ಆಲ್ಸಿಬೈಯಡೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲ್ಸಿಬೈಯಡೀಸ್
Bust of Alcibiades, original from the 4th century BC. The inscription translates "Alcibiades, son of Cleinias, Athenian".
ಜನನc. 450 BC
Classical Athens
ಮರಣ404 BC
Phrygia
AllegianceAthens
(415–412 BC Sparta)
(412–411 BC Persia)
ಶ್ರೇಣಿ(ದರ್ಜೆ)General (Strategos)
ಭಾಗವಹಿಸಿದ ಯುದ್ಧ(ಗಳು)Battle of Abydos (410 BC)
Battle of Cyzicus (410 BC)
Siege of Byzantium (408 BC)

ಆಲ್ಸಿಬೈಯಡೀಸ್ ಪ್ರ.ಶ.ಪು. 451-404. ಅಥೆನ್ಸಿನ ಅತ್ಯಂತ ಸಮರ್ಥ ರಾಜಕಾರಣಿಗಳಲ್ಲೊಬ್ಬ ಹಾಗೂ ದಂಡನಾಯಕ. ಅಥೆನ್ಸ್ ನಗರದ ಶ್ರೀಮಂತ ಮನೆತನದಲ್ಲಿ ಜನಿಸಿದ. ಪೆರಿಕ್ಲೀಸರ ಹತ್ತಿರ ಸಂಬಂಧಿ. ಸಾಕ್ರಟೀಸನ ಮೆಚ್ಚುಗೆಗೆ ಪಾತ್ರನಾದವ. ಬಾಲ್ಯದಿಂದಲೂ ಸ್ವಚ್ಛಂದ ಜೀವನ ನಡೆಸಿದ; ಆಗಿನ ತರುಣರಿಗೆ ಅಚ್ಚುಮೆಚ್ಚಿನ ಗೆಳೆಯನಾದ; ಇವನ ಹುಚ್ಚು ಸಾಹಸ, ಮನಸ್ವೀ ನಡತೆಗಳನ್ನು ಅಥೆನ್ಸಿನ ಜನಸಾಮಾನ್ಯರೂ ಮೆಚ್ಚಿದರು. ಇದರಿಂದ ತೀರ ಸ್ವಾರ್ಥಿಯಾಗಿ ಬೆಳೆದ ಇವನಿಗೆ ರಾಜ್ಯದ ಹಿತಕ್ಕಿಂತ ತನ್ನ ಹಿತವೇ ಹೆಚ್ಚಾಯಿತು. ಅಥೆನ್ಸಿನ ಸಂಪ್ರದಾಯ ಪಕ್ಷದ ಮುಖಂಡನಾದ ನಿಕಿಯಾಸ್ ಪ್ರ.ಶ.ಪು. 421ರಲ್ಲಿ ಸ್ಪಾರ್ಟದೊಂದಿಗೆ ಮೂವತ್ತು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ. ಆಲ್ಸಿಬೈಯಡೀಸ್ ಅಥೆನ್ಸಿನ ತೀವ್ರಗಾಮಿ ಪಕ್ಷಕ್ಕೆ ಸೇರಿ, ಸ್ಪಾರ್ಟದ ವೈರಿ ಆರ್ಗಾಸ್ನೊಂದಿಗೆ ಅಥೆನ್ಸ್ ರಾಜಕೀಯ ಮೈತ್ರಿ ಹೊಂದುವಂತೆ ಮಾಡಿದ. ಆರ್ಗಾಸ್ ಸ್ಪಾರ್ಟದ ಮೇಲೆ ಯುದ್ಧ ಹೂಡಿದಾಗ ಅಥೆನ್ಸ್ ಅದರ ಸಹಾಯಕ್ಕೆ ಹೋಗಲಿಲ್ಲ; ಆರ್ಗಾಸ್ ಸೋತು ಹಿಮ್ಮೆಟ್ಟಬೇಕಾಯಿತು. ಕೊಂಚ ಕಾಲಾನಂತರ ರಾಜಕೀಯವೈರಿಗಳು ಈತನಮೇಲೆ ಅನಾಚಾರದ ಆಪಾದನೆ ಹೊರಿಸಿದ್ದರಿಂದ ಸ್ಪಾರ್ಟಕ್ಕೆ ಓಡಿಹೋದ. ಅಲ್ಲಿ ಅಥೆನ್ಸಿನ ಮೇಲೆ ಯುದ್ಧ ಹೂಡುವಂತೆ ಸ್ಪಾರ್ಟನರನ್ನು ಪ್ರೇರೇಪಿಸಲೆತ್ನಿಸಿದ. ಪರಿಣಾಮವಾಗಿ ಪ್ರ.ಶ.ಪು. 