜಾಪುರದ ರುಕ್ಮಾಂಗದ ಸ್ವಾಮಿ ಮತ್ತು ಕಾಖಂಡಕಿ ಮಹಿಪತಿಸ್ವಾಮಿಗಳ ಜೀವನ ಚರಿತ್ರೆಯನ್ನು 18ನೆಯ ಶತಮಾನದಲ್ಲಿ ರುಕ್ಮಜದಾಸ ತನ್ನ ಗುರುಮಾಲಿಕಾ ಕೃತಿಯಲ್ಲಿ ಸೇರಿಸಿದ್ದಾನೆ. ಮಹಿಪತಿದಾಸರ ಕೀರ್ತನೆಗಳ ಹಸ್ತಪ್ರತಿಯೊಂದು ಮರಾಠಿ ಭಾಷೆಯಲ್ಲಿಯೇ ಲಿಖಿತವಾಗಿದೆ (ಇದುವರೆಗೆ ಅಚ್ಚಾಗಿರುವ ಮಹೀಪತಿದಾಸರ ಕೃತಿಗಳಿಗೆ ಅದೇ ಆಧಾರ). ವಾಮನ ಪಂಡಿತನ ಶಿಷ್ಯ ಹರಿದೀಕ್ಷಿತ ನರಗುಂದದಲ್ಲಿ ನೆಲಸಿ ಸಾಹಿತ್ಯ ರಚಿಸಿದ್ದಾನೆ. ಹೀಗೆ ಮರಾಠಿ ಸಾಹಿತ್ಯ ರಚನೆಗೆ ಕರ್ನಾಟಕ ಕೆಲಕಾಲ ಆಶ್ರಯಸ್ಥಾನವೂ ಸ್ಫೂರ್ತಿಕೇಂದ್ರವೂ ಆಗಿದ್ದುದು ತಿಳಿಯುತ್ತದೆ.

ಮಹಾರಾಷ್ಟ್ರದ ರಾಜಕೀಯ ಪ್ರಾಬಲ್ಯ ಇಳಿಯುವ ಹೊತ್ತಿಗೆ ಕ್ರೈಸ್ತ ಮಿಷನರಿಗಳು ಭಾರತದಲ್ಲಿ ಪದಾರ್ಪಣ ಮಾಡಿ ಮರಾಠಿ ಭಾಷೆಯ ಏಳ್ಗೆಗೆ ಪ್ರೋತ್ಸಾಹ ಕೊಟ್ಟರು. ಅದರ ಫಲವಾಗಿ ಬಾಲಶಾಸ್ತ್ರಿ ಜಾಂಭೇಕರ್ ಪಾಶ್ಚಾತ್ಯ ವಿದ್ಯೆಯ ಪರಿಚಯ ಮತ್ತು ಪ್ರಭಾವ ಪಡೆದು ಸು. 1840ರಲ್ಲಿ ದರ್ಪಣ್ ಮತ್ತು ದಿಗ್ದರ್ಶನ್ ಪತ್ರಿಕೆಗಳನ್ನು ಪ್ರಾರಂಬಿsಸಿದರು. ಆ ಕಾಲದಲ್ಲಿನ ಪತ್ರಿಕಾ ಪ್ರಪಂಚವೆಂದರೆ ಮರಾಠೀ ಪತ್ರಿಕಾ ಪ್ರಪಂಚವೆಂದೇ ಹೇಳಬಹುದು. ಕನ್ನಡ ನಾಡಿನಲ್ಲಿ ಕನ್ನಡಿಗರಿಗಾಗಿ ಕನ್ನಡಿಗರೇ ನಡೆಸುತ್ತಿದ್ದ ಪತ್ರಿಕೆಗಳು ಕೂಡ ಮರಾಠಿಯವಾಗಿದ್ದುವು. ಧಾರವಾಡದಿಂದ ಹೊರಡುತ್ತಿದ್ದ bsÁವಾ (1883), ಜ್ಞಾನ ಬೋಧಕ (1871), ಧಾರವಾಡ ವೃತ್ತ (1873), ಹುಬ್ಬಳ್ಳಿ ವೈಭವ, ಕರ್ನಾಟಕ ವಾರ್ತಿಕ, ಬೆಳಗಾಂವ ಸಮಾಚಾರ (1864), ಹಿತೇಚ್ಫು (1870) ಪತ್ರಿಕೆಗಳಲ್ಲಿ ಕೆಲವು ಮರಾಠಿ ಮತ್ತು ಕೆಲವು ದ್ವಿಭಾಷಾಪತ್ರಿಕೆಗಳಾಗಿದ್ದುವು. ಆಗಿನ ಸಾರ್ವಜನಿಕ ಜೀವನವೆಲ್ಲ ಮರಾಠಿಮಯವಾಗಿದ್ದಿತು. ಇಂಥ ಪರಿಸ್ಥಿತಿಯಿಂದ ಉತ್ತರ ಕರ್ನಾಟಕವನ್ನು ಮರಾಠಿಯ ಪ್ರಭಾವದಿಂದ ಸ್ವಲ್ಪ ಬಿಡಿಸಿದವ ಡಬ್ಲ್ಯು.ಎಚ್.ರೈಡ್ಸ್‌ ಮಹಾಶಯ. ಆತ ಉತ್ತರ ಕರ್ನಾಟಕದ ಭಾಷೆ ಮರಾಠಿಯಲ್ಲವೆಂದೂ ಕನ್ನಡವೆಂದೂ ಮುಂಬಯಿ ಸರ್ಕಾರಕ್ಕೆ ಮನವಿ ಮಾಡಿಕೊಟ್ಟ. ಆ ಪ್ರಯತ್ನದ ಫಲವಾಗಿ ಡೆಪ್ಯುಟಿ ಚನ್ನಬಸಪ್ಪ, ರಾ.ಹ.ದೇಶಪಾಂಡೆ, ಗಳಗನಾಥ, ಶಾಂತಕವಿ, ಮುದವೀಡು ಕೃಷ್ಣರಾಯ, ರಾಜಪುರೋಹಿತ ನಾರಾಯಣರಾಯ, ಆಲೂರ ವೆಂಕಟರಾಯ ಮೊದಲಾದ ಮಹನೀಯರು ಉತ್ತರ ಕರ್ನಾಟಕದಲ್ಲಿ ಕರ್ನಾಟಕತ್ವದ ವಿಕಾಸವನ್ನು ನಡೆಸಿದರು. ಈ ಸಂದರ್ಭದಲ್ಲಿ ಧಾರವಾಡದ ಟ್ರೇನಿಂಗ್ ಕಾಲೇಜು ಮತ್ತು ವಿದ್ಯಾವರ್ಧಕ ಸಂಘ ವಹಿಸಿದ ಪಾತ್ರ ದೊಡ್ಡದು. ಇದರ ಪರಿಣಾಮವಾಗಿ ಕನ್ನಡದಲ್ಲಿ ಪಠ್ಯಪುಸ್ತಕ ಮತ್ತು ಕೃತಿರಚನೆ ನಡೆಯಿತು. ರಾ.ಹ.ದೇಶಪಾಂಡೆಯವರು ಚಲತೊಟ್ಟು ಕನ್ನಡದ ಏಳಿಗೆಗಾಗಿ ದುಡಿದರು. ಗಳಗನಾಥರ ಕೃತಿರಚನೆಗೆ ಪ್ರೇರಕರಾಗಿದ್ದರು. ಅನೇಕ ಪಠ್ಯಪುಸ್ತಕಗಳನ್ನು ಸ್ವತಂತ್ರವಾಗಿ ರಚಿಸುವುದರ ಜೊತೆಗೆ ಬಾಯಿಲೆಕ್ಕದ ಮೊದಲನೆಯ ಪುಸ್ತಕ (1896) ಮತ್ತು ಬೀಜಗಣಿತದ ಮೂಲತತ್ತ್ವಗಳು (1897) ಇವನ್ನು ಅನುವಾದಿಸಿದರು. ವಿಧವಾವಪನ ಅನಾಚಾರವನ್ನು ವೆಂಕಟರಂಗೋ ಕಟ್ಟಿ ಮರಾಠಿ ಮತ್ತು ಕನ್ನಡಗಳಲ್ಲಿ ರಚಿಸಿದ್ದಾರೆ. ಪಂಡಿತ ರಮಾಬಾಯಿಯ ಮರಾಠಿ ಸ್ತ್ರೀಧರ್ಮನೀತಿ ಕನ್ನಡಕ್ಕೆ ಅನುವಾದವಾಗಿದೆ.

ಇದೇ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ನಾಟಕ ಕಲೆ ಸ್ವತಂತ್ರವಾಗಿ ಬೆಳೆಯಿತು. ಕನ್ನಡ ಜಿಲ್ಲೆಗಳಿಂದ ನಾಟಕ ಕಂಪೆನಿಗಳು ಸಾಂಗಲಿಯವರೆಗೆ ಪ್ರಯಾಣ ಬೆಳೆಸಿದ್ದುವು. ಮರಾಠಿ ನಾಟಕಕಾರರಲ್ಲಿ ಪ್ರಸಿದ್ಧರಾದ ಕಿರ್ಲೋಸ್ಕರ್ ಮೊದಲಾದವರು ಪೌರಾಣಿಕ ನಾಟಕಗಳಲ್ಲಿ ಅಬಿsನಯಿಸುತ್ತಿದ್ದರು. ಕನ್ನಡದ ಶ್ರೀ ಕೃಷ್ಣಪಾರಿಜಾತ ಕೃತಿ ಮುಂತಾದುವು 19ನೆಯ ಶತಮಾನದ ಮರಾಠಿ ನಾಟಕ ಸಾಹಿತ್ಯದ ಮೇಲೆ ಪ್ರಭಾವ ಬೀರಿದವೆಂದು ತಿಳಿದುಬರುತ್ತದೆ.

ಕಿರ್ಲೋಸ್ಕರನ ಮರಾಠಿ ‘ಶಾಕುಂತಲ ನಾಟಕ’ ಹುಟ್ಟಿದ ಸರಿಸುಮಾರಿನಲ್ಲೇ ಉತ್ತರ ಕರ್ನಾಟಕದಲ್ಲಿ ಚುರಮುರಿ ಶೇಷಗಿರಿರಾಯರ ಕನ್ನಡ ಶಾಕುಂತಲ ದೇಸೀ ಸೊಬಗನ್ನು ತುಂಬಿಕೊಂಡು ರೂಪುಗೊಂಡಿತು. ಮೈಸೂರಿನಲ್ಲಿ ಬಸವಪ್ಪಶಾಸ್ತ್ರಿಗಳ ಶಾಕುಂತಲ ನಾಟಕ ಸಿದ್ಧವಾಯಿತು. ಮಹಾರಾಷ್ಟ್ರದಿಂದ ಬಂದ ಪಾರಸೀಯವರ ಬಾಲೀವಾಲಾ ಕಂಪನಿ ಮೈಸೂರು ಅರಮನೆಯಲ್ಲಿ ನಾಟಕಗಳನ್ನು ಆಡಿತು. ಅದರ ಪ್ರಭಾವದಿಂದ ಮೈಸೂರಿನಲ್ಲಿ ವೃತ್ತಿರಂಗಭೂಮಿ ಬೆಳೆಯಿತು. ಬಾಲೀವಾಲಾ ಕಂಪನಿಯ ಅದ್ಭುತ ರಂಗವೈಭವ, ಸಂಗೀತ ಮತ್ತು ಅಬಿsನಯ ಮೈಸೂರಿನ ಜನತೆಯನ್ನು ಬೆರಗುಗೊಳಿಸಿತು. ರಾಜಾಸ್ಥಾನದಲ್ಲಿದ್ದ ಮಂಡ್ಯಂ ರಂಗಾಚಾರ್ಯ ಮರಾಠಿಯ ಬಾಣಾಸುರೋಪಾಖ್ಯಾನವನ್ನೂ ಬಾಲಗಂಧರ್ವ ಖಾಡಿಲ್ಕರರ ಮರಾಠಿ ನಾಟಕಗಳನ್ನೂ ಪ್ರದರ್ಶಿಸಿದರು. ಮೂಲ್ಕಿಯ ನಾರಾಯಣ ರಾಮಪ್ಪ ಕಾಮತ ತನ್ನ ನಾಟಕ ಕಂಪನಿಯಲ್ಲಿ ಕನ್ನಡ ಮರಾಠಿ ನಾಟಕಗಳೆರಡನ್ನೂ ಆಡಿಸಿದ. ಶಾಂತಕವಿಗಳ ‘ಎಲ್ಲಿ ನೋಡಲು ಮಹಾರಾಷ್ಟ್ರ ನಾಟಕ ಕೀರ್ತಿ’ ಎನ್ನುವ ಪದ್ಯವೊಂದರಲ್ಲಿ ಆ ಕಾಲದಲ್ಲಿ ಕರ್ನಾಟಕದ ಜನತೆಯ ಮೇಲೆ ಮರಾಠಿ ನಾಟಕಗಳು ಬೀರಿದ ಪರಿಣಾಮದ ಅರಿವಾಗುತ್ತದೆ. ಜನತೆ ಮರಾಠಿ ನಾಟಕಗಳಿಗೆ ಕೊಡುತ್ತಿದ್ದ ಪ್ರೋತ್ಸಾಹವನ್ನು ಕಂಡು ಶಾಂತಕವಿಗಳು ಗದಗಿನ ನಾಟ್ಯ ವಿಲಾಸಿಗಳ ಸಹಕಾರದಿಂದ ಉಷಾಹರಣವೆಂಬ ನಾಟಕವನ್ನು ರಚಿಸಿ ಆಡಿಸಿದರು. ಪುಣೆಯ ಕಾಲೇಜಿನಲ್ಲಿ ಕಲಿತ ಕನ್ನಡಿಗ ವೆಂಕಟರಂಗೋ ಕಟ್ಟಿ ‘ಸವಾಯಿ ಮಾಧವ ರಾಯಾಂಚೆ ನಾಟಕ’ ಎನ್ನುವ ಸ್ವತಂತ್ರ ಮರಾಠಿ ಐತಿಹಾಸಿಕ ನಾಟಕವನ್ನು ಬರೆದಿದ್ದಾರೆ. ಇತ್ತೀಚೆಗೆ ಮುಕ್ತಾಬಾಯಿ ದೀಕ್ಷಿತ್ ಮೊದಲಾದ ಹಲವರ ಮರಾಠಿ ನಾಟಕಗಳು ಕನ್ನಡಕ್ಕೆ ಅನುವಾದಗೊಂಡಿವೆ. ಕೀರ್ತನಕಾರರು ಕೀರ್ತನೆಗಳನ್ನು ಮಾಡುವಾಗ ಮರಾಠಿ ಅಭಂಗಗಳನ್ನೂ ಕಟಾವ್ಗಳನ್ನೂ ಹೇಳಿ ಅರ್ಥ ವಿವರಿಸುತ್ತಿದ್ದರು. ಅದರಿಂದ ಉಂಟಾಗುತ್ತಿದ್ದ ರಸಾಭಾಸವನ್ನು ಕಂಡು ಶಾಂತಕವಿ ಹರಿಕೀರ್ತನೆ ಎನ್ನುವ ಕೃತಿಯನ್ನು ರಚಿಸಿದರು.

ಕನ್ನಡದಲ್ಲಿ ಕಾದಂಬರಿಗಳ ರಚನೆಗೆ ಮರಾಠಿ (ಮತ್ತು ಬಂಗಾಲಿ) ಕಾದಂಬರಿಗಳಿಂದ ಮಾರ್ಗದರ್ಶನ ದೊರೆಯಿತು. ಲಕ್ಷ್ಮಣರಾವ್ ಗದಗಕರನ ಸೂರ್ಯಕಾಂತ (1892) ಎನ್ನುವ ಕೃತಿ ಕನ್ನಡದ ಮೊದಲ ಕಾದಂಬರಿ ಎಂದು ಕೆಲವರ ಅಬಿsಪ್ರಾಯ. ಇಲ್ಲಿ ಮೊದಲ ಬಾರಿಗೆ ಕಾದಂಬರಿ ಎನ್ನುವ ಮಾತನ್ನು ಬಳಸಿದೆ. ಇದು ಬಹುಶಃ ಮರಾಠಿಯ ಪರಿಚಯದ ಪ್ರಭಾವವಿರಬಹುದು. ಮುಂದೆ ಗಳಗನಾಥರು ಹರಿನಾರಾಯಣ ಆಪ್ಟೆಯವರ ಮಹಾರಾಷ್ಟ್ರ ಮತ್ತು ರಾಜಸ್ಥಾನದ ಇತಿಹಾಸವನ್ನೊಳಗೊಂಡ ಕೃತಿಗಳನ್ನು ಆಧರಿಸಿ ಕೃತಿರಚನೆ ಮಾಡಿದರಲ್ಲದೆ ವಿಜಯನಗರ ಮತ್ತು ಮೈಸೂರು ಇತಿಹಾಸದ ವಸ್ತುವಿನ ಕೃತಿಗಳನ್ನು ರಚಿಸಿದ್ದಾರೆ.

ಹೀಗೆಯೇ ಕೆರೂರ ವಾಸುದೇವಾಚಾರ್ಯರು ಮರಾಠಿ ಕಥೆಗಳನ್ನು ಆಧರಿಸಿ ತಮ್ಮ ಕೆಲವು ಕಥೆಗಳನ್ನು ಬರೆದಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ ಮತ್ತು ಅ.ನ.ಕೃಷ್ಣರಾಯರ ಕಥೆಗಳು ಮರಾಠಿಗೆ ಅನುವಾದವಾಗಿವೆ. ಅಲ್ಲದೆ ವಿನೋಬಾ, ಸಾವರ್ಕರ್, ಸಾನೆ ಗುರೂಜಿ ಮೊದಲಾದವರ ಬರೆಹಗಳೂ ಈಗಾಗಲೇ ಕನ್ನಡಕ್ಕೆ ಬಂದಿವೆ.

