ಅನಿಲ್ ವಿನಾಯಕ ಗೋಕಾಕ
ಗೋಚರ
ಅನಿಲ್ ವಿನಾಯಕ ಗೋಕಾಕ, ಒಳ್ಳೆಯ ಆಡಳಿತಾಧಿಕಾರಿ, ಉತ್ತಮ ವಾಗ್ಮಿ, ಮತ್ತು ಕವಿ. ಅವರು ಹಲವಾರು ಅತ್ಯುತ್ತಮ ಕೃತಿಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆದಿದ್ದಾರೆ. ಅವರ ತಂದೆ, ವಿನಾಯಕ ಕೃಷ್ಣ ಗೋಕಾಕ ರು ರಚಿಸಿದ ಭಾರತ ಸಿಂಧುರಷ್ಮಿ ಗ್ರಂಥದ ಸಂಪಾದನೆ ಮಾಡಿದ್ದಾರೆ. ಸತ್ಯ ಸಾಯಿಬಾಬಾ ಸಂಸ್ಥೆಯಲ್ಲಿ ಶ್ರೀ. ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ನಲ್ಲಿ ವೈಸ್ ಛಾನ್ಸಲರ್ ಆಗಿ ಕೆಲಸಮಾಡಿದರು. [೧]
ವಿದ್ಯಾರ್ಹತೆಗಳು
[ಬದಲಾಯಿಸಿ]ಅನಿಲ್, ಹೈದರಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ.
ವ್ರುತ್ತಿ ಜೀವನ
[ಬದಲಾಯಿಸಿ]- ೧೯೬೪ ರಲ್ಲಿ ಮಹಾರಾಷ್ಟ್ರ ವಲಯದ ಭಾರತೀಯ ಆಡಳಿತ ಸೇವೆಯಲ್ಲಿದ್ದು ವೃತ್ತಿಜೀವನ ಆರಂಭಿಸಿದರು.
- ೧೯೭೦-೭೨ ರ ವರೆಗೆ,ಮಹಾರಾಷ್ಟ್ರ ರಾಜ್ಯದ ಧುಲೆಯಲ್ಲಿ ಭಾರತೀಯ ಆಡಳಿತ ಸೇವೆಯಲ್ಲಿದ್ದರು.
- ೧೯೭೯-೮೧ ರ ವರೆಗೆ ಮಹಾರಾಷ್ಟ್ರ ರಾಜ್ಯದ ಥಾಣೆಜಿಲ್ಲೆಯ ಕಲೆಕ್ಟರ್ ಆಗಿ,
- ೧೯೮೯-೯೧ ವರೆಗೆ ಮಹಾರಾಷ್ಟ್ರ ಹೌಸಿಂಗ್ ಮತ್ತು ಏರಿಯಾ ಡೆವೆಲಪ್ಮೆಂಟ್ ಅಥಾರಿಟಿಯ ಉಪಾಧ್ಯಕ್ಷ,ಹಾಗೂ ಮುಖ್ಯ ಅಧಿಕಾರಿಯಾಗಿ ಸೇವೆಸಲ್ಲಿಸಿದರು.
- ಗ್ರಾಮೀಣ ವಿಭಾಗ, ಕಾಡಿನ ಅತಿಕ್ರಮಣ,ಗೊಬ್ಬರೋದ್ಯೋಗ,ಇತ್ಯಾದಿಗಳ ಕಾರ್ಯಾಧ್ಯಕ್ಷರಾಗಿ, ಸಮಿತಿಯ ಸಲಹೆಗಾರರಾಗಿ, ಸೇವೆಸಲ್ಲಿಸಿದರು.
ಭಾರತ ಸರ್ಕಾರದ ಸೇವೆಯಲ್ಲಿ
[ಬದಲಾಯಿಸಿ]- ಭಾರತ ಸರಕಾರದ ಇಂಡಸ್ಟ್ರಿಯಲ್ ಡೆವೆಲಪ್ಮೆಂಟ್ ವಿಭಾಗದಲ್ಲಿ ಕಾರ್ಯದರ್ಶಿ,
- ಫುಡ್ ಕಾರ್ಪೊರೇಶನ್(ಇಂಡಿಯ) ನಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್,
- ಟೆಲೆಕಮ್ಯೂನಿಕೇಶನ್ಸ್ ವಿಭಾಗದಲ್ಲಿ,
- ಭಾರತ ಸರಕಾರದ ಗೊಬ್ಬರೋದ್ಯೋಗದ ಕಾರ್ಯದರ್ಶಿ,
ಪ್ರಕಟಿತ ಕೃತಿಗಳು
[ಬದಲಾಯಿಸಿ]- Industrial sickness of India,[೨]
- Telicommunications of India
- ಭಾರತ ಸಿಂಧು ರಷ್ಮಿ ಗ್ರಂಥದ ಸಂಪಾದಕತ್ವ, (ಡಾ.ವಿ.ಕೃ.ಗೋಕಾಕ್ ಬರೆದ)
ನಿವೃತ್ತಿಯನಂತರ ನಿಭಾಯಿಸಿದ ಹಲವು ಪದವಿಗಳು
[ಬದಲಾಯಿಸಿ]- ದ ಇಂಡಿಯನ್ ನ್ಯಾಶನಲ್ ಟ್ರಸ್ಟ್,ಇಂಡಿಯನ್ ಇನ್ಸ್ಟಿ ಟ್ಯೂಟ್ ನಲ್ಲಿ ಮತ್ತು ದ ಇಂಡಿಯನ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್(ಕರ್ನಾಟಕ ಪ್ರಾದೇಶಿಕ ವಿಭಾಗ, ಬೆಂಗಳೂರಿನಲ್ಲಿ)ಸಹಾಯಕರಾಗಿ ಸೇವೆಸಲ್ಲಿಸುತ್ತಿದ್ದಾರೆ.
- ಎನ್ರೋನ್ ಪವರ್ ಕಂಪೆನಿಯಲ್ಲಿ ಸಂಧಾನಗಳಿಗೋಸ್ಕರ ಭಾರತ ಸರಕಾರದ ಪ್ರತಿನಿಧಿಯಾಗಿ ಕೆಲಸಮಾಡಿದರು. [೩]
ನಿವೃತ್ತಿ
[ಬದಲಾಯಿಸಿ]ಮಹಾರಾಷ್ಟ್ರ ರಾಜ್ಯ ಸರಕಾರ,ಹಾಗೂ ಭಾರತ ಸರಕಾರದ ಆಡಳಿತ ವಿಭಾಗದಲ್ಲೂ ಉನ್ನತಹುದ್ದೆಯಲ್ಲಿ ಕೆಲಸಮಾಡಿದ ಎ.ವಿ.ಗೋಕಾಕರು, ೨೦೦೦ ದಲ್ಲಿ ನಿವೃತ್ತರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "LOVE FROM PUTTAPARTHI...ANIL V GOKAK...SAI BABA AVATAR - A PERCEPTION". Archived from the original on 2016-03-05. Retrieved 2015-11-27.
- ↑ , ndia Energy Policy, Laws and Regulations Handbook Volume 1 Strategic ... By IBP, Inc.-A.V.Gokak
- ↑ Centre's assistance to resolve Enron tangle sought, The Hindu, May,30, 2001
ಬಾಹ್ಯಸಂಪರ್ಕಗಳು
[ಬದಲಾಯಿಸಿ]- Photo Gallery, The Union Secretary, Department of Fertilizer, Shri A.V. Gokak inaugurated a seminar on Financial Management and Foreign Exchange in New Delhi on September 27,1999
- TRIPOD.com, Parthi Update, 24-02-2005,Talks by VC and Student,8.05 a.m.Institute Auditorium
- ಉದಯವಾಣಿ, ನವೆಂಬರ್, 25,2015,ಕರ್ನಾಟಕ ಸಂಘ,ಮುಂಬಯಿ,ಮತ್ತು ಡಾ.ವಿ.ಕೆ.ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾವೇರಿ,ಜಂಟಿಯಾಗಿ ಗೋಕಾಕರ ಸಾಹಿತ್ಯ,ಬದುಕುಗಳಬಗ್ಗೆ, ವಿಚಾರ ಸಂಕಿರಣ ಕಾರ್ಯಕ್ರಮ[ಶಾಶ್ವತವಾಗಿ ಮಡಿದ ಕೊಂಡಿ]