ಹಿಮಜಾಡಿನ ಓಟಸ್ಪರ್ಧೆ(ರೇಸಿಂಗ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಮದ ಜಾಡಿನಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿರುವ ವೋಲ್ಕ್ಸ್ ವ್ಯಾಗನ್ ಬೀಟಲ್

ಹಿಮಜಾಡಿನ ಓಟಸ್ಪರ್ಧೆ(ರೇಸಿಂಗ್) ಕಾರ್ ಗಳು, ಮೋಟರ್ ಸೈಕಲ್ ಗಳು, ಹಿಮವಾಹನಗಳು, ಸರ್ವಪ್ರಕಾರಪ್ರದೇಶ-ವಾಹನಗಳು ಅಥವಾ ಯಂತ್ರೀಕೃತ ವಾಹನಗಳನ್ನು ಬಳಸಿ ನಡೆಸುವ ಒಂದು ಓಟಸ್ಪರ್ಧೆಯ ಪ್ರಕಾರವಾಗಿದೆ. ಈ ಹಿಮಜಾಡಿನ ರೇಸಿಂಗ್ (ಅಥವಾ ಐಸ್ ರೇಸಿಂಗ್) ಹಿಮಗಟ್ಟಿದ ಕೆರೆಗಳು ಅಥವಾ ನದಿಗಳು ಅಥವಾ ಜಾಗರೂಕತೆಯಿಂದ ನಿರ್ಮಿಸಲ್ಪಟ್ಟ ಹಿಮಾಚ್ಛಾದಿತ ಪ್ರದೇಶಗಳಲ್ಲಿ ನಡೆಯುತ್ತದೆ. ಸ್ವಾಭಾವಿಕವಾಗಿ ಮಂಜುಗಡ್ಡೆ ನಿರ್ಮಾಣವಾಲು ಶೀತಲ ವಾತಾವರಣ ಅವಶ್ಯವಾದುದರಿಂದ ಈ ಕ್ರೀಡೆಯು ಕೆನಡಾದ ಎತ್ತರದ ಪ್ರದೇಶಗಳು, ಯುನೈಟೆಡ್ ಸ್ಟೇಟ್ಸ್ ನ ಉತ್ತರಭಾಗ ಹಾಗೂ ಉತ್ತರ ಯೂರೋಪ್ ಗಳಲ್ಲಿ ಹೆಚ್ಚು ಕಾಣಬರುವುದಾದರೂ ಹೆಚ್ಚು ಉಷ್ಣ ವಾತಾವರಣ ಹೊಂದಿರುವ ಪ್ರದೇಶಗಳಲ್ಲೂ ನಿಯಮಿತವಾಗಿ ಒಳಾಂಗಣಕ್ರೀಡೆಯಾಗಿ ಐಸ್ ಹಾಕಿ ರಿಂಕ್ ಗಳಿರುವ ಸ್ಥಳಗಳಲ್ಲಿ ಆಡಲ್ಪಡುತ್ತದೆ(ಮೋಟರ್ ಸೈಕಲ್ ಮತ್ತು ATV ಸ್ಪರ್ಧೆಗಳು ಮಾತ್ರ).[೧] ಉತ್ತರ ಅಮೆರಿಕದ ಪಥ(ಜಾಡು)ಗಳು ವಿವಿಧ ರೀತಿಯವಾಗಿರುತ್ತವೆ, ಇವು ೧/೪ ಮೈಲಿಯಳತೆಯ (~೪೦೦ ಮೀಟರ್) ಅಂಡಾಕಾರದಿಂದ [೨] ಹಲವಾರು ಮೈಲಿಗಳಷ್ಟುದ್ದದ ರಸ್ತೆಯ ಮಾರ್ಗದಂತಹ ವಿನ್ಯಾಸಗಳನ್ನು ಹೊಂದಿರುತ್ತವೆ.

ಜಾಡು[ಬದಲಾಯಿಸಿ]

ಐಸ್ ರೇಸಿಂಗ್ ಗಾಗಿ ಹಲವಾರು ವಿಧದ ಪಥಗಳನ್ನು ಬಳಸಲಾಗುತ್ತದೆ; ಅವುಗಳ ಪೈಕಿ ಅಂಡಾಕಾರ ಮತ್ತು ರಸ್ತೆಯ ಜಾಡುಗಳೂ ಸೇರಿವೆ.[೩] ಈ ಜಾಡುಗಳಲ್ಲಿ ಕೆಲವು ಧೂಳು ಜಾಡಿನ ರೇಸಿಂಗ್ ಗೆ ಬಳಸುವ ಜಾಡುಗಳು; ಈ ಜಾಡುಗಳಲ್ಲಿ ಶೇಖರವಾಗುವ ಹಿಮವನ್ನು ಗುದ್ದಲಿ, ಪಿಕಾಸಿಗಳಂತಹ ಸಲಕರಣೆಗಳನ್ನು ಬಳಸಿ ಹೊರಹಾಕಲಾಗುತ್ತದೆ. ನೈಸರ್ಗಿಕವಾದ ಹಿಮವು ಇಲ್ಲದಿರುವಾಗ, ಹಾಗೂ ವಾತಾವರಣದಲ್ಲಿ ಉಷ್ಣಾಂಶವು ಹಿಮಗಟ್ಟುವಿಕೆಗಿಂತಲೂ ಕಡಿಮೆಯ ಮಟ್ಟದ್ದಾದಾಗ, ಧೂಳಿನ ಪ್ರದೇಶದ ಮೇಲೆ ನೀರನ್ನು ಸಿಂಪಡಿಸುವುದರ ಮೂಲಕ ಆ ಸ್ಥಳವನ್ನು ಹಿಮಾವೃತವಾಗಿಸಬಹುದು. ಕೃತಕ ಹಿಮಜಾಡುಗಳು (ಸಾಮಾನ್ಯವಾಗಿ ಸ್ಪೀಡ್ ಸ್ಕೇಟಿಂಗ್ ಅಂಡಾಕಾರದ ಜಾಡುಗಳು) ನೈಸರ್ಗಿಕ ಹಿಮಜಾಡುಗಳನ್ನು ನಿರ್ಮಿಸಲು ಸಾಧ್ಯವಾಗದ ಸ್ಥಳಗಳಲ್ಲಿ ಬಳಸಲ್ಪಡುತ್ತವೆ. ಕೆಲವು ಜಾಡುಗಳನ್ನು ಹಿಮಗಟ್ಟಿದ ಕೆರೆಯ ಒಂದು ಪ್ರದೇಶದ ಹಿಮವನ್ನು ಹೂಳೆತ್ತುವುದರ ಮೂಲಕ ನಿರ್ಮಿಸಲಾಗುತ್ತದೆ. ಇಂತಹ ಹಿಮಗಟ್ಟಿದ ಕೆರೆಗಳ ಹಿಮಜಾಡಿನ ಹೊರಬದಿಯಲ್ಲಿ ಪ್ರೇಕ್ಷಕರು ಆಗಾಗ್ಗೆ ತಮ್ಮ ಕಾರ್ ಗಳನ್ನು ನಿಲ್ಲಿಸುತ್ತಾರೆ.[೪]

ಯುನೈಟೆಡ್ ಕಿಂಗ್ಡಂನಲ್ಲಿ ಹಲವಾರು ಹಿಮ ಕೂಟಗಳನ್ನು ಹಿಮ ರಿಂಕ್ (ಹಿಮಕ್ರೀಡಾಂಗಣ)ಗಳಲ್ಲಿ ನಡೆಸಲಾಗುತ್ತಿದೆ. ಬಹಳ ದೀರ್ಘಕಾಲ ನಡೆಯುವ, ಟೆಲ್ ಫೋರ್ಡ್ ನಲ್ಲಿ ಜರುಗುವ ಕ್ರೀಡೆಯಲ್ಲಿ ಸವಾರರು ಸಾಂಪ್ರದಾಯಿಕ ಯಂತ್ರಗಳು ಮತ್ತು ಚೂಪುಮೊನೆಯ ಟೈರುಗಳುಳ್ಳ ವಾಹನಗಳನ್ನು ಬಳಸುವುದು ಕಂಡುಬರುತ್ತದೆ. ೧೯೬೦ ರ ಅಂತಿಮಭಾಗದಲ್ಲಿ ಐಸ್ ರೇಸಿಂಗ್ ಅನ್ನು ಸ್ಕಾಟ್ಲೆಂಡ್ ನ ಹಲವಾರು ರಿಂಕ್ ಗಳಲ್ಲಿ ಆಡಲಾಗಿತ್ತು, ಆದರೆ ಅಲ್ಲಿ ಉಪಯೋಗಿಸಿದ ಯಂತ್ರಗಳು (ವಾಹನಗಳು) ರ್ಯಾಲೀ ಮೂಲಕ ಯಂತ್ರಗಳನ್ನು ಹೊಂದಿದ್ದವು ಹಾಗೂ ಋತುಸ್ನೇಹಿ ಟೈರ್ ಗಳನ್ನು ಹೊಂದಿದ್ದವು.

ಟೈರ್ ಗಳು[ಬದಲಾಯಿಸಿ]

ಚೂಪುಮೊಳೆಗಳುಳ್ಳ ಟೈರ್ ನ ಒಂದು ಸಮೀಪನೋಟ

ಹಿಮಜಾಡಿನ ರೇಸಿಂಗ್ ಗೆ ಬಳಸುವ ಟೈರ್ ಗಳು ಮುಳ್ಳುಮೊನೆಯವು ಅಥವಾ ಮುಳ್ಳುಮೊನೆರಹಿತವಾದುವು ಆಗಿರುತ್ತವೆ.[೩] ಕೆಲವು ಮುಳ್ಳುಮೊನೆಯ ಟೈರ್ ಗಳಲ್ಲಿ ಸ್ಕ್ರೂ ಅಥವಾ ಬೋಲ್ಟ್ ತರಹದ ಮೊಳೆಗಳಿದ್ದು ಇವುಗಳು ಉತ್ತಮ ಜಾಡು-ಹಿಡಿತ ಮತ್ತು ಹೆಚ್ಚಿನ ವೇಗವನ್ನು ಪಡೆಯಲು ಅನುಕೂಲಕರವಾಗುತ್ತವೆ.[೪] ಹೆಚ್ಚು ಒಳನುಗ್ಗುವಿಕೆಗೆ ಅನುವಾಗಲು ಕೆಲವು ಮೊಳೆಗಳನ್ನು ಚೂಪು ಮಾಡಲಾಗುತ್ತದೆ.[೪] ಮುಳ್ಳುಮೊನೆಗಳಿರುವಂತೆ (ಅಥವಾ ಮೊಳೆಗಳ ಸಹಿತ) ಿರುವ ಟೈರ್ ಗಳು ಮಾರಾಟಕ್ಕೆ ಲಭ್ಯವಿರುವುದಿಲ್ಲ, ಆದ್ದರಿಂದ ಪಿಟ್ (ರೇಸಿಂಗ್ ಅಂಗಳದ ಪಕ್ಕದಲ್ಲೇ ಇರುವ) ಸಿಬ್ಬಂದಿಗಳು ಈ ಮೊಳೆಗಳನ್ನು ಟೈರ್ ಗಳಿಗೆ ಲಗತ್ತಿಸಬೇಕಾಗುತ್ತದೆ.[೪] ಇದಕ್ಕೆ ಅನುಮತಿಸುವ ಮಂಡಳಿಯು ಸಾಮಾನ್ಯವಾಗಿ ಈ ಮೊಳೆಗಳ ಉದ್ದ ಮತ್ತು/ಅಥವಾ ವಿಧಾನಗಳನ್ನು ತನ್ನ ನಿಯಮಾವಳಿಗಳ ಪುಸ್ತಕದಲ್ಲಿ ಉಲ್ಲೇಖಿಸಿರುತ್ತದೆ. ೨೦೦೮ ನೆಯ ಇಸವಿಯಲ್ಲಿ ವಿಸ್ಕಾನ್ಸಿನ್ ನ ಮೆನಾರ್ಡ್ಸ್ ರೇಸಿಂಗ್ ಸಂಸ್ಥೆಯು ಚೂಪುಮೊಳೆಗಳುಳ್ಳ ರೇಸಿಂಗ್ ಕಾರ್ ಟೈರ್ ಗಳನ್ನು ತಯಾರಿಸಿ, ಮಾರಾಟಮಾಡಿತು ಮಾಗೂ ಹಲವಾರು ಐಸ್-ರೇಸಿಂಗ್ ವರ್ಗಗಳಲ್ಲಿ ಈ ಟೈರ್ ಗಳು ಅವಶ್ಯವಾಗಿದ್ದವು. ಈ ಟೈರ್ ಗಳ ಉತ್ಪಾದನೆ ಈಗ ಸ್ಥಗಿತವಾಗಿದೆ. ಚೂಪುಮೊಳೆಗಳುಳ್ಳ ಟೈರ್ ಗಳನ್ನು ಹೊಂದಿರುವ ಕಾರ್ ಗಳಿಗೆ ಸಾಮಾನ್ಯವಾಗಿ ಒಂದು ರೋಲ್ ಕೇಜ್ (ಉರುಳು ಪಂಜರ)ವನ್ನೂ ಅಳವಡಿಸಲಾಗಿರುವುದಲ್ಲದೆ ಹೆಚ್ಚುವರಿ ಭದ್ರತಾ ಸಲಕರಣೆಗಳನ್ನೂ ಅಳವಡಿಸಲಾಗಿರುತ್ತದೆ; ತಿರುವುಗಳಲ್ಲಿ ಹೆಚ್ಚು ವೇಗವನ್ನು ಹೊಂದಿ ಸಾಗುವ ಹಾಗೂ ಇತರೆಡೆಗಳಲ್ಲೂ ಹೆಚ್ಚಿನ ವೇಗವನ್ನು ಹೊಂದುವ ಈ ಟೈರ್ ಗಳನ್ನು ಹೊಂದಿದ ಕಾರ್ ಗಳಿಗೆ ಈ ಅಳವಡಿಕೆಗಳು ಬಹಳ ಅಗತ್ಯ.[೩]

