ಸ್ವಯಂವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾಚೀನ ಭಾರತದಲ್ಲಿ, ಸ್ವಯಂವರ ವಿವಾಹಯೋಗ್ಯ ವಯಸ್ಸಿನ ಹುಡುಗಿಯು ಕನ್ಯಾರ್ಥಿಗಳ ಪಟ್ಟಿಯಿಂದ ಪತಿಯನ್ನು ಆಯ್ಕೆಮಾಡುವ ಒಂದು ಆಚರಣೆಯಾಗಿತ್ತು. ಈ ಆಚರಣೆಯಲ್ಲಿ, ಹುಡುಗಿಯ ತಂದೆಯು ಒಂದು ಮಂಗಳಕರ ಸಮಯ ಹಾಗು ಸ್ಥಳದಲ್ಲಿ ಸ್ವಯಂವರವನ್ನು ನಡೆಸಲು ನಿರ್ಧರಿಸುತ್ತಾನೆ ಮತ್ತು ಈ ಸುದ್ದಿಯನ್ನು ಹೊರಜಗತ್ತಿಗೆ ಪ್ರಸಾರಮಾಡುತ್ತಾನೆ. ರಾಜರು ಸಾಮಾನ್ಯವಾಗಿ ದೂತರನ್ನು ಹೊರ ನಾಡುಗಳಿಗೆ ಕಳುಹಿಸುತ್ತಿದ್ದರು, ಮತ್ತು ಸ್ಥಳೀಯ ಸಮುದಾಯದಲ್ಲಿ ಸುದ್ದಿಯನ್ನು ಹರಡಲು ಶ್ರೀಸಾಮಾನ್ಯರನ್ನು ವ್ಯವಸ್ಥೆಮಾಡಲಾಗುತ್ತಿತ್ತು.

"https://kn.wikipedia.org/w/index.php?title=ಸ್ವಯಂವರ&oldid=430288" ಇಂದ ಪಡೆಯಲ್ಪಟ್ಟಿದೆ