ಹುಣಸೆ
| ಹುಣಸೆ | |||||||||||||||||||
|---|---|---|---|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||||||
|
|||||||||||||||||||
|
|
|||||||||||||||||||
| ಟಮರಿಂಡಸ್ ಇಂಡಿಕ L. |
|||||||||||||||||||
|
|
ಹುಣಸೆ (Tamarind) ಎಲ್ಲರಿಗೂ ಪರಿಚಿತ ಸಾಂಬಾರ ಪದಾರ್ಥ.ಇದರ ಮರ ಮೂಲತ:ಆಫ್ರಿಕಖಂಡದ ಪೂರ್ವ ಭಾಗ.ಬಹಳ ಹಿಂದೆಯೇ ಇದು ಭಾರತಕ್ಕೆ ಪರಿಚಯಿಸಲ್ಪಟ್ಟಿತು.ಇದು ಈಗ ಭಾರತದೆಲ್ಲೆಡೆ ಸಾಲು ಮರಗಳಾಗಿ,ನೆಡುತೋಪುಗಳಾಗಿ ಬೆಳಸಲ್ಪಡುತ್ತಿದೆ.
ಪರಿವಿಡಿ |
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಇದು ಫಬಸಿ ಕುಟುಂಬದಲ್ಲಿ ಕಾಸಲ್ಪೀನಿಯೆ (Caesalpinieae)ಉಪಕುಟುಂಬಕ್ಕೆ ಸೇರಿದ್ದು,'ಟಮರಿಂಡಸ್ ಇಂಡಿಕ 'ಎಂದು ಸಸ್ಯಶಾಸ್ತ್ರೀಯ ಹೆಸರಿದೆ.ಅರೇಬಿಕ್ ಭಾಷೆಯಲ್ಲಿ 'ಟಮರ್-ಹಿಂಡಿ'ಎಂಬ ಹೆಸರಿದ್ದು,ಇದೇ ಆಂಗ್ಲ ಭಾಷೆಯ 'tamarind'ಎಂದಾಗಿದೆ.
ಸಸ್ಯದ ಗುಣಲಕ್ಷಣಗಳು [ಬದಲಾಯಿಸಿ]
ದೊಡ್ಡಗಾತ್ರದ ಮರ.ದುಂಡನೆಯ ಹಂದರ.ನಿತ್ಯಹರಿದ್ವರ್ಣಿಎನ್ನಬಹುದು.ದಾರುವು ಒತ್ತುಕಣರಚನೆ ಹೊಂದಿ ಬಹಳ ಗಡುಸಾಗಿದೆ.ಕಾಯಿಯಲ್ಲಿ ಟಾರ್ಟಾರಿಕ್ ಆಮ್ಲ ಇರುತ್ತದೆ.
ಉಪಯೋಗಗಳು [ಬದಲಾಯಿಸಿ]
ಇದರ ಹಣ್ಣು ಮುಂಚಿನಿಂದಲೂ ಒಂದು ಸಾಂಬಾರ ಪದಾರ್ಥವಾಗಿದೆ.ಹಣ್ಣು ಹಿತ್ತಾಳೆ ಪಾತ್ರೆಗಳನ್ನು ತೊಳೆಯಲು ಉಪಯೋಗವಾಗುತ್ತದೆ.ಸಾಲು ಮರಗಳಾಗಿ ನೆಡಲು ಉತ್ತಮವಾಗಿದೆ.ಹಣ್ಣು,ಎಲೆ ಹಾಗೂ ತೊಗಟೆ ಔಷಧಗಳ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ.ಹಣ್ಣಿನ ಹಲವಾರು ಬಗೆಯ ಖಾದ್ಯಗಳು ಪ್ರಪಂಚದಾದ್ಯಂತ ಪ್ರಚಲಿತವಾಗಿದೆ. ದಾರುವು ಗಡುಸಾಗಿರುವುದರಿಂದ ಒನಕೆ,ಕೊಡತಿ,ಚರಕಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಆಧಾರ ಗ್ರಂಥಗಳು [ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