ಹರಿವಂಶ್ ರಾಯ್ ಬಚ್ಚನ್
| ಚಿತ್ರ:Harivansh Rai Bachchan.jpg |
|
| ಜನನ: | {{{birth_date}}} |
|---|---|
| ಜನನ ಸ್ಥಳ: | |
| ವೃತ್ತಿ: | Poet |
| ಬಾಳ ಸಂಗಾತಿ: | Shyama (1926 - 1936), Teji Bachchan (1941 - 2003 his death) |
ಹರಿವಂಶ್ ರಾಯ್ "ಬಚ್ಚನ್" ಶ್ರಿವಾಸ್ತವ್ (ನವೆಂಬರ್ 27, 1907– ಜನವರಿ 18, 2003) ಛಾಯಾವಾಡ್‌ನ 20ನೇ ಶತಮಾನ ಪ್ರಾರಂಭದ ಹಿಂದಿ ಸಾಹಿತ್ಯದ (ಪ್ರೇಮ ಪ್ರಧಾನ) ಚಳುವಳಿಯ ಒಬ್ಬ ವಿಭಿನ್ನ ಹಿಂದಿ ಕವಿಯಾಗಿದ್ದಾರೆ. ಅವರು ಹಿಂದಿ ಕವಿ ಸಮ್ಮೇಳನದ ಪ್ರಖ್ಯಾತ ಕವಿಯೂ ಆಗಿದ್ದಾರೆ. ಅವರ ಪ್ರಾರಂಭಿಕ ಕೃತಿಯಾದ ಮಧುಶಾಲಾ (मधुशाला)ಕ್ಕೆ ಪ್ರಖ್ಯಾತರಾಗಿದ್ದಾರೆ.[೧] ಅವರು ಬಾಲಿವುಡ್ದಿನ ಮೆಗಾಸ್ಟಾರ್, ಅಮಿತಾ ಬಚ್ಚನ್‌ರ ತಂದೆಯಾಗಿದ್ದಾರೆ.
ಪರಿವಿಡಿ |
ವಯಕ್ತಿಕ ಜೀವನ ಮತ್ತು ಶಿಕ್ಷಣ [ಬದಲಾಯಿಸಿ]
ಅಲಹಾಬಾದಿನ ಸಂಯುಕ್ತ ಪ್ರಾಂತ್ಯಗಳ (ಈಗಿನ ಉತ್ತರ ಪ್ರದೇಶ) ಹತ್ತಿರದ ಯುಪಿಯ ಪ್ರತಾಪ್‌ಗರ್ ಜಿಲ್ಲೆಯ ಬಾಬುಪಟ್ಟಿ (ರಾನಿಗಂಜ್) ಎಂಬ ಹಳ್ಳಿಯಲ್ಲಿ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಅವರ ಪ್ರತಾಪ್ ನಾರಾಯಣ್ ಶ್ರಿವಾಸ್ತವ್ ಮತ್ತು ಸರಸ್ವತಿ ದೇವಿಯವರ ಮೊದಲ ಮಗನಾಗಿದ್ದರು. ಅವರನ್ನು ಬಚ್ಚನ್ (ಅರ್ಥ 'ಮಕ್ಕಳ ರೀತಿಯ") ಎಂದು ಮನೆಯಲ್ಲಿ ಕರೆಯುತ್ತಿದ್ದರು. ಅವರ ಶಾಲಾ ಜೀವನ ಮುನ್ಸಿಪಲ್ ಶಾಲೆಯಲ್ಲಾಯಿತು ಮತ್ತು ನಂತರದಲ್ಲಿ ಕುಟುಂಬದ ಸಾಂಪ್ರದಾಯದಿಂದಾಗಿ ಕಾಯಸ್ಥ ಪಠಶಾಲಾದಲ್ಲಿ (कायस्थ पाठशाला) ಉರ್ದುವನ್ನು ತನ್ನ ಕಾನೂನು ಜೀವನದ ಪ್ರಾರಂಭವಾಗಿ ಕಲಿತರು. ನಂತರ ಅವರು ಅಲಹಾಬಾದ್ ವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಆ ಸಮಯದಲ್ಲಿ ಅವರು ಸ್ವಾತಂತ್ರ್ಯ ಚಳುವಳಿಯ ಪ್ರಭಾವಕ್ಕೊಳಗಾದರು, ನಂತರ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ಚಳುವಳಿಯಲ್ಲಿ ಭಾಗವಹಿಸಿದರು.
ಅವರು ಅನುಸರಿಸಬೇಕಾದ ಮಾರ್ಗವಿದಲ್ಲವೆಂದು ಅರಿವಾಗಿ ವಿದ್ಯಾಲಯಕ್ಕೆ ಮರಳಿದರು. 1941ರಿಂದ 1952ರ ವರೆಗೆ ಅಲಹಾಬಾದ್ ವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಬೋಧಿಸುತ್ತಿದ್ದರು ಮತ್ತು ನಂತರದ ಎರಡು ವರ್ಷ ಕೇಂಬ್ರಿಡ್ಜ್ ವಿದ್ಯಾಲಯದಲ್ಲಿ ಡಬ್ಲುಬಿ ಯೇಟ್ಸ್ ಮೇಲಿನ ಡಾಕ್ಟೋರಲ್ ಪ್ರಬಂಧರಚನೆಯಲ್ಲಿ ಕಾರ್ಯಪ್ರವೃತ್ತರಾದರು. ಅದರ ನಂತರ ಶ್ರೀವಾಸ್ತವದ ಬದಲಿಗೆ ‘ಬಚ್ಚನ್’ನ್ನು ಕೊನೆಯ ಹೆಸರಾಗಿ ಬಳಸತೊಡಗಿದರು. ಹರಿವಂಶ್ ರಾಯ್‌ರ ಪ್ರಬಂಧಕ್ಕೆ ಕೆಂಬ್ರಿಡ್ಜ್‌ನಲ್ಲಿ ಪಿಹೆಚ್‌ಡಿ ದೊರೆಯಿತು. ಅವರು ಕೆಂಬ್ರಿಡ್ಜ್‌ನಲ್ಲಿ ಇಂಗ್ಲಿಷ್ ಸಾಹಿತ್ಯಕ್ಕಾಗಿ ಪಿಹೆಚ್‌ಡಿ ಪಡೆದವರಲ್ಲಿ ಎರಡನೇಯವರಾದರು. ಭಾರತಕ್ಕೆ ಮರಳಿದ ನಂತರ ಅಲಹಾಬಾದಿನ ಆಲ್ ಇಂಡಿಯಾ ರೇಡಿಯೋನಲ್ಲಿ ಸೇವೆ ಸಲ್ಲಿಸಿದರು.
1926ರಲ್ಲಿ, 19ನೇ ವಯಸ್ಸಿನಲ್ಲಿ ಬಚ್ಚನ್ ತನ್ನ ಮೊದಲ ಹೆಂಡತಿಯಾದ 14 ವಯಸ್ಸಿನ ಶ್ಯಾಮರನ್ನು ಮದುವೆಯಾದರು. ಅವರು ಹತ್ತು ವರ್ಷಗಳ ನಂತರ 1936ರಲ್ಲಿ ಹಲವು ಸಮಯದ ಕ್ಷಯದಿಂದ 24ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು. ಬಚ್ಚನ್ ಮತ್ತೆ ಸಿಖ್‌ರಾದ ತೇಜಿ ಸೂರಿಯವರನ್ನು 1941ರಲ್ಲಿ ಮದುವೆಯಾದರು. ಅವರ ಇಬ್ಬರು ಮಕ್ಕಳೆಂದರೆ ಅಮಿತಾಬ್ ಮತ್ತು ಅಜಿತಾಬ್.