ಮೊಳೆರಹಿತ ಟೈರ್ ಗಳು ಸಾಮಾನ್ಯವಾಗಿ ಉತ್ಪಾದನೆಗೊಳ್ಳುವ ಹಿಮ ಟೈರ್ ಗಳಾಗಿದ್ದು, ಶೀತಲ ವಾತಾವರಣಗಳಲ್ಲಿ ಪ್ರವಾಸಿ ಕಾರ್ ಗಳು ಹೆದ್ದಾರಿಗಳಲ್ಲಿ ಬಳಸುವ ಟೈರ್ ಗಳಂತೆಯೇ ಇರುತ್ತವೆ. ಚಾಲಕರು ಸಾಮಾನ್ಯವಾಗಿ ಚಳಿಗಾಲದ ಟೈರ್ ಗಳನ್ನು ಬಳಸುತ್ತಾರೆ.[೩] ಐಸ್-ರೇಸರ್ ಗಳಿಗೆ ಪ್ರಿಯವಾದ ಟೈರ್ ಗಳ ಪೈಕಿ ಬ್ರಿಡ್ಜ್ ಸ್ಟೋನ್ ಬಿಝಾಕ್ಸ್ ಮತ್ತು ನೋಕಿಯಾನ್ ಹಕ್ಕಾಪೆಲಿಟ್ಟಾಸ್ ಗಳು ಪ್ರಮುಖವಾದವು.

ಮೋಟರ್ ಸೈಕಲ್ ಐಸ್ ರೇಸಿಂಗ್[ಬದಲಾಯಿಸಿ]

ಮೋಟರ್ ಸೈಕಲ್ ಹಿಮರಸ್ತೆ ರೇಸಿಂಗ್
ಚೂಪುಮೊಳೆಸಹಿತ ಟೈರ್ ಗಳನ್ನು ಬಳಸಿದ ಮೋಟರ್ ಸೈಕಲ್ ಐಸ್ ರೇಸಿಂಗ್

ಐಸ್ ರೇಸಿಂಗ್ ನಲ್ಲಿ ಮೋಟರ್ ಸೈಕಲ್ ಶ್ರೇಣಿಯೂ ಇದ್ದು, ಇದನ್ನು ಹಿಮದ ಮೇಲಿನ ಕ್ಷಿಪ್ರಪಥಕ್ಕೆ ಸರಿಸಮವಾದುದು ಎನ್ನಬಹುದು. ಸುಮಾರು 260 m (0.16 mi) ರಿಂದ 425 m (0.264 mi) ವರೆಗೆ ಉದ್ದವಾರಿರುವ ಅಂಡಾಕಾರದ ಪಥ(ಜಾಡು)ಗಳಲ್ಲಿ, ಗಡಿಯಾರ ನಡೆಯುವುದರ ವಿರುದ್ಧ ದಿಕ್ಕಿನಲ್ಲಿ ಬೈಕ್ ಗಳು ಕ್ಷಿಪ್ರವಾಗಿ ಚಲಿಸುತ್ತವೆ. ಈ ರೇಸ್ ನ ನಿಯಮಗಳು/ವಿಧಿ ಮತ್ತು ಸ್ಕೋರ್ ಮಾಡುವ ರೀತಿಗಳು ಕ್ಷಿಪ್ರಪಥದಲ್ಲಿ ಹೇಗೋ ಹಾಗೆಯೇ ಇರುವಂತಹವಾಗಿವೆ.

