ಹಲಸೂರು
ವಿಕಿಪೀಡಿಯ ಇಂದ
ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಹಲಸೂರು, ಹಳೇ ಬೆಂಗಳೂರಿನ ಪ್ರದೇಶಗಳಲ್ಲಿ ಒಂದು. ಹಲಸೂರೂ, ದೊಮ್ಮಲೂರು,ಇಂದಿರಾನಗರ, ಎಂ.ಜಿ.ರಸ್ತೆ ಹಾಗು ಬೈಯಪ್ಪನ ಹಳ್ಳಿ ಗಳಿಂದ ಸುತ್ತುವರಿದಿದೆ.
ಇತಿಹಾಸ [ಬದಲಾಯಿಸಿ]
ಹಲಸೂರು ಮೊದಲನೇ ಕೆಂಪೇಗೌಡ (೧೫೧೩-೧೫೬೯) ವಿಜಯನಗರದ ಅರಸರು ಬಳುವಳಿಯಾಗಿ ನೀಡಿದರು. ಬೆಂಗಳೂರಿನ ಅತೀ ದೊಡ್ಡ ಕೆರೆಗಳಲ್ಲಿ ಒಂದಾದ ಹಲಸೂರು ಕೆರೆಯನ್ನು ಎರಡನೇ ಕೆಂಪೇಗೌಡ ನಿರ್ಮಿಸಿದರು.
ದೇವಾಲಯಗಳು [ಬದಲಾಯಿಸಿ]
ಹೊಯ್ಸಳ ಕಾಲದ ಶ್ರೀ ಸೋಮೇಶ್ವರ ದೇವಾಲಯ ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಒಂದು. ಇಲ್ಲಿನ ರಾಮಕೃಷ್ಣ ಮಠವು ಸುಮಾರು ನೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.