ಹೊಳೆತುಂಬೆ
ವಿಕಿಪೀಡಿಯ ಇಂದ
| 'ಹೊಳೆತುಂಬೆ' | |||||||||||||||
|---|---|---|---|---|---|---|---|---|---|---|---|---|---|---|---|
ಹೊಳೆತುಂಬೆ ಹೂ
|
|||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| ಕ್ರಾಟೆವಾ ರೆಲಿಜಿಯೋಸ Forst. f. |
|||||||||||||||
|
|
ಹೊಳೆತುಂಬೆ(ಆದಿರಾಜ,ನೆರ್ವಾಳ,ಹೊಳೆನೆಕ್ಕಿ)ಮುಂತಾದ ಹೆಸರಿನಿಂದ ಕರೆಯಲ್ಪಡುತ್ತದೆ.ಜಪಾನ್,ಆಸ್ಟ್ರೇಲಿಯಹಾಗೂ ದಕ್ಷಿಣ ಏಷಿಯಾಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಪರಿವಿಡಿ |
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಇದು ಕಪ್ಪರಾಸಿಕ(Capparaceae)ಕುಟುಂಬಕ್ಕೆ ಸೇರಿದ್ದು,ಕ್ರಾಟೆವಾ ರೆಲಿಜಿಯೋಸ (Crataeva Religiosa)ಎಂದು ಸಸ್ಯಶಾಸ್ತ್ರೀಯ ಹೆಸರಿದೆ. ತುಳು ಭಾಷೆಯಲ್ಲಿ ತುದೆಮದರಂಗಿಎಂದು ಹೆಸರು.
ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]
ಸಣ್ಣಪ್ರಮಾಣದ ಮರ.ಉದ್ದನೆಯ ತೊಟ್ಟಿನ ಎಲೆಗಳಿವೆ.ಬೂದು ಬಣ್ಣದ ತೊಗಟೆ.ಬಿಳಿ ಮಾಸಲು ಹಳದಿ ಬಣ್ಣದ ಹೂ ಗಳು ಎಪ್ರಿಲ್-ಮೇ ತಿಂಗಳಲ್ಲಿ ಕಂಡು ಬರುತ್ತದೆ.ಹೆಚ್ಚಾಗಿ ನದಿ,ತೊರೆ ಹಾಗೂ ಹಳ್ಳಗಳ ದಡಗಳಲ್ಲಿ ಬೆಳೆಯುತ್ತದೆ.
ಉಪಯೋಗಗಳು [ಬದಲಾಯಿಸಿ]
ದಾರುವು ಮೃದುವಾಗಿದ್ದು,ಸಮಾನ ಕಣರಚನೆ ಹೊಂದಿರುವುದರಿಂದ ಬಾಚಣಿಗೆ,ತಬಲಾ ಮುಂತಾದವುಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ತೊಗಟೆ,ಬೇರು,ಎಲೆ ಮೂತ್ರಾಂಗ ಸಂಬಂಧವಾದ ರೋಗಗಳಿಗೆ ಔಷಧಿಯಾಗಿ ಬಳಸಲ್ಪಡುತ್ತದೆ.
ಆಧಾರ ಗ್ರಂಥಗಳು [ಬದಲಾಯಿಸಿ]
- 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.