ಸದಸ್ಯ:Ramya.s 025/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಮಾಗಣಕ

Edward Rowe Mores

ವಿಮಾಗಣಕ ಎಂಬುವವನು ವಿಮಾ ಬಗ್ಗೆ ಲೆಕ್ಕಾಚಾರ ಹಾಕಿ ಮತ್ತು ನಷ್ಟ ಹಾಗೂ ಅನಿಸ್ಚಿತತೆಯ ಬಗ್ಗೆ ತಿಳಿದು ವ್ಯವಹರಿಸುತ್ತಾನೆ.ಇದಕ್ಕೆ ಸಮನಾಂತರವಾದ ಇನ್ನೊಂದು ಉದ್ಯೊಗವೆಂದರೆ ಅಂಕಿ ಸಂಖ್ಯೆ ಶಾಸ್ತ್ರ(actuarial science).ಈ ತರದ ನಷ್ಟಕ್ಕೀಡಾದಂತಹ ವಿಷಯಗಳು ಆಸ್ತಿ ಹೊಣೆಗಾರಿಕೆ ಪತ್ರದ ಎರಡು ಬದಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಸ್ವತ್ತು ವ್ಯವಹಾರ , ಬಾದ್ಯತೆ ವ್ಯವಹಾರ ಮತ್ತು ಮೌಲ್ಯಮಾಪನ ಮಾಡುವ ಕೌಶಲ್ಯವು ಅವಶ್ಯಕವಾಗಿರುತ್ತದೆ. ಇವರು ಆರ್ಥಿಕ ಭದ್ರತೆಯ ಬಗ್ಗೆ ಮತ್ತು ಕರ ನಿರ್ಣಯದ ಬಗ್ಗೆ ತಿಳಿಸಿ ಕೊಡುತ್ತಾರೆ , ಹಾಗೂ ಸಂಕೀರ್ಣತೆ , ಲೆಕ್ಕಾಚಾರ , ಮತ್ತು ಅದರ ತಾಂತ್ರಿಕತೆಯ ಮೇಲೆ ಕೇಂದ್ರಿಕರಿಸುತ್ತಾರೆ.

ಹದಿನೇಳನೇ ಶತಮಾನದಲ್ಲಿ ಅದ್ಯಯನ ಮಾಡಿ ಸಂಭಾವನಿಯತೆ ಮತ್ತು ಕಾಲಾಂತರಗಳಿಂದಲೂ ಗಣಿತ ಶಸ್ತ್ರ ಮತ್ತು ಆರ್ಥಿಕ ಅವಶ್ಯಕತೆ ಸಂಪನ್ಮೂಲ ಸಹ ವೈಜ್ಞಾನಿಕವಾಗಿ ಅಂದಾಜು ಮಾಡಿ ನಷ್ಟಕ್ಕೆ ಈಡಾಗುವುದನ್ನು ಕಡಿಮೆಗೊಳಿಸುತ್ತದೆ. ಇಪ್ಪತ್ತೊಂದನೆ ಶತಮಾನದ ವಿಮಾಗಣಕರು ವಿಭಜನಾತ್ಮಕ ಕಲೆ , ತರ್ಕ ವ್ಯವಹಾರ ವಿಜ್ಞಾನ , ಮನುಷ್ಯರ ನಡತೆಯ ಬಗ್ಗೆ ಅರ್ಥಮಾಡಿಕೊಳ್ಳುವುದು ಮತ್ತು ತಿಳಿಸುವ ಕ್ರಮವನ್ನು ರಚನೆ ಮಾಡುವುದು ಮತ್ತು ಕಾರ್ಯಕ್ರಮಗಳನ್ನು ನಿರ್ವಹಿಸುವುದು , ನಷ್ತಕ್ಕೀಡಾಗುವುದನ್ನು ಕಡಿಮೆಗೊಳಿಸುತ್ತದೆ.

ಜವಾಬ್ದಾರಿಗಳು[ಬದಲಾಯಿಸಿ]

ಸಾಮಾನ್ಯವಾಗಿ ವಿಮಾಗಣಕ ಎಂಬುವವನು ಗಣಿತಶಾಸ್ತ್ರ , ಅದರಲ್ಲೂ ಸಂಭಾವನೀಯತೆಯ ಕಲನಶಾಸ್ತ್ರ , ಹಾಗೂ ಸಂಶೋಧನೆ ಅಂಕಿ ಸಂಖ್ಯೆಗಳಲ್ಲಿ ಪ್ರತಿಭಾವಂತನಾಗಿರಬೇಕು. ಈ ಕೌಶಲ್ಯವು ವಿಮೆಯ ಬಗ್ಗೆ ಗಣನೆ ಮಾಡುವಲ್ಲಿ ಅವನಿಗೆ ಉಪಕಾರಿಯಾಗಿರುತ್ತದೆ ಹಾಗೂ ಅದ‍ಅಲ್ಲದೆ ಅರ್ಥಶಾಸ್ತ್ರ , ಗಣಕ ವಿಜ್ಞಾನ , ಆರ್ಥಿಕ ಸಂಪನ್ಮೂಲದ ಬಗ್ಗೆ , ಮತ್ತು ವ್ಯಾಪಾರದ ಬಗ್ಗೆ ಚಾತುರ್ಯವಿರಬೇಕು. ಈ ಕೌಶಲ್ಯದ ಬಗ್ಗೆ ಅರಿವು ಇರುವುದರಿಂದ ವಿಮೆ ಹಾಗೂ ಮರುವಿಮೆ ಕೈಗಾರಿಕ ಉದ್ಯಮಗಳಲ್ಲಿ ವಿಮಾಗಣಕರಿಗೆ ಬಹಳ ಅವಶ್ಯಕತೆ ಇರುತ್ತದೆ. ವಿಮಾಗಣಕರು ವ್ಯಾಪಾರಿಸ್ಥರಿಗೆ ಸಲಹೆ ಹೇಳುವ ಕೆಲಸವನ್ನು ವಹಿಸಿಕೂಂಡು ಕಾರ್ಯ ಮುಂದುವರಿಸಬಹುದು. ಅಲ್ಲದೇ ಅವರು ಯುನೈಟೆಡ್ ಕಿಂಗ್ಡಮ್ ದೇಶದಲ್ಲಿ ಸರ್ಕಾರಿ ವಿಮಾಗಣಕದ ಇಲಾಖೆ ಮತ್ತು ಅಮೇರಿಕದ ಸಾಮಾಜಿಕ ಭದ್ರತೆಯ ಆಡಳಿತಗಳಿಗೆ ಇವರು ಸಲಹೆಯನ್ನು ನೀಡಬಹುದಾಗಿದೆ. ವಿಮಾಗಣಕರು ವಿಮೆಗೆ ಸೇರಿದ ವಿಷಯಗಳನ್ನು ಒಟ್ಟುಗೂಡಿಸಿ ನಂತರ ನಷ್ಟದ ಸಂಭವನೀಯತೆಯನ್ನು ಅಂದಾಜಿಸುತ್ತರೆ ಮತ್ತು ಮುಂಬರುವ ಹಲವಾರು ವಿಮೆಗೆ ಸಂಬಂಧಪಟ್ಟ ಸಂಗತಿಗಳ ವಿಷಯಗಳನ್ನು ಒಟ್ಟುಗೂಡಿಸಿ ನಂತರ ವಿಶ್ಲೇಷಿಸುತ್ತಾರೆ. ಅಲ್ಲದೇ ವಿಮಾಗಣಕರು ವಿಮೆ ಉದ್ಯಮೆಗೆ ಯಾವ ಬಗ್ಗೆಯ ಸಂಪನ್ಮೂಲದಲ್ಲಿ ಹೂಡಿಕೆ ಮಾಡಬಹುದೆಂದು ಸಲಹೆ ನೀಡುತ್ತರೆ. ವಿಮಾಗಣಕರು ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ವಿಮೆಕಂತನ್ನು ಉದ್ಯಮೆಯ ಪರವಾಗಿ ರೂಪಿಸಿ ದರವನ್ನು ನಿಗದಿಪಡಿಸುತ್ತಾರೆ.


ಪಾಲಿಸಬೇಕಾದ ಶಿಸ್ತು[ಬದಲಾಯಿಸಿ]

ಅತಿ ಹೆಚ್ಚು ಪರಂಪರಿಕ ವಿಮಾಗಣಕರಲ್ಲಿ ಎರಡು ಮುಖ್ಯವಾದ ವಿಭಾಗಗಳು, ಅವು

ಜೀವ ವಿಮಾಗಣಕರು[ಬದಲಾಯಿಸಿ]

  ಜೀವ ವಿಮಾಗಣಕರಲ್ಲಿ ಆರೋಗ್ಯ ಮತ್ತು ನಿವೃತ್ತವೇತನ ವಿಮಾಗಣಕರು ಸಹ ಒಕಗೂಂಡಿದ್ದಾರೆ , ಇವರು ಪ್ರಮುಖವಾಗಿ ಮರ್ತ್ಯತೆಯ ನಷ್ಟ , ಅಸ್ವಾಭಾವಿಕತೆ ನಷ್ಟ , ಮತ್ತು ಬಂಡವಾಳದಿಂದ ಬರುವ ನಷ್ಟದೂಂದಿಗೆ ವ್ಯವಹಾರ ನಡೆಸುತ್ತರೆ. ಜೀವ ವಿಮಾಗಣಕರು ಮುಖ್ಯವಾಗಿ ಜೀವ ವಿಮೆ , ವರ್ಷಾಶನ , ನಿವೃತ್ತಿವೇತನ  , ಮತ್ತು ಧೀರ್ಘಾವದಿ ದೌರ್ಬಲ್ಯ ವಿಮೆ , ಆರೋಗ್ಯ ವಿಮೆ , ಆರೋಗ್ಯ ಉಳಿತಾಯಖಾತೆ ಮತ್ತು ಧ್ರ್ಘಾವಧಿ ರಕ್ಷಣೆ ವಿಮೆಯ ಕಾರ್ಯಕ್ರಮಗಳನ್ನು  ನಿರ್ವಹಿಸುತ್ತರೆ. ಸಾರ್ವಜನಿಕರ ಅಭಿಪ್ರಾಯದ ಮೆರೆಗೆ ವಿಮೆಯ ಉದ್ಯಮೆಗೆ ಸಾಮಾಜಿಕ ವಿಮೆಯ ಕಾರ್ಯಕ್ರಮಗಳನ್ನು ಕೈಗೂಂಡಿವೆ , ಅವುಗಳಲ್ಲಿ ವೈದ್ಯಕೀಯ ತಂತ್ರಜ್ಞಾನ, ಹಣದುಬ್ಬರ ಮತ್ತು ಜೀವಿಸುವ ವೆಚ್ಚಗಳನ್ನು ಗಮನದಲ್ಲಿಟ್ಟುಕೂಂಡು ವಿಮಾಗಣಕರು  ವಿಮೆಯ ಕಂತು ಮತ್ತು ದರಗಳನ್ನು ನಿಗದಿಪಡಿಸುತ್ತರೆ.

