ವಚನ(ವ್ಯಾಕರಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಾದಿ ಲಿಂಗ ಸೂಚಕ ನಾಮಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವ ಪೂರ್ವದಲ್ಲಿ ವಚನಗಳು ಬಂದು ಸೇರುತ್ತವೆ. ಕನ್ನಡ ಭಾಷೆಯಲ್ಲಿ ವಸ್ತು, ಪ್ರಾಣಿ, ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ವಚನ ಎಂದು ಹೇಳುತ್ತಾರೆ. ಒಂದು ವಸ್ತುವನ್ನು ಹೇಳುವುದು ಏಕವಚನ. ಅನೇಕ ವಸ್ತುಗಳನ್ನು ಹೇಳುವುದು ಬಹುವಚನ.

ಏಕವಚನ-ದ್ವಿವಚನ-ಬಹುವಚನ[ಬದಲಾಯಿಸಿ]

ಕೇಶಿರಾಜನ ಸೂ : 104 “ಏಕ-ದ್ವಿತ್ವ ಬಹುತ್ವಮನೇಕ ದ್ವಿ-ಬಹುತ್ವ ವಸ್ತುಗಳೊಳಾಚರಿಪರ್, ಸ್ವಿಕಾರ ಕನ್ನಡದೊಳಗೇಕ ಬಹುತ್ವಂ ದ್ವಿವಚನವನ್ನು ಮುಚಿತದೆ ಬರ್ಕುಂ.” ಒಂದು, ಎರಡು, ಮೂರು ಎಂದು ಪದಾರ್ಥಗಳ ಸ್ವೀಕೃತ. ಕನ್ನಮಡದಲ್ಲಿ ಏಕ ಮತ್ತು ಬಹುವಚನ. ಸಾಮಾನ್ಯವಾಗಿ ದ್ವಿವಚನ ಉಚಿತವಾಗಿ ಬರುತ್ತದೆ.

ಏಕವಚನದಲ್ಲಿ :- ಮನೆ-ಮನೆಯು-ಮನೆಗಳು, ಹುಲಿ-ಹುಲಿಯು-ಹುಲಿಗಳು. ಕೆರೆ= ಕೆರೆಯಲ್ಲಿ
ದ್ವಿವಚನದಲ್ಲಿ :- ರಾಮ - ಲಕ್ಷ್ಮಣರ್, ತೋಳ್ಗಳ್, ಕಣ್ಣುಗಳ್.
ಬಹುವಚನದಲ್ಲಿ :- ಕುರುಳ್ಗಳಿವು

