ಹಂದಿಜ್ವರ
ವಿಕಿಪೀಡಿಯ ಇಂದ
ಹಂದಿಜ್ವರವು ಹಲವು ಪ್ರಕಾರಗಳ ಹಂದಿಜ್ವರ ವೈರಾಣುಗಳ ಪೈಕಿ ಯಾವುದಾದರೂ ಒಂದರಿಂದ ತಗಲುವ ಒಂದು ಸೋಂಕು. ಹಂದಿಜ್ವರ ವೈರಾಣು (ಸ್ವೈನ್ ಇನ್‌ಫ್ಲುಯೆಂಜಾ ವೈರಸ್ - ಎಸ್ಐವಿ) ಹಂದಿಗಳಲ್ಲಿ ವಿಶಿಷ್ಟವಾದ ಇನ್‌ಫ್ಲುಯೆಂಜಾ ಕುಟುಂಬದ ವೈರಾಣುಗಳ ಯಾವುದೇ ತಳಿ. ೨೦೦೯ರ ವೇಳೆಗೆ, ಪರಿಚಿತವಾಗಿರುವ ಎಸ್ಐವಿ ತಳಿಗಳು, ಇನ್‌ಫ್ಲುಯೆಂಜಾ ಸಿ ಮತ್ತು ಎಚ್೧ಎನ್೧, ಎಚ್೧ಎನ್೨, ಎಚ್೩ಎನ್೧, ಎಚ್೩ಎನ್೨ ಹಾಗೂ ಎಚ್೨ಎನ್೩ ಎಂದು ಪರಿಚಿತವಾಗಿರುವ ಇನ್‌ಫ್ಲುಯೆಂಜಾ ಎಯ ಉಪಪ್ರಕಾರಗಳನ್ನು ಒಳಗೊಂಡಿವೆ.