ಹಾರಂಗಿ
ವಿಕಿಪೀಡಿಯ ಇಂದ
ಹಾರಂಗಿ ಕಾವೇರಿ ನದಿಯ ಮುಖ್ಯ ಉಪನದಿಗಳಲ್ಲೊಂದು. ಇದಕ್ಕೆ ಸುವರ್ಣಾವತಿ ಎಂಬ ಹೆಸರೂ ಇದೆ. ಈ ನದಿ ಮಡಿಕೇರಿ ತಾಲೂಕಿನ ಬೋರೋ ಬೆಟ್ಟದಲ್ಲಿ ಉಗಮವಾಗಿ ಕುಶಾಲನಗರಕ್ಕೆ ಸ್ವಲ್ಪ ಉತ್ತರದಲ್ಲಿ ಕೂಡಿಗೆ ಎಂಬಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಹುದುಗೂರು ಎಂಬಲ್ಲಿ ಈ ನದಿಗೆ ಅಡ್ಡಲಾಗಿ ೬೭ ಮೀಟರು ಎತ್ತರದ ಅಣೆ ಕಟ್ಟಲಾಗಿದ್ದು ಇದು ಕೊಡಗಿನ ಅತಿ ದೊಡ್ಡ ನೀರಾವರಿ ಯೋಜನೆಯಾಗಿದೆ.