ಶತಮಾನಗಳಿಂದ ಬೆಳೆದುಬಂದ ಕನ್ನಡ ಮರಾಠಿ ಸಾಹಿತ್ಯದ ಕೊಳುಕೊಡೆ ಇಂದು ಇನ್ನೂ ದಟ್ಟವಾಗಿದೆ. ಕನ್ನಡ ಮರಾಠಿ ಕಾವ್ಯಪ್ರಪಂಚದಲ್ಲಿ ಪ್ರಸಿದ್ಧರಾದ ಬೇಂದ್ರೆಯವರ ಮಾತೃಭಾಷೆ ಮರಾಠಿ. ಮರಾಠಿ ಕಾವ್ಯ ಪ್ರಪಂಚದ ಉನ್ನತಿಗೆ ಕಾರಣರಾದ ಕೇಶವಸುತರು ಕರ್ನಾಟಕದಲ್ಲಿದ್ದವರು (ಧಾರವಾಡದಲ್ಲಿ ಶಿಕ್ಷಕರಾಗಿದ್ದು ಹುಬ್ಬಳ್ಳಿಯಲ್ಲಿ ದಿವಂಗತರಾದರು). ಅವರ ಮರಾಠಿ ಕವನ ಒಂದನ್ನು (ತುತೂರಿ) ಗೋವಿಂದ ಪೈ ಅನುವಾದಿಸಿದ್ದಾರೆ.

ಕೆ.ಜಿ.ಕುಂದಣಗಾರ, ಪಿ.ಬಿ.ದೇಸಾಯಿ, ಶಂ.ಬಾ.ಜೋಶಿ, ಆ.ನೇ.ಉಪಾಧ್ಯೆ, ವಿ.ಕೃ.ಗೋಕಾಕ, ರಂ.ಶ್ರೀ.ಮುಗಳಿ, ಶ್ರೀರಂಗ ಮೊದಲಾದ ಸಾಹಿತಿಗಳು ಈ ಉಭಯ ಸಂಸ್ಕೃತಿಗಳ ಹಾಗೂ ಭಾಷೆ ಮತ್ತು ಸಾಹಿತ್ಯಗಳ ಬಾಂಧವ್ಯವನ್ನು ಹಲವು ವಿಧದಲ್ಲಿ ಬೆಳೆಸಿದ್ದಾರೆ. (ಜಿ.ಜಿ.ಎಂ.)

ಕೊಂಕಣಿ[ಬದಲಾಯಿಸಿ]

ಕೊಂಕಣಿ ಭಾಷೆ ಕರ್ನಾಟಕಕ್ಕೆ ಹಿಂದಿನಿಂದ ಪರಿಚಿತವಾಗಿದೆ. ಉತ್ತರ ಭಾರತದಲ್ಲಿ ಹುಟ್ಟಿದ ಈ ಭಾಷೆ ಪಶ್ಚಿಮ ಕರಾವಳಿಯ ದಾರಿಯಾಗಿ ಇಳಿದು ಉತ್ತರ ಕನ್ನಡದ ಗಂಗಾವತಿ ನದಿಯವರೆಗೆ ಬಂತು. ಕೊಂಕಣಿ ಭಾಷೆಯಲ್ಲಿ ಅನೇಕ ಸುಧಾರಣೆಗಳನ್ನು ತಂದ ಸಾರಸ್ವತರು ಗೋವೆಗೆ ಬಂದು ನೆಲೆನಿಂತಾಗ ಅದು ಗೋವ ಕದಂಬರ ಆಳಿಕೆಗೆ ಒಳಪಟ್ಟಿತ್ತು. ಅವರ ಆಡಳಿತ ಭಾಷೆ ಕನ್ನಡವಾಗಿದ್ದುದರಿಂದ ಕನ್ನಡಕ್ಕೂ ಕೊಂಕಣಿಗೂ ಸಂಬಂಧ ಏರ್ಪಟ್ಟಿತು. ಇದರಿಂದಾಗಿ ಈ ಶೆಣೈ (ಸಾರಸ್ವತ ವರ್ತಕರು) ವ್ಯಾಪಾರಿಗಳು ಹಾಗೂ ದಲಾಲರು ಕನ್ನಡ ಲಿಪಿಯನ್ನು ಬಳಸಿಕೊಂಡು ಕೊಂಕಣಿ ಭಾಷೆಯಲ್ಲಿ ತಮ್ಮ ಅಂಗಡಿಯ ಲೆಕ್ಕಪತ್ರಗಳನ್ನು ಬರೆದರು. ಹೀಗೆ ಆರಂಭವಾದ ಕನ್ನಡ-ಕೊಂಕಣಿ ಸಂಬಂಧ ಕನಿಷ್ಠ ಪಕ್ಷ ಲಿಪಿಯ ಮಟ್ಟದಲ್ಲಾದರೂ ಪೋರ್ಚುಗೀಸರ, ಡಚ್ಚರ ಕಾಲದಲ್ಲಿ ಉಳಿದಿತ್ತು.

ಗೋವೆಯ ಕೊಂಕಣಿ ಜನ ಭಾರೀ ಪ್ರಮಾಣದಲ್ಲಿ ಕರ್ನಾಟಕಕ್ಕೆ ವಲಸೆ ಬಂದ ಮೇಲೆ ಕನ್ನಡದ ಪ್ರಭಾವ ಕೊಂಕಣಿಯ ಮೇಲೆ ಇನ್ನಷ್ಟು ಹೆಚ್ಚಾಯಿತು. 16-17ನೆಯ ಶತಮಾನಗಳಲ್ಲಿ ಬಿದನೂರು ಮತ್ತು ಸೋದೆ ರಾಜ್ಯಗಳ ವಿವಿಧ ಭಾಗಗಳಲ್ಲಿ ಕೊಂಕಣಿ ಹಿಂದು ಜನ ಭಾರಿ ಪ್ರಮಾಣದಲ್ಲಿ ಬಂದು ನೆಲೆನಿಂತರು. ಅನಂತರ ಕೊಂಕಣಿ ಮರಾಠರೆಂದು ಕರೆಯಲಾಗುವ ಗಾಂವಕರರು ಬಹುಪಾಲು ಕಾರವಾರ ತಾಲ್ಲೂಕಿನಲ್ಲಿ ನೆಲೆಸಿದರು. ಇವರ ಜೊತೆಗೆ ಭಂಡಾರಿಗಳು, ಪಟ್ಟಿಗಳು, ಕುಮಾರ ಪಂಥದವರು ಅಕ್ಕಸಾಲಿಗರು ಬಂದರು. ಕ್ರೈಸ್ತರು ಬಿದನೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಕುಮಟ, ಹೊನ್ನಾವರ ತಾಲ್ಲೂಕುಗಳಲ್ಲಿ ನೆಲೆನಿಂತರು.

ಕರ್ನಾಟಕಕ್ಕೆ ಬಂದ ಮೇಲೆ ಶೆಣ್ವೆಗಳು ಕನ್ನಡ ಲಿಪಿಯನ್ನು ಉಪಯೋಗಿಸುವುದನ್ನು ಮುಂದುವರಿಸಿದರು. ಈ ನಡವಳಿಕೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲೂ ಕಂಡುಬಂತು. ಇದೆಲ್ಲವೂ ಕನ್ನಡವೆಂದು ಭಾವಿಸಿದ್ದ ಆಂಗ್ಲ ಆಡಳಿತಗಾರರು ಕನ್ನಡ ಜಿಲ್ಲೆಗಳಲ್ಲಿ ಕನ್ನಡವನ್ನೇ ಆಡಳಿತ ಭಾಷೆಯಾಗಿ ಮಾಡಿದರು. ಕನ್ನಡವನ್ನು ಶಾಲೆಗಳಲ್ಲಿ ಜಾರಿಗೆ ತರುವವರೆಗೆ, ಶೆಣ್ವೆಗಳು ತಮ್ಮ ಈ ಪದ್ಧತಿಯನ್ನು ಮುಂದುವರಿಸಿದರು. ಆದರೆ ಕ್ರೈಸ್ತರು ಇಂದಿಗೂ ಇದೇ ಪದ್ಧತಿಯನ್ನು ಮುಂದುವರಿಸುತ್ತಾರೆ. ಅವರ ಎಲ್ಲಾ ಧಾರ್ಮಿಕ ಬರೆವಣಿಗೆಗಳೂ ಅವರ ಪತ್ರಿಕೆಗಳೂ ಕನ್ನಡ ಲಿಪಿಯನ್ನೊಳಗೊಂಡಿದ್ದು ಕೊಂಕಣಿ ಭಾಷೆಯಲ್ಲಿವೆ. ಇದೇ ಕಾಲದಲ್ಲಿ ಕೊಂಕಣಿ ಭಾಷೆಗೆ ಬೇಕಾದ ಲಿಪಿಯೆಂದು ಕನ್ನಡ ಲಿಪಿಯ ಅಚ್ಚಿನ ಮೊಳೆಗಳನ್ನು ಸಿದ್ಧಪಡಿಸಲು ಜೆಸುಯಿಟರೆಂಬ ಕ್ರೈಸ್ತ ಧಾರ್ಮಿಕ ಸಂಸ್ಥೆಯವರು ಮುಂದೆ ಬಂದರು. ಇವರ ಪ್ರಥಮ ಪ್ರಯತ್ನ ಗುರಿಮುಟ್ಟಿದಂತೆ ಕಾಣುವುದಿಲ್ಲ. ಒಂದು ವೇಳೆ ಗುರಿ ಮುಟ್ಟಿದ್ದರೆ ಭಾರತದ ಮುದ್ರಣದ ಇತಿಹಾಸದಲ್ಲಿ ಕನ್ನಡಕ್ಕೆ ಲಿಪಿಯ ಮಟ್ಟದಲ್ಲಾದರೂ ಪ್ರಪ್ರಥಮ ಸ್ಥಾನ ಸಲ್ಲುತ್ತಿತ್ತು. ಮಂಗಳೂರಿನ ಕೊಡಿಯಾಲಬೈಲ ಮುದ್ರಣಾಲಯ ಕೊಂಕಣಿಯನ್ನು ಕನ್ನಡ ಲಿಪಿಯಲ್ಲಿ ಮುದ್ರಿಸತೊಡಗಿತು. ಕರ್ನಾಟಕದಲ್ಲಿ ಈ ಲಿಪಿಗಳನ್ನು ಮೊದಲಿಗೆ ರೂಢಿಸಿದವರು ಇವರೆ ಇದ್ದಿರಬೇಕು.

ಕೊಂಕಣಿಯನ್ನು ಈಗಲೂ ದಕ್ಷಿಣ ಕನ್ನಡದಲ್ಲಿ ಕನ್ನಡ ಲಿಪಿಯಲ್ಲಿಯೇ ಬರೆಯುತ್ತಾರೆ. ಹೀಗೆ ಬರೆಯುವಾಗ ಅಲ್ಪಪ್ರಾಣ ಮಹಾಪ್ರಾಣಗಳು, ಹ್ರಸ್ವ ದೀರ್ಘ ಸ್ವರಗಳು ಎಷ್ಟೋ ವೇಳೆ ಕನ್ನಡ ಲಿಪಿ ವ್ಯವಸ್ಥೆಯಲ್ಲಿ ಇದ್ದ ಹಾಗೆಯೇ ಇರುವುದುಂಟು. ಆಡುನುಡಿಯಲ್ಲಿರುವ ಮಹಾಪ್ರಾಣಗಳು ಬರೆಹದಲ್ಲಿ ಬಂದ ಉದಾಹರಣೆಗಳಿವೆ. ಇದರ ಪರಿಣಾಮವಾಗಿ ಶಿಷ್ಟರೆಂದೆನ್ನಿಸಿಕೊಳ್ಳುವವರು ಬರೆಹದ ಉಚ್ಚಾರ ಕ್ರಮವನ್ನೇ ಪ್ರಮಾಣವಾಗಿ ಇಟ್ಟುಕೊಂಡು ಆಡುನುಡಿಯ ರೀತಿಯನ್ನೇ ವ್ಯತ್ಯಾಸಗೊಳಿಸುತ್ತಿದ್ದಾರೆ. ಹೀಗೆ ವ್ಯತ್ಯಸ್ತವಾದ ಭಾಷೆ ಆಧುನಿಕರ ಪೈಕಿ ಕೆಲವರಲ್ಲಿ ರೂಢಿಗೆ ಬರುತ್ತಿದೆ.

ಮಂಗಳೂರಿನ ಕೊಂಕಣಿ ಜನರ ಮೇಲೆ, ಹೆಚ್ಚಾಗಿ ಕ್ರೈಸ್ತರ ಮೇಲೆ ಇಂಗ್ಲಿಷ್ ಪ್ರಭಾವ ದಟ್ಟವಾಗಿದ್ದಾಗ, ಈಗ್ಗೆ ಸು. 20-30 ವರ್ಷಗಳ ಹಿಂದೆ, ಇಂಗ್ಲಿಷ್ ಹೆಸರುಗಳನ್ನು ಬರೆಯುವಲ್ಲಿ ಒಂದು ವಿಶಿಷ್ಟತೆ ಇರುತ್ತಿತ್ತು. ಉದಾ. ಜೊನ್ಸನ್, ಈಗ ಕನ್ನಡದ ಪ್ರಭಾವ ಬೆಳೆದಂತೆ ಜಾನ್ಸನ್ ಎಂದು ಬರೆಯುವ ರೂಢಿ ಬಂದಿದೆ. ಕನ್ನಡದ ಪ್ರಭಾವ ಕೊಂಕಣಿಯ ಲಿಪಿ ವ್ಯವಸ್ಥೆಯನ್ನು ಮಾರ್ಪಡಿಸಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಕನ್ನಡ-ಕೊಂಕಣಿ ಸಂಬಂಧ ಲಿಪಿಯೊಂದಕ್ಕೆ ಸೀಮಿತವಾಗಿಲ್ಲ. ವ್ಯಾಕರಣ ಪದಕೋಶಗಳ ಮೇಲಾದ ಪರಸ್ಪರ ಪ್ರಭಾವಗಳನ್ನು ಗುರುತಿಸುವ ಪ್ರಯತ್ನಗಳೂ ನಡೆದಿವೆ. ಕೊಂಕಣಿಯಲ್ಲಿ ಸೇರಿದ ಕನ್ನಡ ಪದಗಳು, ಗಾದೆಗಳು ಮತ್ತು ಲಾಲಿ ಹಾಡುಗಳು ಮುಂತಾದವನ್ನು ಸಂಗ್ರಹಿಸುವ ಪ್ರಯತ್ನವೂ ಕೆಲಮಟ್ಟಿಗೆ ನಡೆದಿದೆ.

ಕೊಂಕಣಿ ಗಾದೆ ಒಗಟುಗಳ ಒಂದು ಸಂಗ್ರಹದಲ್ಲಿ 136 ಕನ್ನಡ ಗಾದೆಗಳಿವೆ. ಇವುಗಳಲ್ಲಿ ಎಷ್ಟೋ ಗಾದೆಗಳು ಇಂದು ಕನ್ನಡದಲ್ಲಿ ಅಷ್ಟಾಗಿ ಪ್ರಚುರವಾಗಿರದೆ ಕೊಂಕಣಿಯಲ್ಲಿಯೇ ಇದ್ದ ಹಾಗೆ ಕಾಣುತ್ತದೆ. ಉದಾ. ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ; ಮೂವರ ಕಿವಿಗೆ ಮುಟ್ಟಿದ್ದು ಮೂರು ಲೋಕಕ್ಕೆ; ಯಾವ ದೇವರ ಗುಡಿಯಾದರೇನು ನಿದ್ದೆ ಬಿದ್ದರೆ ಲೆಕ್ಕ ಇತ್ಯಾದಿ. ಬರಗಾಲಾಂಕ ಬುತ್ತಿ ಮೇಕಳ್ಳಿ; ನೋಟಕ ನಾ ನುಡಿಯಾಕ ನಾ: ಆಶಾ ಆಶಿಲ್ಯಾ ಸಾಧುಕ, ಮಿಶೋ ಆಶಿಲ್ಯಾ ಸನ್ಯಾಶಾಕ ನಂಬುನಯೇ - ಇತ್ಯಾದಿ ಕೊಂಕಣಿ ಗಾದೆಗಳಲ್ಲಿ ಕನ್ನಡ ಮಾತುಗಳು ಬೆರೆತಿರುವುದು ಸ್ಪಷ್ಟವಾಗಿದೆ. ಹೀಗೆಯೇ ಬಾವಲಿ, ಬಾವಲಕ್ಕಿ, ಮಣಗಟ್ಟು, ಬೇಗಡಿ, ಭಾಂಗಾರ್, ಬ್ರಹ್ಮಗುಡಿ, ತಲವಾರ, ದುಡ್ಡು, ಹೂವ, ನತ್ತು, ಬಡ್ಡಿ, ಕೊಪ್ಪರು, ಗುಪಚೀ (ಗುಬ್ಬಚ್ಚಿ), ಬಾಗಿಲು, ಅಂಗಡಿ, ಕಬ್ಬು - ಈ ಮುಂತಾದ ಕನ್ನಡ ಮಾತುಗಳು ಕೊಂಕಣಿಯ ಪದಕೋಶವನ್ನು ಪ್ರವೇಶಿಸಿರುವುದು ಕಾಣುತ್ತದೆ.

