ಗಾದೆ ಮಾತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಗಾಥಾ' ಎಂಬ ಪ್ರಾಕ್ರತ ಪದದ ಮತ್ತೊಂದು ರೂಪವವೇ ಗಾದೆ. ಗಾದೆ ಒಂದು ನಾಡಿನ ಜನಸಾಮಾನ್ಯರು ನಿತ್ಯ ವ್ಯವಹಾರದಲ್ಲಿ ಸಹಜವಾಗಿ ಬಳಸುವ ರೂಡಿಗತ ಅಲಂಕಾರಿಕ ಮಾತು. ಇದು ಯಾರಿಂದ ಯಾವಾಗ ಹುಟ್ಟುತ್ತದೋ ಹೇಳಲಾಗದು. ಒಂದು ವಿಶೇಷ ಅನುಭವವು ಇಲ್ಲಿ ನುಡಿಗಟ್ಟಿನಲ್ಲಿ ರೂಪುಗೊಳ್ಳುತ್ತದೆ.

ಗಾದೆಯ ಲಕ್ಷಣಗಳು: ೧. ಸಂಕ್ಷಿಪ್ತವಾಗಿರುತ್ತದೆ, ಅರ್ಥ ಚುರುಕಾಗಿ ಚುಟುಕಾಗಿರುತ್ತದೆ. ೨. ಪ್ರಾಸಬದ್ಧ ಅಕ್ಷರಗಳು ಅರ್ಥ ಪೂರ್ಣವಾಗಿ ಜೋಡಣೆಯಾಗಿರುತ್ತದೆ. ೩. ಓಮದಲ್ಲ ಒಂದು ಉಪಮೆ ಅಥವಾ ದ್ರಷ್ಟಾಂತ ಅಡಕವಾಗಿರುತ್ತದೆ. ಉದಾ: ಸಂತೆ ಹೊತ್ತಿಗೆ ೩ ಮೊಳ ನೆಯಿದರು. ಯಾವುದೇ ಕೆಲಸವನ್ನು ಮಾಡಿ ಯಶಸ್ವಿಯಾಗಲು ವ್ಯವಸ್ಥಿತವಾದ ಪೂರ್ವ ಸಿದ್ಧತೆ ಅಗತ್ಯ ಎಂಬ ಸತ್ಯವನ್ನು ಇದು ತಿಳಿಸುತ್ತದೆ. ಸಮಯ ಪ್ರಜ್ಞೆ, ಪ್ರಾಮಾಣಿಕ ಪ್ರಯತ್ನ ಇಲ್ಲಿ ಮುಖ್ಯ. ಉದಾ: ವಿದ್ಯಾರ್ಥಿ ಒಬ್ಬ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕಾದರೆ ಆತ ವರ್ಷದ ಪ್ರಾರಂಭದಿಂದಲೂ ಕ್ರಮಬದ್ಧವಾಗಿ ಅಧ್ಯಯನ ನಡೆಸಬೇಕು. ಆಗ ಮಾತ್ರ ಓದಿದ್ದನ್ನು ಮನನ ಮಾಡಲು ಸಾಧ್ಯವಾಗುತ್ತದೆ. ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸುಲಭವಾಗುತ್ತದೆ. ಹಾಗಿಲ್ಲದೆ ಪರೀಕ್ಷೆ ಸಮೀಪಿಸಿದಾಗ ಮಾತ್ರ ಓದಲು ತೊಡಗಿದರೆ ಸಮಯದ ಅಭಾದಿಂದ ವಿಷಯಗಳು ನೆನಪಿನಲ್ಲಿ ಉಳಿಯದೆ ಪರೀಕ್ಷೆಯಲ್ಲಿ ಗಲಿಬಿಲಿಗೊಳ್ಳುವ ಪ್ರಸಂಗ ಎದುರಾಗುತ್ತದೆ.

ಅಂದರೆ ಯಾವುದೇ ಕೆಲಸವನ್ನು ಅವಸರದಲ್ಲಿ ಮಾಡಬಾರದು. ಆಗ ಅದು ಬಯಸಿದ ಫಲವನ್ನು ಕೊಡುವುದಿಲ್ಲ ಎಂಬುದು ಈ ಗಾದೆಯ ಸಾರ.