ಗಜೇಶ ಮಸಣಯ್ಯನವರ ಪುಣ್ಯಸ್ತ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಜೇಶ ಮಸಣಯ್ಯನವರ ಪುಣ್ಯಸ್ತ್ರೀ
ಜನನ೧೧೬೦
ಅಂಕಿತನಾಮಮಸಣಯ್ಯ ಗಜೇಶಪ್ರಿಯ
ಸಂಗಾತಿ(ಗಳು)ಗಜೇಶ ಮಸಣಯ್ಯ


ಗಜೇಶ ಮಸಣಯ್ಯನವರ ಪುಣ್ಯಸ್ತ್ರೀ [ಬದಲಾಯಿಸಿ]

ಗಜೇಶ ಮಸಣಯ್ಯ ಅಕಲಕೋಟೆ ತಾಲ್ಲೋಕಿನ ಕಂಜಿಗೆ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯೇ ಈ ಗೌಪ್ಯವಚನಕಾರ್ತಿ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಈಕೆಯ ೯ವಚನಗಳು ಹಸ್ತಪ್ರತಿಯಲ್ಲಿ ಲಭ್ಯವಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಈಕೆಯ ವಚನಗಳ ಅಂಕಿತ " ಮಸಣಯ್ಯ ಗಜೇಶಪ್ರಿಯ".

ಪರದಿಂದಲಾಯಿತು ಪರಶಕ್ತಿ
ಪರಶಕ್ತಿಯಿಂದಲೊದಗಿದ ಭೂತಂಗಳು
ಭೂತಂಗಳಿಂದಲೊದಗಿದ ಅಂಗ
ಅಂಗಕ್ಕಾದ ಕರಣೇಂದ್ರಿಯಂಗಳು
ಕರಣೇಂದ್ರಿಯಂಗಳಿಂದಲೊದಗಿದ ವಿಷಯಂಗಳು
ಆ ವಿಷಯಂಗಳ ಪರಮುಖಕ್ಕೆ ತಾ ಶಕ್ತಿಯಾಗಿ
ಭೋಗಿಸಲ್ಪಡೆ ಆತ ನಿರ್ಲೇಪ ಮಸಣಯ್ಯ ಗಜೇಶಪ್ರಿಯ