ಸದಸ್ಯ:VINAYASHREE/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಪರಶುರಾಮ ದೇವಸ್ಥಾನ, ಪರಶುರಾಮಗಿರಿ,ಕುಂಜಾರು: ಪರಶುರಾಮ ಕ್ಷೇತ್ರವೆಂದು ನಂಬಲಾಗಿರುವ ಕುಂಜಾರು ಸಂಪೂರ್ಣ ಶಿಲಾಮಯ ಗುಡ್ಡಸಾಲುಗಳಿರುವ ಪ್ರವೇಶ . ಹಸಿರು ಹೊದಿಕೆಯ ಎತ್ತರವಾದ ಗುಡ್ಡದಲ್ಲಿ ಪರಶುರಾಮರದೇ ಪ್ರತಿಷ್ಠೆ ಎನ್ನಲಾದ ಶ್ರೀದುಗಾರ್ಗ ದೇವಾಲಯವಿದೆ . ‍ಈ ಗುಡ್ಡದ ದಕ್ಷಿಣ ಭಾಗವಲ್ಲಿರುವ ಹೆಬ್ಬಂಡೆ ಗುಡ್ಡಸಾಲಿನ ಮೇಲೆ ಪಶ್ಷಿಮ ಭಾಗವಲ್ಲಿ ಶ್ರೀಪರಶುರಾಮ ದೇವಸ್ಥಾನವಿದೆ . ಎರಡೂ ಗುಡ್ಡಗಳನ್ನು ಪಾಜಕಕ್ಷೇತ್ರಕ್ಕೆ ಹೊಗುವ ಮುಖ್ಯರಸ್ತೆ ಬೇರ್ಪಡಿಸಿದೆ.

ಶ‍್ರೀಪರಶುರಾಮ ದೇವಾಲಯವು ಶಿಲಾಮಯ ಮತ್ತು ಪೂರ್ವಾಭಿಮುಖವಾಗಿದೆ . ತೀರ ಸಾಮಾನ್ಯ ರೀತಿಯ ರಚನೆ ಇದರದು .ಸಾಮಾನ್ಯವಾಗಿ ಗರ್ಭಗುಡಿಯ ಮೇಲೆ ಕಾಣುವ ಗೋಪುರ ಇಲ್ಲಿಲ್ಲ .ಗರ್ಭಗುಡಿಯ ಪಾಣಿಪೀಠದಲ್ಲಿ ಪರಶುರಾಮನ ಸುಂದರವಾಗಿ ಕಡೆಯಲ್ಲಟ್ಟ ಪುಟ್ಟ ವಿಗ್ರಹ ಇದೆ . ಇದೊಂದು ಉಬ್ಬುಶಿಲ್ಪ . ವಿಗ್ರಹ ಚಿಕ್ಕದಾಗಿದ್ದರೂ ದ‍ಷ್ಟಪುಷ್ಡ ದೇಹದ ರಚನೆ ಚೆನ್ನಾಗಿ ಹೊರಹೊಮ್ಮಿದೆ . ಶಿರದಲ್ಲಿ ಕಿರೀಟ, ಹಿತಮಿತವಾದ ವಸ್ತ್ರಾಲಂಕಾರ, ಆಭರಣಗಳನ್ನು ಹೊಂದಿರುವ ಈ ವಿಗ್ರಹದ ಬಲಗೈ‌ಯಲ್ಲಿ ಪುಟ್ಟ ಪರಶುವಿದ್ದರೆ, ಎಡಗೈ‌ಯಲ್ಲಿ ಧನುಸ್ಸನ್ನು ಹಿಡಿದಿದೆ. ವಿಜಯನಗರ ಕಾಲದ ರಚನೆಯನ್ನು ಇದು ಬಿಂಬಿಸುತ್ತದೆ .