ಪಾಲಿನೇಷಿಯನ್ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಲಿನೇಷಿಯನ್ ಭಾಷೆ - ಶಾಂತಮಹಾಸಾಗರದ ಅನೇಕ ಹವಾಯಿ ಪ್ರಾಂತ, ದಕ್ಷಿಣದಲ್ಲಿ ನ್ಯೂಜಿಲೆಂಡಿನಿಂದ ಪೂರ್ವದಲ್ಲಿ ಪೂರ್ವದ ನಡುಗಡ್ಡೆಗಳಿಂದ, ಪಶ್ಚಿಮದಲ್ಲಿ ಸಮೋವಾ ಮತ್ತು ಟೋಂಗಾ ನಡುಗಡ್ಡೆಗಳಿಂದ ಆವೃತವಾದ ಪಾಲಿನೇಷ್ಯದ ಮುಖ್ಯ ಭಾಷೆ. 10 ಲಕ್ಷಜನ ಈ ಭಾಷೆಯನ್ನು ಬಳಸುತ್ತಲಿದ್ದಾರೆ. ಈ ಭಾಷೆಯಲ್ಲಿ ಇರುವ 60 ಕ್ಕೂ ಹೆಚ್ಚಿನ ಉಷಭಾಷೆಗಳು ಮಲಯೋ--ಪಾಲಿನೇಷಿಯನ್ ಭಾಷಾ ವರ್ಗಕ್ಕೆ ಸೇರಿವೆ. ಹವಾಯಿಯನ್, ನ್ಯೂಜಿಲೆಂಡ್ ಮಾವೋರಿ. ಸಾಮೋಅನ್ ತೊಂಗನ್, ತಾಹಿತಿಯನ್, ನ್ಯೂಯೆನ್ ಮಂಗಕಿವನ್ ಮತ್ತು ತಾಮೊತುವನ್-ಇವು ಕೆಲವು ಮುಖ್ಯ ಉಪಭಾಷೆಗಳು. ಈ ಉಪಭಾಷೆಗಳಲ್ಲಿ ಬಹಳಷ್ಟು ವ್ಯತ್ಯಾಸಗಳು ಕಂಡುಬರುವುದಿಲ್ಲ. ಇದರಿಂದ ಬೇರೆ ಬೇರೆ ನಡುಗಡ್ಡೆಗಳಲ್ಲಿ ಬಹಳಷ್ಟು ವ್ಯತ್ಯಾಸಗಳು ಕಂಡುಬರುವುದಿಲ್ಲ. ಇದರಿಂದ ಬೇರೆ ಬೇರೆ ನಡುಗಡ್ಡೆಗಳಲ್ಲಿ ವಾಸ ಮಾಡುವ ಈ ಜನ ವಲಸೆ ಹೋಗಿ ಬಹಳ ಕಾಲವಾಗಿಲ್ಲವೆಂದು ತಿಳಿಯಬಹುದು. ಇವುಗಳಲ್ಲಿನ ನೂರಾರು ಮೂಲ ಶಬ್ಧಗಳು ಮಲಯಾ ಭಾಷೆಯ ಮೂಲ ಶಬ್ದಗಳನ್ನು ಹೋಲುತ್ತವೆ.

ಪಾಲಿನೇಷಿಯನ್ ಭಾಷೆ ಬಗ್ಗೆ ನಡೆದ ಅಧ್ಯಯನ[ಬದಲಾಯಿಸಿ]

18ನೆಯ ಶತಮಾನದ ಉತ್ತರಾರ್ಧದಲ್ಲಿ ಕ್ಯಾಪ್ಟನ್ ಜೇಮ್ಸ್ ಕುಕ್ ಮತ್ತು ಸಹಯೋಗಿಗಳು ಶಾಂತಮಹಾಸಾಗರದ ತೀವ್ರತರ ಸಂಶೋಧನೆಗಳಲ್ಲಿ ತೊಡಗಿದ್ದಾಗ ಅಲ್ಲಿಯ ಭಾಷೆಗಳನ್ನೂ ಆಧ್ಯಯನ ಮಾಡಿದರು. ದಿನನಿತ್ಯ ಉಪಯೋಗಿಸುವ ಹಾಗೂ ವಿಜಾÐನದ ಉದ್ದೇಶಗಳಿಗೆ ಸಂಬಂಧವಿರುವ ಅನೇಕ ಶಬ್ದಗಳನ್ನು ಸಂಗ್ರಹಿಸಿದರು. ಅನಂತರ ಬೈಬಲನ್ನು ಸ್ಥಳೀಯ ಭಾಷೆಗಳಲ್ಲಿ ಅನುವಾದ ಮಾಡುವುದಕ್ಕೋಸ್ಕರ ಕ್ರಿಶ್ಚನ್ ಪಾದ್ರಿಗಳು ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರಿಂದ ಪಾಲಿನೇಷಿಯನ್ ಭಾಷೆಯ ಅನೇಕ ಉಪಭಾಷೆಗಳ ವೈಜ್ಞಾನಿಕ ಅಧ್ಯಯನ ನಡೆಯಿತು. ಇದರಿಂದ 19 ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಈ ಭಾಷೆಯ ಬಹುತೇಕ ಎಲ್ಲ ಉಪಭಾಷೆಗಳಲ್ಲಿಯೂ ಶಬ್ದಕೋಶಗಳು, ವ್ಯಾಕರಣಗಳು ತಯಾರಾದವು ಹಾಗೂ ಬೈಬಲ್ ಅನುವಾದಗೊಂಡಿತು. ಐತಿಹಾಸಿಕ ಮತ್ತು ಸಾಂಸ್ಕøತಿಕ ದೃಷ್ಟಿಗಳಿಂದ ಈ ಭಾಷೆಗಳು ಆಕೃತಿಮಾಶಾಸ್ತ್ರ ಹಾಗೂ ಅನುವಾದ ಕಲೆಗಳಿಂದ ಬಹಳಷ್ಟು ಭಾಷಾ ವಿಜ್ಞಾನಿಗಳ ಅಭಿರುಚಿಯನ್ನು ಕೆರಳಿಸಿವೆ.

ಧ್ವನಿಮಾಶಾಸ್ತ್ರ[ಬದಲಾಯಿಸಿ]

ಪಾಲಿನೇಷಿಯನ್ ಭಾಷೆಯಲ್ಲಿ ವ್ಯಂಜನಗಳು ಇಲ್ಲದರಿಂದಲೂ ಹತ್ತು ತರಹದ ಅರ್ಥಭೇದಕ ಸ್ವರಧ್ವನಿಗಳಿರುವುದರಿಂದಲೂ ಇದನ್ನು ಸ್ವರಭಾಷೆಯೆಂದೇ ಕರೆಯುತ್ತಾರೆ. ಆಡುಮಾತಿನಲ್ಲೂ ಅ, ( ಎ, ( ಇ, ( ಒ, ( ಮತ್ತು ( ಉ ಗಳಲ್ಲಿ ದೀರ್ಘದ ಐದು ಖಚಿತ ಭೇದಗಳಿರುವುದು ಕಂಡುಬರುತ್ತದೆ. ಬರವಣಿಗೆಯ ಉದ್ದೇಶದಿಂದ ಈ ದ್ವಿತ್ವಸ್ವರಗಳನ್ನು ಎರಡು ಗುಂಪಾಗಿ ವಿಭಾಗಿಸಿದ್ದಾರೆ. ಉದಾಹರಣೆಗೆ ನ್ಯೂಜಿಲೆಂಡಿನ ಮಾವೋರಿ ಉಪಭಾಷೆಯಲ್ಲಿ ಮತ ಅಂದರೆ ಮುಖ ಮತ್ತು ಮಾತಾ ಅಂದರೆ ಗುಂಪು, ರಾಶಿ ಎಂದು ಆರ್ಥ ಬರುತ್ತದೆ. ಉಚ್ಚಾರಣೆಯ ವೈಜ್ಞಾನಿಕ ಆಧ್ಯಯನ ಇನ್ನೂ ನಡೆದಿಲ್ಲವಾದ್ದರಿಂದ ಈ ಭಾಷೆಯ ಹ್ರಸ್ವ ಮತ್ತು ದೀರ್ಘಸ್ವರಗಳ ಸಾರ್ಥಕಭೇದ ಇತ್ತೀಚಿನದು.

  1. ಕೆಲವೊಂದು ಸ್ವರಗಳಲ್ಲಿ ಬಹಳಷ್ಟು ವ್ಯತ್ಯಯ ಇದ್ದು ಇದರಲ್ಲಿ ಇ ( ಉ ಮತ್ತು ಅ ( ಎ ಮುಖ್ಯವಾದವು. ಉದಾಹರಣೆಗೆ ಹವಾಯಿಯನ್ ಉಪಭಾಷೆಯಲ್ಲಿ ಇಮು ಅಂದರೆ ಮಣ್ಣಿನ ಒಲೆ ಉಮು ಎಂದಾಗಬಹುದು.
  2. ಈ ಭಾಷೆಯ ಸುಮಾರು 50 ಉಪಭಾಷೆಗಳ ಅಧ್ಯಯನ ನಡೆದಿದ್ದು ಅದರಿಂದ ಮೂಲ-ಪಾಲಿನೇಷಿಯನ್ ಭಾಷೆಯ ವ್ಯಂಜನ ವ್ಯವಸ್ಥೆಯ ಪುನರ್ ರಚನೆಯ ಬಗ್ಗೆ ಗೊತ್ತಾದ ಕೆಲವು ಮಾಹಿತಿಗಳು ಕೆಳಗಿನಂತಿವೆ.

ಪಾಲಿನೇಷಿಯನ್ ಭಾಷೆಯ ಆಧುನಿಕ ಯಾವ ಉಪಭಾಷೆಗಳಲ್ಲಿಯೂ ಎಲ್ಲ ಮೂಲಧ್ವನಿಗಳೂ ಕಂಡುಬರುವುದಿಲ್ಲ. ವಿಶೇಷವಾಗಿ ಪೂರ್ವದ ಪಾಲಿನೇಷಿಯನ್ ಭಾಷೆಯಲ್ಲಿ ವ್ಯಂಜನಗಳ ಕಡಿತ ಬಹಳ ಇದೆ. ರುರುತುಆನ್ ಉಪಭಾಷೆಯಲ್ಲಿ ಕೇವಲ ಏಳು ವ್ಯಂಜನಗಳು ಉಳಿದಿದ್ದು ಕಂಡುಬರುತ್ತದೆ. ಸತತವಾದ ವ್ಯಂಜನ ವರ್ಗಾವಣೆ ಮತ್ತು ಕೆಲವು ವ್ಯಂಜನಗಳ ಸಂಪೂರ್ಣ ಕಡಿತ ಈ ಉಪಭಾಷೆಗಳ ಮುಖ್ಯ ಲಕ್ಷಣವಾಗಿವೆ. ಇದರಿಂದ ಉಪಭಾಷೆಗಳ ವೈವಿಧ್ಯವನ್ನು ಒಂದೇ ಉಪಭಾಷೆಯ ಮೂಲದಿಂದ ಕಂಡುಹಿಡಿಯಬಹುದು. ಉದಾಹರಣೆಗೆ ಪ್ರೋಟೋ-ಪಾಲಿನೇಷಿಯನ್ನಿನ ಅಹಿ ಅಂದರೆ ಬೆಂಕಿ ರಾರ್ತೋಂಗನ್ ಉಪಭಾಷೆಯಲ್ಲಿ ಅ'ಇ ಎಂದಾಗುತ್ತದೆ.

ಮಂಗಯನ್ ಉಪಭಾಷೆಯಲ್ಲಿ ಕಂಠಧ್ವನಿಯಾದ ಕಕಾಕಲ್ಯಸ್ಪರ್ಶ ಆಗಿ ಪರಿವರ್ತನೆ ಹೊಂದಿದೆ. ಹವಾಯಿಯನ್ನಿನ ಉಆಲಾ ಮತ್ತು ಮಾಂಗಿಯನ್ನಿನ ಉಅರಾ ಪ್ರೋಟೋ-ಪಾಲಿನೇಷಿಯನ್ನಿನ ಕುಮರ ಅಂದರೆ (ಸಿಹಿ ಆಲೂಗೆಡ್ಡೆ) ಎಂದಾಗುತ್ತದೆ. ಫ್ರೋಟೋಪಾಲಿನೇಷಿಯನ್ ತಸಿ (ಸಮುದ್ರ) ಎಂಬ ಶಬ್ದ ಪಾಲಿನೇಷಿಯನ್ನಿನಲ್ಲಿ ತೈ ಎಂದಾಗುತ್ತದೆ. ಪಾಲಿನೇಷಿಯಾನಿನಲ್ಲಿ ಇಂಗ್ಲೀಷಿನಲ್ಲಿದ್ದಂತೆ ಬ ದ ಗ ಎಂಬ ಘೋಷಧ್ವನಿಗಳು ಇಲ್ಲ. ಯೂರೋಪಿಯನ್ನರು ಅಘೋಷ ಧ್ವನಿಗಳನ್ನು ಘೋಷ ಧ್ವನಿಗಳಂತೆ ಉಚ್ಚರಿಸಿದರು. ಉದಾಹರಣೆಗೆ ತಪುವನ್ನು ತಬು ಎಂದಾಗಿಯೂ ಪೊರಾಪೊರಾ ಎಂಬ ನಡುಗಡ್ಡೆಯ ಹೆಸರನ್ನು ಬೊರಾಬೊರಾ ಎಂದು ಉಚ್ಚರಿಸಿದ್ದುಂಟು. ಪಾಲೆನೇಷಿಯನ್ನರಿಗೆ ಇಂಗ್ಲೀಷಿನ bಚಿಜ ಮತ್ತು bಚಿಣ, ಣಚಿb ಮತ್ತು ಣಚಿಠಿ ಗಳ ಉಚ್ಚಾರಣೆಯಲ್ಲಿ ಭೇದವೇ ಕಂಡುಬರುವುದಿಲ್ಲ. ಇದು ಭಾಷೆಯ ಧ್ವನಿ ವ್ಯವಸ್ಥೆಯನ್ನು ತಿಳಿಸುತ್ತದೆ. ಇಂಗ್ಲಿಷ್ ಮತ್ತು ಫ್ರೆಂಚ್ ಮಿಷನರಿಗಳು ಪಾಲಿನೇಷಿಯನ್ ಭಾಷೆಗೆ ರೋಮನ್ ಲಿಪಿಯನ್ನು ಉಪಯೋಗಿಸಿದರು. ಈ ಲಿಪಿಯಿಂದ ಆ ಭಾಷೆಯಲ್ಲಿನ ಧ್ವನಿಗಳ ಎಲ್ಲ ಭೇದಗಳನ್ನು ಗುರುತಿಸಲು ಅಸಾಧ್ಯವಾಯಿತು. ವಿಶೇಷವಾಗಿ ಹ್ರಸ್ವದೀರ್ಘಗಳ ಭೇದ ಬಹಳ ಕಠಿಣವಾಯಿತು. ಎಷ್ಟೋ ಇಂಗ್ಲಿಷ್ ಶಬ್ದಗಳು ಪಾಲಿನೇಷಿಯನ್ ಭಾಷೆಯಲ್ಲಿ ಅಲ್ಲಲ್ಲಿನ ಉಚ್ಚಾರಣಾ ಪದ್ಧತಿಯಂತೆ ಮಾರ್ಪಟ್ಟವು. ಉದಾಹರಣೆಗೆ ಇಂಗ್ಲಿಷಿನ ಬ್ರೂಮ್ ಮತ್ತು ಟವೆಲ್ ಶಬ್ದಗಳು ತಾಹಿತಿಯನ್ ಉಪಭಾಷೆಯಲ್ಲಿ ಪುರಮು ಮತ್ತು ತಾವರಾ ಎಂಬುದಾಗಿ ಮಾರ್ಪಟ್ಟವು.

ಶಬ್ದಶಾಸ್ತ್ರ[ಬದಲಾಯಿಸಿ]

ಪಾಲಿನೇಷಿಯನ್ ಭಾಷೆಯಲ್ಲಿ ಪೂರ್ವ ಮತ್ತು ಪರ ಪ್ರತ್ಯಯಗಳ ಅಭಾವವಿದ್ದು ಕೇವಲ ಮೂಲ ಶಬ್ದಗಳೇ ಘಟಕ ರೂಪಗಳು ಮತ್ತು ಜೋಡಿಗೆ ಶಬ್ದಗಳು ಕಂಡುಬರುತ್ತವೆ. ಈ ಭಾಷೆಯ ಶಬ್ದಗಳು ಸಾಮಾನ್ಯವಾಗಿ ದ್ವ್ಯಕ್ಷರಗಳಿಂದ ಕೂಡಿದವುಗಳಾಗಿವೆ. ಸ್ವರಾಘಾತ ಸ್ಥಳಸ್ಥಳಕ್ಕೆ ಭಿನ್ನವಾಗುತ್ತದೆ. ಮೂಲ ಶಬ್ದಗಳೂ ದ್ವಿಗುಣೀಕೃತವಾಗುತ್ತವೆ. ಉದಾ: ಪಕಿ ಅಂದರೆ ಣo ಠಿಚಿಣ. ಪಕಿಪಕಿ ಅಂದರೆ ಣo ಠಿಚಿಣ ಜಿಡಿequeಟಿಣಟಥಿ ಎಂದರ್ಥ.

ವಾಕ್ಯರಚನೆ[ಬದಲಾಯಿಸಿ]

ಸಾಮಾನ್ಯವಾಗಿ ವಾಕ್ಯಗಳು ಚಿಕ್ಕವು. ಮೊದಲು ಕ್ರಿಯಾಪುಂಜ ಬಂದು ಅನಂತರ ಕರ್ತೃ ಬರುತ್ತದೆ. ಕರ್ತೃವಿಗೆ ಕಾರಕಗಳು ಸೇರಬಹುದು, ಸೇರದೇ ಇರಬಹುದು. ಪುಂಜಗಳು ಪೂರ್ಣಶಬ್ದದಿಂದ ಕೂಡಿದವಾಗಿದ್ದು ಅದಕ್ಕೆ ಅವು ಪೂರ್ವ ಅಥವಾ ಪರಪ್ರತ್ಯಯಗಳು ಸೇರಬಹುದು. ಭಾಷೆ ಇಟ್ಟಿಗೆಯ ಗೋಡೆಯಾದರೆ ಪೂರ್ಣಶಬ್ದಗಳು ಇಟ್ಟಿಗೆಗಳಿದ್ದ ಹಾಗೆ, ಪ್ರತ್ಯಯಗಳು ಗರ್ಚು ಇದ್ದಹಾಗೆ-ಎಂದು ಹೇಳಬಹುದು. ಇಲ್ಲಿಯ ಶಬ್ದಗಳನ್ನು ಮುಖ್ಯವಾಗಿ ಪೂರ್ಣಶಬ್ದಗಳು ಮತ್ತು ಅಪೂರ್ಣ ಶಬ್ದಗಳು ಎಂಬುದಾಗಿ ವಿಂಗಡಿಸಬಹುದು. ಅರ್ಥದ ದೃಷ್ಟಿಯಿಂದ ಪ್ರಾರಂಭದ ಕ್ರಿಯಾಪುಂಜ ಮುಖ್ಯ. ಉದಾಹರಣೆಗೆ ಕು ಆ ತುಪ್ಪ ತೆ ತರೊ ಅಂದರೆ ತಾರೊ ಬೆಳೆದನು ಎಂದರ್ಥ. ಅದನ್ನು ಕು ಅ ಒತಿ ತುಪು ಅಂದರೆ ಬೆಳವಣಿಗೆ ನಿಂತಿತು ಎಂದರ್ಥ.

ಪಾಲಿನೇಷಿಯನ್ ಭಾಷೆಯ ಪೂರ್ಣ ವಾಕ್ಯವನ್ನು ಕೆಳಗಿನಂತೆ ವಿಶ್ಲೇಷಿಸಬಹುದು. ಹವಾಯಿಯನ್ ಭಾಷೆ UಂUA ho' ohin' IA Kamoku I Luma oke alahu Kimoku ho' ಕ್ರಿಯಾಪುಂಜ ಕರ್ತೃ ಸಪ್ತಮಿಕಾರಕ ಪುಂಜ ಇದರ ಆರ್ಥ ಇಂಗ್ಲಿಷಿನಲ್ಲಿ ಹೀಗಿದೆ ; The ship was lifted on to the marine railway.

ಅರ್ಥಶಾಸ್ತ್ರ[ಬದಲಾಯಿಸಿ]

ಪಾಲಿನೇಷಿಯನ್ ಭಾಷೆ 2000 ವರ್ಷಗಳಿಂದ ನಡೆದು ಬಂದರೂ ಶಬ್ದ ಸಂಖ್ಯಾಶಾಸ್ತ್ರದ ದೃಷ್ಟಿಯಿಂದ ಹೆಚ್ಚಿನ ಪರಿವರ್ತನೆಯಾಗಿಲ್ಲವೆಂಬುದು ವಿದ್ವಾಂಸರ ಮತ. ಸುಮಾರು 90 ಮೂಲಶಬ್ದಗಳು ಪರಿವರ್ತನೆ ಇಲ್ಲದೆ ಉಳಿದಿವೆ. ಈ ಭಾಷೆಗೆ ತನ್ನದೇ ಆದ ಲಿಪಿ ಇಲ್ಲದೇ ಇದ್ದುದರಿಂದ ಮತ್ತು ರೋಮನ್ ಲಿಪಿ ಅಸಮಂಜಸವಾದ್ದರಿಂದ ಈ ಭಾಷೆಯಲ್ಲಿ ಸಾಕಷ್ಟು ಲಿಖಿತ ಸಾಹಿತ್ಯ ಸಿಗುವುದಿಲ್ಲ. ಮೌಖಿಕ ಸಾಹಿತ್ಯವಾದರೋ ಬಹಳ ಸಮೃದ್ಧಿಯಾಗಿದೆ. ಲೋಕ ಕಥೆಗಳು ಲೋಕಗೀತಗಳು ಸಾಕಷ್ಟು ಇವೆ.

ಪಾಲಿನೇಷಿಯಾದಲ್ಲಿ ಪ್ರಾರ್ಥನೆಗೋಸ್ಕರ ಉಪಯೋಗಿಸುವ ಭಾಷೆ ವಿಶೇಷ ಶಬ್ದಗಳಿಂದ ಕೂಡಿದ್ದು ಅದನ್ನು ಧಾರ್ಮಿಕ ಕಾರ್ಯಗಳಿಗಾಗಿ ಉಪಯೋಗಿಸುತ್ತಾರೆ. ಈ ಪರಿಷ್ಕøತ ಭಾಷೆ ಅಲ್ಲಿಯ ಪಾಲಿನೇಷಿಯನ್ ಗೊತ್ತಿರದವರಿಗೆ ಅರ್ಥವಾಗುವುದಿಲ್ಲ.

ಉಲ್ಲೇಖ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: