ಹೊಸಕೋಟೆ
| ಹೊಸಕೋಟೆ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬೆಂಗಳೂರು ಗ್ರಾಮಾಂತರ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 875 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೦೧) - ಸಾಂದ್ರತೆ |
36,333 - /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 562114 - +91-80 - |
ಹೊಸಕೋಟೆ -ಭಾರತದ ರಾಜ್ಯ ಕರ್ನಾಟಕದಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣಗಳಲ್ಲೊಂದು. ಅದಕ್ಕೆ ಈ ಹೆಸರು ಅಲ್ಲಿನ ಹೊಸದಾದ ಕೋಟೆಯ ಕಾರಣ ಬಂದಿದೆ. ಹಳೆಯ ಕೋಟೆಯಲ್ಲಿ ಅವಿಮುಕ್ತೇಶ್ವರ , ವರದರಾಜ ಮತ್ತು ವಿಠೋಬಾ ದೇವಸ್ಥಾನಗಳಿವೆ. ಅವಿಮುಕ್ತೇಶ್ವರವು ದ್ರಾವಿಡ ಶೈಲಿಯದಾಗಿದ್ದು ಅದನ್ನು ಸುಗತೂರಿನ ಪಾಳೇಗಾರ ತಮ್ಮೇಗೌಡನು ಕಟ್ಟಿಸಿದ್ದು ಎಂದು ಹೇಳುತ್ತಾರೆ. ಹೊಸಕೋಟೆಯಲ್ಲಿ ವೋಲ್ವೋ ವಾಹನ ತಯಾರಿಕಾಘಟಕವೂ ಇದೆ. ೧೯೪೬ರಲ್ಲಿ ಆರಂಭವಾದ ಹೊಸಕೋಟೆಯ ಮಾರ್ ಥೋಮಾ ಮಿಶನ್ ಸಂಸ್ಥೆಯು ಈ ಭಾಗದ ಅತ್ಯಂತ ಹಳೆಯ ಮಿಶನರಿ ಸಂಸ್ಥೆಗಳಲ್ಲೊಂದಾಗಿದೆ. ಈಗ ರೆವರೆಂಡ್ ಜೇಮ್ಸ್ ವೀರಮಾಲಾ ಅವರು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪರಿವಿಡಿ |
ಭೌಗೋಳಿಕ [ಬದಲಾಯಿಸಿ]
ಹೊಸಕೋಟೆಯು ೧೩.೦೭ ಉತ್ತರ ಅಕ್ಷಾಂಶ ಮತ್ತು ೭೭.೮ ಪೂರ್ವ ರೇಖಾಂಶ ( )ದಲ್ಲಿದೆ[೧]. ಅದರ ಸರಾಸರಿ ಎತ್ತರವು ಸಮುದ್ರಮಟ್ಟದಿಂದ ೮೭೫ ಮೀಟರ್ಗಳು ಅಥವಾ ೨೮೭೦ ಅಡಿಗಳು.
ಸಂಪರ್ಕ [ಬದಲಾಯಿಸಿ]
ಹೊಸಕೋಟೆಯು ಎನ್‌ಹೆಚ್ ೪ ರಲ್ಲಿ ಇದ್ದು ಬೆಂಗಳೂರು ನಗರದಿಂದ ಸುಮಾರು ೨೭ ಕಿ.ಮೀ. ದೂರದಲ್ಲಿದ್ದು , ಅಲ್ಲಿಗೆ ಬೆಂಗಳೂರಿನಿಂದ ಬಿ.ಎಂ.ಟಿ.ಸಿ ಮತ್ತು ಕ.ರಾ.ರ.ಸಾ.ಸಂ ಗಳ ಬಹಳಷ್ಟು ಬಸ್ಸುಗಳ ಸೌಲಭ್ಯ ಇದೆ. ಕೃಷ್ಣರಾಜಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣಗಳು ಹತ್ತಿರದ ರೇಲ್ವೆ ನಿಲ್ದಾಣಗಳು.
ಜನಸಂಖ್ಯಾ ಮಾಹಿತಿ [ಬದಲಾಯಿಸಿ]
೨೦೦೧ರ ಭಾರತೀಯ ಜನಗಣತಿGRIndiaಯ ಪ್ರಕಾರ , ಹೊಸಕೋಟೆಯ ಜನಸಂಖ್ಯೆ ೩೬,೩೩೩ ಇತ್ತು . ಗಂಡಸರು ಜನಸಂಖ್ಯೆಯ ೫೨% ರಷ್ಟೂ ಹೆಂಗಸರು ೪೮% ರಷ್ಟೂ ಇದ್ದರು. ಹೊಸಕೋಟೆಯ ಸರಾಸರಿ ಸಾಕ್ಷರತೆ ೭೦% ಇದ್ದು ಇದು ದೇಶದ ಸರಾಸರಿಯಾದ ೫೯.೫% ಕ್ಕಿಂದ ಹೆಚ್ಚಾಗಿದೆ. ಗಂಡಸರ ಸಾಕ್ಷರತೆ ೭೪% ಮತ್ತು ಹೆಂಗಸರದು ೬೫%. ಹೊಸಕೋಟೆಯ ಜನಸಂಖ್ಯೆಯ ೧೨% ಭಾಗವು ೬ ವರ್ಷಕ್ಕಿಂತ ಕಡಿಮೆಯವರದು.
ಶಿಕ್ಷಣ ಸಂಸ್ಥೆಗಳು [ಬದಲಾಯಿಸಿ]
ಅನೇಕ ಖಾಸಗಿ ಮತ್ತು ಸರಕಾರೀ ಶಿಕ್ಷಣ ಸಂಸ್ಥೆಗಳು ಹೊಸಕೋಟೆಯಲ್ಲಿ ಇವೆ. ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CREST) ಮತ್ತು ಭಾರತೀಯ ಖಭೌತಶಾಸ್ತ್ರ ಸಂಸ್ಥೆಗಳೂ ಇವೆ.
- ಪದವಿಪೂರ್ವ ಶಿಕ್ಷಣ (11 and 12)
- D.Ed College (Diploma)
- ಹೈಸ್ಕೂಲುಗಳು (8-10)
- ವೈದ್ಯಕೀಯ ಕಾಲೇಜು
-
- ಚ್, Hoskote
- Primary Schools (KG-7)
- Government Primary School,Kolathur
- Government Girls midle School
- Bright School
- Citizen
- Fathima
- Sri Vivekananda Vidya Kendra
- Government Primary School
- Om Shree Public school
-
- Government Primary School Doddagattiganabbe
- Government High School Doddagattiganabbe
ಪ್ರಮುಖ ವ್ಯಕ್ತಿಗಳು [ಬದಲಾಯಿಸಿ]
ಸಾಹಿತ್ಯ [ಬದಲಾಯಿಸಿ]
ಬ್ಯಾಂಕುಗಳು [ಬದಲಾಯಿಸಿ]
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
- ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್
- ಕೆನರಾ ಬ್ಯಾಂಕ್
- ವಿಜಯಾ ಬ್ಯಾಂಕ್
- ಎಚ್ ಡಿ ಎಫ್ ಸಿ ಬ್ಯಾಂಕ್
- ಸಿಂಡಿಕೇಟ್ ಬ್ಯಾಂಕ್
- ಕಾರ್ಪೋರೇಷನ್ ಬ್ಯಾಂಕ್
- ಟೌನ್ ಕೋಆಪೆರೇಟಿವ್ ಬ್ಯಾಂಕ್