ಹೆಬ್ಬಲಸು
| ಹೆಬ್ಬಲಸು | |||||||||||||
|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||
|
|||||||||||||
|
|
|||||||||||||
| ಅರ್ಟೋಕಾರ್ಪಸ್ ಹಿರ್ಸೂಟ
|
ಹೆಬ್ಬಲಸು ಇದು ದೊಡ್ಡ ಪ್ರಮಾಣದ ಎತ್ತರವಾದ,ನೇರ ಕಾಂಡದ ಮರ.ಕರ್ನಾಟಕದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ವಿಶೇಷವಾಗಿ ಕಂಡು ಬರುವುದು.ಇದು ಹಲಸಿನ ಒಳಜಾತಿಗಳಲ್ಲಿ ಓಂದು.
ಪರಿವಿಡಿ |
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಅರ್ಟೋಕಾರ್ಪಸ್ ಹಿರ್ಸೂಟ (Artocarpus hirsuta)ಎಂಬ ಸಸ್ಯಶಾಸ್ತ್ರೀಯ ಹೆಸರುಳ್ಳ ಇದು ಮೊರಾಸಿ (Moraceae)ಕುಟುಂಬಕ್ಕೆ ಸೇರಿದೆ.ಇದಕ್ಕೆ 'ಕಾಡುಹಲಸು','ಕಬ್ ಹಲಸು'ಎಂದೂ ಕರೆಯುತ್ತಾರೆ.ತುಳುಬಾಷೆಯಲ್ಲಿ 'ಪಿಜ'ಎಂದು ಹೆಸರು.
ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]
ಇದರೆ ಎಳೆ ಸಸಿಗಳ ಎಲೆಗಳು ಸೀಳಾಗಿರುತ್ತವೆ.ಬೆಳೆದಂತೆ ಸಮ ಅಂಚಿನ ಅಂಡಾಕಾರದ ಎಲೆಗಳನ್ನು ಕಾಣಬಹುದು.ಉತ್ತಮ ಚೌಬೀನೆ ಜಾತಿಯ ಮರ.ಇದರ ದಾರುವು ಹಳದಿ ಕಂದು ಛಾಯೆ ಹೊಂದಿ ಸಾಧಾರಣ ಗಡಸುತನವನ್ನು ಹೊಂದಿದೆ.ಸಾಧಾರಣ ಹೊಳಪು ಬರುತ್ತದೆ.ತೇವಾಂಶ ಕಡಿಮೆಯಾದಂತೆ ಕಡುಕಂದು ಬಣ್ಣಕ್ಕೆ ತಿರುಗುತ್ತದೆ.
ಉಪಯೋಗಗಳು [ಬದಲಾಯಿಸಿ]
ಇದು ಒಂದು ಉತ್ತಮ ಜಾತಿಯ ಚೌಬೀನೆ ಮರ.ದೋಣಿಗಳ ನಿರ್ಮಾಣ,ಪಿಠೋಪಕರಣಗಳ ತಯಾರಿಯಲ್ಲಿ,ಗೃಹನಿರ್ಮಾಣದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಉತ್ತಮ ದರ್ಜೆಯ ಪದರಹಲಗೆಗಳ ತಯಾರಿಯಲ್ಲಿ ಬಳಕೆಯಲ್ಲಿದೆ.
ಅಧಾರ ಗ್ರಂಥಗಳು [ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ ೨.ಹಸಿರು ಹೊನ್ನು.ಬಿ.ಜಿ.ಎಲ್.ಸ್ವಾಮಿ