ಸದಸ್ಯ:Rakshith Gowda 7/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]ಉಲ್ಲೇಖ ದೋಷ: Closing </ref> missing for <ref> tag</ref>[೨]

ಚಿತ್ರ:ಹೆಲೆನ್ ಫರೀಶ್
Halen Farish

ಹೆಲೆನ್ ಫರೀಶ್[ಬದಲಾಯಿಸಿ]

ಹೆಲೆನ್ ಫರೀಶ್ ಬ್ರಿಟೀಷ್ ಕವಿಯತ್ರಿ ಬರಹಗಾರ್ತಿ. ಅವರು 1962 ರಲ್ಲಿ ಕುಂಬ್ರಿಯಾದಲ್ಲಿ ಜನಿಸಿದರು.

ಬದುಕು ಮತ್ತು ವೃತ್ತಿ ಜೀವನ[ಬದಲಾಯಿಸಿ]

ಆರಂಭಿಕ ಜೀವನ[ಬದಲಾಯಿಸಿ]

ಹೆಲೆನ್ ಫರೀಶ್ ಯುನಿವರ್ಸಿಟಿ ಆಫ್ ಡರ್ಹಾಮ್ ನಿಂದ ಬಿ.ಎ ನಂತರ ಎಮ್.ಎ. ಮತ್ತು ಪಿ.ಹೆಚ್ಡಿ.ಯನ್ನು ಆಕ್ಸ್ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಅವರು ಶೆಫೀಲ್ಡ್ ಹಲಾಮ್ ವಿಶ್ವವಿದ್ಯಾಲಯದಲ್ಲಿ ಸೃಜನಾತ್ಮಕ ಬರವಣಿಗೆಯಲ್ಲಿ ಉಪನ್ಯಾಸ ನೀಡಿದ್ದಾರೆ.ಅವರು ಹಾಥೋರ್ನ್ಡೆನ್ ಬರಹಗಾರರ ಅಂತರರಾಷ್ಟ್ರೀಯ ಕೇಂದ್ರದ ಸಹಭಾಗಿಯಾಗಿದ್ದಾರೆ.ಅವರು ವರ್ಡ್ಸ್ವರ್ತ್ ಟ್ರಸ್ಟ್ನಲ್ಲಿ ವಾಸಿಸುವ ಮೊದಲ ಮಹಿಳಾ ಕವಿಯಾಗಿದ್ದಾರೆ(2004-5).ಅವರು ಸೆವಾನಿ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಉಪನ್ಯಾಸಕರಾಗಿದ್ದಾರೆ ಹಾಗು ನ್ಯೂ ಹ್ಯಾಂಪ್ಶೈರ್ ವಿಶ್ವವಿದ್ಯಾಲಯಕ್ಕೆ ಸಂದರ್ಶಕ ವಿದ್ವಾಂಸಕರಾಗಿದ್ದಾರೆ. ಅವರು ೨೦೦೭ರಿಂದ ಲ್ಯಾಂಕಶ್ಟರ್ ವಿಶ್ವವಿದ್ಯಾಲಯದ ಇಂಗ್ಲೀಷ್ ಮತ್ತು ಸೃಜನಶೀಲ ಬರವಣಿಗೆ ವಿಭಾಗದಲ್ಲಿ ಉಪನ್ಯಾಸಕರಾಗಿದ್ದಾರೆ. ಈಗ ಫರೀಶ್ ಕುಂಬ್ರಿಯಾದಲ್ಲಿ ನೆಲೆಸಿದ್ದಾರೆ.

ಕೃತಿಗಳು[ಬದಲಾಯಿಸಿ]

೨೦೦೫: ಇಂಟಿಮೇಟ್ಸ್.

೨೦೦೯: ನಾಕ್ಟರ್ನೆಸ್ ಅಟ್ ನೊಹಾಂತ್: ಎ ಡಿಕೇಡ್ ಆಫ್ ಚೋಪಿಂಗ್ ಅಂಡ್ ಸ್ಯಾಂಡ್.

೨೦೧೬: ದ ಡಾಗ್ ಆಫ್ ಮೆಮೊರಿ.