ಒಂದೇ ವಸ್ತುವಿದ್ದರೆ ಏಕವಚನವೆಂದೂ, ಎರಡಾದರೆ ದ್ವಿವಚನವೆಂದೂ, ಎರಡಕ್ಕಿಂತ ಹೆಚ್ಚು ವಸ್ತುವಿದ್ದರೆ ಬಹುವಚನವೆಂದು, ಇದು ಸಂಸ್ಕೃತದಲ್ಲಿ ಸಾಮಾನ್ಯ ನಿಯಮ. ಆದರೆ ಕನ್ನಡದಲ್ಲಿ ದ್ವಿವಚನವು ವಿಶೇಷ ಸಂದರ್ಭದಲ್ಲಿ ಬರುತ್ತದೆ. ಹಳೆಗನ್ನಡದಲ್ಲಿ ದ್ವಿವಚನ ಸಾಮಾನ್ಯವಾಗಿದ್ದು ಹೊಸಗನ್ನಡದಲ್ಲಿ ಇದು ಇಲ್ಲ. ಸಂಸ್ಕೃತದ ಅನುಕರಣೆಯಿಂದ ಕನ್ನಡಕ್ಕೆ ದ್ವಿವಚನವನ್ನು ತುಂಬಿರಬಹುದು ಎಂಬ ಅಭಿಪ್ರಾಯ ಇದೆ. ಕನ್ನಡದಲ್ಲಿ ಬಹುವಚನ ಸೂಚಕ ಪ್ರತ್ಯಯಗಳಾದ ಗಳ್, ಅರ್, ದಿರ್, ವಿರ್, ಅರ್ಕಳ್ ಇವು ದ್ವಿವಚನಕ್ಕೆ ಹತ್ತುವುದರಿಂದ ದ್ವಿವಚನಕ್ಕೂ, ಬಹುವಚನಕ್ಕೂ ವ್ಯತ್ಯಾಸ ಬರುವುದಿಲ್ಲ. ಈ ಕಾರಣದಿಂದ ಕನ್ನಡದಲ್ಲಿ ದ್ವಿವಚನದ ಬಳಕೆಯ ಅಗತ್ಯವಿಲ್ಲ. ದ್ವಿವಚನವನ್ನು ಬಹುವಚನವೆಂದೇ ಪರಿಗಣಿಸಲಾಗುತ್ತದೆ. ಪ್ರಯೋಗದಲ್ಲಿ ಕಣ್ಗಳ್, ಕೈಗಳ್, ಕಾಲ್ಗಳ್, ತೋಳ್ಗಳ್, ತೊಡೆಗಳ್. ಈ ಪದಗಳಿಗೆ ‘ಗಳ್’ ಎಂಬ ಪ್ರತ್ಯಯ ಸೇರಿದೆ. ಇವು ಎರಡು ಮಾತ್ರವಿರುವುದರಿಂದ ‘ದ್ವಿಮಾನ’ವೆಂದು ಕರೆಯಲಾಗಿದೆ. ಆದುದರಿಂದ ‘ಗಳ್’ ಪ್ರತ್ಯಯವು ದ್ವಿವಚನ ಪ್ರತ್ಯಯವೆಂದು ಕರೆಯಿಸಿಕೊಂಡಿತು. ಸೂತ್ರದಲ್ಲಿ, ‘ವಿಭಕ್ತಿಗಳ ಮೊದಲೊಳ್ ಗಳಾಗಮಮಕ್ಕುಂ’ ಎಂಬ ಉಲ್ಲೇಖವಿದೆ.

ವಿಶೇಷ ರೂಪದ ಬಹುವಚನಗಳು :[ಬದಲಾಯಿಸಿ]