ನಿರ್ಜೀವ ವಿಮಾಗಣಕರು[ಬದಲಾಯಿಸಿ]

ನಿರ್ಜೀವ ವಿಮಾಗಣಕರನ್ನು  ಆಸ್ತಿ ಮತ್ತು  ಸಾಮಾನ್ಯವಾದ ವಿಮೆಯ ಗಣಕರು ಎಂದು ಸಹ ಕರೆಯಬಹುದು , ಇವರು ಆಸ್ತಿ ಮತ್ತು ಜನತೆಯ ಮೇಲೆ ಪರಿಣಾಮ ಬೀರಬಹುದಾದ ಪ್ರಾಕೃತಿಕ ಮತ್ತು  ಕಾನೂನಿನ ಅಪಾಯಗಳ ಜೊತೆ ವ್ಯವಹಾರ ಮಾಡುತ್ತಾರೆ. ನಿರ್ಜೀವ ವಿಮಾಗಣಕರು ಪ್ರಮುಖವಾಗಿ ವಾಹನ ವಿಮೆ, ಮನೆ ಮಾಲಿಕರ ವಿಮೆ, ವಾಣಿಜ್ಯ ಆಸ್ತಿ ವಿಮೆ , ಕಾರ್ಮಿಕರ ಪರಿಹಾರ ವಿಮೆ , ದುಷ್ಕೃತ್ಯ ವಿಮೆ , ಉತ್ಪನ್ನಗಳ ಹೊಣೆಗಾರಿಕೆ ವಿಮೆ, ಭಯೋತ್ಪಾದಕ ವಿಮೆಗಳ ದರ ಮತ್ತು ಕಂತುಗಳನ್ನು ನಿಗದಿಸುತ್ತಾರೆ. ವಿಮಾ ಕಂಪನಿಯು ವಿಮಾಗಣಕರನ್ನು ವಿಮೆಯ ಲೆಕ್ಕಾಚಾರವನ್ನು ಮಾಡಲು ಕರೆಯುವ ಮುನ್ನ , ಅವರ ಪವೀಣತೆ , ಚತುರತೆಯನ್ನು  ಮತ್ತು ತಮ್ಮ ವಿಮೆಅಯ ಲೌಶಲ್ಯತೆಯನ್ನು ಪರಿಗಣಿಸುತ್ತಾರೆ. ಆದ್ದರಿಂದ ಒಬ್ಬ ವಿಮಾಗಣಕನು ವಿಮೆಯ ಗಣಕದಲ್ಲಿ ಬಹಳ ಬುದ್ಧಿವಂತವನಾಗಿರಬೇಕು.

ಸಾಂಪ್ರದಾಯಿಕ ಉದ್ಯೋಗ[ಬದಲಾಯಿಸಿ]

ಜೀವ ವಿಮೆಯಾಗಲಿ ಅಥವ ನಿರ್ಜೀವ ವಿಮೆಯಾಗಲಿ ವಿಮಾಗಣಕನ  ಕೆಲಸವೆಂದರೆ ವಿಮೆಯ ಕಂತುಗಳನ್ನು ಲೆಕ್ಕಾಚಾರ ಹಾಕುವುದು ಮತ್ತು ಹಲವಾರು ನಷ್ಟಕೀಡಗುವ ವಿಮೆಯ ರೀತಿಗಳಿಗೆ ಮೀಸಲಾತಿ ಮಾಡುತ್ತರೆ.  ಒಂದು ವೇಳೆ ಪದೇ ಪದೇ ಅಪಘತಕ್ಕೆ ಈಡಾದಲ್ಲಿ  (ನಿರ್ಜೀವ ವಿಮೆಯಲ್ಲಿ) ವಿಮಾಗಣಕರು ನಷ್ಟಕೀಡಾಗುವುದಾನ್ನು ಪುನಾರಾವರ್ತನೆ ಆದರೆ , ಮುಂದೆ ನಷ್ಟವಾಗುವಂತಹ ಘಟನೆಗಳನ್ನು ಲೆಕ್ಕ ಹಾಕುತ್ತಾರೆ ಮತ್ತು ಆ ಘಟನೆಯ ತೀವ್ರತೆಯನ್ನು ಸಹ ನಿರ್ಜೀವ ಬಿಮೆಯಲ್ಲಿ ಪರಿಗಣಿಸುತ್ತಾರೆ. ನಷ್ಟದ ಘಟನೆ ನಡೆಯುವವರೆಗೆ ವಿಮೆಗಾರರು ಯಾವುದೆ  ಮೊಬಲಗನ್ನು ಪಾವತಿಸ ಬೇಕಾಗಿರುವುದಿಲ್ಲ. ಭವಿಷ್ಯದಲ್ಲಿ ಜೀವ ವಿಮೆಗಾರರು ಸಾಮಾನ್ಯವಾಗಿ ವಿಶ್ಲೇಷಣೆ ಮಾಡುವಾಗ ವಿಮೆದಾರರಿಗೆ ಆರ್ಥಿಕವಾಗಿ ಎಷ್ಟು ಮೊತ್ತವನ್ನು ಮಂಜೂರು ಮಾಡಬಹುದೆಂದು ಲೆಕ್ಕಾಚಾರ ಹಾಕುತ್ತರೆ. ಈ ಲೆಕ್ಕಾಚಾರವು ವಿವಿಧ ವಿಮೆಗಳಿಗೆ ವ್ಯತ್ಯಾಸವಾಗಿರುತ್ತದೆ. ಇಲ್ಲಿ ಯಾವುದೇ ರೀತಿಯ ವಿಶ್ಲೇಷಣೆಯಲ್ಲಿ ಸಂಪೂರ್ಣ ಕಂಡುಹಿಡಿಯುವ ಪ್ರಕ್ರಿಯೆ ಸಾಮಾನ್ಯವಾಗಿ ಸಂಭವನಿಯ ಮಾದರಿಯ ಬಲಕೆಯ ಆವರ್ತನ , ತೀವ್ರತೆಯ ನಿಯತಾಂಕಗಳನ್ನು ಉಪಯೋಗಿಸುತ್ತಾರೆ. ಜೀವ ವಿಮೆಯಲ್ಲಿ ಭವಿಷ್ಯದಲ್ಲಿ ಮುಂಬರುವ ಬಡ್ಡಿಗಳ ಬೆಲೆ ನಿರ್ಧರಿಸುವಲ್ಲಿ ಮತ್ತು ನಗದು ಚಲಾವಣೆಯು ಪ್ರಮುಖ ಪಾತ್ರವಾಗಿರುತ್ತದೆ. 
ವಿಮಾಗಣಕರು ಭವಿಷ್ಯದ ಒಟ್ಟು ಘಟನೆಯನ್ನು ಊಹಿಸಲಾರರು. ಸಾಮಾನ್ಯವಾಗಿ ಆರ್ಥಿಕ ಜವಾಬ್ದಾರಿಯ ಬೆಲೆಯನ್ನು ನಿರ್ಧರಿಸುವುದೆ ಅವರ ಕೆಲಸಕ್ಕೆ ಸಂಭಂದಪಟ್ಟಿರಬಹುದು. ಈ ಕೆಲಸವನ್ನು ಇಂದಿನ  ಮರುವಿಮೆ ಅಥವ ಅಭಿವೃದ್ಧಿ ಅಥವ  ಹೊಸ  ಉತ್ಪನ್ನಗಳ ಮರುಮೌಲ್ಯವೆಂದು ಕರೆಯಬಹುದು. ಒಂದು ಕಂಪನಿಯ ಆಸ್ತಿ ಮತ್ತು ಭಾದ್ಯತೆಗಳ ಆರ್ಥಿಕ ವರದಿಗಳಲ್ಲಿ ಸಹ ಭಾಗಿತ್ವವಾಗಿರುತ್ತಾರೆ. ಇವರು ತಮ್ಮ ಬಳಿಗೆ ಬರುವ ಗ್ರಾಹಕರಿಗೆ ವಿಮೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹಂಚಿ ಕೊಳ್ಳದಿದ್ದ ಪಕ್ಷದಲ್ಲಿ ಸಾಮಾನ್ಯ ವಿಷಯಗಳನ್ನು ಸಂಕೀರ್ಣತೆಯ ಬಗ್ಗೆ ತಿಳಿಸುತ್ತಾರೆ.

ಅಸಂಪ್ರದಯಿಕ ಉದ್ಯೋಗ[ಬದಲಾಯಿಸಿ]

ಇಲ್ಲಿ ಸಾಂಪ್ರದಾಯಿಕ ಉದ್ಯೋಗವಾಗಿಲ್ಲದಿರುವುದರಿಂದ ಇಲ್ಲಿ ವಿಮಾಗಣಕರು ಅಪಾಯದ ಘಟನೆಯನ್ನು ನಿರ್ವಹಿಸಿವುದು ಮತ್ತು ಇದರ ಅಪಾಯದ ಕಂಪನಿಯಲ್ಲಿ ಹಣಕಾಸಿಗೆ ಸಂಭಂಧವಿರುವ  ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ.ಇದಕ್ಕೆ ಮುಂಚೆ ವಿಮಾಗಣಕರು ಭೂಸ್ವತ್ತುಗಳ ಆರ್ಥಿಕತೆಯ ಬಗ್ಗೆ ಉಪಕರಣ ಮತ್ತು ಮಾಹಿತಿಗಳನ್ನಾದಾರಿತವಾಗಿ ಅಧ್ಹ್ಯಯನ ಮಾಡುತ್ತಿದ್ದರು. ಆದರೆ ಈಗಿನ ಆಧುನಿಕ ವಿಮಾಗಣಕನು ಆರ್ಥಿಕ ಸಂಸ್ಥೆಗಳ ಬೇಸಲ್-೨ ಒಪ್ಪಂದ ಮತ್ತು ವಿಮಾ ಕಂಪನಿಯ ಸಾಲ್‍ವೆನ್‍ಸಿ-೨ ಒಪ್ಪಂದ ಪ್ರಕಾರ ನಷ್ಟ ಒದಗ ಬಹುದಾದ ಕಾರ್ಯಾಚರಣೆಯನ್ನು ಬೇರೆ ಬೇರೆಯಾಗಿ ನಡೆಸುತ್ತಾರೆ. ಆದ್ದರಿಂದ ಆಧುನಿಕ ವಿಮಾಗಣ್ಕರಿಗೆ ನಷ್ಟದ ವಿಶ್ಲೇಷಣೆಯ ವಿವಿಧ ರೀತಿಯಲ್ಲಿ ಬಗೆಹರಿಸಲು ಮುಂಚೆಯೇ ಅವರಿಗೆ ತರಬೇತಿ ನೀಡಿರುತ್ತಾರೆ. ಇದರಿಂದ ಮುಂದೆ ಅವರಿಗೆ ಈ ಉದ್ಯೋಗದಲ್ಲಿ ಎಲ್ಲಾ ರೀತಿಯ ಲಾಭ ನಷ್ಟದ ಲೆಕ್ಕಾಚಾರಗಳನ್ನು  ಹಾಕಲು ಸಹಾಯಕವಾಗಿರುತ್ತದೆ.ಇವರು ಹೂಡಿಕೆಯ ಬಗ್ಗೆ ಸಲಹೆ ಮತ್ತು ಸ್ವತ್ತು ನಿರ್ವಹಿಸುವುದು ಮತ್ತು ಸಾಮಾನ್ಯ ವ್ಯವಹಾರ ನಿರ್ವಹಿಸುವುದು ಮತ್ತು ಮುಖ್ಯ ಆರ್ಥಿಕ ಅಧಿಕಾರಿಗಳಲ್ಲಿ ಸಹ ಸಂಭಂದಪಟ್ಟಿರುತ್ತಾರೆ. ಅವರ ವ್ಯವಹಾರದ ದೂರದೃಷ್ಟಿಯಿಂದ ಭವಿಷ್ಯದಲ್ಲಿ ನಗದು ಚಲಾವಣೆಯಾಗುವುದು , ಅಪಾಯತೆಯನ್ನು ಕಡಿತಮಾಅಥವ ತಮ್ಮ ಬುದ್ಧಿಯಿಂದ ಮೌಲ್ಯತೆಯನ್ನು ವಿಶ್ಲೇಷಿಸುತ್ತಾರೆ ಮತ್ತು ಅವರು ತಮ್ಮ ಅನುಭವವನ್ನು ವಿಮೆಯ ಬೆಲೆಕಟ್ಟುವಲ್ಲಿ ಉಪಯೋಗಿಸುತ್ತಾರೆ. ಅಲ್ಲದೆ ಬೇರಿ ವ್ಯವಹಾರದಲ್ಲಿಯೂ ಉಪಯೋಗಿಸುತ್ತಾರೆ.