ಈ ಬೈಕ್ ಗಳು ಕ್ಷಿಪ್ರಪಥ (ಸ್ಪೀಡ್ ವೇ) ಗಳಲ್ಲಿ ಬಳಸುವ ಬೈಕ್ ಗಳನ್ನು ಕೊಂಚ ಹೋಲುವುವಾದರೂ ಚಕ್ರದ ತಳಭಾಗವು ಹೆಚ್ಚು ದೀರ್ಘವಾಗಿರುತ್ತದೆ ಹಾಗೂ ಚೌಕಟ್ಟು ಹೆಚ್ಚು ಭದ್ರವಾದದ್ದಾಗಿರುತ್ತದೆ. ಟೈರ್ ಗಳ ಆಧಾರದ ಮೇಲೆ ಈ ಕ್ರೀಡೆಯನ್ನು ಸಂಪೂರ್ಣ-ರಬ್ಬರ್ ಮತ್ತು ಚೂಪುಮೊಳೆಸಹಿತ ಟೈರ್ ಗಳಿಗೆಂದು ವರ್ಗೀಕರಿಸಲಾಗಿದೆ. ಚೂಪುಮೊಳೆಸಹಿತ ಟೈರ್ ವರ್ಗದಲ್ಲಿ ಸ್ಪರ್ಧಿಗಳು 30 millimetres (1.2 in) ಉದ್ದವಾದ ಚೂಪುಮೊಳೆಗಳುಳ್ಳ ಬೈಕ್ ಗಳ ಮೇಲೆ ಸವಾರಿ ಮಾಡುವರು; ಈ ಮೊಳೆಗಳನ್ನು ಟ್ರೆಡ್-ರಹಿತ ಟೈರ್ ಗಳಿಗೆ ಸ್ಕ್ರೂಗಳಿಂದ ಬಂಧಿಸಲಾಗುತ್ತದೆ. ಪ್ರತಿ ಬೈಕ್ ನ ಮುಂದಿನ ಟೈರ್ ನಲ್ಲಿ ೯೦ ಮೊಳೆಗಳೂ, ಹಿಂದಿನ ಚಕ್ರದಲ್ಲಿ ೨೦೦ ರಿಂದ ೨೫೦ ಮೊಳೆಗಳೂ ಇರುತ್ತವೆ. ಈ ವಿಧದಲ್ಲಿ ಮೊಳೆಗಳನ್ನು ಬಳಸಿದಾಗ ಚಕ್ರಗಳ ಮೇಲೆ ಹೆಚ್ಚುವರಿ ವಿಶೇಷ ಭದ್ರತಾ ಕವಚಗಳನ್ನು (ಮಡ್ ಗಾರ್ಡ್ ಗಳಂತಹವು) ಅಳವಡಿಸುವುದು ಅಗತ್ಯವಾಗುತ್ತದೆ ಹಾಗೂ ಈ ಕವಚಗಳು ಸುಮಾರು ಹಿಮದ ಪದರದವರೆಗೆ ಚಾಚಿಕೊಂಡಿರುತ್ತವೆ. ಈ ಮೊಳೆಸಹಿತ ಟೈರ್ ಗಳು ತೀವ್ರಪ್ರಮಾಣದ ಎಳೆತವನ್ನು ಉಂಟುಮಾಡುವುದರಿಂದ ದ್ವಿ-ವೇಗಿ ಗೇರ್ ಬಾಕ್ಸ್ ಗಳೂ ಅವಶ್ಯವಾಗುತ್ತವೆ. ರೇಸ್ ಕೋರ್ಸ್ ಗಳಂತೆಯೇ, ಇಲ್ಲೂ ಸಹ ಬೈಕ್ ಗಳಿಗೆ ಬ್ರೇಕ್ ಗಳು ಇರುವುದಿಲ್ಲ. ಐತಿಹಾಸಿಕವಾಗಿ, ಝೆಕ್ ಉತ್ಪಾದಿತ ೪-ಸ್ಟ್ರೋಕ್ ಜಾವಾ ಮೋಟರ್ ಸೈಕಲ್ ಗಳು ಈ ಕ್ರೀಡೆಯಲ್ಲಿ ಹೆಚ್ಚಿನ ಯಶವನ್ನು ಗಳಿಸಿವೆ.

ಚೂಪುಮೊಳೆಸಹಿತವಿರುವ ಟೈರ್ ಗಳ ವರ್ಗದಲ್ಲಿ ಚೂಪುಮೊಳೆಗಳು ಮಂಜಿನಲ್ಲಿ ಹುದುಗುವುದರಿಂದ ಉಂಟಾದ ಹಿಡಿತದಿಂದ ತಿರುವುಗಳಲ್ಲಿ ಸಂಪೂರ್ಣವಾಗಿ ತಿರುಗಬೇಕಾದ ದಿಕ್ಕಿನಲ್ಲಿನ ವಾಹನದ ಭಾಗವನ್ನು ನೆಲಕ್ಕೆ ವಾಲಿಸಿ ಮುಂದುವರೆಯುವುದು ಕಷ್ಟಸಾಧ್ಯವಾಗುತ್ತದೆ. ಇದರ ಬದಲಿಗೆ ಸವಾರರು ಬೈಕ್ ಗಳನ್ನು ತಿರುವುಗಳಲ್ಲಿ ಹ್ಯಾಂಡಲ್ ಬಾರ್ ಜಾಡಿನ ಮಟ್ಟವನ್ನು ತೆಳುವಾಗಿ ಉಜ್ಜಿಕೊಂಡುಹೋಗುವ ಮಟ್ಟಕ್ಕೆ ಬೇಕಾದ ಕೋನದವರೆಗೆ ಬಾಗಿಸುತ್ತಾರೆ. ನೇರವಾದ ಹಾದಿಗಳಲ್ಲಿ ವೇಗವು 80 mph (130 km/h) ಅನ್ನು ತಲುಪುತ್ತದೆ. ತಿರುವುಗಳಲ್ಲಿ 60 mph (97 km/h) ವೇಗವನ್ನು ತಲುಪುತ್ತದೆ. ಹುಲ್ಲಿನ ಬಣವೆಗಳು ಅಥವಾ ಒಟ್ಟುಗಟ್ಟಿದ ಹಿಮ ಮತ್ತು ಮಂಜುಗಡ್ಡೆಗಳನ್ನು ಜಾಡಿನ ಹೊರತುದಿಗಳಲ್ಲಿ ರಕ್ಷಣಾ ಗೋಡೆಗಳಾಗಿ ಪೇರಿಸಲಾಗುತ್ತದೆ.

