ಸದಸ್ಯ:Gopala Krishna A/ಸೌಭಾಗ್ಯವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಡಾ.ಕೆ.ಸೌಭಾಗ್ಯವತಿ.

ಸೌಭಾಗ್ಯವತಿ ಅವರು ಕನ್ನಡ ವಿಕಿಪೀಡಿಯದ ೧೩ನೇ ವಾರ್ಷಿಕೋತ್ಸವದಲ್ಲಿ
ಸೌಭಾಗ್ಯವತಿ ಅವರು ಕನ್ನಡ ವಿಕಿಪೀಡಿಯದ ಬಗ್ಗೆ ಮಾತಾಡಿರುವುದು

ಡಾ.ಕೆ.ಸೌಭಾಗ್ಯವತಿ[ಬದಲಾಯಿಸಿ]

ಇವರು ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್‌ಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಇವರು ಈ ವರೆಗೆ ವಿಕಿಸೋರ್ಸ್ ಮತ್ತು ವಿಕಿಪೀಡಿಯಗಳಲ್ಲಿ ನೂರಕ್ಕಿಂತಲೂ ಹೆಚ್ಚು ಲೇಖನಗಳ ಕೊಡುಗೆ ನೀಡಿದ್ದಾರೆ. ಕನ್ನಡ ವಿಕಿಪೀಡಿಯದಲ್ಲಿ ಸುಮಾರು ೫೦೦೦ಕ್ಕಿಂತಲೂ ಅಧಿಕ ಬಾರಿ ಸಂಪಾದಿಸಿರುತ್ತಾರೆ. ಇವರು ರಚಿಸಿದ ಪ್ರಮುಖ ಲೇಖನಗಳು ಮಂಗಳಮುಖಿ, ಐರಾವತ, ಚಾಮುಂಡೇಶ್ವರಿ ಮುಂತಾದವುಗಳು.

ವೈಯಕ್ತಿಕ[ಬದಲಾಯಿಸಿ]

ಡಾ.ಕೆ.ಸೌಭಾಗ್ಯವತಿ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಚಕ್ಕೂರು ಗ್ರಾಮದವರು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾನಪದ ಎಂ.ಎ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ನಂತರ ನಾಲ್ಕು ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನ ವಿದ್ಯಾರ್ಥಿನಿಯಾಗಿ "ಮೈಸೂರು ನಗರದ ಜಾನಪದ ಆಭರಣಗಳ ಅಧ್ಯಯನ" ಎಂಬ ವಿಷಯ ಕುರಿತು ಮಹಾ ಪ್ರಬಂಧವನ್ನೂ ಬರೆದು, ಪಿ.ಎಚ್ ಡಿ ಪದವಿ ಪಡೆದಿರುತ್ತಾರೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.