ಹೈತಿ
ವಿಕಿಪೀಡಿಯ ಇಂದ
| ಧ್ಯೇಯ: "ಒಗ್ಗಟ್ಟು ಬಲವನ್ನುಂಟುಮಾಡುವುದು" | |
| ರಾಷ್ಟ್ರಗೀತೆ: "ಲಾ ದಿಸಾಲಿನಿಯೆನ್" | |
| ರಾಜಧಾನಿ | ಪೋರ್ಟ್-ಒ-ಪ್ರಿನ್ಸ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಫ್ರೆಂಚ್ ಭಾಷೆ, ಹೈತಿಯನ್ ಕ್ರಿಯೋಲ್ |
| ಸರಕಾರ | ಗಣರಾಜ್ಯ |
| - ರಾಷ್ಟ್ರಾಧ್ಯಕ್ಷ | ರೆನೆ ಪ್ರೆವಾಲ್ |
| - ಪ್ರಧಾನಿ | ಜಾಕ್ ಎಡ್ವರ್ಡ್ ಅಲೆಕ್ಸಿಸ್ |
| ರಚನೆ | |
| - ಸೈಂಟ್ ಡೊಮಿನಿಕ್ ಆಗಿ ರಚನೆ | 1697 |
| - ಫ್ರಾನ್ಸ್ ನಿಂದ ಸ್ವಾತಂತ್ರ್ಯ | ಜನವರಿ 1, 1804 |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 27,750 ಚದರ ಕಿಮಿ ; (146ನೆಯದು) |
| 10,714 ಚದರ ಮೈಲಿ | |
| - ನೀರು (%) | 0.7 |
| ಜನಸಂಖ್ಯೆ | |
| - 2005ರ ಅಂದಾಜು | 9,296,000 (85ನೆಯದು) |
| - 2003ರ ಜನಗಣತಿ | 8,527,817 |
| - ಸಾಂದ್ರತೆ | 335[೧] /ಚದರ ಕಿಮಿ ; (38ನೆಯದು) 758.1 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
| - ಒಟ್ಟು | $14.76 (2006 ರ ಅಂದಾಜು) ಬಿಲಿಯನ್ (124ನೆಯದು) |
| - ತಲಾ | $1800 (153ನೆಯದು) |
| ಮಾನವ ಅಭಿವೃದ್ಧಿ ಸೂಚಿಕ (2005) |
|
| ಕರೆನ್ಸಿ | ಗೌರ್ಡ್ (HTG) |
| ಕಾಲಮಾನ | (UTC-5) |
| - ಬೇಸಿಗೆ (DST) | (UTC-4) |
| ಅಂತರ್ಜಾಲ TLD | .ht |
| ದೂರವಾಣಿ ಕೋಡ್ | +509 |
ಹೈತಿ (ಅಧಿಕೃತವಾಗಿ ಹೈತಿ ಗಣರಾಜ್ಯ) ಕೆರಿಬ್ಬಿಯನ್ ದ್ವೀಪವಾದ ಹಿಸ್ಪಾನಿಯೋಲದ ಒಂದು ಭಾಗ. ಈ ದ್ವೀಪದ ಉಳಿದ ಭಾಗವು ಡೊಮಿನಿಕ ಗಣರಾಜ್ಯ. ಪರ್ವತಗಳ ನಾಡು ಎಂಬರ್ಥ ಕೊಡುವ ಅಯಿಟಿ ಎಂಬ ಅಮೆರಿಂಡಿಯನ್ ಪದವು ಈ ಪ್ರದೇಶದ ಮೂಲ ಹೆಸರಾಗಿತ್ತು. ೨೭,೭೫೦ ಚ. ಕಿ.ಮೀ. ವಿಸ್ತಾರವಾದ ಹೈತಿಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್. ನಾಡಿನ ಭಾಷೆಗಳು ಫ್ರೆಂಚ್ ಮತ್ತು ಕ್ರಿಯೋಲ್. ಹಿಂದೆ ಫ್ರಾನ್ಸ್‌ನ ಸಿರಿವಂತ ವಸಾಹತಾಗಿದ್ದ ದ್ವೀಪರಾಷ್ಟ್ರ ಹೈತಿ ಗುಲಾಮರ ಬಂಡಾಯದಿಂದಾಗಿ ರೂಪುಗೊಂಡ ಜಗತ್ತಿನ ಏಕೈಕ ರಾಷ್ಟ್ರ. ಹೈತಿ ತನ್ನ ಸ್ವಾತಂತ್ರ್ಯ ಘೋಷಿಸಿಕೊಂಡ ಲ್ಯಾಟಿನ್ ಅಮೆರಿಕದ ಮೊದಲ ದೇಶವು ಸಹ ಆಗಿದೆ.
Cite error: <ref> tags exist, but no <references/> tag was found