ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು[ಬದಲಾಯಿಸಿ]

ಕನ್ನಡ ಬಂಟರ ಬಂಟಂ ಕನ್ನಡ ಕೊಂಕರರ ಕಿಂಕರರ ಕಿಂಕರ ನಾಂ ಕನ್ನಡ ಲೆಂಕರ ಲಂಕಂ ಕನ್ನಡ ತೊತ್ತೆನಗೆ ಬೇರೆ ಗತಿಮತಿಯುಂಟೇ 1940 ಧಾರವಾಡದಲ್ಲಿ ನಡೆದ ಅಖಿಲಭಾರತ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಮೇಲಿನಂತೆ ಪರಿಚಯಿಸಿಕೊಂಡವರು ವ್ಯಾಕರಣ ತೀರ್ಥ ಚಂದ್ರಶೇಕರ ಶಾಸ್ತ್ರಿಗಳು. ಸ್ವತಃ ಕನ್ನಡ ಮಾತ್ರ ಭಾಷೆಯವರಾಗಿ ಸಂಸ್ಕ್ರತ ಪಾಂಡಿತ್ಯ ಗಳಿಸಿ ತೆಲುಗು ಉರ್ದು ಇಂಗ್ಲೀಷ್ ಹಿಂದಿ ಮರಾಠಿ ಮುಂತಾದ ಹಲವು ಬಾಷಾ ಪರಿಣತಿಯನ್ನು ಪಡೆದುಕೊಂಡವರು. ಇಷ್ಟಾದರೂ ಅವರು ಕನ್ನಡ ನಾಡುನುಡಿ ಸಾಹಿತ್ಯಕ್ಕಾಗಿಯೇ ತಮ್ಮ ಸಮಸ್ತ ಧೀಶಕ್ತಿಯನ್ನು ಮೀಸಲಾಗಿಟ್ಟರು. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲ್ಲಿ ತಾಲೂಕಿನ ಹೊಳಲು ಗ್ರಾಮದ ಹಿರೇಮಠದ ಪಟ್ಟದಯ್ಯನವರು ಮತ್ತು ಅವರ ಧರ್ಮಪತ್ನಿ ಬಸಮ್ಮನವರಿಗೆ ಏಕೈಕಪುತ್ರನಾಗಿ 1892ರ ಜನವರಿ ಮೂರರಂದು ಚಂದ್ರಶೇಖರ ಜನಿಸಿದರು. ಚಿಕ್ಕವಯಸ್ಸಿನಲ್ಲಿಯೇ ತಂದೆ ಪಟ್ಟದಯ್ಯನವರನ್ನು ಕಳೆದುಕೊಂಡರು. ಚಂದ್ರಶೇಖರ ತಾಯಿಯಯ ಊರಾದ ಮಾಗಳ ಗ್ರಾಮದ ಹಾಲವಡ್ಡಿ ಮಠದಲ್ಲಿಯೇ ಬಾಲ್ಯ ಕಳೆಯಬೇಕಾಗಿತ್ತು. ಬಡ ಜಂಗಮರ ಮನೆತನ ಕಿತ್ತು ತಿನ್ನುವ ಬಡತನ ಕಂತೆಡಬಿಕ್ಷೆ ಇಲ್ಲದೆ ಹೊಟ್ಟೆಗೆ ಹಿಟ್ಟಿಲ್ಲ ಉಳಿದ ದಿನಗಳಲ್ಲಿ ಹೊಲದಲ್ಲಿ ಕೂಲಿನಾಲಿ ಮಾಡಿ ದುಡಿಯಬೇಕು. ಇಂಥ ಪರಿಸ್ಥತಿಯಲ್ಲಿ ಚಂದ್ರಶೇಕರ ಮಾಗಳದಲ್ಲಿ ಮೂರನೆಯ ತರಗತಿಯ ವರೆಗೆ ಪಾಥಮಿಕ ಶಾಲೆಯಲ್ಲಿ ಕಲಿತದ್ದಾಯಿತು. ಮುಂದಿನ ಓದಿಗೆ ಆ ಶಾಲೆಯಲ್ಲಿ ಅವಕಾಶ ಸಿಗಲಿಲ್ಲ. ಮನೆಯಲ್ಲಿ ಅಜ್ಜ ಸಂಗ್ರಹಿಸಿದ್ದ ಅಮರ ಕೋಶ ಮಹಿಮ್ನಸ್ತೋತ್ರ ನಿಜಲಿಂಗ ಶತಕ ಸೋಮೇಶ್ವರ ಶತಕ ಇವೇ ಮುಂತಾದ ಗ್ರಂಥಗಳನ್ನು ತನ್ನಷ್ಟಕ್ಕೆ ತಾನೆ ಪಠಣಮಾಡತೊಡಗಿದ. ನಾಲ್ಕು ಮತ್ತು ಐದನೆ ತರಗತಿಗಳ ಶಿಕ್ಷಣಕ್ಕಾಗಿ ಮತ್ತೆ ತಂದೆ ಊರಾದ ಹೋಳಲು ಗ್ರಾಮಕ್ಕೆ ಬಂದ ಭಕ್ತರ ಮನೆಯಲ್ಲಿ ಪ್ರಾಸಾದ ಶಾಲೆಯಲ್ಲಿ ಓದು ಹ ಐದನೇ ತರಗತಿ ಮುಗಿಯಿತು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಹರಪ್ಪನ ಹಳ್ಳಿಗೆ ಹೋಗಬೇಕಾಯಿತು. ಬಡತನ ಪರಿಸ್ಥಿತಿಯಲ್ಲಿ ಪರಸ್ಥಳದಲ್ಲಿ ಶಿಕ್ಷಣವನ್ನು ಮುಂದುವರಿಸುವುದು ಅಸಾಧ್ಯವಾಯಿತು. ಓದಿಗೆ ವಿದಾಯ ಹೇಳಿ ಮಾಗಳಕ್ಕೆ ತಿರುಗಿ ಬಂದು ಕೂಲಿನಾಲಿ ಮಾಡಿ ಉದರಂಭಣೆಗಾರಂಭವಾಯಿತು. ಚಂದ್ರಶೇಖರನ ತಂದೆಯ ಮಿತ್ರ ಬ್ಯಾಡಗಿಯ ಸಿದ್ದಲಿಂಗಪ್ಪನವರು ಒಮ್ಮೆ ಮಾಗಳಕ್ಕೆ ಬಂದಾಗ ಚಂದ್ರಶೇಖರನನ್ನು ನೋಡಿದರು. ಪ್ರತಿಭಾವಂತನಾದ ಈ ಹುಡುಗನಿಗೆ ಈ ಸ್ಥತಿ ಬಂದಿದ್ದನ್ನು ತಿಳಿದು ಮರಮರನೆ ಮರುಗಿ ತಮ್ಮೂರಿಗೆ ಕರೆದುಕೊಂಡು ಹೋದರು. ಬ್ಯಾಡಗೀಯ ಮುಪ್ಪಯ್ಯ ಮಠದ ಸಂಸ್ಕ್ರತ ಪಾಠಶಾಲೆಗೆ ಚಂದ್ರಶೇಖರನ್ನು ಸೇರಿಸಿದರು ಆದರೆ ಅದೇ ಕಾಲಕ್ಕೆ ಪ್ಲೇಗು ಮಾರಿ ಹಚ್ಚಿ ಊರೆಲ್ಲ ಖಾಲಿ ಆಯಿತು ಚಂದ್ರಶೇಖರನು ಶಿರಹಟ್ಟಿಗೆ ಬಂದು ಫಕೀರೇಶ್ವರಸ್ವಾಮಿಗಳ ಮಠದಲ್ಲಿ ಆಶ್ರಯ ಪಡೆದುಕೊಂಡ ಅಲ್ಲಿ ಒಂದಿಷ್ಟೂ ಜ್ಯೋತಿಷ್ಯಶಾಸ್ತ್ರವನ್ನು ಕಲಿತ ಅದು ಅವರಿಗೆ ಹಿಡಿಸಲಿಲ್ಲ .ಹಾವೇರಿಗೆ ಬಂದು ಹುಕ್ಕೆರೀಮಠದ ಸಂಸ್ಕ್ರತ ಪಾಠಶಾಲೆಗೆ ಸೇರಿಕೊಂಡರು. 1915ರಲ್ಲಿ ಗದುಗಿನ ತೋಂಟದಾರ್ಯಮಠದ ಸಂಸ್ಕ್ರತ ಪಾಠಶಾಲೆಗೆ ಪ್ರವೇಶ ಪಡೆದ ಆದರೆ ಚಂದ್ರಶೇಖರನಿಗೆ ಈ ಪಾಠಗಳಲ್ಲಿ ತೃಪ್ತಿ ಇರಲಿಲ್ಲ. ಅಂತೆಯೇ ಸುಪ್ರಸಿದ್ದ ಕಾಶಿ ಜಂಗಮ ಪಠದ ಸಂಸ್ಕ್ರತ ಪಾಠ ಶಾಲೆಗೆ ಸೇರಿಕೊಂಡು ಅಲ್ಲಿ ಸತ್ತ ಏಳು ವರ್ಷ ವ್ಯಾಸಂಗ ಮಾಡಲು ಸದವಕಾಶ ಲಭಿಸಿತು. ಸಾಹಿತ್ಯ ಮತ್ತು ವ್ಯಾಕರಣಗಳಲ್ಲಿ ಪಂಡಿತ ಹಾಗೂ ಸಾಹಿತ್ಯಾಚಾರ್ಯ ಪದವಿಗಳನ್ನು ಅಲ್ಲಿ ಗಳಿಸಿದ ನಂತರ ಕಲಕತ್ತೆಗೆ ಹೋಗಿ ವ್ಯಾಕರಣ ತೀರ್ಥ ಪದವಿಗಳನ್ನು ಅಲ್ಲಿ ಗಳಿಸಿದ ನಂತರ ಚಂದ್ರಶೇಖರ ವ್ಯಾಕರಣತೀರ್ಥ ಪಂ ಚಂದ್ರಶೇಖರ ಶಾಸ್ತ್ರಿಗಳಾಗಿ ಮಾರ್ಪಟ್ಟ. 1924ರಲ್ಲಿ ಕಾಶಿಯಿಂದ ತಾಯ್ನಾಡಿಗೆ ಮರಳಿಬಂದ ಶಾಸ್ತ್ರಿಗಳು ಯಾದಗಿರಿಯಲ್ಲಿ ಸಜ್ಜನಶೆಟ್ಟಿ ಸಂಕರಣ್ಣನವರು ಉದಾರ ದೇಣಿಗೆಯಿಂದ ಚಿತ್ರದುರ್ಗದ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾಡಬೇಕಾಗಿದ್ದ ಸಂಸ್ಕ್ರತ ಪಾಠ ಶಾಲೆಯನ್ನು ಶ್ರೀಗಳ ಅಪ್ಪಣೆಯಂತೆ ಹೊತ್ತುಕೊಂಡರು. ಆದರೆ ಯಾದಗಿರಿಯಲ್ಲಿ ಶಂಕರ ಕಾಲೇಜು ಆರಂಭಗೊಂಡಿತು. ಚಂದ್ರಶೇಕಾರಾಚರ್ಯರು ಶಾಸ್ತ್ರಿಗಳು ಅದರ ಸ್ಥಾಪಕ ಪ್ರಾಚಾರ್ಯರಾದರೂ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ಸೇರಿಕೊಂಡರು. ಕಾಲೇಜಿನ ವಿದ್ಯಾರ್ಥಿಗಳಿಗೊಂದು ಒಂದು ಪ್ರಸಾದನಿಲಯವನ್ನು ಪ್ರಾರಂಭಿಸಿದರು. ಇಡೀ ಕರ್ನಾಟಕದಲ್ಲೇ ಅತ್ಯುತ್ತಮ ಒಂದು ಎಂದು ಶಂಕರ್ ಕಾಲೇಜು ಹೆಸರು ಗಳಿಸಿತು ಅಖಿಲ ಭಾರತ ಮಟ್ಟದ ಸಂಸ್ಕ್ರತ ಪರೀಕ್ಷೆಗಳು ನಡೆಯುವಂಥ ಕೇಂದ್ರವಾಗಿ ಕಾಲೇಜು ಪರಿಗಣಿಸಿತು. ಚಂದ್ರಶೇಖರ ಶಾಸ್ತ್ರಿಗಳು ಮೂರು ಸಾವಿರ ಮಠದ ಗಂಗಾದರ ಸಂಸ್ಕ್ರತ ಕಾಲೇಜಿನ ಪ್ರಥಮವಾಗಿ ಹುಬ್ಬಳ್ಳಿಗೆ ಬಂದರು ಹುಬ್ಬಳ್ಳಿಯ ಕಾಲೇಜು ಚಂದ್ರಶೇಖರ ಶಾಸ್ತ್ರಿಗಳಿಂದಾಗಿ ಹೆಚ್ಚು ಪ್ರಸಿದ್ದ ಪಡೆಯಲಾಂಭಿಸಿತು. ಯಾದಗಿರಿ ಕಾಲೇಜು ಸೊರಗಿತು. ಇದನ್ನರಿತ ಯಾದಗಿರಿಯ ಕೆಲವರು ಹುಬ್ಬಳ್ಳಿಗೆ ಬಂದು ಶಾಸ್ತ್ರಗಳು ಯಾದಗಿರಿಯನ್ನು ಬಿಡುವಂತೆ ಮಾಡಿದ ತಮ್ಮ ತಪ್ಪನ್ನು ಮನ್ನಿಸಲು ವಿನಂತಿಸಿ ಶಾಸ್ತ್ರಿಗಳನ್ನು ಮನವೊಲಿಸಿ ಮತ್ತೆ ಯಾದಗಿರಿಗೆ (1938) ಕರೆತಂದರು. ನಂತರ ಶಾಸ್ತ್ರಿಗಳು ತಮ್ಮ ನಿವೃತ್ತಿಯು(1948) ಸುಮಾರು ಹತ್ತುವರ್ಷ ಅಲ್ಲಿದ್ದು ಕಾಲೇಜಿನ ಸಮರ್ಥವಾಗಿ ಮುನ್ನಡೆಸಿದರು.

ಕನ್ನಡ ಸೇವೆ[ಬದಲಾಯಿಸಿ]

ಚಂದ್ರಶೇಖರ ಶಾಸ್ತ್ರಿಗಳು ಸಂಸ್ಕ್ರತದಲ್ಲಿ ಅಪಾರ ಪಾಂಡಿತ್ಯವನ್ನು ಗಳಿಸಿ ಆಗಿನ ಕಾಲದಲ್ಲಿ ಶ್ರೇಷ್ಟವೆನಿಸಿದ ವ್ಯಾಕರಣತೀರ್ಥ ಪದವಿಯನ್ನು ಪಡೆದು ಸಂಸ್ಕ್ರತ ಕಾಲೇಜುಗಳನ್ನು ಸ್ಥಾಪಿಸಿ ಅವುಗಳನ್ನು ಅಭಿವೃಧ್ಧಿಯಲ್ಲಿ ಸತತ ಎರಡೂವರೆ ದಶಕಗಳವರೆಗೆ ಶ್ರಮಿಸಿ ತಮ್ಮ ವಿದ್ಯಾಭ್ಯಾಸವನ್ನು ಎಲ್ಲವೂ ಸಂಸ್ಕ್ರತವಾಗಿತ್ತು. ತಮ್ಮ ವಿಧ್ಯಾಭ್ಯಾಸ ಎಲ್ಲವೂ ಸಂಸ್ಕ್ರತವಾಗಿತ್ತು .ಹೀಗಿದ್ದರೂ ಅವರು ಕನ್ನಡ ನಾಡು ನುಡಿಗಳಿಗಾಗಿ ಸಲ್ಲಿಸಿರುವ ಸೇವೆ ಅನುಪಮವಾದುದು. ಹಳಗನ್ನಡ ಕಾವ್ಯಗಳನ್ನು ವ್ಯಾಕರಣವನ್ನು ಆಳವಾಗಿ ಅಧ್ಯಯನವನ್ನು ಮಾಡಿದರು. ವೇದಾಗಮಗಳನ್ನು ಮೂಲ ಸಂಸ್ಕ್ರತದಲ್ಲಿಯೇ ವ್ಯಾಸಂಗಗೈದು ಕನ್ನಡದ ವಚನಸಾಹಿತ್ಯಕ್ಕೆ ಅವು ಹೇಗೆ ಪ್ರೇರಕ-ಪೋಷಕವಾಗಿವೆ ಎಂಬುದನ್ನು ತುಲನಾತ್ಮಕವಾಗಿ ವಿವೇಚಿಸಿ ಅಮೂಲ್ಯವಾದ ಸಂಶೋದನೆಯನ್ನು ಕನ್ನಡದಲ್ಲಿ ರಚಿಸಲಾಯಿತು ಪಂ.ಚಂದ್ರಶೇಖರ ಶಾಸ್ತ್ರಿಗಳು ಕನ್ನಡದಲ್ಲಿ ಸುಮಾರು 15 ಕೃತಿಗಳನ್ನು ರಚಿಸಿರುವುದಾಗಿ ತಿಳಿದು ಬಂದಿದೆ. ಅವಲ್ಲದೆ ನೂರಾರೂ ಲೇಖನಗಳನ್ನು ನಾಡಿನ ಶ್ರೇಷ್ಠಪತ್ರಿಕೆಗಳನ್ನು ಪ್ರಕಟಿಸಿದ್ದಾರೆ.

ಚಂದ್ರಶೇಖರ ಶಾಸ್ತ್ರಿಯವರ ಉಪಲಬ್ದ ಕೃತಿಗಳು[ಬದಲಾಯಿಸಿ]

1.ಬಸವತತ್ವ ರತ್ನಾಕರ

2. ಕಾಡಸಿದ್ದೇಶ್ವರ ವಚನ

3.ಧಾರವಾಡದ ಮೃತ್ಯುಂಜಯ ಶಿವಯೋಗಿಗಳ ಚರಿತ್ರೆ-ಇವು ಮೂರು ಮಾತ್ರ

ಚಂದ್ರಶೇಖರ ಶಾಸ್ತ್ರಿಯವರ ಅನುಪಲಬ್ಧ ಕೃತಿಗಳು[ಬದಲಾಯಿಸಿ]

1.ಧರ್ಮವೀರ ಶಂಕ್ರಣ್ಣನವರ ಚರಿತ್ರೆ

2.ಮದನಮೋಹನ ಮಾಲವೀಯರ ಚರಿತ್ರೆ

3.ಸ್ವತಂತ್ರ ಸಿದ್ದಲಿಂಗೇಶ್ವರ ವಚನ

4.ಸಿದ್ದೇಶ್ವರ ವಚನ

5.ರಾಗಗಿರಿ

6.ಶಬರಶಂಕರ ಪಾರ್ಥಪುರುಷ

7.ಲಿಂಗಧಾರಣವೂ ವೇಧಮಂತ್ರಗಳೂ

8.ಚಾಣಕ್ಯನೀತಿ ದರ್ಮಣ

9.ಭಗವಾನ್ ಬಸವೇಶ್ವರ ಜಯಂತಿ

10.ರೇಣುಕ ವಿಜಯ

11.ಕೊಲ್ಲಿ ಪಾಕಿ

12.ಆತ್ಮಚರಿತ್ರೆ-ಓಳಗೊಂಡಿದೆ

ಚಂದ್ರಶೇಖರ ಶಾಸ್ತ್ರಿಗಳು ಸಂಸ್ಕ್ರತ ವಿದ್ವಾಂಸರಾಗಿ ಹಾಗೂ ಪಾಂಡಿತ್ಯಪೂರ್ಣ ಕೃತಿರಚನಾಕಾರರಾಗಿದರು. ಶ್ರೇಷ್ಠ ಆಡಳಿತಗಾರರಾಗಿ ಉತ್ತಮ ಸಂಶೋಧಕರಾಗಿ ಪತ್ರಿಕೋದ್ಯಮಿಯಾಗಿ ಸಂಘಟಕರಾಗಿ ರಾಜಕೀಯ ವಿಮರ್ಶಕರಾಗಿ ಕೃಷಿಕರಾಗಿ ಚಲನಚಿತ್ರ ನಿರ್ಮಾಪಕರಾಗಿ ಹೀಗೆಯೇ ಹತ್ತು ಹಲವು ಕ್ಷೇತ್ರವಾಗಿ ತಮ್ಮ ವ್ಯಕ್ತಿತ್ವವನ್ನು ಪ್ರಕಾಶಿಸಿದವರು. 1919 ರಿಂದ ನಿರಂತರವಾಗಿ ಸುಮಾರು ಅರ್ಧ ಶತಮಾನದ ಕಾಲ ನಾಡಿನ ವಿವಿಧ ಪತ್ರಿಕೆಗಳಿಗೆ ಧರ್ಮ ಸಾಹಿತ್ಯ ಶಕ್ಷಣದ ರಾಷ್ಟ್ರದ ರಾಜ್ಯದ ರಾಜಕೀಯ ಕರ್ನಾಟಕ ಏಕೀಕರಣ ಸ್ವಾತಂತ್ರಯ ಚಳವಳಿ ಭಾರತೀಯ ಕರ್ನಾಟಕ ಸಂಸ್ಕ್ರತಿ ಇತ್ಯಾಧಿ ವಿಷಯಗಳನ್ನು ಕುರಿತು ಸಹಸ್ರಾರು ವಿಚಾರಪೂರ್ತಿ ಲೇಖನವನ್ನು ಬರೆದಿದ್ದಾರೆ.ಅವರ ಲೇಖನಗಳು 1926ರಲ್ಲಿ ಅವರು ಭಗವನ್ ಬಸವೇಶ್ವರ ಜಯಂತಿ ಎಂಬ ಲೇಖನವನ್ನು ಅನೇಕ ಮರುಮುದ್ರಣ ಮಾಡಿ ಹಂಚಲಾಗಿತ್ತು .ಹೀಗೆ ಅವರ ಸಂಶೋಧನ ಬರವಣಿಗೆ ಅದ್ಭುತ ಕಥಾನಕವೆಂಬಂತೆ ಸಾಗುತ್ತದೆ. ಈ ರೀತಿಯ ಇಪ್ಪತ್ತನೆಯ ಶತಮಾನದ ಆರಂಭಕಾಲದಿಂದ ಎಂಬತ್ತರ ದಶಕದವರೆಗೆ ನಿರಂತರವಾಗಿ ಆರುದಶಕಗಳಿಗೂ ಹೆಚ್ಚುಕಾಲ ಕನ್ನಡಕ್ಕಾಗಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮ ಬದುಕಿನ ಕೊನೆಯ ಕಣವನ್ನು ಕನ್ನಡ ನಾಡು ನುಡಿಯ ಸೇವೆಗೆ ಹಂಬಲಿಸಿದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು ವೃದ್ದಾಪ್ಯವನ್ನು ಮಾಗಳ ಗ್ರಾಮದಲ್ಲಿ ಕಳೆಯುತ್ತ ಅಲ್ಲಿಯೇ ದಿನಾಂಕ 24-10-1997 ಲಿಂಗೈಕ್ಯರಾದರೂ ಕನ್ನಡ ಸಾಹಿತ್ಯ ಚರಿತ್ರೆಯ ಪುಟಗಳಲ್ಲಿ ತಮ್ಮದೆ ಆದ ಸ್ಥಾನವನ್ನುಳಿಸಿ ಅಸ್ತಂಗತರಾದರೂ.