1955ರಲ್ಲಿ, ಹರಿವಂಶ್ ರಾಯ್ ದೆಹಲಿಗೆ ತೆರಳಿ ವಿಶೇಷಾಧಿಕಾರದ ಮೇರೆಗೆ ವಿದೇಶಾಂಗ ಸಚಿವಾಲಯದಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು, ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವುದರಲ್ಲಿ ಇವರೂ ಶ್ರಮಿಸಿದರು. ಅವರ ಪ್ರಮುಖ ಬರಹಗಳ ಭಾಷಾಂತದ ಮೂಲಕ ಹಿಂದಿಯನ್ನು ಶ್ರೀಮಂತಗೊಳಿಸಿದರು. ಕವಿಯಾಗಿ ಮಧುಶಾಲಾ (ಆಲ್ಕೊಹಾಲಿನ ಪಾನೀಯಗಳ ಮಾರಾಟ ಕೇಂದ್ರ) ಕವನದ ಮೂಲಕ ಪ್ರಖ್ಯಾತರಾದರು. ಉಮರ್ ಖಯಾಮ್‌ರ ರುಬಿಯಾತ್‌ನ ನಂತರದಲ್ಲಿ ಅವರು ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ಮತ್ತು ಒಥೆಲೊ ಮತ್ತು ಭಗವತ್ ಗೀತೆಯ ಹಿಂದಿ ಭಾಷಾಂತರದಿಂದ ಅವಿಸ್ಮರಣೀಯರಾಗಿದ್ದಾರೆ. ನವೆಂಬರ್ 1984ರಲ್ಲಿ ಅವರು ಇಂದಿರಾಗಾಂಧಿಯ ಹತ್ಯೆಯ ಮೇಲಿನ ಕೊನೆಯ ಕವನವಾದ ‘ಏಕ್ ನವೆಂಬರ್1984’ನ್ನು ರಚಿಸಿದರು.
ಹರಿವಂಶ್ ರಾಯ್ ಭಾರತೀಯ ರಾಜ್ಯಸಭೆಗೆ 1966ರಲ್ಲಿ ನಾಮಾಂಕಿತರಾದರು ಮತ್ತು ಮೂರು ವರ್ಷಗಳ ನಂತರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಸ್ವೀಕರಿಸಿದರು. 1976ರಲ್ಲಿ ಅವರ ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪದ್ಮ ಭೂಷಣ ಪ್ರಶಸ್ತಿಯನ್ನು ಪಡೆದರು. ಅವರು ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಾಗಿ ಸರಸ್ವತಿ ಸಮ್ಮಾನ್, ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಮತ್ತು ಆಫ್ರೊ-ಏಷ್ಯನ್ ಸಮ್ಮೇಳನದಲ್ಲಿ ಲೋಟಸ್ ಪ್ರಶಸ್ತಿಗಳನ್ನು ಪಡೆದರು. ತಮ್ಮನ್ನು ಪರಿಚಯಿಸಿಕೊಳ್ಳುವಾಗ ಈ ರೀತಿಯಾಗಿ ಹೇಳುತಿದ್ದರು: ಮಿಟ್ಟಿ ಕಾ ತನ್, ಮಸ್ತಿ ಕಾ ಮನ್, ಕ್ಷಣ್-ಭರ್ ಜೀವನ್- ಮೇರಾ ಪರಿಚಯ್. (ಮಣ್ಣಿನ ದೇಹ, ಆಟದ ಮನಸ್ಸು, ಕ್ಷಣದ ಜೀವನ - ಅದು ನಾನು).
ಬಚ್ಚನ್ ಜನವರಿ 18, 2003ರಂದು ತಮ್ಮ 95ನೇ ವಯಸ್ಸಿನಲ್ಲಿ ಉಸಿರಾಟದ ತೋಂದರೆಯಿಂದಾಗಿ ಕೊನೆಯುಸಿರೆಳೆದರು.[೨] ಅವರ ಹೆಂಡತಿ ತೇಜಿ ಬಚ್ಚನ್ 2007ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ವೃತ್ತಿಜೀವನ [ಬದಲಾಯಿಸಿ]
ಬೋಧನಾ ವೃತ್ತಿ [ಬದಲಾಯಿಸಿ]
1941ರಿಂದ 1952 ವರೆಗೆ ಅಲಹಾಬಾದ್ ವಿದ್ಯಾಲಯದಲ್ಲಿ ಇಂಗ್ಲೀಷನ್ನು ಬೋಧಿಸಿದರು ಮತ್ತು ಎರೆಡು ವರ್ಷಗಳ ಕಾಲ ಕೇಂಬ್ರಿಡ್ಜ್ ವಿದ್ಯಾಲಯದ ಸೈಂಟ್ ಕ್ಯಾಥರಿನ್ಸ್ ಕಾಲೇಜಿನಲ್ಲಿ ಕಳೆದರು. ಅಲ್ಲಿ ಪ್ರಖ್ಯಾತ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ, ಥಮಸ್ ರೈಸ್ ಹೆನ್‌ರೊಂದಿಗೆ ಅಭ್ಯಸಿಸಿದರು ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಐರಿಷ್ ಕವಿ ಡಬ್ಲುಬಿ ಯೇಟ್ಸ್ ಮತ್ತು ಯಕ್ಷಿಣಿವಿದ್ಯೆಯ ಮೇಲಿನ ಸಂಶೋಧನೆಗಾಗಿ ಡಕ್ಟರೇಟ್ ಪಡೆದರು. ಅಲ್ಲಿ ಅವರು 'ಶ್ರಿವಾಸ್ತವ ಎನ್ನುವ ಕೊನೆಯ ಹೆಸರಿನ ಬದಲಿಗೆ ಬಚ್ಚನ್ ನನ್ನು ಬಳಸತೊಡಗಿದರು. ಅವರು ಕೇಂಬ್ರಿಡ್ಜ್ ವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯಕ್ಕಾಗಿ ಪಿಹೆಚ್‌ಡಿ ಪಡೆದವರಲ್ಲಿ ಎರಡನೇಯವರಾದರು.
