ಸದಸ್ಯ:Anoosha k/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಧಾಯುಷ್ಯ[ಬದಲಾಯಿಸಿ]

ರೇಡಿಯಂ


ಅರ್ಧಾಯುಷ್ಯದ ನೀಲಿನಕ್ಷೆ

ಯುರೇನಿಯಂ ಅದಿರಿನಲ್ಲಿ ಲೆಡ್-ಸೀಸವು ಸಿಕ್ಕುತ್ತದೆ. ಇದಕ್ಕೆ ಕಾರಣ ಕಲಾಂತರದಲ್ಲಿ ಯುರೇನಿಯಂ ಆಲ್ಫಾಕಣಗಳ ಮೂಲಕ ಬೇರೊಂದು ಧಾತು ಆಗುವುದೇ ಆಗಿದೆ. ಹೀಗಾಗಿ ಯುರೇನಿಯಂನ ಅದಿರಿನಲ್ಲಿ ಸೀಸ ಧಾತು ದೊರೆಯುತ್ತದೆ. ಇದೇ ರೀತಿಯ ಧಾತುವಿನ ಬದಲಾವಣೆಯು ಪ್ರತಿಯೊಂದು ವಿಕಿರಣಶೀಲ ಧಾತುಗಳಲ್ಲೂ ಕಂಡುಬರುತ್ತದೆ.

ವಿಕಿರಣ ಧಾತು ಬೇರೊಂದು ಧಾತುವಾಗಿ ಬದಲಾಗಲು ಬೇಕಾಗುವ ಕಾಲಾವಧಿ[ಬದಲಾಯಿಸಿ]

ಕೆಲವು ವಿಕಿರಣಶೀಲ ಧಾತುಗಳ ಅಣುಗಳು, ಆಲ್ಫಾಕಣಗಳನ್ನು ಹೊರಚಿಮ್ಮಿಸುವ ಪ್ರಮಾಣದ ಮೂಲಕ ಭೌತವಿಜ್ಞಾನಿಗಳು ವಿಕಿರಣಶೀಲ ಧಾತುಗಳ ಅರ್ಧಾಯುಷ್ಯವನ್ನು ಕಂಡುಹಿಡಿದಿದ್ದಾರೆ.

ಮೇರಿಕ್ಯೂರಿ ಕಂಡುಹಿಡಿದ ರೇಡಿಯಂ ವಿಕಿರಣ ಧಾತುವಿನ ಕ್ಷಯಿಸುವ ಅರ್ಧಕಾಲಮಾನ ೧೬೦೦ ವರ್ಷಗಳಾಗಿವೆ. ಅಂದರೆ ೧ಕೆಜಿ ರೇಡಿಯಂ ಧಾತುವನ್ನು ಒಂದು ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಟು ಅನಂತರ ೧೬೦೦ ವರ್ಷಗಳ ನಂತರ ತೆರೆದು ನೋಡಿದಾಗ ಅರ್ಧ ಕೆ.ಜಿ.ರೇಡಿಯಂ ಕಂಡುಬರುತ್ತದೆ.