ಅರ್ನೆಸ್ಟ್ ಸಾಲ್ವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರ್ನೆಸ್ಟ್ ಸಾಲ್ವೆ
ಅರ್ನೆಸ್ಟ್ ಸಾಲ್ವೆ
Born
ಅರ್ನೆಸ್ಟ್ ಸಾಲ್ವೆ

೧೬ ಏಪ್ರಿಲ್ ೧೮೩೮
ಬ್ರಸೆಲ್ಸ್

ಬೆಲ್ಜಿಯಂನ ಕೈಗಾರಿಕಾ ರಸಾಯನವಿಜ್ಞಾನಿಯಾಗಿದ್ದ ಅರ್ನೆಸ್ಟ್ ಸಾಲ್ವೆಯವರು ೧೮೩೮ರ ಏಪ್ರಿಲ್ ೧೬ರಂದು ಬ್ರಸೆಲ್ಸ್ ಹತ್ತಿರದ ರೆಬೆಕ್-ರೋಗ್ನನ್ನಲ್ಲಿ ಜನಿಸಿದರು. ಸುಮಾರು ೧೮೬೧ರಲ್ಲಿ ಸಾಲ್ವೆಯವರು ಸೋಡಿಯಂ ಕಾರ್ಬೋನೇಟ್ನನ್ನು ಅಧಿಕ ಪ್ರಮಾಣದಲ್ಲಿ ತಯಾರಿಸಲು ಸಹಾಯಕವಾದ ಕಅಮೋನಿಯಾ-ಸೋಡ ಪ್ರಕ್ರಿಯೆಕಿಯನ್ನು ಕಂಡುಹಿಡಿದರು. ಅದಕ್ಕೆ ಕಸಾಲ್ವೆ ಪ್ರಕ್ರಿಯೆಕಿ (Solvay process) ಎಂದೂ ಕರೆಯಲಾಗಿದೆ.[೧] ೧೮೬೩ರಲ್ಲಿ ಸಾಲ್ವೆಯವರು ಸೋಡಿಯಂ ಕಾರ್ಬೋನೇಟನ್ನು ತಯಾರಿಸುವ ತಮ್ಮ ಮೊದಲ ಕಾರ್ಖಾನೆಯನ್ನು ಬೆಲ್ಜಿಯಂನ ಕೋಲ್ಲೆಟ್ನಲ್ಲಿ ಸ್ಥಾಪಿಸಿದರು. ನಂತರ ೧೮೭೨ರಲ್ಲಿ ಸಾಲ್ವೆಯವರು ತಮ್ಮ ಸಂಶೋಧನೆಯ ಪೇಟೆಂಟ್ ಗಳಿಸಿದರು.[೨] ಸಾಲ್ವೆಯವರು ೧೮೬೦ರ ಹೊತ್ತಿಗೆ ಅಮೋನಿಯಾ-ಸೋಡಾ ಪ್ರಕ್ರಿಯೆಯನ್ನು ಸಂಶೋಧಿಸಿದ ಮೇಲೆ ಲೆಬ್ಲಾಂಕ್ರವರು (೧೭೪೨-೧೮೦೬) ಸಂಶೋಧಿಸಿದ್ದ ಕಲೆಬ್ಲಾಂಕ್ ವಿಧಾನಕಿ ಮೂಲೆಗುಂಪಾಯಿತು. ಸಾಲ್ವೆಯವರು ೧೯೨೨ರ ಮೇ ೨೬ರಂದು ಬ್ರಸೆಲ್ಸ್ನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]