ದೇವದಾಸ್ ಗಾಂಧಿ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ದೇವದಾಸ್ ಗಾಂಧಿ, (1900-1958). ಮಹಾತ್ಮ ಗಾಂಧೀಜಿ ಮತ್ತು ಕಸ್ತೂರಬಾ ಗಾಂಧೀಯರ ೪ ಮಕ್ಕಳಲ್ಲಿ ಕೊನೆಯ ಮಗ.
ಬದುಕು
[ಬದಲಾಯಿಸಿ]ದೇವದಾಸ್ ಗಾಂಧೀ 1900ರಲ್ಲಿ ದಕ್ಷಿಣ ಆಫ್ರಿಕದ ಡರ್ಬನಿನಲ್ಲಿ ಜನಿಸಿದರು. ಗಾಂಧೀಯವರ ಇತರ ಮಕ್ಕಳಂತೆ ಇವರಿಗೂ ಸಾಮಾನ್ಯ ರೀತಿಯ ಶಾಲಾ-ಕಾಲೇಜ್ ಶಿಕ್ಷಣ ದೊರಕಲಿಲ್ಲ. ಇವರು ಗಾಂಧಿಯವರೊಂದಿಗೆ ಇದ್ದುದೇ ದೊಡ್ಡ ಶಿಕ್ಷಣವಾಯಿತು. ಇವರು ಯಂಗ್ ಇಂಡಿಯ ಪತ್ರಿಕೆಯಲ್ಲಿ ಕೆಲಸ ಮಾಡಿ, ಪತ್ರಿಕೋದ್ಯಮದ ಅನುಭವ ಪಡೆದರು.ಮಹಾತ್ಮ ಗಾಂಧೀಯವರ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಹವರ್ತಿಯಾದ ಸಿ. ರಾಜಗೋಪಾಲಾಚಾರಿ ಅವರ ಮಗಳಾದ ಲಕ್ಷ್ಮೀಯನ್ನು ದೇವದಾಸ್ ,ಪ್ರೀತಿಸುತ್ತಿದ್ದರು. ಆಗ ದೇವದಾಸರ ವಯಸ್ಸು ೨೮. ಲಕ್ಷ್ಮಿಯವರ ವಯಸ್ಸು ೧೫. ಗಾಂಧಿ ಮತ್ತು ರಾಜಾಜಿ ಈ ಬೆಳವಣಿಗೆಯನ್ನು ಒಪ್ಪಿದರೂ, ವೈವಾಹಿಕ ಜೀವನಕ್ಕೆ ಕಾಲಿಡಲು ಸೂಕ್ತವಾದ ವಯಸ್ಸಲ್ಲವೆಂದು ನಿಶ್ಚಯಿಸಿ, ೫ ವರ್ಷ ಕಾಯಲು ಹೇಳಿದರು. ಆ ಸಮಯದಲ್ಲಿ ಅವರಿಬ್ಬರೂ ಭೇಟಿಯಾಗಲು ಸಮ್ಮತಿಯಿರಲಿಲ್ಲ. ಅದೇರೀತಿ ೧೯೩೩ ರಲ್ಲಿ ಹಿರಿಯರ ಅನುಮತಿ ಪಡೆದು ವಿವಾಹವಾದರು. ಈ ದಂಪತಿಗಳಿಗೆ ತಾರ ಎಂಬ ಒಬ್ಬ ಮಗಳಿದ್ದಾರೆ.(೨೪,ಏಪ್ರಿಲ್, ೧೯೩೪) ೩ ಜನ ಗಂಡುಮಕ್ಕಳು, ರಾಜಮೋಹನ ಗಾಂಧಿ, ಗೋಪಾಲಕೃಷ್ಣ ಗಾಂಧಿ, ರಾಮಚಂದ್ರ ಗಾಂಧಿ.
ವೃತ್ತಿ ಜೀವನ
[ಬದಲಾಯಿಸಿ]1923ರಲ್ಲಿ ದೆಹಲಿಯಲ್ಲಿ ಸ್ಥಾಪಿತವಾದ ಹಿಂದೂಸ್ಥಾನ್ ಟೈಮ್ಸ್ ಎಂಬ ಇಂಗ್ಲಿಷ್ ದಿನಪತ್ರಿಕೆಗೆ 1940ರಲ್ಲಿ ದೇವದಾಸ್ ಗಾಂಧಿಯವರು ಕಾರ್ಯನಿರ್ವಾಹಕ ಸಂಪಾದಕರಾಗಿ ನೇಮಕಗೊಂಡರು. ಆಗ ಇವರ ಅನುಭವ ಒಳ್ಳೆಯ ಪ್ರಯೋಜನಕ್ಕೆ ಬಂತು. ಸಹ ಸಂಪಾದಕರಾಗಿದ್ದ ದುರ್ಗಾದಾಸ್ ಅವರ ನೆರವಿನಿಂದ ಪತ್ರಿಕೆಯನ್ನು ಹೆಚ್ಚು ಜನಪ್ರಿಯವನ್ನಾಗಿ ಮಾಡಲು ಪ್ರಯತ್ನಿಸಿದರು. ಸ್ವಾತಂತ್ರ್ಯ ಹೋರಾಟ, ಕಾಂಗ್ರೆಸ್ ಧ್ಯೇಯ ಇವನ್ನು ಪ್ರತಿಪಾದಿಸುತ್ತಿದ್ದ ಈ ಪತ್ರಿಕೆ 1947ರಲ್ಲಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ಮೇಲೆ, ಸರ್ಕಾರದ ನೀತಿ-ಧೋರಣೆಗಳ ವಾಣಿಯಾಯಿತು. ಇದರ ಹಿಂದಿ ಅವತಾರಗಳಾದ ಹಿಂದೂಸ್ತಾನ್, ಹಿಂದೂಸ್ತಾನ್ ಸಾಪ್ತಾಹಿಕ ಇವೂ ಜನಪ್ರಿಯತೆ ಗಳಿಸಿದುವು. ಇದರ ಸಾಗರೋತ್ತರ ಆವೃತ್ತಿ ವಿದೇಶಗಳಲ್ಲಿಯ ರಾಷ್ಟ್ರೀಯರ ಪ್ರೀತಿಗೆ ಪಾತ್ರವಾಯಿತು. ದೇವದಾಸ್ ಗಾಂಧಿಯವರು 1947ರಲ್ಲಿ ಅಖಿಲಭಾರತ ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿದ್ದರು,
ನಿಧನ
[ಬದಲಾಯಿಸಿ]ದೇವದಾಸ ಗಾಂಧಿಯವರು 1958ರಲ್ಲಿ ನಿಧನವಾದರು.