ಫರೀಶ್ ಅವರ ಮೊದಲ ಕವಿತ ಸಂಗ್ರಹ ಇಂಟಿಮೇಟ್ಸ್ (೨೦೦೫).ಇಂಟಿಮೇಟ್ಸ್ ಟಿ.ಎಸ್.ಎಲ್ಲಿಯಟ್ ಪ್ರಶಸ್ತಿಯ ಅಂತಿಮ ಅಂತಕ್ಕೆ ಅಯ್ಕೆಯಾಗಿತ್ತು ಮತ್ತು (ಫಾರ್ವರ್ಡ್ ಬೆಸ್ಟ್ ಫರ್ಸ್ಟ್ ಕಲೆಕ್ಷನ್ ಪ್ರೈಸ್) ಮೊದಲ ಅತ್ಯುತ್ತಮ ಕವಿತಾ ಸಂಗ್ರಹ ಪ್ರಶಸ್ತಿಯನ್ನು ಪಡೆಯಿತು.ಅವರು ೨೦೦೯ರಲ್ಲಿ ಫರೀಶ್ ರೀಡಿಂಗ್ ಫ್ರಮ್ ಹೆರ್ ಪೋಯೆಮ್ಸ್ ಎಂಬ ಆಡಿಯೊ ಸಿ.ಡಿಯೊಂದನ್ನು ಬಿಡುಗಡೆ ಮಾಡಿದರು.ಅದರಲ್ಲಿ ಫರೀಶ್ ತಮ್ಮ ಕವಿತೆಗಳನ್ನು ತಾವೆ ಹಾಡಿದ್ದಾರೆ.೨೦೧೨ರಲ್ಲಿ ಬ್ಲಡ್ಯಾಕ್ಸ್ ಬುಕ್ಸ್ ಅವರ ಎರಡನೆ ಕವಿತಾ ಸಂಗ್ರಹ ನಾಕ್ಟರ್ನೆಸ್ ಅಟ್ ನೊಹಾಂತ್: ಎ ಡಿಕೇಡ್ ಆಫ್ ಚೋಪಿಂಗ್ ಅಂಡ್ ಸ್ಯಾಂಡ್ ಅನ್ನು ಪ್ರಕಟಿಸಿತು. ಫರೀಶ್ ಅವರ ಮೂರನೆ ಕವಿತಾ ಸಂಗ್ರಹ ದ ಡಾಗ್ ಆಫ್ ಮೆಮೊರಿ ಸೆಪ್ಟೆಂಬರ್ ೨೦೧೬ರಲ್ಲಿ ಪ್ರಕಟಿಸಲಾಯಿತು.

ಇಂಟಿಮೇಟ್ಸ್[ಬದಲಾಯಿಸಿ]