  • ನಾಮಪದ ವಿಭಕ್ತ್ಯಾದಿ ಪೂರ್ವದಲ್ಲಿ ಬಹುವಚನ ಪ್ರತ್ಯಯ ‘ಗಳ್’ ಆಗುವುದು. ಪ್ರಯೋಗ : ಕೊಳಗಳ್[ಹ.ಗ] ಕೊಳಗಳು [ಹೊ.ಗ]
  • ಸರ್ವನಾಮ ಗುಣವಚನ, ನಪುಂಸಕ ಪದಗಳಿಗೆ ‘ಅವು’ ಆಗಮವಾದಾಗ ಬಹು ವಚನಪ್ರತ್ಯಯ ರೂಪದಲ್ಲಿ ಪ್ರಯೋಗಗೊಳ್ಳುತ್ತವೆ. ಅದು+ಉ=ಅವು+ಗಳ್=ಅವುಗಳ್[ಸರ್ವನಾಮ}. ಅದು-‘ದು’ ಲೋಪವಾಗಿ ‘ಅವು’ ಆಗುವುದು. ಕರಿ, ಇನಿ, ಪಿರಿ. [ಗುಣವಚನ} ಕರಿಯ+ಅವ Å= ಕರಿಯವು, ಇನಿ+ಅವ Å= ಇನಿಯವು, ಪಿರಿ+ಅವು = ಪಿರಿಯವು.
  • ಅರ್, ಇರ್, ದಿರ್, ವಿರ್ ಪ್ರತ್ಯಯಗಳು ಪುಲ್ಲಿಂಗ, ಸ್ತ್ರೀಲಿಂಗ ಪದಗಳಿಗೆ ಸೇರಿದಾಗ,
ಪುಲ್ಲಿಂಗ - ನಲ್ಲರ್, ಅವಂದಿರ್, ತಂದೆವಿರ್. ಸ್ತ್ರೀಲಿಂಗ – ದೇವಿಯರ್, ಪೆಂಡಿರ್, ಇವಳ್ದಿರ್, ತಾಯ್ವಿರ್ ಈ ರೂಪದಲ್ಲಿ ಪ್ರಯೋಗಗೊಳ್ಳುತ್ತದೆ.
  1. ಸಂಖ್ಯಾವಾಚಕ ಗಳಿಗೆ ‘ಅರ್’ ಸೇರಿದಾಗ ‘ವ’ ಕಾರವು ಆಗಮವಾಗುತ್ತದೆ. ಪ್ರಯೋಗ : ಇರ್ವರ್, ಮೂವರ್.
  2. ಪರಿಮಾಣವಾಚಕ ಗಳಿಗೆ ‘ಅರ್’ ಸೇರಿದಾಗ ‘ವ’ಕಾರವು ಆಗಮವಾಗುತ್ತದೆ. ‘ವ’ ಕಾರವು ‘ಬ’ ಕಾರವು ಬರುತ್ತದೆ.
ಪ್ರಯೋಗ : ಎಲ್ಲರ್, ಅನಿಬರ್, ಪಲವರ್, ಕೆಲಬರ್, ಇತ್ಯಾದಿ.
  1. ಈ ಪಲವು ಕೆಲವು ಶಬ್ದಗಳಿಗೆ ಪುಲ್ಲಿಂಗ, ಸ್ತ್ರೀಲಿಂಗ ಬಹುವಚನದಲ್ಲಿ ಮೂರು ರೂಪಗಳಿವೆ.
ಪ್ರಯೋಗ : ಪಲವು=ಪಲಂಬರ್-ಪಲಬರ್-ಪಲರ್. ಕೆಲವು=ಕೆಲಂಬರ್-ಕೆಲಬರ್-ಕೆಲರ್.
  1. ಅರ್ಗಳ್, ಅರ್ಕಳ್ - ಬಹುವಚನದ ‘ಅರ್’ ಪ್ರತ್ಯಯದ ಮುಂದೆ ‘ಗಳ್’ ಪ್ರತ್ಯಯಗಳು ಬರುವುದಿದೆ.
ಪ್ರಯೋಗ : ಅವರ್ಗಳ್, ಇವರ್ಗಳ್, ಬುದರ್ಕಳ್, ಗೋವರ್ಕಳ್ ಇತ್ತಾದಿ.
  1. ಆನ್, ನಾನ್, ನೀನ್, ತಾನ್ ಎಂಬುದಕ್ಕೆ ಬಹುವಚನದಲ್ಲಿ ಆಮ್, ನಾಮ್, ನೀಮ್, ತಾಮ್, ಎಂಬ ರೂಪಗಳು ಬರುವುವು.

ವಚನ ಪಲ್ಲಟ (ಜಾತ್ಯೇಕ ವಚನ)[ಬದಲಾಯಿಸಿ]

ಆಧುನಿಕ ಕನ್ನಡದ ಬಹುವಚನ ರೂಪಗಳು[ಬದಲಾಯಿಸಿ]

