ಬೋರಿಸ್ ಬೆಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Boris Becker
ಅಡ್ಡಹೆಸರುBoom Boom
The Lion of Leimen
ದೇಶWest Germany (1983–1990)
ಜರ್ಮನಿ (from 1990)
ವಾಸಸ್ಥಾನSchwyz, Switzerland
ಎತ್ತರ1.90 m (6 ft 3 in)
ಆಟದಲ್ಲಿ ಪರಣಿತಿ ಪಡೆದದ್ದು1984
ನಿವೃತ್ತಿJune 30, 1999
ಆಟRight-handed (one-handed backhand)
ವೃತ್ತಿಯ ಬಹುಮಾದನದ ಹಣUS $25,080,956
ಅಂತರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ಼್ ಫ಼ೇಮ್2003 (member page)
ಸಿಂಗಲ್ಸ್
ವೃತ್ತಿಯ ದಾಖಲೆ713–214 (76.91%)
ವೃತ್ತಿಯ ಶೀರ್ಷಿಕೆಗಳು49
ಅತ್ಯುನ್ನತ ಶ್ರೇಣಿNo. 1 (28 January 1991)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್W (1991, 1996)
ಫ್ರೆಂಚ್ ಓಪನ್SF (1987, 1989, 1991)
ವಿಂಬಲ್ಡನ್W (1985, 1986, 1989)
ಯು.ಇಸ್. ಓಪನ್ (ಟೆನಿಸ್)W (1989)
ಇತರ ಪಂದ್ಯಾವಳಿಗಳು
ಟೂರ್ ಫ಼ೈನಲ್‌ಗಳುW (1988, 1992, 1995) WCT(1988)
ಒಲಂಪಿಕ್ ಆಟಗಳು3R (1992)
ಡಬಲ್ಸ್
ವೃತ್ತಿಯ ದಾಖಲೆ254–136
ವೃತ್ತಿಯ ಶೀರ್ಷಿಕೆಗಳು15
ಅತ್ಯುನ್ನತ ಶ್ರೇಣಿ6 (22 September 1986)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್QF (1985)
ಇತರೆ ಡಬಲ್ಸ್ ಟೂರ್ನಮೆಂಟ್‌ಗಳು
ಒಲಂಪಿಕ್ ಆಟಗಳುW (1992)
Last updated on: N/A.
ಒಲಂಪಿಕ್ ಪದಕ ಪಟ್ಟಿ
Men's Tennis
Gold medal – first place 1992 Barcelona Men's doubles

ಬೋರಿಸ್ ಫ್ರಾಂಜ್ ಬೆಕರ್ (ಜನನ 22 ನವೆಂಬರ್ 1967) ಅವರು ಜರ್ಮನಿಯ ಮಾಜಿ ವಿಶ್ವದ ನಂ 1 ವೃತ್ತಿಪರ ಟೆನ್ನಿಸ್ ಆಟಗಾರರಾಗಿದ್ದಾರೆ. ಇವರು ಆರು ಬಾರಿ ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಚಾಂಪಿಯನ್ ಆಗಿರುವ ಜೊತೆಗೆ ಒಲಂಪಿಕ್ ಚಿನ್ನದ ಪದಕ ವಿಜೇತರಾಗಿದ್ದಾರೆ, ಮತ್ತು ತಮ್ಮ 17 ನೇ ವಯಸ್ಸಿನಲ್ಲಿ ವಿಂಬಲ್ಡ್ ಪ್ರಶಸ್ತಿ ಗೆಲ್ಲುವ ಮೂಲಕ ಇಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದು ಅತೀ ಕಿರಿಯ ಆಟಗಾರರಾಗಿದ್ದಾರೆ. ಬೋರಿಸ್ ಬೆಕರ್ ಅವರು ಮೂರು ಎಟಿಪಿ ಮಾಸ್ಟರ್ಸ್ ವರ್ಲ್ಡ್ ಟೂರ್ ಫೈನಲ್‌ಗಳು (8 ಫೈನಲ್‌ಗಳನ್ನು ಆಡಿ ಸಾರ್ವಕಾಲಿಕ ಪಟ್ಟಿಯಲ್ಲಿ 9 ಬಾರಿ ಆಡಿದ ಲೆಂಡ್ಲ್ ಅವರ ಹಿಂದಿದ್ದಾರೆ) ಮತ್ತು ಒಂದು ಡಬ್ಲ್ಯೂಸಿಟಿ ಫೈನಲ್‌ಗಳನ್ನು ಒಳಗೊಂಡು ನಾಲ್ಕು ವರ್ಷಾಂತ್ಯದ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಹಾಗೆಯೇ ಬೆಕರ್ ಅವರು ಐದು ಮಾಸ್ಟರ್ಸ್ 1000 ಸರಣಿಯ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಟೆನ್ನಿಸ್ ಮ್ಯಾಗಜೈನ್ ಪತ್ರಿಕೆಯು 1965 ರಿಂದ 2005 ರವರೆಗಿನ ತನ್ನ ಸಾರ್ವಕಾಲಿಕ 40 ಸರ್ವೋತೃಷ್ಟ ಟೆನ್ನಿಸ್ ಆಟಗಾರರ ಪಟ್ಟಿಯಲ್ಲಿ ಬೆಕರ್ ಅವರಿಗೆ 18 ನೇ ಸ್ಥಾನವನ್ನು ನೀಡಿದೆ.[೧]

ಆರಂಭಿಕ ಜೀವನ[ಬದಲಾಯಿಸಿ]

ಬೆಕರ್ ಅವರು ಜೆಕೋಸ್ಲೋವಾಕಿಯಾದಲ್ಲಿ ಬೆಳೆದ ಎಲ್ವಿರಾ (ನೀ ಪಿಶ್) ಮತ್ತು ಕಾರ್ಲ್-ಹೀಂಜ್ ಬೆಕರ್ ಅವರ ಏಕೈಕ ಪುತ್ರರಾಗಿ ಪಶ್ಚಿಮ ಜರ್ಮನಿಯ ಲೀಮನ್ನಲ್ಲಿ ಜನ್ಮ ತಾಳಿದರು.[೨] ಬೆಕರ್ ಅವರು ಕ್ಯಾಥೋಲಿಕ್ ಹಿನ್ನೆಲೆಯಲ್ಲಿ ಬೆಳೆದರು.[೨][೩] ವಿನ್ಯಾಸಕಾರರಾಗಿದ್ದ ಇವರ ತಂದೆಯವರು ಲೀಮನ್‌ನಲ್ಲಿ . ({1}ಟೆನ್ನಿಸ್-ಕ್ಲಬ್ ಬ್ಲಾವು-ವೀಬ್ 1964 ಲೀಮನ್ ಇ ವಿ.) ಅನ್ನು ಸ್ಥಾಪಿಸಿದರು ಮತ್ತು ಬೆಕರ್ ಅವರು ಇಲ್ಲಿಯೇ ಆಟವನ್ನು ಕಲಿತರು.

ಟೆನಿಸ್‌ ವೃತ್ತಿಜೀವನ[ಬದಲಾಯಿಸಿ]

ಬೋರಿಸ್ ಅವರು 1984 ರಲ್ಲಿ ವೃತ್ತಿಪರ ಜಗತ್ತಿಗೆ ಕಾಲಿಟ್ಟರು ಮತ್ತು ಅದೇ ವರ್ಷ ಮ್ಯೂನಿಚ್ ನಲ್ಲಿ ತಮ್ಮ ಪ್ರಥಮ ವೃತ್ತಿಪರ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದರು. ಪಶ್ಚಿಮ ಜರ್ಮನಿಯ ಯುವಕನಾಗಿ, ಜೂನ್ 1985 ರಲ್ಲಿ ಕ್ವೀನ್ಸ್ ಕ್ಲಬ್ ನಲ್ಲಿ ತಮ್ಮ ಪ್ರಥಮ ಅಗ್ರ ಹಂತದ ಸಿಂಗಲ್ಸ್ ಪ್ರಶಸ್ತಿಯನ್ನು ಗಳಿಸಿದರು ಮತ್ತು ಎರಡು ವಾರಗಳ ನಂತರ ಜೂನ್ 7 ರಂದು ಕೆವಿನ್ ಕರೆನ್ ಅವರನ್ನು ನಾಲ್ಕು ಸೆಟ್‌ಗಳಲ್ಲಿ ಸೋಲಿಸುವ ಮೂಲಕ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ ಪ್ರಥಮ ಶ್ರೇಯಾಂಕ ರಹಿತ ಆಟಗಾರ ಮತ್ತು ಪ್ರಥಮ ಜರ್ಮನ್ ಎಂಬ ಕೀರ್ತಿಗೆ ಪಾತ್ರರಾದರು. ಆ ಸಮಯದಲ್ಲಿ ಬೆಕರ್ ಅವರು 17 ವರ್ಷ 7 ತಿಂಗಳುಗಳಲ್ಲಿ ಪುರುಷರ ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಅತೀ ಕಿರಿಯ ಆಟಗಾರರಾಗಿದ್ದರು (ನಂತರ 1989 ರಲ್ಲಿ ಈ ದಾಖಲೆಯನ್ನು 17 ವರ್ಷ ತಿಂಗಳುಗಳಿದ್ದಾಗ ಫ್ರೆಂಚ್ ಓಪನ್ ಅನ್ನು ಜಯಿಸಿದ ಮೈಕೆಲ್ ಚಾಂಗ್ ಅವರು ಮುರಿದರು). ತಮ್ಮ ವಿಜಯದ ಎರಡು ತಿಂಗಳ ನಂತರ, ಬೆಕರ್ ಅವರು ಸಿನ್ಸಿನಾಟಿ ಓಪನ್ ಅನ್ನು ಜಯಿಸಿದ ಅತೀ ಕಿರಿಯ ಪ್ರಥಮ ಆಟಗಾರರಾದರು.