ಇಂಟಿಮೇಟ್ಸ್ ಅಂದರೆ ಒಳನೋಟಗಳು. ಅವರ ಈ ೨೦೦೫ರ ಕವಿತಾ ಸಂಗ್ರಹದಲ್ಲಿ ಸಂಬಂಧಗಳ ಬಗ್ಗೆ ಬರೆದಿದ್ದಾರೆ. ಪ್ರಚೋದಿತ,ನವಿರಾದ ಮತ್ತು ಭಾವೋದ್ರಿಕ್ತ ಭಾವನೆಗಳನ್ನೊಳಗೊಂಡಿದೆ.ಪ್ರೇಮಿಗಳ ಮಧ್ಯೆ ಹಾಗು ಕುಟುಂಭದೊಂದಿಗೆ ಮತ್ತು ತನ್ನೊಂದಿಗೆಯೆ ಬದಲಾಗುವ ಸಂಬಂಧಗಳ ಸಂಕೀರ್ಣತೆಯನ್ನು ಭಾವನಾತ್ಮಕವಾಗಿ ವಿವರಿಸಿದ್ದಾರೆ.ಪ್ರೇಮ ಕವನಗಳು ಹೆಣ್ಣಿನ ಲೈಂಗಿಕತೆ ಮತ್ತು ಬಯಕೆಗಳಿಗೆ ಸಾಕಷ್ಟು ಮಾನ್ಯತೆ ನೀಡಿರುವುದು ಕಂಡುಬರುತ್ತದೆ.ತಮ್ಮ ಕವನಗಳಲ್ಲೆ ದೇಹದ ಬಗ್ಗೆ ಅದಕ್ಕೆ ನೀಡಿರುವ ಮಾನ್ಯತೆ ಬಗ್ಗೆ ಪ್ರಶ್ನಿಸುತ್ತಾರೆ. ಸಮಾಜದಲ್ಲಿರುವ ಹೆಣ್ಣು ಹಾಗು ಗಂಡಿನ ಮಧ್ಯದ ಭೇದದ ಬಗ್ಗೆ ಚರ್ಚಿಸಿದ್ದಾರೆ.ತಮ್ಮ ತಂದೆಯ ಸಾವಿನ ನೆನಪು ಅವರನ್ನು ತಮ್ಮ ಮನೆಯ ನೆನಪು ಮಾಡಿಕೊಡುತ್ತದೆ.ತಮ್ಮದೇ ನೆನಪುಗಳ ನೋವಿಗೆ ಸಿಲುಕುತ್ತರೆ. ಬಾಲ್ಯದ ನೆನೆಪುಗಳು ಅವರನ್ನು ಕಾಡುತ್ತವೆ.ತಮ್ಮ ಕವನಗಳನ್ನು ಬಹಳ ಸೂಷ್ಮದಿಂದ ಬರೆದಿರುವ ಫರೀಶ್ ಅವರು ಪ್ರೀತಿ ಪ್ರೇಮ ಲೈಂಗಿಕತೆ ಹಾಗು ಬಾಲ್ಯದ ಇತಿಹಾಸ ಮತ್ತು ಅಲ್ಲಿ ಅನುಭವಿಸಿದ ನೋವು ಇನ್ನಿತರ ಭಾವನೆಗಳನ್ನು ಪ್ರಾಮಾಣಿಕವಾಗಿ ಹಾಗು ಸ್ವಂತಿಕೆಯಿಂದ ಚಿತ್ರಿಸಿದ್ದಾರೆ.ಫರೀಶ್ ಅವರ ಇಂಟಿಮೇಟ್ಸ್ ಅವರ ಜೀವನದ ಒಳನೋಟವನ್ನು ಓದುಗರಿಗೆ ಬಿಚ್ಚಿಡುತ್ತದೆ.

ದ ಡಾಗ್ ಆಫ್ ಮೆಮೊರಿ[ಬದಲಾಯಿಸಿ]