410ರಲ್ಲಿ ಸ್ವದೇಶಕ್ಕೆ ಹಿಂತಿರುಗುವಂತಾಯಿತು. ಮೂರುವರ್ಷ ಕಾಲ (410-407) ಸ್ಪಾರ್ಟದ ಮೇಲೆ ನಡೆದ ಯುದ್ಧದಲ್ಲಿ ಭೂ ಮತ್ತು ನೌಕಾ ಪಡೆಗಳ ದಂಡನಾಯಕನಾಗಿ ಕದನಗಳಲ್ಲಿ ವಿಜಯಗಳಿಸಿ ಅಥೆನ್ಸಿಗೆ ಕೀರ್ತಿ ತಂದ. ಒಂದು ಕಾಳಗದಲ್ಲಿ ಕೈಕೆಳಗಿನ ಸೇನಾಧಿಕಾರಿಯೊಬ್ಬ ಮಾಡಿದ ತಪ್ಪಿಗಾಗಿ ದೇಶಭ್ರಷ್ಟನಾಗಬೇಕಾಯಿತು. ಒಬ್ಬ ಪಾರಸಿಕನ ಕೈಯಿಂದ ಹತನಾದ. ಈತ ಸಾಕ್ರಟೀಸನ ಪ್ರಿಯಶಿಷ್ಯನಾದರೂ ಅವನಂತೆ ವಿವೇಕಿಯೂ ತಾತ್ತ್ವಿಕನೂ ಅಲ್ಲ. ತನ್ನ ಸ್ವಾರ್ಥದಿಂದ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನೀತ ಕಲಕಿದ. ಯುವಕರ ದುರ್ನಡತೆಗೆ ಕಾರಣನಾದನೆಂದು ಸಾಕ್ರಟೀಸನ ಮೇಲೆ ಹೊರಿಸಿದ ಆಪಾದನೆಗೆ ಈ ಶಿಷ್ಯ ಪುಷ್ಟಿಕೊಡುವಂತಿದ್ದನೆಂದು ಹೇಳಬಹುದು. ಈತನ ಸಾರ್ವಜನಿಕ ಜೀವನವನ್ನು ಥೂಸಿಡೈಡಿಸನೂ ಖಾಸಗಿ ಜೀವನವನ್ನು ಪ್ಲುಟಾರ್ಕನೂ ಬರೆದಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Biographical
  • "Alcibiades was an Athenian general in the Peloponnesian War". Bingley.
  • "Alcibiades". Endres, Nikolai. Archived from the original on 5 September 2006. Retrieved 22 September 2006. {{cite web}}: Unknown parameter |deadurl= ignored (help)
  • "Alcibiades: Aristocratic Ideal or Antisocial Personality Disorder". Evans, Kathleen. Archived from the original on 28 August 2006. Retrieved 5 August 2006. {{cite web}}: Unknown parameter |deadurl= ignored (help)
  • "Alcibiades". Meiggs, Russell. Archived from the original on 13 ಅಕ್ಟೋಬರ್ 2007. Retrieved 5 August 2006.
  • "Alcibiades". Prins, Marco-Lendering, Jona. Archived from the original on 31 August 2006. Retrieved 5 August 2006. {{cite web}}: Unknown parameter |deadurl= ignored (help)
  • "Alcibiades". The Columbia Encyclopedia, Sixth Edition. 2001–05. Retrieved 5 August 2006.
Texts and analyses
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: