ಸಂಜುಕ್ತ ಪರಶರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಜುಕ್ತ ಪರಶರ್
ಸಂಜುಕ್ತ ಪರಶರ್ ಐ.ಪಿ.ಎಸ್
ರಾಷ್ಟ್ರೀಯತೆಭಾರತ

ಸಂಜುಕ್ತ ಪರಶರ್ ಒಂದು ಸಾಧಾರಣ ಮಹಿಳೆ ಅಲ್ಲ. ಇವರನ್ನು ಕಂಡರೆ ಬೋಡೊ ಮಿಲಿಟನ್ಟ್ಸ್ ಕೂಡ ಹೆದರುವರು. ಇವರು ಅಸ್ಸಾಂಮಿನ ಐ.ಪಿ.ಎಸ್ ಆಫೀಸರ್ ಆಗಿದರು. ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಅಸ್ಸಾಂ, ಸೋನಿತ್ಪುರ್ ನಗರಗಳಲ್ಲಿ ಇವರ ಹದಿನೆಂಟು ತಿಂಗಳ ಕೆಲಸದ ಅವಧಿಯಲ್ಲೇ 'ಬೋಡೊ ಮಿಲಿಟನ್ಟ್ಸ್' ರಲ್ಲಿ ಭಯವೇರಿಸಿದ್ದಾರೆ. ಇವರು ಮಹಿಳೆಯರಿಗೆ ಅದರಲ್ಲೂ ಅಸ್ಸಾಂಮಿನ ಮಹಿಳೆಯರಿಗೆ ಒಂದು ಉದಾಹರಣೆಯಾಗಿದ್ದಾರೆ. ಇವರು ಯಾರೇ ಏನೇ ತಪ್ಪು ಮಾಡಿದಲ್ಲಿ ತಮ್ಮ ಉಪಕರಣಗಳನ್ನು ಬಳಸಲು ಹಿಂಜರಿಯುವುದಿಲ್ಲ. ಕಳೆದ ಒಂದಷ್ಟು ತಿಂಗಳಲ್ಲಿ, ೬೪ ಮಿಲಿಟನ್ಟ್ಸ್ ರನ್ನು ಅರೆಸ್ಟ್ ಮಾಡಿದ್ದಾರೆ.

ಜೀವನ[ಬದಲಾಯಿಸಿ]

ಇವರು ಅಕ್ಟೋಬರ್ ೩, ೧೯೭೯ ರಂದು ಹುಟ್ಟಿದರು. ಇವರು ಆಗಸ್ಟ್ ೨೯, ೨೦೦೬ರಲ್ಲಿ ಐ.ಪಿ.ಎಸ್ ಕಾರ್ಯವನ್ನು ಶುರು ಮಾಡಿದರು. ಇವರು ಅಸ್ಸಾಂಮಿನ ಮೊದಲ ಐಪಿಎಸ್ ಆಫೀಸರ್ ಎಂಬ ಹೆಮ್ಮೆಯಿದೆ. ಇವರ ತಾಯಿ ಮೀನಾ ದೇವಿ ಅಸ್ಸಾಂಮಿನ ಆರೋಗ್ಯ ಕೇಂದ್ರದಲ್ಲಿ ಕಾರ್ಯ ವಹಿಸಿದರು. ಇವರ ತಂದೆ ದುಲಾಲ್ ಚಂದ್ರ ಬರುಆ ಇರಿಗೇಷನ್ ಇಲಾಖೆಯ ಇಂಜಿನಿಯರ್ ಆಗಿ ಕಾರ್ಯ ವಹಿಸಿದರು. ಸಂಜುಕ್ತ ತಮ್ಮ ಹತ್ತನೆಯ ತರಗತಿಯನ್ನು ಹೋಲಿ ಚೈಲ್ಡ್ ಶಾಲೆಯಲ್ಲಿ ಮುಗಿಸಿ, ಹನ್ನೆರಡನೆಯ ತರಗತಿಯನ್ನು ಆರ್ಮಿ ಶಾಲೆಯಲ್ಲಿ ಮುಗಿಸಿದರು.

ಇವರು ಪೊಲೀಸ್ ಆಫೀಸರ್ ಅಲ್ಲದೆ, ಒಬ್ಬ ಪಂಡಿತೆ ಕೂಡ. ಇವರು ತಮ್ಮ ಗ್ರಾಜುಯೇಷನ್ ಯನ್ನು ದಿಲ್ಲಿಯಲ್ಲಿ ಮುಗಿಸಿ, ತಮ್ಮ ಮಾಸ್ಟರ್ಸ್, ಎಂ.ಫಿಲ್, ಪಿ.ಹೆಚ್.ಡಿಯನ್ನು ದಿಲ್ಲಿಯ ಜವಹರ್ ಲಾಲ್ ನೆಹರು ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿದರು. ಈ ಕಾರಣದಿಂದಲೇ ಪೊಲೀಸ್ ವೆಬ್ಸೈಟ್ ನಲ್ಲಿ ಇವರ ಹೆಸರನ್ನು ಡಾ.ಶ್ರೀಮತಿ.ಸಂಜುಕ್ತ ಪರಶರ್, ಐ.ಪಿ.ಎಸ್ ಎಂದು ಬರೆಯಲಾಗಿದೆ. ಇವರು ತಮ್ಮ ಚಿಕ್ಕಂದಿನಿಂದಲ್ಲೇ ಶಾಲೆಯ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದರು. ಇವರಿಗೆ ಈಜುವುದು, ಶಾಲೆಯ ಕ್ರೀಡೆಗಳಲ್ಲಿ ಸ್ಪರ್ಧಿಸುವುದು, ಏಕ ಪಾತ್ರ ಅಭಿನಯ ಮತ್ತು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದರು.

ಶಿಕ್ಷಣ[ಬದಲಾಯಿಸಿ]

ಇವರು ಸ್ಕೂಲ್ ಮುಗಿದ ಮೇಲೆ ಬ್ಯಾಚುಲರ್ ಡಿಗ್ರಿಯನ್ನು ರಾಜ್ಯಶಾಸ್ತ್ರದಲ್ಲಿ ಐ.ಪಿ ಕಾಲೇಜ್, ದೆಹಲಿ ಯೂನಿವರ್ಸಿಟಿಯಲ್ಲಿ ಮುಗಿಸಿದರು [೧] ಸಂಜುಕ್ತ ತಮ್ಮ ಮಾಸ್ಟರ್ಸ್ ರನ್ನು ಅಂತರಾಷ್ಟ್ರೀಯ ಸಂಬಂಧದ ಬಗೆ ಜೆ,ಎನ್.ಯು ದೆಹಲಿಯಲ್ಲಿ ಮಾಡಿದರು. ಇದರ ನಂತರ ವಿದೇಶಾಂಗ ನೀತಿಯಲ್ಲಿ ಪಿ.ಹೆಚ್.ಡಿಯನ್ನು ಪಡೆದರು. ಸಂಜುಕ್ತರನ್ನು ಹೆಮ್ಮೆಯಿಂದ ಡಾ. ಸಂಜುಕ್ತ ಪರಶರ್ ರಂದು ಕರೆಯಬಹುದು. ಸಂಜುಕ್ತ ಯು.ಪಿ.ಎಸ್.ಸಿಯಲ್ಲಿ ಎಂಬತ್ತು ಐದು ನೆಯ ಸ್ಥಳ ಪಡೆದುಕೊಂಡರು [೨]. ಇದರಿಂದ ಇವರು ಪೊಲೀಸ್ ಗೆ ಸೇರಬೇಕೆಂದು ಇಚ್ಛಿಸಿದರು. ಇವರು ಅಸ್ಸಾಮಿಯ ಮೊದಲ ಮಹಿಳೆ ಐ.ಪಿ.ಎಸ್ ಆಫೀಸರ್ ಮಾತ್ರ. ಇವರಿಗೆ ಕ್ರೀಡೆಯೆಂದರೆ ಬಹಳ ಇಷ್ಟ. ಇವರು ಶಾಲೆಯಲ್ಲಿ ಓದುವಾಗ ಅನೇಕ ಕ್ರೀಡೆಯ ಕಾರ್ಯಕ್ರಮದಲ್ಲಿ ಭಾಗವಯಿಸಿದರು. ಇವರು ಈಜುವನ್ನು ಕಲಿತ್ತು ಸ್ಪರ್ಧೆಯಲ್ಲಿ ಕೂಡ ಭಾಗವಯಿಸಿದರು. ಇವರು ಮಾರ್ಚ್ ಫಾಸ್ಟ್ ಮತ್ತು ಅನೇಕ ನಾಟಕದಲ್ಲಿ ಕೂಡ ಭಾಗಿಯಾಗಿದರು.

ಸಂಜುಕ್ತ ಮತ್ತು ಆಟಗಾರರ ಭೇಟಿ

ಕಾರ್ಯ[ಬದಲಾಯಿಸಿ]

ಸಂಜುಕ್ತ ೨೦೦೬ನೆಯ, ಐಪಿಎಸ್ ಆಫೀಸರ್ ತಂಡಕ್ಕೆ ಸೇರಿದವರು. ಇವರನ್ನು ಮೊದಲು ಸಹಾಯಕ ಕಮಾಂಡೆಂಟ್, ಮಾಕುಂಮನಲ್ಲಿ ಪೋಸ್ಟ್ ಮಾಡಿದರು. ಸಂಜುಕ್ತರಿಗೆ ಶೀಘ್ರದಲ್ಲಿ ಬೊಡೊ ಮತ್ತು ಅಕ್ರಮ ಬಾಂಗ್ಲಾದೇಶದ ಉಗ್ರಗಾಮಿಗಳ ಘರ್ಷಣೆಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ನೀಡಿದರು. ಇವರು ಕೇವಲ ಹದಿನೈದು ತಿಂಗಳಲ್ಲಿ, ಹದಿನಾರು ಉಗ್ರಗಾಮಿಗಳನ್ನು ಕೆಲಸದಿಂದ ತ್ಯಜಿಸಿದರು. ಅರವತೈದರ ಮೇಲೆ ಬಂಧಿಸಿ ಅವರ ಆಯುಧ ಮತ್ತು ಮದ್ದುಗುಂಡು ವಶಪಡಿಸಿಕೊಂಡರು. ಇವರು ನಿವೇದಿಸುವ ತಂಡದ ಜೋತೆಗೆ ಸೇನೆಯ ಬೆಂಗಾವಲರ ಮೇಲೆ ದಾಳಿ ಮಾಡಿರುವ ಉಗ್ರಗಾಮಿಗಳನ್ನು ಬಂಧಿಸಿದರು. ಇವರು ಇದಕ್ಕೆ ಸುಪರಿಚಿತರಾಗಿದ್ದಾರೆ [೩]