ಆರಂಭಿಕ ವಿಮಾಗಣ್ಕರು[ಬದಲಾಯಿಸಿ]

೧೭೬೨ರಲ್ಲಿ ಲಂಡನಿನಲ್ಲಿ ಜೀಮ್ಸ್ ಡಾಡ್‍ಸನ್ಸ್ ಎಂಬಾತ ಕಂತು ಮಟ್ಟದ ವ್ಯವಸ್ಥೆಯಲ್ಲಿ ಮುಂಚಿತವಾಗಿ ಕೆಲಸ ಮಾಡಿದ್ದರಿಂದ ಸೊಸೈಟಿ ಫ಼ಾರ್ ಈಕ್ವಿಟೆಬಲ್ ಅಶೂರೆನ್ಸ್ ಆನ್ ಲೈವ್ಸ್ ಅಂಡ್ ಸರ್ವೈ‍ವರ್ಶಿಪ್ (ಈಗಿನ ಈಕ್ವಿಟ್ಬಲ್ ಲೈಫ಼್) ಎಂಬ ಕಂಪನಿಯು ರಚನೆಯಾಯಿತು.ಈ ಕಂಪನಿಯೇ ಡಾಡ್ಸನ್  ಕೆಲಸವನ್ನು ಉಪಯೋಗಿಸಿ ವಿಮೆಯ ಕಂತುಗಳ ದರವನ್ನುಜೀವ ವಿಮೆಯಲ್ಲಿ ದೀರ್ಘಾವಧಿಯ ಜೀವ ವಿಮೆಗೆ ವೈಜ್ಞಾನಿಕವಾಗಿ ಲೆಕ್ಕಾಚಾರ ಹಾಕಿ ನಿಗದಿ ಪಡಿಸಿದರು. ೧೭೫೭ರಲ್ಲಿ ಡಾಡ್‍ಸನ್ಸ್ ಸಾವಿನ ನಂತರ ಎಡ್ವರ್ಡ ರೊವ್ ಮೋರ್ಸ್ ಆ ಕಂಪನಿಯ ನಾಯಕತ್ವವನ್ನು ಅಂತಿಮವಾಗಿ ಪಡೆದು ಸೊಸೈಟಿ ಫ಼ಾರ್ ಈಕ್ವಿಟಬಲ್ ಆಶೂರೆನ್ಸ್ ಎಂದು ಮಾರ್ಪಡಿಸಿದ. ಇನ್ಮುಂದೆ  ಮುಖ್ಯ ಆಧಿಕಾರಿಯನ್ನು ವಿಮಾಗಣಕರೆಂದು ಕರೆಯಬೇಕೆಂದು ಸೂಚಿಸಿದ . ಹಿಂದೆ ಈ ಪದವನ್ನು ಅಧಿಕೃತರವರಿಗೆ(ಯಾರು ನಿರ್ಧಾರಗಖನ್ನು ರೆಕಾರ್ಡ್ ಮಾಡುತ್ತಾರೆ) ಮಾತ್ರ ಸೀಮಿತವಾಗಿತ್ತು ಅಥವ ಒಂದು ಚರ್ಚಿನ ನ್ಯಾಯಾಲಯಕ್ಕೆ ನಿರ್ಬಂಧಿತವಾಗಿತ್ತು. ಇತರ ಕಂಪನಿಗಳು ಇಂತಹ ಗಣಿತೀಯ ಮತ್ತು ವೈಜ್ಞಾನಿಕ ವಿಧಾನಗಳನ್ನು ಹೆಚ್ಚಾಗಿ ಬಳಕೆ ಮಾಡಿ ವಿಫಲವಾಗದಿದ್ದರಿಂದ ಅವರನ್ನು ಬಲವಂತವಾಗಿ ಈಕ್ವಿಟ್ಬಲ್ರವರು ಉಪಯೋಗಿಸುತ್ತಿದ್ದ ವಿಧಾನಗಳನ್ನು ಬಳಕೆಮಾಡಲು ಪ್ರವರ್ತಿಸಿದರು.