1986 ರಲ್ಲಿ ಬೆಕರ್ 1986 ರ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ವಿಶ್ವದ ನಂ 1 ಆಟಗಾರರಾಗಿದ್ದ ಇವಾನ್ ಲೆಂಡ್ಲ್ ಅವರನ್ನು ನೇರ ಸೆಟ್‌ಗಳಲ್ಲಿ ಪರಾಭವಗೊಳಿಸುವುದರ ಮೂಲಕ ಪ್ರಶಸ್ತಿಯನ್ನು ತಮ್ಮಲ್ಲಿಯೇ ಉಳಿಸಿಕೊಂಡರು. 1987 ರ ವಿಂಬಲ್ಡನ್ ಪಂದ್ಯಾವಳಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಆಗ ವಿಶ್ವದ ನಂ 2 ಆಟಗಾರರಾಗಿದ್ದ ಬೆಕರ್ ಅವರನ್ನು ವಿಶ್ವದ 70 ನೇ ಕ್ರಮಾಂಕದ ಆಟಗಾರರಾಗಿದ್ದ ಪೀಟರ್ ಡೂಹಾನ್ ಅವರು ಸೋಲಿಸಿದರು. ಅದೇ ವರ್ಷದ ಡೇವಿಸ್ ಕಪ್ನಲ್ಲಿ, ಬೆಕರ್ ಮತ್ತು ಜಾನ್ ಮೆಕೆನ್ರೋ ಅವರು ಟೆನ್ನಿಸ್ ಇತಿಹಾಸದ ಅತೀ ದೀರ್ಘ ಪಂದ್ಯವೊಂದನ್ನು ಆಟವಾಡಿದರು. ಅಂತಿಮವಾಗಿ ಬೆಕರ್ ಅವರು 4–6, 15–13, 8–10, 6–2, 6–2 ಸೆಟ್‌ಗಳಲ್ಲಿ ಜಯಗಳಿಸಿದರು (ಆ ಸಮಯದಲ್ಲಿ, ಡೇವಿಸ್ ಕಪ್ನಲ್ಲಿ ಯಾವುದೇ ಟೈಬ್ರೇಕ್‌ಗಳು ಇರಲಿಲ್ಲ). ಪಂದ್ಯವು 6 ಗಂಟೆ ಮತ್ತು 22 ನಿಮಿಷಗಳ ಕಾಲ ನಡೆಯಿತು.

1988 ರ ವಿಂಬಲ್ಡನ್ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಬೆಕರ್ ಅವರು ಫೈನಲ್ ಪ್ರವೇಶಿಸಿದರು, ಅಲ್ಲಿ ಅವರು ಸ್ಟೀಫನ್ ಎಡ್ಬರ್ಗ್ ಅವರೆದರು ನಾಲ್ಕು ಸೆಟ್‌ಗಳಲ್ಲಿ ಪರಾಭವಗೊಂಡರು, ಈ ಪಂದ್ಯವು ವಿಂಬಲ್ಡನ್‌ನ ಅತ್ಯುತ್ತಮ ಎದುರಾಳಿಗಳ ಹೋರಾಟದ ಪ್ರಾರಂಭಕ್ಕೆ ವೇದಿಕೆಯಾಯಿತು. 1988 ರಲ್ಲಿ ಬೆಕರ್ ಅವರು ಪಶ್ಚಿಮ ಜರ್ಮನಿಗೆ ಅದರ ಮೊದಲ ಡೇವಿಸ್ ಕಪ್ ಅನ್ನು ಜಯಿಸುವಲ್ಲಿ ಸಹ ಸಹಾಯ ಮಾಡಿದರು. ಬೆಕರ್ ಅವರು ನ್ಯೂಯಾರ್ಕ್ ನಗರದಲ್ಲಿ ನಡೆದ ವರ್ಷಾಂತ್ಯದ ಮಾಸ್ಟರ್ಸ್ ಪಂದ್ಯಾವಳಿಯ ಫೈನಲ್‌ನಲ್ಲಿ ಐದು ಬಾರಿಯ ಚಾಂಪಿಯನ್ ಇವಾನ್ ಲೆಂಡ್ಲ್ ಅವರನ್ನು ಪರಾಭವಗೊಳಿಸಿದರು. ಅದೇ ವರ್ಷ ಬೆಕರ್ ಅವರು ವರ್ಲ್ಡ್ ಚಾಂಪಿಯನ್‌ಶಿಪ್ ಟೆನಿಸ್ನ ವಿರುದ್ಧದ ಋತುವಿನ ಅಂತ್ಯದ ಡಬ್ಲ್ಯೂಸಿಟಿ ಫೈನಲ್ಸ್ನಲ್ಲಿ ನಾಲ್ಕು ಸೆಟ್‌ಗಳಲ್ಲಿ ಸ್ಟೀಫನ್ ಎಡ್ಬರ್ಗ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ಜಯಿಸಿದರು.

1989 ರಲ್ಲಿ, ಬೆಕರ್ ಅವರು ಎರಡು ಗ್ರಾಂಡ್ ಸ್ಲಾಮ್ ಪ್ರಶಸ್ತಿಯಲ್ಲಿ ಜಯಗಳಿಸಿದರು, ಇದು ಅವರ ಒಂದಕ್ಕಿಂತ ಹೆಚ್ಚು ಗ್ರಾಂಡ್ ಸ್ಲಾಮ್ ಗೆದ್ದ ಏಕೈಕ ವರ್ಷವಾಗಿದೆ. ಫ್ರೆಂಚ್ ಓಪನ್ ಸೆಮಿಫೈನಲ್‌ನಲ್ಲಿ ಎಡ್ಬರ್ಗ್ ಅವರಿಗೆ ಸೋತ ನಂತರ, ಬೆಕರ್ ಅವರು ವಿಂಬಲ್ಡನ್ ಫೈನಲ್‌ನಲ್ಲಿ ಎಡ್ಬರ್ಗ್ ಅವರನ್ನು ಸೋಲಿಸಿದರು ಮತ್ತು ನಂತರ ಯುಎಸ್ ಓಪನ್ ಫೈನಲ್‌ನಲ್ಲಿ ಲೆಂಡ್ಲ್ ಅವರನ್ನು ಪರಾಭವಗೊಳಿಸಿದರು. ಹಾಗೆಯೇ ಬೆಕರ್ ಅವರು ಡೇವಿಸ್ ಕಪ್ ಸೆಮಿಫೈನಲ್ ಹಂತದಲ್ಲಿ ಆಂಡ್ರಿ ಅಗಾಸ್ಸಿ ಅವರನ್ನು ಸೋಲಿಸುವ ಮೂಲಕ ಪಶ್ಚಿಮ ಜರ್ಮನಿಯು ಡೇವಿಸ್ ಕಪ್ ಅನ್ನು ಉಳಿಸಿಕೊಳ್ಳುವಲ್ಲಿ ಸಹಾಯ ಮಾಡಿದರು. ಪರಿಣಾಮವಾಗಿ, ಬೆಕರ್ ಅವರನ್ನು ವರ್ಷದ ವ್ಯಕ್ತಿ ಎಂದು ಎಟಿಪಿ ಟೂರ್ ಹೆಸರಿಸಿತು. ಆದರೆ ವಿಶ್ವದ ನಂ 1 ಸ್ಥಾನವು ಇನ್ನೂ ಅವರಿಗೆ ಮರೀಚಿಕೆಯಾಗಿಯೇ ಉಳಿಯಿತು.