ಭಾರತಕ್ಕೆ ಮರಳಿದ ನಂತರ ಚಿಂತಿಸಿ ನಂತರದಲ್ಲಿ ಆಲ್ ಇಂಡಿಯಾ ರೇಡಿಯೋ, ಮುಂಬೈಯಲ್ಲಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. 1955ರಲ್ಲಿ ದೆಹಲಿಗೆ ತೆರಳಿ ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸಿದರು, ಅಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವುದರಲ್ಲಿ ಇವರೂ ಶ್ರಮಿಸಿದರು.
ತಮ್ಮನ್ನು ಪರಿಚಯಿಸಿಕೊಳ್ಳುವಾಗ ಈ ರೀತಿಯಾಗಿ ಹೇಳುತಿದ್ದರು:
| Mitti ka tan, masti ka man, kshan-bhar jivan– mera parichay. (मिट्टी का तन, मस्ती का मन, क्षण भर जीवन, मेरा परिचय) |
(ಮಣ್ಣಿನ ದೇಹ, ಆಟದ ಮನಸ್ಸು, ಕ್ಷಣದ ಜೀವನ - ಅದು ನಾನು).
'' ''
ಜನಪ್ರಿಯ ಸಂಸ್ಕೃತಿ [ಬದಲಾಯಿಸಿ]
ಅವರ ಸ್ಪೂರ್ತಿದಾಯಕ ಕಾವ್ಯಗಳಲ್ಲೊಂದಾದ ಅಗ್ನಿಪಥ್ ("ಅಗ್ನಿಯ ಹಾದಿ"), ಇದರ ಸಾರಾಂಶವನ್ನಿಟ್ಟುಕೊಂಡು (ಅದೇ ಶೀರ್ಷಿಕೆಯಡಿಯಲ್ಲಿ) 1991 ಬ್ಲಾಕ್‌ಬಸ್ಟರ್ ಚಿತ್ರ ಮಗನದ ನಟ ಅಮಿತಾಬ್ ಬಚ್ಚನ್‌ನನ್ನು ಕ್ರೂರ ಮಾಫಿಯಾದ ನಾಯಕನನ್ನಾಗಿಟ್ಟುಕೊಂಡು ಸಿನಿಮಾ ಮಾಡಲಾಯಿತು. ಚಿತ್ರವು ವಾಣಿಜ್ಯಿಕವಾಗಿ ಸೋತರೂ, ಅಮಿತಾಬ್ ಬಚ್ಚನ್‌ಗೆ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿತು. ಪೂರ್ಣ ಚಿತ್ರದಲ್ಲಿ ಅಮಿತಾಬ್‌ರ ನಿರೂಪಣೆಯನ್ನು ಕಾಣಬಹುದು.
ಪದ್ಯವು ಮಾನವ ಜನಾಂಗವು ಅನುಭವಿಸಿದ ಮತ್ತು ಅನುಭವಿಸುತ್ತಿರುವ ಪೂರ್ಣ ಪ್ರಮಾಣದ ದುಃಖವನ್ನು ವಿವರಿಸುತ್ತದೆ.
