ಪುರುಷಮೇಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುರುಷಮೇಧ (ಪುರುಷ ಅಂದರೆ ವಿಷ್ಣು, ಹಾಗಾಗಿ ಅಕ್ಷರಶಃ ಅರ್ಥ, "ವಿಷ್ಣುವಿಗಾಗಿ ನಡೆಸಲಾಗುವ ಯಜ್ಞ") ಯಜುರ್ವೇದದಲ್ಲಿ ವಿವರಿಸಲಾದ ಒಂದು ವೈದಿಕ ಯಜ್ಞ. ಇದು ವಿಷ್ಣುವನ್ನು ಮೆಚ್ಚಿಸುವುದಕ್ಕೋಸ್ಕರ ನಡೆಸಲಾಗುವ ಒಂದು ಯಜ್ಞ. ಪ್ರಖ್ಯಾತ ಹಿಂದೂ ವಿದ್ವಾಂಸ, ಸ್ವಾಮಿ ಪ್ರಭುಪಾದ ಈ ಕೆಳಗಿನ ಶಬ್ದಗಳಲ್ಲಿ ಯಜ್ಞದಲ್ಲಿನ ಹಿಂಸೆಯನ್ನು ವಿವರಿಸುತ್ತಾರೆ,

“ವೈದಿಕ ಸಾಹಿತ್ಯದಲ್ಲಿ ಯಜ್ಞದಲ್ಲಿ ಪ್ರಾಣಿಬಲಿಯನ್ನು ಸೂಚಿಸಲಾಗುತ್ತದಾದರೂ, ಪ್ರಾಣಿಯನ್ನು ಸತ್ತಿತೆಂದು ಪರಿಗಣಿಸಲಾಗುವುದಿಲ್ಲ. ಬಲಿಯು ಪ್ರಾಣಿಗೆ ಹೊಸ ಜೀವನವನ್ನು ಕೊಡಲು ಆಗಿರುತ್ತದೆ. ಬಲಿಯಲ್ಲಿ ಕೊಲ್ಲಲ್ಪಟ್ಟ ನಂತರ ಕೆಲವೊಮ್ಮೆ ಪ್ರಾಣಿಗೆ ಹೊಸ ಪ್ರಾಣಿ ಜೀವನವನ್ನು ನೀಡಲಾಗುತ್ತದೆ, ಮತ್ತು ಕೆಲವೊಮ್ಮೆ ಪ್ರಾಣಿಯನ್ನು ತಕ್ಷಣ ಮಾನವ ರೂಪಕ್ಕೆ ಬಡ್ತಿ ನೀಡಲಾಗುತ್ತದೆ.”