ನರಸಿಂಹಗುಪ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನರಸಿಂಹಗುಪ್ತ
ನರಸಿಂಹಗುಪ್ತನ ನಾಣ್ಯ, ಸುಮಾರು ಕ್ರಿ.ಶ. 414-455.[೧]
12ನೇ ಗುಪ್ತ ಸಾಮ್ರಾಟ
ಆಳ್ವಿಕೆ c. 495 – c. ? CE
ಪೂರ್ವಾಧಿಕಾರಿ ಬುಧಗುಪ್ತ
ಉತ್ತರಾಧಿಕಾರಿ ಮೂರನೇ ಕುಮಾರಗುಪ್ತ
ಗಂಡ/ಹೆಂಡತಿ ಶ್ರೀಮಿತ್ರಾದೇವಿ
ತಂದೆ ಪುರುಗುಪ್ತ
ಧರ್ಮ ಹಿಂದೂ ಧರ್ಮ, ಬೌದ್ಧ ಧರ್ಮ

ನರಸಿಂಹಗುಪ್ತ ಬಲಾದಿತ್ಯ ಉತ್ತರ ಭಾರತದ ಗುಪ್ತ ಸಾಮ್ರಾಜ್ಯದ ಸಾಮ್ರಾಟನಾಗಿದ್ದನು. ಇವನು ಪುರುಗುಪ್ತನ ಮಗ ಮತ್ತು ಬಹುಶಃ ಬುಧಗುಪ್ತನ ಉತ್ತರಾಧಿಕಾರಿ.

ಚೀನಾದ ಭಿಕ್ಷು ಕ್ಸುವಾನ್‍ಝಾಂಗ್ ಪ್ರಕಾರ, ಮಾಲ್ವಾದ ಯಶೋಧರ್ಮನ್ ಜೊತೆಗೆ ನರಸಿಂಹಗುಪ್ತನು ಮಿಹಿರಕುಲನ ನೇತೃತ್ವದಲ್ಲಿದ್ದ ಹುಣರನ್ನು ಉತ್ತರ ಭಾರತದ ಬಯಲು ಪ್ರದೇಶಗಳಿಂದ ಓಡಿಸಿದನು ಎಂದು ನಂಬಲಾಗಿದೆ.[೨] ಮಾಲ್ವಾದಲ್ಲಿನ ನರಸಿಂಹಗುಪ್ತನ ಪ್ರಾಂತಾಧಿಪತಿ ಭಾನುಗುಪ್ತನೂ ಈ ಸಂಘರ್ಷದಲ್ಲಿ ಸೇರಿಕೊಂಡಿರಬಹುದು.

ಗುಪ್ತರು ಸಾಂಪ್ರದಾಯಿಕವಾಗಿ ಬ್ರಾಹ್ಮಣ ರಾಜವಂಶವಾಗಿದ್ದರು. ಆದರೆ, ಸಮಕಾಲೀನ ಬರಹಗಾರ ಪರಮಾರ್ಥನ ಪ್ರಕಾರ, ನರಸಿಂಹಗುಪ್ತ ಬಲಾದಿತ್ಯನನ್ನು ಮಹಾಯಾನ ತತ್ವಶಾಸ್ತ್ರಜ್ಞ ವಸುಬಂಧುವಿನ ಪ್ರಭಾವದಲ್ಲಿ ಬೆಳೆಸಲಾಗಿತ್ತು. ಇವನು ನಾಲಂದಾದಲ್ಲಿ ಒಂದು ಸಂಘಾರಾಮವನ್ನು ಮತ್ತು ಬುದ್ಧನ ವಿಗ್ರಹವಿರುವ ೩೦೦ ಅಡಿ ಎತ್ತರದ ವಿಹಾರವನ್ನೂ ಕಟ್ಟಿದನು. ಮಂಜುಶ್ರೀಮೂಲಕಲ್ಪದ ಪ್ರಕಾರ (ಸು. ಕ್ರಿ.ಶ. ೮೦೦), ನರಸಿಂಹಗುಪ್ತನು ಬೌದ್ಧ ಭಿಕ್ಷುವಾದನು, ಮತ್ತು ಧ್ಯಾನದ ಮೂಲಕ ಲೋಕವನ್ನು ತ್ಯಜಿಸಿದನು. ಇವನ ಜೇಡಿಮಣ್ಣಿನ ಮುದ್ರೆ ನಾಲಂದಾದಲ್ಲಿ ಸಿಕ್ಕಿದೆ. ನಾಲಂದಾದ ಮುದ್ರೆಯಲ್ಲಿ ಉಲ್ಲೇಖಿಸಲಾದ ಇವನ ರಾಣಿಯ ಹೆಸರು ಶ್ರೀಮಿತ್ರಾದೇವಿ. ಇವನ ಮಗ ಮೂರನೇ ಕುಮಾರಗುಪ್ತನು ಇವನ ಉತ್ತರಾಧಿಕಾರಿಯಾದನು.

ಉಲ್ಲೇಖಗಳು[ಬದಲಾಯಿಸಿ]

  1. CNG Coins [೧]
  2. Malwa Through the Ages, from the Earliest Times to 1305 A.D, Kailash Chand Jain p.249