ಸದಸ್ಯ:Adityags.HEP.56/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

800*600px|thumb|ಪಾಲ್ ಪಾಟ್

                                                   ಪಾಲ್ ಪಾಟ್

ಹಿನ್ನಲೆ[ಬದಲಾಯಿಸಿ]

ಪಾಲ್ ಪಾಟ್ ಅಥವ ಸಲೋಥ್ ಸಾರ್ ೧೯೨೫ ಮೇ ೧೯ ರಲ್ಲಿ ಕಂಪಂಗ್ ಥಾಮ್, ಕಾಂಬೋಡಿಯದಲ್ಲಿ ಜನಸಿದರು. ಇವರ ತಂದೆಯ ಹೆಸರು ಪೆನ್ ಸಾಲೋತ್ ಮತ್ತು ತಾಯಿಯ ಹೆಸರು ಸಾಕ್ ನೆಮ್. ಸಲೋಥ್ ಸಾರ್ ಅವರ ಕುಟುಂಬ ಒಂದು ಸಾಮಾನ್ಯವಾದ ಕುಟುಂಬವಾಗಿತ್ತು. ಇವರ ತಂದೆ ಒಬ್ಬ ರೈತರಾಗಿದ್ದರು. ೧೯೪೯ರಲ್ಲಿ ಸಾರ್ ರವರು ಪ್ಯಾರಿಸ್ ನಲ್ಲಿ ರೇಡಿಯೋ ಎಲೆಕ್ತ್ರಾನಿಕ್ಸ್ ನಲ್ಲಿ ಪದವಿ ಪಡೆದುಕೊಳ್ಳಲು ಹೋದರು. ವಿಯಟ್ನಾಮ್ ನಲ್ಲಿ ಕಮ್ಯೂನಿಸ್ಟ್ ಸರ್ಕಾರ ಪ್ರಾರಂಭವಾಗುತ್ತಿದಂತೆ, ಹಲವಾರು ಫ್ರಾನ್ಸ್ನಲ್ಲಿ ಓದುತ್ತಿದ ಯುವಕರು ಕಾಂಬೋಡಿಯದಲ್ಲಿ ಕಮ್ಯೂನಿಸಮ್ ಚಟುವಟಿಕೆಯಲ್ಲಿ ಭಾಗವಹಿಸಬೇಕೆಂದು ಮಾರ್ಕ್ಸಿಸ್ಟ್ ಸರ್ಕಲ್ ಎಂಬ ಸಂಸ್ಥೆಯಲ್ಲಿ ಭಾಗವಹಿಸಿದರು. ಈ ಸಂಸ್ಥೆಯಲ್ಲಿ ಪಾಲ್ ಪಾಟ್ ಒಂದು ಒಳ್ಳೆಯ ಕಾರ್ಯ ನಿರ್ವಹಿಸಿದರು. ನಿರಂತರ ಪರೀಕ್ಷೆಗಳಲ್ಲಿ ನಾಪಾಸ ಆದ ನಂತರ, ೧೯೫೬ರಲ್ಲಿ ಪಾಲ್ ಪಾಟ್ ರವರು ಕಾಂಬೋಡಿಯಕೆ ಹಿಂದುರಿಗಿದರು. ಇವರು ಬಂದ ನಂತರ ಇವರು ಸರ್ಕಾರದ ವಿರುದ್ದ ನಡೆತ್ತಿದ್ದ ಚಳುವಳಿಯಲ್ಲಿ ಭಾಗವಹಿಸಿದರು.ಆದ್ದರಂದ ಇವರು ವಿಯಟ್ನಾಮ್ಲ್ಲಿ ತಮ್ಮ ಕಾರ್ಯಗಳನ್ನು ನಡೆಸುತ್ತಿದರು. ೧೯೫೪ರಲ್ಲಿ ವಿಯಟ್ನಾಮ್, ಕಾಂಬೋಡಿಯ ಹಾಗೂ ಲಾವೋಸ್ ಅನ್ನು ಬೇರ್ಪಡಿಸಲಾಗಿತ್ತು.ಕಾಂಬೋಡಿಯದಲ್ಲಿ ಸ್ವಾತಂತ್ರ ಬರುತ್ತಿದಂತೆ ಅಂತರ್ಯುಧ್ದ ಶುರುವಾಯಿತು.

ಅಧಿಕಾರ[ಬದಲಾಯಿಸಿ]

ಕಮ್ಯುನಿಸ್ಟ್ ಪಕ್ಷ[ಬದಲಾಯಿಸಿ]

ನಡೆತ್ತಿದ ಅಂತರ್ಯುಧ್ದದಲ್ಲಿ ಪಾಲ್ ಪಾಟ್ ರವರು ಕಮ್ಯುನಿಸ್ಟ್ ರವರಿಗೆ ದೊಡ್ದ ಬೆಂಬಲ ನೀಡಿದರು. ಆ ಯುಧ್ದದಲ್ಲಿ ಕಮ್ಯುನಿಸ್ಟ್ ರವರ ಸೋಲು ಕಚಿತವಾಯಿತು. ಪೋಲಿಸ್ ಮತ್ತು ಸರ್ಕಾರ ಕಮ್ಯುನಿಸ್ಟ್ ನಾಯಕರಿಗೆ ಅಥಿ ಕ್ರೂರವಾದ ಶಿಕ್ಶೆ ನೀಡುತ್ತಾಯಿತ್ತು. ಆದ್ದದರಿಂದ ಪಾಲ್ ಪಾಟ್ ರವರು ಏಕೈಕ ವರ್ಚಸ್ವಿ ಕಾಮ್ಯುನಿಸ್ಟ್ ನಾಯಕನಾಗಿದ್ದ. ಅದಕ್ಕೆ ಪಾಲ್ ಪಾಟ್ ರವನ್ನು ಕಮ್ಯುನಿಸ್ಟ್ ನಾಯಕನಾಗಿ ಮಾಡಿದರು.ಪಾಲ್ ಪಾಟ್ ರವರು ನಾಯಕವಾಗುತ್ತಿದಂತೆ ಮಾರ್ಕ್ಸಿಸ್ಟ್ ಸಿದ್ದಾಂತಗಳನ್ನು ಖ್ಮೇರ್ ರೌಗ್ ಸಿದ್ಧಾಂತಗಳಿಗೆ ಬದಲಾಯಿಸಿದರು. ಪಾಟ್ ರವರು ವಿಯಟ್ನಮ್ ಯಿಂದ ಸಹಾಯ ಪಡೆದು ಕೊಳ್ಳಲು ಪ್ರಾರಂಭಿಸಿದರು. ೧೯೬೬ರಲ್ಲಿ ಪಾಲ್ ಪಾಟ್ ರವರು ಕಮ್ಯುನಿಸ್ಟ್ ಪಾರ್ಟಿಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಕಂಪುಛಿಯ ಎಂದು ಬದಲಾಯಿಸಿದರು. ಅದೆ ವರ್ಷದಲ್ಲಿ ಪಾಲ್ ಪಾಟ್ ರವರು ಹಲವರು ಪಾರ್ಟಿ ಕಮೆಂಡ್ ಪೋಸ್ಟ್ ಗಳನ್ನು ಸ್ರುಷ್ಟಿಸಿದರು ಮತ್ತು ಸರ್ಕಾರದ ವಿರುಧ್ದ ದಾಳಿ ಮಾಡಲು ಸಿದ್ದತೆ ನಡೆಯುತ್ತಯತ್ತು. ೧೯೬೬ ರಲ್ಲಿ ರೈತರು ಸರ್ಕಾರದ ವಿರುದ್ಧ ಪ್ರತಿಭಟಿಸಿದರು, ಇದರಿಂದ ಪಾಟ್ ರವರು ಹಲವಾರು ರೈತರು, ಶಿಕ್ಶಕರು, ವಿಧ್ಯಾರ್ತಿಗಳನ್ನು ತಮ್ಮ [[ಪಕ್ಷ]]ಯ ಕಡೆ ಸೆಳೆದು ಕೊಂಡರು. ೧೯೭೦ ರಲ್ಲಿ ನಡೆದ ವಿಯಟ್ನಾಮ್ ಮತ್ತು ಕಾಂಬೋಡಿಯ ಯುಧ್ದದಲ್ಲಿ ಪಾಟ್ ರವರು ತಮ್ಮ ಸೇನೆಯನ್ನು ಯುದ್ಧದಿಂದ ದೂರ ಮತ್ತು ಸುರಕ್ಷವಿಟ್ಟು ತಮ್ಮ ಸೇನೆಯನ್ನು ಬಲಹೀನ ಪಡೆಸಿದರು. 600*800px|thumb|ಪಾಲ್ ಪಾಟ್ ಮತ್ತು ಪಕ್ಷದ ಕಾರ್ಯಕರ್ತರು

ಕಾಂಬೋಡಿಯದ ನಿಯಂತ್ರಣ ಮತ್ತು ನೀತಿ ಬದಲಾವಣೆಗಳು[ಬದಲಾಯಿಸಿ]

೧೯೭೩ರಲ್ಲಿ ವಿಯಟ್ನಾಮ್ ಸೇನೆ ಕಾಂಬೋಡಿಯವನ್ನು ಬಿಟ್ಟರು. ಅಷ್ಟರಲ್ಲೆ ಕಾಂಬೋಡಿಯ ಹಲವಾರು ಪ್ರದೇಶಗಳಲ್ಲಿ ಪಾಟ್ ತಮ್ಮ ಅಧಿಕಾರ ಚಲಾಯಿಸುತ್ತಿದರು.೧೯೭೪ ರಲ್ಲಿ ಪಾಲ್ ಪಾಟ್ ರವರು ಬಹಳ ಕೆಲವು ಸ್ಥಳಗಳನ್ನು ಬಿಟ್ಟು ಇಡಿ ಕಾಂಬೊಡಿಯದಲ್ಲಿ ತಮ್ಮ ಆಡಳಿತವನ್ನು ನಡೆಯುಸುತ್ತಿದರು. ೧೯೭೫ ರಲ್ಲಿ ನೋಮ್ ಫೆನ್ ವನ್ನು ಕಮುನಿಸ್ಟ ಆಕ್ರಮಿಸಿಕೊಂಡರು.೧೯೭೬ರಲ್ಲಿ ಕಾಂಬೋಡಿಯಗೆ ಒಂದು ಹೊಸ ಸಂವಿಧಾನ ಬರೆಯಲಾಗಿತ್ತು. ಪಾಲ್ ಪಾಟ್ ರವರು ಕಮುನಿಸ್ಟ ಸರ್ಕಾರಪ್ರಧಾನ ಮಂತ್ರಿ ಯಾದರು. ಪಾಲ್ ಪಾಟ್ ರವರ ಸರ್ಕಾರ ಇಡಿ ದೇಶದಲ್ಲಿ ಹಲವಾರು ಬದಲವಾಣೆಯಗಳನ್ನು ತಂದಿತ್ತು. ದೇಶನೆಲವನ್ನು ತಮ್ಮ ಜನರಿಗೆ ಸಮವಾಗಿ ಹಂಚುವುದು, ಹಳೆಯ ರಾಜಕಾರಣಿಗಳಿಗೆ ಮರಣದಂಡನೆನೆ ನೀಡುವುದು, ಶಾಲೆ-ಕಾಲೇಜು ಗಳನ್ನು ಬಂದು ಮಾಡುವುದು, ಉತ್ತಮ ಶಿಕ್ಷಣಪಡೆದಿರುವ ಜನರಿಗೆ ಜೈಲು ಅಥವ ಶಿಕ್ಶೆ ನೀಡುವುದು, ದೂರದರ್ಶನ, ರೇಡಿಯೋಗಳನ್ನು ಸಂಪೂರ್ಣವಾಗಿ ಸರ್ಕಾರ ನೋಡಿಕೊಳುವುದು, ಜನರ ಧರ್ಮಮತ್ತು ಸಂಸ್ಕೃತಿ ಯನ್ನು ಸರ್ಕಾರ ನೋಡಿಕೊಳ್ಳುವುದು, ದೇಶದಲ್ಲಿರುವ ಎಲ್ಲ ನಗರಗಳಿಂದ ಜನರನ್ನು ವ್ಯವಸಾಯ ಮಾಡಲು ಹಾಗು ಇತರ ಸಣ್ಣ ಹಳ್ಳಿಗಳಿಗೆ ವಲಸೆಯಾಗುವುದಕ್ಕೆ ಕೆಲವೆ ದಿನಗಳೆ ಅವಕಾಶ ಮಾತ್ರ ನೀಡುವುದು, ಹಲವಾರು ಕಾರ್ಖಾನೆ ಮತ್ತು ನಗರಗಳ್ಳನು ಬಂದ್ ಮಾಡಲಾಯಿತ್ತು. ಕಠೀಣ ಅಂತರಾಷ್ತ್ರಿಯ ಸಂಭಂದಗಳಿಂದ [[ಅಮೇರಿಕ]]ನಿಂದ ಬಾಂಬಿನ ಸುರೆಮಳೆಯಾಯಿತ್ತು ನಂತರ ವಿಯಟ್ನಾಮ್ ಜತೆಗೆ ಜಗಳವನ್ನು ಉಂಟುಮಾಡಿತ್ತು, ಇದ್ದರಿಂದ ಹಲವಾರು ಜನ ಸಾವನ್ನು ಅನುಭವಿಸಿದರು.

ಯುದ್ಢ, ನಂತರದ ಜೀವನ ಮತ್ತು ಮರಣ[ಬದಲಾಯಿಸಿ]

ಪಾಲ್ ಪಾಟ್ ಸರ್ಕಾರ ವಿಯಟ್ನಾಮ್ ಜತೆಗೆ ಹಲವಾರು ಸಾರಿ ಸಣ್ಣ ಘರ್ಷಣೆಗಳನ್ನು ಉಂಟುಮಾಡಿತ್ತು, ಇದನ್ನು ನೋಡಿ ಕೋಪಗೊಂಡ ವಿಯಟ್ನಾಮ್ ಸರ್ಕಾರ ಕಾಂಬೋಡಿಯ ಮೇಲೆ ಯುದ್ಧ ಸಾರಿಸಿದರು.೧೯೭೯ರಲ್ಲಿ ವಿಯಟ್ನಾಮ್ ಪಾಲ್ ಪಾಟ್ ರವರ ಕಮ್ಯುನಿಷ್ಟ್ ಸರ್ಕಾರವನ್ನು ಸೋಲಿಸಿ ತಮ್ಮ ಆತ್ಮಿಯರವರಾದ ಕಾಂಬೋಡಿಯ ನಾಯಕರಿಗೆ ಸರ್ಕಾರ ಕಟ್ಟಲು ಅನುಮತಿ ನೀಡಿದರು. ಹಾಗ ಪಾಲ್ ಪಾಟ್ ರವರಿಗೆ ಚೀನ ಸರ್ಕಾರ ಬಹಳ ಸಹಾಯ ಮಾಡಿತ್ತು.ಚೀನ ಕಮ್ಯುನಿಷ್ಟ್ [[ಪಕ್ಷ]]ಗೆ ಹಣ ನೀಡುತ್ತ ಸಹಾಯ ಮಾಡಿದರು. ೧೯೮೫ ರಲ್ಲಿ ವಿಯಟ್ನಾಮ್ ಸೇನೆ ಕಮುನಿಸ್ಟ್ ಕ್ಯಾಂಪನ್ನು ನಾಶಮಾಡಿತ್ತು. ೧೯೮೫ ರಲ್ಲಿ ಪಾಲ್ ಪಾಟ್ ಥೈಲ್ಯಾಂಡ್ಗೆ ಪರಾರಿಯಾದರು. ಪಾಲ್ ಪಾಟ್ ರವರು ೧೯೮೫ರಲ್ಲಿ ತಮ್ಮ [[ಪಕ್ಷ]]ದಿಂದ ರಾಜಿನಾಮೆ ನೀಡಿದರು. ಆದರು ಪಕ್ಷದಿಂದ ಅವರ ಪ್ರಭಾವ ಕಮ್ಮಿಯಾಗಲಿಲ್ಲ. ಇವರ ನಂತರ ಸಾನ್ ಸೇನ್ ಪಾರ್ಟಿಯನ್ನು ನೋಡಿಕೊಳ್ಳಲು ಆರಂಭಿಸಿದರು. ಇವರು ಥೈಲ್ಯಾಂಡ್ ನಲ್ಲಿದಾಗ ಇವರಿಗೆ ಒಂದು ಮಗಳು ಹುಟ್ಟಿದಳು. ಇದಾದ ನಂತರ ಪಾಟ್ ರವರು ಚೀನಾಗೆ ತಮ್ಮ ಕ್ಯಾನ್ಸರ್ ಚಿಕಿತ್ಸೆಗೆ ಹೋದರು. ೧೯೮೯ರಲ್ಲಿ ವಿಯಟ್ನಾಮ್ ಕಾಂಬೋಡಿಯವನ್ನು ಬಿಟ್ಟರು. ಆಗ ಪಾಲ್ ಪಾಟ್ ರವರು ಕಾಂಬೋಡಿಯಗೆ ಹಿಂದಿರುಗಿ ಪಶ್ಚಿಮ ಕಡೆಯಲ್ಲಿ ತಮ್ಮ ಪಾರ್ಟಿಯ ಕಾರ್ಯಕರ್ತಕರ ಜತೆ ಸೇರಿಕೊಂಡು ಮತ್ತೆ ಕಾಂಬೋಡಿಯದ ಸರ್ಕಾರದ ವಿರುದ್ಧ ಯುದ್ಢ ಶುರು ಮಾಡಿದರು. ಸರ್ಕಾರದ ಮೇಲೆ ದಾಳಿ ಮಾಡಿದಾಗ ದೇಶದ ಶಾಂತತೆ ಮತ್ತೆ ಕಳೆದು ಹೋಗಲು ಪ್ರಾರಂಭಿಸಿತ್ತು. ಆದರೆ ೧೯೯೫ರಲ್ಲಿ ಪಾಲ್ ಪಾಟ್ ರವರಿಗೆ ದುರ್ಬಲತೆ ಉಂಟಾಯಿತು.ಆದ್ದರಿಂದ ಪಾಲ್ ಪಾಟ್ ರವರ್ ಎಡ ಭಾಗದ ದೇಹ ಕೆಲಸ ಮಾಡಲು ನಿಂದರಿಸಿತ್ತು. ೧೯೯೭ರಲ್ಲಿ ಪಲ್ ಪಾಟ್ ರವರು ಸಾನ್ ಸೇನ್ ಸರ್ಕಾರದ ಜತ್ತೆ ನಿಗೂಡ ಒಪ್ಪಂದ ಮಾಡುತ್ತಿದ್ದಾರೆ ಯೆಂದು ಅವರಿಗೆ ಮರಣ ಶಿಕ್ಶೆ ನೀಡಿದರು. ಪಾಲ್ ಪಾಟ್ ರವರು ತಮ್ಮ ಚಳುವಳಿಯನ್ನು ಕಾಂಬೋಡಿಯಉತ್ತರ ಭಾಗದಲ್ಲಿ ಮುಂದುವರಿಸಲು ಹೋದಾಗ ಅವರನ್ನು ಅವರ ಸ್ವಂತ ಸೈನಿಕರು ಬಂದಿಸಿ ಅವರನ್ನು ಗ್ರುಹ ಭಂಧನದಲ್ಲಿಟ್ಟರು. ಆದರೆ ೧೫ನೇ ಏಪ್ರಿಲ್ ೧೯೯೮ ರಲ್ಲಿ ಪಾಲ್ ಪಾಟ್ ರವರು ತಮ್ಮ ಮನೆಯಲ್ಲಿ ಕೊನೆಯ ಹುಸಿರು ಹೆಳೆದರು. ಆದರೆ ಇವರ ಸಾವಿನ ಸೂಕ್ತವಾದ ಕಾರಣ ಇನ್ನು ತಿಳಿದು ಬಂದಿಲ್ಲ.

ಉಲ್ಲೇಖಗಳು[ಬದಲಾಯಿಸಿ]

[೧] [೨] [೩] [೪] [೫]

  1. https://en.wikipedia.org/wiki/Pol_Pot
  2. http://www.history.com/topics/pol-pot
  3. https://www.nytimes.com/1998/04/17/world/death-pol-pot-pol-pot-brutal-dictator-who-forced-cambodians-killing-fields-dies.html
  4. https://www.mtholyoke.edu/~amamendo/KhmerRouge.html
  5. http://www.bbc.co.uk/history/historic_figures/pot_pol.shtml