ಸದಸ್ಯ:BHARATH1998kumar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೈಹಿಂದ್
BHARATH1998kumar/ನನ್ನ ಪ್ರಯೋಗಪುಟ
ಜೈ ಹಿಂದ್
ನಿರ್ದೇಶನಎಸ್.ಎಸ್.ಡೇವಿಡ್
ಪಾತ್ರವರ್ಗದೇವರಾಜ್, ಬಿ.ಸಿ.ಪಾಟಿಲ್ ನಿವೇದಿತಾ ಜೈನ್ ರಘುವರನ್, ಶೋಭರಾಜ್
ಬಿಡುಗಡೆಯಾಗಿದ್ದು೧೯೯೮
ಚಿತ್ರ ನಿರ್ಮಾಣ ಸಂಸ್ಥೆಸೌಮ್ಯ ಫಿಲಮ್ಸ್
  ಜೈಹಿಂದ್ ಚಲನಚಿತ್ರದ ನಿರ್ದೇಶಕ ಎಸ್.ಎಸ್.ಡೇವಿಡ್. ಈ ಚಲನಚಿತ್ರವು ೧೯೯೮ರಲ್ಲಿ ಬಿಡುಗಡೆಯಾಗಿತ್ತು. ಚನ್ನಬಸವನಗೌಡ ಪಾಟೀಲ್ ಈ ಚಲನಚಿತ್ರದ ನಿರ್ಮಾಪಕರು.  ಜೈ ಹಿಂದ್ ಚಲನಚಿತ್ರವನ್ನು ನಿರ್ಮಾಣ ಮಾಡಿದ ಚಿತ್ರ ನಿರ್ಮಾಣ ಸಂಸ್ಥೆ ಸೌಮ್ಯ ಫಿಲಮ್ಸ್. ದೇವರಾಜ್ ಮತ್ತು ಬಿ.ಸಿ.ಪಾಟಿಲ್ ಈ ಚಲನಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಲನಚಿತ್ರಕ್ಕೆ ವಿ.ಮನೊಹರ್ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಸಾಹಸ ನಿರ್ದೇಶಕರಾಗಿ ಕೆ.ಡಿ.ವೆಂಕಟೇಶ್ ಕೆಲಸ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಕೆ.ಸುರೇಶ್ ಕುಮಾರ್ ತಮ್ಮಕೆಲಸ ಮಾಡಿದ್ದಾರೆ.ಜೈ ಹಿಂದ್ ಚಲನಚಿತ್ರದ ಕಥೆ,ಚಿತ್ರಕಥೆ,ಸಂಭಾಷಣೆ,ನಿರ್ದೇಶಕರಾಗಿ ಎಸ್.ಎಸ್.ಡೇವಿಡ್ ನಿರ್ವಹಿಸಿದ್ದಾರೆ.

thumb

  ದೇವರಾಜ್ ಮತ್ತು ಬಿ.ಸಿ.ಪಾಟೀಲ್ ನಿಷ್ಥಾವಂತ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದಾರೆ.ನಿವೇದಿತಾ ಜೈನ್ ನಾಯಕಿಯಾಗಿ ಅಭಿನಯಿಸಿದ್ದಾರೆ.ಸಂಭಾಷಣೆ ಚುರುಕಾಗಿದೆ. ಕೆಲವೊಂದು ಸಂಭಾಷಣೆಗಳು ಪ್ರೇಕ್ಷಕರ ಚಪ್ಪಾಳೆಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. ಕೆಲವೊಂದು ಹಾಡುಗಳು ಇಂಪಾಗಿವೆ. ರಘುವರನ್ ಖಳನಟನಾಗಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಮೈನವಿರೇಳಿಸುವ ಸಾಹಸ ದೃಶ್ಯಗಳಿವೆ. ಸಮಾಜದಲ್ಲಿ ಭ್ರಷ್ಟಾಚಾರ ಯಾವ ರೀತಿ ಹರಡಿದೆ ಎಂಬುದನ್ನು ಬಿಂಬಿಸಲಾಗಿದೆ. ಸಂಕಲನ ಉತ್ತಮವಾಗಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಹೇಗೆ ಭ್ರಷ್ಟಾಚಾರಿಗಳು ಉಪಯೋಗಿಸಿಕೊಳ್ಳುತ್ತಾರೆಂದು ತೋರಿಸಲಾಗಿದೆ.ಕಥೆಯ ನಿರೂಪಣೆಯನ್ನು ಚೆನ್ನಾಗಿ ಮಾಡಿದ್ದಾರೆ.ಚಿತ್ರಕಥೆಯಲ್ಲಿ ಹೊಸತನವಿದೆ.