Brandeis office 1916

ಆಧುನಿಕ ವೃತ್ತಿಯ ಅಭಿವೃದ್ಧಿ[ಬದಲಾಯಿಸಿ]

ಹದಿನೆಂಟು ಮತ್ತು ಹತ್ತೋಂಭತ್ತನೆಯ ಶತಮಾನಗಳಲ್ಲಿ  ಕೈಪಿಡಿ ಲೆಕ್ಕಾಚಾರಗಳಲ್ಲಿ ಮತ್ರ ಗಣನೆಯು ಕ್ಲಿಷ್ಟಕರವಾಗಿತ್ತು. ನ್ಯಾಯವಾದ ವಿಮೆಯ ಕಂತುಗಳನ್ನು ಲೆಕ್ಕಾಚಾರ ಮಾಡಲು ಮತ್ತು ನಿರ್ಧರಿಸುಲು ಕಷ್ಟಕರ. ಅ ಕಾಲದಲ್ಲಿದ ವಿಮಾಗಣಕರು ಲೆಕ್ಕಾಚಾರ ಮಾಡಲು ನೂತನವಾದ ವಿಧಾನಗಳನ್ನು ಅತ್ಯಧುನಿಕವಾಗಿ ಲೆಕ್ಕಾಚಾರಮಾಡಲು ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದರು. ವಿಮಾಗಣಕರು ಹಿಂದೆ ವಿಮೆಯ ಕಂತುಗಳನ್ನು ಸಕಾಲಿಕ , ನಿಖರವಾಗಿರಬೇಕೆಂದು ಅತ್ಯಧುನಿಕ ವಿಧಾನದ ಮೊರೆ ಹೋಗುತ್ತಿದ್ದರು.ಇದರಿಂದಲೇ ಈ ವೃತ್ತಿಯು ಇನ್ನಷ್ಟು ರೂಪುರೇಷೆಗೂಳ್ಳುತ್ತಾ ಹೋಯಿತ್ತು.ಒಳ್ಳೆಯ ಗುಣಮಟ್ಟವನ್ನು ಖಾತರಿಮಾಡಲು ಮತ್ತು ಸಾರ್ವಜನಿಕರ ಆಸಕ್ತಿಯನ್ನು ಕಾಪಾಡಲು  ವಿಮಾಗಣಕರನ್ನು ಮತ್ತು ಅಂಕಿ ಸಂಖ್ಯೆ ಶಾಸ್ತ್ರಗಳನ್ನು ಬೆಂಬಲಿಸಲು ಮತ್ತು ಇನ್ನಷ್ಟು ಎತರಕ್ಕೆ ಹೋಗಲು ವಿಮಾಗಣಕರ ಸಂಸ್ಥೆಗಳನ್ನು ಸ್ಥಪಿಸಲಾಯಿತ್ತು. ೧೯೩೦ ಮತ್ತು ೧೯೯೦ರಲ್ಲಿ ನಷ್ಟದ ಮುನ್ಸೂಚನೆಯನ್ನು ಕಂಡುಹಿಡಿಯಲು ಒಂದೊಂದು ಮಾದರಿಗಳನ್ನು ಉಪಯೋಗಿಸಲು ಪ್ರಾರಂಭಿಸಿದರು. ಗಣಾಕ ಯಂತ್ರದ ಕ್ರಾಂತಿಯು ವಿಮಾಗಣಕರ ವೃತ್ತಿ ಜೀವನಕ್ಕೆ ಮತ್ತಷ್ಟು ಗಣಕಯಂತ್ರದ ಕ್ರಾಂತಿಯು ವಿಮಾಗಣಕರ ವೃತ್ತಿ ಜೀವನದಲ್ಲಿ ಸಾಂಪ್ರದಾಯಿಕವಗಿ ಪೆನ್ಸಿಲ್ ಮತ್ತು ಪೇಪರ್‍ನಿಂದ ಪಂಚ್ ಕಾರ್ಡಗೆ ಮಾರ್ಪಟ್ಟಿತ್ತು ನಂತರ ಈಗಿನ ಸೂಕ್ಷ್ಮ ಗಣಕ ಯಂತ್ರಗಳಿಗೆ ಮಾರ್ಪಾಡಾಗಿದೆ.  ಇದರಿಂದಾಗಿ ವಿಮಾಗಣಕರು ಸಾಮಾರ್ಥ್ಯವು ಕಾಲಕಾಲಕ್ಕೆ ಅಭಿವೃದ್ಧಿ ಹೂಂದಿತು.ನೂತನ ಆರ್ಥಿಕ ಸಿದ್ಧಾಂತದಲ್ಲಿ ವಿಮಾಗಣಕರು ಒಣ್ದುಗೂಡಿ ಇನ್ನೂಂದು ನೂತನ ಅಭಿವೃದ್ಧಿ ಹೂಂದಿದರು. ೨೦ನೇ ಶತಮಾನದಲ್ಲಿ ವಿಮಾಗಣಕರು ಅಭಿವೃದ್ಧಿ ಮಾಡಲು ಬಳಸಿದ ತಾಂತ್ರಿಕತೆಯು ಅಂದಿನ ನಾತನ ಆರ್ಥಿಕತೆಯಲ್ಲಿ ಕಂಡು ಬರುತ್ತದೆ, ಆದರೆ ಹಲವಾರು ಐತಿಹಾಸಿಕ ಕಾರಣಾಂತರಗಳಿಂದ ಈ ಅಭಿವೃಧಿಯು ಸಾಧನೆಯನ್ನು ಚೆನ್ನಾಗಿ ಗುರುತಿಸಲು ಆಗಲಿಲ್ಲ. ಇಪ್ಪತ್ತೊಂದನೇ ಶತ್ಮಾನದಲ್ಲಿ ವೃತ್ತಿ ಅಭ್ಯಾಸ ಎರಡರಲ್ಲೂ ಮತ್ತು ವಿಮಾಗಣಕ ಸಂಸ್ಥೆಗಳು ವಿದ್ಯಾಭ್ಯಾಸದ ಪಠ್ಯಪ್ರಮವಾಗಿ ಉಅಪಯೋಗಿಸಿದರು , ಸಮೂಹ ಪಟ್ಟಿಗಳು , ನಷ್ಟದ ಮಾದರಿಗಳು , ಸಂಭವನೀಯ ವಿಧಾನಗಳು  ಮತ್ತು ಆರ್ಥಿಕ ಸಿದ್ಧಾಂತ ,ಆದರೆ ಆಧುನಿಕ ಅರ್ಥಶಾಸ್ತ್ರಕೆ ಸಂಪೂರ್ಣವಾಗಿ ಒಳಗೊಂಡಿರಲಿಲ್ಲ.

