ಕೇಟ್‌ ಬ್ಲ್ಯಾಂಚೆಟ್‌ (Cate Blanchett)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇಟ್‌ ಬ್ಲ್ಯಾಂಚೆಟ್‌ (Cate Blanchett)

Blanchett at the press conference for The Good German, Hyatt Hotel, February 2007
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1969-05-14) ೧೪ ಮೇ ೧೯೬೯ (ವಯಸ್ಸು ೫೪)
Melbourne, Victoria, Australia
ವೃತ್ತಿ Actress, theatre director
ಪತಿ/ಪತ್ನಿ Andrew Upton (ವಿವಾಹ 1997)


ಕ್ಯಾಥೆರಿನ್ ಎಲೈಸ್ "ಕೇಟ್" ಬ್ಲ್ಯಾಂಚೆಟ್‌ (ಜನನ 14 ಮೇ 1969) ಒಬ್ಬ ಆಸ್ಟ್ರೇಲಿಯನ್ ನಟಿ ಹಾಗು ರಂಗಭೂಮಿ ನಿರ್ದೇಶಕಿ. ನಟನೆಗಾಗಿ ಈಕೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ, ಇದರಲ್ಲಿ ಗಮನಾರ್ಹವಾದುದೆಂದರೆ ಎರಡು SAGsಪ್ರಶಸ್ತಿಗಳು, ಎರಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು, ಎರಡು BAFTAಗಳು ಹಾಗು ಒಂದು ಅಕ್ಯಾಡೆಮಿ ಪ್ರಶಸ್ತಿಯ ಜೊತೆಗೆ 64ನೇ ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವೋಲ್ಪಿ ಕಪ್ ಪ್ರಶಸ್ತಿಗಳು ಸೇರಿವೆ. ಬ್ಲ್ಯಾಂಚೆಟ್‌, 1995-2010ರ ನಡುವಿನ ಅವಧಿಯಲ್ಲಿ ಐದು ಬಾರಿ ಅಕ್ಯಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಬ್ಲ್ಯಾಂಚೆಟ್, 1998ರಲ್ಲಿ ಶೇಖರ್ ಕಪೂರ್ ನಿರ್ದೇಶನದ ಚಿತ್ರ ಎಲಿಜಬೆತ್ ಮೂಲಕ ಅಂತಾರಾಷ್ಟ್ರೀಯವಾಗಿ ಗಮನ ಸೆಳೆದರು, ಇದರಲ್ಲಿ ಅವರು ಇಂಗ್ಲೆಂಡ್ ನ ಎಲಿಜಬೆತ್ I ಪಾತ್ರವನ್ನು ನಿರ್ವಹಿಸಿದ್ದರು. ಈಕೆ ತಮ್ಮ ಪಾತ್ರಗಳಾದ, ಪೀಟರ್ ಜ್ಯಾಕ್ಸನ್ ನಿರ್ದೇಶನದ ದಿ ಲಾರ್ಡ್ ಆಫ್ ದಿ ರಿಂಗ್ಸ್ ಟ್ರಿಲಜಿ(ಮೂರು ಭಾಗಗಳು) ನ ಎಲ್ಫ್(ಗಿಡ್ಡ ವ್ಯಕ್ತಿ) ರಾಣಿ ಗಲಡ್ರಿಯಲ್ ನ ಪಾತ್ರ, ಇಂಡಿಯಾನ ಜೋನ್ಸ್ ಅಂಡ್ ದಿ ಕಿಂಗ್ಡಂ ಆಫ್ ದಿ ಕ್ರಿಸ್ಟಲ್ ಸ್ಕಲ್ ನಲ್ಲಿ ಕರ್ನಲ್-ವೈದ್ಯೆ ಐರಿನ ಸ್ಪಾಲ್ಕೋ ಪಾತ್ರ ಹಾಗು ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶನದ ದಿ ಎವಿಯೇಟರ್ ನಲ್ಲಿ ಕ್ಯಾಥರೀನ್ ಹೆಪ್ಬರ್ನ್ ಪಾತ್ರಗಳಿಂದ ಹೆಸರುವಾಸಿಯಾಗಿದ್ದಾರೆ, ಕ್ಯಾಥರೀನ್ ಹೆಪ್ಬರ್ನ್ ಪಾತ್ರವು ಅವರಿಗೆ ಅತ್ಯುತ್ತಮ ಪೋಷಕ ನಟಿಯೆಂದು ಅಕ್ಯಾಡೆಮಿ ಪ್ರಶಸ್ತಿ ಯನ್ನು ತಂದುಕೊಟ್ಟಿದೆ.[೧][೨][೩] ಈಕೆ ಹಾಗು ಇವರ ಪತಿ ಆಂಡ್ರ್ಯೂ ಅಪ್ಟನ್, ಪ್ರಸಕ್ತ ಸಿಡ್ನಿ ಥಿಯೇಟರ್ ಕಂಪನಿಯ ಕಲಾತ್ಮಕ ನಿರ್ದೇಶಕರುಗಳಾಗಿದ್ದಾರೆ.

ಆರಂಭಿಕ ಜೀವನ ಹಾಗು ಶಿಕ್ಷಣ[ಬದಲಾಯಿಸಿ]

ಬ್ಲ್ಯಾಂಚೆಟ್‌, ಮೇಲ್ಬೋರ್ನ್ ನ ಉಪನಗರವಾದ ಇವಾನ್ ಹೋನಲ್ಲಿ ಜನಿಸಿದರು, ಇವರ ತಾಯಿ ಜೂನ್, ಆಸ್ಟ್ರೇಲಿಯಾದ ಒಬ್ಬ ಸ್ಥಿರಾಸ್ಥಿ ವಹಿವಾಟುದಾರರು ಹಾಗು ಶಿಕ್ಷಕಿಯಾಗಿದ್ದರು, ಹಾಗು ತಂದೆ ರಾಬರ್ಟ್ "ಬಾಬ್" ಬ್ಲ್ಯಾಂಚೆಟ್‌, ಟೆಕ್ಸಾಸ್ ಮೂಲದ US ನೌಕಾದಳದ ಕೆಳದರ್ಜೆಯ ಅಧಿಕಾರಿಯಾಗಿದ್ದು ನಂತರದಲ್ಲಿ ಒಬ್ಬ ಜಾಹೀರಾತು ಎಕ್ಸಿಕ್ಯೂಟಿವ್ ಆಗಿ ಕಾರ್ಯ ನಿರ್ವಹಿಸಿದರು.[೪][೫] ಇವರಿಬ್ಬರು ಬ್ಲ್ಯಾಂಚೆಟ್‌ ರ ತಂದೆಯ ಹಡಗು USS ಅರ್ನೆಬ್ ಮೇಲ್ಬೋರ್ನ್‌ಗೆ ಬಂದಿದ್ದಾಗ ಸಂಧಿಸಿದರು. ಬ್ಲ್ಯಾಂಚೆಟ್‌ 10 ವರ್ಷದವಳಿದ್ದಾಗ, ಹೃದಯಾಘಾತದಿಂದ ಆಕೆಯ ತಂದೆ ಸಾವನ್ನಪ್ಪಿದರು. ತಮ್ಮ ಬಾಲ್ಯಜೀವನವನ್ನು ಖುದ್ದು "ಭಾಗಶಃ ಬಹಿರ್ಮುಖಿಯಾಗಿ, ಭಾಗಶಃ ಉಪೇಕ್ಷಿತವಾಗಿತ್ತೆಂದು" ವರ್ಣಿಸುತ್ತಾರೆ.[೬] ಇವರಲ್ಲದೆ ಇವರ ತಂದೆ ತಾಯಿಗೆ ಮತ್ತಿಬ್ಬರು ಮಕ್ಕಳಿದ್ದಾರೆ; ಇವರ ಅಣ್ಣ, ಬಾಬ್, ಒಬ್ಬ ಕಂಪ್ಯೂಟರ್ ಸಿಸ್ಟಮ್ಸ್ ಇಂಜಿನಿಯರ್, ಹಾಗು ಇವರ ತಂಗಿ, ಜೆನೆವೀವ್, ರಂಗಭೂಮಿ ವಿನ್ಯಾಸಕಿಯಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಏಪ್ರಿಲ್ 2008ರಲ್ಲಿ ಆರ್ಕಿಟೆಕ್ಚರ್(ವಾಸ್ತುವಿನ್ಯಾಸ)ನಲ್ಲಿ ಬ್ಯಾಚುಲರ್ ಆಫ್ ಡಿಸೈನ್ ಪದವಿ ಗಳಿಸಿದ್ದಾರೆ.[೬]

ಬ್ಲ್ಯಾಂಚೆಟ್‌, ಮೇಲ್ಬಾರ್ನ್ ನ ಇವಾನ್ ಹೋ ಈಸ್ಟ್ ಪ್ರೈಮರಿ ಸ್ಕೂಲ್ ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಇವಾನ್ ಹೋ ಗರ್ಲ್ಸ್' ಗ್ರಾಮರ್ ಸ್ಕೂಲ್ ನಲ್ಲಿ ಹಾಗು ನಂತರದಲ್ಲಿ ಮೆಥಾಡಿಸ್ಟ್ ಲೇಡಿಸ್' ಕಾಲೇಜ್ ನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಪಡೆದರು, ಇಲ್ಲಿ ಅವರು ನಟನೆಯ ಬಗ್ಗೆ ತಮಗಿರುವ ಆಸಕ್ತಿಯನ್ನು ಪರಿಶೋಧಿಸಿಕೊಂಡರು.[೭] ಆಸ್ಟ್ರೇಲಿಯಾದಿಂದ ಹೊರ ದೇಶಕ್ಕೆ ಪ್ರಯಾಣ ಬೆಳೆಸುವ ಮುಂಚೆ ಯುನಿವರ್ಸಿಟಿ ಆಫ್ ಮೇರ್ಬೋರ್ನ್ ನಲ್ಲಿ ಅರ್ಥಶಾಸ್ತ್ರ ಹಾಗು ಲಲಿತ ಕಲೆಯನ್ನು ಕಲಿತರು.

ತಮ್ಮ 18ನೇ ವಯಸ್ಸಿನಲ್ಲಿ, ಬ್ಲ್ಯಾಂಚೆಟ್ ಈಜಿಪ್ಟ್ ಗೆ ವಿಹಾರಾರ್ಥ ಪ್ರವಾಸ ಕೈಗೊಂಡರು. ಕೈರೋನಲ್ಲಿ ಅವರು ತಂಗಿದ್ದ ಹೋಟೆಲಿಗೆ ಬಂದಿದ್ದ ಸಹಅತಿಥಿಯೊಬ್ಬರು, ಚಲನಚಿತ್ರದಲ್ಲಿ ಇವರು ಪೋಷಕ ನಟಿಯಾಗಿ ಪಾತ್ರವಹಿಸುವ ಇಚ್ಛೆ ಇದೆಯೇ ಎಂದು ಪ್ರಶ್ನಿಸಿದರು. ಅದರ ಮರುದಿನವೇ, ಇಜಿಪ್ಶಿಯನ್ ನಟ ಅಹ್ಮದ್ ಜಾಕಿ ನಟಿಸಿದ್ದ ಈಜಿಪ್ಷಿಯನ್ ಚಲನಚಿತ್ರ ಕಬೋರಿಯ ದ ಗುಂಪಿನ ದೃಶ್ಯಾವಳಿಯಲ್ಲಿ ಅಮೆರಿಕನ್ ಬಾಕ್ಸರ್ ಈಜಿಪ್ಶಿಯನ್ನನಿಗೆ ಸೋಲುತ್ತಿರುವುದಕ್ಕೆ ಜೈಕಾರ ಹಾಕುವ ಒಬ್ಬ ಅಭಿಮಾನಿಯಾಗಿ ಚಿತ್ರದಲ್ಲಿ ಕಂಡುಬಂದರು. ಬ್ಲ್ಯಾಂಚೆಟ್‌, ಆಸ್ಟ್ರೇಲಿಯಾಕ್ಕೆ ಮರಳುತ್ತಾರೆ ಹಾಗು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡ್ರಮ್ಯಾಟಿಕ್ ಆರ್ಟ್ ನಲ್ಲಿ ಅಭ್ಯಾಸ ಮಾಡಲು ಸಿಡ್ನಿಗೆ ಸ್ಥಳಾಂತರಗೊಳ್ಳುತ್ತಾರೆ, 1992ರಲ್ಲಿ ಅಲ್ಲಿಂದ ಪದವಿಯನ್ನು ಪಡೆದು ರಂಗಭೂಮಿಯಲ್ಲಿ ತಮ್ಮ ನಟನಾ ವೃತ್ತಿಯನ್ನು ಆರಂಭಿಸುತ್ತಾರೆ.

