ಬಾಬ್‌ ಲವ್‌ (Bob Love)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾಬ್ ಲವ್

ಟೆಂಪ್ಲೇಟು:Infobox NBAretired

ರಾಬರ್ಟ್‌ (ಬಾಬ್‌ ) ಅರ್ಲ್‌ “ಬಟರ್ಬೀನ್‌” ಲವ್‌ (ಜನನ: 8 ಡಿಸೆಂಬರ್‌ 1942; ಜನ್ಮಸ್ಥಳ: ಲೂಯಿಸಿಯಾನಾ ರಾಜ್ಯದ ಬ್ಯಾಸ್ಟ್ರೊಪ್‌) ಅಮೆರಿಕಾ ದೇಶದ ಒಬ್ಬ ನಿವೃತ್ತ ವೃತ್ತಿಪರ ಬ್ಯಾಸ್ಕೆಟ್ಬಾಲ್‌ ಆಟಗಾರ. ಅಲ್ಲದೇ ತಮ್ಮ ವೃತ್ತಿಯ ಉತ್ತುಂಗದಲ್ಲಿ ಎನ್‌ಬಿಎದ ಶಿಕ್ಯಾಗೊ ಬುಲ್ಸ್‌ ತಂಡದೊಂದಿಗಿದ್ದರು.

ಬಹು ಚುರುಕಾದ ಫಾರ್ವರ್ಡ್‌ ಆಟಗಾರರಾಗಿದ್ದು, ತಮ್ಮ ಎಡಗೈ ಅಥವಾ ಬಲಗೈಯಲ್ಲಿ ಅಷ್ಟೇ ಕರಾರುವಕ್ಕಾದ ಗೋಲ್‌ ಹಾಕುತ್ತಿದ್ದರು. ಇಂದು, ಅವರು ಬುಲ್ಸ್‌ ಸಮುದಾಯ ವಿಚಾರ ವೇದಿಕೆ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[೧]

ಆರಂಭಿಕ ವರ್ಷಗಳು[ಬದಲಾಯಿಸಿ]

ಬಾಸ್ಟ್ರೊಪ್‌ನಲ್ಲಿದ್ದ (ಇಂದು ಮುಚ್ಚಿಹೋದ) ಮೋರ್ಹೌಸ್‌ ಪ್ರೌಢಶಾಲೆಯ ಬ್ಯಾಸ್ಕೆಟ್ಬಾಲ್ ತಂಡದ ಸದಸ್ಯರಾಗಿ ಅಮೋಘ ಪ್ರದರ್ಶನ ನೀಡಿದ ನಂತರ, ಬಾಬ್‌ ಲವ್‌ ಸದರ್ನ್‌ ಯುನಿವರ್ಸಿಟಿ ತಂಡದಲ್ಲಿ‌ ಆಡಿದರು. ಅವರು ಅಲ್ಫಾ ಫೈ ಒಮೆಗಾ ಅವರ ಸಹೋದರರಾಗಿದ್ದಾರೆ. 1963ರಲ್ಲಿ ಅವರು ಆಲ್‌-ಅಮೆರಿಕಾ ಆನರ್ಸ್‌ ಗಳಿಸಿದರು. 1965ರಲ್ಲಿ ಆ ವರ್ಷದ 1965 ಎನ್‌ಬಿಎ ಡ್ರ್ಯಾಪ್ಟ್‌ ಪಂದ್ಯಾವಳಿಯ ನಾಲ್ಕನೆಯ ಸುತ್ತಿನಲ್ಲಿ ಸಿನ್ಸಿನಟಿ ರಾಯಲ್ಸ್‌ ಈ ಆರಡಿ ಎಂಟು ಅಂಗುಲ ಎತ್ತರದ ಫಾರ್ವರ್ಡ್‌ ದೈತ್ಯನನ್ನು ಆಯ್ಕೆ ಮಾಡಿಕೊಂಡಿತು. ಆದರೆ ತಂಡದದಲ್ಲಿ ಆಡುವ ಗುಂಪಿಗೆ ಅವರು ಆಯ್ಕೆಯಾಗಲಿಲ್ಲ. ಬದಲಿಗೆ ಅವರು 1965-66ರ ಎನ್‌ಬಿಎ ಋತುವಿನಲ್ಲಿ ಈಸ್ಟರ್ನ್‌ ಬ್ಯಾಸ್ಕೆಟ್ಬಾಲ್‌ ಲೀಗ್‌ನಲ್ಲಿ ಆಡಿದರು. ಪ್ರತಿ ಪಂದ್ಯದಲ್ಲಿ ಅವರು 25ಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ನಂತರ, ಬಾಬ್‌ ಲವ್‌ 'ವರ್ಷದ ಇಬಿಎಲ್‌ ರೂಕಿ ಪ್ರಶಸ್ತಿ' ಗಳಿಸಿದರು. ಇದು ಅವರಿಗೆ ಅಪಾರ ವಿಶ್ವಾಸ ತಂದುಕೊಟ್ಟಿತು. ಪುನಃ ರಾಯಲ್ಸ್‌ ಪರ ಆಡುವ ಪ್ರಯತ್ನ ಮುಂದುವರೆಸಿದರು. ತಮ್ಮ ಎರಡನೆಯ ಯತ್ನದಲ್ಲಿ ಅವರು ತಂಡದಲ್ಲಿ ಸೇರಲು ಯಶಸ್ವಿಯಾದರು. ರಾಯಲ್ಸ್ ಪರ ಎರಡು ಋತುಗಳಲ್ಲಿ ಆಡಿದರು. ಬಹುತೇಕ ಸಂದರ್ಭದಲ್ಲಿ ಅವರು ಬದಲಿ,ಎರವಲು ಆಟಗಾರರಾಗಿ ಭಾಗವಹಿಸಿದರು. 1968ರಲ್ಲಿ, ಎನ್‌ಬಿಎ ಎಕ್ಸ್‌ಪ್ಯಾನ್ಷನ್‌ ಡ್ರ್ಯಾಫ್ಟ್‌ನಲ್ಲಿ ಮಿಲ್ವಾಕಿ ಬಕ್ಸ್‌ ಇವರನ್ನು ಆಯ್ಕೆ ಮಾಡಿಕೊಂಡಿತು. 1968-69 ಋತುವಿನಲ್ಲಿ ಅವರು ಶಿಕ್ಯಾಗೊ ಬುಲ್ಸ್‌ ಪರ ಆಡುವಂತಾಯಿತು.

ಶಿಕ್ಯಾಗೊ ಬುಲ್ಸ್‌ (1968–1976)[ಬದಲಾಯಿಸಿ]

ಡಿಕ್‌ ಮೊಟಾ ನೇತೃತ್ವದ ಶಿಕ್ಯಾಗೊ ಬುಲ್ಸ್‌ ತಂಡದಲ್ಲಿ ಆಡಿದ ಬಾಬ್‌ ಲವ್‌, ಅಲ್ಲಿ ವಿಜೃಂಭಿಸಿದರು. 1969-70 ಋತುವಿನಲ್ಲಿ, ಅವರು ಪೂರ್ಣಕಾಲಿಕ ಆಟಗಾರರಾಗಿ, 21 ಅಂಕಗಳು ಹಾಗೂ 8.7 ರಿಬೌಂಡ್‌ ಗಳಿಸಿದರು. ನಂತರದ ಎರಡು ಋತುಗಳಲ್ಲಿ ಅವರು ಪಂದ್ಯವೊಂದಕ್ಕೆ 25.2 ಮತ್ತು 25.8 ರಂತೆ ಸರಾಸರಿ ಅಂಕ ಗಳಿಸಿದರು. ತಮ್ಮ ಮೊದಲ ಎರಡು ಎನ್‌ಬಿಎ ಆಲ್-ಸ್ಟಾರ್‌ ಗೇಮ್ಗಳಲ್ಲಿ ಆಡಿ, ಎರಡೂ ಋತುಗಳಲ್ಲಿ 'ಆಲ್‌-ಎನ್‌ಬಿಎ ಸೆಕೆಂಡ್‌ ಟೀಮ್‌ ಆನರ್ಸ್‌' ಗಳಿಸಿದರು.

ಬಾಬ್‌ ಲವ್‌ 1973ರ ಆಲ್‌-ಸ್ಟಾರ್‌ ಗೇಮ್‌ನಲ್ಲಿಯೂ ಸಹ ಆಡಿದರು. 1976-77 ಋತುವಿನ ತನಕ ಪ್ರತಿ ಋತುವಿನಲ್ಲಿಯೂ ಅವರು ಕನಿಷ್ಠ 19 ಅಂಕಗಳು ಮತ್ತು ಆರು ರಿಬೌಂಡ್‌ ಗಳಿಸಿದ್ದರು.  1974 ಮತ್ತು 1975ರಲ್ಲಿ ಬಾಬ್‌ ಲವ್‌ 'ಎನ್‌ಬಿಎ ಆಲ್‌-ಡಿಫೆನ್ಸ್‌ ಸೆಕೆಂಡ್ ಟೀಮ್‌'ನ ಸದಸ್ಯರಾಗಿ ನೇಮಕಗೊಂಡರು.

ಶಿಕ್ಯಾಗೊ ಬುಲ್ಸ್‌ ನಿವೃತ್ತಿಗೊಳಿಸಿದ ಆಟದ ಸಮವಸ್ತ್ರಗಳ ಪೈಕಿ ಅವರ #10 ಸಂಖ್ಯೆ ನಮೂದಿತ ಉಡುಪು ಎರಡನೆಯದಾಗಿತ್ತು. ಜೆರಿ ಸ್ಲೋನ್‌ರ #4 ಸಂಖ್ಯೆಯ ಉಡುಪು ಮೊದಲನೆಯದಾಗಿತ್ತು. ರಾಚೆಲ್‌ ಡಿಕ್ಸನ್‌ರೊಂದಿಗೆ, ಬಾಬ್‌ ಲವ್‌ರ ವಿವಾಹ ಸಮಾರಂಭ ಯುನೈಟೆಡ್‌ ಸೆಂಟರ್‌ನಲ್ಲಿ ನಡೆಯಿತು.