1990 ರಲ್ಲಿ ಬೆಕರ್ ಅವರು ಸತತ ಮೂರನೇ ಬಾರಿಗೆ ವಿಂಬಲ್ಡನ್ ಫೈನಲ್‌ನಲ್ಲಿ ಎಡ್ಬರ್ಗ್ ಅವರನ್ನು ಎದುರಿಸಿದರು, ಆದರೆ ಈ ಬಾರಿ ಅವರು ಐದು-ಸೆಟ್‌ಗಳ ಪಂದ್ಯದಲ್ಲಿ ಸೋಲನ್ನಪ್ಪಿದರು. ಹಾಗೆಯೇ ಯುಎಸ್ ಓಪನ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಅಗಾಸ್ಸಿ ಅವರೆದುರು ಸೋಲನ್ನಪ್ಪುವ ಮೂಲಕ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಿಫಲರಾದರು. 1991 ರಲ್ಲಿ ಬೆಕರ್ ಅವರು ಪ್ರಥಮ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದರು ಮತ್ತು ಅಲ್ಲಿ ಅವರು ಲೆಂಡ್ಲ್ ಅವರನ್ನು ಪರಾಭವಗೊಳಿಸುವ ಮೂಲಕ ವಿಶ್ವದ ನಂ 1 ಪಟ್ಟವನ್ನು ಅಲಂಕರಿಸಿದರು. ಫ್ರೆಂಚ್ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಬೆಕರ್ ಅವರು ಅಗಾಸ್ಸಿ ಅವರೆದುರು ಪರಾಭವಗೊಂಡು ವರ್ಷದ ಮೊದಲೆರಡು ಗ್ರಾಂಡ್ ಸ್ಲಾಮ್ ಪಂದ್ಯಾವಳಿಯನ್ನು ಗೆಲ್ಲುವುದರಿಂದ ವಂಚಿತರಾದರು. 1991 ರಲ್ಲಿ ಬೆಕರ್ ಅವರು 12 ವಾರಗಳ ಕಾಲ ವಿಶ್ವದ ನಂ 1 ಪಟ್ಟವನ್ನು ಅಲಂಕರಿಸಿದ್ದರು, ಆದರೆ ಅವರು ಎಂದಿಗೂ ಈ ಸ್ಥಾನದಲ್ಲಿ ವರ್ಷವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

1992 ರಲ್ಲಿ ಬೆಕರ್ ಅವರು ಏಳು ಟೂರ್ ಪ್ರಶಸ್ತಿಗಳನ್ನು ಜಯಿಸಿದರು ಮತ್ತು ಇದರಲ್ಲಿ ಜಿಮ್ ಕುರಿಯರ್ ಅವರನ್ನು ನಾಲ್ಕು ಸೆಟ್‌ಗಳಲ್ಲಿ ಸೋಲಿಸಿ ಗೆದ್ದುಕೊಂಡ ಎಟಿಪಿ ಟೂರ್ ವರ್ಲ್ಡ್ ಚಾಂಪಿಯನ್‌ಶಿಪ್ ಸಹ ಸೇರಿತ್ತು.

1993 ರೊಳಗೆ, ಬೆಕರ್ ಅವರು ಬಾರ್ಬರಾ ಫೆಲ್ಟಸ್ ಅವರೊಂದಿಗೆ ಹೊಂದಿದ್ದ ಸಂಬಂಧ ಮತ್ತು ಅವರೊಂದಿಗಿನ ಮದುವೆಯು ಅವರಿಗೆ ತೊಂದರೆಯನ್ನು ತಂದಿತು, ಬಾರ್ಬರಾ ಅವರ ತಾಯಿಯು ಜರ್ಮನ್ ಆಗಿದ್ದು, ತಂದೆಯು ಆಫ್ರಿಕನ್-ಅಮೇರಿಕನ್ ಆಗಿದ್ದರು ಮತ್ತು ಜರ್ಮನ್ ಸರ್ಕಾರದೊಂದಿಗಿನ ತೆರಿಗೆ ಕುರಿತ ಸಮಸ್ಯೆಗಳು ಬೆಕರ್ ಅವರ ವೃತ್ತಿ ಜೀವನದ ಮಧ್ಯಭಾಗವು ಕ್ಷೀಣಿಸಲು ಕಾರಣವಾಯಿತು. 1991 ರ ವಿಂಬಲ್ಡನ್ ಸಮಯದಲ್ಲಿ ಬೆಕರ್ ಅವರು ವಿಶ್ವದ 2 ನೇ ಕ್ರಮಾಂಕದಲ್ಲಿದ್ದರು ಮತ್ತು ಅವರು ತಮ್ಮ ಸತತ ನಾಲ್ಕನೇ ಫೈನಲ್ ಅನ್ನು ತಲುಪಿದರು. ಆದರೆ, ಬೆಕರ್ ಅವರು ತಮ್ಮ ಜರ್ಮನ್ ಸಹ ಆಟಗಾರ ಮತ್ತು ಆಗಿನ ವಿಶ್ವದ 7 ನೇ ಕ್ರಮಾಂಕದ ಮೈಕೆಲ್ ಸ್ಟಿಚ್ ಅವರೆದುರು ನೇರ ಸೆಟ್‌ಗಳಲ್ಲಿ ಸೋಲನ್ನು ಅನುಭವಿಸಿದರು. ಬೆಕರ್ ಮತ್ತು ಸ್ಟಿಚ್ ಅವರುಗಳು ತೀವ್ರವಾದ ಪೈಪೋಟಿಯನ್ನು ಬೆಳೆಸಿಕೊಂಡರು ಮತ್ತು ಆಗಾಗ್ಗೆ ಮಾಧ್ಯಮದವರು ಕೆರಳುವ ಬೆಕರ್ ಅವರನ್ನು ಹೆಚ್ಚು ಸಂಯಮದ ಸ್ಟಿಚ್ ಅವರಿಗೆ ಹೋಲಿಸುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು] ಆದರೆ ಬೆಕರ್ ಮತ್ತು ಸ್ಟಿಚ್ ಅವರುಗಳು ಒಂದುಗೂಡಿ 1992 ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಒಲಂಪಿಕ್ ಕ್ರೀಡೆಗಳಲ್ಲಿ ಪುರುಷರ ಡಬಲ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಬೆಕರ್ ಅವರು ಫ್ರಾಂಕ್‌ಫರ್ಟ್ನಲ್ಲಿ ನಡೆದ 1992 ನೇ ಸಾಲಿನ ವರ್ಷಾಂತ್ಯದ ಎಟಿಪಿ ವಿಶ್ವ ಟೂರ್ ಚಾಂಪಿಯನ್‌ಶಿಪ್‌ನಲ್ಲಿ ಜಿಮ್ ಕುರಿಯರ್ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗಳಿಸಿದರು.

1995 ರಲ್ಲಿ, ಬೆಕರ್ ಅವರು ಅಗಾಸ್ಸಿ ಅವರನ್ನು ಸೆಮಿಫೈನಲ್ ಪಂದ್ಯದಲ್ಲಿ ಸೋಲಿಸಿ ಏಳನೇ ಬಾರಿಗೆ ವಿಂಬಲ್ಡನ್ ಫೈನಲ್ ಪ್ರವೇಶಿಸಿದರು. ಹಿಂದಿನ ಲಯವನ್ನು ಕಳೆದುಕೊಂಡಿದ್ದ ಬೆಕರ್ ಅವರು ಸೆಡ್ರಿಕ್ ಪಿಯೋಲಿನ್ ಮತ್ತು ಅಗಾಸ್ಸಿ ಅವರೊಂದಿಗಿನ ತೀವ್ರ ಪ್ರತಿಸ್ಪರ್ಧೆಯಿಂದ ಬಳಲಿದ್ದು ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ಅನ್ನು ಟೈಬ್ರೇಕ್‌ನಲ್ಲಿ ಗೆದ್ದು, ಅಂತಿಮವಾಗಿ ನಾಲ್ಕು ಸೆಟ್‌ಗಳಲ್ಲಿ ಪೀಟ್ ಸಾಂಪ್ರಾಸ್ ಅವರೆದುರು ಸೋಲು ಕಂಡರು. ಬೆಕರ್ ಅವರು ಫ್ರಾಂಕ್‌ಫರ್ಟ್‌ನಲ್ಲಿ ಚಾಂಗ್ ಅವರನ್ನು ಫೈನಲ್ ಪಂದ್ಯದಲ್ಲಿ ನೇರ ಸೆಟ್‌ಗಳಲ್ಲಿ ಪರಾಭವಗೊಳಿಸುವುದರ ಮೂಲಕ ಮೂರನೇ ಹಾಗೂ ಅಂತಿಮ ಬಾರಿಗೆ ವರ್ಷಾಂತ್ಯದ ಎಟಿಪಿ ಟೂರ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡರು. 1996 ರಲ್ಲಿನ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಗ್ ಅವರನ್ನು ಫೈನಲ್ ಪಂದ್ಯದಲ್ಲಿ ಸೋಲಿಸುವ ಮೂಲಕ ಬೆಕರ್ ಅವರು ತಮ್ಮ ಆರನೇ ಹಾಗೂ ಅಂತಿಮ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದರು. ಈ ಪಂದ್ಯಾವಳಿಯಲ್ಲಿ, ಬೆಕರ್ ಅವರು ವಿನೋದದ ಗೆಲುವಿನ ಮಾತುಗಳನ್ನಾಡಿದರು.[ಸೂಕ್ತ ಉಲ್ಲೇಖನ ಬೇಕು] ಅವರು ತಮ್ಮ ಪ್ರಾಯೋಜರನ್ನು ಪ್ರಸ್ತಾಪಿಸಿದಾಗ, ಪೂರ್ಣ ಪ್ರಮಾಣದ ದಿನಗಳು ಉಳಿದಿಲ್ಲವೆನ್ನುತ್ತಾ ಸಂಕ್ಷೇಪಗೊಳಿಸಿದರು. ತದನಂತರ ಅವರು ಚಾಂಗ್ ಅವರಿಗೆ ಸಾಂತ್ವನದ ಮಾತುಗಳನ್ನಾಡಿ, ತಮ್ಮ (ಬೆಕರ್) ದಿನಗಳು ಎಣಿಕೆಯಷ್ಟಿದ್ದು, ಚಾಂಗ್ ಅವರು ಇನ್ನೂ ಯುವಕರಾಗಿದ್ದಾರೆಂದು ಹೇಳಿದರು. ನಾಲ್ಕನೇ ಬಾರಿಗೆ ಕ್ವೀನ್ಸ್ ಕ್ಲಬ್ ಚಾಂಪಿಯನ್‌ಶಿಪ್ ಅನ್ನು ಜಯಿಸಿದ ನಂತರ, ಬೆಕರ್ ಅವರು 1996 ರ ವಿಂಬಲ್ಡರ್ ಪಂದ್ಯಾವಳಿಯಲ್ಲಿ ತೀವ್ರ ಪ್ರತಿಸ್ಪರ್ಧೆಯನ್ನು ನೀಡುವುದಾಗಿ ನಿರೀಕ್ಷಿಸಲಾಗಿತ್ತು, ಆದರೆ ನೆವಿಲ್ ಗಾಡ್ವಿನ್ ಅವರೆದುರಿನ ಮೂರನೇ ಸುತ್ತಿನ ಪಂದ್ಯದಲ್ಲಿ ಬೆಕರ್ ಅವರು ತಮ್ಮ ಬಲ ಮೊಣಕೈಗೆ ಗಾಯ ಮಾಡಿಕೊಂಡರು ಮತ್ತು ಅವರು ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.