ವೃತ್ತಿಜೀವನ[ಬದಲಾಯಿಸಿ]

ಇವರು 1993ರಲ್ಲಿ, ಡೇವಿಡ್ ಮಮೆತ್ ರ ನಾಟಕ ಒಲೆಯನ್ನಾ ದಲ್ಲಿ ಜಿಯೋಫ್ಫ್ರಿ ರಶ್ ಗೆ ಎದುರಾಗಿ ನಟಿಸಿದ ಪಾತ್ರವೇ ಅವರ ಮೊದಲ ಪ್ರಮುಖ ರಂಗಭೂಮಿ ಪಾತ್ರವಾಗಿತ್ತು. ಈ ನಾಟಕಕ್ಕಾಗಿ ಅವರು ಸಿಡ್ನಿ ಥಿಯೇಟರ್ ಕ್ರಿಟಿಕ್ಸ್' ಬೆಸ್ಟ್ ನ್ಯೂ ಕಮ್ಮರ್ ಪ್ರಶಸ್ತಿ ಗೆದ್ದರು.[೮] ಅವರು 1994-95ರ ಕಂಪನಿ Bಯ ಪ್ರಸಿದ್ಧ ನಿರ್ಮಾಣ ಹ್ಯಾಮ್ಲೆಟ್ ನಲ್ಲಿ ಒಫೀಲಿಯ ಪಾತ್ರದಲ್ಲಿ ಕಾಣಿಸಿಕೊಂಡರು, ರಶ್ ಹಾಗು ರಿಚರ್ಡ್ ರಾಕ್ಸ್ಬರ್ಗ್ ಅಭಿನಯದ ನಾಟಕವನ್ನು ನೀಲ್ ಆರ್ಮ್ಫೀಲ್ಡ್ ನಿರ್ದೇಶಿಸಿದ್ದರು.

ಬ್ಲ್ಯಾಂಚೆಟ್‌, TVಯ ಕಿರುಸರಣಿ ಹಾರ್ಟ್ ಲ್ಯಾಂಡ್ ನಲ್ಲಿ ಏರ್ನಿ ಡಿನ್ಗೋ ಎದುರು ನಟಿಸಿದರು, ಕಿರು-ಸರಣಿ ಬಾರ್ಡರ್ ಟೌನ್ ನಲ್ಲಿ ಹ್ಯುಗೋ ವೀವಿಂಗ್ ಎದುರು ನಟಿಸಿದರು, ಜೊತೆಗೆ "ದಿ ಲೋಡೆಡ್ ಬಾಯ್" ಶೀರ್ಷಿಕೆಯಡಿಯಲ್ಲಿ ಪ್ರಸಾರವಾದ ಪೋಲಿಸ್ ರೆಸ್ಕ್ಯೂ ನ ಸಂಚಿಕೆಯಲ್ಲಿ ನಟಿಸಿದರು.

ಇವರು 1994ರ ಕಿರುತೆರೆ ಚಲನಚಿತ್ರ ಪೋಲಿಸ್ ರೆಸ್ಕ್ಯೂ ನಲ್ಲಿ ಶಸ್ತ್ರಧಾರಿ ಡಕಾಯಿತರಿಂದ ಅಪಹರಣಕ್ಕೆ ಒಳಗಾದ ಒಬ್ಬ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡರು, ಜೊತೆಗೆ 50 ನಿಮಿಷದ ನಾಟಕ ಪಾರ್ಕ್ ಲ್ಯಾಂಡ್ಸ್  (1996)ನಲ್ಲಿಯೂ ಕಾಣಿಸಿಕೊಂಡರು, ಇದು ಆಸ್ಟ್ರೇಲಿಯನ್ ಚಿತ್ರಮಂದಿರಗಳಲ್ಲಿ ಸೀಮಿತವಾಗಿ ಬಿಡುಗಡೆಯನ್ನು ಕಂಡವು.

ಬ್ಲ್ಯಾಂಚೆಟ್‌, ಅಂತಾರಾಷ್ಟ್ರೀಯವಾಗಿ ಮೊದಲ ಬಾರಿಗೆ ಬ್ರೂಸ್ ಬೆರೆಸ್ಫೋರ್ಡ್ ರ 1997ರ ಚಲನಚಿತ್ರ ಪ್ಯಾರಡೈಸ್ ರೋಡ್ ನಲ್ಲಿ ಕಾಣಿಸಿಕೊಂಡರು. ಚಿತ್ರದಲ್ಲಿ ಅವರು ವಿಶ್ವ ಸಮರ II ರಲ್ಲಿ ಜಪಾನಿ ಸೇನೆಯಿಂದ ಬಂಧಿತರಾದ ಒಬ್ಬ ಆಸ್ಟ್ರೇಲಿಯನ್ ದಾದಿಯಾಗಿ ಪೋಷಕ ಪಾತ್ರವನ್ನು ನಿರ್ವಹಿಸಿದರು. ಚಿತ್ರದಲ್ಲಿ ಗ್ಲೆನ್ನ್ ಕ್ಲೋಸ್ ಹಾಗು ಫ್ರಾನ್ಸೆಸ್ ಮ್ಯಾಕ್ ಡೋರ್ಮಂಡ್ ಸಹ ನಟಿಸಿದ್ದಾರೆ. ಅವರ ಮೊದಲ ಪ್ರಮುಖ ಪಾತ್ರವನ್ನೂ ಸಹ 1997ರಲ್ಲಿ ನಿರ್ವಹಿಸಿದರು. ಗಿಲ್ಲಿಯನ್ ಆರ್ಮ್‌ಸ್ಟ್ರಾಂಗ್ ನಿರ್ಮಾಣದ ಆಸ್ಕರ್ ಅಂಡ್ ಲುಸಿನ್ಡಾ ದಲ್ಲಿ ರಾಲ್ಫ್ ಫಿಯೇನ್ನೆಸ್ ಗೆ ಎದುರಾಗಿ ಲುಸಿನ್ಡಾ ಲೆಪ್ಲಾಸ್ಟ್ರಿಯರ್ ಪಾತ್ರವನ್ನು ನಿರ್ವಹಿಸಿದರು. ಇದಕ್ಕೆ ಸಂಗತವೆನ್ನುವಂತೆ, ಬೂಕರ್ ಪ್ರಶಸ್ತಿ ವಿಜೇತ, ಆಸ್ಕರ್ ಅಂಡ್ ಲುಸಿನ್ಡಾ ದ ಆಸ್ಟ್ರೇಲಿಯನ್ ಲೇಖಕ ಪೀಟರ್ ಕ್ಯಾರಿ, ಬ್ಲ್ಯಾಂಚೆಟ್‌ ರ ತಂದೆ, ಬಾಬ್‌ಗೆ ಪರಿಚಿತರಾಗಿದ್ದರು. ಇವರಿಬ್ಬರು ಮೇಲ್ಬೋರ್ನ್‌ನ ಜಾಹಿರಾತು ಸಂಸ್ಥೆಯಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ, ಪರಿಚಯವಾಗಿತ್ತು. ಬ್ಲ್ಯಾಂಚೆಟ್‌, ತಮ್ಮ ಈ ಪಾತ್ರದ ಅತ್ಯುತ್ತಮ ಪ್ರಮುಖ ನಟಿಯಾಗಿ ತಮ್ಮ ಮೊದಲ ಆಸ್ಟ್ರೇಲಿಯನ್ ಫಿಲಂ ಇನ್‌ಸ್ಟಿಟ್ಯೂಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಆದರೆ ದಿ ವೆಲ್ ಚಿತ್ರದ ನಟನೆಗಾಗಿ ಪಮೇಲ ರಾಬೆಗೆ ಈ ಪ್ರಶಸ್ತಿಯನ್ನು ಬಿಟ್ಟುಕೊಟ್ಟರು. ಆದಾಗ್ಯೂ, ಅದೇ ವರ್ಷದಲ್ಲಿ, ಭಾವಪ್ರಧಾನ-ಹಾಸ್ಯ ಚಲನಚಿತ್ರ ಥ್ಯಾಂಕ್ ಗಾಡ್ ಹಿ ಮೆಟ್ ಲಿಜ್ಜಿ ಯಲ್ಲಿನ ಲಿಜ್ಜಿ ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿಯೆಂದು AFI ಪ್ರಶಸ್ತಿ ಗಳಿಸಿದರು. ಚಿತ್ರದಲ್ಲಿ ರಿಚರ್ಡ್ ರಾಕ್ಸ್ಬರ್ಗ್ ಹಾಗು ಫ್ರಾನ್ಸೆಸ್ ಓ' ಕಾನ್ನರ್ ಸಹ ಪಾತ್ರ ನಿರ್ವಹಿಸಿದ್ದಾರೆ.

1998ರ ಚಲನಚಿತ್ರ ಎಲಿಜಬೆತ್ ನಲ್ಲಿ ಇಂಗ್ಲೆಂಡ್ ನ ರಾಣಿ ಎಲಿಜಬೆತ್ I ಆಗಿ ಅಂತಾರಾಷ್ಟ್ರೀಯವಾಗಿ ಗಮನ ಸೆಳೆದಂತಹ ಅವರ ಮೊದಲ ಪಾತ್ರವಾಗಿತ್ತು. ಪಾತ್ರಕ್ಕಾಗಿ ಅತ್ಯುತ್ತಮ ನಟಿಯೆಂದು ಅಕ್ಯಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಯಿತು. ಆದರೆ ಪ್ರಶಸ್ತಿಯನ್ನು ಶೇಕ್ಸ್ ಪಿಯರ್ ಇನ್ ಲವ್ ಚಿತ್ರದಲ್ಲಿನ ನಟನೆಗಾಗಿ ಗ್ವೆನೆಥ್ ಪಾಲ್ಟ್ರೋವ್ ಬಾಚಿಕೊಂಡರು, ಆದರೆ ಬ್ಲ್ಯಾಂಚೆಟ್‌ ಬ್ರಿಟಿಶ್ ಅಕ್ಯಾಡೆಮಿ ಆವಾರ್ಡ್ (BAFTA) ಹಾಗು ಚಲನಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗಳಿಸಿಕೊಂಡರು. ಅದರ ಮರುವರ್ಷ, ಬ್ಲ್ಯಾಂಚೆಟ್, ದಿ ಟ್ಯಾಲೆನ್ಟೆಡ್ Mr. ರಿಪ್ಲೆಯ್ ಚಿತ್ರದಲ್ಲಿನ ಪೋಷಕ ಪಾತ್ರಕ್ಕಾಗಿ ಮತ್ತೊಂದು BAFTA ಪ್ರಶಸ್ತಿಗೆ ನಾಮಾಂಕಿತರಾದರು.

