ಸದಸ್ಯ:Anwith g kumar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಅನ್ವಿತ್ ಜಿ ಕುಮಾರ್. ನಾನು ೧೯೯೬ ಅಕ್ಟೋಬರ್ ೧೭ರಂದು ಜನಿಸಿದೆನು. ನನ್ನ ತಂದೆಯ ಹೆಸರು ಕುಮಾರ್ ಅವರು ವೃತ್ತಿಯಲ್ಲಿ ಕ್ಲರ್ಕ್ ಆಗಿದ್ದರು. ತಾಯಿಯ ಹೆಸರು ಯಾದವಿ. ಅವರು ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ತಾಯಿ ವಾಸವಾಗಿದ್ದೇವೆ. ನಮ್ಮ ತಂದೆಯವರು ಚಿಕ್ಕ ಮಗಳೂರು ಜಿಲ್ಲೆಯ ಗೂನಿಬೀಡಿನವರು.

ನನ್ನ ವಿದ್ಯಾಭ್ಯಾಸವೆಲ್ಲ ಮಂಗಳೂರಿನಲ್ಲಿ ಆರಂಭವಾಯಿತು. ನಾನು ೧ನೇ ತರಗತಿಯಿಂದ ೬ನೇ ತರಗತ್ಯವರೆಗೆ ಉಳ್ಳಾಲದ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದೆನು. ನಂತರ ಅಂಧನಾದ ಕಾರಣ ಬ್ರೇಲ್ ಲಿಪಿಯನ್ನು ಕಲಿಯಲು ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ೩ನೇ ತರಗತಿಗೆ ದಾಖಲಾದೆನು. ೨ ವರುಷ ಅಲ್ಲಿ ಕಲಿತು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ೨ ವರ್ಷದಲ್ಲಿ ೪ ತರಗತಿ ಮುಂದೆ ಹೋದೆನು. ೭ ರಿಂದ ೧೦ನೇ ತರಗತಿಯವರೆಗೆ ಮಂಗಳೂರಿನ ರೋಮನ್ ಅಂಡ್ ಕ್ಯಾಥರಿನ್ ಲೋಬೊ ಸ್ಕೂಲ್ ಫ಼ಾರ್ ದ ಬ್ಲೈಂಡ್ ನಲ್ಲಿ ವಿಧ್ಯಾಭ್ಯಾಸ ನಡೆಸಿ ಹತ್ತನೇ ತರಗತಿಯಲ್ಲಿ ೮೮% ಪದೆದು ಉತ್ತೀರ್ಣನಾಗಿದ್ದೇನೆ. ೧೧ ಮತ್ತು ೧೨ನೇ ತರಗತಿಯನ್ನು ಶ್ರೀ ಗೋಕರ್ಣನಾಥೇಶ್ವರ ಪಿ. ಯು. ಕಾಲೇಜಿನಲ್ಲಿ ನಡೆಸಿದ್ದು ೧೨ನೇ ತರಗತಿಯಲ್ಲಿ ೮೮.೧% ಗಳಿಸಿದ್ದೇನೆ. ನಾನು ಪ್ರಸ್ತುತವಾಗಿ ಸಂತ ಅಲೋಷಿಯಸ್ ನ ಕಾಲೇಜಿನಲ್ಲಿ ಬಿ. ಎ. ಕಲಿಯುತ್ತಿದ್ಡೇನೆ. ನನ್ನ ಪ್ರಮುಖ ವಿಷಯಗಳು ಇತಿಹಾಸ, ರಾಜಕೀಯ ಶಾಸ್ತ್ರ ಹಾಗು ಐಚ್ಚಿಕ ಕನ್ನಡ.

ನನ್ನ ಹವ್ಯಾಸಗಳು ತಬಲ ನುಡಿಸುವುದು, ಕಥೆ ಕವನಗಳ ರಚನೆ ಇತ್ಯಾದಿ. ನನಗೆ ಹಲವು ಭಾಷಣ ಸ್ಪರ್ಧೆಗಳಲ್ಲಿ ಬಹುಮಾನ ದೊರೆತಿದೆ. ತಾಲ್ಲೂಕು ಮಟ್ಟದ Mock Parliment ನಲ್ಲಿ ಭಾಗವಹಿಸಿದ್ದೇನೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಖಕ್ಕೆ ಆಯ್ಕೆಯಾಗಿ ನಾಲಕ್ಕನೇ ಸ್ಥಾನವನ್ನು ಗಳಿಸಿದ್ದೇನೆ. ನನ್ನ ಎಲ್ಲಾ ಗೆಲುವಿನಲ್ಲು ಮತ್ತು ಸಂತೋಷದಲ್ಲು ನನ್ನ ಜೊತೆಗಿದ್ದು ನನ್ನನ್ನು ಪ್ರೋತ್ಸಾಹಿಸುತ್ತಿದ್ದವರು ನನ್ನ ತಾಯಿ. ಮುಂದೆ ನಾನು ಚೆನ್ನಾಗಿ ಕಲಿತು ಅಧ್ಯಾಪಕನಾಗಬೇಕೆಂಬ ಗುರಿಯನ್ನು ಹೊಂದಿದ್ದೇನೆ.

ಕಠಿಣ ಪರಿಶ್ರಮ ಮತ್ತು ಸಕಾರಾತ್ಮಕ ಚಿಂತನೆಗಳು ವಿಜಯವನ್ನು ತರುತ್ತದೆಹಾಗು ಭಗವಂತನ ಕಾಲವು ಕೈ ಹಿಡಿದರೆ ಹಾಗು ಸಕರಾತ್ಮಕ ಪರಿಸರವು ಹೊಂದಿದ್ದರೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬ ಧ್ಯೇಯ ವಾಕ್ಯವನ್ನು ಹೊಂದಿದ್ದೇನೆ. ಇವೆಲ್ಲವು ನಮಗೆ ದೊರೆತರೆ ಯಶಸ್ಸು ಖಂಡಿತ.

ಆನ್ವಿತ್ ಜಿ. ಕುಮಾರ್ / ೧೬೧೧೦೪ / ೧ ಬಿ. ಎ. "ಎ" ವಿಭಾಗ.