ಹರೇ ಕೃಷ್ಣ ಮಂತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೌರವಪೂರ್ಣವಾಗಿ ಮಹಾ ಮಂತ್ರಎಂದೂ ಕರೆಯಲ್ಪಡುವ ಹರೇ ಕೃಷ್ಣ ಮಂತ್ರವು ಕಲಿಸಂತರಣೋಪನಿಷತ್‍ನಲ್ಲಿ ಮೊದಲು ಕಾಣಿಸಿಕೊಂಡ, ಮತ್ತು ೧೫ನೇ ಶತಮಾನದಿಂದ ಚೈತನ್ಯ ಮಹಾಪ್ರಭುರವರ ಬೋಧನೆಗಳ ನಂತರ ಭಕ್ತಿ ಚಳುವಳಿಯಲ್ಲಿ ಮಹತ್ವ ಪಡೆದುಕೊಂಡ ಒಂದು ೧೬ ಶಬ್ದಗಳ ವೈಷ್ಣವ ಮಂತ್ರ. ಗೌಡೀಯ ವೈಷ್ಣವ ದೇವತಾಶಾಸ್ತ್ರದ ಪ್ರಕಾರ, ದೇವರ (ಕೃಷ್ಣ) ಪರಿಶುದ್ಧ ಪ್ರೀತಿಯು ಒಬ್ಬರ ಮೂಲ ಪ್ರಜ್ಞೆ ಮತ್ತು ಜೀವನದ ಗುರಿಯಾಗಿದೆ. ೧೯೬೦ರ ದಶಕದಿಂದ, ಈ ಮಂತ್ರವನ್ನು ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಮತ್ತು ಅವರ ಇಸ್ಕಾನ್ ಭಾರತದ ಹೊರಗೆ ಚಿರಪರಿಚಿತವಾಗಿಸಿದ್ದಾರೆ.