ಸದಸ್ಯ:Brayan 144703/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಂದರ ನಗುವಿಗಾಗಿ - ಸುದಂತ ಚಿಕಿತ್ಸೆ[ಬದಲಾಯಿಸಿ]


ದಂತ ಸಂರಚನೆಗಳು ಒಂದಕ್ಕೊಂದು ಹೊಂದಾಣಿಕೆಯಲ್ಲಿ ಇಲ್ಲದಿದ್ದರೆ, ಈ ಪರಿಸ್ಥಿತಿಗೆ ಮಾಲ್‌ಅಕ್ಲೂಷನ್‌ (malocclusion) ಅಥವಾ ಕಚ್ಚುವಿಕೆಯಲ್ಲಿ ತೊಂದರೆ ಎಂದು ಕರೆಯುತ್ತಾರೆ. ಕಚ್ಚುವಿಕೆಯಲ್ಲಿನ ತೊಂದರೆಯು ವ್ಯಕ್ತಿಗೆ ಆನುವಂಶಿಕವಾಗಿ ಬಂದಿರಬಹುದು ಅಥವಾ ಆತನ ಜೀತಾವಧಿಯಲ್ಲಿ ಗಳಿಸಿದ್ದೂ ಆಗಿರಬಹುದು.

ಕಚ್ಚುವಿಕೆಯ ತೊಂದರೆ ಉಂಟಾಗಲು ಇರುವ ಪ್ರಮುಖ ಕಾರಣ ಅಂದರೆ, ಹಲ್ಲು ಬಿದ್ದುಹೋಗುವುದು ಅಥವಾ ಹೆಚ್ಚುವರಿ ಹಲ್ಲು ಬೆಳೆದಿರುವುದು, ಹಲ್ಲುಗಳು ಒತ್ತೂತ್ತಾಗಿರುವುದು ಅಥವಾ ಹಲ್ಲುಗಳ ಸ್ಥಾನದಲ್ಲಿ  ಏರುಪೇರಾಗಿರುವುದು... ಇತ್ಯಾದಿ.
ಕೆಲವು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ  ಬೆರಳುಗಳನ್ನು ಅಥವಾ ಹೆಬ್ಬೆರಳನ್ನು ಚೀಪುವ ಅಭ್ಯಾಸ ಇರುತ್ತದೆ. ಈ ಅಭ್ಯಾಸವನ್ನು ಬಹಳ ಸಮಯ ಮುಂದುವರಿಸಿದರೆ, ಅಥವಾ ಹಲ್ಲುಗಳಿಗೆ ಬಲವಾದ ಏಟು ಬಿದ್ದಾಗಲೂ ಸಹ ಹಲ್ಲುಗಳ ಸ್ಥಾನದಲ್ಲಿ ವ್ಯತ್ಯಾಸವಾಗುತ್ತದೆ. ಆ ಮೂಲಕ ಕಚ್ಚುವಿಕೆಯ ತೊಂದರೆ ಕಾಣಿಸಿಕೊಳ್ಳುತ್ತದೆ. 

ಇದರಿಂದಾಗಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳು ಅಂದರೆ:

ಮುಂದಿನ ಹಲ್ಲುಗಳು ಚಾಚಿಕೊಳ್ಳುವುದು ಈ ರೀತಿಯ ತೊಂದರೆ ಇರುವವರಲ್ಲಿ ಅವರ ಬಾಯಿಯ ಮುಂಭಾಗದ ಹಲ್ಲುಗಳು ಬಹಳ ಮುಂದಕ್ಕೆ ಚಾಚಿಕೊಂಡಿರುತ್ತವೆ ಮತ್ತು ವ್ಯಕ್ತಿಗೆ ತುಟಿ ಅಥವಾ ಬಾಯಿಯನ್ನು ಮುಚ್ಚಿಕೊಂಡಿರಲು ಕಷ್ಟವಾಗುತ್ತದೆ.

ಆಳವಾದ ಹೆಚ್ಚುವರಿ ಕಚ್ಚುವಿಕೆ ಇಂತಹ ಸ್ಥಿತಿ ಇರುವವರಲ್ಲಿ, ಅವರ ಮೇಲಿನ ಸಾಲಿನ ಮುಂಭಾಗದ ಹಲ್ಲುಗಳು ಕೆಳಸಾಲಿನ ಮುಂಭಾಗದ ಹಲ್ಲುಗಳನ್ನು ಆವಶ್ಯಕತೆಗಿಂತ ಹೆಚ್ಚು ಆವರಿಸಿರುತ್ತವೆ.

ಅಡ್ಡ ಕಚ್ಚುವಿಕೆ ಈ ಸಮಸ್ಯೆ ಇರುವವರಲ್ಲಿ, ಅವರ ಬಾಯಿಯ ಮೇಲಿನ ಸಾಲಿನ ಹಲ್ಲು ಕೆಳಗಿನ ಸಾಲಿನ ಹಲ್ಲಿನ ಒಳಭಾಗದಲ್ಲಿ ಕುಳಿತುಕೊಳ್ಳುತ್ತದೆ, ಈ ಕಾರಣದಿಂದಾಗಿ ಮೇಲಿನ ಮತ್ತು ಕೆಳ ಸಾಲಿನಲ್ಲಿ ಹೊಂದಾಣಿಕೆಯ ತೊಂದರೆ ಕಾಣಿಸಿಕೊಳ್ಳುತ್ತದೆ.