ಆ ಹೊತ್ತಿಗೆ ನಟಿಯಾಗಿ ಶ್ಲಾಘನೆಗೆ ಪಾತ್ರರಾದ ಬ್ಲ್ಯಾಂಚೆಟ್, ಪೀಟರ್ ಜ್ಯಾಕ್ಸನ್ ರ ದಿ ಲಾರ್ಡ್ ಆಫ್ ದಿ ರಿಂಗ್ಸ್ ನ ಪಾತ್ರದಲ್ಲಿ ಕಾಣಿಸಿಕೊಂಡಾಗ ಹೊಸ ಅಭಿಮಾನಿಗಳನ್ನು ತಮ್ಮೆಡೆಗೆ ಸೆಳೆದುಕೊಂಡರು. ಎಲ್ಲ ಮೂರು ಚಲನಚಿತ್ರಗಳಲ್ಲಿ ಗಲಾಡ್ರಿಯಲ್ ಪಾತ್ರವನ್ನು ನಿರ್ವಹಿಸಿದರು. ಟ್ರಿಲಜಿಯು(ಒಂದೇ ಕಥಾವಸ್ತುವಿಗೆ ಸಂಬಂಧಿಸಿದ ಮೂರು ಚಿತ್ರಗಳು) ಸಾರ್ವಕಾಲಿಕವಾಗಿ ಅಧಿಕ ಹಣವನ್ನು ಗಳಿಸಿದ ಚಲನಚಿತ್ರ ಟ್ರಿಲಜಿಯೆಂಬ ದಾಖಲೆಯನ್ನು ಸ್ಥಾಪಿಸಿದೆ.[೯]

2005ರಲ್ಲಿ, ಮಾರ್ಟಿನ್ ಸ್ಕಾರೆಸೆಸ್ ರ ದಿ ಏವಿಯೇಟರ್ ಚಿತ್ರದಲ್ಲಿನ ಕ್ಯಾಥರೀನ್ ಹೆಪ್‌ಬರ್ನ್ ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿಯೆಂದು ಅಕ್ಯಾಡೆಮಿ ಪ್ರಶಸ್ತಿಯನ್ನು ಗಳಿಸಿದರು. ಮಾಜಿ ಆಸ್ಕರ್ ಪ್ರಶಸ್ತಿ ವಿಜೇತ ನಟ/ನಟಿಯರ ಪಾತ್ರವನ್ನು ನಿರ್ವಹಿಸಿ ಅಕ್ಯಾಡೆಮಿ ಪ್ರಶಸ್ತಿ ಗಳಿಸಿದ ಮೊದಲ ನಟಿಯೆಂದು ಬ್ಲ್ಯಾಂಚೆಟ್ ಖ್ಯಾತಿಯನ್ನು ಗಳಿಸಿದರು. thumb|ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, 2007ರಲ್ಲಿ ಬ್ಲ್ಯಾಂಚೆಟ್‌. 2006ರಲ್ಲಿ, ಅವರು ಬ್ರಾಡ್ ಪಿಟ್ ಗೆ ಎದುರಾಗಿ ಬಬೇಲ್ ನಲ್ಲಿ, ಜಾರ್ಜ್ ಕ್ಲೂನಿಗೆ ಎದುರಾಗಿ ದಿ ಗುಡ್ ಜರ್ಮನ್ ನಲ್ಲಿ ಹಾಗು ಡಾಮೆ ಜೂಡಿ ಡೆನ್ಚ್ ಗೆ ಎದುರಾಗಿ ನೋಟ್ಸ್ ಆನ್ ದಿ ಸ್ಕ್ಯಾಂಡಲ್ ನಲ್ಲಿ ನಟಿಸಿದರು. ಕಾಕತಾಳೀಯವಾಗಿ, ಎಲಿಜಬೆತ್ I ಚಿತ್ರದಲ್ಲಿ ನಟನೆಗಾಗಿ ಡೆನ್ಚ್ ಅತ್ಯುತ್ತಮ ಪೋಷಕ ನಟಿಯೆಂದು ಅಕ್ಯಾಡೆಮಿ ಪ್ರಶಸ್ತಿಯನ್ನು ಗಳಿಸಿದರು, ಆದಾಗ್ಯೂ ಅದೇ ವರ್ಷ ಬ್ಲ್ಯಾಂಚೆಟ್, ಭಿನ್ನ ವಿಭಾಗದಲ್ಲಿ ಅದೇ ಐತಿಹಾಸಿಕ ಪಾತ್ರದ ನಿರ್ವಹಣೆಗಾಗಿ ಪ್ರಶಸ್ತಿಯಿಂದ ವಂಚಿತರಾದರು. ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಬ್ಲ್ಯಾಂಚೆಟ್‌ ಮೂರನೇ ಬಾರಿಗೆ ಅಕ್ಯಾಡೆಮಿ ಪ್ರಶಸ್ತಿಗೆ ನಾಮನಿರ್ದೆಶನಗೊಂಡರು (ಡೆನ್ಚ್ ಸಹ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತರಾಗಿದ್ದರು).

2007ರಲ್ಲಿ, ಬ್ಲ್ಯಾಂಚೆಟ್‌ ರನ್ನು ಟೈಮ್ ನಿಯತಕಾಲಿಕ ವು ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಿತು ಜೊತೆಗೆ ಫೋರ್ಬ್ಸ್ ನಿಯತಕಾಲಿಕವು ಸಹ ಇವರನ್ನು ಅತ್ಯಂತ ಯಶಸ್ವೀ ನಟಿಯೆಂದು ಘೋಷಿಸಿತು.

2007ರಲ್ಲಿ, ವೆನಿಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿಯೆಂದು ವೋಲ್ಪಿ ಕಪ್ ಪ್ರಶಸ್ತಿಯನ್ನು ಗಳಿಸಿದರು. ಜೊತೆಗೆ ಟಾಡ್ ಹಯ್ನೆಸ್ ರ ಚಲನಚಿತ್ರ ಐ'ಮ್ ನಾಟ್ ದೇರ್ ನಲ್ಲಿ ಬಾಬ್ ಡೈಲಾನ್ ರ ಆರು ಅವತಾರಗಳ ಪೈಕಿ ಒಂದನ್ನು ನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ಪೋಷಕ ನಟಿಯೆಂದು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದರು. ಅಲ್ಲದೇ ಉತ್ತರಭಾಗದ ಚಿತ್ರ ಎಲಿಜಬೆತ್: ದಿ ಗೋಲ್ಡನ್ ಏಜ್ ನಲ್ಲಿ ಎಲಿಜಬೆತ್ I ರ ಪಾತ್ರವನ್ನು ಪುನರಾವರ್ತಿಸಿದರು.[೧೦] 80ನೇ ಅಕ್ಯಾಡೆಮಿ ಪ್ರಶಸ್ತಿಗಳಲ್ಲಿ ಬ್ಲ್ಯಾಂಚೆಟ್‌ ಎರಡು ಅಕ್ಯಾಡೆಮಿ ಪ್ರಶಸ್ತಿ ಗಳಿಗೆ ನಾಮನಿರ್ದೆಶನವನ್ನು ಗಳಿಸಿದರು; ಎಲಿಜಬೆತ್: ದಿ ಗೋಲ್ಡನ್ ಏಜ್ ನಲ್ಲಿನ ಅತ್ಯುತ್ತಮ ನಟನೆಗಾಗಿ ಹಾಗು ಐ'ಮ್ ನಾಟ್ ದೇರ್ ಗಾಗಿ ಅತ್ಯುತ್ತಮ ಪೋಷಕ ನಟಿಯೆಂದು ನಾಮಾಂಕಿತರಾದರು, ಒಂದೇ ವರ್ಷ ಎರಡು ಪ್ರಶಸ್ತಿಗಳಿಗೆ ನಾಮಕರಣಗೊಂಡ ಹನ್ನೊಂದನೇ ನಟಿ ಎನಿಸಿಕೊಂಡರು ಜೊತೆಗೆ ಪಾತ್ರದ ಪುನರಾವರ್ತನೆಗಾಗಿ ಮತ್ತೊಂದು ನಾಮನಿರ್ದೇಶನವನ್ನು ಗಳಿಸಿದ ಮೊದಲ ನಟಿ ಎಂಬ ಕೀರ್ತಿಗೆ ಭಾಜನರಾದರು.[೧೧]

ಬ್ಲ್ಯಾಂಚೆಟ್‌ ಹಾಗು ಅವರ ಪತಿ, ಜನವರಿ 2008ರಲ್ಲಿ ಸಿಡ್ನಿ ಥಿಯೇಟರ್ ಕಂಪನಿಯ ಕಲಾತ್ಮಕ ಸಹ-ನಿರ್ದೇಶಕರುಗಳಾಗಿ ಮೂರು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದರು. ಸಂಸ್ಥೆಗೆ ಗಿಯೋರ್ಗಿಯೋ ಅರ್ಮಾನಿ ಪೋಷಕರಾಗಿದ್ದರು.

ನಂತರದಲ್ಲಿ ಇವರು ಸ್ಟೀವನ್ ಸ್ಪಿಲ್ಬರ್ಗ್ ನ ಇಂಡಿಯಾನ ಜೋನ್ಸ್ ಅಂಡ್ ದಿ ಕಿಂಗ್ಡಂ ಆಫ್ ದಿ ಕ್ರಿಸ್ಟಲ್ ಸ್ಕಲ್ ನಲ್ಲಿ ದುಷ್ಟ KGB ಏಜೆಂಟ್ ಕರ್ನಲ್ Dr. ಐರಿನಾ ಸ್ಪಾಲ್ಕೋ ಆಗಿ ಪಾತ್ರವನ್ನು ನಿರ್ವಹಿಸಿದರು ಹಾಗು ಡೇವಿಡ್ ಫಿಂಚರ್ ಅವರ ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್ ನಲ್ಲಿ, ಬ್ರಾಡ್ ಪಿಟ್ ರೊಂದಿಗೆ ಎರಡನೇ ಬಾರಿ ತೆರೆಯ ಮೇಲೆ ಕಾಣಿಸಿಕೊಂಡರು.

ಗ್ರುಮನ್'ಸ್ ಇಜಿಪ್ಶಿಯನ್ ಥಿಯೇಟರ್ ನ ಮುಂಭಾಗದಲ್ಲಿ 5 ಡಿಸೆಂಬರ್ 2008ರಲ್ಲಿ ಬ್ಲ್ಯಾಂಚೆಟ್‌‌ರಿಗೆ 6712 ಹಾಲಿವುಡ್ ಬೌಲೆವಾರ್ಡ್‌ನಲ್ಲಿ ಹಾಲಿವುಡ್ ವಾಕ್ ಆಫ್ ಫೇಮ್ನ ನಟಿ ಎಂಬ ಸ್ಥಾನ ನೀಡಿ ಗೌರವಿಸಲಾಯಿತು.[೧೨]

2008ರ ಹೊತ್ತಿಗೆ, ಬ್ಲ್ಯಾಂಚೆಟ್ ಅತ್ಯುತ್ತಮ ಚಲನಚಿತ್ರವೆಂದು ಅಕ್ಯಾಡೆಮಿ ಪ್ರಶಸ್ತಿಗೆ ನಾಮಾಂಕಿತಗೊಂಡ ಏಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ: ಎಲಿಜಬೆತ್ (1998), ದಿ ಲಾರ್ಡ್ ಆಫ್ ದಿ ರಿಂಗ್ಸ್ ಟ್ರಿಲಜಿ (2001, 2002 ಹಾಗು 2003), ದಿ ಏವಿಯೇಟರ್ (2004), ಬಬೇಲ್ (2006) ಹಾಗು ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್ (2008).

ಬ್ಲ್ಯಾಂಚೆಟ್‌, ಪೋನ್ಯೋ ಎಂಬ ಚಲನಚಿತ್ರಕ್ಕೆ ಧ್ವನಿಯನ್ನು ನೀಡಿದ್ದಾರೆ.[೧೩] ಜೊತೆಗೆ 14 ಮೇ 2010ರಲ್ಲಿ ಬಿಡುಗಡೆಯಾದ ರಿಡ್ಲೆಯ್ ಸ್ಕಾಟ್ ರ ರಾಬಿನ್ ಹುಡ್ ನಲ್ಲಿ ರಸ್ಸಲ್ ಕ್ರೋವ್ ಗೆ ಎದುರಾಗಿ ಕಾಣಿಸಿಕೊಂಡಿದ್ದಾರೆ.

