ವಿಷಯಕ್ಕೆ ಹೋಗು

ಎಡ್ವರ್ಡ್ ವಿಲಿಯಮ್ಸ್ ಮಾರ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಡ್ವರ್ಡ್ ವಿಲಿಯಮ್ಸ್ ಮಾರ್ಲೆ
Born
ಎಡ್ವರ್ಡ್ ವಿಲಿಯಮ್ಸ್ ಮಾರ್ಲೆ

೧೮೩೮ ಜನವರಿ ೨೯
ಅಮೇರಿಕ
Nationalityಅಮೇರಿಕ

ಅಮೇರಿಕದ ಭೌತವಿಜ್ಞಾನಿಯಾಗಿದ್ದ ಎಡ್ವರ್ಡ್ ವಿಲಿಯಮ್ಸ್ ಮಾರ್ಲೆಯವರು ೧೮೩೮ರ ಜನವರಿ ೨೯ರಂದು ನ್ಯೂಜೆರ್ಸಿಯ ನ್ಯೂಆರ್ಕ್‌ನಲ್ಲಿ ಜನಿಸಿದರು. ಮಾರ್ಲೆಯವರು ನಿಖರವಾದ ಉಪಕರಣಗಳನ್ನು ಉಪಯೋಗಿಸಿ ಪ್ರಯೋಗಗಳನ್ನು ಮಾಡುವುದರಲ್ಲಿ ನಿರತರಾಗಿದ್ದರು. ಅವರು ತಯಾರಿಸಿದ ‘ಅನಿಲಮಾಪಕ’ವನ್ನು (eudiometer) ವಾಯುವಿನ ಶೈತ್ಯತರಂಗಗಳ ಮೂಲದ ಬಗ್ಗೆ ಇದ್ದ ಸಿದ್ಧಾಂತಗಳನ್ನು ಪರೀಕ್ಷಿಸಲು ಉಪಯೋಗಿಸಿದ. ನಂತರ ೧೮೮೫ರಲ್ಲಿ ಜರ್ಮನಿಯ ವಿಜ್ಞಾನಿ ಮಿಕೇಲ್‌ಸನ್‌ರವರ (೧೮೫೨-೧೯೩೧) ಜೊತೆ ಪ್ರಯೋಗಗಳನ್ನು ಮಾಡಿದರು. ಮಿಕೇಲ್‌ಸನ್‌ರವರು ೧೮೮೧ರಲ್ಲಿ ತಯಾರಿಸಿದ್ದ ವ್ಯತಿಕರಣಮಾಪಕವನ್ನು ಇಬ್ಬರೂ ಸೇರಿ ಪರಿಷ್ಕರಿಸಿದರು. ನಂತರ ಬೆಳಕಿನ ವೇಗ ಸ್ಥಿರವಾಗಿರುತ್ತದೆ, ಅದು ಯಾವ ವೀಕ್ಷಕನ ಚಲನೆಯ ಮೇಲೆ ಸಂಬಂಧಿತವಾಗಿರುವುದಿಲ್ಲ ಎಂಬುದಾಗಿ ಇಬ್ಬರೂ ಕಂಡುಹಿಡಿದರು. ಬೆಳಕಿನ ತರಂಗಗಳ ಸಂಚರಣೆಗೆ ಈಥರ್ ಮಾಧ್ಯಮವಾಗಿದೆ ಎನ್ನುವ ವಿಷಯ ಸುಳ್ಳು ಎಂಬುದಾಗಿ ಅವರಿಬ್ಬರೂ ಪ್ರಯೋಗಗಳ ಮೂಲಕ ರುಜುವಾತು ಮಾಡಿದರು. ಆ ಪ್ರಯೋಗ ‘ಮಿಕೇಲ್‌ಸನ್-ಮಾರ್ಲೆ ಪ್ರಯೋಗ’ ಎಂದೇ ಪ್ರಸಿದ್ಧಿಯಾಗಿದೆ.[] ಆ ಪ್ರಯೋಗದ ಪರಿಣಾಮಗಳು ಪ್ರಖ್ಯಾತ ವಿಜ್ಞಾನಿ ಐನ್‌ಸ್ಟೈನ್‌ರವರು (೧೮೭೯-೧೯೫೫) ೧೯೦೫ರಲ್ಲಿ ಪ್ರತಿಪಾದಿಸಿದ ‘ವಿಶೇಷ ಸಾಪೇಕ್ಷತಾ ಸಿದ್ಧಾಂತ’ಕ್ಕೆ (special theory of relativity) ಪ್ರಮುಖ ಆಕರ ಪ್ರಯೋಗವಾಯಿತು.[] ಮಾರ್ಲೆರವರು ೧೮೯೫ರಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್‌ಗಳ ಸಾಂದ್ರತೆಗಳನ್ನು ಕಂಡುಹಿಡಿದು, ಅವುಗಳ ನಿಷ್ಟತ್ತಿಯನ್ನು ೧:೧೫.೮೭೯ ಎಂಬುದಾಗಿ ನಿಖರವಾಗಿ ಕಂಡುಹಿಡಿದರು. ಮಾರ್ಲೆಯವರು ೧೯೨೩ರ ಫೆಬ್ರವರಿ ೨೪ರಂದು ಕೊನಾಕ್ಟಿಕಟ್‌ನ ವೆಸ್ಟ್ ಹಾರ್ಟ್‌ಫೋರ್ಡ್‌ನಲ್ಲಿ ನಿಧನರಾದರು.

ಉಲ್ಲೇಖಗಳು

[ಬದಲಾಯಿಸಿ]