ಚೂಪುಮೊನೆಯ ಮೊಳೆಗಳುಳ್ಳ ಟೈರ್ ಗಳುಳ್ಳ ವಾಹನಗಳನ್ನು ಐಸ್ ರೇಸಿಂಗ್ ನಲ್ಲಿ ಓಡಿಸುವ ಶೈಲಿಯು ಇತರ ಜಾಡು ಓಟಸ್ಪರ್ಧೆ (ಟ್ರ್ಯಾಕ್ ರೇಸಿಂಗ್) ಗಳಿಗಿಂತ ಬಹಳ ವಿಭಿನ್ನವಾದುದಾಗಿದೆ. ಆದ್ದರಿಂದ ಈ ರೇಸಿಂಗ್ ನ ವಾಹನಸವಾರರು ಇತರ ರೇಸಿಂಗ್ ಗಳಲ್ಲಿ ಭಾಗವಹಿಸಿವುದು ವಿರಳ; ಹಾಗೆಯೇ ಇತರ ರೇಸ್ ವಾಹನ ಚಾಲಕರೂ ಈ ಸ್ಪರ್ಧೆಗಳಲ್ಲಿ ವಾಹನ ಸವಾರರಾಗಿ ಭಾಗವಹಿಸುವುದು ವಿರಳ.

ಫೆಡೆರೇಷನ್ ಇಂಟರ್ನ್ಯಾಷನೇಲ್ ಡಿ ಮೋಟಾರ್ಸೈಕ್ಲಿಸ್ಮೆ ಮಂಜೂರುಮಾಡಿದ ಬಹುತೇಕ ತಂಡಗಳ ಮತ್ತು ವ್ಯಕ್ತಿಗಳ ಭೇಟಿಗಳನ್ನು ರಷ್ಯಾ, ಸ್ವೀಡನ್ ಮತ್ತು ಫಿನ್ ಲ್ಯಾಂಡ್ ಗಳಲ್ಲಿ ಏರ್ಪಡಿಸಲಾಗುತ್ತದೆ, ಆದರೆ ಸ್ಪರ್ಧೆಯಂತಹ ಕಾರ್ಯಕ್ರಮಗಳನ್ನು ಝೆಕ್ ರಿಪಬ್ಲಿಕ್, ಜರ್ಮನಿ, ಹಂಗೇರಿ (೨೦೦೦ ದಿಂದ ಈಚೆಗೆ), ನೆದರ್ಲ್ಯಾಂಡ್ಸ್, ಹಾಗೂ ಸಾಂದರ್ಭಿಕವಾಗಿ ಇತರ ದೇಶಗಳಲ್ಲಿ ನಡೆಸಲಾಗುತ್ತದೆ. ವೈಯಕ್ತಿಕ ಐಸ್ ರೇಸಿಂಗ್ ವಿಶ್ವ ಚಾಂಪಿಯನ್ ಷಿಪ್ (೧೯೬೬ ರಿಂದ ಹಮ್ಮಿಕೊಳ್ಳಲಾದದ್ದು) ಮತ್ತು ತಂಡಗಳ ಐಸ್ ರೇಸಿಂಗ್ ವಿಶ್ವ ಚಾಂಪಿಯನ್ ಷಿಪ್ (೧೯೭೯ರಿಂದ ಹಮ್ಮಿಕೊಳ್ಳಲಾದದ್ದು)ಗಳಲ್ಲಿ ಮೇಲುಗೈ ಸಾಧಿಸಿ ಬಹುತೇಕ ಪಂದ್ಯಾವಳಿಗಳನ್ನು ಗೆದ್ದ ತಂಡಗಳೆಂದರೆ USSR ಹಾಗೂ ೧೯೯೧ರಿಂದ—ರಷ್ಯಾ.[೫] ಕೆನಡಾದ ರಾಷ್ಟ್ರೀಯ ಪ್ರವಾಸ ಸರಣಿಯನ್ನು ಕೆನಡಿಯನ್ ಮೋಟರ್ ಸೈಕಲ್ ಅಸೋಸಿಯೇಷನ್ ಮಂಜೂರುಮಾಡಿದೆ.

ಆಟೊಮೊಬೈಲ್ (ವಾಹನ) ಐಸ್ ರೇಸಿಂಗ್[ಬದಲಾಯಿಸಿ]

ವಾಹನಗಳಿಗೆ ಅಳವಡಿಸಿದ ಚೂಪುಮೊಳೆಸಹಿತ ಟೈರ್ ಗಳು ನಿಯಮಿತ ಗೋಚರತೆಯನ್ನು ಉಂಟುಮಾಡುತ್ತಿರುವುದು.

ವಾಹನಗಳ ಐಸ್ ರೇಸಿಂಗ್ ಫ್ರ್ಯಾನ್ಸ್ ನಲ್ಲಿ ಬಹಳ ಯಶಸ್ಸನ್ನು ಕಂಡಿದೆ; ಅಲ್ಲಿ ನಡೆಯುವ ಟ್ರೋಫೀ ಆಂಡ್ರೋಸ್ ಸರಣಿಯಲ್ಲಿ ಮಾಜಿ-F೧ ವಾಹನ ಚಾಲಕರಾದ ಅಲೇಯ್ನ್ ಪ್ರಾಸ್ಟ್, ಒಲಿವಿಯರ್ ಪಾನಿಸ್ ಮುಂತಾದವರನ್ನು ಆಕರ್ಷಿಸಿತು; ಈ ಸರಣಿಯಲ್ಲಿ ಉತ್ಪಾದಕ-ಬೆಂಬಲಿತ ೪WDಯಂತಹ ಗುಣಸಂಕರವಿರುವ ಕಾರ್ ಗಳು ಭಾಗವಹಿಸಿದವು; ಅಂತಾರಾಷ್ಟ್ರೀಯ ಟೆಲಿವಿಷನ್ ಪ್ರಸಾರಗೊಂಡ ಈ ಸರಣಿಯನ್ನು ಕೈಗಾರಿಕಾ ಜ್ಯಾಮ್ ತಯಾರಿಕಾ ಸಂಸ್ಥೆಯೊಂದು ಪ್ರಾಯೋಜಿಸಿತು. ವಾಸ್ತವವಾಗಿ ಟ್ರೋಫೀ ಆಂಡ್ರೋಸ್ ರೇಸ್ ಗಳಲ್ಲಿ ಒದ್ದೆಯಾದ ಹಿಮ(ಕಾರ್ ಚಲಾಯಿಸಲು ಮುಂಜಿಗಿಂತಲೂ ಹೆಚ್ಚಿನ ವ್ಯತ್ಯಾಸವಿಲ್ಲದಂತಹದ್ದು)ದ ಜಾಡುಗಳನ್ನೇ ಫ್ರೆಂಚ್ ಸ್ಕೀ ತಾಣಗಳಲ್ಲಿ ಬಳಸಲಾಗುತ್ತದೆ ಹಾಗೂ ಕಡೆಯ ರೇಸ್ ಅನ್ನು ಪ್ಯಾರಿಸ್ ನ ಸ್ಟೇಡ್ ಡಿ ಫ್ರ್ಯಾನ್ಸ್ ನಲ್ಲಿ ಕೃತಕ ಹಿಮದ ಮೇಲೆ ಏರ್ಪಡಿಸಲಾಗುತ್ತದೆ. ೨೦೦೬ರ ಟ್ರೋಫಿ(ಪಾರಿತೋಷಕ)ಯು ಆಂಡೋರಾದ ಒಂದು ಸುತ್ತನ್ನೂ ಒಳಗೊಂಡಿದೆ. ಹಲವಾರು ಸಂದರ್ಭಗಳಲ್ಲಿ ಈ ಸರಣಿಯ ಒಂದು ಸುತ್ತು ಕೆನಡಾದಲ್ಲೂ ನಡೆಯುತ್ತದೆ; ಇದು ಕೆನಡಿಯನ್ ಚಾಲೆಂಜ್ ನಲ್ಲಿ ನಡೆಯುವಂತಹದ್ದಾಗಿರುತ್ತದೆ; ವಾರ್ಷಿಕವಾಗಿ ಹಮ್ಮಿಕೊಳ್ಳುವ ಈ ಸರಣಿಯು ಉತ್ತರ ಅಮೆರಿಕದ ಬಹು ಮುಖ್ಯವಾದ ಐಸ್ ರೇಸಿಂಗ್ ಪ್ರದರ್ಶನವಾಗಿದೆ.

೧೯೬೦ ಮತ್ತು ೧೯೭೦ ರ ದಶಕಗಳಲ್ಲಿ ಎರಡು ಪ್ರಮುಖ ರೇಸಿಂಗ್ ಚಾಂಪಿಯನ್ ಷಿಪ್ ಗಳಿದ್ದವು; ಉತ್ತರ ಅಮೆರಿಕದ ಐಸ್ ರೇಸಿಂಗ್ ಚಾಂಪಿಯನ್ ಷಿಪ್ ಮತ್ತು ಯೂರೋಪಿಯನ್ ಐಸ್ ರೇಸಿಂಗ್ ಚಾಂಪಿಯನ್ಷಿಪ್. ಉತ್ತರ ಅಮೆರಿಕದ ಕ್ರೀಡೆಯನ್ನು ಆಂಕೊರೇಜ್, ಅಲಾಸ್ಕಾದಲ್ಲಿ ನಡೆಸಲಾಗುತ್ತಿತ್ತು ಹಾಗೂ ಅದರ ವಿಜೇತರ ಪಟ್ಟಿಯಲ್ಲಿ ಎರ್ಲ್ ಬೆನೆಟ್ ಮತ್ತು ಚಕ್ ಹಿಗ್ಗಿನ್ಸ್ ರಂತಹವರಿದ್ದಾರೆ. ಮೆಕ್ಸಿಕೋದ F1 ಚಾಲಕ ಪೆಡ್ರೋ ರಾಡ್ರಿಗ್ವೆಝ್ ತಮ್ಮ ವರ್ಗ ಮತ್ತು ಪ್ರದರ್ಶನ ರೇಸ್ ಅನ್ನು ೧೯೭೦ ರಲ್ಲಿ ಗೆದ್ದರು ಹಾಗೂ ಇದು ಅವರ ಸರ್ವಕಾಲಿಕ ದ್ವಿತೀಯ ಜಯವಾಗಿತ್ತು.

ಇತರ ಜಾಗಗಳಲ್ಲಿ ಐಸ್ ರೇಸಿಂಗ್ ಹೆಚ್ಚಾಗಿ ಮೋಜಿನ ಕ್ರೀಡೆಯೆಂದೇ ಸಾಬೀತಾಗಿದೆ. ಉತ್ತರ ಅಮೆರಿಕದಲ್ಲಿ ವೃತ್ತಿಪರ ಐಸ್ ರೇಸಿಂಗ್ ಅನ್ನು ಮಂಜೂರು ಮಾಡುವ ಯಾವುದೇ ಸಂಸ್ಥೆಯಿಲ್ಲ,[೩] ಆದರೆ ಕೆನಡಾದ ಹಲವಾರು ಪ್ರಾಂತ್ಯಗಳಲ್ಲಿ (ಆಲ್ಬರ್ಟಾ, ಆಂಟಾರಿಯೋ, ಮನಿಟೋಬಾ, ಕ್ಯುಬೆಕ್, ಸಾಸ್ಕಷೆವಾನ್) ಮತ್ತು ಅಮೆರಿಕದ ರಾಜ್ಯಗಳಲ್ಲಿ (ನ್ಯೂ ಯಾರ್ಕ್, ಮಿಚಿಗನ್, ಮೇಯ್ನ್, ವಿಸ್ಕಾನ್ಸಿನ್, ಮಿನ್ನೆಸೋಟಾ) ಹಲವಾರು ಕ್ರಿಯಾಶೀಲ ಕ್ಲಬ್ ಗಳಿವೆ. ಕೆಲವು ಹವ್ಯಾಸಿ ಮತ್ತು ವೃತ್ತಿಪರ ಧೂಳು ಜಾಡು ಮತ್ತು ಸುಗಮಗೊಳಿಸಿದ ಜಾಡಿನ ರೇಸರ್ ಗಳು ಐಸ್ ರೇಸಿಂಗ್ ಅನ್ನು ತಮ್ಮ ಕೌಶಲವನ್ನು ವೃದ್ಧಿಗೊಳಿಸಿಕೊಳ್ಳಲು ಅಥವಾ ಬೇಸಿಗೆಗಾಗಿ ಅಭ್ಯಾಸ ಮಾಡಲು ಬಳಸಿಕೊಳ್ಳುತ್ತಾರೆ.[೩][೪]

ಕೆನಡಾದಲ್ಲಿ SS (ಸ್ಟ್ರೀಟ್ ಸ್ಟಡ್ಸ್) ಎಂಬ ಹೊಸ ವಿಧಾನವೊಂದು ಆರಂಭವಾಗಿದ್ದು, ಇದರಲ್ಲಿ ರಬ್ಬರ್ ಐಸ್ ವರ್ಗದ ರೀತಿಯ ಬದಲಾವಣೆಗಳನ್ನೇ ಅಳವಡಿಸಲಾಗುತ್ತದೆ, ಆದರೆ ರೋಲ್ ಬಾರ್ ನ ಅಗತ್ಯ ಮಾತ್ರ ಇರುವುದಿಲ್ಲ.[೬] ಕೆಲವು ಕ್ಲಬ್ ಗಳು ತಮ್ಮ ದೈನಂದಿನ ಚಾಲಕನನ್ನೂ ಐಸ್ ರೇಸ್ ಗೆ ಕಳುಹಿಸಲು ಸಾರ್ವಜನಿಕರನ್ನು ಪ್ರೇರೇಪಿಸುತ್ತವೆ ಹಾಗೂ ಆ ರಕ್ಷಣೆಯನ್ನು ಒದಗಿಸುವ ಸಲುವಾಗಿ ಕಟ್ಟುನಿಟ್ಟಾದ ಸಂಪರ್ಕನಿಷೇಧ ನಿಯಮಗಳನ್ನು ಹೊಂದಿವೆ.[೭]

ರಷ್ಯಾದಲ್ಲಿ ನಾರ್ದ್ರನ್ ಫಾರೆಸ್ಟ್ ಎಂಬ ಒಂದು ರ್ಯಾಲಿ ರೈಡ್ ಸ್ಪರ್ಧೆಯಿದೆ; ಇದನ್ನು ಮಂಜು ಮತ್ತು ಹಿಮದ ಮೇಲೆ, ಫೆಬ್ರವರಿಯ ಕೊನೆಯ ದಿನಗಳಲ್ಲಿ, ಸೇಂಟ್ ಪೀಟರ್ಸ್ಬರ್ಗ್ ನಗರದ ಹೊರವಲಯಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಇದಲ್ಲದೆ ರಷ್ಯಾದಲ್ಲಿ ಬಹಳ ಜನಪ್ರಿಯವಾದ ಚಳಿಕಾಲದ ಟ್ರ್ಯಾಕ್ ರೇಸಿಂಗ್ ಸಹ ನಡೆಯುವುದು; ಚಳಿಗಾಲದಲ್ಲಿ ಹಿಮಾವೃತವಾದ ಸಣ್ಣ ಅಂಡಾಕಾರದ ಜಾಡುಗಳಲ್ಲಿ, ಸಾಮಾನ್ಯವಾಗಿ ಕುದುರೆ, ರಥಗಳ ರೇಸ್ ನಡೆಯುವ ಅಂಗಣಗಳಲ್ಲಿ, ಈ ರೇಸ್ ನಡೆಯುತ್ತದೆ.[೮]

ಸಾಂಪ್ರದಾಯಿಕ ರ್ಯಾಲೀಯಿಂಗ್ ಹಿಮದ ಮೇಲೂ ನಡೆಯುತ್ತದೆ. ಈ ವಿಷಯದಲ್ಲಿ ಬಹಳ ಪ್ರಮುಖವಾಗಿ ಗಮನಕ್ಕೆ ಬರುವ ಸಂಗತಿಯೆಂದರೆ, ಮಾಂಟೆ ಕಾರ್ಲೋ ರ್ಯಾಲಿಯಲ್ಲಿ ರಸ್ತೆಗೆ ಕೆಲವೊಮ್ಮೆ ಹಿಮ ಮತ್ತು ಮಂಜಿನ ಹೊದಿಕೆಯನ್ನು ನೀಡಲಾಗುತ್ತದೆ. ಈ ವಿಧವನ್ನು ಮಿಚಿಗನ್ ನ ಸ್ನೋ ಡ್ರಿಫ್ಟ್ ರ್ಯಾಲಿ ಯಲ್ಲೂ ಕಾಣಬಹುದು.

ರೇಸ್ ವಾಹನ[ಬದಲಾಯಿಸಿ]

ರೇಸಿಂಗ್ ವಾಹನಗಳು ಹಲವಾರು ಶ್ರೇಣಿಗಳದ್ದಾಗಿವೆ. ಸಾಮಾನ್ಯವಾಗಿ ಈ ವಾಹನಗಳನ್ನು ಚೂಪುಮೊಳೆಸಹಿತ ಅಥವಾ ಚೂಪುಮೊಳೆರಹಿತ ಟೈರ್ ಶ್ರೇಣಿಗಳಾಗಿ ವಿಂಗಡಿಸಲಾಗುತ್ತದೆ. ಸರಿಸುಮಾರು ಎಲ್ಲಾ ಧೂಳುಜಾಡಿನ ರೇಸಿಂಗ್ ವಾಹನಗಳನ್ನೂ ಹಿಮದ ಜಾಡಿನ ರೇಸಿಂಗ್ ನಲ್ಲೂ ಉಪಯೋಗಿಸಬಹುದು. ಚಿಮ್ಮು ಹಿಮ ಮತ್ತು ಮಂಜುಗಡ್ಡೆಯ ಪುಡಿ ಗೋಚರತೆಯನ್ನು ಕುಂಠಿತಗೊಳಿಸುತ್ತವೆ, ಆದ್ದರಿಂದ ಕೆಲವು ವಾಹನಗಳಲ್ಲಿ ಪ್ರಕಾಶಮಾನವಾದ ಬೆಳಕಿನ ಅಗತ್ಯತೆ ಇದ್ದು, ಇದು ಸಾಮಾನ್ಯವಾಗಿ ಕೆಂಪು ಅಥವಾ ಹಳದಿ ಬಣ್ಣದ್ದಾಗಿದ್ದು, ಪುಡಿಯ ಮೂಲಕವೂ ಹೆಚ್ಚಿನ ಗೋಚರತೆ ಲಭ್ಯವಾಗುವ ಸಲುವಾಗಿ ಕಾರ್ ನ ಹಿಂಭಾಗದಲ್ಲಿ ಅಳವಡಿಸಲಾಗುತ್ತದೆ.[೩][೪]

ಚೂಪುಮೊಳೆರಹಿತ ಕಾರ್ ಗಳನ್ನು ಅವುಗಳ ತೂಕದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ, ಏಕೆಂದರೆ ಈ ವಿಧದ ಕಾರ್ ಗಳು ತಿರುವುಗಳಲ್ಲಿ ಹೆಚ್ಚಿನ ವೇಗವನ್ನು ಭರಿಸಲಾರವು ಜಾರಿಕೆ ಇರುವ ನೆಲದ ಮೇಲೆ ಹೆಚ್ಚಿನ ತ್ವರಿತತೆಯನ್ನು ಹೊಂದುವಲ್ಲಿ ಅಸಮರ್ಥವಾಗುತ್ತವೆ.[೩] ಸಾಮಾನ್ಯವಾಗಿ ಕಡಿಮೆ ತೂಕದ, ಮುಂಚಕ್ರ ಚಾಲಿತ ಕಾರ್ ಗಳು ಅತಿ ಹೆಚ್ಚು ವೇಗದ ಕಾರ್ ಗಳಾಗಿರುತ್ತವೆ.[೩]

ಚಲನಚಿತ್ರಗಳಲ್ಲಿ ಐಸ್ ರೇಸಿಂಗ್[ಬದಲಾಯಿಸಿ]

1969ಜೇಮ್ಸ್ ಬಾಂಡ್ ಚಿತ್ರ ಆನ್ ಹರ್ ಮೆಜೆಸ್ಟೀಸ್ ಸೀಕ್ರೆಟ್ ಸರ್ವೀಸ್ ನಲ್ಲಿ ಜಾರ್ಜ್ ಲ್ಯಾಝೆನ್ಬೀ ಮತ್ತು ಡಯಾನಾ ರಿಗ್ ತಮ್ಮನ್ನು ಬೆಂಬತ್ತಿದವರಿಂದ ತಪ್ಪಿಸಿಕೊಳ್ಳುವ ದೃಶ್ಯದಲ್ಲಿ ಐಸ್ ರೇಸಿಂಗ್ ಅನ್ನು ತೋರಿಸಲಾಗಿತ್ತು. ಈ ಜಾಡು ಸ್ವಿಟ್ಝರ್ಲ್ಯಾಂಡ್ ನಲ್ಲಿದ್ದಿತು.[೩]

ಬ್ರೂಸ್ ಬ್ರೌನ್ ರ ಸಾಕ್ಷ್ಯಚಿತ್ರವಾದ ಆನ್ ಎನಿ ಸಂಡೆಯಲ್ಲೂ ಮೋಟರ್ ಸೈಕಲ್ ಹಿಮಜಾಡಿನ ರೇಸಿಂಗ್ ನ ತುಣುಕುಗಳನ್ನು ಕಾಣಬಹುದು.

ಮಾಧ್ಯಮ[ಬದಲಾಯಿಸಿ]

ಉಲ್ಲೇಖಗಳು‌‌[ಬದಲಾಯಿಸಿ]

  1. "ಅಂತರರಾಷ್ಟ್ರೀಯ ಚಾಂಪಿಯನ್ ಷಿಪ್ ಕಾರ್ಯಕ್ರಮಗಳು"
  2. "ವಾರಾಂತ್ಯದ ಯೋಧ: ಮೋಟರ್ ಸೈಕಲ್ ಹಿಮಜಾಡು ರೇಸಿಂಗ್ - ದ ಬಾಯ್ಸ್ ಆಫ್ ವಿಂಟರ್" Archived 2007-02-03 ವೇಬ್ಯಾಕ್ ಮೆಷಿನ್ ನಲ್ಲಿ. ಮಿಚ್ ಬ್ರೌನ್; ಡರ್ಟ್ ರೈಡರ್ ಪತ್ರಿಕೆ; ಪುನಶ್ಚೇತನ ಫೆಬ್ರವರಿ ೧, ೨೦೦೭
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ Markus, Frank. "Racing Fast 'n' Cheap: Ice Racing". Motor Trend. Archived from the original on 2011-06-04. Retrieved 2008-09-30.
  4. ೪.೦ ೪.೧ ೪.೨ ೪.೩ ೪.೪ ೪.೫ Scott Owens (2007), Ice Racing is HOT on Lake Speed, Fastrax Monthly {{citation}}: Unknown parameter |month= ignored (help)
  5. ಸ್ಪೀಡ್ ವೇ FAQ: ವರ್ಲ್ಡ್ ಚಾಂಪಿಯನ್ಸ್
  6. CASC ಆಂಟಾರಿಯೋ - ಮೂಲಪುಟ
  7. ""AMEC ಗೆಟಿಂಗ್ ಸ್ಟಾರ್ಟೆಡ್"". Archived from the original on 2011-07-28. Retrieved 2011-06-07.
  8. "ಆರ್ಕೈವ್ ನಕಲು". Archived from the original on 2009-08-28. Retrieved 2011-06-07.
  • ಪಾಪ್, ಡೆನಿಸ್ (೧೯೭೩) ಐಸ್ ರೇಸಿಂಗ್ , ISBN ೦-೮೨೨೫-೦೪೦೩-೦

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]