ವೈಯಕ್ತಿಕ ಜೀವನ[ಬದಲಾಯಿಸಿ]

ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, 2005ರಲ್ಲಿ ಬ್ಲ್ಯಾಂಚೆಟ್‌

ಬ್ಲ್ಯಾಂಚೆಟ್‌ ರ ಪತಿ ಆಂಡ್ರ್ಯೂ ಅಪ್ಟನ್, ನಾಟಕಕಾರ ಹಾಗು ಚಿತ್ರಕಥೆಗಾರ, ಇವರನ್ನು ಈಕೆ 1996ರಲ್ಲಿ ದಿ ಸೀಗಲ್ ನಿರ್ಮಾಣದಲ್ಲಿ ಪಾತ್ರವಹಿಸಿದ್ದ ಸಂದರ್ಭದಲ್ಲಿ ಸಂಧಿಸಿದರು. ಇವರದ್ದು ಮೊದಲ ನೋಟದ ಪ್ರೇಮವಲ್ಲ, ಆದಾಗ್ಯೂ; "ಅವರು ನನ್ನನ್ನು ಉದಾಸೀನ ಮನೋಭಾವದರೆಂದು ಪರಿಗಣಿಸಿದ್ದರು ಜೊತೆಗೆ ನಾನು ಅವರನ್ನು ಬಹಳ ಕೋಪಿಷ್ಠ ಎಂದು ತಿಳಿದಿದ್ದೆ", ಎಂದು ಬ್ಲ್ಯಾಂಚೆಟ್ ನಂತರದಲ್ಲಿ ಪ್ರತಿಕ್ರಿಯಿಸುತ್ತಾರೆ. "ಇದು ನಾವು ಇತರರನ್ನು ಎಷ್ಟರ ಮಟ್ಟಿಗೆ ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ ಎಂಬುದನ್ನು ತೋರಿಸುತ್ತದೆ, ಆದರೆ ಅವರು ನನ್ನನ್ನು ಒಂದು ಬಾರಿ ಚುಂಬಿಸಿದಾಗ ಅವರ ಬಗ್ಗೆ ಹೇಳುವುದೇನೂ ಇರಲಿಲ್ಲ." ಇವರಿಬ್ಬರು 29 ಡಿಸೆಂಬರ್ 1997ರಲ್ಲಿ ಮದುವೆಯಾಗುತ್ತಾರೆ ಹಾಗು ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ: ಡಾಶಿಯೇಲ್ ಜಾನ್ (ಜನನ 3 ಡಿಸೆಂಬರ್ 2001), ರೋಮನ್ ರಾಬರ್ಟ್ (ಜನನ 23 ಏಪ್ರಿಲ್ 2004), ಹಾಗು ಇಗ್ನೇಶಿಯಸ್ ಮಾರ್ಟಿನ್(ಜನನ 13 ಏಪ್ರಿಲ್ 2008).

2000ದ ದಶಕದ ಆರಂಭದ ಬಹುಭಾಗ ಇಂಗ್ಲೆಂಡ್‌ನ ಬ್ರೈಟನ್‌ನ್ನು ಕುಟುಂಬವು ವಾಸಸ್ಥಳವಾಗಿ ಮಾಡಿಕೊಂಡ ನಂತರ, ಅವರು ಹಾಗು ಅವರ ಪತಿ ತಮ್ಮ ತವರು ಆಸ್ಟ್ರೇಲಿಯಾಕ್ಕೆ ಮರಳುತ್ತಾರೆ. ನವೆಂಬರ್ 2006ರಲ್ಲಿ, ಸ್ಥಳಾಂತರಕ್ಕೆ ಮುಖ್ಯ ಕಾರಣ ತಮ್ಮ ಮಕ್ಕಳಿಗೆ ಶಾಶ್ವತವಾದ ನೆಲೆಯನ್ನು ಕಲ್ಪಿಸಿಕೊಡಬೇಕೆಂಬ ಬಯಕೆ, ಹಾಗು ತಮ್ಮ ಕುಟುಂಬದೊಂದಿಗೆ ಸನಿಹದಲ್ಲಿರುವುದು ಹಾಗು ಆಸ್ಟ್ರೇಲಿಯನ್(ರಂಗಭೂಮಿ) ಸಮುದಾಯದ ಭಾಗವೆಂಬ ಪ್ರಜ್ಞೆ ಇದಕ್ಕೆ ಕಾರಣವೆಂದು ಹೇಳುತ್ತಾರೆ.[೧೪] ಅವರು ಹಾಗು ಅವರ ಕುಟುಂಬವು, ಸಿಡ್ನಿಯ ಉಪನಗರವಾದ ಹಂಟರ್ಸ್ ಹಿಲ್ ನ ಬಂದರು ಪ್ರದೇಶದಲ್ಲಿರುವ "ಬುಲ್ವಾರ" ಎಂಬ 1877ರಲ್ಲಿ ನಿರ್ಮಿಸಲಾದ ಮರಳುಗಲ್ಲಿನ ಬಂಗಲೆಯಲ್ಲಿ ವಾಸಿಸುತ್ತಾರೆ. ಇದನ್ನು 2004ರಲ್ಲಿ $10.2 ದಶಲಕ್ಷ ಆಸ್ಟ್ರೇಲಿಯನ್ ಡಾಲರ್ ಗೆ ಖರೀದಿಸಲಾಯಿತು. ಜೊತೆಗೆ "ಪರಿಸರ ಸ್ನೇಹಿ" ಮಾಡುವ ಉದ್ದೇಶದಿಂದ ಇದು 2007ರಲ್ಲಿ ವ್ಯಾಪಕವಾದ ನವೀಕರಣಕ್ಕೆ ಒಳಗಾಯಿತು.[೧೫][೧೬]

2006ರಲ್ಲಿ, ಮ್ಯಾಕ್ಲೀನ್ ಎಡ್ವರ್ಡ್ಸ್ ಚಿತ್ರಿಸಿದ ಕೇಟ್ ಬ್ಲ್ಯಾಂಚೆಟ್ ಹಾಗು ಅವರ ಕುಟುಂಬದ ಭಾವಚಿತ್ರವು ಆರ್ಚಿಬಾಲ್ಡ್ ಪ್ರೈಜ್ ನ ಸ್ಪರ್ಧೆಯಲ್ಲಿ ಅಂತಿಮ ಸುತ್ತನ್ನು ತಲುಪಿತು. ಇದು "ಕಲೆ, ಸಾಹಿತ್ಯ, ವಿಜ್ಞಾನ ಅಥವಾ ರಾಜಕೀಯದಲ್ಲಿ ಖ್ಯಾತಿಯನ್ನು ಗಳಿಸಿದ ಯಾವುದೇ ಪುರುಷ ಅಥವಾ ಮಹಿಳೆಯ ಅತ್ಯುತ್ತಮ ಭಾವಚಿತ್ರವೆಂದು" ಪ್ರಶಸ್ತಿಯನ್ನು ಗಳಿಸಿತು.[೧೭]

ಬ್ಲ್ಯಾಂಚೆಟ್ ಸಿಡ್ನಿ ಚಲನಚಿತ್ರೋತ್ಸವದ ಪೋಷಕಿಯಾಗಿದ್ದರು. ಇವರು ಪ್ರಾಕ್ಟರ್ & ಗ್ಯಾಂಬಲ್ ಒಡೆತನದಲ್ಲಿರುವ ವಿಲಾಸಿ ಸ್ಕಿನ್ ಕೇರ್ (ಚರ್ಮ ರಕ್ಷಣೆ) ಬ್ರ್ಯಾಂಡ್ SK-IIಗೆ ರೂಪದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. 2007ರಲ್ಲಿ, ಬ್ಲ್ಯಾಂಚೆಟ್, ಆಸ್ಟ್ರೇಲಿಯನ್ ಕನ್ಸರ್ವೇಶನ್ ಫೌಂಡೆಶನ್ ನ ಆನ್ಲೈನ್ ಅಭಿಯಾನ www.whoonearthcares.com ನ ರಾಯಭಾರಿಯಾದರು - ಈ ಅಂತರಜಾಲವು ಬದಲಾಗುತ್ತಿರುವ ಹವಾಮಾನದ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಲು ಆಸ್ಟ್ರೇಲಿಯನ್ನರ ಮನವೊಲಿಕೆಗೆ ಯತ್ನಿಸಿತು. ಇವರು SolarAid ಎಂಬ ಧರ್ಮದತ್ತಿ ಸಂಸ್ಥೆ ಅಭಿವೃದ್ಧಿಗೆ ಪೋಷಕರೂ ಸಹ ಆಗಿದ್ದಾರೆ. ಸಿಡ್ನಿಯಲ್ಲಿ 2008ರಲ್ಲಿ ನಡೆದ 9ನೇ ವರ್ಲ್ಡ್ ಕಾಂಗ್ರೆಸ್ ಆಫ್ ಮೆಟ್ರೋಪೋಲಿಸ್ ನ ಉದ್ಘಾಟನೆಯಲ್ಲಿ ಮಾತನಾಡುತ್ತಾ, ಬ್ಲ್ಯಾಂಚೆಟ್‌ ಹೇಳುತ್ತಾರೆ: "ಎಲ್ಲ ಮಹಾನಗರಗಳಲ್ಲಿ ಸಾಮಾನ್ಯವಾಗಿರುವ ಒಂದು ಅಂಶವೆಂದರೆ, ಅವೆಲ್ಲವೂ ವಿಭಿನ್ನವಾಗಿದೆ."[೧೮]