ಅಗ್ನಿಪಥ್ : ನಿಜವಾದ ಕವನ ಕೆಳಗಿದೆ
ಕವನಗಳು अग्नि पथ! अग्नि पथ! अग्नि पथ!
वृक्ष हों भले खड़े, हो घने, हो बड़े, एक पत्र-छॉंह भी मॉंग मत, मॉंग मत, मॉंग मत! अग्नि पथ! अग्नि पथ! अग्नि पथ!
तू न थकेगा कभी! तू न थमेगा कभी! तू न मुड़ेगा कभी! कर शपथ! कर शपथ! कर शपथ!
ये महान दृश्य है, चल रहा मनुष्य है, अश्रु श्वेत् रक्त से, लथ पथ, लथ पथ, लथ पथ ! अग्नि पथ! अग्नि पथ! अग्नि पथ! ಕವನಗಳು
ವೃಕ್ಷ್ ಹೊ ಭಲೆ ಖಡೆ, ಹೊ ಗಾನೆ ಹೊ ಬಡೆ, ಏಕ್ ಪತ್ರ ಛಾಹ್ ಭಿ ಮಾಂಗ್ ಮತ್, ಮಾಂಗ್ ಮತ್ ಅಗ್ನಿಪಥ್ ಅಗ್ನಿಪಥ್ ಅಗ್ನಿಪಥ್.
ತೂ ನ ಥಾಕೆಗಾ ಕಭಿ, ತೂ ನ ಥಮೇಗಾ ಕಭಿ, ತೂ ನ ಮುಡೆಗಾ ಕಭಿ, ಕರ್ ಶಪಥ್, ಕರ್ ಶಪಥ್, ಕರ್ ಶಪಥ್, ಅಗ್ನಿಪಥ್, ಅಗ್ನಿಪಥ್, ಅಗ್ನಿಪಥ್.
ಯೆ ಮಹಾನ್ ದೃಶ್ಯ ಹೈ, ಚಲ್ ರಹಾ ಮನುಷ್ಯ ಹೈ, ಅಶ್ರು ಶ್ವೆತ್ ರಕ್ತ್ ಸೆ ಲಥ್ ಪಥ್. ಲಥ್ ಪಥ್, ಲಥ್ ಪಥ್, ಲಥ್ ಪಥ್, ಅಗ್ನಿಪಥ್, ಅಗ್ನಿಪಥ್, ಅಗ್ನಿಪಥ್.
ಪ್ರಶಸ್ತಿಗಳು ಮತ್ತು ಗೌರವಗಳು [ಬದಲಾಯಿಸಿ]
ಬಚ್ಚನ್ ಭಾರತದ ಸಂಸತ್ತಿನ ಮೇಲ್ಮನೆಯಾದ ರಾಜ್ಯ ಸಭೆಗೆ 1966ರಲ್ಲಿ ನಾಮಾಂಕಿತಗೊಂಡರು ಮತ್ತು 1969ರಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದರು. 1976ರಲ್ಲಿ ಅವರ ಹಿಂದಿ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಪದ್ಮ ಭೂಷಣ ಮತ್ತು ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದರು. 1994ರಲ್ಲಿ, ಉತ್ತರ ಪ್ರದೇಶ ಸರ್ಕಾರ "ಯಶ್ ಭಾರತಿ" ಸನ್ಮಾನ ನೀಡಿ ಗೌರವಿಸಿತು. [೧] ಸೋವಿಯತ್ ಲ್ಯಾಂಡ್ ನೆಹ್ರು ಪ್ರಶಸ್ತಿ ಮತ್ತು ಆಫ್ರೊ-ಏಷ್ಯನ್ ಸಮ್ಮೇಳನದಲ್ಲಿ ಲೋಟಸ್ ಪ್ರಶಸ್ತಿಗಳನ್ನು ಪಡೆದರು.
2003ರಲ್ಲಿ, ಭಾರತವು ಅಂಚೆ ಚೀಟಿಯನ್ನು ಅವರ ಸ್ಮರಣಿಕೆಗಾಗಿ ಬಿಡುಗಡೆ ಮಾಡಲಾಯಿತು.