ವ್ಯಾಕರಣದ ದೃಷ್ಟಿಯಿಂದ ಕನ್ನಡ ಕೊಂಕಣಿಯ ಮೇಲೆ ಪ್ರಭಾವವನ್ನು ಬೀರಿದೆ. ಕನ್ನಡದ ಪದಗಳನ್ನು ಸ್ವೀಕರಿಸಿದಾಗ ಕೊಂಕಣಿ ತನ್ನಲ್ಲಿಯ ದೀರ್ಘ ಏ ಓ ಗಳನ್ನು ಹ್ರಸ್ವಗೊಳಿಸುತ್ತದೆ. ಕೊಂಕಣಿ ಶಬ್ದಗಳು ಮರಾಠಿಯಂತೆ ವ್ಯಂಜನಾಂತವಾಗಿರದೆ ಸ್ವರಾಂತವಾಗಿರುವುದು ಹೆಚ್ಚು. ಕೊಂಕಣಿ ಸಪ್ತಮೀ ವಿಭಕ್ತಿಯಾದ ಆ ಕಾರಾಂತವು ಉ ಕಾರಾಂತವಾಗುತ್ತದೆ. ಉದಾ: ಪಾನಾಂತು, ಝಾಡಾಂತು. ಮರಾಠಿಯ ಕ್ರಿಯಾಪದಗಳು ಓ ಕಾರಾಂತರವಾಗಿದ್ದರೆ, ಕೊಂಕಣಿಯಲ್ಲಿ ಆ, ಆಂ ಗಳು ಬರುತ್ತವೆ. ಉದಾ: ಧಾವತೊ (ಮರಾಠಿ) ಧಾವತಾಂ (ಕೊಂಕಣಿ). ಇದು ಹಳಗನ್ನಡದಲ್ಲಿ ಪ್ರಾಚೀನ ಕ್ರಿಯಾರೂಪಗಳಲ್ಲಿ ಸೇರುವ ಒನ್, ಆನ್ ಆಖ್ಯಾತ ಪ್ರತ್ಯಯಗಳ ಪ್ರಭಾವದ ಫಲವಿರಬಹುದು. ಮರಾಠಿಯ ಚತುರ್ಥಿ ವಿಭಕ್ತಿಯ ಲಾ ಪ್ರತ್ಯಯದ ಪ್ರತಿಯಾಗಿ, ಕೊಂಕಣಿಯಲ್ಲಿ ಕ ಬರುತ್ತದೆ. ಇದು ಕನ್ನಡದ ‘ಕೆ’ ಪ್ರತ್ಯಯಕ್ಕೆ ಸಮೀಪತರ. ಕೆಲವರು ಭಾವಿಸುವಂತೆ ಹಿಂದಿ ‘ಕೊ’ ಪ್ರಭಾವವಿರುವುದು ಇಲ್ಲಿ. ಕೊಂಕಣಿಯ ವಾಕ್ಯಗಳ ಧ್ವನಿಯೂ ಇದನ್ನು ಸೂಚಿಸುತ್ತದೆ. ದಮಡಿ, ಮಾಲಾಕ, ದುಗಾಣೀ (ದುಗ್ಗಾಣಿ), ದಲಾಲಿ ಇತ್ಯಾದಿ. ಪಂಚಮೀ ವಿಭಕ್ತಿಯಲ್ಲಿ ಮರಾಠಿ ಹೂನ್ ಪ್ರತ್ಯಯ ಕೊಂಕಣಿಯಲ್ಲಿಲ್ಲ. ‘ಥಾಮನ್’, ‘ಥಾವÆನ್’ ಇದೆ. ಅಂತ್ ಮತ್ತು ಹೂನ್ ಇವುಗಳ ಸೇರಿಕೆಯನ್ನು ಕೆಲವರು ಇಲ್ಲಿ ಭಾವಿಸುತ್ತಾರೆ. ಕನ್ನಡ ಪಂಚಮಿಯ ಅತ್ತಣ ಇಲ್ಲಿ ಪ್ರತ್ಯಯದ ಮೂಲವಿರಬಹುದೆ ಎಂಬ ಸಂದೇಹವಿದೆ.

ಈ ವಿಚಾರದ ಮಂಡನೆಯಲ್ಲಿ ಕೊಂಕಣಿ ಮರಾಠಿಯಿಂದ ಕೆಲವೆಡೆ ಬಿsನ್ನವಾಗಿದೆ ಯೆಂದೂ ಈ ಬಿsನ್ನತೆಗಳಿಗೆ ಕನ್ನಡದ ಪ್ರಭಾವವೇ ಕಾರಣವೆಂದೂ ತರ್ಕಿಸಲಾಗಿದೆ. ಕೊಂಕಣಿ ಮರಾಠಿಯಿಂದ ಬಂದಿದೆ, ಆದುದರಿಂದ ಇದರಲ್ಲಿ ಬಿsನ್ನೆತೆಗಳಿರಬಾರದು ಎಂಬುದು ಪುರ್ವಪಕ್ಷ. ಆದರೆ ಕೊಂಕಣಿಯ ಉಗಮದ ಬಗೆಗಿನ ಈ ಹೇಳಿಕೆ ಇನ್ನೂ ವಾದಗ್ರಸ್ತವಾಗಿದೆ. ಕನ್ನಡ ಪ್ರಭಾವದ ಪರಿಣಾಮಗಳು ಎಂದು ಹೇಳಲಾದ ಮಾರ್ಪಾಟುಗಳು ಕೂಡ ಕೊಂಕಣಿಯ ಸ್ವಾಭಾವಿಕ ಲಕ್ಷಣಗಳೇ ಆಗಿರುವುದು ಅಸಾಧ್ಯವೇ ಎಂದು ವಿಚಾರ ಮಾಡಬೇಕು. ಕೊಂಕಣಿಯ ಕೆಲವು ಪ್ರಭೇದಗಳ ಮೇಲೆ ಕನ್ನಡದ ಪ್ರಭಾವ ಹೆಚ್ಚಾಗಿ ಬಿದ್ದಿದೆ ಎಂದು ಪ್ರಾಯಃ ಹೇಳಬಹುದು. ಸ್ವರಾಂತ ಕೊಂಕಣಿ ಶಬ್ದಗಳು ಮಂಗಳೂರಿನ ಕ್ರೈಸ್ತೇತರ ಕೊಂಕಣಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಜನರಿಗೆ ಕನ್ನಡದೊಡನೆ ಸಂಪರ್ಕ ಹೆಚ್ಚಿದ್ದು ಅಷ್ಟು ಸಂಪರ್ಕವಿರದ ಅವರ ಕ್ರೈಸ್ತ ಭಾಷಾಬಾಂಧವರ ಮಾತುಗಳು ವ್ಯಂಜನಾಂತವಾಗಿಯೇ ಉಳಿದಿವೆ ಎಂಬುದನ್ನೂ ಗಮನಿಸಬೇಕು. ಉದಾ: ದೇವ್, ದೀಸ್, ಮನಿಸ್ ಇತ್ಯಾದಿ. ಹಿಂದೆ ಬಳಕೆಯಲ್ಲಿದ್ದ ಕೆಲವು ಕೊಂಕಣಿ ಪದಗಳು ತಮ್ಮ ಸ್ಥಾನವನ್ನು ಈಗ ಕನ್ನಡ ಪದಗಳಿಗೆ ಬಿಟ್ಟುಕೊಟ್ಟಿವೆ. ಬಾಗಿಲ್ (ಬಾಗಿಲು- ಕನ್ನಡ)-ದಾರ್ (ಕೊಂಕಣಿ), ಗುಡೊ (ಗುಡ್ಡ-ಕ) - ದೊಂಗೊರ್ (ಕೊಂ) ಗಾದೊ (ಗದ್ದೆ-ಕ) - ಶೆತ್ (ಕೊಂ), ಶಾಯಿ (ಕಾಯಿ-ಕ) - ತೀಂತ್ (ಕೆಲಾಂ), ಪಾಠ (ಪಾಠ-ಕ) - ಲಿಸಾಂವ್ (ಕೊಂ), ತರ್ಕಾರಿ (ತರಕಾರಿ-ಕಂ) - ರಾಂದ್ವೊಯ್ (ಕೊಂ), ಮುಕ್ಕಾಲ್ (ಮುಕ್ಕಾಲು-ಕ) - ಡೆಕ್ಕಿ (ಕೊಂ), ಕೊಂಕಣಿ ಪದಗಳನ್ನು ಬಹಳ ಅಪುರ್ವವಾಗಿ ಮಾತ್ರ ಕೇಳುತ್ತೇವೆ. ಹೀಗೆಯೇ ಕನ್ನಡದ ಮೇಲಾದ ಕೊಂಕಣಿಯ ಪ್ರಭಾವ ಸಿಗರೇಟ್ ಎಳೆ-ಸಿಗರೇಟ್ ಮೋಡ್, ನಿದ್ದೆತೆಗಿ-ನೀದ್ಕಾಡ್ (ಕೊಂ) ಮುಂತಾದ ನುಡಿಗಟ್ಟುಗಳಲ್ಲಿ ಹೊಳಹು ತೋರಿದೆ. (ಇ.ಎನ್.)

ಇಂಗ್ಲಿಷ್[ಬದಲಾಯಿಸಿ]

ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ಮೇಲೆ ಇಂಗ್ಲಿಷ್ ಭಾಷೆ ಭಾರತದಲ್ಲಿ ಪ್ರಚಾರಕ್ಕೆ ಬಂತು. ಭಾಷೆಯೊಂದಿಗೆ ಆ ಭಾಷೆಯ ಸಾಹಿತ್ಯವೂ ಭಾರತೀಯರಿಗೆ ಪರಿಚಿತವಾಯಿತು. ಕರ್ನಾಟಕ ಇದಕ್ಕೆ ಹೊರತಾಗಿಲ್ಲ. ಶ್ರೀಮಂತವೂ ಸಂಕೀರ್ಣವೂ ಆದ ಇಂಗ್ಲಿಷ್ ಸಾಹಿತ್ಯ ಆಧುನಿಕ ಕನ್ನಡ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಅಪಾರ. ಕನ್ನಡ ವಾಙ್ಮಯದಲ್ಲಿ ಇಂಗ್ಲಿಷಿನ ಪ್ರಭಾವ ಪ್ರತ್ಯೇಕಿಸಿ ತೋರಿಸುವುದು ಕಠಿಣ ಎನ್ನುವಷ್ಟರಮಟ್ಟಿಗೆ ಹಾಸುಹೊಕ್ಕಾಗಿದೆ. ಇಂದಿನ ಅನೇಕ ಸಾಹಿತ್ಯ ಪ್ರಕಾರಗಳು ನೇರವಾಗಿ ಇಂಗ್ಲಿಷಿನಿಂದ ಬಂದವು ಅಥವಾ ಅದರ ಸಂಪರ್ಕದಿಂದ ಸಿದ್ಧವಾದವು. ಪ್ರಭಾವದ ಜೊತೆಗೆ ಅನುಕರಣ ಅನುವಾದಗಳನ್ನೂ ಲೆಕ್ಕಿಸಿದರೆ ಇಂಗ್ಲಿಷ್ ಸಾಹಿತ್ಯ ಕನ್ನಡವನ್ನು ಶ್ರೀಮಂತಗೊಳಿಸಿರುವುದು ತಿಳಿಯುತ್ತದೆ. ಇಂಗ್ಲಿಷ್ ಸಾಹಿತ್ಯದ ಮೂಲಕ ಕನ್ನಡಕ್ಕೆ ಐರೋಪ್ಯಸಾಹಿತ್ಯದ ಪರಿಚಯವಾಯಿತು. ಕನ್ನಡ ಸಾಹಿತ್ಯದ ಮೇಲೆ ಇಂಗ್ಲಿಷ್ ಸಾಹಿತ್ಯದ ಪ್ರಭಾವವೆಂದರೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವವೆಂದೇ ಅರ್ಥ. ಗ್ರೀಕ್, ಲ್ಯಾಟಿನ್, ಫ್ರೆಂಚ್, ಜರ್ಮನ್, ಇಟಾಲಿಯನ್, ರಷ್ಯನ್ ಮುಂತಾದ ಸಾಹಿತ್ಯಗಳೆಲ್ಲ ಇಂಗ್ಲಿಷಿನ ಮೂಲಕ ಆಧುನಿಕ ಕನ್ನಡ ಸಾಹಿತ್ಯವನ್ನು ಪ್ರಭಾವಿಸಿವೆ. ಪುರ್ವ-ಪಶ್ಚಿಮಗಳ ಸಂಗಮವೇ ಕನ್ನಡದ ಹೊಸ ಸಾಹಿತ್ಯಕ್ಕೆ ಹೇತುವೂ ಮೂಲಧಾತುವೂ ಆಯಿತು.

19ನೆಯ ಶತಮಾನದಲ್ಲಿ ಪಾಶ್ಚಾತ್ಯ ಸಂಸರ್ಗದ ಹೊಸ ಪ್ರವಾಹ ಬಂದು ಸೇರಿದ ಮೇಲೆ ಕನ್ನಡ ಸಾಹಿತ್ಯವಾಹಿನಿ ನಮೋನವವಾಗಿ ಜೀವಂತವಾಗಿ ಹರಿಯತೊಡಗಿತು. ಆಧುನಿಕ ಕನ್ನಡ ಸಾಹಿತ್ಯ ತಲೆ ಎತ್ತಿತು. 19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರು ಬಗೆಬಗೆಯ ಪಾಶ್ಚಾತ್ಯ ನಾಗರಿಕ ಸೌಲಭ್ಯಗಳನ್ನು ಭರತಖಂಡಕ್ಕೆ ಒದಗಿಸತೊಡಗಿದರು. ಈ ಪಾಶ್ಚಾತ್ಯ ಸಂಪರ್ಕ ನಾಲ್ಕು ರೀತಿಯಲ್ಲಿ ಉಂಟಾಯಿತೆಂದು ಹೇಳಲಾಗಿದೆ: ಆಡಳಿತ-ವ್ಯವಹಾರ, ಮುದ್ರಣ ಯಂತ್ರ, ಕ್ರೈಸ್ತಮತ ಪ್ರಚಾರ, ಹೊಸ ಶಿಕ್ಷಣ ಪದ್ಧತಿ-ಹೊಸ ವಿಚಾರಸರಣಿ. ಪಾಶ್ಚಾತ್ಯ ನಾಗರಿಕತೆಯ ಪ್ರಭಾವದಿಂದ ಭಾರತೀಯರ ಜೀವನದೃಷ್ಟಿ ಹಾಗೂ ಮೌಲ್ಯಗಳು ಬದಲಾದುವು; ಪಾಶ್ಚಾತ್ಯರ ವೈಚಾರಿಕ ಪ್ರವೃತ್ತಿ, ವ್ಯಾವಹಾರಿಕ ಲೌಕಿಕ ಮನೋಧರ್ಮ ಭಾರತೀಯರಲ್ಲಿ ಹರಡತೊಡಗಿದುವು. ಬ್ರಿಟಿಷರು ಜಾರಿಗೆ ತಂದ ಹೊಸ ಶಿಕ್ಷಣ ಪದ್ಧತಿ ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿತು. ಅದರಿಂದ ಭಾರತೀಯರ ಪಾಲಿಗೆ ನವದಿಗಂತಗಳು ತೆರೆದುಕೊಂಡವು. ಹೊಸದೊಂದು ಪ್ರಪಂಚದ ಪರಿಚಯವಾಯಿತು. ವಿಜ್ಞಾನ, ಇಂಗ್ಲಿಷ್ ಸಾಹಿತ್ಯ ಪ್ರಪಂಚದ ಪರಿಜ್ಞಾನ ಅವರಿಗೆ ಹಿಂದಿಲ್ಲದ ಅನುಭವಗಳನ್ನೂ ಸಂವೇದನೆಗಳನ್ನೂ ತಂದುಕೊಟ್ಟವು. ಬದುಕಿನ ರೀತಿನೀತಿಗಳನ್ನು ಮಾರ್ಪಡಿಸಿದುವು. ಇದುವರೆಗೆ ಮತಧರ್ಮದ ಆವರಣದಲ್ಲಿ ಬೆಳೆದುಬಂದಿದ್ದ ಭಾರತೀಯರ ಸಮಷ್ಟಿಪ್ರe್ಞೆ, ಲೌಕಿಕವಾದ ವ್ಯಷ್ಟಿಪ್ರe್ಞೆಯಾಗಿ ಸಂಕ್ರಮಣಗೊಂಡು, ಸ್ವತಂತ್ರ ವಿಚಾರಶಕ್ತಿ ಕುದುರತೊಡಗಿತು. ಭಾರತೀಯರಲ್ಲಿ ಸ್ವಾತಂತ್ರ್ಯಪ್ರೇಮ, ರಾಷ್ಟ್ರೀಯ ಭಾವನೆ, ಸ್ವಾಬಿsಮಾನ, ಸ್ವತಂತ್ರ ವಿಚಾರಸರಣಿಗಳು ಬೆಳೆಯಲು ಅದು ಕಾರಣವಾಯಿತು. ಇಂಗ್ಲಿಷ್ ಶಿಕ್ಷಣವೆಂತೊ ಅಂತೆ ಕ್ರೈಸ್ತ ಮಿಷನರಿಗಳು ತಂದ ಮುದ್ರಣಯಂತ್ರವೂ ಒಂದು ಕ್ರಾಂತಿ ಸಾಧನವಾಯಿತು, ವಾಚಕವರ್ಗವನ್ನು ಸೃಜಿಸಿ, ಬರೆಹಗಾರರಿಗೆ ಸ್ಫೂರ್ತಿ ಸಾಧನವಾಯಿತು.

ಈ ಎಲ್ಲ ಸಂಕ್ರಾಂತಿ ಭರತಖಂಡದ ಇತರ ಭಾಗಗಳನ್ನು ಹೇಗೋ ಹಾಗೆಯೇ ಕರ್ನಾಟಕವನ್ನೂ ವ್ಯಾಪಿಸಿ ಹೊಸ ಸಾಹಿತ್ಯ ಸೃಷ್ಟಿಗೆ ಪ್ರಚೋದಕವಾಯಿತು. ನಾಡು ನುಡಿಗಳ ಪ್ರೇಮ ಕನ್ನಡಿಗರಲ್ಲೂ ಜಾಗೃತವಾಯಿತು. ಇಂಗ್ಲಿಷ್ ಶಿಕ್ಷಣ ಪಡೆದ ಹೊಸ ಪೀಳಿಗೆಯ ಸಾಮಾನ್ಯ ಜನ ನವೀನ ಸಾಹಿತ್ಯದ ಹರಿಕಾರರಾದರು. ರೂಪ ವಸ್ತು ಭಾವ ಭಾಷೆಗಳಲ್ಲಿ ಸಾಹಿತ್ಯ ಹೊಸತನವನ್ನು ತಾಳಿತು.

