ವಿಷಯಕ್ಕೆ ಹೋಗು

ಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್
ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ಐಸನ್ಷ್ಟೇನ್, ೧೯೧೦ರ ದಶಕದಲ್ಲಿ
Born
ಸಿರ್ಗೇ ಮಿಕೈಲೊವಿಚ್ ಐಸನ್ಷ್ಟೇನ್

22 ಜನವರಿ 1898 (ಹ.ಶೈ. 10 ಜನವರಿ 1898)
Died11 February 1948(1948-02-11) (aged 50)
Years active1923–1946
Spouseವೇರಾ ಅಟಶೇವಾ (1934–1948; ಅವರ ನಿಧನ)
Awardsಸ್ಟ್ಯಾಲಿನ್ ಪ್ರಶಸ್ತಿಗಳು (1941, 1946)

ಐಸನ್ಷ್ಟೇನ್, ಸಿರ್ಗೇ ಮಿಕೈಲೊವಿಚ್: (22 ಜನವರಿ [O.S. 10 January] 1898 – 11 ಫೆಬ್ರವರಿ 1948) ರಷ್ಯದ ಪ್ರಖ್ಯಾತ ಚಲನಚಿತ್ರ ತಂತ್ರನಿಪುಣ.

ಬಾಲ್ಯ

[ಬದಲಾಯಿಸಿ]
Young Sergei with his parents Mikhail and Julia Eisenstein.

ತಂದೆ ಶ್ರೀಮಂತ; ಹಡಗು ನಿರ್ಮಾಪಕ. ಐಸóನ್ಷ್ಟೇನ್ ಸೇಂಟ್ ಪೀಟರ್ಸ್‌ಬರ್ಗ್ನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾಗ ತನ್ನ ಸ್ನೇಹಿತರನೇಕರು ಕೆಂಪು ಸೇನೆಗೆ ಸೇರುತ್ತಿದ್ದುದ್ದನ್ನು ಕಂಡು ತಾನೂ ಅದಕ್ಕೆ ಸೇರಿ ಕ್ರಾಂತಿಯಲ್ಲಿ ಭಾಗವಹಿಸಿದ. ಕ್ರಾಂತಿ ಮುಗಿದಮೇಲೆ ಈತನ ಒಲವು ನಾಟಕ ಕಲೆಯತ್ತ ಹರಿಯಿತು. ಆಗ (1920) ಈತ ಅದರಲ್ಲಿ ದೃಶ್ಯ ಚಿತ್ರಕಾರನಾಗಿ ಸೇರಿ ಕೆಲಕಾಲ ಕೆಲಸ ಮಾಡಿದ. ಟ್ರೆಟೈಕೋಫ್ ವಿರಚಿತ ಗ್ಯಾಸ್ ಮಾಸ್ಕ್‌ ನಾಟಕವನ್ನು ರಂಗಭೂಮಿಯ ಮೇಲೆ ತಂದಾಗ ಈತನಿಗೆ ಆ ಕ್ಷೇತ್ರದ ಇತಿಮಿತಿಗಳು ಗೋಚರವಾದುವು.

ಸಾಧನೆಗಳು

[ಬದಲಾಯಿಸಿ]

ಐಸûನ್ಷ್ಟೇನ್ ಚಲನಚಿತ್ರ ಜಗತ್ತನ್ನು ಪ್ರವೇಶಿಸಿ ಸ್ಟ್ರೈಕ್ ಚಿತ್ರ ದಿಗ್ದರ್ಶಿಸಿದ. 1905ರಲ್ಲಿ ನಡೆದ ದಂಗೆಯೊಂದರ ಆಧಾರದ ಮೇಲೆ ರಚಿತವಾದ ಬ್ಯಾಟಲ್ಷಿಪ್ ಪೊಟೆಮ್ಕಿನ್ ಚಿತ್ರ ಹೊರತಂದಾಗ ಈತನಿಗೆ 26 ವರ್ಷ. ಜೀವನದ ವಾಸ್ತವ ಚಿತ್ರಣವೆಂದು ಇದು ವಿಶ್ವವಿಖ್ಯಾತಿ ಪಡೆಯಿತು. ಅನಂತರ ಬಂದ ಡೆನ್ ಡೇಸ್ ದಟ್ ಷುಕ್ ದಿ ವರ್ಲ್ಡ್ ಮತ್ತು ದಿ ಓಲ್ಡ್‌ ಅಂಡ್ ದಿ ನ್ಯೂ ಚಿತ್ರಗಳೂ ಅವನ ಗೌರವ ಹೆಚ್ಚಿಸಿದುವು. ಅಮೆರಿಕಪ್ಯಾರಾಮೌಂಟ್ ಸಂಸ್ಥೆಯ ಆಹ್ವಾನದ ಮೇಲೆ ಹಾಲಿವುಡ್‍ಗೆ ಬಂದ. ಅಲ್ಲಿ ಈತ ಸೃಷ್ಟಿಸಿದ ಚಿತ್ರಗಳಿಗೆ ಅಮೆರಿಕದಲ್ಲಿ ಮನ್ನಣೆ ದೊರಕಲಿಲ್ಲ. ಮೆಕ್ಸಿಕೋವಿನಲ್ಲಿ 14 ತಿಂಗಳು ಕಳೆದ ಅನಂತರ ಐಸûನ್ಷ್ಟೇನ್ ಸೋವಿಯತ್ ಸರ್ಕಾರದ ಆದೇಶದ ಮೇಲೆ ರಷ್ಯಕ್ಕೆ ವಾಪಸ್ಸಾದ. ಅಲ್ಲಿ ಇವನು ದಿಗ್ದರ್ಶಿಸಿದ್ದ ಅಲೆಕ್ಸಾಂಡರ್ ನೆವೆಸ್ಕಿ (1938) ಚಿತ್ರಕ್ಕೆ ಲೆನಿನ್ ಪ್ರಶಸ್ತಿ ದೊರಕಿತು. 16ನೆಯ ಶತಮಾನದಲ್ಲಿದ್ದ ರಷ್ಯದ ಚಕ್ರವರ್ತಿಯಾಗಿದ್ದ ನಾಲ್ಕನೆಯ ಜಾರನ ಜೀವನ ಕಥೆಯೇ ಇವನ ಮುಂದಿನ ಚಿತ್ರವಾದ ಐವಾನ್ ದಿ ಟೆರಿಬಲ್ನ ವಸ್ತು. ಮೂರು ಭಾಗಗಳಲ್ಲಿ ಹಬ್ಬಿದ ಈ ಚಿತ್ರ ಸೋವಿಯತ್ ಕಮ್ಯೂನಿಸಂ ತತ್ತ್ವಕ್ಕೆ ವಿರುದ್ಧವಾದದ್ದೆಂದು ಅಲ್ಲಿನ ಸರ್ಕಾರ ಇದರ 2ನೆಯ ಭಾಗದ ಮೇಲೆ ಹಾಕಿದ ನಿಷೇಧ 1938ರ ವರೆಗೂ ಮುಂದುವರಿಯಿತು.

ಐಸನ್ಷ್ಟೇನ್ 1948ರಲ್ಲಿ ಮಾಸ್ಕೋವಿನಲ್ಲಿ ನಿಧನನಾದ. ಕ್ಲಿಷ್ಟವೂ ಸಂಕೀರ್ಣವೂ ಆದ ಜೀವನ ವ್ಯಾಪಾರಗಳನ್ನು ವಾಸ್ತವತೆಯ ಕಣ್ಣಿಂದ ಕಂಡು ಅವುಗಳನ್ನು ನಿರೂಪಿಸಲು ಪ್ರತಿಮಾ ವಿಧಾನವನ್ನಳವಡಿಸಿದ ಪ್ರಪಥಮನೆಂದು ಐಸನ್ಷ್ಟೇನ್ ಖ್ಯಾತನಾಗಿದ್ದಾನೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]