ಕೃತಿಗಳ ಪಟ್ಟಿ [ಬದಲಾಯಿಸಿ]
- ಕಾವ್ಯಗಳು (काव्य)
- (तेरा हार) (1932)
- ಮಧುಶಾಲಾ (मधुशाला) (1935)
- ಮಧುಬಾಲಾ (मधुबाला) (1936)
- ಮಧುಕಲಶ್ (मधुकलश) (1937)
- ನಿಶಾ ನಿಮಂತ್ರಣ್ (निशा निमंत्रण) (1938)
- ಏಕಾಂತ್ ಸಂಗೀತ್ (एकांत संगीत) (1939)
- ಆಕುಲ್ ಅಂತರ್ (आकुल अंतर) (1943)
- ಸತರಂಗಿಣಿ (सतरंगिनी) (1945)
- ಹಾಲಾಹಲ್ (हलाहल) (1946)
- ಬೆಂಗಾಲ್ ಕಾ ಕಾವ್ಯ (बंगाल का काव्य) (1946)
- ಯಾದಿ ಕೆ ಫೂಲ್ (खादी के फूल) (1948)
- ಸೂತ್ ಕಿ ಮಾಲಾ (सूत की माला) (1948)
- ಮಿಲನ್ ಯಾಮಿನಿ (मिलन यामिनी) (1950)
- ಪ್ರಣಯ್ ಪತ್ರಿಕಾ (प्रणय पत्रिका) (1955)
- ಧರ್ ಕೆ ಇಧರ್ ಉಧರ್ (धार के इधर उधर) (1957)
- ಆರತಿ ಔರ್ ಅಂಗಾರೆ (आरती और अंगारे) (1958)
- ಬುದ್ದ ಔರ್ ನಾಚಘರ್ (बुद्ध और नाचघर) (1958)
- ತ್ರಿಭಾಂಗಿಮಾ (त्रिभंगिमा) (1961)
- ಚಾರ್ ಖೆಮೆ ಚೌಸಠ್ ಖೂಂಟೆ (चार खेमे चौंसठ खूंटे) (1962)
- ದೊ ಚಟ್ಟಾನೆ (दो चट्टानें) (1965)
- ಬಹುತ್ ದಿನ್ ಬೀತೆ (बहुत दिन बीते) (1967)
- ಕಟತಿ ಪ್ರತಿಮಾವೊ ಕೀ ಆವಾಜ್ (कटती प्रतिमाओं की आवाज़) (1968)
- ಉಬರ್ತೆ ಪ್ರತಿಮಾನೊ ಕೆ ರೂಪ್ (उभरते प्रतिमानों के रूप) (1969)
- ಜಾಲ್ ಸಮೆಟಾ(जाल समेटा) (1973)
- ನಿರ್ಮಾಣ್
- ವಿವಿಧ (विविध)
- ಬಚ್‌ಪನ್ ಕೆ ಸಾತ್ ಕ್ಷಣ್ ಭರ್ (बचपन के साथ क्षण भर) (1934)
- ಕಯ್ಯಾಮ್ ಕಿ ಮಧುಶಾಲಾ (खय्याम की मधुशाला) (1938)
- ಸೊಪಾನ್ (सोपान) (1953)
- ಮ್ಯಾಕ್‌ಬೆತ್ (1957)
- ಜನಗೀತಾ (जनगीता) (1958)
- ಒಥೆಲೊ (1959)
- ಉಮರ್ ಖಯ್ಯಾಮ್ ಕಿ ರುಬಾಯಿಯಾಂ (उमर खय्याम की रुबाइयाँ) (1959)
- ಕವಿಯೋ ಕೆ ಸೌಮ್ಯ ಸಂತ್: ಪಂತ್ (कवियों के सौम्य संत: पंत) (1960)
- ಆಜ್ ಕೆ ಲೋಕಪ್ರಿಯ ಹಿಂದಿ ಕವಿ: ಸುಮಿತ್ರಾನಂದನ್ ಪಂತ್ (आज के लोकप्रिय हिन्दी कवि: सुमित्रानंदन पंत) (1960)
- ಆಧುನಿಕ್ ಕವಿ: 7 (आधुनिक कवि: ७) (1961)
- ನೆಹರು: ರಾಜನೈತಿಕ ಜೀವನಚಿತ್ರ (नेहरू: राजनैतिक जीवनचित्र) (1961)
- ನಯೆ ಪುರಾನೆ ಝಾರೊಕೆ (नये पुराने झरोखे) (1962)
- ಅಭಿನವ್ ಸೊಪಾನ್ (अभिनव सोपान) (1964)
- ಚೌಸಠ್ ರೂಸಿ ಕವಿತಾಯೆ (चौसठ रूसी कवितायें) (1964)
- ಡಬ್ಲುಬಿ ಯೇಟ್ಸ್ ಆಯ್‌೦ಡ್ ಅಕೌಲ್ಟಿಸಮ್ (1968)
- ಮುರ್ಖತ್ ದ್ವೀಪ್ ಕಾ ಸ್ವರ್ (मरकट द्वीप का स्वर) (1968)
- ನಾಗರ್ ಗೀತ್ (नागर गीत) (1966)
- ಬಚ್‌ಪನ್ ಕೆ ಲೋಕಪ್ರಿಯ ಗೀತ್(बचपन के लोकप्रिय गीत) (1967)
- ಹ್ಯಾಮ್ಲೆಟ್ (1969)
- ಭಾಷಾ ಅಪನೀ ಭಾವ್ ಪರಾಯೆ (भाषा अपनी भाव पराये) (1970)
- ಪಂತ್ ಕೆ ಸೌ ಪತ್ರ (पंत के सौ पत्र) (1970)
- ಪ್ರವಾಸ್ ಕೀ ಡೈರೀ (प्रवास की डायरी) (1971)
- ಕಿಂಗ್ ಲಿಯರ್ (1972)
- ಟೂಟಿ ಛೂಟೊ ಕಡಿಯಾಂ (टूटी छूटी कड़ियां) (1973)
- ಮೇರಿ ಕವಿಯಿತ್ರಿ ಕೀ ಆಧೀ ಸದೀ (मेरी कविताई की आधी सदी) (1981)
- ಸೊ ಹಂ ಹಂಸ್ (सोहं हंस) (1981)
- ಆಠವೆ ದಶಕ್ ಕೀ ಪ್ರತಿನಿಧಿ ಶ್ರೇಷ್ಠ್ ಕವಿತಾಯೆ (आठवें दशक की प्रतिनिधी श्रेष्ठ कवितायें) (1982)
- ಮೇರಿ ಶ್ರೇಷ್ಠ್ ಕವಿತಾಯೆ (मेरी श्रेष्ठ कवितायें) (1984)
- ಜೊ ಬೀತ್ ಗಯಿ ಸೊ ಬಾತ್ ಗಯಿ
- ಆತ್ಮ ಚರಿತ್ರೆ / ರಚನಾವಲಿ (आत्मकथा / रचनावली)
- ಕ್ಯಾ ಭೂಲೂ ಕ್ಯಾ ಯಾದ್ ಕರೂ (क्या भूलूं क्या याद करूं) (1969)
- ನೀಡ್ ಕಾ ನಿರ್ಮಾಣ್ ಫಿರ್ (नीड़ का निर्माण फिर) (1970)
- ಬಸೆರೆ ಸೆ ದೂರ್ (बसेरे से दूर) (1977)
- ದಶ್‌ದ್ವಾರ್ ಸೆ ಸೋಪಾನ್ ತಕ್ (दशद्वार से सोपान तक) (1985), ಇನ್ ದಿ ಆಫ್ಟರ್‌ನೂನ್ ಆಫ್ ಟೈಮ್ [೨]
- ಬಚ್ಚನ್ ರಚನಾವಲಿ ಕೆ ನೌ ಖಂಡ್ (बच्चन रचनावली के नौ खण्ड) (1983)
ಉಲ್ಲೇಖಗಳು [ಬದಲಾಯಿಸಿ]
- ↑ ಹರಿವಂಶ್ ರಾಯ್ ಬಚ್ಚನ್, 1907-2003 ಆಬಿಚ್ಯುಯರಿ, ಫ್ರಂಟ್‌ಲೈನ್, (ದ ಹಿಂದೂ), ಫೆಬ್ರವರಿ 01 - 14, 2003.
- ↑ http://news.bbc.co.uk/1/hi/world/south_asia/2673563.stm
- मधुशाला का मूल पाठ (विकीस्रोत पर)
- हरिवंश राय बच्चन (हिन्दी विकीपीडिया पर)
- मधुशाला (हिन्दी विकीपीडिया पर)
- हरिवंश राय बच्चन (विकीस्रोत पर)