ಬ್ಯಾಸ್ಕೆಟ್ಬಾಲ್‌-ನಂತರದ ವೃತ್ತಿ[ಬದಲಾಯಿಸಿ]

1976-77 ಋತುವಿನ ಕೆಲ ಕಾಲ ನ್ಯೂಯಾರ್ಕ್‌ ಮತ್ತು ಸಿಯೆಟ್ಲ್‌ನಲ್ಲಿ ಆಡಿದ ನಂತರ ಬಾಬ್‌ ಲವ್‌ ತಮ್ಮ ಅಂತಿಮ ಪಂದ್ಯವನ್ನು ಬುಲ್ಸ್‌ ಪರ ಆಡಿ ಎನ್‌ಬಿಎ ವೃತ್ತಿಯನ್ನು ಕೊನೆಗೊಳಿಸಿದರು. ಅವರ ವೃತ್ತಿಯಲ್ಲಿ ಒಟ್ಟು 13,895 ಅಂಕಗಳು, 1,123 ಸಹಯೋಗ ಅಂಕಗಳು ಮತ್ತು 4,653 ರಿಬೌಂಡ್‌ಗಳಿದ್ದವು. ಬಾಬ್‌ ಲವ್‌ ತಮ್ಮ ಬಾಲ್ಯದಿಂದಲೂ ತೊದಲುವ [೨] ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ, ತಮ್ಮ ಆಟದ ದಿನಗಳ ನಂತರ ಸೂಕ್ತ ನೌಕರಿ ಗಳಿಸಿಕೊಳ್ಳಲು ಪರದಾಡಬೇಕಾಯಿತು. ಒಂದು ಹಂತದಲ್ಲಿ ಬಾಬ್‌ ಲವ್‌ ಹೊಟೇಲುಗಳಲ್ಲಿ ಪರಿಚಾರಕ ಸಿಬ್ಬಂದಿಯಾಗಿ ಕೆಲಸ ಮಾಡಿ ಗಂಟೆಗೆ 4.45 ಅಮೆರಿಕನ್‌ ಡಾಲರ್‌ಗಳಷ್ಟು ಸಂಪಾದಿಸುತ್ತಿದ್ದರು.[೨] ಅಂತಿಮವಾಗಿ, ಬಾಬ್‌ ಲವ್‌ ಪಾತ್ರೆ ತೊಳೆಯುತ್ತಿದ್ದ ಉಪಾಹಾರ ಕೇಂದ್ರದ ಮಾಲೀಕರು ಅವರ ವಾಕ್-ಶ್ರವಣ ತರಬೇತಿ ಚಿಕಿತ್ಸೆಗಾಗಿ ಹಣ ನೀಡಲು ಮುಂದೆ ಬಂದರು. 1993ರಲ್ಲಿ ಬಾಬ್ ಲವ್‌ ಶಿಕ್ಯಾಗೊ ಬುಲ್ಸ್‌ಗೆ ಮರಳಿ ಸಮುದಾಯ ಸಂಘದ ನಿರ್ದೇಶಕರಾದರು.[೨] ಈ ಹುದ್ದೆಯ ಕರ್ತವ್ಯಗಳಲ್ಲಿ, ಆಗಾಗ್ಗೆ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸುವುದೂ ಒಂದಾಗಿತ್ತು.[೨] ಬಾಬ್‌ ಲವ್‌ ಇಂದು ಸ್ಪೂರ್ತಿದಾಯಕ ಮಾತುಗಾರರೂ ಆಗಿದ್ದಾರೆ.

1999ರಲ್ಲಿ ದಿ ಬಾಬ್‌ ಲವ್ ಸ್ಟೋರಿ: ಇಫ್‌ ಇಟ್ಸ್‌ ಗೊನಾ ಬಿ, ಇಟ್ಸ್‌ ಅಪ್‌ ಟು ಮಿ (ISBN 0-8092-2597-2) ಎಂಬ ತಮ್ಮ ಆತ್ಮಚರಿತ್ರೆಯನ್ನು ಬರೆದರು.

ಉಲ್ಲೇಖಗಳು[ಬದಲಾಯಿಸಿ]

  1. "Staff Directory". 2007-10-01.
  2. ೨.೦ ೨.೧ ೨.೨ ೨.೩ Bob Greene (1993-03-21). "Basketball star's greatest triumph came after cheering stopped". Chicago Tribune. {{cite news}}: |access-date= requires |url= (help)

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Chicago Bulls