ಸದಸ್ಯ:Maheshmmhshm

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಸದಸ್ಯರ ಊರು ಬೆಂಗಳೂರು.


ಬೇಬಲ್ ಬಳಕೆದಾರರ ಮಾಹಿತಿ
kn-N ಈ ಬಳಕೆದಾರರಿಗೆ ಕನ್ನಡ ಭಾಷೆ ಬಗ್ಗೆ ಮೂಲಭಾಷಿಕರ ಜ್ಞಾನವಿದೆ
en-3 This user has advanced knowledge of English.
hi-2 इस सदस्य को हिन्दी का मध्यम स्तर का ज्ञान है।
ಭಾಷೆಯ ಬಳಕೆದಾರರು


ಮಹೇಶ್ ಎಂ[ಬದಲಾಯಿಸಿ]

ಮಹೇಶ್ ಎಂ

ಪರಿಚಯ[ಬದಲಾಯಿಸಿ]

ಹುಟ್ಟಿದ್ದು ಬೆಂಗಳೂರಿನ ೫೦ ಕಿಲೋ ಮೀಟರ್ ದೂರದ ಮಾಗಡಿಯಲ್ಲಿ. ಶಾಲೆ ಪೂರ್ತಿ ಓದಿದ್ದು ಬರೆದಿದ್ದು ಕನ್ನಡ ಮಾಧ್ಯಮದಲ್ಲಿಯೇ, ಆದರೆ ಉದ್ಯೋಗದ ಕಾರಣ ಹಾಗು ಸದ್ಯ ಜಗತ್ತು ಸಾಗುತ್ತಿರುವ ಬಗೆ ನೋಡಿ ಇಂಗ್ಲಿಷ್ ನಲ್ಲಿ ಕಾಲೇಜು ಶಿಕ್ಷಣವನ್ನು ಪಡೆಯಲೇಬೇಕಾಯಿತು. ಮುಂದೆ ಪದವಿಯಲ್ಲಿ ತಾಂತ್ರಿಕ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನ ಶಿಬಿರಗಳು ಹಾಗು ಇಂಗ್ಲಿಷ್ ಭಾಷಾ ಸಂವಹನ ತರಬೇತಿ ಇಂಗ್ಲಿಷ್ ಮೇಲೆ ತಕ್ಕ ಮಟ್ಟಿನ ಹಿಡಿತ ತಂದು ಕೊಟ್ಟಿತು. ಇದಾಗಿ ಉದ್ಯೋಗ ನಿಮಿತ್ತ ಮಹಾರಾಷ್ಟ್ರದ ಪುಣೆಯಲ್ಲಿ ಕೆಲ ದಿನ ನೆಲೆಸಲಾಗಿ ಹಿಂದಿ ಭಾಷೆಯ ಮೇಲೂ ಕೊಂಚ ಮಟ್ಟಿಗೆ ಪ್ರೀತಿ ಹಾಗು ಅಷ್ಟೇ ಪ್ರಮಾಣದ ಹಿಡಿತವಿದೆ.


ವಿಕಿಪೀಡಿಯಾದ ಒಡನಾಟ[ಬದಲಾಯಿಸಿ]

ಕೆಲವು ವರ್ಷಗಳ ಹಿಂದೆ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧ ಪಟ್ಟ ಲೇಖನಗಳನ್ನು ಹುಡುಕುತ್ತಿದ್ದ ನನಗೆ ಅದರ ಬಗ್ಗೆ ಕನ್ನಡದಲ್ಲಿ ಇಂಟರ್ನೆಟ್ ನಲ್ಲಿ ಸಿಕ್ಕಿದ್ದು ಬಹಳ ಕಡಿಮೆ. ಈ ಮಾರ್ಗವಿಲ್ಲದಿದ್ದರೆ ಉಳಿದದ್ದು ಸಾಂಪ್ರದಾಯಿಕ ರೀತಿಯಲ್ಲಿ ಪುಸ್ತಕದ ಹುಳುವಾಗುವುದೊಂದೇ. ಹಾಗೆ ವಿಕಿಪೀಡಿಯದಲ್ಲಿ ಹುಡುಕುತ್ತಾ ಸಾಗಿದ ನನಗೆ ಕನ್ನಡದ ವಿಷಯದಲ್ಲಿ ಅಸಂಖ್ಯಾತ 'ಇಲ್ಲ'ಗಳು ದೊರೆತವು. ಆದರೆ ನೆರೆಯ ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಬಹುತೇಕ ಎಲ್ಲ ವಿಚಾರಗಳ ಬಗ್ಗೆಯೂ ಲೇಖನಗಳಿದ್ದದ್ದನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾನೇ ಏಕೆ ನನ್ನ ಕೈಲಾದಷ್ಟು 'ಇಲ್ಲ' ಗಳನ್ನೂ ತುಂಬಬಾರದು ಎನ್ನುವ ನಿರ್ಧಾರ ಮಾಡಿ, ನನ್ನ ಜ್ಞಾನ ಮಟ್ಟವನ್ನು ವೃದ್ಧಿಸುವ ಹಾಗು ಕನ್ನಡ ನುಡಿಗೂ ಸೇವೆಯಾಗುವ ವಿಕಿಪೀಡಿಯಾ ಸಂಪಾದನೆಯಲ್ಲಿ 2013 ರಿಂದ ತೊಡಗಿಸಿಕೊಂಡೆ.

ಆಸಕ್ತಿ ವಿಷಯಗಳು[ಬದಲಾಯಿಸಿ]

  • ಮೂಲತಃ ನಾಟಕಕಾರ,ನಾಟಕ, ಸಿನೆಮಾಗಳನ್ನೂ ನೋಡುವುದಕ್ಕಿಂತ ಅಭಿನಯಿಸುವುದೇ ಹಂಬಲ.
  • ವಿಕಿಪೀಡಿಯಾದಲ್ಲಿ ಈಗಾಗಲೇ ಇರುವ ಲೇಖನಗಳ ಪರಿಷ್ಕರಣೆ.
  • ಇತಿಹಾಸ, ಅಂತರಾಷ್ಟ್ರೀಯ ಸಂಬಂಧಗಳು, ರಾಷ್ಟ್ರೀಯ ಭದ್ರತೆ, ಅರ್ಥಶಾಸ್ತ್ರ, ರಾಜಕೀಯ, ಭಕ್ತಿ ವಿಚಾರಗಳ ಬಗ್ಗೆ ವಿಪರೀತ ಆಸಕ್ತಿ, ಈ ಕಾರಣಕ್ಕಾಗಿಯೇ ನನ್ನ ಎಲ್ಲ ವಿಕಿ ಕೊಡುಗೆಗಳೂ ಮೇಲಿನ ವಿಷಯಕ್ಕೆ ಸಂಬಂಧಿಸಿದವು.
  • ಆಡಳಿತ ವ್ಯವಸ್ಥೆಯ ಮೇಲಿನ ಚರ್ಚೆ ಮತ್ತೊಂದು ನನ್ನ ಪಾಲಿಗೆ ಮತ್ತೊಂದು ಆಸಕ್ತಿದಾಯಕ ವಿಚಾರವಾಗಿದ್ದು ಫೇಸ್ಬುಕ್ ತಾಣದ ಮೂಲಕ ಜನಜಾಗೃತಿ ಮೂಡಿಸಲು ಲೇಖನಗಳನ್ನು ಬರೆದು ಪ್ರಕಟಿಸುವುದು ನನ್ನ ಒಂದು ಧನಾತ್ಮಕ ಚಟ!.
  • ಉತ್ತಮ ಸುಧಾರಣೆ ತರಬಲ್ಲ ಯಾವ ಚಳುವಳಿಯಾದರೂ ಇ-ಮಾಧ್ಯಮದ ಮುಖಾಂತರ ಬೆಂಬಲ ಹಾಗು ಜಾಗೃತಿ.


ಮೆಚ್ಚಿದ ಪುಸ್ತಕಗಳು[ಬದಲಾಯಿಸಿ]

  • ಅಬ್ದುಲ್ ಕಲಾಂ ರ ಜೀವನ ಚರಿತ್ರೆ 'ಅಗ್ನಿಯ ರೆಕ್ಕೆಗಳು'.
  • 'ಒನ್ ಬುಕ್ ಫಾರ್ ಲೈಫ್ ಸಕ್ಸಸ್' ಇಂಗ್ಲಿಷ್ ಆವೃತ್ತಿ.
  • 'ಹೂ ವಿಲ್ ಕ್ರೈ ವೆನ್ ಯು ಡೈ' ಇಂಗ್ಲಿಷ್ ಆವೃತ್ತಿ.
  • ವಿಲಿಯಂ ಷೇಕ್ಸ್ ಪಿಯರ್ ನ ನಾಟಕಗಳು.
  • ನೇಮಿಚಂದ್ರರ 'ಬದುಕು ಬದಲಿಸಬಹುದು'.
  • ಡಿ.ವಿ.ಜಿ ಯವರ 'ಮಂಕುತಿಮ್ಮನ ಕಗ್ಗ'.
  • ಕುವೆಂಪುರವರ 'ಕೊನೆಯ ತೆನೆ ಮತ್ತು ವಿಶ್ವ ಮಾನವ ಸಂದೇಶ'.

ವಿಕಿಪೀಡಿಯಾಗೆ ಬರೆಯಲ್ಪಟ್ಟಿರುವ ಲೇಖನಗಳು[ಬದಲಾಯಿಸಿ]

ವಿಕಿಪೀಡಿಯಾಗೆ ಎಡಿಟ್ ಮಾಡಲ್ಪಟ್ಟಿರುವ ಲೇಖನಗಳು[ಬದಲಾಯಿಸಿ]

ವಿಕಿ ಟೆಂಪ್ಲೇಟು ನವೀಕರಣ[ಬದಲಾಯಿಸಿ]

ಬಾಹ್ಯ ಸಂಪರ್ಕ[ಬದಲಾಯಿಸಿ]

  • ಮಿಂಚಂಚೆ: maheshmmhshm@gmail.com