ಹಿಮಯುಗ
ವಿಕಿಪೀಡಿಯ ಇಂದ
(ಹಿಮ ಯುಗ ಇಂದ ಪುನರ್ನಿರ್ದೇಶಿತ)
ಹಲವು ಹಿಮಯುಗಗಳ ಕಾಲದಲ್ಲಿ ಅಂಟಾರ್ಕ್ಟಿಕದ ಉಷ್ಣತೆ ಮತ್ತು ವಿಸ್ತಾರ
ಹಿಮ ಯುಗವು ಭೂಮಿಯ ಹವಾಮಾನದಲ್ಲಿ ಬಹಳ ಕಾಲದವರೆಗೂ ಕಡಿಮೆ ಉಷ್ಣತೆಯುಂಟಾಗಿ, ಧ್ರುವಗಳಲ್ಲಿನ ಮತ್ತು ಪರ್ವತಗಳಲ್ಲಿನ ಮಂಜುಗಡ್ಡೆಯು ಬಹಳ ವಿಸ್ತಾರವಾಗುವ ಪ್ರಕ್ರಿಯೆ.
ಪ್ರಮುಖ ಹಿಮ ಯುಗಗಳು [ಬದಲಾಯಿಸಿ]
ಭೂಮಿಯು ತನ್ನ ಇತಿಹಾಸದಲ್ಲಿ ಕನಿಷ್ಟ ನಾಲ್ಕು ಹಿಮ ಯುಗಗಳನ್ನು ಕಂಡಿದೆ.
- ೨.೭ ರಿಂದ ೨.೩ ಬಿಲಿಯನ್ ವರ್ಷಗಳ ಹಿಂದೆ ಪ್ರೊಟೆರೊಜೊಯಿಕ್ ಕಾಲದಲ್ಲಿ ಮೊದಲ ಹಿಮಯುಗವಾಯಿತೆಂದು ಊಹಿತವಾಗಿದೆ.
- ೮೫೦ ರಿಂದ ೬೩೦ ಮಿಲಿಯನ್ ವರ್ಷಗಳ ಹಿಂದೆ ಪ್ರಾಯಶಃ ಅತ್ಯಂತ ಭೀಕರ ಹಿಮಯುಗ ಆಗಿತ್ತೆಂಬ ಪುರಾವೆ ಇದೆ.
- ೪೬೦ ರಿಂದ ೪೩೦ ಮಿಲಿಯನ್ ವರ್ಷಗಳ ಹಿಂದೆ ಒಂದು ಚಿಕ್ಕ ಹಿಮಯುಗವಾಗಿತ್ತು.
- ಪ್ರಸಕ್ತ ಹಿಮಯುಗವು ೪೦ ಮಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾಯಿತು.