ವೈನ್ಯಗುಪ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈನ್ಯಗುಪ್ತ
? ಗುಪ್ತ ಸಾಮ್ರಾಜ್ಯ
ಆಳ್ವಿಕೆ c. ? – c. 507 CE
ಪೂರ್ವಾಧಿಕಾರಿ ?
ಉತ್ತರಾಧಿಕಾರಿ ?
ತಂದೆ ಪುರುಗುಪ್ತ

ವೈನ್ಯಗುಪ್ತ ಗುಪ್ತ ಸಾಮ್ರಾಜ್ಯದ ಕಡಿಮೆ ಪರಿಚಿತ ರಾಜರಲ್ಲಿ ಒಬ್ಬನು.

ಇವನು ನಾಲಂದಾದಲ್ಲಿ ಶೋಧಿಸಲಾದ ಛಿದ್ರವಾಗಿರುವ ಜೇಡಿಮಣ್ಣಿನ ಮುದ್ರೆ ಮತ್ತು ಗುಪ್ತರ ಕಾಲದ ೧೮೮ನೇ ವರ್ಷದ್ದೆಂದು (ಕ್ರಿ.ಶ. ೫೦೭) ನಿರ್ಧರಿಸಲಾದ ಗುನಾಯಿಘರ್ ತಾಮ್ರಫಲಕ ಶಾಸನದಿಂದ ತಿಳಿದುಬಂದಿದ್ದಾನೆ. ಇತಿಹಾಸಕಾರ ಮಜೂಮ್‍ದಾರ್ ಇವನನ್ನು ಪುರುಗುಪ್ತನ ಮಗನೆಂದು ಪರಿಗಣಿಸುತ್ತಾರೆ. ನಾಲಂದಾದ ಛಿದ್ರವಾಗಿರುವ ಜೇಡಿಮಣ್ಣಿನ ಮುದ್ರೆಯಲ್ಲಿ ಇವನನ್ನು ಮಹಾರಾಜಾಧಿರಾಜ ಮತ್ತು ಪರಮಭಾಗವತ (ವಿಷ್ಣುವಿನ ಶ್ರದ್ಧಾವಂತ ಆರಾಧಕ) ಎಂದು ಉಲ್ಲೇಖಿಸಲಾಗಿದೆ. ಗುನಾಯಿಘರ್ ತಾಮ್ರಫಲಕ ಶಾಸನದಲ್ಲಿ ಇವನನ್ನು ಮಹಾರಾಜ ಮತ್ತು ಭಗವಾನ್ ಮಹಾದೇವ ಪಾದಾನುಧ್ಯತೊ ಎಂದು ಉಲ್ಲೇಖಿಸಲಾಗಿದೆ.[೧]

ವೈನ್ಯಗುಪ್ತನ ನಾಲಂದಾದ ಜೇಡಿಮಣ್ಣಿನ ಮುದ್ರೆ.

ಉಲ್ಲೇಖಗಳು[ಬದಲಾಯಿಸಿ]

  1. Agarwal, Ashvini (1989), Rise and Fall of the Imperial Guptas, Delhi: Motilal Banarsidass, pp. 232–6, ISBN 81-208-0592-5