ಇವರು ಪುರು ಗುಪ್ತ ಜೋತೆಗೆ ಮದುವೆಯಾದರು. ಇವರು ಚೀರಾಂಗ್ ಜಿಲ್ಲೆಯ ಅಸ್ಸಾಂನಲ್ಲಿ ಐ.ಎ.ಎಸ್ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದರು. ಸಂಜುಕ್ತ ಮತ್ತು ಅವರ ಗಂಡ ಕೆಳವೆ ಸಮಯ ಮಾತ್ರ ಒಂದಾಗಿ ಕಳೆಯುತ್ತಾರೆ. ಇವರಿಗೆ ಒಬ್ಬ ಮಗನಿದಾನೆ. ಅವನನ್ನು ನೋಡಿಕೊಳ್ಳಲು ಸಂಜುಕ್ತ ಇಲ್ಲದಿದರೆ, ಅವರ ತಾಯಿ ನೋಡಿಕೊಳ್ಳುತ್ತಾರೆ [೪]. ಸಂಜುಕ್ತ ಸೋನಿತಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅವರ ತಂಡವನ್ನು ಸಿ.ಆರ್.ಪಿ.ಎಫ್ ಜವಾನ್ ಜೊತೆ ಎ.ಕೆ-೪೭ ಭಯೋತ್ಪಾದನೆಯ ಇನ್ಛೆಸ್ಟೆಡ್ ಸ್ಥಳದ ಕಡೆ ಮುಂದುವರಿಸಿದರು. ಸಂಜುಕ್ತ ಎಲ್ಲರು ಭಯ ಪಡುವ ಪೊಲೀಸ್ ಆಫೀಸರ್ ರಾಗಿ ಬೊಡೊ ಉಗ್ರಗಾಮಿಗಳ ನಡುವೆ ಬೆಳೆದರು [೫]. ಸಂಜುಕ್ತ ಅವರು ಬಹಳ ವಿನೀತ ಮತ್ತು ಪ್ರಿಯ ವ್ಯಕ್ತಿ. ಇವರು ಕಠಿಣ ಪೊಲೀಸ್ ಕೆಲಸ ಮಾಡುವರ ಜೊತೆಗೆ ಇವರು ಕೆಳವು ದಿನ 'ಶಮನ ಗುಡಾರ' ಹೋಗಿ ಜನರನ್ನು ಭೇಟಿ ಮಾಡುವರು. ಇವರು ಹೆಲ್ಮೆಟ್ ಹಾಕ್ಕಿ ಗಾಡಿ ಓಡಿಸುವರಿಗೆ ಮಿಠಾಯಿ ಕೊಡುತ್ತಿದರು.

ಇವರಿಗೆ ಎನ್.ಡಿ.ಎಫ್.ಬಿ ಕಡೆಯಿಂದ ಹಲವು ಬಾರಿ ಹೆದರಿಸಿದರು ಆದರೆ ಈ ಹೆದರಿಕ್ಕೆ ಸಂಜುಕ್ತರ ಕೆಲಸಕ್ಕೆ ಅಡ್ಡಿಯಾಗಿರಲಿಲ್ಲ. ಅವರು ತಮ್ಮ ಕರ್ತವ್ಯ ಸರಿಯಾಗಿ ನಿರ್ವಯಿಸಿದರು. ಇವರು ಹೇಳುವರು - ಬರೆ ಕ್ರಿಮಿನಲ್ ಮಾತ್ರ ಭಯ ಪಡಬೇಕು.


ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಐ.ಪಿ.ಕಾಲೇಜ ದೆಹಲಿ".
  2. "ಪೊಲೀಸ್ ಆಗುವ ಇಚ್ಛೆ".
  3. "ಬೊಂಡೊ ಉಗ್ರಗಾಮಿ".
  4. "ವಿಷೆಯ ಗುಣ". Archived from the original on 2016-03-25. Retrieved 2016-03-12.
  5. "ಧೈಯ ಮಹಿಳೆ ಸಂಜುಕ್ತ". Archived from the original on 2016-03-09. Retrieved 2016-03-12.