thumb

  ಈ ಚಲನಚಿತ್ರದ ಮೊದಲನೇ ದೃಶ್ಯ ದೇವರಾಜ್ ತಂದೆಯನ್ನು ಖಳನಟನಾದ ರಘುವರನ್ ಕೊಲ್ಲುವುದರ ಮೂಲಕ ಪ್ರಾರಂಭವಾಗುತ್ತದೆ.ತನ್ನ ಕಣ್ಣ ಮುಂದೆಯೇ ತನ್ನ ತಂದೆಯ ಕೊಲೆ ಮಾಡಿದವನನ್ನು ಸಾಯಿಸದೇ ಬಿಡುವುದಿಲ್ಲ ಎಂದು ದೇವರಾಜ್ ಶಪಥ ಮಾಡುತ್ತಾರೆ. ಪೊಲೀಸ್ ಅಧಿಕಾರಿ ಅಲಿಯಾಗಿ ಬಿ.ಸಿ.ಪಾಟೀಲ್ ಅಭಿನಯಿಸಿದ್ದಾರೆ ಮತ್ತು ಈ ಚಲನಚಿತ್ರದಲ್ಲಿ ದೇವರಾಜ್ ಸ್ನೇಹಿತನಾಗಿ ಅಭಿನಯಿಸಿದ್ದಾರೆ. ಅಲಿಯು ಡಯಾನ ಕೊಲೆ ಪ್ರಕರಣದಲ್ಲಿ ಕೊಲೆಗಾರನನ್ನು ಕಂಡು ಹಿಡಿಯುವಾಗ ದೇವರಾಜ್ ತನ್ನ ತಂದೆಯನ್ನು ಕೊಲೆ ಮಾಡಿದವನನ್ನು ನೊಡುತ್ತಾನೆ. ಅವನನ್ನು ಸೆರೆ ಹಿಡಿದರೂ ಆತ ಮೋಸ ಮಾಡಿ ತಪ್ಪಿಸಿಕೊಂಡು ಹೋಗುತ್ತಾನೆ. ಆದರೆ ಚಲನಚಿತ್ರದ ಕೊನೆಯಲ್ಲಿ ದೇವರಾಜ್ ಅವನನ್ನು ಬಡಿಯುತ್ತಾ, ಹೊಡಿಯುತ್ತಾ  ನ್ಯಾಯಾಲಕ್ಕೆ ಹಾಜರುಪಡಿಸುತ್ತಾನೆ. ಖಳನಟನಿಗೆ ಮೊದಲು ಆತ ಮಾಡಿದ ತಪ್ಪಿಗೆ ನ್ಯಾಯಾಲಯ ಮರಣದಂಡನೆಯನ್ನು ಕೊಟ್ಟಿರುತ್ತದೆ.ಆದರೆ ನ್ಯಾಯಾಲಕ್ಕೆ ಎರಡನೆ ಸಲ ಮರಣದಂಡನೆ ಕೊಡುವ ಅಧಿಕಾರವಿಲ್ಲ.ಆದ್ದರಿಂದ ಅವನಿಗೆ ಶಿಕ್ಷೆ ಸಿಗುವುದಿಲ್ಲ. ದೇವರಾಜ್ ತನ್ನ ತಂದೆಯ ಅಂತ್ಯ ಸಂಸ್ಕಾರವನ್ನು ರಘುವರನನ್ನು ಕೊಂದ ನಂತರವೇ ಮಾಡುವುದಾಗಿ ಹೇಳಿ ಅವನನ್ನು ಕೊಲ್ಲುತ್ತಾನೆ. ಇಲ್ಲಿಗೆ ಚಲನಚಿತ್ರದ ಕಥೆ ಮುಗಿಯುತ್ತದೆ. 


ಉಲ್ಲೇಖಗಳು[ಬದಲಾಯಿಸಿ]

[೧] [೨] [೩]

  1. https://www.youtube.com/watch?v=6IIpyETkbSE
  2. https://kannadamoviesinfo.wordpress.com/2013/08/20/jai-hind-1998/
  3. https://chiloka.com/movie/jai-hind-1998