ಬೆಂಗಳೂರು
| ಬೆಂಗಳೂರು | |
| ಮೇಲಿನಿಂದ ಕೆಳಕ್ಕೆ ಯುಬಿ ನಗರ, ಬಾಗ್ಮನೆ ಟೆಕ್ ಪಾರ್ಕ್, ಇನ್ಫೋಸಿಸ್, ಕೆಂಪ್‌ಫೋರ್ಟ್‌ನ ಶಿವನ ವಿಗ್ರಹ, ಲಾಲ್ ಬಾಗ್‍ನ ಗಾಜಿನ ಮನೆ, ವಿಧಾನ ಸೌಧ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬೆಂಗಳೂರು ನಗರ ಜಿಲ್ಲೆ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
೭೪೧ km² - ೯೨೦ ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೧೧) - ಸಾಂದ್ರತೆ |
೯೫,೫೮,೯೧೦ (೩ನೇ) - /ಚದರ ಕಿ.ಮಿ. |
| Mayor | ವೆಂಕಟೇಶ ಮೂರ್ತಿ[೧] |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 560 xxx - +91-(0)80 - KA 01, KA 02, KA 03, KA 04, KA 05, KA 41, KA 50, KA 51, KA 53 |
ಬೆಂಗಳೂರು ಕರ್ನಾಟಕದ ರಾಜಧಾನಿ. ಕರ್ನಾಟಕದ ದಕ್ಷಿಣ-ಪೂರ್ವ ಭಾಗದಲ್ಲಿದ್ದು, ಭಾರತದ ೫ನೇ ದೊಡ್ಡ ನಗರವಾಗಿದೆ. ಜನಸಂಖ್ಯ್ಯೆ ಸುಮಾರು ೮೫ ಲಕ್ಷ . ಬೆಂಗಳೂರು ಜಗತ್ತಿನ ಮಾಹಿತಿ ತಂತ್ರಜ್ಞಾನಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿದೆ. ಸುಪ್ರಸಿದ್ಧ 'ಇನ್ಫೋಸಿಸ್,' 'ಎಸ್‌ಎಪಿ,' ಹಾಗೂ, 'ವಿಪ್ರೋ' ದಂತಹ 'ಭಾರಿ ಸಾಫ್ಟ್ ವೇರ್ ಕಂಪೆನಿ'ಗಳು ಶುರುವಾದಮೇಲೆ, ಭಾರತದ ಸಿಲಿಕಾನ್ ವ್ಯಾಲಿ, ಎಂದೇ ಪ್ರಸಿದ್ಧವಾಗಿದೆ. ಇದನ್ನು ಉದ್ಯಾನ ನಗರಿ ಎಂದೂ ಕರೆಯಲಾಗುತ್ತದೆ.
ಬೆಂಗಳೂರು ಭಾರತದಲ್ಲಿ ಮುಂಬಯ್ ಮತ್ತು ಹೊಸ ದೆಹಲಿಯ ನಂತರ ೩ನೆಯ ಡೊಡ್ಡ ನಗರವಾಗಿದೆ. ಇಲ್ಲಿ ಕನ್ನಡದವರಿಗಿಂತ ಬೆರೆ ಭಾಷೆ ಮಾತನಾದುವವರೇ ಹೆಚ್ಚು.
ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು.
ಪರಿವಿಡಿ |
ಭೂಗೋಳ[ಬದಲಾಯಿಸಿ]
ಬೆಂಗಳೂರು ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೨° ೩೯' ಉ ಹಾಗೂ ೧೩° ಉ ಅಕ್ಷಾಂಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪°C ರಿಂದ ೩೫°C ರವರೆಗೆ ಉಷ್ಣಾಂಶವಿರುವುದು. ಸದಾಶಿವನಗರದ ರಮಣಶ್ರೀ ಪಾರ್ಕ್ ಬೆಂಗಳೂರಿನ ಅತೀ ಎತ್ತರದ ಪ್ರದೇಶವಾಗಿದೆ. ಈ ಮೊದಲು ಮಲ್ಲೇಶ್ವರದ ವಯ್ಯಾಲಿ ಕಾವಲ್ ಎತ್ತರದ ಪ್ರದೇಶವಾಗಿತ್ತು. ಬೆಂಗಳೂರಿನ ಹೊಸಕೆರೆಹಳ್ಳಿ ಅತಿ ತಗ್ಗಿನ ಪ್ರದೇಶವಾಗಿದೆ.
ಇತಿಹಾಸ[ಬದಲಾಯಿಸಿ]
ಬೆಂಗಳೂರು ೧೫೩೭|೧೫೩೭ರಲ್ಲಿ ಕೆಂಪೇಗೌಡರ (೧೫೧೦ - ೧೫೭೦) ರಾಜಧಾನಿಯಾಗಿತ್ತು.ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಈ ನಗರವು ಸಿಲಿಕಾನ್ ಸಿಟಿ ಮತ್ತು ಉದ್ಯಾನ ನಗರ ಎಂದು ಪ್ರಖ್ಯಾತವಾಗಿದೆ. ಕೆಂಪೇಗೌಡ (೧೫೧೦-೧೫೭೦) ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು. ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು.
ಕೆಂಪೇಗೌಡರ ಮಗನಾದ ಕೆಂಪೇಗೌಡ-೨ ಅನೇಕ ದೇವಸ್ಥಾನ ಮತ್ತು ಗೋಪುರಗಳನ್ನು ನಿರ್ಮಿಸಿದನು. ಅವುಗಳಲ್ಲಿ ಪ್ರಮುಖವಾದ ನಾಲ್ಕು ಗೋಪುರಗಳನ್ನು ಈ ಸ್ಥಳಗಳಲ್ಲಿ ಕಾಣಬಹುದಾಗಿದೆ.
- ಲಾಲಭಾಗ್
- ಕೆಂಪಾಂಬುಧಿ ಕೆರೆ
- ಅಲಸೂರು ಕೆರೆ
- ಮೇಖ್ರಿ ವೃತ್ತ
ಸಂಸ್ಕೃತಿ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]
ಕಲೆ ಮತ್ತು ಸಂಸ್ಕೃತಿಯ ಬೀಡಾಗಿರುವ ಬೆಂಗಳೂರು ವಿದ್ಯಾಭ್ಯಾಸಕ್ಕೆ ಬಹಳ ಹೆಸರುವಾಸಿ. ಇಲ್ಲಿಯ ಸಂಸ್ಕೃತಿಯೂ ಹಲವು ಪರದೇಶೀಯರನ್ನು ಶತಮಾನಗಳಿಂದ ಆಕರ್ಷಿಸಿದೆ. ಬೆಂಗಳೂರಿನ ವೆಂಕಟ್ಟಪ್ಪ ಚಿತ್ರ ಕಲಾ ಪರಿಷತ್ತು, ಭಾರತೀಯ ವಿದ್ಯಾ ಭವನ , ಭಾರತೀಯ ವಿಜ್ಞಾನ ಮಂದಿರ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಮತ್ತಿತರ ವಿವಿಧ ರೀತಿಯ ಶಿಕ್ಷಣದಲ್ಲಿ ಮಂಚೂಣಿಯಲ್ಲಿವೆ. ಬೆಂಗಳೂರಿನಲ್ಲಿ ಹಲವು ದೇಶೀಯ ಮತ್ತು ಪಾಶ್ಚ್ಯಾತ್ಯ ಸಂಸ್ಕೃತಿಗಳು ಮಿಲನಗೊಂಡಿವೆ. ಆದುದರಿಂದ ಇದನ್ನು ಈಗ ಕಾಸ್ಮೊಪಾಲಿಟನ್ ಸಿಟಿ ಎಂತಲೂ ಕರೆಯಲ್ಪಡುತ್ತಿದೆ. ಇಲ್ಲಿನ ದೂರದರ್ಶನ ಹಾಗೂ ಆಕಾಶವಾಣಿ ಕೇಂದ್ರಗಳು ಹೆಸರುವಾಸಿ. ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ, ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಇಲ್ಲೇ. ಹಾಗೂ ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು ರೇಡಿಯೋ ಆಕ್ಟೀವ್ ತರಂಗಾಂತರ ೧೦೭.೮
ಮಾಧ್ಯಮ[ಬದಲಾಯಿಸಿ]
ಬೆಂಗಳೂರಿನಲ್ಲಿ ಮೊದಲ ಮುದ್ರಣಾಲಯವನ್ನು ೧೮೪೦ರಲ್ಲಿ ಸ್ಥಾಪಿಸಲಾಯಿತು.[೨]೧೮೫೯ ರಲ್ಲಿ "ಪಂಜಾಬ್ ಕೇಸರಿ" ಎಂಬ ಮೊದಲ ಇಂಗ್ಲಿಷ್ ವಾರ ಪತ್ರಿಕೆ ಪ್ರಕಟವಾಗಿತು ಮತ್ತು ೧೮೬೦ ರಲ್ಲಿ "ಮೈಸೂರು ವ್ರಿತ್ತಂತ ಬೋಧಿನಿ" ಎಂಬ ಕನ್ನಡ ಪತ್ರಿಕೆ ಪ್ರಕಟವಾಗಿತು. ಈಗ "ವಿಜಯ ಕರ್ನಾಟಕ" ಮತ್ತು "ದಿ ಟೈಂಸ್ ಆಫ್ ಇಂಡಿಯಾ" ತುಂಬಾ ಜನಪ್ರಿಯವಾಗಿದೆ ಹಾಗು "ಪ್ರಜಾವಾಣಿ" ಮತ್ತು "ಡೆಕ್ಕನ್ ಹೇರಲಡ್"ಅತಿ ದೊಡ್ಡ ಮುದ್ರಣಾಲಯಗಳನ್ನು ಹೊಂದಿದೆ. ಬೆಂಗಳೂರು ಟಿವಿ ಮಾಧ್ಯಮ ಮೊದಲ ಬಾರಿಗೆ ನವೆಂಬರ್ ೧ ೧೯೮೧ ರಂದು "ದೂರದರ್ಶನ" ಮುಖಾಂತರ ಪ್ರಾರಂಭವಾಯಿತು. ೧೯ ನವೆಂಬರ್ ೧೯೮೩ ರಂದು ದೂರದರ್ಶನ ನಿರ್ಮಾಣ ಕೇಂದ್ರವನ್ನು ಸ್ಥಾಪಿಸಿ ವಾರ್ತಾ ಪ್ರಸಾರವನ್ನು ಪ್ರಾರಂಭಿಸಿತು. ನಂತರ ೧೯೯೧ ರಂದು ಕನ್ನಡ ದೂರದರ್ಶನ "ಡಿಡಿ ಚಂದನ" ಪ್ರಾರಂಭವಾಯಿತು. ಈಗ ಅನೇಕ ಟಿವಿ ಮಾಧ್ಯಮಗಳು ಜನಪ್ರಿಯವಾಗಿದೆ. ಇದಕ್ಕ ಉದಾಹರಣೆ ಟಿವಿ ೯, ಉದಯ, ಈ ಟಿವಿ, ಸುವರ್ಣ, ಜನಶ್ರೀ, ಸಮಯ, ಪಬ್ಲಿಕ್ ಟಿವಿ (ಫೆಬ್ರವರಿ ೧೨, ೨೦೧೨) ಮುಂತಾದವು.
ಇದನ್ನೂ ನೋಡಿ[ಬದಲಾಯಿಸಿ]
- ಬೆಂಗಳೂರು ಉತ್ತರ (ಲೋಕ ಸಭೆ ಚುನಾವಣಾ ಕ್ಷೇತ್ರ)
- ಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)
- ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)
- ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)
ಇತರೆ ಸಂಪರ್ಕ[ಬದಲಾಯಿಸಿ]
- Interactive Map of Bangalore
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
- ಬೆಂಗಳೂರು ಮಹಾನಗರ ಪಾಲಿಕೆ
- Bangalore cyber police
- ಇತರೆ ಇಲಾಖೆಗಳ ಸಂಪರ್ಕ ಪಟ್ಟಿ
- ಬೆಳದಿದೆ ನೊಡ ಬೆಂಗಳೂರು ನಗರ
ಉಲ್ಲೇಖಗಳು[ಬದಲಾಯಿಸಿ]
- ↑ "Bangalore mayor: url=http://www.deccanherald.com/content/244892/venkatesh-murthy-mayor-srinivas-deputy.html".
- ↑ ವಿಜಯಾ ಬಿ. ಪುಣೆಕರ್. Assimilation: A Study of North Indians in Bangalore. ಮರುಕಳಿಸಿದ ದಿನಾಂಕ 2007-10-04.
ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು
ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ | ಶ್ರೀನಗರ | ಸಿಲ್ವಾಸ | ಹೈದರಾಬಾದ್