1994 ರಲ್ಲಿ ಬೆಕರ್

ಬೆಕರ್ ಅವರು ಅಕ್ಟೋಬರ್ 1996 ರಲ್ಲಿ ಸ್ಟುಟ್‌ಗಾರ್ಡ್ನಲ್ಲಿ ನಡೆದ ಐದು ಸೆಟ್‌ಗಳ ಫೈನಲ್‌ನಲ್ಲಿ ಸಾಂಪ್ರಾಸ್ ಅವರನ್ನು ಮಣಿಸಿದರು. ಪಂದ್ಯದ ನಂತರ ಸಾಂಪ್ರಾಸ್ ಅವರು "ನಾನು ಎದುರಿಸಿದ ಆಟಗಾರರಲ್ಲಿ ಬೆಕರ್ ಅವರು ಅತ್ಯುತ್ತಮ ಒಳಾಂಗಣ ಆಟಗಾರ" ಎಂದು ಹೇಳಿದರು.[೪] ಹ್ಯಾನೋವರ್ನಲ್ಲಿ ನಡೆದ 1996 ರ ಎಟಿಪಿ ಟೂರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಕರ್ ಅವರು ಸಾಂಪ್ರಾಸ್ ಎದುರು ಪರಾಭವಗೊಂಡರು. ನಾಲ್ಕನೇ ಸೆಟ್‌ನಲ್ಲಿ ಬೆಕರ್ ಅವರು ನಾಲ್ಕು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿದರು ಮತ್ತು ಸತತ 27 ಬಾರಿ ಸರ್ವ್ ಅನ್ನು ಉಳಿಸಿಕೊಂಡರು ಆದರೆ ಅಂತಿಮವಾಗಿ ಅವರ ಸರ್ವ್ ಅನ್ನು ಮುರಿಯಲಾಯಿತು. 1997 ರ ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಲ್ಲಿ ಸಾಂಪ್ರಾಸ್ ಅವರು ಬೆಕರ್ ಅವರನ್ನು ಪರಾಭವಗೊಳಿಸಿದರು. ಪಂದ್ಯದ ನಂತರ, ತಾವು ಇನ್ನೆಂದೂ ವಿಂಬಲ್ಡನ್ ಪಂದ್ಯವನ್ನು ಆಡುವುದಿಲ್ಲವೆಂದು ಬೆಕರ್ ಘೋಷಿಸಿದರು. ಆದರೆ 1999 ರಲ್ಲಿ ಬೆಕರ್ ಅವರು ಮತ್ತೊಮ್ಮೆ ವಿಂಬಲ್ಡನ್ ಪಂದ್ಯವನ್ನಾಡಿದರು ಹಾಗೂ ಈ ಬಾರಿ ಅವರು ನಾಲ್ಕನೇ ಸುತ್ತಿನಲ್ಲಿ ಪ್ಯಾಟ್ರಿಕ್ ರಾಫ್ಟರ್ ಎದುರು ಪರಾಭವಗೊಂಡರು.

ಬೆಕರ್ ಅವರು ವೇಗದ ಮೇಲ್ಮೈ ಮೇಲೆ ನಿರ್ದಿಷ್ಟವಾಗಿ ಹುಲ್ಲಿನ ಅಂಕಣಗಳು ಮತ್ತು ಒಳಾಂಗಣ ಅಂಕಣಗಳಲ್ಲಿ ಆಡುವುದರಲ್ಲಿ ನಿಷ್ಣಾತರಾಗಿದ್ದರು (ಇದರಲ್ಲಿ ಅವರು 26 ಪ್ರಶಸ್ತಿಗಳನ್ನು ಜಯಿಸಿದ್ದರು). ಜೇಡಿ ಅಂಕಣಗಳ ಪಂದ್ಯಾವಳಿಗಳಲ್ಲಿ ಬೆಕರ್ ಅವರು ಕೆಲವು ಫೈನಲ್‌ಗಳಿಗೆ ಪ್ರವೇಶಿಸಿದರು, ಆದರೆ ತಮ್ಮ ವೃತ್ತಿ ಜೀವನದಲ್ಲಿ ಅವರೆಂದಿಗೂ ಅವರು ಜೇಡಿ ಅಂಕಣದ ಪ್ರಶಸ್ತಿಗಳನ್ನು ಗೆಲ್ಲಲಾಗಲಿಲ್ಲ. 1987, 1989 ಮತ್ತು 1991 ರಲ್ಲಿ ಅವರು ಸೆಮಿಫೈನಲ್ ಪ್ರವೇಶಿಸಿದ್ದೇ ಫ್ರೆಂಚ್ ಓಪನ್‌ನಲ್ಲಿ ಅವರ ಅತ್ಯುತ್ತಮ ಸಾಧನೆಯಾಗಿತ್ತು.

ತಮ್ಮ ವೃತ್ತಿ ಜೀವನದ ಅವಧಿಯಲ್ಲಿ, ಬೆಕರ್ ಅವರು 49 ಸಿಂಗಲ್ಸ್ ಪ್ರಶಸ್ತಿಗಳನ್ನು ಮತ್ತು 15 ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡರು. ತಾವು ಗೆದ್ದುಕೊಂಡ ಆರು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳ ಜೊತೆಗೆ, ಅವರು 1988, 1992 ಮತ್ತು 1995 ರ ವರ್ಷಾಂತ್ಯದ ಮಾಸ್ಟರ್ಸ್ / ಎಟಿಪಿ ಟೂರ್ ವಿಶ್ವ ಚಾಂಪಿಯನ್‌ಶಿಪ್ಗಳಲ್ಲಿ ಮತ್ತು 1996 ರ ಗ್ರಾಂಡ್ ಸ್ಲಾಮ್ ಕಪ್ನಲ್ಲಿನ ಸಿಂಗಲ್ಸ್ ಪ್ರಶಸ್ತಿಯ ವಿಜೇತರಾಗಿದ್ದರು. ಬೆಕರ್ ಅವರು ದಾಖಲೆ ಸರಿಗಟ್ಟುವ ನಾಲ್ಕು ಲಂಡನ್‌ನ ಕ್ವೀನ್ಸ್ ಕ್ಲಬ್ ಸಿಂಗಲ್ಸ್ ಪ್ರಶಸ್ತಿಯನ್ನು ಗಳಿಸಿದರು. ಡೇವಿಸ್ ಕಪ್ನಲ್ಲಿ, ಅವರ ವೃತ್ತಿ ಜೀವನದ ಗೆಲುವು-ಸೋಲಿನ ದಾಖಲೆಯು 54-12 ಆಗಿದ್ದು, ಇದರಲ್ಲಿ ಸಿಂಗಲ್ಸ್‌ನ ಸೋಲು ಗೆಲುವಿನ ಸಂಖ್ಯೆಯು 38-3 ಆಗಿತ್ತು. ಜರ್ಮನಿಯ ಪರವಾಗಿ ಬೆಕರ್ ಅವರು ಇತರ ಎರಡು ಪ್ರಮುಖ ಅಂತರಾಷ್ಟ್ರೀಯ ತಂಡ ಪ್ರಶಸ್ತಿಗಳನ್ನು ಜಯಿಸಿದರು, ಅವುಗಳೆಂದರೆ - ಹಾಪ್‌ಮನ್ ಕಪ್ (1995 ರಲ್ಲಿ) ಮತ್ತು ವರ್ಲ್ಡ್ ಟೀಮ್ ಕಪ್ (1989 ಮತ್ತು '98 ರಲ್ಲಿ).

ಬೆಕರ್ ಅವರು 14 ವಿವಿಧ ದೇಶಗಳಲ್ಲಿ ಸಿಂಗಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ, ಅವುಗಳೆಂದರೆ: ಆಸ್ಟ್ರೇಲಿಯ, ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ನೆದರ್ಲ್ಯಾಂಡ್ಸ್, ಕತಾರ್, ಸ್ವೀಡನ್, ಸ್ವಿಡ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್. 2003 ರಲ್ಲಿ, ಬೆಕರ್ ಅವರನ್ನು ಅಂತರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ಗೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಬೆಕರ್ ಅವರು ಸಾಂದರ್ಭಿಕವಾಗಿ ಹಿರಿಯರ ಪಂದ್ಯಾವಳಿ ಮತ್ತು ವರ್ಲ್ಡ್ ಟೀಮ್ ಟೆನಿಸ್ನಲ್ಲಿ ಆಟವಾಡಿದರು. ಅವರು ಕೆಲವೊಮ್ಮೆ ಬಿಬಿಸಿ ಪರವಾಗಿ ವಿಂಬಲ್ಡನ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿದ್ದಾರೆ.

ಆಡುವ ಶೈಲಿ[ಬದಲಾಯಿಸಿ]

ಬೆಕರ್ ಅವರ ಆಟವು ವೇಗದ ಮತ್ತು ನಿಖರವಾದ ಸರ್ವ್ ಮೇಲೆ ಆಧಾರಿತವಾಗಿರುತ್ತಿತ್ತು ಮತ್ತು ಇದು ಅವರಿಗೆ "ಬೂಮ್ ಬೂಮ್",[೫] "ಡೆರ್ ಬಾಂಬರ್" ಮತ್ತು "ಬಾರೋನ್ ವೋನ್ ಸ್ಲಾಮ್" ಎಂಬ ಕಿರು ನಾಮಧೇಯಗಳನ್ನು ತಂದುಕೊಟ್ಟಿತು, ಇದಲ್ಲದೇ ಬೆಕರ್ ಅವರು ನೆಟ್ ಬಳಿ ಅತ್ಯುತ್ತಮ ವಾಲಿಯ ಪರಿಣತಿಯನ್ನೂ ಹೊಂದಿದ್ದರು. ಬೆಕರ್ ಅವರು ತಮ್ಮ ಅಪ್ಪಟ ಸರ್ವ್ ಮತ್ತು ವಾಲಿಯ ಆಟವನ್ನು ನೆಟ್ ಬಳಿ ಅತ್ಯುತ್ತಮ ಅಂಗಸಾಧನೆಯೊಂದಿಗೆ ಪೂರಕವಾಗಿ ಸೇರಿಸುತ್ತಿದ್ದರು ಮತ್ತು ಇದರಲ್ಲಿ ಇವರ ಟ್ರೇಡ್‌ಮಾರ್ಕ್ ಆಗಿದ್ದು ಸಾಕಷ್ಟು ಅಭಿಮಾನಿಗಳನ್ನು ಹುಟ್ಟು ಹಾಕಿದ ಹಾರಿ ಮಾಡುವ ವಾಲಿ ಕೂಡ ಸೇರಿತ್ತು. ಇವರ ಭರ್ಜರಿ ಫೋರ್‌ಹ್ಯಾಂಡ್ ಮತ್ತು ಸರ್ವ್ ಹಿಂತಿರುಗಿಸುವಿಕೆ ಕೂಡ ಇವರ ಆಟದ ಪ್ರಮುಖ ಅಂಶಗಳಾಗಿತ್ತು.

ಆಗಾಗ್ಗೆ ಬೆಕರ್ ಅವರು ತಮ್ಮ ಸರ್ವ್ ಮತ್ತು ವಾಲಿ ಶೈಲಿಯನ್ನು ಬದಲಿಸಿ ಬೇಸ್‌ಲೈನ್‌ನಿಂದ ಚೆಂಡನ್ನು ಹೊಡೆಯುತ್ತಿದ್ದರು, ಸಾಮಾನ್ಯವಾಗಿ ಅತ್ಯುತ್ತಮ ಸ್ಥಾನದಲ್ಲಿರುತ್ತಿದ್ದ ಎದುರಾಳಿಗಳು ಬೇಸ್‌ಲೈನ್ ಬಳಿಯೇ ಉಳಿಯುತ್ತಿದ್ದರು. ಎರಡೂ ಪಾರ್ಶ್ವಗಳಿಂದ ಬೆಕರ್ ಅವರು ಶಕ್ತಿಯುತ ಹೊಡೆತಗಳ ಸಾಮರ್ಥ್ಯವನ್ನು ಹೊಂದಿದ್ದರೂ, ಈ ಕೌಶಲ್ಯವನ್ನು ಆಗಾಗ್ಗೆ ವೀಕ್ಷಕ ವಿವರಣೆಗಾರರು ಟೀಕಿಸುತ್ತಿದ್ದರು.

ಬೆಕರ್ ಅವರು ಆಗಾಗ್ಗೆ ಮೈದಾನದಲ್ಲಿ ಭಾವೋದ್ವೇಗವನ್ನು ಹೊರಹಾಕುತ್ತಿದ್ದರು. ತಾವು ಯಾವಾಗ ಕೆಟ್ಟದಾಗಿ ಆಡುತ್ತಿರುವೆನೆಂದು ಬೆಕರ್ ಭಾವಿಸುತ್ತಿದ್ದರೋ, ಆಗ ತಮ್ಮಷ್ಟಕ್ಕೇ ಶಪಿಸಿಕೊಳ್ಳುತ್ತಿದ್ದರು ಮತ್ತು ಆಗಾಗ್ಗೆ ರಾಕೆಟ್ ಅನ್ನು ನೆಲಕ್ಕೆ ಎಸೆಯುತ್ತಿದ್ದರು. ಜಾನ್ ಮೆಕೆನ್ರೋ ಅವರಿಗೆ ವಿರುದ್ಧವಾಗಿ ಬೆಕರ್ ಅವರು ತಮ್ಮ ಎದುರಾಳಿಗಳ ವಿರುದ್ಧ ಅಪರೂಕ್ಕೆ ಆಕ್ರಮಣಕಾರಿ ಪ್ರವೃತ್ತಿಯನ್ನು ತೋರ್ಪಡಿಸುತ್ತಿದ್ದರು. ಹಾಗೆಯೇ ಮೆಕೆನ್ರೋ ಅವರಿಗೆ ವಿರುದ್ಧವಾಗಿ, ಈ ಮುಂದಿನ ಭಾವೋದ್ರೇಕದ ಸ್ಫೋಟವು ಬೆಕರ್ ಅವರ ಆಟದ ಹಂತ ಮತ್ತು ಗುರಿಯು ವರ್ಧಿಸುವ ಬದಲು ಕುಗ್ಗಿಸುವ ಮಾರ್ಗದತ್ತ ಒಲುತ್ತಿತ್ತು. ಬೆಕರ್ ಬ್ಲಾಕರ್ (ಅವರ ಬೇಗನೆಯ ರಿಟರ್ನ್ ಶಾಟ್‌ನ ಟ್ರೇಡ್‌ಮಾರ್ಕ್), ಬೆಕರ್ ಹೆಚ್ಟ್ (ಹಾರಾಡುವ ತಿವಿತ), ಬೆಕರ್ ಫಾಸ್ಟ್ ("ಬೆಕರ್ ಫಿಸ್ಟ್"), ಬೆಕರ್ ಶಫಲ್ (ಪ್ರಮುಖ ಅಂಕಗಳನ್ನು ಗಳಿಸಿದ ನಂತರ ಅವರು ಕೆಲವೊಮ್ಮೆ ಮಾಡುತ್ತಿದ್ದ ನೃತ್ಯ), ಮತ್ತು ಬೆಕರ್ ಸೇಜ್ ("ಬೆಕರ್ ಸಾ" – ಅವರು ಗರಗಸದ ರೀತಿಯಲ್ಲಿ ತಮ್ಮ ಮುಷ್ಠಿಯನ್ನು ಚಲಿಸುತ್ತಿದ್ದ ರೀತಿಯನ್ನು ಉಲ್ಲೇಖಿಸುತ್ತದೆ) ಇಂತಹ ಹೊಸ ಭಂಗಿಗಳಲ್ಲಿ ಬೆಕರ್ ಅವರ ಆಟವು ಒಳಗೊಂಡಿತ್ತು.

ಹುಲ್ಲಿನ ಅಂಕಣಗಳು ಮತ್ತು ಕಾರ್ಪೆಟ್ ಅಂಕಣಗಳಲ್ಲಿ ಅವರ ಯುಗದಲ್ಲಿ ಓರ್ವ ಪರಿಣಾಮಕಾರಿ ಆಟಗಾರರಾಗಿದ್ದ ಬೆಕರ್ ಅವರು ಜೇಡಿ ಅಂಕಣದಲ್ಲಿ ಅಷ್ಟು ಯಶಸ್ಸು ಗಳಿಸಲಿಲ್ಲ. ಬೆಕರ್ ಅವರು ಎಂದಿಗೂ ಜೇಡಿ ಅಂಕಣದಲ್ಲಿ ಪ್ರಮುಖ ಪ್ರಶಸ್ತಿಗಳನ್ನು ಗೆಲ್ಲಲಿಲ್ಲ, ಆದರೆ 1995 ರ ಮಾಂಟೆ ಕಾರ್ಲೋ ಓಪನ್ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಅವರು ಥಾಮಸ್ ಮಸ್ಟರ್ ಅವರೆದುರು ಎರಡು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿಕೊಂಡು ಪ್ರಶಸ್ತಿಯ ಹತ್ತಿರ ಬಂದಿದ್ದರು. ಆದರೆ ಬೆಕರ್ ಅವರು ಮೈಕೆಲ್ ಸ್ಟಿಚ್ ಅವರ ಜೊತೆಗೂಡಿ ಜೇಡಿಮಣ್ಣಿನ ಅಂಕಣದಲ್ಲಿ ನಡೆದ 1992 ರ ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಜಯಿಸಿದರು.

ಸಲಕರಣೆ[ಬದಲಾಯಿಸಿ]

ಬೆಕರ್ ಅವರು ತಮ್ಮ ಬಹುಪಾಲು ಟೆನಿಸ್ ವೃತ್ತಿ ಜೀವನದ ಪಂದ್ಯಗಳನ್ನು ಜರ್ಮನ್ ಕಂಪನಿ ಪ್ಯೂಮಾದ ರ‌್ಯಾಕೆಟ್ ಅನ್ನು ಬಳಸಿ ಆಟವಾಡಿದರು. ಈ ರ‌್ಯಾಕೆಟ್‌ನ ತಯಾರಿಕೆಯು ನಿಂತು ಹೋದ ಮೇಲೆ, ಅವರು ಮೌಲ್ಡ್‌ಗಳನ್ನು ಖರೀದಿಸಿದರು ಮತ್ತು ಅದನ್ನು ಅಮೇರಿಕನ್ ಕಂಪನಿ ಎಸ್ಟ್ಯುಸಾ ತಯಾರಿಸುವಂತೆ ಮಾಡಿದರು. ಇದೀಗ ಅವರು ತಮ್ಮದೇ ರ‌್ಯಾಕೆಟ್ ಮತ್ತು ಉಡುಪುಗಳ ವೈಯಕ್ತಿಕ ಸಂಗ್ರಹವನ್ನು ಹೊಂದಿದ್ದಾರೆ.[೬]

ದಾಖಲೆಗಳು[ಬದಲಾಯಿಸಿ]

  • ಈ ದಾಖಲೆಗಳು ಟೆನ್ನಿಸ್‌ನ ಮುಕ್ತಯುಗದಲ್ಲಿ ಸಾಧಿಸಲ್ಪಟ್ಟವು.
  • ^ ಇದು ಸತತ ಜಯವನ್ನು ಸೂಚಿಸುತ್ತದೆ.
ಚಾಂಪಿಯನ್‌ಶಿಪ್ ವರ್ಷಗಳು ಸಾಧಿಸಿದ ದಾಖಲೆ ಸಾಧನೆಯ ಜೊತೆ ಆಟಗಾರ
ವಿಂಬಲ್ಡನ್ 1985 ಅತೀ ಕಿರಿಯ ವಿಂಬಲ್ಡನ್ ಚಾಂಪಿಯನ್ ಏಕೈಕ
ವಿಂಬಲ್ಡನ್ 1985–1995 ಒಟ್ಟಾರೆ 7 ಫೈನಲ್‌ಗಳು ರೋಜರ್ ಫೆಡರರ್^ ಪೀಟ್ ಸಾಂಪ್ರಾಸ್

ವೃತ್ತಿಜೀವನದ ಅಂಕಿಅಂಶಗಳು[ಬದಲಾಯಿಸಿ]

ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಪಂದ್ಯಾವಳಿಗಳಲ್ಲಿ, ಬೆಕರ್ ಅವರ ಪಂದ್ಯಗಳ ಗೆಲುವು ಸೋಲಿನ ದಾಖಲೆಯು 163-40 ರಷ್ಟಿದ್ದು, ಇದರ ಗೆಲುವಿನ ಶೇಕಡಾ ಪ್ರಮಾಣ 80.3 ರಷ್ಟಿದೆ. ಮುಕ್ತ ಯುಗದಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಗೆಲುವಿನ ಶೇಕಡಾ ಪ್ರಮಾಣವನ್ನು ಹೊಂದಿರುವ ಪುರುಷ ಆಟಗಾರರೆಂದರೆ ಬೋರ್ನ್ ಬರ್ಗ್ (89.8), ರಫೆಲ್ ನಡಾಲ್ (87.6), ರೋಜರ್ ಫೆಡರರ್ (87.4), ಪೀಟ್ ಸಾಂಪ್ರಾಸ್ (84.2), ಜಿಮ್ಮ ಕಾರ್ನರ್ಸ್ (82.6), ಇವಾನ್ ಲೆಂಡ್ಲ್ (81.9), ಜಾನ್ ಮೆಕೆನ್ರೋ (81.5) ಮತ್ತು ಆಂಡ್ರಿ ಅಗಾಸ್ಸಿ (80.9).[೭]

ನಿವೃತ್ತಿ ನಂತರದ ವೃತ್ತಿಜೀವನ[ಬದಲಾಯಿಸಿ]

2000 ರಿಂದ, ಬೆಕರ್ ಅವರು ಟೆನಿಸ್ ರ‌್ಯಾಕೆಟ್ ಮತ್ತು ಉಡುಪುಗಳ ತಯಾರಿಕಾ ಕಂಪನಿಯಾದ Völkl Inc.,[೮] ಯ ಟೆನಿಸ್ ವಿಭಾಗದ ಮುಖ್ಯ ಮಾಲೀಕರಾಗಿದ್ದಾರೆ. ಬೆಕರ್ ಅವರು ಟೆಲ್-ಆಲ್ ಆತ್ಮಕಥೆಯಾದ Augenblick, verweile doch.. (ಇಂಗ್ಲೀಷ್ ಶೀರ್ಷಿಕೆ: ದಿ ಪ್ಲೇಯರ್ ) ಅನ್ನು 2003 ರಲ್ಲಿ ಪ್ರಕಟಿಸಿದ್ದಾರೆ. 2005 ರ ಅಕ್ಟೋಬರ್‌ನಿಂದ 2006 ರ ಜೂನ್‌ವರೆಗೆ, ಬೆಕರ್ ಅವರು ಬ್ರಿಟಿಷ್ ಟಿವಿ ಕ್ರೀಡಾ ರಸಪ್ರಶ್ನೆ ಕಾರ್ಯಕ್ರಮವಾದ ದೆ ಥಿಂಕ್ ಇಟ್ಸ್ ಆಲ್ ಓವರ್ನ ತಂಡದ ನಾಯಕರಾಗಿದ್ದರು.

2006 ರ ಅಕ್ಟೋಬರ್‌ನಲ್ಲಿ, ಬೆಕರ್ ಅವರು ತಮ್ಮ ಅಭಿಮಾನಿಗಳಿಂದ ಆಯ್ದ ಪಠ್ಯ ಸಂದೇಶಗಳಿಗೆ ಉತ್ತರ ನೀಡಲು ವೋಡಾಫೋನ್ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದದ ನಿಯಮಗಳ ಪ್ರಕಾರ ಅವರು ಪ್ರತಿ ವರ್ಷಕ್ಕೆ 300 ಸಂದೇಶಗಳಿಗೆ ಉತ್ತರ ನೀಡಬೇಕಾಗಿತ್ತು. ಪ್ರಶ್ನೆಗಳಲ್ಲಿ ಪ್ರಮುಖವಾಗಿ ಅವರ ವೃತ್ತಿ ಜೀವನ ಮತ್ತು ಪುರುಷರ ಎಟಿಪಿ ಟೂರ್ ಬಗ್ಗೆ ಕುತೂಹಲಕಾರಿ ಸಂಗತಿಗಳಾಗಿದ್ದವು. ಬೆಕರ್ ಅವರು ಸೇವೆಯನ್ನು ಪ್ರಚಾರ ಮಾಡಲು ಮಾಸ್ಕೋ ಮತ್ತು ಏರ್‌ಡ್ರೀ ಅನ್ನು ಒಳಗೊಂಡು ಹಲವು ಯುರೋಪಿನ ಸ್ಥಳಗಳಿಗೆ ಭೇಟಿ ನೀಡಿದರು.

2007 ರ ನವೆಂಬರ್‌ನಲ್ಲಿ, ಬೆಕರ್ ಅವರು ಆನ್‌ಲೈನ್ ಪೋಕರ್ ಕಾರ್ಡ್‌ರೂಂ ಆದ ಪೋಕರ್‌ಸ್ಟಾರ್ಸ್ ಪ್ರಾಯೋಜಿಸಿದ ಪೋಕರ್ ಆಟಗಾರರ ಸಮೂಹವಾದ ಟೀಮ್ ಪೋಕರ್‌ಸ್ಟಾರ್ಸ್ ಅನ್ನು ಸೇರಿದರು.[೯] ತಂಡದ ಭಾಗವಾಗಿ, ಬೆಕರ್ ಅವರು ಯುರೋಪಿಯನ್ ಪೋಕರ್ ಟೂರ್ನಂತಹ ಪ್ರಮುಖ ಪೋಕರ್ ಪಂದ್ಯಾವಳಿಯಲ್ಲಿ ಆಟವಾಡಿದರು.

2009 ರ ಮೇ ನಲ್ಲಿ, ಬೆಕರ್ ಅವರು ಆನ್‌ಲೈನ್ ಮಾಧ್ಯಮ ವೇದಿಕೆಯಾದ ಬೋರಿಸ್ ಬೆಕರ್ ಟಿವಿ ಯ ಪ್ರಾರಂಭವನ್ನು ಘೋಷಣೆ ಮಾಡಿದರು. ಇಂಗ್ಲೀಷ್ ಮತ್ತು ಜರ್ಮನ್ ಭಾಷೆಯಲ್ಲಿನ ಈ ವೆಬ್‌ಸೈಟ್ ಬೆಕರ್ ಅವರ ವೃತ್ತಿ ಜೀವನದ ಚಿತ್ರಸಂಪುಟಗಳು ಮತ್ತು ಅವರ ದೈನಂದಿನ ಜೀವನದ ದೃಶ್ಯಾವಳಿಗಳನ್ನು ಒಳಗೊಂಡಿತ್ತು.[೧೦]

2009 ರ ವಿಂಬಲ್ಡನ್‌ನಲ್ಲಿ ಬೆಕರ್ ಅವರು ಬಿಬಿಸಿಯ ಪರವಾಗಿ ವೀಕ್ಷಕ ವಿವರಣೆಗಾರರಾಗಿದ್ದರು. ಬೆಕರ್ ಅವರು ಬಿಬಿಸಿಯ ಕಾರು ಪ್ರದರ್ಶನವಾದ ಟಾಪ್ ಗೇರ್ ನಲ್ಲಿಯೂ ಭಾಗವಹಿಸಿದರು ಮತ್ತು 'ನ್ಯಾಯದರದ ಕಾರಿನ ಎ ಸ್ಟಾರ್' ಆಗಿ ತೇವದ ಟ್ರ್ಯಾಕ್‌ನಲ್ಲಿ 1 ನಿಮಿಷ 45.9 ಸೆಕೆಂಡುಗಳಲ್ಲಿ ಸ್ಪರ್ಧೆಯನ್ನು ಪೂರೈಸಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಬೆಕರ್ ಅವರು ಸ್ವಿಡ್ಜರ್ಲೆಂಡ್ನ ಶ್ವೈಜ್ ನಲ್ಲಿ ನೆಲೆಸಿದ್ದಾರೆ. ಇವರು ಜರ್ಮನಿಯ ಪುಟ್‌ಬಾಲ್ ಕ್ಲಬ್ ಬೇರೆನ್ ಮ್ಯೂನಿಚ್ ನ ಅಭಿಮಾನಿಯಾಗಿದ್ದಾರೆ ಮತ್ತು ಮಾಜಿ ಬವೇರಿಯನ್ ಪ್ರೀಮಿಯರ್ ಆದ ಎಡ್ಮಂಡ್ ಸ್ಟೋಯಿಬರ್ ಅವರೊಂದಿಗೆ ಸಲಹಾ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಕರ್ ಅವರು ಚೆಲ್ಸಿಯಾ ಎಫ್‌ಸಿಯ ಅಭಿಮಾನಿಯೂ ಸಹ ಆಗಿದ್ದಾರೆ.[೧೧]

ಸಂಬಂಧಗಳು[ಬದಲಾಯಿಸಿ]

ಬೆಕರ್ ಅವರು ಬಾರ್ಬರ್ ಫೆಲ್ಟಸ್ ಅವರೊಂದಿಗೆ 1992 ರಲ್ಲಿ

1993 ರ ಡಿಸೆಂಬರ್ 17 ರಂದು, ಬೆಕರ್ ಅವರು ನಟಿ ಮತ್ತು ವಿನ್ಯಾಸಕಿ ಬಾರ್ಬರ್ ಫೆಲ್ಟಸ್ ಅವರನ್ನು ವಿವಾಹವಾದರು. 1994 ರ ಜನವರಿಯಲ್ಲಿ ಇವರಿಗೆ ನೋಹ್ ಗ್ಯಾಬ್ರಿಯೆಲ್ ಎಂಬ ಮಗನು ಜನಿಸಿದರು, ಈ ಹೆಸರನ್ನು ಬೆಕರ್ ಸ್ನೇಹಿತರಾದ ಯಾನ್ನಿಕ್ ನೋಹ್ ಮತ್ತು ಪೀಟರ್ ಗೇಬ್ರಿಯಲ್ ಅವರ ನೆನಪಿಗೆ ಇಡಲಾಗಿತ್ತು. 1999 ರ ಸೆಪ್ಟೆಂಬರ್‌ನಲ್ಲಿ ಇವರ ಎರಡನೆಯ ಮಗ ಎಲಿಯಾಸ್ ಜನಿಸಿದರು. ಮದುವೆಗೂ ಮೊದಲು, ಬಾರ್ಬರ್ ಅವರ ತಂದೆಯವರು ತೆಗೆದ ನಗ್ನ ಚಿತ್ರವೊಂದು ಸ್ಟರ್ನ್ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡು ಜರ್ಮನಿಯಲ್ಲಿ ತಲ್ಲಣ ಮೂಡಿಸಿತ್ತು.

2000 ರ ಡಿಸೆಂಬರ್‌ನಲ್ಲಿ ಬೆಕರ್ ಅವರು ಬಾರ್ಬರಾ ಅವರಿಗೆ ವಿಚ್ಛೇದನಕ್ಕೆ ಕೇಳಿಕೊಂಡರು, ಬಾರ್ಬರಾ ಅವರು ನೋಹ್ ಮತ್ತು ಎಲಿಯಾಸ್ ಅವರೊಂದಿಗೆ ಮಿಯಾಮಿ, ಫ್ಲೋರಿಡಾಗೆ ತೆರಳಿದರು ಮತ್ತು ಮಿಯಾಮಿ-ಡೇಡ್ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು, ನ್ಯಾಯಲಯವು ಬಾರ್ಬರಾಗೆ ಸಿಗಬೇಕಿದ್ದ ಒಂದು ಕಂತಿನ $2.5 ಮಿಲಿಯನ್ ಪಾವತಿಗೆ ಅರ್ಹವಾಗಿದ್ದ ಇವರಿಬ್ಬರ ಮದುವೆ ಮುಂಚಿನ ಒಪ್ಪಂದವನ್ನು ಪಕ್ಕಕ್ಕೆ ತಳ್ಳಿತು. 2001 ರ ಜನವರಿಯಲ್ಲಿ ವಿಚಾರಣೆಯನ್ನು ಜರ್ಮನಿಯಲ್ಲಿ ನೇರ ಪ್ರಸಾರ ಮಾಡಲಾಯಿತು. 2001 ರ ಜನವರಿಯಲ್ಲಿ ಬೆಕರ್ ಅವರಿಗೆ ವಿಚ್ಛೇದನಕ್ಕೆ ಅನುಮತಿಯನ್ನು ನೀಡಲಾಯಿತು. ಬಾರ್ಬರಾ ಅವರು $14.4 ಮಿಲಿಯನ್ ಒಪ್ಪಂದದ ಹಣದ ಜೊತೆಗೆ ಫಿಶರ್ ಐಸ್ಲ್ಯಾಂಡ್ ನಲ್ಲಿರುವ ವೈಭವೋಪೇತ ಮನೆ ಮತ್ತು ನೋಹ್ ಮತ್ತು ಎಲಿಯಾಸ್ ಅವರ ಜವಾಬ್ದಾರಿಯನ್ನು ಪಡೆದರು.

2001 ರ ಫೆಬ್ರವರಿಯಲ್ಲಿ ಬೆಕರ್ ಅವರು ರೂಪದರ್ಶಿ ಆಂಜೆಲಾ ಎರ್ಮಕೋವಾ ಅವರೊಂದಿಗಿನ ಸಂಬಂಧದ ಮಗಳು ಅನ್ನಾ (2000 ರ ಮಾರ್ಚ್ 22 ರಂದು ಜನನ)ನ ಪಿತೃತ್ವವನ್ನು ಒಪ್ಪಿಕೊಂಡರು. 2009 ರ ಅಕ್ಟೋಬರ್‌ನಲ್ಲಿ ಬೆಕರ್ ಅವರು ಲಂಡನ್ ರೆಸ್ಟಾರೆಂಟ್‌ನಲ್ಲಿ 1999 ರಲ್ಲಿ ನಡೆದ ಕಿರು ಲೈಂಗಿಕ ಸಂಬಂಧದ ಪರಿಣಾಮವಾಗಿ ಹುಟ್ಟಿದ ಮಗು ಎಂಬ ಮಾಧ್ಯಮ ವರದಿಗಳನ್ನು ದೃಢಪಡಿಸಿದರು.[೧೨][೧೩] ಬೆಕರ್ ಅವರ ಯಶಸ್ಸಿನ ಮರಳುವಿಕೆಯ ಪ್ರಯತ್ನವಾಗಿದ್ದ ವಿಂಬಲ್ಡನ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ಪಂದ್ಯದ ಮುಖ್ಯ ಡ್ರಾಗೆ ಅರ್ಹತೆ ಗಳಿಸಲು ವಿಫಲವಾದ ಕಾರಣದಿಂದ ಬೇಸರಗೊಂಡು ಬೆಕರ್ ಅವರು ಮದ್ಯಪಾನಕ್ಕೆ ಹೊರ ತೆರಳಿದ್ದರು. ಮೊದಮೊದಲು ಬೆಕರ್ ಅವರು ಪಿತೃತ್ವವನ್ನು ನಿರಾಕರಿಸಿದರು, ಆದರೆ ಡಿಎನ್ಎ ಪರೀಕ್ಷೆಯ ನಂತರ ಅವರು ತಂದೆಯ ಮಗುವೆಂಬುದನ್ನು ಒಪ್ಪಿಕೊಂಡರು. 2007 ರ ನವೆಂಬರ್‌ನಲ್ಲಿ, ಅನ್ನಾಳ ತಾಯಿಯು ಅವಳನ್ನು ಬೆಳೆಸುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರು ಅನ್ನಾಳ ಜಂಟಿ-ಪಾಲನೆಯನ್ನು ಪಡೆದುಕೊಂಡರು.[೧೪]