ಸಂಭಾವನೆ ಮತ್ತು ಶ್ರೇಯಾಂಕ[ಬದಲಾಯಿಸಿ]

 ವಿಶ್ವದ ಎಲ್ಲಾ ದೇಶಗಳಲ್ಲಿ ಬೇರೆ ವೃತ್ತಿ ಜೀವನಕ್ಕೆ ಹೋಲಿಸಿದರೆ ವಿಮಾಗಣಕರು ಬಹಳ ಬೇಡಿಕೆಯಿಂದಿದ್ದಾರೆ , ಅವರ ಸೇವೆಗಳಿಗೆ ಹೆಚ್ಚಾಗಿ ಸಂಭಾವನೆ ಪಾವತಿ ಮಾಡಿರುತ್ತಾರೆ. ೨೦೧೪ನೇ ಇಸವಿಯಂತೆ ಅಮೇರಿಕಾದಲ್ಲಿ ಹೊಸದಾಗಿ ಧೃಡಿಕರಣಗೊಂಡ ವಿಮಾಗಣಕರು ಒಂದು  ವರ್ಷಕ್ಕೆ ನೂರು ಸಾವಿರ ಡಾಲರ್‍ನಂತೆ ಸಂಪಾದಿಸುತ್ತಿದ್ದರು, ಹಾಗೆಯೆ ತುಂಬಾ ಅನುಭವ ಹೊಂದಿದ ವಿಮಾಗಣಕರು ಕೂಡ ನೂರೈವತ್ತು ಸಾವಿರ ಡಾಲರ್‍ಗಳನ್ನು ಒಂದು ವರ್ಷಕ್ಕೆ ಸಂಪಾದನೆ ಮಾಡುತ್ತಿದ್ದರು. ಇದೆ ರೀತಿ ೨೦೧೪ರಲ್ಲಿಯೆ ಯುನೈಟ್ಡ್ ಕಿಂಗ್ಡ್ಂಮ್ನಲ್ಲಿ ನಡೆದ ಒಂದು ಸಮೇಕ್ಷೆ ಪ್ರಕಾರ ಹೊಸದಾಗಿ ಧೃಡಿಕರಣಗೊಂಡ ವಿಮಾಗಣಕರು ಆರಂಭಿಕ ಸಂಬಳ ಅಂದಾಜು ಐವತ್ತು ಸಾವಿರ ಪೌಂಡ್‍ಗಳು ಇತ್ತು. ಹೆಚ್ಚಾಗಿ ಅನುಭವ ಹೊಂದಿದ ವಿಮಾಗಣಕರಿಗೆ ನೂರು ಸಾವಿರ ಪೌಂಡ್‍ಗಳಿಗಿಂತ ಅಧಿಕ ಸಂಪಾದಿಸುತ್ತಿದ್ದರು.
ದಶಕಗಳೊಂದಲೂ ವಿಮಾಗಣಕರ ವೃತ್ತಿ ಜೀವನವು ಹೋಲಿಕೆಯ ಒಂದು ಅಪೇಷಣೀಯ ದರ್ಜೆಗೇರಿತು. ಎಕೆಂದರೆ ಅವರ ವೃತ್ತಿಯ ಯಾವುದೇ ದೈಹಿಕ ಶ್ರಮವಿಲ್ಲದ ಮತ್ತು ಯ್ವುದೇ ಸಮಯದಲ್ಲೂ ಸಹ  ಕೆಲಸ ನಿರ್ವಹಿಸಬಹುದು ಮತ್ತು ಅವರಿಗೆ ಸರಿ ಹೊಂದುವಂತಹ ಸ್ಥಿತಿಯಲ್ಲೂ ಸಹ ಕಾರ್ಯ ನಿರ್ವಹಿಸಬಹುದಾಗಿರುತ್ತದೆ , ಮತ್ತು ಅವರ ವೃತ್ತಿ ಜೀವನವು ಸತತವಾಗಿ ಉತ್ತಮ ನೇಮಕಾತಿ  ಹೊಂದಿ ಉತ್ತಮ ಸಂಭಾವನೆ ದೊರೆಯುವಂತಾಯಿತು. ಎಲ್ಲಾ ವೃತ್ತಿಗಿಂತ ಈ ಉದ್ಯೋಗವು ಪ್ರಥಮ ದರ್ಜೆಯಲ್ಲದೆ  ಮಹಿಳೆಯರಿಗೂ ಸಹ ಉತ್ತಮ ಉದ್ಯೋಗವೆಂದು ಪರಿಣಿಸಲ್ಪಟ್ಟಿದೆ , ಅಮೇರಿಕಾದಲ್ಲಿ ಒಂದು ಮಾನದಂಡ ಸಂಸ್ಥೆಯು ಐದು ಮಾನದಂಡ್ಗಳ ಆಧಾರಗಳನ್ನು ಇಟ್ಟುಕೊಂಡು(ಉದಾ:  ಉದ್ಯೋಗ ಪರಿಸರ, ಆದಾಯ , ದೈಹಿಕ ಅವಶ್ಯಕತೆ ,  ಉದ್ಯೋಗ ಮೆಲ್ನೋಟ ಮತ್ತು ಮಾನಸಿಕ ಒತ್ತಡ) ಒಳ್ಳೆಯ ವೃತ್ತಿ ಜೀವನವೆಂದು ಮೇಲ್ದದರ್ಜೆಗೇರಿತು.

ಧೃಡೀಕರಣ ಮತ್ತು ಪರೀಕ್ಷೆ[ಬದಲಾಯಿಸಿ]

 ಒ‍ಬ್ಬ  ಧೃಡೀಕರಣಗೊಂಡ ವಿಮಾಗಣಕರಾಗ ಬೇಕಾದರೆ ಅವರು ಅತ್ಯಂತ ಕಷ್ಟಕರವಾದ ವೃತ್ತಿಜೀವನಕ್ಕೆ ಸಂಬಂಧ ಪಟ್ಟ ಪರೀಕ್ಷೆಗಳಲ್ಲಿ ಉತ್ತೀರ್ಣರಾಗ ಬೇಕಾಗುತ್ತದೆ , ಇದಕ್ಕಾಗಿ ಹಲವಾರು ವರ್ಷಗಳನ್ನು ಬೇಕಾಗಬಹುದು. ಹಲವಾರು ದೇಶಗಳಲ್ಲಿ ಉದಾ: ಡೆನ್ಮಾರ್ಕ್ ದೇಶದಲ್ಲಿ  ವಿಶ್ವವಿದ್ಯಾಲಯದವರು ಸಹ ಪರೀಕ್ಷೆಗಳನ್ನು ಆಯೋಜಿಸುತ್ತಾರೆ. ಬೇರೆ ದೇಶಗಳಲ್ಲಿ ಉದಾ: ಅಮೇರಿಕಾದಲ್ಲಿ ಅತ್ಯಧಿಕ ವಿದ್ಯಾಭ್ಯಾಸ ಮತ್ತು ಉದ್ಯೋಗದ ಸಮಯದಲ್ಲಿ ನೆಡೆಯುವ ಪರೀಕ್ಷೆಯಲ್ಲಿ ಪಾತ್ರವಹಿಸುತ್ತವೆ.ಯುನೈಟೆಡ್ ಕಿಂಗ್ಡ್ಂಮ್ ಮತ್ತು ಪ್ರಕ್ರಿಯೆ ಆಧಾರಿತ ದೇಶಗಳಲ್ಲಿ ಮಿಶ್ರ-ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ರಚಿಸುತ್ತವೆ.

ಪರೀಕ್ಷೆಯ ಬೆಂಬಲ[ಬದಲಾಯಿಸಿ]

 ಈ ಅರ್ಹತೆಗೊಳ್ಳುವ ಪರೀಕ್ಷೆಗಳು ಅತ್ಯಂತ ಕಷ್ಟಕರವಾಗಿಯೂ , ಪರೀಕ್ಷೆಗಳಲ್ಲಿ ಸಹಾಯ ಪ್ರಕ್ರಿಯೆಯಾ ಜನಗಳಿಗೆ ದೊರಕುತ್ತದೆ. ಮತ್ತೆ ಉದ್ಯೋಗ ವಿದ್ಯಾಭ್ಯಾಸದ ಸಮಯದಲ್ಲಿ ಮಾಲಿಕರು ಸಂಭಳವನ್ನು ಕೊಟ್ಟು ಮತ್ತು ಹಾಜರಾತಿಯನ್ನು ಪರೀಕ್ಷೆಯ ವಿಚಾರಗೋಷ್ಟಿ ಸಮಯದಲ್ಲಿ ಕೋಡುತ್ತಾರೆ ಹಾಗೂ ಪರೀಕ್ಷೆಯಲ್ಲಿ ಪಾಸಾದರೆ ಕೆಲವು ಕಂಪನಿಯವರು ಸಾಮಾನ್ಯವಾಗಿ ಸಂಬಳವನ್ನು ಅಧಿಕ ಮಾಡುತ್ತಾರೆ. ಅಥವ ಉದ್ಯೋಗದಲ್ಲಿ ಹೆಚ್ಚಿನ ಸಂಬಳವನ್ನು ನೀಡಿತ್ತಾರೆ. ಪರೀಕ್ಷೆಯ ಫಲಿತಾಂಶದಲ್ಲಿ ವಿಮಾಗಣಕರು ಹೆಚ್ಚು ಕೆಲಸದ ಸಮಯದಲ್ಲಿ ಬೇಕಾಗಿರುವಷ್ಟು ಅರ್ಪಣಾಭಾವ ತೋರುದರೆ ಅವರಿಗೆ ಅಧಿಕ ಪ್ರೋತ್ಸಾಹ  ಧನ ದೊರೆಯುತ್ತದೆ. ಇವರಿಗೆ ನಾಲ್ಕು ಘಂಟೆಗಳ ಪರೀಕ್ಷೆಗಾಗಿ ನಾನೂರು ಘಂಟೆಗಳು ಓದುವುದಾಕ್ಕಾಗಿ ಅವಶ್ಯಕವಾಗಿರುತ್ತದೆ. ಹೀಗೆ ಸಾವಿರಾರು ಘಂಟೆಗಳ ಕಾಲವನ್ನು ಹಲವಾರು ವರ್ಷಗಳ ಸಮಯದಲ್ಲಿ ಫೇಲ್ ಆಗದಹಾಗೆ ಊಹಿಸಿಕೊಳ್ಳದೆ ವ್ಯಯ ಮಾಡಿರುತ್ತಾರೆ.
    

ಹೂರಗಿನ ಕೊಂಡಿಗಳ[ಬದಲಾಯಿಸಿ]

http://www.beanactuary.org/what/

http://www.actuaries.org.uk/

https://www.soa.org/about/about-what-is-an-actuary.aspx

ಉಲ್ಲೇಖಗಳು[ಬದಲಾಯಿಸಿ]

http://www.actuary.com/

http://www.bls.gov/ooh/math/actuaries.htm

      .