'ಸ್ನೇಹ ಸಂಬಂಧ ಪತ್ರಿಕೆ'
ಇದು, 'ಮುಂಬೈ ಕರ್ನಾಟಕ ಸಂಘ, ಮಾಹಿಮ್,' ಪ್ರುಸ್ತುತಪಡಿಸುತ್ತಿರುವ ಸುಂದರ, ಹಾಗೂ ಮಾಹಿತಿಪೂರ್ಣ, 'ಮಾಸಪತ್ರಿಕೆ'. ಪ್ರತಿಬಾರಿಯೂ ಅದರಲ್ಲಿ ಒಂದು ಹೊಸತನವನ್ನು ನಾವು ಗುರುತಿಸಬಹುದು. ಹೊಸ ಮಾದರಿಯ ವಿನ್ಯಾಸ, ಲೇಖನದಲ್ಲಿ ಹೊಸತನ, ಮತ್ತು ಉತ್ತಮ ಲೇಖನಗಳನ್ನು ಬರೆಯುವ ಹಲವಾರು ಲೇಖಕ, ಲೇಖಕಿಯರ ಸಮೂಹವಿದೆ. ಅದರಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಅತಿ ನಿಖರವಾಗಿಯೂ ವಸ್ತುನಿಷ್ಠವಾಗಿಯೂ ಅತಿ ಸುಂದರವಾಗಿ ಪ್ರಸ್ತುತಪಡಿಸುತ್ತಿರುವ, ವಿದುಷಿ, ಶಾಸ್ತ್ರೀಯ-ಸಂಗೀತ ವಿಮರ್ಶಕಿ, ಹಾಗೂ ಉತ್ತಮ ಮಟ್ಟದ ಬರಹಗಾರ್ತಿ, 'ಶ್ರೀಮತಿ.ಶ್ಯಾಮಲಾ ಪ್ರಕಾಶ್, ಪ್ರಮುಖರಲ್ಲೊಬ್ಬರು. ಆ ಅಂಕಣಕ್ಕೆ ಅವರು ಕೊಟ್ಟಿರುವ ಹೆಸರು,'ನಾದೋಪಾಸನ,' ಎಂಬ ಅನ್ವರ್ಥನಾಮ. ಸಂಗೀತವನ್ನು ತಮ್ಮ ಉಸಿರಂತೆ ಭಾವಿಸಿ, ಅದರ ಪ್ರಕಾರಗಳನ್ನು ಗುರುತಿಸುತ್ತಾ, ಇಂದಿಗೂ ಸಂಗೀತದ ವಿದ್ಯಾರ್ಥಿನಿಯಾಗಿ, ಸಂಗೀತೋಪಾಸನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, 'ಶ್ಯಾಮಲಾ ಪ್ರಕಾಶ್', ಒಬ್ಬ ಅಪರೂಪದ ವ್ಯಕ್ತಿ.
'ಸ್ನೇಹ ಸಂಬಂಧ ಪತ್ರಿಕೆ'ಗೆ, ಈಗ ೨೫ ವರ್ಷದ ಸಂಭ್ರಮ [ಬದಲಾಯಿಸಿ]
ಈ ಪತ್ರಿಕೆಗೆ ವರ್ಷ ೨೦೦೯, 'ರಜತ ಮಹೋತ್ಸವ'ದ ಸಂಭ್ರಮ. ಈ ಪತ್ರಿಕೆಯಲ್ಲಿ ಬರೆಯುತ್ತಿರುವ, 'ಮೌಲಿಕ ಲೇಖಕ'/'ಲೇಖಕಿಯರು'
- 'ಶ್ಯಾಮಲಾ ಮಾಧವ',
ಮುಂತಾದವರು.