ಸದಸ್ಯ:Rajnayaksnd777/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆಲ್ಬೋರ್ನ್, ಜೂ.26: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಪದಚ್ಯುತ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಗೆ ಪ್ರಪ್ರಥಮ ಬಾರಿಗೆ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ ನ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಒಡೆಯರಾದ ಎನ್ .ಶ್ರೀನಿವಾಸನ್ ಅವರು ಆರೋಪ ಹೊತ್ತಿದ್ದಾರೆ. ಈ ಕಾರಣಕ್ಕೆ ಬಿಸಿಸಿಐ ಅಧ್ಯಕ್ಷ ಸ್ಥಾನ ತೊರೆಯುವಂತೆ ಭಾರತದ ಸುಪ್ರೀಂಕೋರ್ಟ್ ಸೂಚಿಸಿತ್ತು. ಕಳೆದ ಐಪಿಲ್ 7 ಟೂರ್ನಿ ಹಾಗೂ ಟೂರ್ನಿ ಅವಧಿಯಲ್ಲಿ ಬಿಸಿಸಿಐ ಉಸ್ತುವಾರಿಯನ್ನು ಹಂಗಾಮಿ ಅಧ್ಯಕ್ಷರಾಗಿ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ವಹಿಸಿಕೊಂಡಿದ್ದರು.[ಬಿಸಿಸಿಐಗೆ ಹಿನ್ನಡೆ, ಸಮಿತಿ ತನಿಖೆಗೆ ಸುಪ್ರೀಂ ತಡೆ] ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ತನಿಖೆ ಇನ್ನೂ ಮುಂದುವರೆದಿರುವ ಸಂದರ್ಭದಲ್ಲೇ ಹೊಸ ರೂಪ ಪಡೆದಿರುವ ಐಸಿಸಿಯ ಪ್ರಪ್ರಥಮ ಅಧ್ಯಕ್ಷರಾಗಿ ಎನ್. ಶ್ರೀನಿವಾಸನ್ ಆಯ್ಕೆಯಾಗಿರುವುದು ಕ್ರಿಕೆಟ್ ಲೋಕದ ಪಂಡಿತರ ಹುಬ್ಬೇರಿಸಿದೆ. ತಮಿಳುನಾಡಿನ ಕ್ರಿಕೆಟ್ ಮಂಡಳಿಗೂ ಎನ್.ಶ್ರೀನಿವಾಸನ್ ಅವರು ಅಧ್ಯಕ್ಷರಾಗಿದ್ದಾರೆ. ಎನ್. ಶ್ರೀನಿವಾಸನ್ ಆಯ್ಕೆ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಘೋಷಣೆಯಾಗಿತ್ತು. ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಐಸಿಸಿ ಹೊಸ ರೂಪ ಪಡೆದ ಮೇಲೆ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ), ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಎ)ಗೆ ಹೆಚ್ಚಿನ ಅಧಿಕಾರ ಲಭಿಸಿದೆ. ಹೊಸ ಐಸಿಸಿ ಮಂಡಳಿ ಜುಲೈನಿಂದ ತನ್ನ ಕಾರ್ಯನಿರ್ವಹಣೆ ಮಾಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಮುಸ್ತಫಾ ಅಧ್ಯಕ್ಷ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಸ್ತಫಾ ಕಮಲ್ ಅವರು ಐಸಿಸಿಯ 11ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಐಸಿಸಿ 52 ಸದಸ್ಯರನ್ನು ಹೊಂದಿದ್ದು, ಇಂದು ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಕೆಲ ತಿದ್ದುಪಡಿಯನ್ನು ಮಾಡುವುದರೊಂದಿಗೆ ಶ್ರೀನಿವಾಸ್ ಅವರನ್ನು ಐಸಿಸಿ ಮುಖ್ಯಸ್ಥನ್ನಾಗಿ ಆಯ್ಕೆ ಮಾಡಲಾಗಿದೆ. ಶ್ರೀನಿವಾಸನ್ ವಿರುದ್ಧ ಇನ್ನು ಐಪಿಎಲ್​ ತನಿಖೆ ನಡೆಯುತ್ತಿರುವುದರಿಂದ ಹೊಸ ಹುದ್ದೆ ಸೃಷ್ಟಿಸಿ ಶ್ರೀನಿವಾಸನ್ ಗೆ ಅಧಿಕಾರ ನೀಡಲಾಗಿದೆ. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ಬಾಲಿವುಡ್ ನಟ, ಬುಕ್ಕಿಗಳ ನಂಟು ಹೊಂದಿರುವ ವಿಂದೂ ದಾರಾಸಿಂಗ್ ಮೂಲಕ ನಾನು ಐಪಿಎಲ್ ಬೆಟ್ಟಿಂಗ್ ನಡೆಸಿರುವುದು ನಿಜ ಎಂದು ಹಗರಣದಲ್ಲಿ ಬಂಧಿತನಾಗಿ ಪೊಲೀಸರ ವಶದಲ್ಲಿದ್ದಾಗ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ ಮೇಯಪ್ಪನ್ ತಪ್ಪೊಪ್ಪಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.