ಸದಸ್ಯ:Jhansi.kl

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಝಾನ್ಸಿ ಕೆ ಎಲ್.ನಾನು ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿ.ಎಸ್.ಸಿ ಓದುತ್ತಿದ್ದೇನೆ.

ಜೀವನ[ಬದಲಾಯಿಸಿ]

ಕೊಡಗು

ನಾನು 'ದಕ್ಷಿಣ ಕಾಶ್ಮೀರ' ವೆಂದು ಪ್ರಸ್ಸಿದ್ಧವಾದ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಜನಿಸಿದೆನು.ಕೊಡಗು ಜಿಲ್ಲೆ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿದೆ.ಭಾರತದ 'ಸ್ಕಾಟ್ ಲ್ಯಾಂಡ್' ಎಂದು ಕೊಡಗು ಜಿಲ್ಲೆಯನ್ನು ಕರೆಯುತ್ತಾರೆ.ನನ್ನ ತಂದೆಯ ಹೆಸರು ಕೆ ಕೆ ಲಕ್ಷ್ಮಣ ಹಾಗು ನನ್ನ ತಾಯಿಯ ಹೆಸರು ಧರ್ಮಾವತಿ ಕೆ ಎ.ನನ್ನ ತಮ್ಮನ ಹೆಸರು ಸೂರ್ಯ ಕೆ ಎಲ್.'ದಕ್ಷಿಣ ಗಂಗೆ'ಯಾದ ಕಾವೇರಿಯ ಮಡಿಲಲ್ಲಿ ಕೊಡಗಿನ ಸುಂದರವಾದ ಪರಿಸರದಲ್ಲಿ ನನ್ನ ತಮ್ಮನ ಜೊತೆ ಆಡುತ್ತಾ ಬೆಳೆದೆ.

ವಿದ್ಯಾಭ್ಯಾಸ[ಬದಲಾಯಿಸಿ]

ಕ್ರೈಸ್ತ್ ಯುನಿವರ್ಸಿಟಿ

ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನ ಡಯಾನಾ ಕಾನ್ವೆಂಟ್ ಹಾಗೂ ಮೆಕಾಲೆ ಆಂಗ್ಲ ಶಾಲೆಯಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಮೇರಿಸ್ ಪ್ರೌಢ ಶಾಲೆಯಲ್ಲಿ ಪೂರ್ನಗೊಳಿಸಿದೆ.ನಂತರ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಕ್ರೈಸ್ತ್ ಜೂನಿಯರ್ ಕಾಲೇಜಿನಲ್ಲಿ ಮುಗಿಸಿ ಪ್ರಸ್ತುತ ಬೆಂಗಳೂರಿನ ಕ್ರೈಸ್ತ್ ಯುನಿವರ್ಸಿಟಿಯಲ್ಲಿ ಬಿ.ಎಸ್.ಸಿ ಓದುತ್ತಿದ್ದೇನೆ.ನನಗೆ ನನ್ನ ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಗಣಿತಶಾಸ್ತ್ರದ ಪ್ರಾಧ್ಯಾಪಕಿಯಾಗಬೇಕೆಂಬ ಆಸೆ .

ಹವ್ಯಾಸ ಮತ್ತು ಆಸಕ್ತಿ[ಬದಲಾಯಿಸಿ]

ಮಹೇಂದ್ರ ಸಿಂಗ್ ಧೋನಿ

ನನಗೆ ಬಾಲ್ಯದಿಂದಲು ಕ್ರೀಡೆಯಲ್ಲಿ ತುಂಬಾ ಆಸಕ್ತಿ.ಅದರಲ್ಲಿಯೂ ಕ್ರಿಕೆಟ್ ಎಂದರೆ ತುಂಬಾ ಇಷ್ಟ .ಮಹೇಂದ್ರ ಸಿಂಗ್ ಧೋನಿ ನನ್ನ ನೆಚ್ಚಿನ ಕ್ರಿಕೆಟ್ ಆಟಗಾರ.ನನಗೆ ಪುಸ್ತಕ ಓದುವುದೆಂದೆರೆ ಬಹಳ ಇಷ್ಟ.ನನಗೆ ಇತಿಹಾಸ,ವಿಜ್ಞಾನ ಮತ್ತು ಪೌರಾಣಿಕ ಕುರಿತಾದ ಪುಸ್ತಕಗಳೆಂದೆರೆ ತುಂಬಾ ಇಷ್ಟ .ನಾನು ತ್ರಿಭಾಷೆಗಳಾದ ಇಂಗ್ಲಿಷ್ ,ಕನ್ನಡ ಹಾಗು ಹಿಂದಿ ಭಾಷೆಯನ್ನು ಮಾತನಾಡಬಲ್ಲೆ.ನಾನು ಕನ್ನಡ ವಿಕಿಪೀಡಿಯದಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದೇನೆ .ನಾನು ನನ್ನ ಬಿಡುವಿನ ಸಮಯದಲ್ಲಿ ದೂರದರ್ಶನವನ್ನು ನೋಡುತ್ತೇನೆ.ನನಗೆ ಕಾರ್ಟೂನ್ ಶೋಗಳೆಂದರೆ ಬಹಳ ಇಷ್ಟ.ನನಗೆ ಬಾಲ್ಯದಿಂದಲೂ ಭಾಷಣ ಮಾಡುವುದು,ಚಿತ್ರ ಬಿಡಿಸುವುದು,ಹಾಡು ಕೇಳುವುದು ಹಾಗು ನೃತ್ಯ ಮಾಡುವುದೆಂದರೆ ತುಂಬಾ ಇಷ್ಟ.