ಹೊಸಗನ್ನಡದ ಅರುಣೋದಯವಾದುದು ಕ್ರೈಸ್ತ ಮಿಷನರಿಗಳಿಂದ. ಈ ಅರುಣೋದಯ ಕಾಲದಲ್ಲಿ ಮೂರು ಘಟ್ಟಗಳನ್ನು ಗುರುತಿಸಬಹುದು. ಸು. 1810-50 ನಸುಕಿನ ಕಾಲ. ಈ ಅವಧಿಯಲ್ಲಿ ಪಾಶ್ಚಾತ್ಯ ಶಿಕ್ಷಣ ಪದ್ಧತಿ ಇನ್ನೂ ನೆಲೆಗೊಂಡಿರಲಿಲ್ಲ. ಕ್ರೈಸ್ತ ಮಿಷನರಿಗಳು ಮಾತ್ರ ಗ್ರಂಥ ರಚನೆಯಲ್ಲಿ ತೊಡಗಿದ್ದರು. ದೇಶೀಯರು ಆ ಕಡೆ ಗಮನ ಹರಿಸಿರಲಿಲ್ಲ. 1851-80ರ ವರೆಗಿನ ಕಾಲವನ್ನು ಮುಂಬೆಳಗಿನ ಕಾಲವೆನ್ನಬಹುದು. ಆ ಅವಧಿಯಲ್ಲಿ ದೇಶೀಯರೂ ಗ್ರಂಥರಚನೆಯ ಕಡೆಗೆ ಮನಸ್ಸು ಕೊಟ್ಟು, ಅನುವಾದ ಕಾರ್ಯದಲ್ಲಿ ಮತ್ತು ಹಳೆಯ ಗ್ರಂಥಗಳ ಪರಿಷ್ಕರಣದಲ್ಲಿ ತೊಡಗಿದರು. 1881 ರಿಂದ 1899ರವರೆಗಿನ ಕಾಲವನ್ನು ಹೊಂಬೆಳಗಿನ ಕಾಲ ಅಥವಾ ನವೋದಯ ಕಾಲವೆನ್ನಬಹುದು. ಈ ಅವಧಿಯಲ್ಲಿ ಮತ್ತು ಅನಂತರ ಅನುವಾದ ಕೃತಿಗಳ ಜೊತೆಗೆ ಸ್ವತಂತ್ರ ಕೃತಿಗಳೂ ಕಾಣಿಸಿಕೊಂಡುವು. ಇಂಗ್ಲಿಷ್ ಶಿಕ್ಷಣ ಕ್ರಮ ಎಲ್ಲೆಲ್ಲೂ ರೂಢವಾಗಿ, ನವೀನ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಿದ ಕಾಲಾವಧಿಯಿದು. ಈ ಶಿಕ್ಷಣದ ಫಲವಾಗಿ ಹೊಸ ಧೋರಣೆಯುಂಟಾಗಿ, ಸಮಾಜ ಸುಧಾರಣೆಯೇ ಮೊದಲಾದ ಸ್ವತಂತ್ರ ವಿಚಾರಗಳು ಸ್ಫುರಿಸಿ ಅಬಿsವ್ಯಕ್ತಿಗಾಗಿ ಹಾತೊರೆದುವು. ಇಂಥ ಅಬಿsವ್ಯಕ್ತಿಯಲ್ಲಿ ವೈಯಕ್ತಿಕ ವಿಚಾರಧಾರೆ, ಲೌಕಿಕ ದೃಷ್ಟಿ, ವಾಸ್ತವಿಕತೆಯ ಪ್ರe್ಞೆ ತಲೆದೋರಿದುವು.

ಕ್ರೈಸ್ತಮಿಷನರಿಗಳ ಸಾಹಿತ್ಯಕಾರ್ಯ ಭಾಷಾಭ್ಯಾಸದ ಸಾಧನಗಳ ಮೂಲಕ ಪ್ರಾರಂಭವಾಯಿತು. ಕನ್ನಡ ವ್ಯಾಕರಣ, ನಿಘಂಟು, ಛಂದಸ್ಸುಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಅವರು ಹೊರತಂದರು. ಈ ದಿಶೆಯಲ್ಲಿ ವಿಲಿಯಂ ಕೇರಿಯ ವ್ಯಾಕರಣ (1817) ಆದ್ಯಕೃತಿ. ಮಿಷನರಿಗಳು ಕ್ರೈಸ್ತ ಸಾಹಿತ್ಯವನ್ನು ಕನ್ನಡಕ್ಕೆ ತಂದುದು ಮಖ್ಯವಾದ ಕಾರ್ಯ. 19ನೆಯ ಶತಮಾನದ ಪುರ್ವಾರ್ಧದಲ್ಲಿ ಇವೆೇ ಹೊಸಗನ್ನಡದ ಮುಖ್ಯ ಬರೆಹಗಳು. ಪಠ್ಯಪುಸ್ತಕ ರಚನೆ, ಪ್ರಾಚೀನ ಕೃತಿಗಳ ಶಾಸ್ತ್ರೀಯ ಸಂಪಾದನೆ ಹಾಗೂ ಮುದ್ರಣಾಲಯ ಸ್ಥಾಪನೆ ಮಿಷನರಿಗಳ ಮತ್ತು ಬ್ರಿಟಿಷ್ ಅಧಿಕಾರಿಗಳ ಇತರ ಕಾರ್ಯಗಳು.

ವಿದೇಶೀಯರು ಹೀಗೆ ಕನ್ನಡ ಸಾಹಿತ್ಯ ಸೇವೆಯನ್ನು ಹಿಂದೆಯೇ ಪ್ರಾರಂಬಿsಸಿದ್ದರೂ ದೇಶೀಯರು ಆ ಬಗ್ಗೆ ಮೊದಮೊದಲು ನಿರ್ಲಿಪ್ತರಾಗಿದ್ದರು. ಇದಕ್ಕೆ ಮುಖ್ಯ ಕಾರಣ ವೇನೆಂದರೆ, ನಾಡು ಆಡಳಿತ ದೃಷ್ಟಿಯಿಂದ ವಿಭಜಿತವಾಗಿದ್ದು, ಶೈಕ್ಷಣಿಕವಾಗಿ ಹಿಂದೆ ಬಿದ್ದಿತ್ತು. ಅಲ್ಲದೆ, ಮೈಸೂರಿನಲ್ಲಿ ರಾಜಾಸ್ಥಾನದಲ್ಲಿದ್ದವರು ಹೊಸತನವನ್ನು ಅಷ್ಟಾಗಿ ಸ್ವಾಗತಿಸದೆ ಸಂಪ್ರದಾಯದ ಜಾಡಿನಲ್ಲೆ ಸಾಗಿದ್ದರು. ಕರ್ನಾಟಕದ ಉಳಿದ ಭಾಗಗಳಲ್ಲೂ ನವೋದಯಕ್ಕೆ ಅವಕಾಶ ಸಿಗುವುದು ತಡವಾಯಿತು. ಆದ್ದರಿಂದ ಬಂಗಾಲಿ, ಮರಾಠಿ ಮುಂತಾದ ಸಾಹಿತ್ಯಗಳಲ್ಲಿ ಬೇಗ ಕಾಣಿಸಿಕೊಂಡ ದೇಶಾಬಿsಮಾನ, ಸಮಾಜ ಸುಧಾರಣೆಯ ಪ್ರವೃತ್ತಿ, ಪ್ರಗತಿಪರ ವಿಚಾರ ಧೋರಣೆಗಳು ಕನ್ನಡದಲ್ಲಿ ವಿಲಂಬಿತವಾಗಿ ಕಾಣಿಸಿಕೊಂಡುವು. ಏನಿದ್ದರೂ 1890ನೆಯ ದಶಕದಲ್ಲಿ ಸ್ವತಂತ್ರ ಕಾದಂಬರಿ ನಾಟಕಗಳು ಕನ್ನಡದಲ್ಲಿ ಹೊಮ್ಮಿದುವು. 1899ರಲ್ಲಿ ಪ್ರಥಮ ಸಾಮಾಜಿಕ ಕಾದಂಬರಿ ಹೊರಬಂತು. ಈ ನಡುವಣ ಅವಧಿ ಹೊಸಗನ್ನಡದ ಇತಿಹಾಸದಲ್ಲಿ ಮಹತ್ತ್ವದ ಶಕವೆನ್ನಲಾಗಿದೆ. ಹೊಸತು ನಿಚ್ಚಳವಾಗಿ, ಉಜ್ವಲವಾಗಿ ಕಾಣಿಸಿಕೊಂಡ ಕಾಲವದು.

ಹೊಸಗನ್ನಡ ಗದ್ಯದಲ್ಲಿ ಬೈಬಲ್ಲನ್ನು ಅನುವಾದಿಸಿದ (1812) ಜಾನ್ ಹ್ಯಾಂಡ್ಸ್‌ ಕರ್ನಾಟಕಕ್ಕೆ ಬಂದುದು 1810ರಲ್ಲಿ. ಆ ವರ್ಷವನ್ನು ಪಾಶ್ಚಾತ್ಯ ಪ್ರಭಾವದ ದೃಷ್ಟಿಯಿಂದ ಹೊಸಗನ್ನಡ ಸಾಹಿತ್ಯದ ಆರಂಭವರ್ಷವೆನ್ನಬಹುದು. ಲಿಯೊನಾರ್ಡೊ ಸಿನ್ನಾಮಿ ಎಂಬ ಮಿಷನರಿ 17ನೆಯ ಶತಮಾನದಲ್ಲೆ ಕರ್ನಾಟಕಕ್ಕೆ ಬಂದಿದ್ದ; ಅವನೇ ಹೊಸಗನ್ನಡದ ಪ್ರಪ್ರಥಮ ಗ್ರಂಥಕರ್ತ ಎನ್ನಲಾಗಿದೆ. ಆದರೆ ಅವನ ಕೃತಿಗಳು ದೊರೆತಿಲ್ಲ. ಜಾನ್ ಹ್ಯಾಂಡ್ಸ್‌ ಬೈಬಲ್ಲಿನ ಹೊಸ ಒಡಂಬಡಿಕೆಯ ನಾಲ್ಕು ಸುವಾರ್ತೆಗಳನ್ನು 1820ರಲ್ಲಿ ಹೊರತಂದ. ಅನಂತರ ಹೊಸ ಒಡಂಬಡಿಕೆಯ ಮುಂದಿನ ಭಾಗವನ್ನೂ ಹಳೆಯ ಒಡಂಬಡಿಕೆಯ ಅನುವಾದವನ್ನೂ ಸಿದ್ಧಗೊಳಿಸಿದ. ಸಮಗ್ರ ಬೈಬಲನ್ನು ಮೊದಲ ಬಾರಿಗೆ ಕನ್ನಡದಲ್ಲಿ ಹೊರತಂದವನು ಹ್ಯಾಂಡ್ಸ್‌. ಅವನಿಗಿಂತ ಮೊದಲೇ ವಿಲಿಯಂ ಕೇರಿ 1809ರಲ್ಲಿ ಬೈಬಲನ್ನು ಕನ್ನಡಕ್ಕೆ ತಂದಿದ್ದ. ಆದರೆ ಅದರ ಹಸ್ತಪತ್ರಿ 1812ರಲ್ಲಿ ಸುಟ್ಟು ಹೋಯಿತು. ಕೇರಿ ಮತ್ತೆ ಅದನ್ನು ಪ್ರತಿಮಾಡಿ 1823ರಲ್ಲಿ ಪ್ರಕಟಿಸಿದ. ಇದೇ ಹೊಸಗನ್ನಡದ ಮೊದಲ ಗದ್ಯಗ್ರಂಥವೆನ್ನಲಾಗಿದೆ. ಎ.ಬೌಥೆಲೊ ಬೈಬಲ್ಲಿನ ಸಂಕ್ಷಿಪ್ತ ರೂಪವನ್ನು ಕನ್ನಡದಲ್ಲಿ ಪ್ರಕಟಿಸಿದ. ರೀವ್ ಎಂಬಾತ ಯೇಸುಕ್ರಿಸ್ತನ ಅವತಾರ ಎಂಬ ಅನುವಾದವನ್ನೂ ಹಳೆಯ ಒಡಂಬಡಿಕೆಯ ಅನೇಕ ಪರ್ವಗಳನ್ನೂ ಕನ್ನಡದಲ್ಲಿ ಹೊರತಂದ (1820). ಜಾನ್ ಬುನ್ಯನ್’ಪಿಲ್ಗ್ರಿಮ್ಸ್‌ಪ್ರೋಗ್ರೆಸ್’ ಕೃತಿಯನ್ನು ದೇಶಾಂತ್ರಿಯ ಪಯಣ ಎಂಬ ಹೆಸರಿನಲ್ಲಿ ಅನುವಾದಿಸಿದ. ಬಿ.ಎಚ್.ರೈಸ್ ತನ್ನ ಸಹೋದ್ಯೋಗಿ ಸಿವೆಲ್ನೊಡನೆ ಬೈಬಲ್ಲಿನ ನೂರು ಮುಖ್ಯಾಂಶಗಳನ್ನು ಟಿಪ್ಪಣಿ ಸಹಿತ ಪ್ರಕಟಿಸಿದ (ವೇದ ಸಂಗ್ರಹ, 1844). ಸ್ಯಾಂಡರ್ಸನ್ ‘ಕಂ ಟು ಜೀಸಸ್’ ಎಂಬ ಕೃತಿಯನ್ನು (ಮೂಲ: ಸಿ.ಎನ್.ಹಾಲ್) ಅನುವಾದಿಸಿದ (1862). ಹೀಗೆಯೇ ಚಾರ್ಬೋನಾ ಎಂಬಾತ ದೈವಪರೀಕ್ಷೆ (1863), ಸತ್ಯವೇದ ಪರೀಕ್ಷೆ (1852), ದಿವ್ಯಮಾತೃಕೆ (1862), ಸುಕೃತ ಮಂತ್ರಗಳು (1866) ಇತ್ಯಾದಿಗಳನ್ನು ಅನುವಾದಿಸಿದ. ಹೆನ್ರಿ ಹೇಗ್ ಜಿಗ್ಲರನೊಡನೆ ಹೊಸ ಒಡಂಬಡಿಕೆಯ ಲ್ಯೂಕ್ ಮತ್ತು ಮಾರ್ಕರ ಸುವಾರ್ತೆಗಳನ್ನು ಭಾಷಾಂತರಿಸಿದ. ಮೊಗ್ಲಿಂಗನ ಜಾತಿ (ಮತ) ವಿಚಾರಣೆ (1845), ದೇವ ವಿಚಾರಣೆ (1852) ಇವು ಸ್ವತಂತ್ರ ಕೃತಿಗಳು. ಇವು ಹೊಸಗನ್ನಡದ ಆದ್ಯ ಪ್ರಬಂಧಗಳು. ‘ಪಿಲ್ಗ್ರಿಮ್ಸ್‌ನು ಪ್ರೋಗ್ರೇಸ್’ನ ಅನುವಾದವಾದ ಯಾತ್ರಿಕನ ಸಂಚಾರವನ್ನು ಮೊಗ್ಲಿಂಗನು ವೈಗಲ್ನೊಡನೆ 1849ರಲ್ಲಿ ಹೊರತಂದ. ‘ಸುದೀರ್ಘ ಕಥೆ ಅಥವಾ ಕಾದಂಬರಿಯಾಗಿ ಕನ್ನಡದಲ್ಲಿ ಇದೇ ಮೊದಲನೆಯದು. 1838ರಲ್ಲಿ ಲಿಟ್ಲ್‌ ವಿಲಿಯಂ ಎಂಬ ಕ್ರೈಸ್ತ ಕಥನದ ಅನುವಾದ ಪ್ರಕಟವಾಗಿತ್ತು. ಪ್ರವಚನಕ್ಕೆ ಬೇಕಾದ ಕ್ರೈಸ್ತ ಗೀತೆಗಳನ್ನು ಅನುವಾದಿಸಿದ ಆರಂಭಕಾರರಲ್ಲೊಬ್ಬ ವೈಗಲ್. ಮೊಗ್ಲಿಂಗನೊಡನೆ ಹಾಕ್ ಅನೇಕ ಪ್ರಾರ್ಥನಾಗೀತೆಗಳನ್ನು ರಚಿಸಿದ. ಎಫ್. ಕಿಟ್ಟೆಲ್ ಕಥಾಮಾಲೆ (1862) ಎಂಬ ಹೆಸರಿನಲ್ಲಿ ಬೈಬಲ್ಲಿನ ಹೊಸ ಒಡಂಬಡಿಕೆಯನ್ನು ಕಥನ ರೂಪಕ್ಕೆ ತಿರುಗಿಸಿದ. ಇದರಲ್ಲಿ ಭಾಮಿನಿ, ವಾರ್ಧಕ ಮುಂತಾದ ಛಂದೋರೂಪಗಳನ್ನು ಬಳಸಲಾಗಿದೆ. ಬೇರಾವ ಮಿಷನರಿಯೂ ಇಷ್ಟೊಂದು ಕನ್ನಡ ಪದ್ಯಗಳನ್ನು ರಚಿಸಿಲ್ಲವಂತೆ. ಮಿಷನರಿಗಳು ಬರಿಯ ಮತೀಯ ಸಾಹಿತ್ಯವನ್ನೆ ರಚಿಸಲಿಲ್ಲ. ಮಹಾಪುರುಷರ ಜೀವನಚರಿತ್ರೆಗಳು ಮುಂತಾಗಿ ಜೀವನೋಪಯೋಗಿ ಗ್ರಂಥಗಳನ್ನೂ ರಚಿಸಿದ್ದರು.

ಉಳಿದವರಿಗಿಂತ ಬಾಸೆಲ್ ಮಿಷನ್ಗೆ ಸೇರಿದ ಮಿಷನರಿಗಳು ಕನ್ನಡಕ್ಕಿತ್ತ ಕೊಡುಗೆ ಮಿಗಿಲಾದುದು. ಅವರು ತಮ್ಮ 60 ವರ್ಷಗಳ ಕಾಲಾವಧಿಯಲ್ಲಿ ಅನೇಕ ಹೊಸ ವಿಚಾರಗಳನ್ನೂ ನವೀನ ರೂಪಗಳನ್ನೂ ಸಾಹಿತ್ಯ ರಂಗದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಕನ್ನಡಕ್ಕೆ ಮ್ಯಾಕೆರಲ್, ಕಾಲ್ಡ್‌ವೆಲ್, ಬಿ.ಎಲ್.ರೈಸ್, ರೀಡ್ ಮೊದಲಾದವರ ಸೇವೆಯೂ ಗಮನಾರ್ಹವಾದುದು. ಒಂದು ಕಡೆ ಪ್ರಾಚೀನ ನಿಕ್ಷೇಪದ ಅನಾವರಣ, ಇನ್ನೊಂದು ಕಡೆ ಹೊಸ ಸಾಹಿತ್ಯಕ್ಕೆ ಪ್ರೇರಣೆ ಈ ಎರಡೂ ಪರಸ್ಪರ ಪುರಕವಾದ ಕೆಲಸಗಳನ್ನು ವಿದೇಶೀಯರು ಮಾಡಿದರು.

19ನೆಯ ಶತಮಾನದ ಉತ್ತರಾರ್ಧದಲ್ಲಿ, ಪಾಶ್ಚಾತ್ಯ ಶಿಕ್ಷಣಪಡೆದ ಹೊಸ ತಲೆಮಾರೊಂದು ಸಾಹಿತ್ಯ ರಚನೆಯಲ್ಲಿ ತೊಡಗಿ ನವ ಮನ್ವಂತರವನ್ನು ಆರಂಬಿsಸಿತು. ಮೊದಮೊದಲು ಇಂಗ್ಲಿಷ್ ಕೃತಿಗಳ ಅನುವಾದಗಳು, ಅನುಕರಣಗಳು ಮತ್ತು ರೂಪಾಂತರಗಳು ಅನಂತರ ಸ್ವತಂತ್ರ ಕೃತಿಗಳು ಹೊರಬಂದುವು. ಚಾಮರಾಜ ಒಡೆಯರು ಚಾಮರಾಜೇಂದ್ರ ಕರ್ನಾಟಕ ನಾಟಕ ಸಭೆಯನ್ನು ಸ್ಥಾಪಿಸಿ ನಾಟಕಗಳ ಹುಟ್ಟಿಗೆ ಅನುವು ಮಾಡಿಕೊಟ್ಟದ್ದು ಒಂದು ಮಹತ್ತ್ವದ ಸಂಗತಿ. ಆಗ ಕೆಲವರು ಸಂಸ್ಕೃತದಿಂದ, ಕೆಲವರು ಇಂಗ್ಲಿಷಿನಿಂದ ನಾಟಕಗಳನ್ನು ಕನ್ನಡಿಸಿದರು. ಇಂಗ್ಲಿಷಿನಿಂದ ವಿಶೇಷವಾಗಿ ಷೇಕ್ಸ್‌ಪಿಯರನ ನಾಟಕಗಳನ್ನು ಭಾಷಾಂತರ ಅಥವಾ ರೂಪಾಂತರದ ಮೂಲಕ ತರಲಾಯಿತು. ಕನ್ನಡದಲ್ಲಿ ಐತಿಹಾಸಿಕ ನಾಟಕ ನಿರ್ಮಾಣಕ್ಕೆ ಅದೇ ಬುನಾದಿ. ಷೇಕ್ಸ್‌ಪಿಯರನನ್ನು ಕನ್ನಡಿಗರಿಗೆ ಮೊತ್ತಮೊದಲು ಪರಿಚಯಿಸಿದವರು ಚನ್ನಬಸಪ್ಪ ಎಂಬುವರೆಂದು ಹೇಳಲಾಗಿದೆ. ಅವರು 1821ರಷ್ಟು ಹಿಂದೆಯೇ ಕಾಮಿಡಿ ಆಫ್ ಎರರ್ಸ್‌, ಮ್ಯಾಕ್ಬೆತ್ ನಾಟಕಗಳ ಕಥೆಗಳನ್ನು ಪ್ರಕಟಿಸಿದ್ದರಂತೆ. ಈ ದಿಕ್ಕಿನಲ್ಲಿ ಎಂ.ಎಲ್.ಶ್ರೀಕಂಠೇಶಗೌಡರ ಹೆಸರೂ ಮುಖ್ಯವಾದುದು. ಅವರು ಮ್ಯಾಕ್ಬೆತ್ ನಾಟಕವನ್ನು ಪ್ರತಾಪರುದ್ರದೇವ (1895) ಎಂದು ರೂಪಾಂತರಿಸಿದರು. ಎ ಮಿಡ್ ಸಮ್ಮರ್ ನೈಟ್ಸ್‌ ಡ್ರೀಮ್ ನಾಟಕವನ್ನು ಪ್ರಮೀಳಾರ್ಜುನೀಯ ಎಂದೂ ರೂಪಾಂತರಿಸಿದರು. ಅಲ್ಲದೆ ಹೆನ್ರಿ ಪಿsೕಲ್ಡಿಂಗನ ಎ ಸಿಲಿಕನ್ ಸಮ್ಮರ್ (ಕನ್ಯಾವಿತಂತು), ಮೇರಿಯಾ ಎಜ್ವರ್ತಳ ಲಿಟಲ್ ಮರ್ಚೆಂಟ್ಸ್‌ (ಚಿಕ್ಕ ಬಣಜಿಗರು) ಕೃತಿಗಳನ್ನು ಕನ್ನಡಿಸಿದರು. ಎ.ಆನಂದರಾಯರು ರೋಮಿಯೋ ಜೂಲಿಯಟ್ ನಾಟಕವನ್ನು ರಾಮವರ್ಮ ಲೀಲಾವತಿ ಎಂದೂ ಮರ್ಚೆಂಟ್ ಆಫ್ ವೆನಿಸ್ ನಾಟಕವನ್ನು ಪಾಂಚಾಲೀ ಪರಿಣಯ ಎಂದೂ ರೂಪಾಂತರಿಸಿದರು. ಬಸವಪ್ಪಶಾಸ್ತ್ರಿಗಳಿಗೆ ಸ್ವತಃ ಇಂಗ್ಲಿಷ್ ಬರದಿದ್ದರೂ ಅನ್ಯರ ನೆರವಿನಿಂದ ಒಥೆಲೋ ನಾಟಕವನ್ನು ಶೂರಸೇನಚರಿತ ಎಂದು ಕನ್ನಡಕ್ಕೆ ತಂದರು. ಎಂ.ಎಸ್.ಪುಟ್ಟಣ್ಣನವರ ಹೇಮಚಂದ್ರ ರಾಮವಿಲಾಸ ಕಿಂಗ್ ಲಿಯರ್ ನಾಟಕದ ಗದ್ಯ ರೂಪಾಂತರ, ಆರ್. ಅಣ್ಣಾಜಿರಾಯರು, ಚುರಮುರಿ ಶೇಷಗಿರಿರಾಯರು, ಗುಂಡೋ ಕೃಷ್ಣ ಚುರಮುರಿಯವರು, ವೆಂಕಟಾದ್ರಿ ಶಾಮರಾಯರು ಮೊದಲಾದವರೂ ಹಲವಾರು ಇಂಗ್ಲಿಷ್ ನಾಟಕಗಳನ್ನು ಕನ್ನಡೀಕರಿಸಿದರು.

ಇಂಗ್ಲಿಷಿನಿಂದ ಕನ್ನಡಕ್ಕೆ ಬಂದ ಮೊದಲ ಕಾದಂಬರಿಯೆಂದರೆ ಎಸ್.ವಿ.ಕೃಷ್ಣಸ್ವಾಮಿ ಅಯ್ಯಂಗಾರ್ ಭಾಷಾಂತರಿಸಿದ ರಾಬಿನ್ಸನ್ ಕ್ರೂಸೋ (1858). ಬಾಪು ಸುಬ್ಬರಾಯರ ನಿರ್ಭಾಗ್ಯ ಮುರಾದ ಅಂಥದೇ ಮತ್ತೊಂದು ಕಾದಂಬರಿ. ಥಾಮಸ್ ಡೇಯ ‘ದಿ ಹಿಸ್ಟರಿ ಆಫ್ ಸ್ಯಾಂಡ್ಫೋರ್ಡ್‌ ಅಂಡ್ ಮಾರ್ಟನ್’ ಎಂಬ ಕೃತಿಯನ್ನು ಎಂ.ಎಸ್.ಪುಟ್ಟಣ್ಣನವರು ಸುಮತಿ ಹಾಗೂ ಮದನಕುಮಾರರ ಚರಿತ್ರೆ ಎಂಬುದಾಗಿ ಕನ್ನಡಿಸಿದರು. ಸ್ಥೂಲವಾಗಿ 19ನೆಯ ಶತಮಾನದ ಮೂರನೆಯ ದಶಕದಲ್ಲಿ ನಸುಕಾಗಿ, ಮಧ್ಯದಷ್ಟರ ಹೊತ್ತಿಗೆ ಬೆಳಕಾಗಿ ಹೊಸಗನ್ನಡ ಸಾಹಿತ್ಯ ತನ್ನ ವಿವಿಧ ಪ್ರಕಾರಗಳೊಡನೆ ಉದಯವಾಯಿ ತೆಂದು ಹೇಳಬಹುದು. ಆದರೆ ಅದರ ಸ್ಪಷ್ಟ ರೂಪ ಕಾಣಿಸಿಕೊಂಡದ್ದು 20ನೆಯ ಶತಮಾನದಲ್ಲಿಯೇ ಎನ್ನಬೇಕು. ಭಾವಗೀತೆ, ನಾಟಕ, ಕಾದಂಬರಿ, ಕಥೆ, ವಿಮರ್ಶೆ, ಪ್ರಬಂಧ ಮುಂತಾದ ಪ್ರಕಾರಗಳೆಲ್ಲ ಕನ್ನಡದಲ್ಲಿ ಸುಪ್ರತಿಷ್ಠಿತವಾದುದು ಪ್ರಚಲಿತ ಶತಮಾನದಲ್ಲಿಯೇ. ಈ ಪ್ರತಿಷ್ಠಾಪನಾ ಕಾರ್ಯದಲ್ಲಿ ಇಂಗ್ಲಿಷ್ ವಾಙ್ಮಯದ ಕೊಡುಗೆ ಅಪರಿಮಿತವಾದುದು.

1820-1920ರವರೆಗಿನ ಕಾಲವನ್ನು ಹೊಸಗನ್ನಡದ ಮೊದಲ ಹಂತವೆಂದಿಟ್ಟು ಕೊಂಡರೆ, 1921ರ ಮುಂದಿನ ಕಾಲವನ್ನು ಎರಡನೆಯ ಹಂತವೆಂದು ಭಾವಿಸಬಹುದು. ಈ ಎರಡನೆಯ ಹಂತ ದೇಶಾದ್ಯಂತ ಅಪುರ್ವ ಜಾಗೃತಿಯನ್ನು ಕಂಡ ಕಾಲ. ಆಗ ದೇಶದ ಸ್ವಾತಂತ್ರ್ಯಕ್ಕಾಗಿ ಪರಕೀಯ ಸತ್ತೆಯೊಡನೆ ಅಸಹಕಾರ ಮಾಡಿದಂತೆ ಸ್ವಭಾಷೆಯ ಮತ್ತು ಅಬಿsವ್ಯಕ್ತಿಯ ಸ್ವಾತಂತ್ರ್ಯಕ್ಕಾಗಿ ಲೇಖಕರು ಹಳೆಯ ಸಂಪ್ರದಾಯದ ಸತ್ತೆಯೊಡನೆ ಅಸಹಕಾರ ಹೂಡಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಹ ಇಂಗ್ಲಿಷ್ ವಾಙ್ಮಯದ ನಿತಾಂತಪ್ರಭಾವ ಭಾರತೀಯ ಸಾಹಿತ್ಯದ ಹೊಸ ಸ್ವರೂಪಕ್ಕೆ ಕಾರಣವಾಯಿತು. ಮೆಕಾಲೆ ಪ್ರಾರಂಭ ಮಾಡಿದ ವಿದ್ಯಾಭ್ಯಾಸ ಪದ್ಧತಿಯ ಮೂಲಕ ನಮ್ಮ ನಾಡಿನ ವಿದ್ಯಾವಂತರಿಗೆ ಷೇಕ್ಸ್‌ಪಿಯರ್ ಮತ್ತು ಮಿಲ್ಟನ್ ಇವರ ಮಹಾಕೃತಿಗಳೂ ವಡ್ರ್ಸ್‌ವರ್ತ್, ಷೆಲ್ಲಿ, ಕೀಟ್ಸ್‌ ಮೊದಲಾದ ಕವಿಗಳ ಭಾವಗೀತೆಗಳೂ ಪರಿಚಿತವಾದವು. ಇವುಗಳ ಜೊತೆಗೆ ಮಿಲ್, ಮಾರ್ಲೆಯವರಂಥ ವಿಚಾರವಂತರ ವಿಚಾರ -ವಿವೇಕದಿಂದ ಪರಿಪುಷ್ಟರಾದರು. ಸ್ಕಾಟ್, ಡಿಕನ್ಸ್‌ ಅವರ ಕಾದಂಬರಿಗಳಿಂದ ಸ್ಫುರಣ ಹೊಂದಿದರು. ಅವರ ಮನೋಲೋಕ ಇಂಗ್ಲಿಷ್ ಸಾಹಿತ್ಯದ ಚಿತ್ರಗಳಿಂದಲೂ ಕಿಕ್ಕಿರಿಯಿತು. ಕೆಲವು ಕಾಲದ ಮೇಲೆ ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಾಚೀನ ಭಾರತೀಯ ಸಂಸ್ಕೃತಿಯ ಪರಿಚಯಕ್ಕಾಗಿ ಮನಸ್ಸು ಹಾತೊರೆಯಿತು. ವೇದೋಪನಿಷತ್ತುಗಳ ವ್ಯಾಸಂಗದಿಂದ ಇನ್ನೊಂದು ಆಳವಾದ ದೃಷ್ಟಿ ತೆರೆಯಿತು. ಪೌರ್ವಾತ್ಯ -ಪಾಶ್ಚಿಮಾತ್ಯ ದೃಷ್ಟಿಗಳ ಸಮನ್ವಯದತ್ತ ಹಲವರ ಮನಸ್ಸು ಹೊರಳಿತು. ಸಮಗ್ರ ದೇಶದಲ್ಲಿ ಪ್ರಕಟವಾದ ನೂತನಶಕ್ತಿ ಕರ್ನಾಟಕದಲ್ಲಿಯೂ ಸಂಚರಿಸಿತು.

1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿತವಾದುದೂ ಹೊಸ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ನವೀನ ಸಾಹಿತ್ಯದ ಪ್ರಧಾನ ಅಧ್ವರ್ಯುವಾಗಿ ನಿಂತವರು ಬಿ.ಎಂ.ಶ್ರೀಕಂಠಯ್ಯನವರು; ಅವರಿಗೆ ಬೆಂಬಲವಾಗಿ ಕೆಲಸ ಮಾಡಿದವರು ತ.ಸು.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರೀ. ಮೈಸೂರಿನ ಕಡೆ ಶ್ರೀಯವರ ನಾಯಕತ್ವದಲ್ಲಿ ತಳಿರು ತಂಡ, ಮಂಗಳೂರು ಕಡೆ ಪಂಜೆಯವರ ನೇತೃತ್ವದಲ್ಲಿ ಮಿತ್ರಮಂಡಳಿ, ಧಾರವಾಡದ ಕಡೆ ಬೇಂದ್ರೆಯವರ ನೇತೃತ್ವದಲ್ಲಿ ಗೆಳೆಯರ ಗುಂಪು ತಲೆಯೆತ್ತಿದುವು.

ಕಾವ್ಯಪ್ರಕಾರದಲ್ಲಿ 1921ರಲ್ಲಿ ಹೊರಬಂದ ಶ್ರೀಯವರ ಇಂಗ್ಲಿಷ್ ಗೀತಗಳು ಹೊಸಗನ್ನಡ ಕಾವ್ಯದ ಚರಿತ್ರೆಯಲ್ಲಿ ಒಂದು ಪ್ರಮುಖವಾದ ಮಜಲು. ಆದರೆ ಶ್ರೀಯವರಿಗಿಂತಲೂ ಹಿಂದೆಯೇ ಕೆಲಸ ಮಾಡಿದವರಿದ್ದರು ಎಂಬುದನ್ನು ಮರೆಯುವಂತಿಲ್ಲ. ಹೊಸಗನ್ನಡ ಕವಿತೆಗೆ ಕಳೆದ ಶತಮಾನದಲ್ಲೇ ನಾಂದಿ ಹಾಡಿದವರು ಕ್ರೈಸ್ತ ಮಿಷನರಿಗಳು. 1845ರಲ್ಲಿ ಪ್ರಕಟವಾದ ಬಾಸೆಲ್ ಮಿಶನ್ನಿನ ಪದ್ಯ ಸಂಕಲನದಲ್ಲಿ 68 ಕನ್ನಡ ಗೀತೆಗಳಿವೆ. 1847ರಲ್ಲಿ ಪ್ರಕಟವಾದ ಯಾತ್ರಿಕನ ಸಂಚಾರದಲ್ಲಿ ವೈಗಲ್ ಅನುವಾದಿಸಿದ ಅನೇಕ ಪದ್ಯಗಳಿವೆ. ಕೆಲವು ಭಾಮಿನಿ ಷಟ್ಪದಿಯಲ್ಲಿದ್ದರೆ, ಕೆಲವು ಚೌಪದಿಯ ರೂಪದಲ್ಲಿವೆ. ಸುಮಾರು ಇದೇ ಕಾಲದಲ್ಲಿ ಬೆಳಕಿಗೆ ಬಂದ ಗೀತ ಪುಸ್ತಕಗಳು ಎಂಬ ಮಿಷನರಿ ಕೃತಿಯಲ್ಲಿ ಇಂಗ್ಲಿಷ್, ಜರ್ಮನ್ ಗೀತಗಳ ಕನ್ನಡಾನುವಾದವಿದ್ದು ಅವುಗಳಲ್ಲಿ ಕೆಲವೆಡೆ ಆದಿ ಅಂತ್ಯಪ್ರಾಸಗಳನ್ನೂ ಕೆಲವೆಡೆ ಅಂತ್ಯಪ್ರಾಸವನ್ನೂ ಕಾಣಬಹುದು. ಮಿಷನರಿಗಳ ಈ ಪ್ರಾರ್ಥನಾ ಪದ್ಯಗಳು ಹಳೆಯ ಧಾಟಿಯಿಂದ ಮುಕ್ತವಾಗಿವೆ. ಕೆಲವು ಕಡೆ ಅಂತ್ಯಪ್ರಾಸ ಅನಿಯತವಾಗಿ ಬಂದಿರುವುದುಂಟು. ವಾಸ್ತವವಾಗಿ ಅಂತ್ಯಪ್ರಾಸ ಆಂಗ್ಲ ಕಾವ್ಯದ ವೈಶಿಷ್ಟ್ಯ. ಅದು ಹೊಸಗನ್ನಡ ಕವಿತೆಗೆ ಇಂಗ್ಲಿಷಿನಿಂದ ಬಂದು ಸೇರಿಕೊಂಡಿತು. ಕ್ರೈಸ್ತಗೀತೆಗಳಲ್ಲೂ ಎರಡು ವರ್ಗಗಳನ್ನು ಕಾಣಬಹುದು. ಹಳೆಯ ಧಾಟಿಯಲ್ಲಿರತಕ್ಕವು ಮತ್ತು ಪಾಶ್ಚಾತ್ಯ ಗೀತಗಳ ಧಾಟಿಯಲ್ಲಿರತಕ್ಕವು. ಎರಡನೆಯ ವರ್ಗದಲ್ಲಿ ಹೊಸ ಛಂದಸ್ಸು ಕಾಣದೊರೆಯುತ್ತದೆ. ಮಿಷನರಿಗಳು ವಿರಳವಾಗಿ ಸ್ವತಂತ್ರ ಕವಿತೆಯನ್ನೂ ಬರೆದುದುಂಟು. ಹೀಗೆ ಕ್ರೈಸ್ತ ಮಿಷನರಿಗಳ ರಚನೆಗಳಲ್ಲಿ ಹೊಸಗನ್ನಡ ಕಾವ್ಯ ಪರಿಮಿತವಾಗಿ ಮೈದೋರಿತ್ತು. ಅದು 19ನೆಯ ಶತಮಾನದ ಕೊನೆಯಲ್ಲಿ ಮತ್ತು 20ನೆಯ ಶತಮಾನದ ಮೊದಲೆರಡು ದಶಕಗಳಲ್ಲಿ ಹೆಚ್ಚಾಗಿ ಅನುವಾದರೂಪದಲ್ಲಿ ಮುಂದುವರಿಯಿತು. ಇಂಗ್ಲಿಷ್ ಕವಿತೆಗಳ ಭಾಷಾಂತರಕ್ಕೆ ಪಠ್ಯಪುಸ್ತಕಗಳೂ ನಿಮಿತ್ತವಾದುವು. ಹಾಗೆಯೇ ಕನ್ನಡದಲ್ಲಿ ಆಧುನಿಕ ಕಾವ್ಯ ಸ್ವತಂತ್ರವಾಗಿ ತಲೆಯೆತ್ತಿದ್ದು ಈ ಶತಮಾನದ ಆರಂಭದಲ್ಲಿ; ಇಂಗ್ಲಿಷ್ ಕಾವ್ಯವಿತ್ತ ಸ್ಫೂರ್ತಿಯಿಂದ.

ಶ್ರೀಯವರು ಹೊಸಗನ್ನಡವನ್ನು ಉದ್ಘಾಟಿಸಿದ ಕ್ರಾಂತಿ ಪುರುಷರಾದರೂ ಅವರಿಗಿಂತ ಹಿಂದೆಯೇ ಮುಂಬೆಳಗಿನ ಮೊದಲಿಗರಿದ್ದರು. ಈ ಮುಂಬೆಳಗಿನ ಕವಿಗಳೆಲ್ಲ ಬಹುಮಟ್ಟಿಗೆ ಹಳೆಯ ಛಂದೋರೂಪಗಳಲ್ಲಿ ಕಾವ್ಯರಚನೆ ಮಾಡಿದರೇ ಹೊರತು ಹೊಸ ಛಂದಸ್ಸನ್ನು ಸೃಷ್ಟಿಸಲಿಲ್ಲ. ಎಸ್.ಜಿ.ನರಸಿಂಹಾಚಾರ್, ಪಂಜೆಮಂಗೇಶರಾಯ, ಗೋವಿಂದಪೈ, ಹಟ್ಟಿಯಂಗಡಿ ನಾರಾಯಣರಾಯ, ಜಯರಾಯಾಚಾರ್ಯ, ಶಾಂತಕವಿ ಮೊದಲಾದವರು ಹೊಸ ಕವಿತೆಗೆ ಹಳೆಯ ಛಂದೋರೂಪಗಳನ್ನೇ ಬಳಸಿಕೊಂಡರು. ಸ್ವಂತ ರಚನೆಗಳಲ್ಲಾಗಲೀ ಅನುವಾದಗಳಲ್ಲಾಗಲೀ ಹೊಸತನ ಹೆಚ್ಚಾಗಿರಲಿಲ್ಲ. ಗೋವಿಂದ ಪೈಯವರು ಆದಿಪ್ರಾಸತ್ಯಾಗದ ನಿರ್ಧಾರ ಕೈಕೊಂಡದ್ದು ಒಂದು ಮಹತ್ತ್ವದ ಹೆಜ್ಜೆ. ಹಟ್ಟಿಯಂಗಡಿ ನಾರಾಯಣರಾಯರು ಇಂಗ್ಲಿಷಿನಿಂದ ಕನ್ನಡಕ್ಕೆ ಕವಿತೆಗಳನ್ನು ಭಾಷಾಂತರಿಸಿದವರಲ್ಲಿ ಮೊದಲಿಗರು. ಅವರ ಆಂಗ್ಲಕವಿತಾವಳಿ ಅನುವಾದಿತ ಕವನಗಳ ಸಂಕಲನ (1919). ಇಂಗ್ಲಿಷ್ ಕಾವ್ಯದ ಪ್ರೇರಣೆಯಿಂದ ಹೇಗೆ ಕನ್ನಡ ಕಾವ್ಯಕ್ಕೆ ನಾವೀನ್ಯವುಂಟಾಗುವುದೆಂಬುದನ್ನು ನಾರಾಯಣರಾಯರು ಕನ್ನಡ ಕವಿತೆಯ ಭವಿತವ್ಯ ಎಂಬ ತಮ್ಮೊಂದು ಭಾಷಣದಲ್ಲಿ ಸೂಚಿಸಿದ್ದಾರೆ. ‘ಇಂಗ್ಲಿಷ್ ಮಾರ್ಗಗಳ ಅನುಸರಣದಿಂದ ............. ಕವಿಗಳು ಪಾರಮಾರ್ಥಿಕ ವಿಷಯಗಳಿಗಿಂತ ರಾಷ್ಟ್ರೀಯ, ಸಾಮಾಜಿಕ, ಚಾರಿತ್ರಿಕ ಮುಂತಾದ ಲೌಕಿಕ ಪ್ರಮೇಯಗಳಿಗೆ ಹೆಚ್ಚು ಗಮನ ಕೊಡುವರೆಂದೂ ದೀರ್ಘ ಪುರಾಣಗಳ ಬದಲಾಗಿ ಲಘುಕೃತಿಗಳನ್ನು ರಚಿಸುವರೆಂದೂ ಛಂದಸ್ಸಿನಲ್ಲಿ ಹೊಸ ಮಾದರಿಗಳನ್ನು ಕಲ್ಪಿಸಬಹುದೆಂದೂ ಅಲಂಕಾರದಲ್ಲಿ ಅಚೇತನ ಪದಾರ್ಥಗಳಿಗೆ ವಾಕ್ಶಕ್ತಿಯನ್ನೂ ಮಾನಸಿಕ ಭಾವಗಳಿಗೆ ಮೂರ್ತಿತ್ವವನ್ನೂ ಆರೋಪಿಸುವ ಉತ್ಪ್ರೇಕ್ಷೆಯು ರೂಢಿಯಾಗಬಹುದೆಂದೂ ಹಳಗನ್ನಡಕ್ಕಿಂತ ನಡುಗನ್ನಡವನ್ನೆ ಹೆಚ್ಚಾಗಿ ಪ್ರಯೋಗಿಸುವರೆಂದೂ’ ಅವರ ನಿರೀಕ್ಷೆಯಾಗಿತ್ತು. ಅದು ಮುಂದೆ ನಿಜವಾಯಿತು. ಕನ್ನಡ ಕಾವ್ಯವು ಛಂದಸ್ಸು, ರೂಪ, ವಸ್ತು, ಶೈಲಿ, ಭಾಷೆಗಳಲ್ಲಿ ಹೊಸತನವನ್ನು ತಳೆಯಿತು. ಎಸ್.ಜಿ.ನರಸಿಂಹಾಚಾರ್ಯರೂ ಇಂಗ್ಲಿಷಿನಿಂದ ಕವನಗಳನ್ನು ಅನುವಾದಿಸಿದ್ದಲ್ಲದೆ ಪಠ್ಯಪುಸ್ತಕಗಳಿಗಾಗಿ ಸ್ವತಂತ್ರ ಕವಿತೆಗಳನ್ನೂ ರಚಿಸಿದರು. ಆದರೆ ಅವರ ಕವಿತೆಗಳ ವಸ್ತುಭಾವಗಳೂ ಹೊಸವಾದರೂ ಛಂದೋರೂಪಗಳು ಮಾತ್ರ ಹಳೆಯವೇ. ಪಂಜೆಯವರೂ ತಮ್ಮ ಅನುವಾದಗಳಲ್ಲಿ ಮತ್ತು ಸ್ವತಂತ್ರ ಕವನಗಳಲ್ಲಿ ಹಳೆಯ ಛಂದೋರೂಪಗಳನ್ನೇ ಅವಲಂಬಿಸಿದರು. ಆದಿಪ್ರಾಸವನ್ನು ಬಿಡಲಿಲ್ಲ. ಇಂಗ್ಲಿಷ್ ಕವನಗಳ ವರ್ಚಸ್ಸು ಕನ್ನಡಕ್ಕೆ ಬರುವಂತೆ ಮಾಡಿದವರಲ್ಲಿ ಅವರು ಮೊದಲಿಗರು. ಗೋವಿಂದ ಪೈಯವರು ಪಂಜೆಯವರಿಗಿಂತ ಮುಂದೆ ಹೋಗಿ ಕೆಲವು ಹೊಸ ರೂಪಗಳನ್ನು ಸೃಷ್ಟಿಸಿಕೊಂಡರು. ಮೊಟ್ಟಮೊದಲು ಸಾನೆಟ್ ಬರೆದವರು ಪೈ ಅವರೇ. ಇಂಗ್ಲಿಷಿನಿಂದ ಗ್ರಂಥಗಳನ್ನು ಕನ್ನಡಿಸುವುದು ಲಾಭದಾಯಕವೆಂದು ನಂಬಿದ್ದವರಲ್ಲಿ ಶಾಂತಕವಿಗಳೂ ಒಬ್ಬರಾಗಿದ್ದರು. ಹೀಗೆ ಹಿಂದಿನವರ ಈ ಎಲ್ಲ ಪ್ರಯತ್ನಗಳು ಶ್ರೀಯವರ ಇಂಗ್ಲಿಷ್ ಗೀತಗಳಿಗೆ ಸಮರ್ಥವಾದ ಮುನ್ನುಡಿಯಾದುದು ನಿಶ್ಚಿತ.

ಶ್ರೀ ಅವರ ಇಂಗ್ಲಿಷ್ ಗೀತಗಳಲ್ಲಿ ಹೊಸತನ ಸಮಗ್ರವಾಗಿ ಆವಿರ್ಭವಿಸಿತು. ವಸ್ತು, ಭಾವ, ಭಾಷೆ, ಛಂದಸ್ಸು ಎಲ್ಲದರಲ್ಲೂ ಈ ಹೊಸತನವನ್ನು ಸ್ಫುಟವಾಗಿ ಗುರುತಿಸಬಹುದು. ಅವರು ಹಳೆಯ ಮಾತ್ರಾಗಣಗಳನ್ನೇ ಇಟ್ಟುಕೊಂಡು ಹೊಸ ಛಂದಃಪ್ರಕಾರಗಳನ್ನು ಮೊದಲ ಬಾರಿಗೆ ಕಲ್ಪಿಸಿದರು. ಮುಂದಿನ ಕವಿಗಳಿಗೆ ಇದು ಹೆದ್ದಾರಿಯಾಗಿ ಪರಿಣಮಿಸಿತು; ಕನ್ನಡದಲ್ಲಿ ಸ್ವತಂತ್ರ ಭಾವಗೀತೆಗಳ ಸುಗ್ಗಿಗೆ ಕಾರಣವಾಯಿತು. ಇಂಗ್ಲಿಷ್ ಕಾವ್ಯದಲ್ಲಿ 19ನೆಯ ಶತಮಾನದ ಆರಂಭದಲ್ಲಿ ಎಂಥ ನವೋದಯವುಂಟಾಯಿತೊ ಅಂಥದೇ ನವೋದಯವನ್ನು ತಮ್ಮ ಕೃತಿಯ ಮೂಲಕ ಕನ್ನಡ ಕಾವ್ಯದಲ್ಲಿ ಶ್ರೀಯವರು ಉಂಟುಮಾಡಿದರು. ವಡ್ರ್ಸ್‌ವರ್ತ್, ಷೆಲ್ಲಿ, ಕೀಟ್ಸ್‌, ಕೋಲ್ರಿಜ್, ಬೈರನ್, ಬ್ರೌನಿಂಗ್, ಟೆನಿಸನ್, ಬನ್ರ್ಸ್‌ ಮೊದಲಾದ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಕವಿತೆಗಳನ್ನು ಕನ್ನಡಿಸಿ, ಕನ್ನಡದಲ್ಲಿ ರೊಮ್ಯಾಂಟಿಕ್ ಕಾವ್ಯದ ಬೆಳೆಗೆ ಪ್ರೇರಕಶಕ್ತಿಯಾದರು. ಹೊಸಗನ್ನಡದಲ್ಲಿ ಇಂದು ಹೆಸರಾಗಿರುವ ಕವಿಗಳಲ್ಲಿ ಬಹುಮಂದಿ ಇಂಗ್ಲಿಷ್ಗೀತಗಳ ನೆರಳಲ್ಲಿ ಬೆಳೆದವರು. 1930ರವರೆಗೆ ಶ್ರೀಯವರೂ ಅವರ ಮಿತ್ರರೂ ನಡೆಸಿದ ಸಾಧನೆಯಿಂದ ಕನ್ನಡದಲ್ಲಿ ಹೊಸ ಕಾವ್ಯ ಬೇರೂರಿ ನಿಂತಿತು. ಇಂಗ್ಲೆಂಡಿನಲ್ಲಿ ವಡ್ರ್ಸ್‌ವರ್ತ್, ಕೋಲ್ರಿಜ್ ಮೊದಲಾದ ರೊಮ್ಯಾಂಟಿಕ್ ಕವಿಗಳಿಗೆ ಜನಪದ ಸಾಹಿತ್ಯ ಸ್ಫೂರ್ತಿ ಕೊಟ್ಟಂತೆ, ಅಲ್ಲಿಯ ರೊಮ್ಯಾಂಟಿಕ್ ಕಾವ್ಯ ಜನಪದ ಸಾಹಿತ್ಯದಿಂದ ಪ್ರೇರಣೆ ಪಡೆದಂತೆ ಕನ್ನಡದಲ್ಲೂ ಇಂಥ ಪ್ರಕ್ರಿಯೆ ನಡೆಯಿತು. ಉತ್ತರ ಕರ್ನಾಟಕದಲ್ಲಿ ಗೆಳೆಯರ ಗುಂಪಿನವರು ಜನಪದ ಗೀತೆಗಳ ಧಾಟಿಯನ್ನು ತಮ್ಮ ಕವಿತೆಗಳಲ್ಲಿ ಬಳಸಿಕೊಂಡರು. ಗೆಳೆಯರ ಗುಂಪಿಗೆ ಸೇರಿದ ಮಧುರಚೆನ್ನರ ಅನುಭಾವ ಸಾಹಿತ್ಯ ಎ.ಇ.ಏಟ್ಸ್‌ ಮೊದಲಾದ ಆಂಗ್ಲ ಅನುಭಾವ ಕವಿಗಳ ವ್ಯಾಸಂಗದಿಂದ ಪ್ರಭಾವಗೊಂಡದ್ದೆಂಬುದನ್ನು ಇಲ್ಲಿ ಗಮನಿಸಬಹುದು. ಆಶಯ ಮುಕ್ತು ಅಬಿsವ್ಯಕ್ತಿಯಲ್ಲಿ ಸ್ವಾತಂತ್ರ್ಯ, ನಾವೀನ್ಯ, ವೈವಿಧ್ಯ ಹೊಸಗನ್ನಡ ಭಾವಗೀತೆಗಳ ಪ್ರಧಾನ ಲಕ್ಷಣಗಳು. ಇದು ಬಂದುದು ನಿಸ್ಸಂದೇಹವಾಗಿ ಇಂಗ್ಲಿಷ್ ಕಾವ್ಯದಿಂದ; ಇಂಗ್ಲಿಷ್ ಗೀತಗಳ ಮೂಲಕ. ಈ ಸಂದರ್ಭದಲ್ಲಿ ಭಾವಗೀತೆಯ ಪ್ರಕಾರಗಳೆಲ್ಲ ಇಂಗ್ಲಿಷಿನಿಂದ ಕನ್ನಡಕ್ಕೆ ಬಂದುವು. ಜೊತೆಗೆ ಕಥನಕಾವ್ಯ, ತಾತ್ತ್ವಿಕ ಕಾವ್ಯ, ವಿಡಂಬನ ಕಾವ್ಯಗಳೂ ನೆಲೆಗೊಂಡುವು. ಸರಳ ರಗಳೆ, ಮುಕ್ತ ಛಂದಗಳಂಥ ರೂಪಗಳೂ ಇಂಗ್ಲಿಷಿನ ಪ್ರಭಾವದಿಂದಲೆ ಸೃಜನಗೊಂಡುವು. ಸಾನೆಟ್ ಭಾವಗೀತೆಯ ಮುಖ್ಯ ಪ್ರಕಾರಗಳಲ್ಲೊಂದು. ಮೂಲತಃ ಇದು ಇಟಲಿಯಲ್ಲಿ ಹುಟ್ಟಿ ಬೆಳೆದದ್ದು; 16ನೆಯ ಶತಮಾನದಲ್ಲಿ ಇಂಗ್ಲಿಷಿಗೆ ಬಂದು, ಅಲ್ಲಿಂದ ಕನ್ನಡಕ್ಕೆ ಬಂದು, ಅಲ್ಲಿ ಒಗ್ಗಿಹೋಯಿತು. ಸಾನೆಟ್ಟಿನಲ್ಲಿ ಎರಡು ಬಗೆ ಪೆಟ್ರಾರ್ಕನ್ ಸಾನೆಟ್ ಮತ್ತು ಷೇಕ್ಸ್‌ಪೀರಿಯನ್ ಸಾನೆಟ್, ಕನ್ನಡದಲ್ಲಿ ಈ ಎರಡೂ ಬಗೆಗಳು ಪ್ರಚುರವಾಗಿವೆ. ಬೇರೆ ರೀತಿಯ ಸಾನೆಟ್ಟುಗಳೂ ಉಂಟು. ಕನ್ನಡ ಪ್ರಗಾಥಗಳು ಇಂಗ್ಲಿಷಿನ ಓಡ್ಗಳಿಂದ ಸ್ಫೂರ್ತವಾದವು. ಕನ್ನಡಕ್ಕೆ ಈ ಪ್ರಕಾರವನ್ನು ವಿಶೇಷವಾಗಿ ತಂದವರು ಶ್ರೀಯವರೇ.

ಪಾಮರರ ಮನಸ್ಸಿಗೆ ಒಪ್ಪುವ ಕಥೆಗಳನ್ನು ಬರೆಯುವ ಕ್ರಾಂತಿ ಇಂಗ್ಲಿಷ್ ಕಥನ ಕವನಗಳ ಅಭ್ಯಾಸದಿಂದ ಅಂತೆಯೇ ಕನ್ನಡಕ್ಕೆ ಕಥನ ಕವನಗಳನ್ನು ಕೊಡಬೇಕು ಎನ್ನುವ ಸ್ಫೂರ್ತಿಯಿಂದ ಬಂದಿತೆಂದು ಹೇಳಿದರೆ ತಪ್ಪಾಗಲಾರದು. ಮಾಸ್ತಿಯವರ ‘ನವರಾತ್ರಿ’ಯ ಕಥನಕವನಗಳಿಗೆ ಮಾದರಿ bsÁಸರನ ಕ್ಯಾಂಟರ್ಬರಿ ಕಥೆಗಳು. ಎಲ್.ಗುಂಪಡಪ್ಪನವರ ಸೋಹ್ರಾಬ್-ರುಸ್ತುಂ (ಮೂಲ: ಮ್ಯಾಥ್ಯು ಅರ್ನಾಲ್ಡ್‌) ಪಾಶ್ಚಾತ್ಯರ ಮಹೋಪಮೆಗಳನ್ನು ಕನ್ನಡಕ್ಕೆ ಪರಿಚಯ ಮಾಡಿಕೊಟ್ಟಿತು. ಕುವೆಂಪು ಅವರ ಚಿತ್ರಾಂಗದಾ ಹಾಗೂ ಶ್ರೀರಾಮಾಯಣ ದರ್ಶನಂನಲ್ಲೂ ಮಹೋಪಮೆಗಳಿವೆ. ಇವು ಬಂದುದು ಪಾಶ್ಚಾತ್ಯ ಸಾಹಿತ್ಯದ ಪ್ರಭಾವದಿಂದ.

ಸರಳ ರಗಳೆಗೆ ಮೂಲ ಕನ್ನಡದ ಲಲಿತರಗಳೆಯೇ ಆದರೂ ಅದು ರೂಪುಗೊಂಡುದು ಇಂಗ್ಲಿಷ್ ಕಾವ್ಯದ ಪ್ರಭಾವದಿಂದ. ಬ್ಲಾಂಕ್ವರ್ಸ್ಗೆ ಸಂವಾದಿಯಾಗಿ ಲಲಿತರಗಳೆಯ ಆದ್ಯಂತ ಪ್ರಾಸಗಳನ್ನು ತೆಗೆದುಹಾಕಿ ಚರಣಗಳನ್ನು ತಡೆಯಿಲ್ಲದೆ ಹರಿಯಬಿಡುವುದಿರಂದ ಹುಟ್ಟುತ್ತದೆ ಸರಳರಗಳೆ. 1924ರಲ್ಲಿ ಇದು ರೂಪುಗೊಂಡಿತು. ಮಾಸ್ತಿಯವರು ಇದನ್ನು ಮೊದಲು ಬಳಸಿದರು. ಈ ಸರಳ ರಗಳೆ ಕಥನಕವನಗಳಲ್ಲಿ, ವರ್ಣನಾತ್ಮಕ ಕವಿತೆಯಲ್ಲಿ, ಪದ್ಯನಾಟಕಗಳಲ್ಲಿ ಯಶಸ್ವಿಯಾಗಿ ಬಳಕೆಗೊಂಡಿತು. ಮಹಾಛಂದಸ್ಸಿಗೆ ತಳಹದಿ ಈ ಸರಳ ರಗಳೆಯೇ. ಇಂಗ್ಲಿಷ್ ಬ್ಲಾಂಕ್ವರ್ಸಿನ ಪ್ರಯೋಗಗಳಿಂದ ಮಿಲ್ಟನ್ ಕವಿ ಹೇಗೆ ತನ್ನ ಮಹಾಕಾವ್ಯಕ್ಕೆ ಸರಿಯಾದ ಛಂದೋರೂಪವನ್ನು ಹೊಂದಿಸಿಕೊಂಡನೋ ಅದೇ ಬಗೆಯಲ್ಲಿಯೆ ಇಂಗ್ಲಿಷ್ ಬ್ಲಾಂಕ್ವರ್ಸಿನ ನೂತನ ಪ್ರಯೋಗಗಳಂತೆಯೇ ಸರಳ ರಗಳೆಯಲ್ಲಿಯೂ ಹೊಸ ಪ್ರಯೋಗಗಳನ್ನು ನಡೆಸಿ ಕುವೆಂಪು ಅವರು ತಮ್ಮ ಮಹಾಕಾವ್ಯಕ್ಕೆ ಸರಿಹೋಗುವ ಮಹಾಛಂದಸ್ಸನ್ನು ರೂಪಿಸಿಕೊಂಡರು. ಮಿಲ್ಟನ್ನನ ಛಂದಸ್ಸನ್ನು ಗ್ರಾಂಡ್ಸ್ಟೈಲ್ ಎನ್ನಲಾಗಿದೆ; ಅದಕ್ಕೆ ಸಂವಾದಿಯಾಗಿ ತಮ್ಮ ಛಂದಸ್ಸನ್ನು ಕುವೆಂಪು ಮಹಾಛಂದಸ್ಸು ಎಂದು ಕರೆದರು.

ಕುವೆಂಪು ತಮ್ಮ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಹೋಮರ್, ವರ್ಜಿಲ್, ಡಾಂಟೆ, ಮಿಲ್ಟನ್ ಮೊದಲಾದವರನ್ನು ಸ್ಮರಿಸಿದ್ದಾರೆ. ಇವರೆಲ್ಲರ ಪ್ರಭಾವ ಕುವೆಂಪು ಅವರ ಮೇಲಾಗಿದೆ; ಮುಖ್ಯವಾಗಿ ಮಿಲ್ಟನ್ನನಿಂದ ಅವರು ಪ್ರಭಾವಗೊಂಡಿದ್ದಾರೆ. ಕುವೆಂಪು ಅವರ ಶೈಲಿಗೂ ಮಿಲ್ಟನ್ನನ ಶೈಲಿಗೂ ಸಾದೃಶ್ಯವುಂಟು; ತಾಂತ್ರಿಕ ಸಿದ್ಧಿಯಲ್ಲೂ ಸಾಮ್ಯವಿದೆ. ಅವರು ಪಾಶ್ಚಾತ್ಯ ಮಹಾಕಾವ್ಯಗಳ ಗುಣಗಳನ್ನು ಶ್ರೀರಾಮಯಣ ದರ್ಶನಂನಲ್ಲಿ ಗ್ರಹಿಸಿದ್ದಾರೆ. ಉದಾಹರಣೆಗೆ, ಪಾಶ್ಚಾತ್ಯ ಕಾವ್ಯಗಳಲ್ಲಿ ಹೇಗೋ ಹಾಗೆ ಅವರ ಮಹಾಕಾವ್ಯದಲ್ಲಿ ದೇವತಾಪ್ರಾರ್ಥನೆ ಅಲ್ಲಲ್ಲಿ ನಡುನಡುವೆ ಕಂಡುಬರುತ್ತದೆ. ಹಾಗೆಯೇ ಮಹೋಪಮೆಗಳನ್ನೂ ನಾವು ಪರಿಗಣಿಸಬಹುದು.

ರೊಮ್ಯಾಂಟಿಕ್ ಕಾವ್ಯಕ್ಕೆ ಪ್ರತಿಕ್ರಿಯೆಯಾಗಿ ಪ್ರಗತಿಶೀಲ ಚಳವಳಿಯೊಂದು ಕನ್ನಡದಲ್ಲಿ 1944ರ ಹೊತ್ತಿಗೆ ತಲೆಯೆತ್ತಿತು. ರೈತರ, ಕಾರ್ಮಿಕರ ಬಾಳನ್ನು ಚಿತ್ರಿಸುವ ಕವಿತೆ, ಕಥೆ, ಕಾದಂಬರಿಗಳು ರಚಿತವಾದುವು. ಕಾರ್ಮಿಕರ ಮತ್ತು ದೀನದಲಿತರ ಉದ್ಧಾರ, ಬಂಡವಾಳಶಾಹಿಯ ವಿರೋಧ - ಇದು ಪ್ರಗತಿಶೀಲ ಲೇಖಕರ ಧೋರಣೆ. ಸಾಮಾಜಿಕ ಪ್ರe್ಞೆ, ವಾಸ್ತವಿಕತೆಗಳನ್ನು ಸಾಹಿತ್ಯದಲ್ಲಿ ಮೂಡಿಸುವಲ್ಲಿ ಪ್ರಗತಿಶೀಲಧೋರಣೆ ಸಾಕಷ್ಟು ಯಶಸ್ವಿಯಾದರೂ ಅದರ ಉದ್ದೇಶಗಳು ಸೀಮಿತವಾಗಿದ್ದುವು.

ದೇಶಕ್ಕೆ ಸ್ವಾತಂತ್ರ್ಯ ಬಂದಮೇಲೆ 1947ರಿಂದ ಮುಂದಕ್ಕೆ ಕನ್ನಡದಲ್ಲಿ ನವ್ಯಕಾವ್ಯದ ಉಗಮ, ಬೆಳೆವಣಿಗೆಗಳನ್ನು ಕಾಣುತ್ತೇವೆ. ವಸ್ತು, ಶೈಲಿ, ಜೀವನ ಮೌಲ್ಯಗಳು, ಸಾಹಿತ್ಯದ ಮೇಲೆ ಮನಶ್ಶಾಸ್ತ್ರ ಮತ್ತು ಲೈಂಗಿಕ ಶಾಸ್ತ್ರ ಬೀರಿದ ಪ್ರಭಾವಗಳು- ಈ ಎಲ್ಲ ದೃಷ್ಟಿಗಳಿಂದ 1950ರಿಂದ ಈಚಿನ ಕಾವ್ಯಮಾರ್ಗ ನವ್ಯವಾಗಿದೆ. ವಿ.ಕೃ.ಗೋಕಾಕರು 1950ರಲ್ಲಿ ನವ್ಯ ಎಂಬ ಮಾತನ್ನು ಮೊದಲು ಬಳಸಿದರು. ನವ್ಯತೆಯ ಪರಂಪರೆಯನ್ನು ಆರಂಬಿsಸಿದವರು ಪೇಜಾವರ ಸದಾಶಿವರಾಯರು ಮತ್ತು ಗೋಕಾಕರು. ಮುಂದೆ ಆಡಿಗರು ಮೊದಲಾದವರು ಅದನ್ನು ಬೆಳೆಸಿದರು. ಎರಡನೆಯ ಮಹಾಯುದ್ಧಾನಂತರದ ಪ್ರಮುಖ ಇಂಗ್ಲಿಷ್ ಕವಿಗಳಾದ ಟಿ.ಎಸ್.ಎಲಿಯಟ್, ಆಡೆನ್, ಸೀಡೇ ಲೂಯಿ, ಮೆಕ್ನೀಸ್, ಡೈಲಾನ್ ಥಾಮಸ್ ಮೊದಲಾದವರಿಂದ ಪ್ರಭಾವಿತವಾದುದು ಕನ್ನಡ ನವ್ಯಕಾವ್ಯ. ಅಮೆರಿಕನ್ ಕವಿ ಎಜ್ರಾಪೌಂಡನಿಗೂ ಅದು ಋಣಿಯಾಗಿದೆ. ಅದರ ಪ್ರೇರಣೆ ಅರ್ಧ ದೇಶೀಯವಾದರೆ ಅರ್ಧ ವಿದೇಶೀಯವೆನ್ನಬಹುದು. ನವ್ಯಕಾವ್ಯ ಬಹುಮಟ್ಟಿಗೆ ವ್ಯಕ್ತಿನಿಷ್ಠ. ಕವಿಯ ಅನುಭವದ ಸಂಕೀರ್ಣತೆಗೇ ಅದರಲ್ಲಿ ಪ್ರಾಧಾನ್ಯ, ಸುಪ್ತಚಿತ್ತದ ಜಟಿಲತೆಯ ಆವಿಷ್ಕಾರ, ಆಡುಮಾತಿನ ವಿನ್ಯಾಸ, ಮುಕ್ತಛಂದ ಅದರ ಲಕ್ಷಣಗಳು. ಅದರ ತಂತ್ರ, ಶೈಲಿ ಮುಂತಾದುವೆಲ್ಲಾ ಬಹುಮಟ್ಟಿಗೆ ಇಂಗ್ಲಿಷ್ ನವ್ಯಕಾವ್ಯದ ಅನುಕರಣವೆಂದರೂ ತಪ್ಪಲ್ಲ.

ಕನ್ನಡದಲ್ಲಿ ಮೊದಮೊದಲು ಬಂದ ನಾಟಕಗಳೆಲ್ಲ ಅನುವಾದ ಅಥವಾ ರೂಪಾಂತರಗಳೇ ಆಗಿದ್ದು ಸ್ವತಂತ್ರ ನಾಟಕಗಳು ಹುಟ್ಟಿದುದು ತಡವಾಗಿ, ಶ್ರೀಯವರು ಇಂಗ್ಲಿಷ್ ಗೀತಗಳು ಸಂಕಲನದಿಂದ ಹೊಸ ಕಾವ್ಯಕ್ಕೆ ಸ್ಫೂರ್ತಿಕೊಟ್ಟಂತೆ ಗದಾಯುದ್ಧ ನಾಟಕ, ಅಶ್ವತ್ಥಾಮನ್, ಪಾರಸಿಕರು ನಾಟಕಗಳ ರಚನೆಯಿಂದ ಪದ್ಯ ನಾಟಕಗಳ ನಿರ್ಮಿತಿಗೆ ಅಡಿಪಾಯ ಹಾಕಿದರು. ಅವರ ಗದಾಯುದ್ಧ ನಾಟಕ ಗ್ರೀಕ್ ರುದ್ರನಾಟಕದ ಸ್ವರೂಪವನ್ನು ಮೊದಲ ಬಾರಿಗೆ ಪರಿಚಯಿಸಿತು. ಷೇಕ್ಸ್‌ಪಿಯರನ ರುದ್ರನಾಟಕಗಳ ಪರಿಚಯ ಈ ಹಿಂದೆಯೇ ಆಗಿತ್ತು. ಕನ್ನಡ ನಾಟಕಗಳಲ್ಲಿ ಸಾಮಾಜಿಕ ಪ್ರe್ಞೆಯನ್ನು ಮೂಡಿಸಿ ಹೊಸ ಯುಗವನ್ನೇ ಆರಂಬಿsಸಿದ ಶ್ರೇಯಸ್ಸು ಕೈಲಾಸಂ ಹಾಗೂ ಶ್ರೀರಂಗರದು. ಇಬ್ಬರೂ ಪ್ರೌಢಶಿಕ್ಷಣಕ್ಕಾಗಿ ಪಶ್ಚಿಮಕ್ಕೆ ಹೋಗಿ ಅಲ್ಲಿ ಪ್ರವಾಸ ಮಾಡಿದ್ದರಿಂದ ಪಾಶ್ಚಾತ್ಯ ರಂಗಭೂಮಿಯ ಪ್ರಭಾವ ಅವರ ಮೇಲುಂಟಾಯಿತು; ಹೊಸ ಜೀವನದ ದರ್ಶನವೂ ಲಬಿsಸಿತು. ಅದರ ಲಾಭವನ್ನು ಇಬ್ಬರೂ ಕನ್ನಡಕ್ಕೆ ತಮ್ಮ ನಾಟಕಗಳ ಮೂಲಕ ದೊರಕಿಸಿ ಕೊಟ್ಟರು. ಇಂಗ್ಲೆಂಡಿನಲ್ಲಿ ಇಬ್ಸನ್ನನ ನಾಟಕಗಳಿಂದ ಪ್ರೇರಿತರಾಗಿದ್ದ ಷಾ, ಗಾಲ್ಸ್‌ವರ್ದಿ ಮೊದಲಾದವರು ಕೈಲಾಸಂ, ಶ್ರೀರಂಗರ ಮೇಲೆ ಪ್ರಭಾವ ಬೀರಿದರು. ಈ ಪ್ರಭಾವ ಕನ್ನಡ ನಾಟಕ ಸಾಹಿತ್ಯದಲ್ಲಿ ಹೊಸ ಹುಟ್ಟಿಗೆ ಹೇತುವಾಯಿತು. ಏಕಾಂಕ ನಾಟಕ, ಗೀತನಾಟಕ, ರೇಡಿಯೊ ನಾಟಕ ಮುಂತಾದ ಪ್ರಕಾರಗಳೆಲ್ಲ ಪಾಶ್ಚಿಮಾತ್ಯ ಪ್ರಭಾವದಿಂದಲೇ ಕನ್ನಡದಲ್ಲಿ ನೆಲೆಗೊಂಡುವು.

ಈಚೆಗೆ ಅಸಂಗತ (ಅಬ್ಸರ್ಡ್) ನಾಟಕಗಳನ್ನು ಕನ್ನಡ ಸಾಹಿತ್ಯದಲ್ಲಿ ಕಾಣುತ್ತಿದ್ದೇವೆ. ಇಂಗ್ಲಿಷ್ ಹಾಗೂ ಫ್ರೆಂಚ್ ನಾಟಕಕಾರರಾದ ಆಸ್ಬರ್ನ್, ಪಿಂಟರ್, ಅಯನೆಸ್ಕೊ, ಆಲ್ಬರ್ಟ್‌ಕಾಮು ಮೊದಲಾದವರು ಇವುಗಳ ಹಿಂದಿದ್ದಾರೆ.

ಅಸ್ತಿತ್ವವಾದ ನಾಟಕಗಳನ್ನು ಬರೆದಿರುವ ಫ್ರೆಂಚ್ ನಾಟಕಕಾರ ಬೆಕೆಟ್, ಇಟಲಿಯ ನಾಟಕಕಾರ ಪಿರಾಂಡೆಲೊ ಮೊದಲಾದವರ ಪ್ರಭಾವ ಇಂದಿನ ಕನ್ನಡ ನಾಟಕಗಳ ಮೇಲಿದೆ. ಪ್ರಬಂಧ, ಲಲಿತ ಪ್ರಬಂಧ ಅಥವಾ ಆತ್ಮೀಯ ಪ್ರಬಂಧ - ಕನ್ನಡಕ್ಕೆ ಸಂಪುರ್ಣವಾಗಿ ಹೊಸದು; ಇದು ಕೂಡ ಪಶ್ಚಿಮದ ಕೊಡುಗೆ. ಭಾವಗೀತೆ, ಕಥೆ ಮುಂತಾದುವುಗಳಿಗಿದ್ದಂತೆ ಇದಕ್ಕೆ ನಮ್ಮಲ್ಲಿ ಪುರ್ವಪರಂಪರೆ ಇರಲಿಲ್ಲ. ಪ್ರಬಂಧ ಪ್ರಕಾರದ ತೌರುಮನೆ ಫ್ರಾನ್ಸ್‌; ಮಾಂಟೇನ್ ಇದರ ಜನಕ. ಅವನನ್ನು ಅನುಸರಿಸಿದವರು ಇಂಗ್ಲಿಷ್ ಪ್ರಬಂಧಕಾರರು; ಬೇಕನ್, ಅಡಿಸನ್, ಸ್ಟೀಲ್, ಜಾನ್ಸನ್, ಗೋಲ್ಡ್‌ಸ್ಮಿತ್, ಲ್ಯಾಂಬï, ಲ್ಯೂಕಾಸ್, ಚೆಸ್ಟರ್ಟನ್, ರಾಬರ್ಟ್ ಲಿಂಡ್, ಎ.ಜಿ.ಗಾರ್ಡಿನರ್ ಮೊದಲಾದವರು. ಇವರೆಲ್ಲರ ಪ್ರಭಾವ ಕನ್ನಡ ಪ್ರಬಂಧಗಳ ಮೇಲಿದೆ. ಅನೇಕ ಪ್ರಂಬಧಗಳು ಕನ್ನಡಕ್ಕೆ ಅನುವಾದಗೊಂಡಿರುವುದೂ ಉಂಟು.

ಕಥೆ-ಕಾದಂಬರಿ ಪಶ್ಚಿಮದ ಸಂಸರ್ಗದಿಂದ ನಮ್ಮಲ್ಲಿ ರೂಪುಗೊಂಡ ಪ್ರಕಾರಗಳು. ಇವುಗಳ ಚರಿತ್ರೆಯಲ್ಲಿ ನವೋದಯ, ಪ್ರಗತಿಶೀಲ ಮತ್ತು ನವ್ಯ ಎಂದು ಮೂರು ಹಂತಗಳನ್ನು ಗುರುತಿಸಬಹುದು.

ನಮೋದಯ ಕಾಲದ ಕಥೆಗಾರರು ಮತ್ತು ಕಾದಂಬರಿಕಾರರು ಪರಂಪರಾಗತ ಮೌಲ್ಯಗಳನ್ನು ತಮ್ಮ ಕೃತಿಗಳಲ್ಲಿ ಅನ್ವೇಷಿಸಿದರು. ನಮೋದಯ ಸಾಹಿತ್ಯಕ್ಕೆ ಪ್ರತಿಭಟನೆಯಾಗಿ ಪ್ರಗತಿಶೀಲ ಸಾಹಿತ್ಯ ಹುಟ್ಟಿಕೊಂಡಿತು. ಎರಡನೆಯ ಮಹಾಯುದ್ಧ ಕಾಲಕ್ಕೆ ಆರಂಭವಾಗಿ, ಮಾಕ್ರ್ಸ್‌ವಾದವನ್ನು ಆಧರಿಸಿದ ಪ್ರಗತಿಶೀಲ ಚಳವಳಿ ರಷ್ಯನ್ ಸಾಹಿತ್ಯದಿಂದ ಹಿಂದೀಯ ಮೂಲಕ ಕನ್ನಡಕ್ಕೆ ಅವತರಿಸಿತು. ಅದು ಮೊದಲು ಕಾಣಿಸಿಕೊಂಡಿದ್ದು ಸಣ್ಣಕಥೆಗಳಲ್ಲಿ. 1936-42ರವರೆಗೆ ನಡೆದ ರಾಜಕೀಯ ಕ್ರಾಂತಿಗಳು, ಪತ್ರಿಕೆಗಳಲ್ಲಿ ನಡೆಯುತ್ತಿದ್ದ ಪ್ರಗತಿಶೀಲತೆಯ ಪ್ರಚಾರ, ರಷ್ಯನ್ ಹಾಗೂ ಹಿಂದೀ ಕಥೆಗಳ ಅನುವಾದ -ಇವುಗಳ ಫಲಿತಾಂಶವೇ ಪ್ರಗತಿಶೀಲಪಂಥ.

ಇಂದಿನ ಸಣ್ಣಕಥೆ ಕವಿತೆಗೆ ಹತ್ತಿರವಾದುದು. ನವ್ಯಕಾವ್ಯ ಹಾಗೂ ನವ್ಯಕಥೆ ಒಂದೇ ಪ್ರe್ಞೆಯ ಮೂಲದಿಂದ ಹೊರಟವೆಂದು ಹೇಳಲಾಗಿದೆ. ಇದನ್ನು ಒಂದೇ ಮಾತಿನಲ್ಲಿ ಅನಾಥಪ್ರe್ಞೆ ಎಂದು ಕರೆಯಬಹುದು. ಇದು ತಕ್ಕಮಟ್ಟಿಗೆ ಪಶ್ಚಿಮದ ಬಳುವಳಿಯೇ. ಪಶ್ಚಿಮದಿಂದ ಬಂದಿರುವ ಸಾಹಿತ್ಯಕ, ವೈಜ್ಞಾನಿಕ, ಸಾಮಾಜಿಕ, ಮನೋವೈಜ್ಞಾನಿಕ ವಿಚಾರಗಳೆಲ್ಲ ಇಂದಿನ ಲೇಖಕನ ಮೇಲೆ ಪ್ರಭಾವಬೀರಿವೆ. ಹೊಸ ಮೌಲ್ಯಗಳ ಶೋಧ ಅವನ ಗುರಿ. ಇಂದಿನ ಕಥೆಗಾರ ಫ್ರಾಯ್ಡ್‌, ಯೂಂಗ್, ಆ್ಯಡ್ಲರ್ ಮೊದಲಾದವರ ಸಂಶೋಧನೆಯ ಫಲಗಳನ್ನು ಪಡೆದುಕೊಂಡು ಮಾನಸಿಕ ವಿಶ್ಲೇಷಣೆಯಲ್ಲಿ ತೊಡಗುತ್ತಾನೆ; ಅಂತರಂಗ ಸಂಬಂಧವಾದ ವಾಸ್ತವಿಕತೆಗೆ ಮಹತ್ತ್ವ ಕೊಡುತ್ತಾನೆ. ಅನುಭವದ ಸಂಕೀರ್ಣತೆಯನ್ನು ಹೊರಗೆಡಹುವ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿಕೊಳ್ಳುತ್ತಾನೆ. ಈ ತಂತ್ರ ವರ್ಜೀನಿಯವುಲ್ಫ್‌, ಜೇಮ್ಸ್‌ಜಾಯ್ಸ್‌ ಮೊದಲಾದವರಿಂದ ಪ್ರಚುರವಾದುದು. ನವ್ಯಕಾವ್ಯದಲ್ಲಿ ಹೇಗೋ ಹಾಗೆ ನವ್ಯಕಥೆಯಲ್ಲೂ ಪ್ರತಿಮೆ ಪ್ರತೀಕ ಸಂಕೇತಗಳು ತುಂಬಿರುತ್ತವೆ. ಕನ್ನಡದಲ್ಲಿ ನವ್ಯಸಾಹಿತ್ಯ ಸಂದರ್ಭದಲ್ಲಿ ಬಂದ ಕಥೆಕಾದಂಬರಿಗಳ ಮೇಲೆ ಪಾಶ್ಚಾತ್ಯ ಅಸ್ತಿತ್ವವಾದದ ಪ್ರಭಾವ ದಟ್ಟವಾಗಿದೆ. ಫ್ರೆಂಚ್ ಲೇಖಕ ಜೀನ್ಪಾಲ್ ಸಾತೆರ್ರ್‌ ಅಸ್ತಿತ್ವವಾದದ ಮೂಲಪುರುಷ. ಅಂತೆಯೇ ಫ್ರೆಂಚ್ ಲೇಖಕ ಆಲ್ಬರ್ಟ್ ಕಾಮು, ಜರ್ಮನ್ ಲೇಖಕ ಕಾಫ್ಕಾ, ಐರಿಷ್ ಲೇಖಕ ಜೇಮ್ಸ್‌ ಜಾಯ್ಸ್‌, ಜರ್ಮನ್ ಲೇಖಕ ಬ್ರೆಕ್ಟ್‌, ಸ್ವೀಡಿಷ್ ಲೇಖಕ ಸ್ಟ್ರಿಂಡ್ಬರ್ಗ್ ಮೊದಲಾದವರ ಕೃತಿಗಳೆಲ್ಲ ಕನ್ನಡ ಕಥನ ಲೇಖಕರನ್ನು ಸೆಳೆದಿವೆ. ಹೊಸಗನ್ನಡದ ಇತರ ಪ್ರಕಾರಗಳು ಹೇಗೋ ಹಾಗೆ ವಿಮರ್ಶೆಯೂ ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದಲೇ ರೂಢವಾದದ್ದು. ಆಂಗ್ಲ ವಿಮರ್ಶೆ ಕನ್ನಡ ವಿಮರ್ಶೆಯ ಮೇಲೆ ಮಾತ್ರವಲ್ಲದೆ ಸೃಷ್ಟಿ ಸಾಹಿತ್ಯದ ಮೇಲೂ ಪ್ರಭಾವ ಬೀರಿದೆ. ಪಾಶ್ಚಾತ್ಯ ಕಾವ್ಯತತ್ತ್ವಗಳ ಅಭ್ಯಾಸ, ಪ್ರಾಚೀನ ಗ್ರಂಥಗಳ ಸಂಶೋಧನೆ ಪರಿಷ್ಕಾರ ಮತ್ತು ವಿಮರ್ಶಾತ್ಮಕವಾಗಿ ಬೆಲೆ ಕಟ್ಟುವುದು, ಸಂಸ್ಕೃತ ಕಾವ್ಯಮೀಮಾಂಸೆಯ ವ್ಯವಸ್ಥಿತ ಅಭ್ಯಾಸ, ಕನ್ನಡಕ್ಕೆ ಆ ವಿಷಯಕವಾದ ಗ್ರಂಥಗಳನ್ನು ತರುವುದು ಇಂಥವುಗಳಿಗೆ ಕಾರಣವಾಯಿತು.

ಚಾರಿತ್ರಿಕವಾಗಿ ನೋಡಿದರೆ ಕನ್ನಡದಲ್ಲಿ ವಿಮರ್ಶೆಗೆ ತಳಹದಿ ಹಾಕಿದವರು ವಿದೇಶೀಯರು, ಕ್ರೈಸ್ತಮಿಷನರಿಗಳು ಎನ್ನಬಹುದು. ಕಳೆದ ಶತಮಾನದಲ್ಲಿಯೇ ಕಿಟ್ಟೆಲ್ ಕನ್ನಡ ಸಾಹಿತ್ಯದ ಸಂಕ್ಷಿಪ್ತ ಸಮೀಕ್ಷೆಯನ್ನು ಛಂದೋಂಬುಧಿಯ ಪೀಠಿಕೆಯ ಭಾಗವಾಗಿ ಇಂಗ್ಲಿಷಿನಲ್ಲಿ ಪ್ರಕಟಿಸಿದ. ಅನಂತರ ಬೆನಗಲ್ ರಾಮರಾಯರ ರೆನೇಸಾನ್ಸ್‌ ಇನ್ ಮಾಡರ್ನ್ ಕನ್ನಡ ಹೊಸಗನ್ನಡದ ಮೊದಲ ಸಮೀಕ್ಷೆಯೆನ್ನಲಾಗಿದೆ. ಹೊಸಗನ್ನಡ ಸಾಹಿತ್ಯಕ್ಕೆ ಶ್ರೀಯವರು ಆಚಾರ್ಯಪುರುಷರಾದಂತೆ ಆಧುನಿಕ ವಿಮರ್ಶೆಗೂ ಅವರೇ ಆದ್ಯರೆನ್ನಬೇಕು. ನವೋದಯ ಕಾಲದ ಕನ್ನಡ ಕವಿಗಳಿಗೂ ಆಂಗ್ಲ ರೊಮ್ಯಾಂಟಿಕ್ ಕವಿಗಳಿಗೂ ಸ್ಫೂರ್ತಿಯಲ್ಲಿ ಮತ್ತು ಕಾವ್ಯ ತತ್ತ್ವಗಳಲ್ಲಿ ಸಾಮ್ಯವಿದೆ. ನವೋದಯ ಕಾಲದಲ್ಲಿ ಸಾಹಿತ್ಯದ ಸಿದ್ಧಾಂತಗಳಿಗೆ ಒಂದು ರೂಪವನ್ನು ಕೊಡಲು ಪ್ರಯತ್ನಿಸಿದ ಮಾಸ್ತಿಯವರ ಸಾಹಿತ್ಯ ಗ್ರಂಥವನ್ನು ನೋಡಿದರೆ ಸಾಮ್ಯ ಸ್ಪಷ್ಟವಾಗುತ್ತದೆ. ಈ ಕೃತಿಯ ಮೇಲೆ ವಡ್ರ್ಸ್‌ವರ್ತನ ವಿಚಾರಗಳ ಪ್ರಭಾವವುಂಟು.

ಡಿ.ವಿ.ಜಿ., ಕುವೆಂಪು ಮೊದಲಾದವರ ವಿಮರ್ಶೆಗಳಲ್ಲಿ ಶೆಲ್ಲಿ, ವರ್ಡ್ಸವರ್ತ್, ಅರ್ನಾಲ್ಡ್‌, ಅರಿಸ್ಟಾಟಲ್ ಮೊದಲಾದವರ ವಿಚಾರಗಳು ಒಂದು ಕಡೆ ಭಾರತೀಯ ಕಾವ್ಯತತ್ತ್ವಗಳು ಇನ್ನೊಂದು ಕಡೆ ಸಮ್ಮಿಲಿತವಾಗಿವೆ. ಎಸ್.ವಿ.ರಂಗಣ್ಣನವರ ಶೈಲಿಯಲ್ಲಿ ಹರ್ಬರ್ಟ್ ರೀಡ್, ಮಿಡ್ಲ್‌ಟನ್ ಮರ್ರಿ, ಎಫ್.ಎಲ್.ಲ್ಯೂಕಾಸರ ಶೈಲಿ ಸಿದ್ಧಾಂತಗಳ ಅಳವಡಿಕೆಯಿದೆ. ಕುವೆಂಪು ಅವರ ಕಾವ್ಯಮೀಮಾಂಸೆಯ ಮೇಲೆ ಇಂಗ್ಲಿಷ್ ವಿಮರ್ಶಕರಾದ ಐ.ಎ.ರಿಚರ್ಡ್ಸ್, ಎ.ಸಿ.ಬ್ರಾಡ್ಲೆ ಮೊದಲಾದವರು ಮಾತ್ರವಲ್ಲದೆ ಸ್ವೀಡಿಷ್ ಮನೋವಿಜ್ಞಾನಿ ಯೂಂಗ್ ಪ್ರಭಾವ ಬೀರಿದ್ದಾರೆ. ಕುವೆಂಪು ಅವರ ಭವ್ಯತಾ ಮೀಮಾಂಸೆ ಪಾಶ್ಚಾತ್ಯ ವಿಮರ್ಶೆಯಿಂದ ಪ್ರೇರಿತವಾದುದು.[೧]

ಇದುವರೆಗೆ ಕನ್ನಡ ಸಾಹಿತ್ಯದಲ್ಲಿ ಮೂಡಿರುವ ಕಾವ್ಯಮೀಮಾಂಸೆ ಏನಿದ್ದರೂ ಅದೆಲ್ಲ ಸಂಸ್ಕೃತದ ಪಡಿನೆಳಲಂತಿದೆ. ನಮ್ಮ ಮುಂದಿನ ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆಗಳು ಪಾಶ್ಚಾತ್ಯ ಮತ್ತು ಭಾರತೀಯ ಕಾವ್ಯ ಮೀಮಾಂಸೆಗಳಿಂದ ಮಾತ್ರವಲ್ಲದೆ ತತ್ತ್ವಶಾಸ್ತ್ರ, ಯೋಗವಿಜ್ಞಾನ, ಸೌಂದರ್ಯ ಮೀಮಾಂಸೆ ಮತ್ತು ಮನಶ್ಶಾಸ್ತ್ರ ಇವುಗಳಿಂದಲೂ ಬೆಳಕು ಪಡೆದು ಧೀರವಾಗಿ ಸ್ವತಂತ್ರವಾಗಿ ಪುರ್ಣದೃಷ್ಟಿಯ ಕಡೆಗೆ ಮುನ್ನಡೆಯಬೇಕಾಗುತ್ತದೆ ಎಂದು ಕುವೆಂಪು ಅವರು ವ್ಯಕ್ತಪಡಿಸಿದ ನಿರೀಕ್ಷೆ ತಕ್ಕಮಟ್ಟಿಗೆ ಫಲಿಸಿದೆ. ಕನ್ನಡದಲ್ಲಿ ಪ್ರವಾಸ ಸಾಹಿತ್ಯ, ಜೀವನಚರಿತ್ರೆ, ಆತ್ಮಕಥೆ, ಹಾಸ್ಯಸಾಹಿತ್ಯ ಮುಂತಾದ ಪ್ರಕಾರಗಳೂ ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದಲೇ ಮೂಡಿದುವು.

ಒಟ್ಟಿನಲ್ಲಿ ಹೇಳುವುದಾದರೆ ಈ ಹೊತ್ತು ಆಧುನಿಕ ಕನ್ನಡ ಸಾಹಿತ್ಯ ಏನಾಗಿದೆಯೊ ಅದಕ್ಕೆ ಪಾಶ್ಚಾತ್ಯ ಸಾಹಿತ್ಯ - ಅರ್ಥಾತ್ ಇಂಗ್ಲಿಷ್ ಸಾಹಿತ್ಯ -ವಿಶೇಷವಾಗಿ ಕಾರಣವಾಗಿದೆ. ಇಂಗ್ಲಿಷಿನ ಪ್ರಭಾವವನ್ನು ಕನ್ನಡ ಅರಗಿಸಿಕೊಂಡು ರಕ್ತಗತ ಮಾಡಿಕೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://kannadasaahithya.com/ksc_bak_15_01_2016/wordpress/?p=728[ಶಾಶ್ವತವಾಗಿ ಮಡಿದ ಕೊಂಡಿ]