2009ರ ಆರಂಭದಲ್ಲಿ, ಬ್ಲ್ಯಾಂಚೆಟ್‌, "ಆಸ್ಟ್ರೇಲಿಯನ್ ಲೆಜೆಂಡ್ಸ್ ಆಫ್ ದಿ ಸ್ಕ್ರೀನ್" ಎಂಬ ಅಂಚೆಚೀಟಿಗಳ ವಿಶೇಷ ಸಂಚಿಕೆಯ ಸರಣಿಯಲ್ಲಿ ಕಾಣಿಸಿಕೊಂಡರು, ಈ ಅಂಚೆ ಚೀಟಿಗಳು "ಆಸ್ಟ್ರೇಲಿಯನ್ ಮನರಂಜನೆ ಹಾಗು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ" ಆಸ್ಟ್ರೇಲಿಯನ್ ನಟರಿಗೆ ಸಮರ್ಪಿತವಾಗಿದೆ.[೧೯] ಈ ಸರಣಿಯಲ್ಲಿ, ಇವರು, ಜಿಯೋಫ್ಫರಿ ರಶ್, ರಸ್ಸಲ್ ಕ್ರೌ, ಹಾಗು ನಿಕೊಲ್ ಕಿಡ್ಮನ್ ಎರಡು ಬಾರಿ ಕಾಣಿಸಿಕೊಳ್ಳುತ್ತಾರೆ: ಒಮ್ಮೆ ವೈಯಕ್ತಿಕವಾಗಿ ಹಾಗು ಮತ್ತೊಮ್ಮೆ ಪಾತ್ರಧಾರಿಗಳಾಗಿ; ಬ್ಲ್ಯಾಂಚೆಟ್‌, ತಮ್ಮ Elizabeth: The Golden Age ಪಾತ್ರದ ಮೂಲಕ ಬಿಂಬಿತರಾಗಿದ್ದಾರೆ.[೧೯]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಚಲನಚಿತ್ರ
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
1994 ಪೋಲಿಸ್ ರೆಸ್ಕ್ಯೂ: ದಿ ಮೂವಿ ವಿವಿಯನ್
1996 ಪಾರ್ಕ್ಲ್ಯಾಂಡ್ಸ್ ರೋಸಿ
1997 ಆಸ್ಕರ್ ಅಂಡ್ ಲುಸಿನ್ಡಾ ಲುಸಿನ್ಡಾ ಲೆಪ್ಲಾಸ್ಸ್ಟ್ರಿಯರ್ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಆಸ್ಟ್ರೇಲಿಯನ್ ಫಿಲ್ಮ್ ಇನ್ಸ್‌ಟಿಟ್ಯೂಟ್ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ನಟಿಗಾಗಿ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆಫ್ ಆಸ್ಟ್ರೇಲಿಯ ಪ್ರಶಸ್ತಿ ಗೆ ನಾಮನಿರ್ದೇಶನ.
1997 ಥ್ಯಾಂಕ್ ಗಾಡ್ ಹಿ ಮೆಟ್ ಲಿಜ್ಜಿ ಲಿಜ್ಜಿ ಪೋಷಕ ಪಾತ್ರದಲ್ಲಿ ಉತ್ತಮ ನಟನೆಗಾಗಿ ಆಸ್ಟ್ರೇಲಿಯನ್ ಫಿಲ್ಮ್ ಇನ್ಸ್‌ಟಿಟ್ಯೂಟ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ-ಫಿಲಂ ಕ್ರಿಟಿಕ್ಸ್ ಸರ್ಕಲ್ ಆಫ್ ಆಸ್ಟ್ರೇಲಿಯಾ ಪ್ರಶಸ್ತಿ
1997 ಪ್ಯಾರಡೈಸ್ ರೋಡ್ ಸುಸಾನ್ ಮ್ಯಾಕ್ಕಾರ್ಥಿ
1998 ಏಲಿಜಬೆತ್ ರಾಣಿ ಎಲಿಜಬೆತ್ I ಪ್ರಮುಖ ಪಾತ್ರದಲ್ಲಿನ ಉತ್ತಮ ನಟನೆಗಾಗಿ BAFTA ಪ್ರಶಸ್ತಿ‌
ಅತ್ಯುತ್ತಮ ನಟನೆಗಾಗಿ ಬ್ರಾಡ್‌ಕ್ಯಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ಶಿಕಾಗೊ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌
ಅತ್ಯುತ್ತಮ ನಟನೆಗಾಗಿ ಚ್ಲೋಟ್ರುಡಿಸ್ ಪ್ರಶಸ್ತಿ
ನಾಮನಿರ್ದೇಶನ – ಅತ್ಯುತ್ತಮ ನಟನೆಯಾಗಿ ಎಂಪೈರ್ ಪ್ರಶಸ್ತಿ
ಅತ್ಯುತ್ತಮ ನಟನೆ- ಚಲನಚಿತ್ರ ಕಥೆಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ
ಅತ್ಯಂತ ಭರವಸೆಯ ನಟಿ ಎಂದು ಲಾಸ್ ವೇಗಸ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ಲಂಡನ್‌ ಫಿಲ್ಮ್‌ ಕ್ರಿಟಿಕ್ಸ್‌ ಸರ್ಕಲ್‌ ಪ್ರಶಸ್ತಿ
ಚಲನಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಆನ್ಲೈನ್ ಫಿಲ್ಮ್‌ ಕ್ರಿಟಿಕ್ಸ್‌ ಸೊಸೈಟಿ ಪ್ರಶಸ್ತಿ‌.
ಅತ್ಯುತ್ತಮ ನಟನೆ-ಚಲನಚಿತ್ರ ಕಥೆಗಾಗಿ ಸ್ಯಾಟಲೈಟ್ ಪ್ರಶಸ್ತಿ
ಸೌತ್ ಈಸ್ಟರ್ನ್ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ನಿಂದ ಅತ್ಯುತ್ತಮ ನಟಿ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ಟೊರೊಂಟೊ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿ ಅಕ್ಯಾಡೆಮಿ ಪ್ರಶಸ್ತಿ (/0}ಗೆ ನಾಮನಿರ್ದೇಶನ
ಅದ್ಭುತ ನಟನೆಗಾಗಿ MTV ಮೂವಿ ಪ್ರಶಸ್ತಿ - ನಟಿ ಗೆ ನಾಮನಿರ್ದೇಶನ.
ಮುಖ್ಯ ಪಾತ್ರದಲ್ಲಿನ ಮಹೋನ್ನತ ನಟನೆಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌‌ಗೆ ನಾಮನಿರ್ದೇಶನ
1999 ಬ್ಯಾಂಗರ್ಸ್ ಜ್ಯೂಲಿ-ಆನ್ನಿ
1999 Talented Mr. Ripley, TheThe Talented Mr. Ripley ಮೆರೆಡಿತ್ ಲೋಗ್ ಅತ್ಯುತ್ತಮ ಪೋಷಕ ನಟಿ ಎಂದು BAFTA ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ ಎಂದು ಚ್ಲೋಟ್ರುಡಿಸ್ ಪ್ರಶಸ್ತಿ (ಆನ್ ಐಡಿಯಲ್ ಹಸ್ಬೆಂಡ್ ಗೂ ಸಹ )ಗೆ ನಾಮನಿರ್ದೇಶನ
1999 ಪುಶಿಂಗ್‌ ಟಿನ್‌ ಕೊನ್ನಿ ಫಾಲ್ಜೊನ್
1999 Ideal Husband, AnAn Ideal Husband ಲೇಡಿ ಗರ್ಟ್ರ್ಯೂಡ್ ಚಿಲ್ಟರ್ನ್ ಅತ್ಯುತ್ತಮ ಪೋಷಕ ನಟಿ ಎಂದು ಚ್ಲೋಟ್ರುಡಿಸ್ ಪ್ರಶಸ್ತಿ(ದಿ ಟ್ಯಾಲೆನ್ಟೆಡ್ Mr. ರಿಪ್ಲೆಯ್ ಗೆ ಸಹ ) ಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ-ಚಲನಚಿತ್ರ-ಸ್ಯಾಟಲೈಟ್ ಪ್ರಶಸ್ತಿಗೆ ನಾಮನಿರ್ದೇಶನ
2000 Gift, TheThe Gift ಅನ್ನಾಬೆಲ್ಲೆ "ಆನ್ನಿ" ವಿಲ್ಸನ್ ಅತ್ಯುತ್ತಮ ನಟನೆಗಾಗಿ ಫೀನಿಕ್ಸ್‌ ಫಿಲ್ಮ್‌ ಕ್ರಿಟಿಕ್ಸ್‌ ಸೊಸೈಟಿ ಪ್ರಶಸ್ತಿ‌ಗೆ ನಾಮನಿರ್ದೇಶನ
- ಅತ್ಯುತ್ತಮ ನಟನೆಗಾಗಿ

ಸ್ಯಾಟರ್ನ್‌ ಪ್ರಶಸ್ತಿಗೆ ನಾಮನಿರ್ದೇಶನ

2000 Man Who Cried, TheThe Man Who Cried ಲೋಲಾ ಅತ್ಯುತ್ತಮ ನಟನೆಗಾಗಿ ಚ್ಲೋಟ್ರುಡಿಸ್ ಪ್ರಶಸ್ತಿ


ಅತ್ಯುತ್ತಮ ಪೋಷಕ ನಟಿ ಎಂದು ಫ್ಲೋರಿಡಾ ಫಿಲಂ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ (ಅಲ್ಲದೆ ಬ್ಯಾಂಡಿಟ್ಸ್ , ದಿ ಲಾರ್ಡ್ ಆಫ್ ದಿ ರಿಂಗ್ಸ್:ದಿ ಫೆಲೋಶಿಪ್ ಆಫ್ ದಿ ರಿಂಗ್ ಹಾಗು ದಿ ಶಿಪ್ಪಿಂಗ್ ನ್ಯೂಸ್ ಗೂ ಸಹ ಪ್ರಶಸ್ತಿ)
ಅತ್ಯುತ್ತಮ ಪೋಷಕ ನಟಿ ಎಂದು ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿ (ಅಲ್ಲದೆ ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ಫೆಲೋಶಿಪ್ ಆಫ್ ದಿ ರಿಂಗ್ ಹಾಗು ದಿ ಶಿಪ್ಪಿಂಗ್ ನ್ಯೂಸ್ ಗೂ ಸಹ ಪ್ರಶಸ್ತಿ)

2001 Shipping News, TheThe Shipping News ಪೆಟಲ್ ಕೊಯ್ಲೆ ಅತ್ಯುತ್ತಮ ಪೋಷಕ ನಟಿ ಎಂದು ಫ್ಲೋರಿಡಾ ಫಿಲಂ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ (ಅಲ್ಲದೆ ಬ್ಯಾಂಡಿಟ್ಸ್ , ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ಫೆಲೋಶಿಪ್ ಆಫ್ ದಿ ರಿಂಗ್ ಹಾಗು ದಿ ಮ್ಯಾನ್ ಹೂ ಕ್ರೈಡ್ ಗೂ ಸಹ ಪ್ರಶಸ್ತಿ)
ಅತ್ಯುತ್ತಮ ಪೋಷಕ ನಟಿ ಎಂದು ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿ (ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ಫೆಲೋಶಿಪ್ ಆಫ್ ದಿ ರಿಂಗ್ ಹಾಗು ದಿ ಮ್ಯಾನ್ ಹೂ ಕ್ರೈಡ್ ಗೂ ಸಹ ಪ್ರಶಸ್ತಿ)
2001 ಚಾರ್ಲೆಟ್ ಗ್ರೇ ಚಾರ್ಲೆಟ್ ಗ್ರೇ ಅತ್ಯುತ್ತಮ ನಟನೆಗಾಗಿ ಕಾನ್ಸಾಸ್ ಸಿಟಿ ಫಿಲಂ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ನಟನೆ-ಚಲನಚಿತ್ರ ಕಥೆಗಾಗಿ ಸ್ಯಾಟಲೈಟ್ ಪ್ರಶಸ್ತಿ - ಗೆ ನಾಮನಿರ್ದೇಶನ
2001 Lord of the Rings: 1The Lord of the Rings: The Fellowship of the Ring ಗಲಡ್ರಿಯಲ್ ಅತ್ಯುತ್ತಮ ಪೋಷಕ ನಟಿಯಾಗಿ ಫ್ಲೋರಿಡಾ ಫಿಲಂ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ (ಅಲ್ಲದೆ ಬ್ಯಾಂಡಿಟ್ಸ್ , ದಿ ಶಿಪ್ಪಿಂಗ್ ನ್ಯೂಸ್ ಹಾಗು ದಿ ಮ್ಯಾನ್ ಹೂ ಕ್ರೈಡ್ ಗೂ ಸಹ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ ಎಂದು ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿ (ಅಲ್ಲದೆ ದಿ ಶಿಪ್ಪಿಂಗ್ ನ್ಯೂಸ್ ಹಾಗು ದಿ ಮ್ಯಾನ್ ಹೂ ಕ್ರೈಡ್) ಗೂ ಸಹ ಪ್ರಶಸ್ತಿ


ಅತ್ಯುತ್ತಮ ಪಾತ್ರಕ್ಕಾಗಿ ಫಿನಿಕ್ಸ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ
ಚಲನಚಿತ್ರದ ಒಂದು ಪಾತ್ರದ ಅದ್ಭುತ ನಟನೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಗೆ ನಾಮನಿರ್ದೇಶನ

2001 ಬ್ಯಾಂಡಿಟ್ಸ್ ಕೇಟ್ ವ್ಹೀಲರ್ ಅತ್ಯುತ್ತಮ ಪೋಷಕ ನಟಿ ಎಂದು ಫ್ಲೋರಿಡಾ ಫಿಲಂ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ (ಅಲ್ಲದೆ, ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ಫೆಲೋಶಿಪ್ ಆಫ್ ದಿ ರಿಂಗ್ , ದಿ ಶಿಪ್ಪಿಂಗ್ ನ್ಯೂಸ್ ಹಾಗು ದಿ ಮ್ಯಾನ್ ಹೂ ಕ್ರೈಡ್ ಗೂ ಸಹ ಪ್ರಶಸ್ತಿ).
ಅತ್ಯುತ್ತಮ ನಟನೆಗಾಗಿ ಅಮೆರಿಕನ್ ಫಿಲಂ ಇನ್ಸ್ಟಿಟ್ಯೂಟ್ ಪ್ರಶಸ್ತಿಗೆ ನಾಮನಿರ್ದೇಶನ
ಸಂಗೀತ-ಪ್ರಧಾನ ಅಥವಾ ಹಾಸ್ಯ ಚಲನಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶಿನ
ಪೋಷಕ ಪಾತ್ರದಲ್ಲಿ ನಟಿಯಿಂದ ಅದ್ಭುತ ನಟನೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಗೆ ನಾಮನಿರ್ದೇಶನ
2002 Lord of the Rings: 2The Lord of the Rings: The Two Towers ಗಲಡ್ರಿಯಲ್ ಅತ್ಯುತ್ತಮ ಪಾತ್ರ ನಿರ್ವಹಣೆಗಾಗಿ ಆನ್ಲೈನ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ


ಅತ್ಯುತ್ತಮ ನಟನೆಗಾಗಿ ಫಿನಿಕ್ಸ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ
ಚಲನಚಿತ್ರದಲ್ಲಿನ ಅದ್ಭುತ ನಟನೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಗೆ ನಾಮನಿರ್ದೇಶನ

2002 ಹೆವೆನ್ ಫಿಲಿಪ್ಪ
2003 Lord of the Rings: 3The Lord of the Rings: The Return of the King ಗಲಡ್ರಿಯಲ್ ಅತ್ಯುತ್ತಮ ಪಾತ್ರ ನಿರ್ವಹಣೆಗಾಗಿ ಬ್ರಾಡ್ಕಾಸ್ಟ್ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿ
ಚಲನಚಿತ್ರದಲ್ಲಿ ನೀಡಿದ ಅದ್ಭುತ ನಟನೆಗೆ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ಫಿನಿಕ್ಸ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿಗೆ ನಾಮನಿರ್ದೇಶನ
2003 Missing, TheThe Missing ಮ್ಯಾಗ್ಡಲಿನ 'ಮ್ಯಾಗಿ' ಗಿಲ್ಕೆಸನ್ ಅತ್ಯುತ್ತಮ ನಟನೆಗಾಗಿ ಸ್ಯಾಟರ್ನ್‌ ಪ್ರಶಸ್ತಿಗೆ ನಾಮನಿರ್ದೇಶನ
2003 ಕಾಫಿ ಅಂಡ್ ಸಿಗರೇಟ್ಸ್ ಹರ್ಸೆಲ್ಫ್ & ಶೆಲ್ಲಿ ವರ್ಷದ ಅತ್ಯುತ್ತಮ ನಟಿ ಎಂದು ಸೆಂಟ್ರಲ್ ಓಹಿಯೋ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ (ಅಲ್ಲದೆ ದಿ ಲೈಫ್ ಅಕ್ವಾಟಿಕ್ ವಿಥ್ ಸ್ಟೀವ್ ಜಿಸ್ಸೌ ಹಾಗು ದಿ ಏವಿಯೇಟರ್ ಗೂ ಸಹ ಪ್ರಶಸ್ತಿ)
ಅತ್ಯುತ್ತಮ ಪೋಷಕ ನಟಿ ಎಂದು ಚ್ಲೋಟ್ರುಡಿಸ್ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ ಎಂದು ಇಂಡಿಪೆಂಡೆಂಟ್ ಸ್ಪಿರಿಟ್ ಪ್ರಶಸ್ತಿಗೆ ನಾಮನಿರ್ದೇಶನ.
2003 ವೆರೋನಿಕಾ ಗುಯೇರಿನ್ ವೆರೋನಿಕಾ ಗುಯೇರಿನ್ ಅತ್ಯುತ್ತಮ ನಟಿ ಎಂದು ಎಂಪೈರ್ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ನಟನೆಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ – ಚಲನಚಿತ್ರ ಕಥೆಗೆ ನಾಮನಿರ್ದೇಶನ
ಅತ್ಯುತ್ತಮ ನಟನೆಗಾಗಿ ವಾಶಿಂಗ್ಟನ್‌ D.C. ಏರಿಯ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿಗೆ ನಾಮನಿರ್ದೇಶನ
2004 Life Aquatic with Steve Zissou, TheThe Life Aquatic with Steve Zissou ಜೇನ್ ವಿನ್ಸ್ಲೆಟ್-ರಿಚರ್ಡ್ಸನ್ ವರ್ಷದ ಅತ್ಯುತ್ತಮ ನಟಿ ಎಂದು ಸೆಂಟ್ರಲ್ ಓಹಿಯೋ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ(ಅಲ್ಲದೆ ಕಾಫಿ ಅಂಡ್ ಸಿಗರೇಟ್ಸ್ ಹಾಗು ದಿ ಏವಿಯೇಟರ್ ಗೂ ಸಹ ಪ್ರಶಸ್ತಿ)
ಅತ್ಯುತ್ತಮ ಪೋಷಕ ನಟಿ ಎಂದು ಲಾಸ್ ವೇಗಾಸ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ(ಅಲ್ಲದೆ ದಿ ಏವಿಯೇಟರ್ ಗೂ ಸಹ ಪ್ರಶಸ್ತಿ)
ಅತ್ಯುತ್ತಮ ಪಾತ್ರ ನಿರ್ವಹಣೆಗಾಗಿ ಬ್ರಾಡ್ಕಾಸ್ಟ್ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿಗೆ ನಾಮನಿರ್ದೇಶನ
2004 Aviator, TheThe Aviator ಕ್ಯಾಥರೀನ್ ಹೆಪ್ಬರ್ನ್ ಅತ್ಯುತ್ತಮ ಪೋಷಕ ನಟಿ ಎಂದು ಅಕ್ಯಾಡೆಮಿ ಪ್ರಶಸ್ತಿ ‌
ಪೋಷಕ ಪಾತ್ರದ ಅತ್ಯುತ್ತಮ ನಿರ್ವಹಣೆಗಾಗಿ BAFTA ಪ್ರಶಸ್ತಿ
ವರ್ಷದ ಅತ್ಯುತ್ತಮ ನಟಿ ಎಂದು ಸೆಂಟ್ರಲ್ ಓಹಿಯೋ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ (ಅಲ್ಲದೆ ಕಾಫಿ ಅಂಡ್ ಸಿಗರೇಟ್ಸ್ ಹಾಗು ದಿ ಲೈಫ್ ಅಕ್ವಾಟಿಕ್ ವಿಥ್ ಸ್ಟೀವ್ ಜಿಸ್ಸೌ ಗೂ ಸಹ ಪ್ರಶಸ್ತಿ)
ಅತ್ಯುತ್ತಮ ಪೋಷಕ ನಟಿ ಎಂದು ಕಾನ್ಸಾಸ್ ಸಿಟಿ ಫಿಲಂ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ ಎಂದು ಲಾಸ್ ವೇಗಾಸ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ (ಅಲ್ಲದೆ ದಿ ಲೈಫ್ ಅಕ್ವಾಟಿಕ್ ವಿಥ್ ಸ್ಟೀವ್ ಜಿಸ್ಸೌ ಗೂ ಸಹ ಪ್ರಶಸ್ತಿ)
ಅತ್ಯುತ್ತಮ ಪೋಷಕ ನಟಿ ಎಂದು ಆನ್‌ಲೈನ್ ಫಿಲ್ಮ್ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ
ಪೋಷಕ ಪಾತ್ರದಲ್ಲಿ ನಟಿಯೊಬ್ಬಳ ಅತ್ಯುತ್ತಮ ನಟನೆಗಾಗಿ ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ ಎಂದು ವಾಷಿಂಗ್ಟನ್‌ D.C. ಏರಿಯಾ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ ‌
ಅತ್ಯುತ್ತಮ ಪೋಷಕ ನಟಿ ಎಂದು ಬ್ರಾಡ್‌ಕಾಸ್ಟ್ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿ‌ಗೆ ನಾಮನಿರ್ದೇಶನ
ಅತ್ಯುತ್ತಮ ನಟಿ ಎಂದು ಎಂಪೈರ್ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ - ಚಲನಚಿತ್ರ-ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮನಿರ್ದೇಶನ
ಚಲನಚಿತ್ರದಲ್ಲಿನ ಅದ್ಭುತ ನಟನೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ ಎಂದು ಸ್ಯಾಟಲೈಟ್ ಪ್ರಶಸ್ತಿ-ಚಲನಚಿತ್ರನಾಮನಿರ್ದೇಶನ
2005 ಲಿಟಲ್ ಫಿಶ್ ಟ್ರೇಸಿ ಹಾರ್ಟ್ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟನೆಗಾಗಿ ಆಸ್ಟ್ರೇಲಿಯನ್ ಫಿಲಂ ಇನ್ಸ್ಟಿಟ್ಯೂಟ್ ಪ್ರಶಸ್ತಿ
ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ನಟಿ ಎಂದು ಫಿಲಂ ಕ್ರಿಟಿಕ್ಸ್ ಸರ್ಕಲ್ ಆಫ್ ಆಸ್ಟ್ರೇಲಿಯ ಪ್ರಶಸ್ತಿ
2006 ಬಾಬೆಲ್‌ ಸುಸಾನ್ ಜೋನ್ಸ್ ಅತ್ಯುತ್ತಮ ಪಾತ್ರ ನಿರ್ವಹಣೆಗಾಗಿ ಪಾಮ್ ಸ್ಪ್ರಿಂಗ್ಸ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಪ್ರಶಸ್ತಿ
ಚಲನಚಿತ್ರದಲ್ಲಿನ ಅದ್ಭುತ ನಟನೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ನಾಮನಿರ್ದೇಶನ
2006 Good German, TheThe Good German ಲೇನಾ ಬ್ರಾಂಡ್ಟ್
2006 ನೋಟ್ಸ್ ಆನ್ ಏ ಸ್ಕ್ಯಾಂಡಲ್ ಶೇಬ ಹಾರ್ಟ್ ಅತ್ಯುತ್ತಮ ಪೋಷಕ ನಟಿಗಾಗಿರುವ ಡಲ್ಲಾಸ್-ಫೋರ್ಟ್ ವರ್ತ್ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿಗಾಗಿರುವ ಫ್ಲೋರಿಡಾ ಫಿಲಂ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿಗೆ ಇರುವ ಫಿನಿಕ್ಸ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿಗೆ ಇರುವ ಟೊರೊಂಟೊ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿಗಾಗಿರುವ ವಾನ್ಕೊವರ್ ಫಿಲಂ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿಗಾಗಿರುವ ಅಕ್ಯಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿಗಾಗಿರುವ ಬ್ರಿಟಿಶ್ ಇಂಡಿಪೆಂಡೆಂಟ್ ಫಿಲಂ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿಗಾಗಿ ಬ್ರಾಡ್ಕಾಸ್ಟ್ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿಗಾಗಿ ಇರುವ ಚಿಕಾಗೋ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ ಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ-ಚಲನಚಿತ್ರಕ್ಕಿರುವ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿಗಾಗಿರುವ ಆನ್ಲೈನ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ- ಚಲನಚಿತ್ರಕ್ಕಿರುವ ಸ್ಯಾಟಲೈಟ್ ಪ್ರಶಸ್ತಿ ಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿಗೆ ಇರುವ ಸ್ಯಾಟ್ರನ್ ಪ್ರಶಸ್ತಿಗೆ ನಾಮನಿರ್ದೇಶನ
ಪೋಷಕ ಪಾತ್ರದ ಅದ್ಭುತ ನಿರ್ವಹಣೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಗೆ ನಾಮನಿರ್ದೇಶನ
2007 ಹಾಟ್ ಫಜ್ಜ್ ಜಾನಿನ್ ಅಷ್ಟೇನೂ ಮನ್ನಣೆ ಗಳಿಸದ ಕಿರು ದೃಶ್ಯ
2007 Elizabeth: The Golden Age ರಾಣಿ ಎಲಿಜಬೆತ್ I ಪ್ರಮುಖ ಪಾತ್ರದ ಅತ್ಯುತ್ತಮ ನಟನೆಗಾಗಿ ಆಸ್ಟ್ರೇಲಿಯನ್ ಫಿಲಂ ಇನ್ಸ್ಟಿಟ್ಯೂಟ್ ಪ್ರಶಸ್ತಿ
ಅತ್ಯುತ್ತಮ ನಟಿಗಾಗಿರುವ ಅಕ್ಯಾಡೆಮಿ ಪ್ರಶಸ್ತಿಗಾಗಿ ನಾಮನಿರ್ದೇಶನ
ಪ್ರಮುಖ ಪಾತ್ರ ನಿರ್ವಹಣೆಯಲ್ಲಿ ಅತ್ಯುತ್ತಮ ನಟಿ ಎಂಬ BAFTA ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ನಟಿ ಎಂದು ಬ್ರಾಡ್ಕಾಸ್ಟ್ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ನಟಿ ಎಂದು ಎಂಪೈರ್ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ನಟಿ ಎಂದು ಗೋಲ್ಡನ್ ಗ್ಲೋಬ್ ಪ್ರಶಸ್ತಿ-ಚಲನಚಿತ್ರ ಕಥೆ ಗೆ ನಾಮನಿರ್ದೇಶನ
ಪ್ರಮುಖ ಪಾತ್ರದಲ್ಲಿನ ಅದ್ಭುತ ನಟನೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಗೆ ನಾಮನಿರ್ದೇಶನ
2007 ಐ'ಮ್ ನಾಟ್ ದೇರ್ ಜೂಡ್ ಕ್ವಿನ್ನ್ (ಬಾಬ್ ಡೈಲಾನ್) ಅತ್ಯುತ್ತಮ ಪೋಷಕ ನಟಿ ಎಂದು ಶಿಕಾಗೊ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ ಎಂದು ಸೆಂಟ್ರಲ್ ಓಹಿಯೋ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ ಎಂದು ಚ್ಲೋತ್ರುಡಿಸ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ- ಚಲನಚಿತ್ರಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ ಎಂದು ಇಂಡಿಪೆಂಡೆಂಟ್ ಸ್ಪಿರಿಟ್ ಪ್ರಶಸ್ತಿ
ಇಂಡಿಪೆಂಡೆಂಟ್ ಸ್ಪಿರಿಟ್ ಪ್ರಶಸ್ತಿ ರಾಬರ್ಟ್ ಆಲ್ಟ್ಮನ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ ಎಂದು ಕ್ಯಾನ್ಸಾಸ್ ಸಿಟಿ ಫಿಲ್ಮ್ ಕ್ರಿಟಿಕ್ಸ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿಗಾಗಿರುವ ನ್ಯಾಷನಲ್ ಸೊಸೈಟಿ ಆಫ್ ಫಿಲಂ ಕ್ರಿಟಿಕ್ಸ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ ಎಂದು ಟೊರೊಂಟೊ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ


ಅತ್ಯುತ್ತಮ ನಟನೆಗಾಗಿ ವೋಲ್ಪಿ ಕಪ್ ಪ್ರಶಸ್ತಿ
ಅತ್ಯುತ್ತಮ ಪೋಷಕ ನಟಿ ಎಂದು ಅಕ್ಯಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ ಎಂದು BAFTA ಪ್ರಶಸ್ತಿ ಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ ಎಂದು ಬ್ರಾಡ್ಕಾಸ್ಟ್ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ ಗೆ ನಾಮನಿರ್ದೇಶನ
ಐರಿಶ್ ಫಿಲಂ ಅಂಡ್ ಟೆಲಿವಿಶನ್ ಪ್ರಶಸ್ತಿಗಳು-ಅತ್ಯುತ್ತಮ ಅಂತಾರಾಷ್ಟ್ರೀಯ ನಟಿ ಎಂಬ ಪ್ರೇಕ್ಷಕರ ಪ್ರಶಸ್ತಿಗೆ ನಾಮನಿರ್ದೇಶನ
ಅತ್ಯುತ್ತಮ ಪೋಷಕ ನಟಿ ಎಂದು ಆನ್ಲೈನ್ ಫಿಲಂ ಕ್ರಿಟಿಕ್ಸ್ ಸೊಸೈಟಿ ಪ್ರಶಸ್ತಿ ಗೆ ನಾಮನಿರ್ದೇಶನ
ಸಂಗೀತ ಅಥವಾ ಹಾಸ್ಯ ಚಲನಚಿತ್ರದ ಅತ್ಯುತ್ತಮ ನಟನೆಗಾಗಿ ಸ್ಯಾಟಲೈಟ್ ಪ್ರಶಸ್ತಿ ಗೆ ನಾಮನಿರ್ದೇಶನ
ಪೋಷಕ ಪಾತ್ರದ ಅದ್ಭುತ ನಿರ್ವಹಣೆಗಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಗೆ ನಾಮನಿರ್ದೇಶನ

2008 ಇಂಡಿಯಾನಾ ಜೋನ್ಸ್‌ ಅಂಡ್‌ ದಿ ಕಿಂಗ್‌ಡಂ ಆಫ್ ದಿ ಕ್ರಿಸ್ಟಲ್ ಸ್ಕಲ್ ಕರ್ನಲ್-ಡಾಕ್ಟರ್

ಐರಿನಾ ಸ್ಪಾಲ್ಕೋ

2008 Curious Case of Benjamin Button, TheThe Curious Case of Benjamin Button ಡೈಸಿ ಫುಲ್ಲರ್ ಬ್ರಾಡ್‌ಕಾಸ್ಟ್‌ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌ ಅತ್ಯುತ್ತಮ ನಟಿಗೆ ನಾಮನಿರ್ದೇಶನ
ಅತ್ಯುತ್ತಮ ಪಾತ್ರ ನಿರ್ವಹಣೆಗಾಗಿ ಬ್ರಾಡ್ಕಾಸ್ಟ್ ಫಿಲಂ ಕ್ರಿಟಿಕ್ಸ್ ಅಸೋಸಿಯೇಶನ್ ಪ್ರಶಸ್ತಿ ಗೆ ನಾಮನಿರ್ದೇಶನ
ಅತ್ಯುತ್ತಮ ನಟಿ ಎಂದು ಸ್ಯಾಟ್ರನ್ ಪ್ರಶಸ್ತಿ ಗೆ ನಾಮನಿರ್ದೇಶನ
ಚಲನಚಿತ್ರದಲ್ಲಿ ನಟಿಯೊಬ್ಬರ ಅದ್ಭುತ ಪಾತ್ರಕ್ಕಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ ಗೆ ನಾಮನಿರ್ದೇಶನ
2009 ಪೊನ್ಯೋ ಗ್ರಾನ್ಮಮಾರೆ ಧ್ವನಿ– ಆಂಗ್ಲ ರೂಪಾಂತರ
2010 ರಾಬಿನ್‌ ಹುಡ್‌ ಲೇಡಿ ಮರಿಯನ್
2011 ಹನ್ನ (ಚಲನಚಿತ್ರ) ಮರಿಸ್ಸ ವಿಯೇಗ್ಲರ್ ಪೋಸ್ಟ್-ಪ್ರೊಡಕ್ಷನ್

ರಂಗಭೂಮಿ ಗೌರವಗಳು[ಬದಲಾಯಿಸಿ]

ರಂಗಭೂಮಿ
ವರ್ಷ ನಿರ್ಮಾಣ ಸ್ಥಳ ಪಾತ್ರ ಟಿಪ್ಪಣಿಗಳು
1992ರ ಪೂರ್ವದಲ್ಲಿ Odyssey of Runyon Jones, TheThe Odyssey of Runyon Jones ಮೆಥಾಡಿಸ್ಟ್ ಲೇಡಿಸ್'ಕಾಲೇಜ್, ಮೇಲ್ಬಾರ್ನ್ ತಿಳಿದುಬಂದಿಲ್ಲ ನಾರ್ಮನ್ ಕಾರ್ವಿನ್ರ ನಾಟಕದ ರೂಪಾಂತರ
1992ರ ಪೂರ್ವದಲ್ಲಿ ದೇ ಶೂಟ್ ಹಾರ್ಸಸ್ ಡೋಂಟ್ ದೇ? ಮೆಥಾಡಿಸ್ಟ್ ಲೇಡಿಸ್'ಕಾಲೇಜ್, ಮೇಲ್ಬೋರ್ನ್ ನಿರ್ದೇಶಕಿ ಹೊರೇಸ್ ಮ್ಯಾಕ್ಕಾಯ್ ರ ಕಾದಂಬರಿಯ ರೂಪಾಂತರದ ನಿರ್ಮಾಣದಲ್ಲಿ ಸಹ ವಿದ್ಯಾರ್ಥಿಗಳಿಗೆ ನಿರ್ದೇಶನ
1992 ಎಲೆಕ್ಟ್ರಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡ್ರಾಮ್ಯಾಟಿಕ್ ಆರ್ಟ್, ಮೇಲ್ಬೋರ್ನ್ ಎಲೆಕ್ಟ್ರಾ ಪ್ರಮುಖ ಪಾತ್ರ
1992/1993 ಟಾಪ್ ಗರ್ಲ್ಸ್ ಸಿಡ್ನಿ ಥಿಯೇಟರ್ ಕಂಪನಿ ತಿಳಿದುಬಂದಿಲ್ಲ ಕಾರ್ಯ್ಲ್ ಚರ್ಚಿಲ್ ವಿರಚಿತ ಈ ನಾಟಕವು ಅವರು ಅಲ್ಲಿ ನಟಿಸಿದ ಮೊದಲ ಪಾತ್ರವಾಗಿತ್ತು.
1993 ಒಲೆಯನ್ನಾ ಸಿಡ್ನಿ ಥಿಯೇಟರ್ ಕಂಪನಿ ಕ್ಯಾರಲ್

ಡೇವಿಡ್ ಮಮೆಟ್ ರ ನಾಟಕದಲ್ಲಿ ಜಿಯೋಫ್ಫರಿ ರಶ್ ಗೆ ಎದುರಾಗಿ ಅಭಿನಯ. ನಾಟಕವು, ವಿಶ್ವವಿದ್ಯಾಲಯದ ಒಬ್ಬ ಪ್ರಾಧ್ಯಾಪಕ ವಿದ್ಯಾರ್ಥಿನಿಯೊಬ್ಬಳಿಂದ ಲೈಂಗಿಕ ಕಿರುಕುಳದ ಆರೋಪಕ್ಕೆ ಗುರಿಯಾಗುವ ಕಥಾವಸ್ತುವನ್ನು ಹೊಂದಿದೆ. ರೋಸ್ಮೊಂಟ್ ಅತ್ಯುತ್ತಮ ನಟಿ ಪ್ರಶಸ್ತಿ

1994 ಹ್ಯಾಮ್ಲೆಟ್‌ ಬೆಲ್ವೊಯಿರ್ ಸ್ಟ್ರೀಟ್ ಥಿಯೇಟರ್ ಕಂಪನಿ ಒಫೀಲಿಯಾ ಜಿಯೋಫ್ಫರಿ ರಶ್‌ಗೆ ಎದುರಾಗಿ ಅಭಿನಯ. ನೀಲ್ ಆರ್ಮ್ಫೀಲ್ಡ್ ರಿಂದ ನಿರ್ದೇಶಿತಗೊಂಡ ನಾಟಕವನ್ನು ಕಂಪನಿ B ನಿರ್ಮಿಸಿದೆ.
1995 ಸ್ವೀಟ್ ಫೋಬೆ ಸಿಡ್ನಿ ಥಿಯೇಟರ್ ಕಂಪನಿ ಹಾಗು ವೇರ್ಹೌಸ್ ಥಿಯೇಟರ್, ಕ್ರೊಯ್ಡಾನ್ ಹೆಲೆನ್ ಬೆಲ್ವೊಯಿರ್ ಸ್ಟ್ರೀಟ್ ಥಿಯೇಟರ್/ಪ್ಲೇಬಾಕ್ಸ್ ಥಿಯೇಟರ್‌ನ ಸಹ ನಿರ್ಮಾಣದಲ್ಲಿ ಮುಖ್ಯ ಪಾತ್ರ. ಕಥೆ ಹಾಗು ನಿರ್ದೇಶನ ಮೈಕಲ್ ಗೌರಿಂದ. ದಿ ಸಿಡ್ನಿಯ ನಿರ್ಮಾಣ ಪ್ರಪ್ರಥಮವಾಗಿದ್ದು, ನಂತರ ವೆಸ್ಟ್ ಎಂಡ್ ಗೆ ವರ್ಗಾವಣೆಯಾಯಿತು.
1995 Tempest, TheThe Tempest ಬೆಲ್ವೊಯಿರ್ ಸ್ಟ್ರೀಟ್ ಥಿಯೇಟರ್ ಕಂಪನಿ ಮಿರಾಂಡ ನೀಲ್ ಆರ್ಮ್ಫೀಲ್ಡ್‌ರ ನಿರ್ದೇಶನವಿದ್ದ ನಾಟಕವನ್ನು ಕಂಪನಿ B ನಿರ್ಮಾಣ ಮಾಡಿದೆ. ಡಕ್ಸ್ಟನ್ ಚೆವಾಲಿಯರ್ ಜೊತೆಯಲ್ಲಿ ಅಭಿನಯ.
1995 Blind Giant is Dancing, TheThe Blind Giant is Dancing ಬೆಲ್ವೊಯಿರ್ ಸ್ಟ್ರೀಟ್ ಥಿಯೇಟರ್ ಕಂಪನಿ ರೋಸ್ ಡ್ರೇಪರ್ ಹ್ಯೂಗೋ ವೀವಿಂಗ್ ಜೊತೆ ನಟನೆ. ಸ್ಟೀಫನ್ ಸೇವೆಲ್ ರ ನಾಟಕ. ಇದು 15 ಆಗಸ್ಟ್ 1995ರಲ್ಲಿ ಆರಂಭಗೊಂಡು 10 ಸೆಪ್ಟೆಂಬರ್ 1995ರಲ್ಲಿ ಕೊನೆಗೊಂಡಿತು. ನೀಲ್ ಆರ್ಮ್ಫೀಲ್ಡ್‌ರ ನಿರ್ದೇಶನ, ಪಾಲ್ ಚಾರ್ಲಿಯರ್ ನ ಸಂಗೀತ ಸಂಯೋಜನೆಯಿದ್ದ ನಾಟಕವನ್ನು ಕಂಪನಿ B ನಿರ್ಮಿಸಿದೆ.
1997 Seagull, TheThe Seagull a.k.a. ದಿ ಸೀಗಲ್ ಇನ್ ಹ್ಯಾರಿ ಹಿಲ್ಸ್ ಬೆಲ್ವೊಯಿರ್ ಸ್ಟ್ರೀಟ್ ಥಿಯೇಟರ್ ಕಂಪನಿ ನೀನಾ ಆಂಟನ್ ಚೆಕಾವ್ ರ ನಾಟಕದಲ್ಲಿ ಮುಖ್ಯ ಭೂಮಿಕೆ. ಇದು 4 ಮಾರ್ಚ್ 1997ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡು, 13 ಏಪ್ರಿಲ್ ರಂದು ಕೊನೆಗೊಂಡಿತು. ನೀಲ್ ಆರ್ಮ್ಫೀಲ್ಡ್ ರ ನಿರ್ದೇಶನ, ಪಾಲ್ ಚಾರ್ಲಿಯೇರ್ ರ ಸಂಗೀತ ಸಂಯೋಜನೆಯಿದ್ದ ನಾಟಕವನ್ನು ಕಂಪನಿ B ನಿರ್ಮಾಣ ಮಾಡಿದೆ.
1999 ಪ್ಲೆಂಟಿ ದಿ ಅಲ್ಮೇಯಿಡಾ ಸೀಸನ್ ಅಟ್ ಅಲ್ಬೇರಿ ಥಿಯೇಟರ್, ಲಂಡನ್ ಸುಸಾನ್ ಟ್ರಹೆರ್ನೆ ಡೇವಿಡ್ ಹೇರ್ ರ ನಾಟಕದಲ್ಲಿ ಮುಖ್ಯ ಭೂಮಿಕೆ, ಜೊನಾಥನ್ ಕೆಂಟ್ ರಿಂದ ನಿರ್ದೇಶನ. ಇದು 27 ಏಪ್ರಿಲ್ 1999ರಲ್ಲಿ ಆರಂಭಗೊಂಡು, 27 ಜುಲೈನಲ್ಲಿ ಕೊನೆಗೊಂಡಿತು.
1999 Vagina Monologues, TheThe Vagina Monologues ಓಲ್ಡ್ ವಿಕ್ ಥಿಯೇಟರ್, ಲಂಡನ್ ತಿಳಿದುಬಂದಿಲ್ಲ ಮೇಳ; ಫೆಬ್ರವರಿ 1999ರ ನಾಟಕದಲ್ಲಿ ಇತರ ನಟರುಗಳಾದ ಮೆಲಾನಿ ಗ್ರಿಫ್ಫಿತ್ ರೊಂದಿಗೆ ಭಾಗಿ.
2004 ಹೆಡ್ಡ ಗ್ಯಾಬ್ಲರ್ ಸಿಡ್ನಿ ಥಿಯೇಟರ್ ಕಂಪನಿ ಹೆಡ್ಡ ಗ್ಯಾಬ್ಲರ್ 22 ಜುಲೈ 2004 ರಲ್ಲಿ ಆರಂಭಗೊಂಡು 26 ಸೆಪ್ಟೆಂಬರ್ 2004ರಲ್ಲಿ ಕೊನೆಗೊಂಡಿತು. ನ್ಯೂಯಾರ್ಕ್ ನ ಬ್ರೂಕ್ಲಿನ್ ಅಕ್ಯಾಡೆಮಿ ಆಫ್ ಮ್ಯೂಸಿಕ್'ಸ್ ಹಾರ್ವೆ ಥಿಯೇಟರ್ ನಲ್ಲಿ ಮಾರ್ಚ್ 2006ರಂದು ಹೆಡ್ಡಾ ಪಾತ್ರದಲ್ಲಿ ಇವರು ತಮ್ಮ ಪ್ರದರ್ಶನವನ್ನು ಪುನರಾವರ್ತನೆ ಮಾಡಿದರು.
2009 War of the Roses, The. CycleThe War of the Roses Cycle ಸಿಡ್ನಿ ಥಿಯೇಟರ್ ಕಂಪನಿ ರಿಚರ್ಡ್ II, ಲೇಡಿ ಆನ್ನಿ ಜನವರಿ 5 2009 ರಿಂದ ಪೂರ್ವಭಾವಿಯಾಗಿ ಪ್ರದರ್ಶನಗೊಂಡಿದೆ; ನಾಟಕವು ಎರಡು ಭಾಗಗಳಾಗಿ ಸಿಡ್ನಿ ಫೆಸ್ಟಿವಲ್ 2009, 10-31 ಜನವರಿಯಿಂದ 14 ಫೆಬ್ರವರಿ 2009ರವರೆಗೂ ಪ್ರದರ್ಶನಗೊಂಡಿದೆ.
2009 Streetcar Named Desire, AA Streetcar Named Desire ಸಿಡ್ನಿ ಥಿಯೇಟರ್ ಕಂಪನಿ ಬ್ಲಾಂಚೆ ಡುಬೋಯಿಸ್ ನಾಟಕವನ್ನು ನಟಿ ಲಿವ್ ಉಲ್ಲ್ಮನ್ ನಿರ್ದೇಶಿಸಿದರು ಜೊತೆಗೆ ಜೋಯೆಲ್ ಎಡ್ಗರ್ಟನ್ ರ ಸಹ ಅಭಿನಯವೂ ಇತ್ತು.
2010 ಅಂಕಲ್ ವಾನ್ಯ ಸಿಡ್ನಿ ಥಿಯೇಟರ್ ಕಂಪನಿ

ಉಲ್ಲೇಖಗಳು[ಬದಲಾಯಿಸಿ]

  1. "Audrey Hepburn 'most beautiful woman of all time' – Entertainment – www.smh.com.au". Smh.com.au. 1 ಜೂನ್ 2004. Retrieved 21 ಅಕ್ಟೋಬರ್ 2008.
  2. "Cate Blanchett : People.com". People.com. Retrieved 21 ಅಕ್ಟೋಬರ್ 2008.
  3. CampbellJohnston, Rachel (1 ಜೂನ್ 2005). "The most beautiful women? – Times Online". London: Timesonline.co.uk. Retrieved 21 ಅಕ್ಟೋಬರ್ 2008.
  4. "Cate Blanchett's biography — Elle December 2003". Elle. Archived from the original on 28 ಅಕ್ಟೋಬರ್ 2007. Retrieved 17 ಅಕ್ಟೋಬರ್ 2007.
  5. "Cate Blanchett Biography (1969-)". FilmReference.com. Retrieved 15 ಆಗಸ್ಟ್ 2010.
  6. ೬.೦ ೬.೧ "Cate Blanchett's biography". The biography channel. Archived from the original on 2 ಜೂನ್ 2009. Retrieved 17 ಅಕ್ಟೋಬರ್ 2007.
  7. Crikey.com.au: Famous alumni Archived 26 September 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. on Latham's hit list] (ಸಂಕಲನ:15-01-2010)
  8. "Cate Blanchett". biogs.com. Retrieved 23 ಫೆಬ್ರವರಿ 2008.
  9. "Top Trilogies worldwide". Box Office Mojo. 21 ಸೆಪ್ಟೆಂಬರ್ 2004. Archived from the original on 12 ಜೂನ್ 2004. Retrieved 17 ಅಕ್ಟೋಬರ್ 2007.
  10. Goodwin, Christopher (14 ಅಕ್ಟೋಬರ್ 2007). "Cate Blanchett as Elizabeth I is no surprise". The Times. London. Retrieved 14 ಅಕ್ಟೋಬರ್ 2007.
  11. Hellard, Peta (23 ಜನವರಿ 2008). "Cate's double Oscar nod". The Daily Telegraph. Archived from the original on 11 ಸೆಪ್ಟೆಂಬರ್ 2012. Retrieved 23 ಜನವರಿ 2008.
  12. "Blanchett gets star on Walk of Fame". Melbourne: The Age. 6 ಡಿಸೆಂಬರ್ 2008. Archived from the original on 11 ಡಿಸೆಂಬರ್ 2008. Retrieved 21 ಡಿಸೆಂಬರ್ 2008.
  13. Child, Ben (27 ನವೆಂಬರ್ 2008). "English-language cast announced for Miyazaki's Ponyo on the Cliff". London: guardian.co.uk. Retrieved 30 ನವೆಂಬರ್ 2008.
  14. Michael Specter (2006). "Head First". Vogue. Retrieved 17 ಅಕ್ಟೋಬರ್ 2007. {{cite web}}: Unknown parameter |month= ignored (help)
  15. Hannah Edwards (12 ಡಿಸೆಂಬರ್ 2004). "Cate buys mansion for $10m". The Sydney Morning Herald. Retrieved 17 ಅಕ್ಟೋಬರ್ 2007.
  16. Hannah Edwards (8 ಜುಲೈ 2007). "Welcome to Cate Blanchett's dream eco-home". The Sydney Morning Herald. Retrieved 17 ಅಕ್ಟೋಬರ್ 2007.
  17. "Archibald Prize 06". Art Gallery NSW. Retrieved 26 ಫೆಬ್ರವರಿ 2008.
  18. AAP (23 ಅಕ್ಟೋಬರ್ 2008). "Cities under spotlight at conference". The Age. Retrieved 23 ಅಕ್ಟೋಬರ್ 2008.
  19. ೧೯.೦ ೧೯.೧ "Academy winners are stamped as 2009 Legends". Australia Post. Archived from the original on 4 ಫೆಬ್ರವರಿ 2009. Retrieved 5 ಜನವರಿ 2009.

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಕೇಟ್‌ ಬ್ಲ್ಯಾಂಚೆಟ್‌ (Cate Blanchett)]]