ಅನುಕೂಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಮಾರ್ಮಲೇಡ್ ಕಟರ್‍ನಂತಹ ಗೃಹೋಪಯೋಗಿ ವಸ್ತುಗಳು ಗೃಹ ಆಹಾರ ತಯಾರಿಕೆಯ ಅನುಕೂಲವನ್ನು ಹೆಚ್ಚಿಸುತ್ತವೆ

ಅನೂಕೂಲಕರ ಕಾರ್ಯವಿಧಾನಗಳು, ಉತ್ಪನ್ನಗಳು ಮತ್ತು ಸೇವೆಗಳು ಪ್ರವೇಶಿಸುವಿಕೆಯ ಸರಾಗತೆಯನ್ನು ಹೆಚ್ಚಿಸಲು, ಸಂಪನ್ಮೂಲಗಳನ್ನು ಉಳಿಸಲು (ಉದಾ. ಸಮಯ, ಶ್ರಮ ಮತ್ತು ಅಳವು) ಮತ್ತು ಹತಾಶೆಯನ್ನು ಕಡಿಮೆಮಾಡಲು ಉದ್ದೇಶಿತವಾಗಿರುತ್ತವೆ.[೧]. ಅನುಕೂಲ ಒಂದು ತುಲನಾತ್ಮಕ ಪರಿಕಲ್ಪನೆಯಾಗಿದೆ, ಮತ್ತು ಸಂದರ್ಭವನ್ನು ಆಧರಿಸಿರುತ್ತದೆ. ಉದಾಹರಣೆಗೆ, ಮೋಟಾರು ವಾಹನಗಳನ್ನು ಒಂದು ಕಾಲದಲ್ಲಿ ಅನುಕೂಲವೆಂದು ಪರಿಗಣಿಸಲಾಗಿತ್ತು, ಆದರೆ ಇಂದು ಜೀವನದ ಸಾಮಾನ್ಯ ಭಾಗವೆಂದು ಪರಿಗಣಿಸಲ್ಪಡುತ್ತವೆ.

ಉದಾಹರಣೆಗಳು[ಬದಲಾಯಿಸಿ]

ಸೇವಾ ಅನುಕೂಲಗಳು ಗಿರಾಕಿಗಳ ಸಮಯ ಮತ್ತು ಶ್ರಮವನ್ನು ಉಳಿಸುವಂತಹವು, ಮತ್ತು ಕ್ರೆಡಿಟ್ ಲಭ್ಯತೆ ಮತ್ತು ವಿಸ್ತೃತ ಅಂಗಡಿ ಸಮಯದಂತಹ ಬದಲಾಗುವ ಅಂಶಗಳನ್ನು ಒಳಗೊಂಡಿರುತ್ತವೆ. ಸೇವಾ ಅನುಕೂಲವು ಸರಕುಗಳು ಮತ್ತು ಸೇವೆಗಳು, ಮತ್ತು ಇವೆರಡರ ಸಂಯೋಜನೆಗಳ ಮಾರಾಟದ ಸುಗಮವಾಗಿಸುವಿಕೆಗೆ ಸಂಬಂಧಿಸಿದೆ.

ಅನುಕೂಲ ಸರಕುಗಳು ವ್ಯಾಪಕವಾಗಿ ವಿತರಿಸಲಾದ ಉತ್ಪನ್ನಗಳು ಮತ್ತು ಇವನ್ನು ಖರೀದಿಸಲು ಕನಿಷ್ಠ ಸಮಯ ಮತ್ತು ಶಾರೀರಿಕ ಹಾಗೂ ಮಾನಸಿಕ ಶ್ರಮದ ಅಗತ್ಯವಿರುತ್ತದೆ.

ಅನುಕೂಲ ಆಹಾರ ಮತ್ತು ಅನುಕೂಲ ಅಡುಗೆ ಊಟದ ತಯಾರಿಕೆಯಲ್ಲಿ ಗ್ರಾಹಕನ ಶ್ರಮವನ್ನು ಉಳಿಸಿ, ಜೊತೆಗೆ ಹೆಚ್ಚಿನ ಮಟ್ಟದ ಶಕ್ತಿ ಮತ್ತು ಗಮನಾರ್ಹ (ಬಹುತೇಕ ಕೃತಕ) ಪರಿಮಳವನ್ನು ಒದಗಿಸುತ್ತವೆ.

ತುಂಬು ಕೇಂದ್ರಗಳಲ್ಲಿನ ಅನುಕೂಲ ಉದ್ದೇಶಿತ ಅಂಗಡಿಗಳು ಪೆಟ್ರೋಲ್‍ಗೆ ಸಂಬಂಧಿಸಿರದ ವಸ್ತುಗಳನ್ನು ಮಾರಾಟ ಮಾಡುತ್ತವೆ, ಮತ್ತು ಆ ಸ್ಥಳದಲ್ಲಿ ಖರೀದಿಸುವುದು ಕಿರಾಣಿ ಅಂಗಡಿಗೆ ಮತ್ತೊಂದು ಪ್ರಯಾಣ ಮಾಡುವುದನ್ನು ಹೋಲಿಸಿದರೆ ಗ್ರಾಹಕನ ಸಮಯವನ್ನು ಉಳಿಸುತ್ತದೆ. ನೇರ ಠೇವಣಿಯಂತಹ ಅನುಕೂಲಗಳು ಕಂಪನಿಗಳ ಮತ್ತು ಗ್ರಾಹಕರ ಹಣವನ್ನು ಉಳಿಸಬಲ್ಲವು, ಆದರೆ ಇವನ್ನು ಗ್ರಾಹಕನಿಗೆ ವರ್ಗಾಯಿಸಬಹುದು ಅಥವಾ ವರ್ಗಾಯಿಸಿದಿರಬಹುದು.

ಕೆಲವು ಅನುಕೂಲಗಳು/ಸೌಕರ್ಯಗಳು ಕುಸಿದು ಬಿದ್ದಾಗ ಅಥವಾ ಸರಿಯಾಗಿ ಕಾರ್ಯ ಮಾಡದಿದ್ದಾಗ ಕಿರುಕುಳಗಳಾಗಬಲ್ಲವು. ಕುಸಿದು ಬಿದ್ದಾಗ ಅನುಕೂಲದ ವಸ್ತುಗಳನ್ನು ದುರಸ್ತಿ ಮಾಡುವುದು ಸಮಯ ಮತ್ತು ಹಣ ಎರಡನ್ನೂ ತೆಗೆದುಕೊಳ್ಳುತ್ತದೆ, ಮತ್ತು ಅವುಗಳನ್ನು ಅವಲಂಬಿಸಿರುವ ಬೇರೆ ಏನಾದರೂ ಆಗದಿದ್ದಾಗ ಬಹಳ ಹೆಚ್ಚು ವೆಚ್ಚಗಳನ್ನು ಉಂಟುಮಾಡಬಹುದು.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಅನುಕೂಲ&oldid=757869" ಇಂದ ಪಡೆಯಲ್ಪಟ್ಟಿದೆ