ಶ್ರಾದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರಾದ್ಧ ಒಂದು ಸಂಸ್ಕೃತ ಶಬ್ದ ಮತ್ತು ಇದರರ್ಥ ಎಲ್ಲ ಪ್ರಾಮಾಣಿಕತೆ ಮತ್ತು ವಿಶ್ವಾಸದಿಂದ (ಶ್ರದ್ಧೆ) ನಡೆಸಲಾದ ಏನೇ ಅಥವಾ ಯಾವುದೇ ಕ್ರಿಯೆ. ಹಿಂದೂ ಧರ್ಮದಲ್ಲಿ, ಅದು ಒಬ್ಬರ ಪೂರ್ವಜರಿಗೆ (ಪಿತೃ), ವಿಶೇಷವಾಗಿ ಒಬ್ಬರ ಮೃತ ಹೆತ್ತವರಿಗೆ ಗೌರವಾರ್ಪಣೆ ಸಲ್ಲಿಸಲು ಒಬ್ಬರು ನಡೆಸುವ ಕ್ರಿಯಾವಿಧಿ. ಪರಿಕಲ್ಪನಾತ್ಮಕವಾಗಿ, ಅದು ಜನರಿಗೆ ತಮ್ಮ ಹೆತ್ತವರು ಹಾಗು ಪೂರ್ವಜರ ಕಡೆಗೆ ಹೃತ್ಪೂರ್ವಕ ಕೃತಜ್ಞತೆ ಹಾಗು ವಂದನೆಗಳನ್ನು ವ್ಯಕ್ತಪಡಿಸಲು ಒಂದು ರೀತಿ, ಅವರು ಏನಾಗಿದ್ದಾರೊ ಅದಕ್ಕೆ ಅವರಿಗೆ ನೆರವಾಗಿದ್ದಕ್ಕಾಗಿ ಮತ್ತು ಅವರ ಶಾಂತಿಗಾಗಿ ಪ್ರಾರ್ಥಿಸಲು.

ಶ್ರದ್ದೆಯಿಂದ ಮಾಡುವ ಕ್ರಿಯೆ. ಶ್ರಾದ್ದದಲ್ಲಿ ಹಲವು ಕ್ರಮ ಇದೆ. (೧) ವಾಡಿಕೆಯಂತೆ ಮೃತ ವ್ಯಕ್ತಿಗಳ ಉದ್ದೇಶ ಮಾಡುವ ಕ್ರಿಯೆ. ದೇಹವನ್ನು ಬಿಟ್ಟ ಅತ್ನ ತನ್ನ ಕರ್ಮಕ್ಕೆ ಅನುಸಾರವಾಗಿ ಬೇರೆ ಯಾವುದೋ ದೇಹದಲ್ಲಿ ಹುಟ್ಟಿರುತ್ತದೆ. ಆ ಮೃತ ವ್ಯಕ್ತಿಯ ಸಂಬಂದವುಳ್ಳವರು ಅವರ ಶ್ರೇಯಸ್ಸಿಗೆ ಪಿತೃಲೋಕದಲ್ಲಿರುವ ಪಿತೃ ದೇವತೆಗಳ ( ವಸು , ರುದ್ರ , ಆದಿತ್ಯರ ) ಉದ್ದೇಶ ಮಾಡುವಂತಹುದು ಶ್ರಾದ್ದ.

ಶ್ರಾದ್ದದಲ್ಲಿ ನಿತ್ಯ ಶ್ರಾದ್ದ, ಪಕ್ಷ ಶ್ರಾದ್ದ, ಮಾಸಿಕ ಶ್ರಾದ್ದ, ಸಂವತ್ಸರ ಶ್ರಾದ್ದಗಳಿವೆ. ಪೂರ್ವ ಷೋಡಶ, ಉತ್ತರ ಷೋಡಷ ಶ್ರಾದ್ದಗಳೂ ಇವೆ.

ಮೃತ ವ್ಯಕ್ತಿಗಳ ವಂಶದಲ್ಲಿ ಹುಟ್ಟಿದರ ಪ್ರಯುಕ್ತ ಅವರಿಂದ ಪಡೆದ ಸಹಾಯ ಹಾಗೂ ಮಾನವರಾಗಿ ಹುಟ್ಟಲು ಕಾರಣಿಭೂತರಾದ್ದರಿಂದ ಋಣ ಪರಿಹಾರಕ್ಕೆ ಕೃತಜ್ಹತೆಗಾಗಿ ಮಾಡುವ ಶ್ರಾದ್ದ.

"https://kn.wikipedia.org/w/index.php?title=ಶ್ರಾದ್ಧ&oldid=425112" ಇಂದ ಪಡೆಯಲ್ಪಟ್ಟಿದೆ