ದ ಡಾಗ್ ಆಫ್ ಮೆಮೊರಿ, ಮುದ್ದಾಗಿರುವುದಕ್ಕಿಂತ್ತಾ ಅಸಡ್ಡೆ ಮತ್ತು ವಿಚಿತ್ರವಾದ ಪ್ರಾಣಿ ಎಂದೇ ಗುರಿತಿಸಲ್ಪಡುವ ನಾಯಿಯು ಫರೀಶ್ ಅವರ ನೆನಪಿನ ಹಾದಿಯಲ್ಲಿ ಅಲೆಯುತ್ತಾ,ತಮ್ಮ ಕವಿತಾ ಲೋಕದ ಪರಿಚಯ ಮಾಡಿಕೊಡುತ್ತದೆ.ಫರೀಶ್ ಅವರ ಸ್ವಂತ ಸ್ತಳ ಕುಂಬ್ರಿಯಾದಿಂದ ಹಿಡಿದು ಗ್ರೀಕಿನ ಅತೆನ್ಸ್ ,ಅಲ್ಲಿನ ರಾತ್ರಿ ಆಕಶ, ಇಟಲಿಯ ಸಿಸಿಲಿಯ ಮುಂಜಾನೆ,ಜನಗಳು ಹಾಗು ಸಾಹಿತ್ಯದ ಪರಿಸರವನ್ನೇ ಪರಿಚಯಿಸುತ್ತದೆ.ಫರೀಶ್ ಅವರು ತಮ್ಮ ಶಾಲಾ ದಿನಗಳಲ್ಲಿ ಓದುತ್ತಿದ್ದ ಹತ್ತು ಕವಿಗಳ ಪದ್ಯಗಳನ್ನು ಮತ್ತೆ ಬೀರೆಯ ಅರ್ಥದಲ್ಲಿ ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದಾರೆ. ಫರೀಶ್ ಅವರು ತಮ್ಮ ಈ ಕವನಗಳಲ್ಲಿ ತಮ್ಮ ನೆನೆಪಿನ ಬುತ್ತಿಯನ್ನು ಬಹಳ ನವಿರಾಗಿ ಬಿಚ್ಚಿಟ್ಟಿದ್ದಾರೆ.ಮತ್ತೆ ಮತ್ತೆ ತಮ್ಮ ಮನೆಯ ಸುತ್ತಲಿನ ಪರಿಸರದ ಪರಿಚಯ ಮತ್ತು ನೆನಪು ಮಾಡಿಕೊಡುತ್ತಾರೆ.ಅಲ್ಲಿನ ವಾತಾವರಣ, ಹಿಮಾವೃತ ದಿನಗಳು,ತಮ್ಮ ಚಿಕ್ಕಮ್ಮನ ಮನೆ ಹೀಗೆ ನೆನೆಪಿನ ಮಾಲೆಯನ್ನು ಕೌಶಲ್ಯ ಮತ್ತು ಸಮತೋಲನವಾಗಿ ಬಿಚ್ಚಿಡುತ್ತಾ ಹೋಗುತ್ತಾರೆ. ಅವರ ಈ ಶೈಲಿ ಓದುಗರಲ್ಲಿ ಭಾವನೆಗಳನ್ನು ಉಕ್ಕಿಸುತ್ತವೆ. ತಮ್ಮದೇ ಜೀವನದ ಒಳನೋಟಗಳನ್ನು ಒರಹೊಮ್ಮಿಸುತ್ತದೆ.

ನಾಕ್ಟರ್ನೆಸ್ ಅಟ್ ನೊಹಾಂತ್: ಎ ಡಿಕೇಡ್ ಆಫ್ ಚೋಪಿಂಗ್ ಅಂಡ್ ಸ್ಯಾಂಡ್[ಬದಲಾಯಿಸಿ]

ಫರೀಶ್ ಅವರ ಈ ಕವಿತಾ ಸಂಗ್ರಹ ಅವರ ಕವಿತಾ ನೈಪುಣ್ಯತೆ ಮತ್ತು ಕೌಶಲ್ಯತೆಯನ್ನು ತೋರುತ್ತದೆ. ಕವಿತೆಗಳನ್ನು ಕ್ರಮಾನುಗತಿಯಲ್ಲಿ ಬರೆದಿದ್ದಾರೆ.ಇದರಲ್ಲಿ ಇಬ್ಬರು ಕಲಾವಿದರ ಮಧ್ಯದ ಸಂಕೀರ್ಣ ಸಂಭಂಧದ ಬಗ್ಗೆ ವಿವರಿಸುವ ಪ್ರಯತ್ನಿಸಿದ್ದಾರೆ.ಹೊಸತನವನ್ನು ಒಳಗೊಂಡಿರುವ ಈ ಕವನಗಳು ವಿಮಾರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ.

ಪ್ರಬಂಧ[ಬದಲಾಯಿಸಿ]

ಸೆ‍ಕ್ಸ್, ಗಾಡ್ ಅಂಡ್ ಗ್ರೀಫ್ ಇನ್ ದ ಪೊಯೆಟ್ರಿ ಆಫ್ ಶಾರನ್ ಓಲ್ಡ್ಸ್ ಆಂಡ್ ಲೂಹಿಸ್ ಗ್ಲಕ್ ಎಂಬ ಪ್ರಬಂಧವನ್ನು ಪ್ರಕಟಿಸಿದ್ದಾರೆ.

ವಿಮರ್ಶೆಗಳು[ಬದಲಾಯಿಸಿ]

ಫರೀಶ್ ತಮ್ಮ ಕವಿತೆಗಳಲ್ಲಿ ಸ್ತ್ರೀವಾದವನ್ನು ಬಿಗಿದಪ್ಪಿದ್ದಾರೆ. ಹೆಣ್ಣಿನ ಸಮಾನತೆಗಾಗಿ ವಾದಿಸುತ್ತಾರೆ.ತಾವು ಹೇಗೆ ಇದ್ದರು ತಮ್ಮ ದೇಹವನ್ನು ಪ್ರೀತಿಸುವಂತೆ ಹೆಣ್ಣುಮಕ್ಕಳಿಗೆ ಕರೆನೀಡಿದ್ದಾರೆ.ಪ್ರೀತಿ ಪ್ರೇಮ ಮತ್ತು ಲೈಂಗಿಕತೆ ಅವರ ಕವನಗಳ ಮೂಲವನ್ನು ಆವರಿಸುತ್ತವೆ. ತಮ್ಮ ಬಾಲ್ಯದ ನೆನಪುಗಳು ಹಾಗು ತಮ್ಮ ಜನ್ಮ ಸ್ಥಳದ ಸುತ್ತಲಿನ ಸುಂದರ ಪರಿಸರವು ಅವರ ಕವನಗಳ ಮೂಲ ವಿಷಯವಾಗಿವೆ.ತಮ್ಮ ಸ್ವಂತ ಜೀವನ ಅವರ ಕವನಗಳಲ್ಲಿನ ಮಧ್ಯ ಸ್ತಳ ಪಡೆದಿವೆ.ತಮ್ಮ ಕವನಗಳಲ್ಲಿ ತಮ್ಮ ನೆನಪಿನ ಮಾಲೆಯನ್ನು ಎಳೆ ಎಳೆಯಾಗಿ ಬೆಚ್ಚಿಡುತ್ತಾ ಹೋಗುತ್ತಾರೆ(ಅಪ್ಪ ಕೊಡಿಸಿದ ಬಟ್ಟೆ, ಜೋನ್ ತನಗಾಗಿ ಮಾಡಿದ್ದು, ಹೀಗೆ ಅನೇಕ) ಹಾಗು ದೇಹ ಮತ್ತು ಲೈಂಗಿಕತೆಯನ್ನು ದಿಟ್ಟವಾಗಿ ಚರ್ಚಿಸುತ್ತಾರೆ. ಫರೀಶ್ ಅವರ ಕವನಗಳ ಶೀರ್ಷಿಕೆಗಳು ಗೌಪ್ಯತೆ ಮತ್ತು ಕವನದಲ್ಲಿನ ನಿಜಾಂಶವನ್ನು ಎತ್ತಿ ತೋರುತ್ತವೆ.

ಪ್ರಶಸ್ತಿಗಳು[ಬದಲಾಯಿಸಿ]

ಫರೀಶ್ ಅವರ ಇಂಟಿಮೇಟ್ಸ್ ಟಿ.ಎಸ್.ಎಲ್ಲಿಯಟ್ ಪ್ರಶಸ್ತಿಯ ಅಂತಿಮ ಅಂತಕ್ಕೆ ಅಯ್ಕೆಯಾಗಿತ್ತು ಮತ್ತು (ಫಾರ್ವರ್ಡ್ ಬೆಸ್ಟ್ ಫರ್ಸ್ಟ್ ಕಲೆಕ್ಷನ್ ಪ್ರೈಸ್) ಮೊದಲ ಅತ್ಯುತ್ತಮ ಕವಿತಾ ಸಂಗ್ರಹ ಪ್ರಶಸ್ತಿಯನ್ನು ಪಡೆಯಿತು. ೨೦೧೭ರ ಅತ್ಯುತ್ತಮ ಬರಹಗಾರ ಸ್ಪರ್ಧೆಯ ಕೊನೆಯ ಅಂತ ತಲುಪಿದ್ದಾರೆ.ಕುಂಬ್ರಿಯ ಲೈಫ್ ಕಲ್ಚರ್ ಅವರ್ಡ್ ೨೦೧೭ರ ವಿಜೇತರಾಗಿದ್ದಾರೆ.

  1. https://www.poetryarchive.org/poet/helen-farish
  2. https://www.theguardian.com/books/2005/oct/15/featuresreviews.guardianreview24