2008 ರಲ್ಲಿ ಬೆಕರ್ ಅವರು ಅಲ್ಲೆಸಾಂಡ್ರಾ ಮೇಯರ್-ವೋಲ್ಡನ್ ಅವರೊಂದಿ ನಿಶ್ಚಿತಾರ್ಥ ಮಾಡಿಕೊಂಡರು. ಅವಳ ತಂದೆಯವರಾದ ಆಕ್ಸೆಲ್ ಮೇಯರ್-ವೋಲ್ಡನ್ ಅವರು 1990 ರ ದಶಕದಲ್ಲಿ ಬೆಕರ್ ಅವರ ಸಲಹಾಗಾರರು ಮತ್ತು ಮ್ಯಾನೇಜರ್ ಆಗಿದ್ದರು.[೧೫] 2008 ರ ನವೆಂಬರ್‌ನಲ್ಲಿ ದಂಪತಿಗಳು ಪ್ರತ್ಯೇಕಗೊಂಡರು.[೧೬]

2009 ರ ಫೆಬ್ರವರಿಯಲ್ಲಿ ಜರ್ಮನಿಯ ಜೆಡ್‌ಡಿಎಫ್ ಟಿವಿ ಕಾರ್ಯಕ್ರಮವಾದ ವೆಟ್ಟನ್, ಡಾಸ್..? ನಲ್ಲಿ ಬೆಕರ್ ಅವರು 2009 ರ ಜೂನ್ 12 ರಂದು ತಾವು ಸ್ವಿಡ್ಜರ್ಲ್ಯಾಂಡ್‌ನ ಸೇಂಟ್ ಮಾರಿಟ್ಜ್‌ನಲ್ಲಿ ಡಚ್ ರೂಪದರ್ಶಿಯಾದ ಶಾರ್ಲೆಲಿ "ಲಿಲ್ಲಿ" ಕೆರ್ಸೆನ್‌ಬರ್ಗ್ ಅವರನ್ನು ವಿವಾಹವಾಗುವುದಾಗಿ ಘೋಷಿಸಿದರು.[೧೭][೧೮] 2009 ರ ಆಗಸ್ಟ್‌ನಲ್ಲಿ ತಾವು ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಅವರು ಪ್ರಕಟಿಸಿದರು.[೧೯] 2010 ರ ಫೆಬ್ರವರಿಯಲ್ಲಿ ಬೆಕರ್ ದಂಪತಿಗಳು ಅಮೇಡಿಯಸ್ ಬೆನೆಡಿಕ್ಟ್ ಎಡ್ಲೀ ಲೂಯಿಸ್ ಬೆಕರ್ ಎಂಬ ಮಗನನ್ನು ಪಡೆದರು.[೨೦] ಎಡ್ಲೀ ಎಂಬ ಹೆಸರು ಬೆಕರ್ ಪತ್ನಿಯ ಚಿಕ್ಕಪ್ಪ ಎಡ್ಲೀ ಅವರದ್ದಾಗಿತ್ತು ಮತ್ತು ಲೂಯಿಸ್ ಎಂಬುದು ಅವರ ಸ್ನೇಹಿತ ಹಾಗೂ ಮಗುವಿನ ಗಾಡ್‌ಫಾದರ್ ಸಹ ಆಗಿದ್ದ ಮೆಕ್ಸಿಕನ್-ಕ್ಯೂಬನ್ ಮಿಲಿಯನೇರ್ ಆದ ಲೂಯಿಸ್ ಗಾರ್ಸಿಯಾ ಫಂಜುಲ್ ಅವರದ್ದಾಗಿತ್ತು.

ಇವನ್ನೂ ನೋಡಿ[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

  • ಬೆಕರ್–ಎಡ್ಬರ್ಗ್ ಪೈಪೋಟಿ

ಉಲ್ಲೇಖಗಳು[ಬದಲಾಯಿಸಿ]

  1. "40 Greatest Players of the Tennis Era (17-20)". TENNIS Magazine. 2006-05-17. Retrieved 2009-06-20.
  2. ೨.೦ ೨.೧ Mills, Eleanor (1999-12-05). "Becker Not quite ready to retire Boris Becker talks to ELEANOR MILLS". New Straits Times. Retrieved 2009-06-14. {{cite news}}: Cite has empty unknown parameter: |coauthors= (help) [ಮಡಿದ ಕೊಂಡಿ]
  3. Green, Nick (2005-11-06). "Boris Becker: 'When I heard they wanted to send me to prison, I thought only of my children. I went home and prayed to God'". London: The Observer. Retrieved 2009-06-14. {{cite news}}: Cite has empty unknown parameter: |coauthors= (help)
  4. ಬೆಕರ್ ರ‌್ಯಾಲೀಸ್ ಟು ಎಂಡ್ ಸಾಂಪ್ರಾಸ್ ಸ್ಟ್ರೀಕ್ ನ್ಯೂಯಾರ್ಕ್ ಟೈಮ್ಸ್
  5. Ian Thomsen (1997-07-02). "Boom Boom Leads German Triple Threat". International Herald Tribune. Archived from the original on 2012-12-05. Retrieved 2008-05-14.
  6. Tennis-Warehouse, Inc. (2010-08-22). "Boris Becker Tennis Racquets". Tennis Warehouse. Retrieved 2010-08-22.
  7. ಈ ಶೇಕಡಾವಾರುಗಳು ವೈಯಕ್ತಿಕ ಆಟಗಾರರ ಪುಟಗಳಲ್ಲಿ ಲಭ್ಯವಿದೆ. 2010-07-03ರಂದು ಪಡೆಯಲಾಗಿದೆ.
  8. Völkl ಇಂಡೆಕ್ಸ್
  9. "ಅಡ್ವಾಂಟೇಜ್ ಪೋಕರ್: ಬೋರಿಸ್ ಬೆಕರ್ ಜಾಯಿನ್ಸ್ ಪೋಕರ್‌ಸ್ಟಾರ್ಸ್ ಟೀಮ್". Archived from the original on 2009-02-02. Retrieved 2011-03-03.
  10. ಆಫ್ ದಿ ಬೇಸ್‌ಲೈನ್ Archived 2009-05-12 ವೇಬ್ಯಾಕ್ ಮೆಷಿನ್ ನಲ್ಲಿ. 11 ಜೂನ್ 2009 ರಂದು ನೋಡಿದೆ
  11. ಸೆಲೆಬ್ರಿಟಿ ಫ್ಯಾನ್ಸ್[ಶಾಶ್ವತವಾಗಿ ಮಡಿದ ಕೊಂಡಿ]
  12. Hough, Andrew (15 October 2009). "Boris Becker admits: 'Nobu sex romp with model occurred on stairs' Boris Becker has admitted his infamous sex encounter with a model at a London restaurant that led to him having a love child occurred on the stairs and not in broom cupboard". The Daily Telegraph. London. Archived from the original on 28 ಮೇ 2010. Retrieved 26 April 2010.
  13. Blackburn, Jen (2009-10-15). "Becker Cupboard sex was on stairs". The Sun. London. Archived from the original on 2012-10-23. Retrieved 2011-03-03.
  14. "Tennis Legend Boris Becker Battles for Custody of Daughter". People Magazine. 2007-11-08. Archived from the original on 2012-06-16. Retrieved 2008-01-24.
  15. "Tennis Champ Boris Becker Engaged - Couples People.com". People Magazine. 2008-08-11. Archived from the original on 2015-09-20. Retrieved 2008-08-11.
  16. "Boris Becker serves up another son as wife Lilly gives birth to his fourth child". Daily Mail. London. 11 February 2010. Retrieved 17 March 2010.
  17. ಬೋರಿಸ್ ಬೆಕರ್ ಎಂಗೇಜ್ಡ್, ಅಗೈನ್, ಆನ್ ಟಿವಿ ಗೇಮ್ ಶೋ
  18. McConnell, Donna (2009-06-14). "Newlywed Boris Becker whisks bride off to Swiss mountain resort for reception lunch". Daily Mail. London.
  19. "ಆರ್ಕೈವ್ ನಕಲು". Archived from the original on 2012-06-10. Retrieved 2011-03-03.
  20. "Boris Becker, Wife Welcome a Boy". TVGuide.com. Archived from the original on 2014-07-15. Retrieved 2011-03-03.

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • Becker, Boris (2005). Player, The. London: Bantam. ISBN 0-553-81716-7.
  • Kaiser, Ulrich; Breskvar, Boris (1987). Boris Becker's Tennis: The Making of a Champion. New York: Leisure Press. ISBN 0-88011-290-5.{{cite book}}: CS1 maint: multiple names: authors list (link)

ವಿಡಿಯೋ[ಬದಲಾಯಿಸಿ]

  • ವಿಂಬಲ್ಡನ್ ರೆಕಾರ್ಡ್ ಬ್ರೇಕರ್ಸ್ (2005) ಆಟಗಾರರು: ಆಂಡ್ರೆ ಅಗಾಸ್ಸಿ, ಬೋರಿಸ್ ಬೆಕರ್; ಸ್ಟಾಂಡಿಗ್ ರೂಮ್ ಮಾತ್ರ, ಡಿವಿಡಿ ಬಿಡುಗಡೆಯಾದ ದಿನಾಂಕ: ಆಗಸ್ಟ್ 16, 2005, ಸಮಯಾವಧಿ: 52 ನಿಮಿಷ, ASIN: B000A3XYYQ.

ಬಾಹ್ಯ ಕೊಂಡಿಗಳು[ಬದಲಾಯಿಸಿ]