ಹೇಸರಗತ್ತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೇಸರಗತ್ತೆಯು ಗಂಡು ಕತ್ತೆ ಮತ್ತು ಹೆಣ್ಣು ಕುದುರೆಯ ಸಂತತಿ.[೧] ಕುದುರೆಗಳು ಮತ್ತು ಕತ್ತೆಗಳು ಭಿನ್ನ ಸಂಖ್ಯೆಯ ವರ್ಣತಂತುಗಳನ್ನು ಹೊಂದಿರುವ ಎರಡು ವಿಭಿನ್ನ ಪ್ರಜಾತಿಗಳಾಗಿವೆ. ಈ ಎರಡು ಪ್ರಜಾತಿಗಳ ನಡುವಿನ ಎರಡು ಮೊದಲನೇ ಪೀಳಿಗೆಯ ಸಂಕರಗಳಲ್ಲಿ, ಹಿನಿಗಿಂತ ಹೇಸರಗತ್ತೆಯನ್ನು ಪಡೆಯುವುದು ಹೆಚ್ಚು ಸುಲಭ. ಹಿನಿ ಎಂದರೆ ಹೆಣ್ಣು ಕತ್ತೆ ಮತ್ತು ಗಂಡು ಕುದುರೆಯ ಸಂತತಿ.

ಹೇಸರಗತ್ತೆಯ ಗಾತ್ರ ಮತ್ತು ಅದನ್ನು ಯಾವ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂಬುದು ಹೆಚ್ಚಾಗಿ ಹೇಸರಗತ್ತೆಯ ತಾಯಿಯ ವಂಶಾವಳಿಯನ್ನು ಅವಲಂಬಿಸಿರುತ್ತದೆ. ಹೇಸರಗತ್ತೆಗಳ ತೂಕ ಕಡಿಮೆ, ಮಧ್ಯಮ ಅಥವಾ ಭಾರ ಎಳೆಯುವ ಹೆಣ್ಣು ಕುದುರೆಯಿಂದ ಉತ್ಪತ್ತಿಯಾದಾಗ ಸ್ವಲ್ಪಮಟ್ಟಿಗೆ ಹೆಚ್ಚಿರಬಹುದು. ಹೇಸರಗತ್ತೆಗಳು ಕುದುರೆಗಳಿಗಿಂತ ಹೆಚ್ಚು ಸಹನಶೀಲ, ಕಷ್ಟಸಹಿಷ್ಣು ಮತ್ತು ಹೆಚ್ಚಿನ ಆಯಸ್ಸು ಹೊಂದಿರುವವು ಎಂದು ಖ್ಯಾತಿ ಪಡೆದಿವೆ, ಮತ್ತು ಇವು ಕತ್ತೆಗಳಿಗಿಂತ ಕಡಿಮೆ ಹಠಮಾರಿ ಹಾಗೂ ಹೆಚ್ಚು ಬುದ್ಧಿವಂತ ಪ್ರಾಣಿಗಳು ಎಂದು ವರ್ಣಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "What is a mule?". The Donkey Sanctuary. Archived from the original on 2017-08-25. Retrieved 2019-03-03.