ಕೇಶಿರಾಜನ ‘ವಚನಪಲ್ಲಟ’ ತತ್ವವನ್ನು ಅಂಗೀಕರಿಸಿದರೆ ನಡುಗನ್ನಡದಲ್ಲಿ ಕುಮಾರವ್ಯಾಸ, ಚಾಮರಸ ಮುಂತಾದ ಕವಿಗಳು ಬಳಸಿದ ಅನೇಕ ಪ್ರಯೋಗಗಳನ್ನು ನಾವು ಸ್ವೀಕರಿಸಬೇಕಾಗುತ್ತದೆ. ಪ್ರಯೋಗ : “ಜಗಜಟ್ಟಿಗಳು ನುಗ್ಗಾಯಿತು, ಮುರಿದುದಮರರು, ಅಂಗನೆಯರೈದಿತು” ಎಂಬಲ್ಲಿ ಲಿಂಗ, ವಚನ ಯಾವ ವ್ಯವಸ್ಥೆಯು ಇಲ್ಲದೆ ಇರುವುದು ಗಮನಾರ್ಹ. ಕನ್ನಡದಲ್ಲಿ ಹಾಗೂ ದ್ರಾವಿಡದಲ್ಲಿ ವಚನಗಳ ಸ್ವರೂಪ ಒಂದೇ ಬಗೆಯದು. ಸಂಸ್ಕøತದಲ್ಲಿ ವಚನಗಳು ಮೂರಾದರೆ, ಕನ್ನಡದಲ್ಲಿ ಎರಡು. ಸಂಸ್ಕೃತದಲ್ಲಿ ವಚನ ಆಯಾ ಲಿಂಗ, ವಿಭಕ್ತಿಪ್ರತ್ಯಯಗಳಿಗೆ ಅನುಗೂಣವಾಗಿ ಭಿನ್ನ. ಆದರೆ ಕನ್ನಡದಲ್ಲಿ ನಾಮವಿಭಕ್ತಿ ಪೂರ್ವದಲ್ಲಿ ವಚನ ಬಂದರೂ ವಿಭಕ್ತಿ ಪ್ರತಯಯಗಳ ಸ್ವರೂಪ ಬೇರೆಯಾಗಿಲ್ಲ. ಕನ್ನಡದಲ್ಲಿ ಲಿಂಗಸೂಚನೆಯಲ್ಲಿ ಏಕವಚನ, ಬಹುವಚನಗಳ ಬೇರೆ ಬೇರೆ ಪ್ರತ್ಯಯಗಳಿವೆ. ಬಹುವಚನದಲ್ಲಿ ಪುಲ್ಲಿಂಗ, ಸ್ತ್ರೀಲಿಂಗಗಳೆಂಬ ಅಂತರವಿಲ್ಲ. ನಪುಂಸಕ ಲಿಂಗವು ಪ್ರತ್ಯಯ ವಿಶೇಷದಿಂದ ಬೇರೆಯಾಗಿರುವುದು ಸ್ಪಷ್ಟ. ಕನ್ನಡದಲ್ಲಿ ಅರ್, ಕಳ್, ಗಳ್, ಇವು ಬಹುವಚನದಲ್ಲಿ ಯಾವ ತಾರತಮ್ಯ ಇಲ್ಲದೆಯೂ ಪ್ರಯೋಗಗೊಳ್ಳುತ್ತದೆ. ಕೇಶಿರಾಜನು ಹೇಳುವ ಬಹುವಚನ ಪ್ರತ್ಯಯಗಳೆಲ್ಲವು ಇವತ್ತು ರೂಢಿಯಲ್ಲಿಲ್ಲ. ಅರ್, ಗಳ್, ಎಂಬವು ಮಾತ್ರ ಸಾರ್ವತ್ರಿಕ ರೂಪದಲ್ಲಿ ಸ್ವರಾಂತವಾಗಿ ಬಳಕೆಯಾಗುತ್ತಿರುವುದು ಕಂಡು ಬರುತ್ತದೆ. ಉದಾ : ಹಳೆಗನ್ನಡದ ‘ಅರ್’ ಪ್ರತ್ಯಯಕ್ಕೆ ಹೊಸಗನ್ನಡದಲ್ಲಿ ‘ಅರ್’, ‘ಅರ’ ರೂಪವಿದೆ. ಅರಸಿಯರ್, ಅರಸಿಯರು. ಹಳೆಗನ್ನಡದ ‘ಗಳ್’ ಪ್ರತ್ಯಯಕ್ಕೆ ‘ಗಳು’ ರೂಪವಿದೆ. ಪುಸ್ತಕಗಳ್ - ಪುಸ್ತಕಗಳು, ಗಿಡಗಳ್-ಗಿಡಗಳು.

ಉಲ್ಲೇಖ[ಬದಲಾಯಿಸಿ]