ಆಗೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಗೈಟ್
General
ವರ್ಗInosilicates
ರಾಸಾಯನಿಕ ಸೂತ್ರ(Ca,Na)(Mg,Fe,Al,Ti)(Si,Al)2O6
ಸ್ಟ್ರೋಂಝ್ ವರ್ಗೀಕರಣ09.DA.15
ಸ್ಫಟಿಕ ಸಮರೂಪತೆMonoclinic prismatic
H-M symbol: (2/m)
Space group: C 2/c
ಏಕಕೋಶa = 9.699 Å, b = 8.844 Å, c = 5.272 Å; β = 106.97°; Z=4
Identification
ಬಣ್ಣBlack, brown, greenish, violet-brown; in thin section, colorless to gray with zoning common
ಸ್ಫಟಿಕ ಗುಣಲಕ್ಷಣCommonly as stubby prismatic crystals, also acicular, skeletal, dendritic
ಸ್ಫಟಿಕ ಪದ್ಧತಿMonoclinic
ಅವಳಿ ಸಂಯೋಜನೆSimple or multiple on {100} and {001}
ಸೀಳು{110} good with 87° between {110} and {110}; parting on {100} and {010}
ಬಿರಿತuneven to conchoidal
ಜಿಗುಟುತನbrittle
ಮೋಸ್ ಮಾಪಕ ಗಡಸುತನ5.5 to 6
ಹೊಳಪುVitreous, resinous to dull
ಪುಡಿಗೆರೆGreenish-white
ಪಾರದರ್ಶಕತೆTransparent to opaque
ವಿಶಿಷ್ಟ ಗುರುತ್ವ3.19 - 3.56
ದ್ಯುತಿ ಗುಣಗಳುBiaxial (+)
ವಕ್ರೀಕರಣ ಸೂಚಿnα = 1.680 - 1.735, nβ = 1.684 - 1.741, nγ = 1.706 - 1.774
ದ್ವಿವಕ್ರೀಭವನδ = 0.026 - 0.039
ಬಹುವರ್ಣಕತೆX = pale green, pale brown, green, greenish yellow; Y = pale brown, pale yellow-green, violet; Z = pale green, grayish green, violet
ಉಲ್ಲೇಖಗಳು[೧][೨][೩]

ಆಗೈಟ್ ಪೈರಾಕ್ಸೀನ್ ವರ್ಗದ ಮುಖ್ಯ ಖನಿಜ.

ರಾಸಾಯನಿಕ ಸಂಯೋಜನೆ[ಬದಲಾಯಿಸಿ]

ರಾಸಾಯನಿಕ ಸಂಯೋಜನೆಯಲ್ಲಿ ಇದು ಕ್ಯಾಲ್ಸಿಯಂ, ಮೆಗ್ನೀಸಿಯಂ, ಕಬ್ಬಿಣ ಮತ್ತು ಅಲ್ಯುಮಿನಿಯಂ ಸಿಲಿಕೇಟ್. ರಾಸಾಯನಿಕ ಸೂತ್ರ: (Ca,Na)(Mg,Fe,Al,Ti)(Si,Al)2O6.

ರಚನೆ[ಬದಲಾಯಿಸಿ]

ಈ ಖನಿಜ ಮಾನೊಕ್ಲಿನಿಕ್ ವರ್ಗಕ್ಕೆ ಸೇರಿದ ಹರಳುಗಳಾಗಿ ರೂಪುಗೊಂಡಿರುತ್ತದೆ. ಹರಳುಗಳು ಗಾತ್ರದಲ್ಲಿ ಕೊಂಚ ದಪ್ಪ. ಹಲವು ವೇಳೆ ಮುದ್ದೆಯಾಗಿ, ಮಂದವಾದ ಪದರಗಳೋಪಾದಿಯಲ್ಲಿ ಅಥವಾ ಕಣಗಳ ಮುದ್ದೆಯಾಗಿ ಕಂಡುಬರುವುದೂ ಉಂಟು. ಅವಳಿ ಹರಳುಗಳೂ ಆಗಾಗ ಸಿಗುತ್ತವೆ. ಬಣ್ಣದಲ್ಲಿ ಕಪ್ಪು ಮತ್ತು ಹಸಿರು ಮಿಶ್ರಿತ ಕಪ್ಪು. ಒರೆಗೆ ಬಣ್ಣವಿಲ್ಲ, ಹೊಳಪಿನಲ್ಲಿ ಗಾಜಿನಂತೆ ಅಥವಾ ಗೋಂದಿನಂತೆ. ಮಿತಪಾರದರ್ಶಕ ಅಥವಾ ಅಪಾರದರ್ಶಕ. ಉತ್ತಮ ಬಗೆಯ ಸಾಮಾನ್ಯವಾಗಿ ಒಂದೇ ವರ್ಗದ ಪ್ರಿಸ್‍ಮ್ಯಾಟಿಕ್ ಸೀಳುಗಳು. ಹಲವು ಬಾರಿ ಎರಡು ಬಗೆಯ ಸೀಳುಗಳಿದ್ದು ಪರಸ್ಪರ ಚೌಕಾಕೃತಿಯಲ್ಲಿ ಛೇದಿತವಾಗುತ್ತವೆ. ಕಾಠಿಣ್ಯ 5-6; ಚಾಕುವಿನ ಅಲಗಿನಿಂದ ಕಷ್ಟಪಟ್ಟು ಗೀರಬಹುದು.

ದೊರೆಯುವಿಕೆ[ಬದಲಾಯಿಸಿ]

ಈ ಖನಿಜದ ಹಸಿರು ಬಣ್ಣದ ಬಗೆಯನ್ನು ಡಯಲೇಜ್ ಎನ್ನುತ್ತಾರೆ. ಇದು ಮಿತಪಾರದರ್ಶಕವಾಗಿದ್ದು ಕಂಚಿನಂತೆ ಹೊಳೆಯುತ್ತದೆ. ಆಗೈಟ್ ಬಹುಮಟ್ಟಗೆ ಅಗ್ನಿ ಶಿಲಾವರ್ಗದ ಆಂಡಿಸೈಟ್, ಬೆಸಾಲ್ಟ್,ಡಾಲರೈಟ್ ಗ್ಯಾಬ್ರೋಗಳಲ್ಲೂ ರೂಪಾಂತರ ವರ್ಗಕ್ಕೆ ಸೇರಿದ ನೈಸ್ ಮತ್ತು ಗ್ರ್ಯಾಸ್ಯುಲೈಟ್‍ಗಳಲ್ಲೂ ಕಂಡುಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಆಗೈಟ್&oldid=907821" ಇಂದ ಪಡೆಯಲ್ಪಟ್ಟಿದೆ